ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಇಸ್ರಾಯೇಲಿನ ತೀವ್ರ ಧರ್ಮಭ್ರಷ್ಟತೆ (1-5)

      • ಇಸ್ರಾಯೇಲ್‌ ಮತ್ತು ಯೆಹೂದದ ವ್ಯಭಿಚಾರ (6-11)

      • ಪಶ್ಚಾತ್ತಾಪಕ್ಕೆ ಕರೆ (12-25)

ಯೆರೆಮೀಯ 3:1

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 24:5; ಯೆರೆ 2:7
  • +ಯೆರೆ 2:20; ಯೆಹೆ 16:28, 29

ಯೆರೆಮೀಯ 3:2

ಪಾದಟಿಪ್ಪಣಿ

  • *

    ಅಕ್ಷ. “ಒಬ್ಬ ಅರಬಿಯ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 16:16; 20:28

ಯೆರೆಮೀಯ 3:3

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:19; ಯೆರೆ 14:4; ಆಮೋ 4:7
  • +ಯೆರೆ 6:15

ಯೆರೆಮೀಯ 3:4

ಮಾರ್ಜಿನಲ್ ರೆಫರೆನ್ಸ್

  • +ಯೆರೆ 2:2

ಯೆರೆಮೀಯ 3:5

ಮಾರ್ಜಿನಲ್ ರೆಫರೆನ್ಸ್

  • +ಮೀಕ 2:1; 7:3

ಯೆರೆಮೀಯ 3:6

ಮಾರ್ಜಿನಲ್ ರೆಫರೆನ್ಸ್

  • +2ಅರ 22:1
  • +ಯೆಹೆ 20:28; ಹೋಶೇ 4:13

ಯೆರೆಮೀಯ 3:7

ಮಾರ್ಜಿನಲ್ ರೆಫರೆನ್ಸ್

  • +2ಅರ 17:13; 2ಪೂರ್ವ 30:6; ಹೋಶೇ 14:1
  • +ಯೆಹೆ 16:46; 23:2, 4

ಯೆರೆಮೀಯ 3:8

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 23:4, 5, 9; ಹೋಶೇ 2:2; 9:15
  • +ಧರ್ಮೋ 24:1
  • +2ಅರ 17:19; ಯೆಹೆ 23:4, 11

ಯೆರೆಮೀಯ 3:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 57:5, 6; ಯೆರೆ 2:27

ಯೆರೆಮೀಯ 3:11

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 16:51; 23:4, 11

ಯೆರೆಮೀಯ 3:12

ಮಾರ್ಜಿನಲ್ ರೆಫರೆನ್ಸ್

  • +2ಅರ 17:6; ಯೆರೆ 23:8
  • +ಯೆರೆ 4:1; ಯೆಹೆ 33:11; ಹೋಶೇ 14:1
  • +ಹೋಶೇ 11:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 9

ಯೆರೆಮೀಯ 3:13

ಪಾದಟಿಪ್ಪಣಿ

  • *

    ಅಥವಾ “ಬೇರೆ ದೇವರುಗಳ ಜೊತೆ.”

ಯೆರೆಮೀಯ 3:14

ಪಾದಟಿಪ್ಪಣಿ

  • *

    ಬಹುಶಃ, “ಗಂಡ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 23:3

ಯೆರೆಮೀಯ 3:15

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 23:4; ಯೆಹೆ 34:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 103-104

    ಕಾವಲಿನಬುರುಜು,

    7/1/1990, ಪು. 26-27

ಯೆರೆಮೀಯ 3:16

ಪಾದಟಿಪ್ಪಣಿ

  • *

    ಅಥವಾ “ಒಡಂಬಡಿಕೆಯ.”

ಮಾರ್ಜಿನಲ್ ರೆಫರೆನ್ಸ್

  • +ಹೋಶೇ 1:10

ಯೆರೆಮೀಯ 3:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 87:3; ಯೆಹೆ 43:7
  • +ಯೆಶಾ 2:2, 3; 56:6, 7; 60:3; ಮೀಕ 4:1, 2; ಜೆಕ 2:11; 8:22, 23

ಯೆರೆಮೀಯ 3:18

ಮಾರ್ಜಿನಲ್ ರೆಫರೆನ್ಸ್

  • +ಯೆರೆ 50:4; ಯೆಹೆ 37:19; ಹೋಶೇ 1:11
  • +2ಪೂರ್ವ 36:23; ಎಜ್ರ 1:3; ಆಮೋ 9:15

ಯೆರೆಮೀಯ 3:19

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 20:6

ಯೆರೆಮೀಯ 3:20

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 48:8; ಹೋಶೇ 3:1; 5:7

ಯೆರೆಮೀಯ 3:21

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 17:10; ಹೋಶೇ 8:14; 13:6

ಯೆರೆಮೀಯ 3:22

ಮಾರ್ಜಿನಲ್ ರೆಫರೆನ್ಸ್

  • +ಹೋಶೇ 14:1, 4
  • +ಯೆರೆ 31:18; ಹೋಶೇ 3:5

ಯೆರೆಮೀಯ 3:23

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 65:7
  • +ಯೆಶಾ 12:2

ಯೆರೆಮೀಯ 3:24

ಮಾರ್ಜಿನಲ್ ರೆಫರೆನ್ಸ್

  • +ಹೋಶೇ 9:10

ಯೆರೆಮೀಯ 3:25

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 9:7; ಕೀರ್ತ 106:7
  • +ಯೆರೆ 2:19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 3:1ಯೆಶಾ 24:5; ಯೆರೆ 2:7
ಯೆರೆ. 3:1ಯೆರೆ 2:20; ಯೆಹೆ 16:28, 29
ಯೆರೆ. 3:2ಯೆಹೆ 16:16; 20:28
ಯೆರೆ. 3:3ಯಾಜ 26:19; ಯೆರೆ 14:4; ಆಮೋ 4:7
ಯೆರೆ. 3:3ಯೆರೆ 6:15
ಯೆರೆ. 3:4ಯೆರೆ 2:2
ಯೆರೆ. 3:5ಮೀಕ 2:1; 7:3
ಯೆರೆ. 3:62ಅರ 22:1
ಯೆರೆ. 3:6ಯೆಹೆ 20:28; ಹೋಶೇ 4:13
ಯೆರೆ. 3:72ಅರ 17:13; 2ಪೂರ್ವ 30:6; ಹೋಶೇ 14:1
ಯೆರೆ. 3:7ಯೆಹೆ 16:46; 23:2, 4
ಯೆರೆ. 3:8ಯೆಹೆ 23:4, 5, 9; ಹೋಶೇ 2:2; 9:15
ಯೆರೆ. 3:8ಧರ್ಮೋ 24:1
ಯೆರೆ. 3:82ಅರ 17:19; ಯೆಹೆ 23:4, 11
ಯೆರೆ. 3:9ಯೆಶಾ 57:5, 6; ಯೆರೆ 2:27
ಯೆರೆ. 3:11ಯೆಹೆ 16:51; 23:4, 11
ಯೆರೆ. 3:12ಯೆರೆ 4:1; ಯೆಹೆ 33:11; ಹೋಶೇ 14:1
ಯೆರೆ. 3:12ಹೋಶೇ 11:8, 9
ಯೆರೆ. 3:122ಅರ 17:6; ಯೆರೆ 23:8
ಯೆರೆ. 3:14ಯೆರೆ 23:3
ಯೆರೆ. 3:15ಯೆರೆ 23:4; ಯೆಹೆ 34:23
ಯೆರೆ. 3:16ಹೋಶೇ 1:10
ಯೆರೆ. 3:17ಕೀರ್ತ 87:3; ಯೆಹೆ 43:7
ಯೆರೆ. 3:17ಯೆಶಾ 2:2, 3; 56:6, 7; 60:3; ಮೀಕ 4:1, 2; ಜೆಕ 2:11; 8:22, 23
ಯೆರೆ. 3:18ಯೆರೆ 50:4; ಯೆಹೆ 37:19; ಹೋಶೇ 1:11
ಯೆರೆ. 3:182ಪೂರ್ವ 36:23; ಎಜ್ರ 1:3; ಆಮೋ 9:15
ಯೆರೆ. 3:19ಯೆಹೆ 20:6
ಯೆರೆ. 3:20ಯೆಶಾ 48:8; ಹೋಶೇ 3:1; 5:7
ಯೆರೆ. 3:21ಯೆಶಾ 17:10; ಹೋಶೇ 8:14; 13:6
ಯೆರೆ. 3:22ಹೋಶೇ 14:1, 4
ಯೆರೆ. 3:22ಯೆರೆ 31:18; ಹೋಶೇ 3:5
ಯೆರೆ. 3:23ಯೆಶಾ 65:7
ಯೆರೆ. 3:23ಯೆಶಾ 12:2
ಯೆರೆ. 3:24ಹೋಶೇ 9:10
ಯೆರೆ. 3:25ಎಜ್ರ 9:7; ಕೀರ್ತ 106:7
ಯೆರೆ. 3:25ಯೆರೆ 2:19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 3:1-25

ಯೆರೆಮೀಯ

3 “ಒಬ್ಬ ತನ್ನ ಹೆಂಡತಿಗೆ ವಿಚ್ಛೇದನ ಕೊಟ್ಟ ಮೇಲೆ ಅವಳು ಇನ್ನೊಬ್ಬನನ್ನ ಮದುವೆ ಆದ್ರೆ ಆ ಮೊದಲ ಗಂಡ ಅವಳನ್ನ ಮತ್ತೆ ಮದುವೆ ಆಗಕ್ಕಾಗುತ್ತಾ?” ಅಂತ ಜನ ಕೇಳ್ತಾರೆ.

ಆ ದೇಶ ಪೂರ್ತಿ ಅಶುದ್ಧ ಆಗಿದ್ಯಲ್ಲಾ?+

“ನೀನು ತುಂಬ ಗಂಡಸರ ಜೊತೆ ವ್ಯಭಿಚಾರ ಮಾಡಿದ್ದೀಯ,+

ಈಗ ನೀನು ನನ್ನ ಹತ್ರ ಹೇಗೆ ವಾಪಸ್‌ ಬರಕ್ಕಾಗುತ್ತೆ?” ಅಂತ ಯೆಹೋವ ಕೇಳ್ತಾನೆ.

 2 “ನೀನು ಕಣ್ಣೆತ್ತಿ ಬೋಳು ಬೆಟ್ಟಗಳನ್ನ ನೋಡು.

ನಿನ್ನ ಮೇಲೆ ಅತ್ಯಾಚಾರ ನಡೀದೆ ಇರೋ ಜಾಗ ಇದ್ಯಾ?

ಒಬ್ಬ ಅಲೆಮಾರಿ* ಕಾಡಲ್ಲಿ ಕೂತ್ಕೊಳ್ಳೋ ತರ

ನೀನು ಆ ಗಂಡಸರಿಗಾಗಿ ದಾರಿ ಬದಿಗಳಲ್ಲಿ ಕೂತ್ಕೊಂಡೆ.

ವ್ಯಭಿಚಾರ, ಕೆಟ್ಟ ಕೆಲಸ ಮಾಡಿ ದೇಶವನ್ನ ಅಶುದ್ಧ ಮಾಡ್ತಾನೇ ಇದ್ದೀಯ.+

 3 ಹಾಗಾಗಿ ದೇಶದಲ್ಲಿ ಮಳೆ ಆಗ್ತಿಲ್ಲ,+

ವಸಂತಕಾಲದಲ್ಲೂ ಮಳೆ ಇಲ್ಲ.

ನಿನ್ನ ಮುಖಭಾವ ವೇಶ್ಯಾವಾಟಿಕೆಗೆ ಇಳಿದ ನಾಚಿಕೆಗೆಟ್ಟ ಹೆಂಡತಿಯೊಬ್ಬಳ ಮುಖಭಾವದ ತರ ಇದೆ,

ನಿನಗೆ ಸ್ವಲ್ಪನೂ ನಾಚಿಕೆ ಆಗ್ತಿಲ್ಲ.+

 4 ಆದ್ರೆ ಈಗ ನೀನು

‘ಅಪ್ಪಾ, ಚಿಕ್ಕ ವಯಸ್ಸಿಂದಾನೂ ನೀನು ನನ್ನ ಜೊತೆನೇ ಇದ್ದೆ!+

 5 ನನ್ನ ಮೇಲೆ ಯಾವಾಗ್ಲೂ ಕೋಪ ಮಾಡ್ಕೊಂಡಿರೋದು ಸರಿನಾ?

ಅಥವಾ ಯಾವಾಗ್ಲೂ ದ್ವೇಷ ಸಾಧಿಸೋದು ಸರಿನಾ?’ ಅಂತ ನನಗೆ ಹೇಳ್ತೀಯ.

ಹೀಗೆ ಹೇಳಿದ ಮೇಲೆನೂ ಇನ್ನೂ ಜಾಸ್ತಿ ಕೆಟ್ಟ ಕೆಲಸಗಳನ್ನ ಮಾಡ್ತಾ ಇರ್ತಿಯ.”+

6 ರಾಜ ಯೋಷೀಯ+ ಆಳೋ ಸಮಯದಲ್ಲಿ ಯೆಹೋವ ನನಗೆ ಹೀಗಂದನು “‘ನಂಬಿಕೆ ದ್ರೋಹ ಮಾಡಿದ ಇಸ್ರಾಯೇಲ್‌ ಏನು ಮಾಡಿದ್ದಾಳೆ ಅಂತ ನೀನು ನೋಡಿದ್ಯಾ? ಅವಳು ಎತ್ರವಾದ ಎಲ್ಲ ಬೆಟ್ಟಗಳ ಮೇಲೆ, ಸೊಂಪಾಗಿ ಬೆಳೆದಿರೋ ಎಲ್ಲ ಮರಗಳ ಕೆಳಗೆ ಹೋಗಿ ವ್ಯಭಿಚಾರ ಮಾಡಿದ್ದಾಳೆ.+ 7 ಅವಳು ಇಷ್ಟೆಲ್ಲಾ ಮಾಡಿದ್ರೂ ನನ್ನ ಹತ್ರ ವಾಪಸ್‌ ಬಾ ಅಂತ ಹೇಳ್ತಾ ಇದ್ದೆ.+ ಆದ್ರೆ ಅವಳು ಬರಲಿಲ್ಲ. ಅವಳ ತಂಗಿ ಯೆಹೂದ ತನ್ನ ಅಕ್ಕ ಮಾಡ್ತಿದ್ದ ದ್ರೋಹ ನೋಡ್ತಾ ಇದ್ದಳು.+ 8 ನಾನು ಅದನ್ನ ಗಮನಿಸಿದಾಗ, ವ್ಯಭಿಚಾರ ಮಾಡಿ+ ನಂಬಿಕೆ ದ್ರೋಹ ಮಾಡಿದ ಇಸ್ರಾಯೇಲಗೆ ವಿಚ್ಛೇದನ ಪತ್ರ ಕೊಟ್ಟು ಅವಳನ್ನ ಕಳಿಸಿಬಿಟ್ಟೆ.+ ಆದ್ರೆ ದ್ರೋಹಿಯಾದ ಅವಳ ತಂಗಿಗೆ ಇದನ್ನ ನೋಡಿನೂ ಭಯ ಬರಲಿಲ್ಲ. ಅವಳೂ ವ್ಯಭಿಚಾರ ಮಾಡಿದಳು.+ 9 ತಾನು ಮಾಡಿದ ವ್ಯಭಿಚಾರವನ್ನ ಹಗುರವಾಗಿ ತಗೊಂಡಳು. ಅಷ್ಟೇ ಅಲ್ಲ ಅವಳು ದೇಶವನ್ನ ಅಶುದ್ಧ ಮಾಡ್ತಾ, ಕಲ್ಲು ಮರಗಳ ಜೊತೆ ವ್ಯಭಿಚಾರ ಮಾಡ್ತಾ ಇದ್ದಳು.+ 10 ಇಷ್ಟೆಲ್ಲ ಆದ್ರೂ ಅವಳ ತಂಗಿ ಮೋಸಗಾತಿ ಯೆಹೂದ ಮನಸ್ಸುಪೂರ್ತಿಯಾಗಿ ನನ್ನ ಹತ್ರ ಬರಲಿಲ್ಲ. ಬರೋ ತರ ನಾಟಕ ಮಾಡಿದಳು’ ಅಂತ ಯೆಹೋವ ಹೇಳ್ತಾನೆ.”

11 ಆಮೇಲೆ ಯೆಹೋವ ನನಗೆ ಹೀಗಂದನು “ನಂಬಿಕೆ ದ್ರೋಹ ಮಾಡಿದ ಇಸ್ರಾಯೇಲಗಿಂತ ಮೋಸಗಾತಿ ಯೆಹೂದ ಜಾಸ್ತಿ ತಪ್ಪು ಮಾಡಿದವಳು.+ 12 ನೀನು ಉತ್ತರ ದಿಕ್ಕಿಗೆ ಹೋಗಿ ಈ ಮಾತನ್ನ ಸಾರಿಹೇಳು:+

‘“ಧರ್ಮಭ್ರಷ್ಟ ಇಸ್ರಾಯೇಲೇ, ವಾಪಸ್‌ ಬಾ” ಅಂತ ಯೆಹೋವ ಹೇಳ್ತಾನೆ.’+ ‘“ನಾನು ನಿಷ್ಠಾವಂತ. ಹಾಗಾಗಿ ನಿನ್ನನ್ನ ಕೋಪದಿಂದ ನೋಡಲ್ಲ”+ ಅಂತ ಯೆಹೋವ ಹೇಳ್ತಾನೆ.’ ‘“ನಾನು ಶಾಶ್ವತವಾಗಿ ಕೋಪ ಮಾಡ್ಕೊಂಡು ಇರೋನಲ್ಲ. 13 ನೀನು ಪಾಪ ಮಾಡಿದ್ದೀಯ ಅಂತ ಒಪ್ಕೊಂಡ್ರೆ ಸಾಕು. ಯಾಕಂದ್ರೆ ನಿನ್ನ ದೇವರಾದ ಯೆಹೋವನ ವಿರುದ್ಧ ತಿರುಗಿ ಬಿದ್ದಿದ್ದೀಯ. ಚೆನ್ನಾಗಿ ಬೆಳೆದಿರೋ ಎಲ್ಲ ಮರಗಳ ಕೆಳಗೆ ಕಂಡಕಂಡ ಗಂಡಸರ ಜೊತೆ* ಸಂಬಂಧ ಇಟ್ಕೊಳ್ತಾ ಬಂದಿದ್ದೀಯ. ನೀನು ನನ್ನ ಮಾತನ್ನ ಕೇಳಲೇ ಇಲ್ಲ” ಅಂತ ಯೆಹೋವ ಹೇಳ್ತಾನೆ.’”

14 “ಧರ್ಮಭ್ರಷ್ಟ ಮಕ್ಕಳೇ, ವಾಪಸ್‌ ಬನ್ನಿ” ಅಂತ ಯೆಹೋವ ಹೇಳ್ತಾನೆ. “ನಾನೇ ನಿಮ್ಮ ನಿಜವಾದ ಯಜಮಾನ.* ಒಂದೊಂದು ಪಟ್ಟಣದಿಂದ ಒಬ್ಬೊಬ್ಬರನ್ನ, ಒಂದೊಂದು ಕುಲದಿಂದ ಇಬ್ಬಿಬ್ಬರನ್ನ ಆರಿಸಿ ನಾನು ನಿಮ್ಮನ್ನ ಚೀಯೋನಿಗೆ ಕರ್ಕೊಂಡು ಬರ್ತಿನಿ.+ 15 ನನ್ನ ಮನಸ್ಸಿಗೆ ಇಷ್ಟ ಆಗೋ ಕುರುಬರನ್ನ ನಿಮಗೆ ಕೊಡ್ತೀನಿ,+ ಅವರು ನಿಮ್ಮನ್ನ ಜ್ಞಾನ, ತಿಳುವಳಿಕೆಯಿಂದ* ನೋಡ್ಕೊಳ್ತಾರೆ. 16 ಆ ದಿನಗಳಲ್ಲಿ ನೀವು ದೇಶದಲ್ಲಿ ತುಂಬ ಜನ ಆಗ್ತೀರ, ಅಲ್ಲಿ ನಿಮಗೆ ಎಲ್ಲಾ ಸಮೃದ್ಧಿಯಾಗಿ ಇರುತ್ತೆ” ಅಂತ ಯೆಹೋವ ಹೇಳ್ತಾನೆ.+ “‘ಯೆಹೋವನ ಒಪ್ಪಂದದ* ಮಂಜೂಷ’ ಅಂತ ಇನ್ಮುಂದೆ ಅವರು ಹೇಳಲ್ಲ! ಅದ್ರ ಬಗ್ಗೆ ಅವರು ಮನಸ್ಸಲ್ಲಿ ಯೋಚ್ನೆನೇ ಮಾಡಲ್ಲ, ಅದನ್ನ ನೆನಪಿಸ್ಕೊಳ್ಳೋದೂ ಇಲ್ಲ, ‘ಅದಿಲ್ಲ’ ಅಂತ ದುಃಖಪಡಲ್ಲ, ಇನ್ನೊಂದು ಮಂಜೂಷವನ್ನ ಅವರು ಮಾಡೋದೂ ಇಲ್ಲ. 17 ಆ ಸಮಯದಲ್ಲಿ ಯೆರೂಸಲೇಮನ್ನ ಅವರು ಯೆಹೋವನ ಸಿಂಹಾಸನ ಅಂತ ಕರೀತಾರೆ.+ ಯೆರೂಸಲೇಮಲ್ಲಿ ಯೆಹೋವನ ಹೆಸ್ರಿಗೆ ಗೌರವ ತರೋಕೆ ಎಲ್ಲ ದೇಶಗಳ ಜನ್ರು ಒಟ್ಟು ಸೇರ್ತಾರೆ.+ ಅವರು ಇನ್ಮುಂದೆ ಹಠದಿಂದ ತಮ್ಮ ಕೆಟ್ಟ ಹೃದಯ ಹೇಳೋ ಹಾಗೆ ನಡಿಯಲ್ಲ.”

18 “ಆ ದಿನಗಳಲ್ಲಿ ಯೆಹೂದದ ಜನ್ರು, ಇಸ್ರಾಯೇಲಿನ ಜನ್ರು ಜೊತೆಯಾಗಿ ನಡಿತಾರೆ.+ ಅವರು ಉತ್ತರದ ದೇಶದಿಂದ ನಾನು ನಿಮ್ಮ ಪೂರ್ವಜರಿಗೆ ಆಸ್ತಿಯಾಗಿ ಕೊಟ್ಟ ದೇಶಕ್ಕೆ ಒಟ್ಟಿಗೆ ಬರ್ತಾರೆ.+ 19 ‘ನಾನು ನಿನಗೆ ಗಂಡುಮಕ್ಕಳ ಜೊತೆ ಜಾಗ ಕೊಟ್ಟು, ಬೇರೆ ಜನ್ರ ಮಧ್ಯ ಮನೋಹರವಾದ ದೇಶವನ್ನ, ಎಲ್ಲಕ್ಕಿಂತ ಸುಂದರವಾದ ಆಸ್ತಿಯನ್ನ ಕೊಡ್ತೀನಿ’+ ಅಂತ ಯೋಚಿಸಿದೆ. ಅಷ್ಟೇ ಅಲ್ಲ ನೀನು ನನ್ನನ್ನ ‘ಅಪ್ಪಾ!’ ಅಂತ ಕರಿತೀಯ, ನನ್ನ ಹಿಂದೆ ಬರೋದನ್ನ ಬಿಟ್ಟುಬಿಡಲ್ಲ ಅಂದ್ಕೊಂಡೆ. 20 ‘ಆದ್ರೆ ಇಸ್ರಾಯೇಲ್‌ ಜನ್ರೇ, ಹೆಂಡತಿ ಗಂಡನನ್ನ ಬಿಟ್ಟುಹೋಗಿ ಮೋಸ ಮಾಡೋ ತರ ನೀವು ನನಗೆ ನಿಜವಾಗ್ಲೂ ದ್ರೋಹ ಮಾಡಿದ್ರಿ’+ ಅಂತ ಯೆಹೋವ ಹೇಳ್ತಾನೆ.”

21 ಬೋಳು ಬೆಟ್ಟಗಳ ಮೇಲೆ ಶಬ್ದ ಕೇಳಿಬರ್ತಿದೆ,

ಇಸ್ರಾಯೇಲ್‌ ಜನ್ರು ಅಳೋ, ಗೋಳಾಡೋ ಸದ್ದು ಕೇಳ್ತಿದೆ,

ಯಾಕಂದ್ರೆ ಅವರು ತಪ್ಪು ದಾರಿಯಲ್ಲಿ ನಡಿದಿದ್ದಾರೆ,

ತಮ್ಮ ದೇವರಾದ ಯೆಹೋವನನ್ನ ಮರೆತುಬಿಟ್ಟಿದ್ದಾರೆ.+

22 “ಧರ್ಮಭ್ರಷ್ಟ ಮಕ್ಕಳೇ ವಾಪಸ್‌ ಬನ್ನಿ.

ನಾನು ನಿಮ್ಮನ್ನ ವಾಸಿಮಾಡ್ತೀನಿ, ನೀವು ಯಾವತ್ತೂ ಧರ್ಮಭ್ರಷ್ಟರಾಗಲ್ಲ.”+

ಆಗ ನಾವು ಹೀಗೆ ಹೇಳ್ತೀವಿ “ನೋಡು, ನಾವು ನಿನ್ನ ಹತ್ರ ಬಂದಿದ್ದೀವಿ,

ಯಾಕಂದ್ರೆ ಯೆಹೋವನೇ, ನೀನೇ ನಮ್ಮ ದೇವರು.+

23 ನಾವು ಬೆಟ್ಟಗಳ ಮೇಲೆ, ಪರ್ವತಗಳ ಮೇಲೆ ಸದ್ದು ಗದ್ದಲ ಮಾಡಿ ನಮ್ಮನ್ನ ನಾವೇ ಮೋಸ ಮಾಡ್ಕೊಂಡ್ವಿ.+

ನಿಜವಾಗಿ ಇಸ್ರಾಯೇಲ್ಯರಾದ ನಮಗೆ ರಕ್ಷಣೆ ಸಿಗೋದು ನಮ್ಮ ದೇವರಾದ ಯೆಹೋವನಿಂದಾನೇ.+

24 ಮರ್ಯಾದೆ ತೆಗಿಯೋ ದೇವರು ನಮ್ಮ ಚಿಕ್ಕ ವಯಸ್ಸಿಂದಾನೂ ನಮ್ಮ ಪೂರ್ವಜರು ಕಷ್ಟಪಟ್ಟು ದುಡಿದಿದ್ದನ್ನೆಲ್ಲ ನುಂಗಿಹಾಕಿದ್ದಾನೆ,+

ಆಡು-ಕುರಿ, ದನ-ಹೋರಿಗಳನ್ನ,

ಗಂಡುಹೆಣ್ಣು ಮಕ್ಕಳನ್ನ ತಿಂದು ತೇಗಿದ್ದಾನೆ.

25 ನಾವು ನಾಚಿಕೆಯಿಂದಾಗಿ ಬಿದ್ದುಕೊಳ್ಳೋಣ,

ಅವಮಾನ ನಮ್ಮನ್ನ ಮುಚ್ಚಿಬಿಡಲಿ,

ಯಾಕಂದ್ರೆ ನಾವು, ನಮ್ಮ ಪೂರ್ವಜರು ಚಿಕ್ಕಂದಿನಿಂದ ಇವತ್ತಿನ ತನಕ+

ನಮ್ಮ ದೇವರಾದ ಯೆಹೋವನ ವಿರುದ್ಧ ಪಾಪ ಮಾಡಿದ್ದೀವಿ,+

ನಮ್ಮ ದೇವರಾದ ಯೆಹೋವನ ಮಾತನ್ನ ಕೇಳಲಿಲ್ಲ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ