ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ರಾಜನ ಸೇವೆ ಮಾಡ್ತಿದ್ದ ಬೇರೆ ಅಧಿಕಾರಿಗಳು (1-34)

1 ಪೂರ್ವಕಾಲವೃತ್ತಾಂತ 27:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:25; ಧರ್ಮೋ 1:15; 1ಸಮು 8:11, 12
  • +1ಪೂರ್ವ 28:1

1 ಪೂರ್ವಕಾಲವೃತ್ತಾಂತ 27:2

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 11:11

1 ಪೂರ್ವಕಾಲವೃತ್ತಾಂತ 27:3

ಮಾರ್ಜಿನಲ್ ರೆಫರೆನ್ಸ್

  • +ಅರ 26:20, 21

1 ಪೂರ್ವಕಾಲವೃತ್ತಾಂತ 27:4

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 8:1, 4
  • +2ಸಮು 23:9

1 ಪೂರ್ವಕಾಲವೃತ್ತಾಂತ 27:5

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 12:27
  • +2ಸಮು 23:20-23; 1ಅರ 4:4

1 ಪೂರ್ವಕಾಲವೃತ್ತಾಂತ 27:7

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 2:15, 16
  • +2ಸಮು 2:18; 23:8, 24

1 ಪೂರ್ವಕಾಲವೃತ್ತಾಂತ 27:9

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 11:5, 6; ಆಮೋ 1:1
  • +2ಸಮು 23:8, 26

1 ಪೂರ್ವಕಾಲವೃತ್ತಾಂತ 27:10

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 11:10, 27

1 ಪೂರ್ವಕಾಲವೃತ್ತಾಂತ 27:11

ಮಾರ್ಜಿನಲ್ ರೆಫರೆನ್ಸ್

  • +ಅರ 26:20
  • +2ಸಮು 21:18

1 ಪೂರ್ವಕಾಲವೃತ್ತಾಂತ 27:12

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 6:60, 64
  • +2ಸಮು 23:8, 27

1 ಪೂರ್ವಕಾಲವೃತ್ತಾಂತ 27:13

ಮಾರ್ಜಿನಲ್ ರೆಫರೆನ್ಸ್

  • +ಅರ 26:20
  • +2ಸಮು 23:8, 28

1 ಪೂರ್ವಕಾಲವೃತ್ತಾಂತ 27:14

ಮಾರ್ಜಿನಲ್ ರೆಫರೆನ್ಸ್

  • +2ಸಮು 23:8, 30

1 ಪೂರ್ವಕಾಲವೃತ್ತಾಂತ 27:18

ಮಾರ್ಜಿನಲ್ ರೆಫರೆನ್ಸ್

  • +1ಸಮು 16:1, 6; 17:28

1 ಪೂರ್ವಕಾಲವೃತ್ತಾಂತ 27:21

ಮಾರ್ಜಿನಲ್ ರೆಫರೆನ್ಸ್

  • +1ಸಮು 14:50; 2ಸಮು 3:27

1 ಪೂರ್ವಕಾಲವೃತ್ತಾಂತ 27:23

ಮಾರ್ಜಿನಲ್ ರೆಫರೆನ್ಸ್

  • +ಆದಿ 15:5

1 ಪೂರ್ವಕಾಲವೃತ್ತಾಂತ 27:24

ಮಾರ್ಜಿನಲ್ ರೆಫರೆನ್ಸ್

  • +2ಸಮು 24:2, 15; 1ಪೂರ್ವ 21:6, 7

1 ಪೂರ್ವಕಾಲವೃತ್ತಾಂತ 27:25

ಪಾದಟಿಪ್ಪಣಿ

  • *

    ಅಥವಾ “ಖಜಾನೆಗಳ.”

ಮಾರ್ಜಿನಲ್ ರೆಫರೆನ್ಸ್

  • +2ಅರ 18:15

1 ಪೂರ್ವಕಾಲವೃತ್ತಾಂತ 27:28

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 26:9, 10
  • +2ಪೂರ್ವ 9:27

1 ಪೂರ್ವಕಾಲವೃತ್ತಾಂತ 27:29

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 35:2

1 ಪೂರ್ವಕಾಲವೃತ್ತಾಂತ 27:30

ಪಾದಟಿಪ್ಪಣಿ

  • *

    ಅಕ್ಷ. “ಹೆಣ್ಣು ಕತ್ತೆಗಳು.”

1 ಪೂರ್ವಕಾಲವೃತ್ತಾಂತ 27:32

ಮಾರ್ಜಿನಲ್ ರೆಫರೆನ್ಸ್

  • +2ಸಮು 13:3; 21:21
  • +1ಪೂರ್ವ 3:1-9

1 ಪೂರ್ವಕಾಲವೃತ್ತಾಂತ 27:33

ಪಾದಟಿಪ್ಪಣಿ

  • *

    ಅಥವಾ “ಆಪ್ತಗೆಳೆಯನಾಗಿದ್ದ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 15:12; 16:23; 17:23
  • +2ಸಮು 15:37; 16:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2017, ಪು. 29

1 ಪೂರ್ವಕಾಲವೃತ್ತಾಂತ 27:34

ಮಾರ್ಜಿನಲ್ ರೆಫರೆನ್ಸ್

  • +2ಸಮು 23:20-23; 1ಅರ 2:35
  • +1ಅರ 1:7
  • +1ಪೂರ್ವ 11:6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಪೂರ್ವ. 27:1ವಿಮೋ 18:25; ಧರ್ಮೋ 1:15; 1ಸಮು 8:11, 12
1 ಪೂರ್ವ. 27:11ಪೂರ್ವ 28:1
1 ಪೂರ್ವ. 27:21ಪೂರ್ವ 11:11
1 ಪೂರ್ವ. 27:3ಅರ 26:20, 21
1 ಪೂರ್ವ. 27:41ಪೂರ್ವ 8:1, 4
1 ಪೂರ್ವ. 27:42ಸಮು 23:9
1 ಪೂರ್ವ. 27:51ಪೂರ್ವ 12:27
1 ಪೂರ್ವ. 27:52ಸಮು 23:20-23; 1ಅರ 4:4
1 ಪೂರ್ವ. 27:71ಪೂರ್ವ 2:15, 16
1 ಪೂರ್ವ. 27:72ಸಮು 2:18; 23:8, 24
1 ಪೂರ್ವ. 27:92ಪೂರ್ವ 11:5, 6; ಆಮೋ 1:1
1 ಪೂರ್ವ. 27:92ಸಮು 23:8, 26
1 ಪೂರ್ವ. 27:101ಪೂರ್ವ 11:10, 27
1 ಪೂರ್ವ. 27:11ಅರ 26:20
1 ಪೂರ್ವ. 27:112ಸಮು 21:18
1 ಪೂರ್ವ. 27:121ಪೂರ್ವ 6:60, 64
1 ಪೂರ್ವ. 27:122ಸಮು 23:8, 27
1 ಪೂರ್ವ. 27:13ಅರ 26:20
1 ಪೂರ್ವ. 27:132ಸಮು 23:8, 28
1 ಪೂರ್ವ. 27:142ಸಮು 23:8, 30
1 ಪೂರ್ವ. 27:181ಸಮು 16:1, 6; 17:28
1 ಪೂರ್ವ. 27:211ಸಮು 14:50; 2ಸಮು 3:27
1 ಪೂರ್ವ. 27:23ಆದಿ 15:5
1 ಪೂರ್ವ. 27:242ಸಮು 24:2, 15; 1ಪೂರ್ವ 21:6, 7
1 ಪೂರ್ವ. 27:252ಅರ 18:15
1 ಪೂರ್ವ. 27:282ಪೂರ್ವ 26:9, 10
1 ಪೂರ್ವ. 27:282ಪೂರ್ವ 9:27
1 ಪೂರ್ವ. 27:29ಯೆಶಾ 35:2
1 ಪೂರ್ವ. 27:322ಸಮು 13:3; 21:21
1 ಪೂರ್ವ. 27:321ಪೂರ್ವ 3:1-9
1 ಪೂರ್ವ. 27:332ಸಮು 15:12; 16:23; 17:23
1 ಪೂರ್ವ. 27:332ಸಮು 15:37; 16:16, 17
1 ಪೂರ್ವ. 27:342ಸಮು 23:20-23; 1ಅರ 2:35
1 ಪೂರ್ವ. 27:341ಅರ 1:7
1 ಪೂರ್ವ. 27:341ಪೂರ್ವ 11:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೂರ್ವಕಾಲವೃತ್ತಾಂತ 27:1-34

ಒಂದನೇ ಪೂರ್ವಕಾಲವೃತ್ತಾಂತ

27 ರಾಜನ ಸೈನ್ಯದಲ್ಲಿದ್ದ ಇಸ್ರಾಯೇಲ್ಯರ ದಳಗಳು ಹೀಗಿದ್ವು. ಈ ದಳಗಳಲ್ಲಿ ಕುಟುಂಬಗಳ ಮುಖ್ಯಸ್ಥರು, ಸಾವಿರ ಗಂಡಸ್ರ ಮೇಲೆ ನೂರು ಗಂಡಸ್ರ ಮೇಲೆ ಇದ್ದ ಮುಖ್ಯಸ್ಥರು,+ ಆ ದಳಗಳನ್ನ ನೋಡ್ಕೊಳ್ತಿದ್ದ ಮುಖ್ಯಸ್ಥರು ಇದ್ರು.+ ತಿಂಗಳಿಗೆ ಒಂದು ದಳದ ಹಾಗೇ ಇಡೀ ವರ್ಷ ಸರದಿ ಪ್ರಕಾರ ಈ ದಳಗಳು ಕೆಲಸ ಮಾಡ್ತಿದ್ದವು. ಒಂದೊಂದು ದಳದಲ್ಲೂ 24,000 ಗಂಡಸ್ರು ಇದ್ರು.

2 ಜಬ್ದೀಯೇಲನ ಮಗ ಯಾಷೊಬ್ಬಾಮ+ ಮೊದಲ್ನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಒಂದನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 3 ಇವನು ಪೆರೆಚನ+ ವಂಶಸ್ಥನಾಗಿದ್ದ. ಮೊದಲ ತಿಂಗಳಲ್ಲಿ ಸೇವೆ ಮಾಡಬೇಕಾಗಿದ್ದ ದಳಗಳ ಅಧಿಕಾರಿಗಳಿಗೆ ಇವನು ಮುಖ್ಯಸ್ಥನಾಗಿದ್ದ. 4 ಅಹೋಹಿಯನಾದ+ ದೋದೈ+ ಎರಡನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ದಳದವ್ರ ಮುಖ್ಯಸ್ಥನಾಗಿದ್ದ. ಮಿಕ್ಲೋತ ಈ ದಳದ ನಾಯಕನಾಗಿದ್ದ. ಈ ದಳದಲ್ಲಿ 24,000 ಗಂಡಸ್ರು ಇದ್ರು. 5 ಮುಖ್ಯ ಪುರೋಹಿತನಾದ ಯೆಹೋಯಾದನ+ ಮಗ ಬೆನಾಯ+ ಮೂರನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಮೂರನೇ ದಳದವರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 6 ಈ ಬೆನಾಯ ಮೂವತ್ತು ವೀರ ಸೈನಿಕರಲ್ಲಿ ಒಬ್ಬನಾಗಿದ್ದು ಅವ್ರ ಮೇಲ್ವಿಚಾರಕನಾಗಿದ್ದ. ಬೆನಾಯನ ದಳದ ಮೇಲ್ವಿಚಾರಣೆಯನ್ನ ಅವನ ಮಗ ಅಮ್ಮೀಜಾಬಾದ ಮಾಡ್ತಿದ್ದ. 7 ಯೋವಾಬನ ಸಹೋದರ+ ಅಸಾಹೇಲ+ ನಾಲ್ಕನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ನಾಲ್ಕನೇ ದಳದವ್ರ ಮುಖ್ಯಸ್ಥನಾಗಿದ್ದ. ಅವನು ಆದ್ಮೇಲೆ ಅವನ ಮಗ ಜೆಬದ್ಯ ಆ ಸ್ಥಾನವನ್ನ ವಹಿಸ್ಕೊಂಡ. ಅವನ ದಳದಲ್ಲಿ 24,000 ಗಂಡಸ್ರು ಇದ್ರು. 8 ಇಜ್ರಾಹ್ಯನಾದ ಶಮ್ಹೂತ ಐದನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಐದನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 9 ತೆಕೋವದವನಾದ+ ಇಕ್ಕೇಷನ ಮಗ ಈರಾ+ ಆರನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಆರನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 10 ಎಫ್ರಾಯೀಮ್‌ ಕುಲದ ಪೆಲೋನ್ಯನಾದ ಹೆಲೆಚ+ ಏಳನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಏಳನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 11 ಜೆರಹೀಯರಲ್ಲಿ+ ಹುಷಾತ್ಯನಾದ ಸಿಬ್ಕೈ+ ಎಂಟನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಎಂಟನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 12 ಅನಾತೋತ್‌+ ಊರಿನ ಬೆನ್ಯಾಮೀನ್ಯನಾದ ಅಬೀಯೆಜೆರ+ ಒಂಬತ್ತನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಒಂಬತ್ತನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 13 ನೆಟೋಫ ಊರಿನ ಜೆರಹೀಯನಾದ+ ಮಹರೈ+ ಹತ್ತನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ ಹತ್ತನೇ ದಳದವರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 14 ಪಿರಾತೋನ್‌ ಊರಿನ ಎಫ್ರಾಯೀಮ್ಯನಾದ ಬೆನಾಯ+ 11ನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ 11ನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು. 15 ನೆಟೋಫ ಊರಿನ ಒತ್ನೀಯೇಲನ ವಂಶದವನಾದ ಹೆಲ್‌ದೈ 12ನೇ ತಿಂಗಳಲ್ಲಿ ಸೇವೆ ಮಾಡೋಕೆ ಬಂದ 12ನೇ ದಳದವ್ರ ಮುಖ್ಯಸ್ಥನಾಗಿದ್ದ. ಇವನ ದಳದಲ್ಲಿ 24,000 ಗಂಡಸ್ರು ಇದ್ರು.

16 ಇಸ್ರಾಯೇಲ್‌ ಕುಲದ ನಾಯಕರು: ಜಿಕ್ರಿಯ ಮಗ ಎಲೀಯೆಜರ ರೂಬೇನ್ಯರ ನಾಯಕನಾಗಿದ್ದ, ಮಾಕಾನ ಮಗ ಶೆಫಟ್ಯ ಸಿಮೆಯೋನ್ಯರ ನಾಯಕನಾಗಿದ್ದ, 17 ಕೆಮೂವೇಲನ ಮಗ ಹಷಬ್ಯ ಲೇವಿಯರ ನಾಯಕನಾಗಿದ್ದ, ಆರೋನನ ವಂಶದವ್ರಿಗೆ ಚಾದೋಕ ನಾಯಕನಾಗಿದ್ದ, 18 ದಾವೀದನ ಸಹೋದರರಲ್ಲಿ ಒಬ್ಬನಾದ ಎಲೀಹು+ ಯೆಹೂದ ಕುಲದ ನಾಯಕನಾಗಿದ್ದ. ಒಮ್ರಿಯ ಮಗ ಮೀಕಾಯೇಲ ಇಸ್ಸಾಕಾರ್‌ ಕುಲದ ನಾಯಕನಾಗಿದ್ದ, 19 ಓಬದ್ಯನ ಮಗ ಇಷ್ಮಾಯ ಜೆಬುಲೂನ್‌ ಕುಲದ ನಾಯಕನಾಗಿದ್ದ, ಅಜ್ರೀಯೇಲನ ಮಗ ಯೆರೀಮೋತ ನಫ್ತಾಲಿ ಕುಲದ ನಾಯಕನಾಗಿದ್ದ, 20 ಅಜಜ್ಯನ ಮಗ ಹೋಷೇಯ ಎಫ್ರಾಯೀಮ್ಯರ ನಾಯಕನಾಗಿದ್ದ. ಪೆದಾಯನ ಮಗ ಯೋವೇಲ ಮನಸ್ಸೆಯ ಅರ್ಧ ಕುಲದ ಜನ್ರಿಗೆ ನಾಯಕನಾಗಿದ್ದ. 21 ಗಿಲ್ಯಾದಿನಲ್ಲಿದ್ದ ಮನಸ್ಸೆಯ ಉಳಿದ ಅರ್ಧ ಕುಲದ ಜನ್ರಿಗೆ ಜೆಕರ್ಯನ ಮಗ ಇದ್ದೋ ಅನ್ನುವವನು ನಾಯಕನಾಗಿದ್ದ, ಅಬ್ನೇರನ+ ಮಗ ಯಾಸೀಯೇಲ ಬೆನ್ಯಾಮೀನ್‌ ಕುಲದ ನಾಯಕನಾಗಿದ್ದ, 22 ಯೆರೋಹಾಮನ ಮಗ ಅಜರೇಲ ದಾನ್‌ ಕುಲದ ನಾಯಕನಾಗಿದ್ದ. ಇವ್ರೆಲ್ಲ ಇಸ್ರಾಯೇಲ್‌ ಕುಲಗಳ ಅಧಿಕಾರಿಗಳಾಗಿದ್ರು.

23 ದಾವೀದ 20 ವರ್ಷ, ಅದಕ್ಕಿಂತ ಕಮ್ಮಿ ವಯಸ್ಸಿನವ್ರ ಲೆಕ್ಕ ತಗೊಂಡಿಲ್ಲ. ಯಾಕಂದ್ರೆ ಯೆಹೋವ ಇಸ್ರಾಯೇಲ್ಯರನ್ನ ಆಕಾಶದ ನಕ್ಷತ್ರಗಳ ಹಾಗೇ ಲೆಕ್ಕ ಮಾಡೋಕೆ ಆಗದಷ್ಟು ಜನ್ರಾಗಿ ಮಾಡ್ತೀನಿ ಅಂತ ಮಾತು ಕೊಟ್ಟಿದ್ದನು.+ 24 ಚೆರೂಯಳ ಮಗ ಯೋವಾಬ ಜನ್ರ ಲೆಕ್ಕ ತಗೊಳ್ಳೋದನ್ನ ಶುರುಮಾಡಿದ್ದ. ಆದ್ರೆ ಅದನ್ನ ಮುಗಿಸೋಕೆ ಆಗಲಿಲ್ಲ. ಹೀಗೆ ಲೆಕ್ಕ ಮಾಡ್ತಾ ಇದ್ದಿದ್ರಿಂದ ಇಸ್ರಾಯೇಲಿನ ಮೇಲೆ ದೇವರಿಗೆ ತುಂಬ ಕೋಪ ಬಂತು.+ ರಾಜ ದಾವೀದನ ಕಾಲದ ಇತಿಹಾಸ ಪುಸ್ತಕದಲ್ಲಿ ಆ ಲೆಕ್ಕ ಬರಿಲಿಲ್ಲ.

25 ಅದೀಯೇಲನ ಮಗ ಅಜ್ಮಾವೇತ ರಾಜನ ಖಜಾನೆಗಳ+ ಮುಖ್ಯಸ್ಥನಾಗಿದ್ದ. ಉಜ್ಜೀಯನ ಮಗ ಯೋನಾತಾನ ಹೊಲಗಳಲ್ಲಿ, ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ, ಗೋಪುರಗಳಲ್ಲಿದ್ದ ಕಣಜಗಳ* ಮುಖ್ಯಸ್ಥನಾಗಿದ್ದ. 26 ಕೆಲೂಬನ ಮಗ ಎಜ್ರಿ ರೈತರ ಮುಖ್ಯಸ್ಥನಾಗಿದ್ದ. 27 ರಾಮ ಊರಿನ ಶಿಮ್ಮಿ ದ್ರಾಕ್ಷಿ ತೋಟಗಳ ಮುಖ್ಯಸ್ಥನಾಗಿದ್ದ. ಶಿಪ್ಮೋತಿನ ಜಬ್ದಿ ಫಸಲಿಗೆ ಬಂದ ದ್ರಾಕ್ಷಿಗಳನ್ನ ದ್ರಾಕ್ಷಾಮದ್ಯವಾಗಿ ತಯಾರಿಸಿ ಇಡ್ತಿದ್ದ ಕಣಜಗಳ ಮುಖ್ಯಸ್ಥನಾಗಿದ್ದ. 28 ಷೆಫೆಲಾದಲ್ಲಿದ್ದ+ ಆಲಿವ್‌ ತೋಟಗಳ ಮೇಲೆ, ಅತ್ತಿ ಮರಗಳ+ ಮೇಲೆ ಗೆದೆರಿನವನಾದ ಬಾಳ್‌-ಹಾನಾನ ಮುಖ್ಯಸ್ಥನಾಗಿದ್ದ. ಎಣ್ಣೆ ಕಣಜಗಳ ಮೇಲೆ ಯೋವಾಷ ಮುಖ್ಯಸ್ಥನಾಗಿದ್ದ. 29 ಶಾರೋನಿನಲ್ಲಿ+ ಮೇಯ್ತಿದ್ದ ದನಗಳ ಹಿಂಡಿನ ಮೇಲೆ ಶಾರೋನ್ಯನಾದ ಶಿಟ್ರೈ ಮುಖ್ಯಸ್ಥನಾಗಿದ್ದ. ಕಣಿವೆಯಲ್ಲಿ ಮೇಯ್ತಿದ್ದ ದನಗಳ ಹಿಂಡಿನ ಮೇಲೆ ಅದ್ಲೈಯನ ಮಗ ಶಾಫಾಟ ಮುಖ್ಯಸ್ಥನಾಗಿದ್ದ. 30 ಒಂಟೆಗಳ ಮೇಲೆ ಇಷ್ಮಾಯೇಲ್ಯನಾದ ಓಬೀಲ ಮುಖ್ಯಸ್ಥನಾಗಿದ್ದ. ಕತ್ತೆಗಳ* ಮೇಲೆ ಮೇರೊನೋತ್ಯನಾದ ಯೆಹ್ದೆಯಾಹ ಮುಖ್ಯಸ್ಥನಾಗಿದ್ದ. 31 ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ ಮುಖ್ಯಸ್ಥನಾಗಿದ್ದ. ಇವ್ರೆಲ್ಲ ರಾಜ ದಾವೀದನ ಆಸ್ತಿಯನ್ನ ನೋಡ್ಕೊಳ್ತಿದ್ದ ಅಧಿಪತಿಗಳಾಗಿದ್ರು.

32 ದಾವೀದನ ಸಹೋದರನ ಮಗ ಯೋನಾತಾನ+ ಸಲಹೆಗಾರನಾಗಿದ್ದ, ತಿಳುವಳಿಕೆ ಇದ್ದ ಕಾರ್ಯದರ್ಶಿ ಆಗಿದ್ದ. ಹಕ್ಮೋನಿಯ ಮಗ ಯೆಹೀಯೇಲ ರಾಜನ ಗಂಡು ಮಕ್ಕಳನ್ನ+ ನೋಡ್ಕೊಳ್ತಿದ್ದ. 33 ಅಹೀತೋಫೆಲ+ ರಾಜನ ಸಲಹೆಗಾರನಾಗಿದ್ದ. ಅರ್ಕೀಯನಾದ ಹೂಷೈ+ ರಾಜನ ಸ್ನೇಹಿತನಾಗಿದ್ದ.* 34 ಅಹೀತೋಫೆಲ ಆದ್ಮೇಲೆ ಬೆನಾಯನ+ ಮಗ ಯೆಹೋಯಾದ, ಎಬ್ಯಾತಾರ+ ಸಲಹೆಗಾರರಾದ್ರು. ಯೋವಾಬ+ ರಾಜನ ಸೈನ್ಯದ ಸೇನಾಪತಿ ಆಗಿದ್ದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ