ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಹಾಳಾದ ಸೊಂಟಪಟ್ಟಿ (1-11)

      • ದ್ರಾಕ್ಷಾಮದ್ಯ ಜಾಡಿ ಒಡಿಬೇಕು (12-14)

      • ಬದಲಾಗದ ಯೆಹೂದದ ಸೆರೆ (15-27)

        • ಕೂಷ್ಯ ತನ್ನ ಚರ್ಮದ ಬಣ್ಣ ಬದಲಾಯಿಸೋಕೆ ಆಗುತ್ತಾ? (23)

ಯೆರೆಮೀಯ 13:9

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:19; ಚೆಫ 3:11

ಯೆರೆಮೀಯ 13:10

ಪಾದಟಿಪ್ಪಣಿ

  • *

    ಅಥವಾ “ಹೃದಯಕ್ಕೆ.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:15, 16
  • +ಯೆರೆ 6:28

ಯೆರೆಮೀಯ 13:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5; ಧರ್ಮೋ 26:18; ಕೀರ್ತ 135:4
  • +ಯೆರೆ 33:9
  • +ಯೆರೆ 6:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2017, ಪು. 1

ಯೆರೆಮೀಯ 13:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    10/2015, ಪು. 7

ಯೆರೆಮೀಯ 13:13

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 29:9; 51:17; ಯೆರೆ 25:27

ಯೆರೆಮೀಯ 13:14

ಮಾರ್ಜಿನಲ್ ರೆಫರೆನ್ಸ್

  • +ಯೆರೆ 6:21; ಯೆಹೆ 5:10
  • +ಯೆಹೆ 7:4; 24:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 258

ಯೆರೆಮೀಯ 13:16

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 59:9

ಯೆರೆಮೀಯ 13:17

ಮಾರ್ಜಿನಲ್ ರೆಫರೆನ್ಸ್

  • +ಯೆರೆ 9:1
  • +ಕೀರ್ತ 100:3

ಯೆರೆಮೀಯ 13:18

ಮಾರ್ಜಿನಲ್ ರೆಫರೆನ್ಸ್

  • +2ಅರ 24:12; ಯೆರೆ 22:24, 26

ಯೆರೆಮೀಯ 13:19

ಪಾದಟಿಪ್ಪಣಿ

  • *

    ಅಥವಾ “ಮುತ್ತಿಗೆ ಹಾಕ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:64

ಯೆರೆಮೀಯ 13:20

ಪಾದಟಿಪ್ಪಣಿ

  • *

    ಬಹುಶಃ ಯೆರೂಸಲೇಮ್‌.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 6:22
  • +ಯೆಹೆ 34:8

ಯೆರೆಮೀಯ 13:21

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 39:1, 2
  • +ಯೆರೆ 6:24; ಮೀಕ 4:9

ಯೆರೆಮೀಯ 13:22

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:19; 16:10, 11
  • +ಯೆಹೆ 16:37

ಯೆರೆಮೀಯ 13:23

ಪಾದಟಿಪ್ಪಣಿ

  • *

    ಅಥವಾ “ಇತಿಯೋಪ್ಯದವನು.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:22

ಯೆರೆಮೀಯ 13:24

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:33; ಧರ್ಮೋ 28:64

ಯೆರೆಮೀಯ 13:25

ಪಾದಟಿಪ್ಪಣಿ

  • *

    ಅಂದ್ರೆ ಯೆರೂಸಲೇಮ್‌.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 2:32
  • +ಧರ್ಮೋ 32:37, 38; ಯೆಶಾ 28:15; ಯೆರೆ 10:14

ಯೆರೆಮೀಯ 13:26

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 1:8; ಯೆಹೆ 16:37; 23:29

ಯೆರೆಮೀಯ 13:27

ಪಾದಟಿಪ್ಪಣಿ

  • *

    ಅಥವಾ “ಮಾನ-ಮರ್ಯಾದೆ ಇಲ್ಲದೆ ನೀನು ಮಾಡೋ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 2:20; ಯೆಹೆ 16:15
  • +ಯೆಶಾ 65:7; ಯೆಹೆ 6:13
  • +ಯೆಹೆ 24:13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 13:9ಯಾಜ 26:19; ಚೆಫ 3:11
ಯೆರೆ. 13:102ಪೂರ್ವ 36:15, 16
ಯೆರೆ. 13:10ಯೆರೆ 6:28
ಯೆರೆ. 13:11ವಿಮೋ 19:5; ಧರ್ಮೋ 26:18; ಕೀರ್ತ 135:4
ಯೆರೆ. 13:11ಯೆರೆ 33:9
ಯೆರೆ. 13:11ಯೆರೆ 6:17
ಯೆರೆ. 13:13ಯೆಶಾ 29:9; 51:17; ಯೆರೆ 25:27
ಯೆರೆ. 13:14ಯೆರೆ 6:21; ಯೆಹೆ 5:10
ಯೆರೆ. 13:14ಯೆಹೆ 7:4; 24:14
ಯೆರೆ. 13:16ಯೆಶಾ 59:9
ಯೆರೆ. 13:17ಯೆರೆ 9:1
ಯೆರೆ. 13:17ಕೀರ್ತ 100:3
ಯೆರೆ. 13:182ಅರ 24:12; ಯೆರೆ 22:24, 26
ಯೆರೆ. 13:19ಧರ್ಮೋ 28:64
ಯೆರೆ. 13:20ಯೆರೆ 6:22
ಯೆರೆ. 13:20ಯೆಹೆ 34:8
ಯೆರೆ. 13:21ಯೆಶಾ 39:1, 2
ಯೆರೆ. 13:21ಯೆರೆ 6:24; ಮೀಕ 4:9
ಯೆರೆ. 13:22ಯೆರೆ 5:19; 16:10, 11
ಯೆರೆ. 13:22ಯೆಹೆ 16:37
ಯೆರೆ. 13:23ಜ್ಞಾನೋ 27:22
ಯೆರೆ. 13:24ಯಾಜ 26:33; ಧರ್ಮೋ 28:64
ಯೆರೆ. 13:25ಯೆರೆ 2:32
ಯೆರೆ. 13:25ಧರ್ಮೋ 32:37, 38; ಯೆಶಾ 28:15; ಯೆರೆ 10:14
ಯೆರೆ. 13:26ಪ್ರಲಾ 1:8; ಯೆಹೆ 16:37; 23:29
ಯೆರೆ. 13:27ಯೆರೆ 2:20; ಯೆಹೆ 16:15
ಯೆರೆ. 13:27ಯೆಶಾ 65:7; ಯೆಹೆ 6:13
ಯೆರೆ. 13:27ಯೆಹೆ 24:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 13:1-27

ಯೆರೆಮೀಯ

13 ಯೆಹೋವ ನನಗೆ “ನೀನು ಹೋಗಿ ನಿನಗಾಗಿ ಒಂದು ನಾರಿನ ಸೊಂಟಪಟ್ಟಿ ತಗೊ. ಅದನ್ನ ಸೊಂಟಕ್ಕೆ ಕಟ್ಕೊ. ಅದನ್ನ ನೀರಲ್ಲಿ ಅದ್ದಬೇಡ” ಅಂದನು. 2 ಹಾಗಾಗಿ ನಾನು ಯೆಹೋವ ಹೇಳಿದ ಹಾಗೇ ಒಂದು ಪಟ್ಟಿ ತಗೊಂಡು ಸೊಂಟಕ್ಕೆ ಕಟ್ಕೊಂಡೆ. 3 ಯೆಹೋವ ನನ್ನ ಹತ್ರ ಎರಡನೇ ಸಾರಿ ಮಾತಾಡಿದನು. 4 “ನೀನು ಖರೀದಿಸಿ ಸೊಂಟಕ್ಕೆ ಕಟ್ಕೊಂಡಿರೋ ಆ ಪಟ್ಟಿಯನ್ನ ತಗೊಂಡು ಯೂಫ್ರೆಟಿಸ್‌ ನದಿ ಹತ್ರ ಹೋಗು. ಅಲ್ಲಿ ಕಡಿದಾದ ಬಂಡೆಯ ಸಂದು ಒಳಗೆ ಅದನ್ನ ಬಚ್ಚಿಡು” ಅಂದನು. 5 ಯೆಹೋವ ಹೇಳಿದ ಹಾಗೇ ನಾನು ಯೂಫ್ರೆಟಿಸ್‌ ನದಿ ಹತ್ರ ಹೋಗಿ ಬಚ್ಚಿಟ್ಟೆ.

6 ತುಂಬ ದಿನ ಆದ್ಮೇಲೆ ಯೆಹೋವ ನನಗೆ “ನೀನು ಮತ್ತೆ ಯೂಫ್ರೆಟಿಸ್‌ ನದಿ ಹತ್ರ ಹೋಗು. ನಾನು ಹೇಳಿದ ಹಾಗೆ ಅಲ್ಲಿ ನೀನು ಬಚ್ಚಿಟ್ಟಿರೋ ಆ ಪಟ್ಟಿಯನ್ನ ಹೊರಗೆ ತೆಗಿ” ಅಂದನು. 7 ಹಾಗಾಗಿ ನಾನು ಯೂಫ್ರೆಟಿಸ್‌ ನದಿ ಹತ್ರ ಹೋದೆ. ಆ ಪಟ್ಟಿಯನ್ನ ಎಲ್ಲಿ ಬಚ್ಚಿಟ್ಟಿದ್ನೋ ಆ ಜಾಗ ಅಗೆದು ಅದನ್ನ ಹೊರಗೆ ತೆಗೆದೆ. ಆ ಪಟ್ಟಿ ಹಾಳಾಗಿತ್ತು, ಯಾವ ಕೆಲಸಕ್ಕೂ ಬಾರದ ಹಾಗೆ ಆಗಿತ್ತು.

8 ಆಗ ಯೆಹೋವ ನನಗೆ ಹೀಗೆ ಹೇಳಿದನು 9 “ಯೆಹೋವ ಹೇಳೋದು ಏನಂದ್ರೆ ‘ಇದೇ ತರ ನಾನು ಯೆಹೂದದ ಅಹಂಕಾರವನ್ನ, ಯೆರೂಸಲೇಮಿನ ಸೊಕ್ಕನ್ನ ನಾಶ ಮಾಡ್ತೀನಿ.+ 10 ಈ ಪಟ್ಟಿ ತರಾನೇ ಈ ಕೆಟ್ಟ ಜನ್ರು ಕೂಡ ಯಾವ ಕೆಲಸಕ್ಕೂ ಬಾರದ ಹಾಗೆ ಆಗ್ತಾರೆ. ಯಾಕಂದ್ರೆ ಅವರು ನನ್ನ ಮಾತು ಕೇಳ್ತಿಲ್ಲ,+ ಹಠಹಿಡಿದು ಮನಸ್ಸಿಗೆ* ಬಂದ ಹಾಗೆ ನಡಿತಿದ್ದಾರೆ.+ ಬೇರೆ ದೇವರುಗಳನ್ನ ಆರಾಧನೆ ಮಾಡಿ ಅವುಗಳ ಸೇವೆ ಮಾಡಿ ಅಡ್ಡ ಬೀಳ್ತಿದ್ದಾರೆ.’ 11 ಯೆಹೋವ ಹೇಳೋದು ಏನಂದ್ರೆ ‘ಸೊಂಟಪಟ್ಟಿ ಹೇಗೆ ಒಬ್ಬನ ಸೊಂಟಕ್ಕೆ ಅಂಟ್ಕೊಂಡಿರುತ್ತೋ ಹಾಗೇ ಇಸ್ರಾಯೇಲಿನ ಎಲ್ಲ ಜನ್ರು, ಯೆಹೂದದ ಎಲ್ಲ ಜನ್ರು ನನಗೆ ಅಂಟ್ಕೊಂಡಿರೋ ತರ ಮಾಡ್ದೆ. ಅವರು ನನ್ನ ಜನರಾಗಬೇಕು,+ ನನ್ನ ಹೆಸ್ರು,+ ನನ್ನ ಗೌರವ, ನನ್ನ ಶೋಭೆ ಆಗಬೇಕಂತ ನಾನು ಹೀಗೆ ಮಾಡ್ದೆ. ಆದ್ರೆ ಅವರು ನನ್ನ ಮಾತು ಕೇಳಲಿಲ್ಲ.’+

12 ಅಷ್ಟೇ ಅಲ್ಲ ನೀನು ಅವ್ರಿಗೆ ‘“ಪ್ರತಿಯೊಂದು ದೊಡ್ಡ ಜಾಡಿಯಲ್ಲಿ ದ್ರಾಕ್ಷಾಮದ್ಯ ತುಂಬಿರಬೇಕು” ಅಂತ ಇಸ್ರಾಯೇಲಿನ ದೇವರಾದ ಯೆಹೋವ ಹೇಳ್ತಾನೆ’ ಅಂತೇಳು. ಆಗ ಅವರು ನಿನಗೆ ‘ಪ್ರತಿಯೊಂದು ದೊಡ್ಡ ಜಾಡಿಯಲ್ಲಿ ದ್ರಾಕ್ಷಾಮದ್ಯ ತುಂಬಿರಬೇಕಂತ ನಮಗೇನು ಗೊತ್ತಿಲ್ವಾ?’ ಅಂತಾರೆ. 13 ನೀನು ಅವ್ರಿಗೆ ಹೀಗೆ ಹೇಳು ‘ಯೆಹೋವ ಹೇಳೋದು ಏನಂದ್ರೆ “ದಾವೀದನ ಸಿಂಹಾಸನದಲ್ಲಿ ಕೂತಿರೋ ರಾಜರು, ಅಷ್ಟೇ ಅಲ್ಲ ಪುರೋಹಿತರು, ಪ್ರವಾದಿಗಳು, ಯೆರೂಸಲೇಮಿನ ಎಲ್ಲ ಜನ್ರು ಹೀಗೆ ಈ ದೇಶದ ಎಲ್ಲ ಜನ್ರು ಮತ್ತರಾಗೋ ತನಕ ದ್ರಾಕ್ಷಾಮದ್ಯ ಕುಡಿಸ್ತೀನಿ.”+ 14 ಯೆಹೋವ ಹೇಳೋದು ಏನಂದ್ರೆ “ಒಬ್ರು ಇನ್ನೊಬ್ರಿಗೆ ಜೋರಾಗಿ ಢಿಕ್ಕಿ ಹೊಡಿಯೋ ತರ ಮಾಡ್ತೀನಿ. ಅಪ್ಪಂದಿರಿಗೆ, ಮಕ್ಕಳಿಗೆ ಒಂದೇ ಗತಿ ಆಗೋ ತರ ಮಾಡ್ತೀನಿ.+ ನಾನು ಅವ್ರಿಗೆ ಅನುಕಂಪ, ಕರುಣೆ ತೋರಿಸಲ್ಲ. ಅವ್ರನ್ನ ನೋಡಿ ಸ್ವಲ್ಪನೂ ಬೇಜಾರು ಮಾಡ್ಕೊಳ್ಳಲ್ಲ. ಅವ್ರ ಮೇಲೆ ನಾಶ ತಂದೇ ತರ್ತಿನಿ, ಯಾವುದೂ ಅದನ್ನ ತಡಿಯೋಕೆ ಆಗಲ್ಲ.”’+

15 ಕೇಳಿಸ್ಕೊಳ್ಳಿ, ಗಮನಕೊಡಿ.

ಅಹಂಕಾರ ಪಡಬೇಡಿ, ಯಾಕಂದ್ರೆ ಯೆಹೋವನೇ ಇದನ್ನ ಹೇಳಿದ್ದಾನೆ.

16 ನಿಮ್ಮ ದೇವರಾದ ಯೆಹೋವ ಕತ್ತಲೆಯನ್ನ ತರೋ ಮುಂಚೆ,

ನೀವು ಮುಸ್ಸಂಜೆ ಮಬ್ಬಲ್ಲಿ ಬೆಟ್ಟಗಳ ಮೇಲೆ ಎಡವಿ ಬೀಳೋ ಮುಂಚೆ

ಆತನನ್ನ ಮಹಿಮೆಪಡಿಸಿ.

ಬೆಳಕು ಬರುತ್ತೆ ಅಂತ ನೀವು ಕಾಯ್ತಾ ಇರ್ತಿರ,

ಆದ್ರೆ ಆತನು ಗಾಢಕತ್ತಲೆ ತರ್ತಾನೆ,

ಬೆಳಕನ್ನ ಆತನು ಕಾರ್ಗತ್ತಲೆಯಾಗಿ ಮಾಡ್ತಾನೆ.+

17 ನೀವು ಕೇಳಿಸ್ಕೊಳ್ಳದಿದ್ರೆ,

ನೀವು ಅಹಂಕಾರಿಗಳಾಗಿ ಇರೋದ್ರಿಂದ ಗುಟ್ಟಾಗಿ ಅಳ್ತೀನಿ.

ತುಂಬ ಕಣ್ಣೀರು ಹಾಕ್ತೀನಿ, ನನ್ನ ಕಣ್ಣುಗಳಿಂದ ಕಣ್ಣೀರು ಉಕ್ಕಿ ಬರುತ್ತೆ,+

ಯಾಕಂದ್ರೆ ಯೆಹೋವನ ಕುರಿಹಿಂಡನ್ನ+ ಕೈದಿಗಳಾಗಿ ಹಿಡ್ಕೊಂಡು ಹೋಗಿದ್ದಾರೆ.

18 ರಾಜನಿಗೆ, ರಾಜಮಾತೆಗೆ+ ‘ನಿಮ್ಮ ಸಿಂಹಾಸನ ಬಿಟ್ಟು ನೆಲದ ಮೇಲೆ ಕೂತ್ಕೊಳ್ಳಿ,

ಯಾಕಂದ್ರೆ ನಿಮ್ಮ ತಲೆ ಮೇಲಿರೋ ಸುಂದರ ಕಿರೀಟ ಕೆಳಗೆ ಬೀಳುತ್ತೆ’ ಅಂತೇಳು.

19 ದಕ್ಷಿಣದಲ್ಲಿ ಇರೋ ಪಟ್ಟಣಗಳನ್ನೆಲ್ಲ ಮುಚ್ಚಿದ್ದಾರೆ,* ತೆರಿಯೋಕೆ ಯಾರೂ ಇಲ್ಲ.

ಯೆಹೂದದ ಜನ್ರನ್ನೆಲ್ಲ ಕೈದಿಗಳಾಗಿ ಹಿಡ್ಕೊಂಡು ಹೋಗಿದ್ದಾರೆ.+

20 ನಿನ್ನ* ಕಣ್ಣೆತ್ತಿ ಉತ್ತರದಿಂದ ಬರ್ತಾ ಇರೋರನ್ನ ನೋಡು,+

ನಿನಗೆ ಕೊಟ್ಟಿರೋ ಕುರಿಗಳೆಲ್ಲ ಎಲ್ಲಿ ಹೋಯ್ತು? ನಿನ್ನ ಅಂದವಾದ ಕುರಿಗಳು ಎಲ್ಲಿ?+

21 ನೀನು ಆರಂಭದಿಂದ ನಿನ್ನ ಆಪ್ತ ಸ್ನೇಹಿತರನ್ನಾಗಿ ಮಾಡ್ಕೊಂಡವರ ಕೈಯಿಂದಾನೇ

ನಿನಗೆ ಶಿಕ್ಷೆ ಸಿಗುವಾಗ ನೀನೇನು ಹೇಳ್ತೀಯ?+

ಹೆರಿಗೆ ನೋವಿನ ತರದ ನೋವನ್ನ ನೀನು ಆಗ ಅನುಭವಿಸ್ತೀಯ ಅಲ್ವಾ?+

22 ‘ನನಗೆ ಯಾಕೆ ಈ ಕಷ್ಟಗಳೆಲ್ಲಾ ಬಂದಿದೆ?’ ಅಂತ ನೀನು ಮನಸ್ಸಲ್ಲಿ ಅಂದ್ಕೊಳ್ಳುವಾಗ,+

ನೀನು ಮಾಡಿರೋ ದೊಡ್ಡ ಪಾಪದಿಂದಾಗಿ ನಿನ್ನ ಲಂಗವನ್ನ ಕಿತ್ತೆಸಿತಾರೆ,+

ನಿನ್ನ ಹಿಮ್ಮಡಿಗಳಿಗೆ ತುಂಬ ನೋವಾಗಿದೆ ಅಂತ ತಿಳ್ಕೊ.

23 ಒಬ್ಬ ಕೂಷ್ಯ* ತನ್ನ ಚರ್ಮದ ಬಣ್ಣವನ್ನ ಬದಲಾಯಿಸೋಕೆ ಆಗುತ್ತಾ?

ಚಿರತೆಗೆ ತನ್ನ ಮೈಮೇಲಿರೋ ಚುಕ್ಕೆಗಳನ್ನ ಬದಲಾಯಿಸೋಕೆ ಆಗುತ್ತಾ?+

ಅದೇ ರೀತಿ ಕೆಟ್ಟದ್ದನ್ನೇ ಮಾಡಿ ರೂಢಿಯಾಗಿರೋ ನಿನಗೆ

ಒಳ್ಳೇದನ್ನ ಮಾಡೋಕೆ ಸಾಧ್ಯಾನೇ ಇಲ್ಲ.

24 ಹಾಗಾಗಿ ಮರುಭೂಮಿಯ ಗಾಳಿ ಬೀಸಿದಾಗ ಒಣಹುಲ್ಲು ಹೇಗೆ ಚೆಲ್ಲಾಪಿಲ್ಲಿ ಆಗುತ್ತೋ ಹಾಗೆ ನಾನು ನಿಮ್ಮನ್ನ ಚದರಿಸಿಬಿಡ್ತೀನಿ.+

25 ನಿನಗೆ* ಇದೇ ಗತಿ ಆಗುತ್ತೆ, ನಾನು ನಿನಗೆ ಕೊಟ್ಟಿರೋ ಪಾಲು ಇದೇ” ಅಂತ ಯೆಹೋವ ಹೇಳಿದ್ದಾನೆ.

“ಯಾಕಂದ್ರೆ ನೀನು ನನ್ನನ್ನ ಮರೆತುಬಿಟ್ಟೆ,+ ಸುಳ್ಳುಗಳ ಮೇಲೆ ನಂಬಿಕೆ ಇಟ್ಟೆ.+

26 ಹಾಗಾಗಿ ನಾನು ನಿನ್ನ ಲಂಗವನ್ನ ನಿನ್ನ ಮುಖದವರೆಗೆ ಎತ್ತುತ್ತೀನಿ,

ಆಗ ನೀನು ಬೆತ್ತಲೆ ಆಗಿರೋದು ಎಲ್ರಿಗೂ ಕಾಣಿಸುತ್ತೆ,+

27 ನೀನು ಮಾಡಿದ ವ್ಯಭಿಚಾರ,+ ಕಾಮದ ಬಿಸಿಯೇರಿ ಶಬ್ದ ಮಾಡೋ ಕುದುರೆ ತರ ನೀನು ನಡ್ಕೊಂಡಿದ್ದು,

ಹೇಸಿಗೆಯಾದ* ನಿನ್ನ ವೇಶ್ಯಾವಾಟಿಕೆ ಎಲ್ರಿಗೂ ಗೊತ್ತಾಗುತ್ತೆ.

ಬೆಟ್ಟಗಳ ಮೇಲೆ, ಬಯಲಲ್ಲಿ ನೀನು ಅಸಹ್ಯವಾಗಿ ನಡ್ಕೊಂಡಿದ್ದನ್ನ ನೋಡಿದ್ದೀನಿ.+

ಯೆರೂಸಲೇಮೇ, ನಿನ್ನ ಗತಿ ಏನಂತ ಹೇಳಲಿ,

ಇನ್ನೆಷ್ಟು ಸಮಯದ ತನಕ ನೀನು ಅಶುದ್ಧಳಾಗಿ ಇರ್ತಿಯ?”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ