ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ನ್ಯಾಯಾಧೀಶ ಯೆಫ್ತಾಹನನ್ನ ಹೊರಗಟ್ಟಿದ್ರು, ಮತ್ತೆ ನಾಯಕನಾದ (1-11)

      • ಯೆಫ್ತಾಹ ಅಮ್ಮೋನನ ಮಾತುಕತೆ (12-28)

      • ಯೆಫ್ತಾಹನ ಹರಕೆ, ಅವನ ಒಬ್ಬಳೇ ಮಗಳು (29-40)

        • ಮಗಳ ಅವಿವಾಹಿತ ಜೀವನ (38-40)

ನ್ಯಾಯಸ್ಥಾಪಕರು 11:1

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 12:7; 1ಸಮು 12:11; ಇಬ್ರಿ 11:32

ನ್ಯಾಯಸ್ಥಾಪಕರು 11:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2021,

    ಕಾವಲಿನಬುರುಜು (ಅಧ್ಯಯನ),

    4/2016, ಪು. 6

ನ್ಯಾಯಸ್ಥಾಪಕರು 11:4

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 10:17

ನ್ಯಾಯಸ್ಥಾಪಕರು 11:7

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:2

ನ್ಯಾಯಸ್ಥಾಪಕರು 11:8

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 10:18

ನ್ಯಾಯಸ್ಥಾಪಕರು 11:11

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 10:17; 11:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2016, ಪು. 6-7

ನ್ಯಾಯಸ್ಥಾಪಕರು 11:12

ಮಾರ್ಜಿನಲ್ ರೆಫರೆನ್ಸ್

  • +ಆದಿ 19:36, 38

ನ್ಯಾಯಸ್ಥಾಪಕರು 11:13

ಮಾರ್ಜಿನಲ್ ರೆಫರೆನ್ಸ್

  • +ಅರ 21:26
  • +ಧರ್ಮೋ 3:16, 17
  • +ಅರ 21:23, 24

ನ್ಯಾಯಸ್ಥಾಪಕರು 11:15

ಮಾರ್ಜಿನಲ್ ರೆಫರೆನ್ಸ್

  • +ಆದಿ 19:36, 37; ಧರ್ಮೋ 2:9
  • +ಧರ್ಮೋ 2:19, 37

ನ್ಯಾಯಸ್ಥಾಪಕರು 11:16

ಮಾರ್ಜಿನಲ್ ರೆಫರೆನ್ಸ್

  • +ಅರ 14:25
  • +ಅರ 20:1

ನ್ಯಾಯಸ್ಥಾಪಕರು 11:17

ಮಾರ್ಜಿನಲ್ ರೆಫರೆನ್ಸ್

  • +ಆದಿ 36:1; ಅರ 20:14; ಧರ್ಮೋ 2:4
  • +ಆದಿ 19:36, 37
  • +ಅರ 20:22

ನ್ಯಾಯಸ್ಥಾಪಕರು 11:18

ಮಾರ್ಜಿನಲ್ ರೆಫರೆನ್ಸ್

  • +ಅರ 21:4
  • +ಅರ 21:11
  • +ಅರ 21:13

ನ್ಯಾಯಸ್ಥಾಪಕರು 11:19

ಮಾರ್ಜಿನಲ್ ರೆಫರೆನ್ಸ್

  • +ಅರ 21:21-26; ಧರ್ಮೋ 2:26, 27

ನ್ಯಾಯಸ್ಥಾಪಕರು 11:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 2:32, 33

ನ್ಯಾಯಸ್ಥಾಪಕರು 11:21

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:15, 21

ನ್ಯಾಯಸ್ಥಾಪಕರು 11:22

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 2:36

ನ್ಯಾಯಸ್ಥಾಪಕರು 11:23

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:22

ನ್ಯಾಯಸ್ಥಾಪಕರು 11:24

ಮಾರ್ಜಿನಲ್ ರೆಫರೆನ್ಸ್

  • +1ಅರ 11:7
  • +ವಿಮೋ 23:28; 34:11; ಅರ 33:53; ಧರ್ಮೋ 9:5; 18:12

ನ್ಯಾಯಸ್ಥಾಪಕರು 11:25

ಮಾರ್ಜಿನಲ್ ರೆಫರೆನ್ಸ್

  • +ಅರ 22:2, 3; ಯೆಹೋ 24:9

ನ್ಯಾಯಸ್ಥಾಪಕರು 11:26

ಮಾರ್ಜಿನಲ್ ರೆಫರೆನ್ಸ್

  • +ಅರ 21:25
  • +ಅರ 21:26

ನ್ಯಾಯಸ್ಥಾಪಕರು 11:27

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 33:22

ನ್ಯಾಯಸ್ಥಾಪಕರು 11:29

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:9, 10; ಜೆಕ 4:6
  • +ನ್ಯಾಯ 10:17

ನ್ಯಾಯಸ್ಥಾಪಕರು 11:30

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 23:21

ನ್ಯಾಯಸ್ಥಾಪಕರು 11:31

ಮಾರ್ಜಿನಲ್ ರೆಫರೆನ್ಸ್

  • +1ಸಮು 1:11
  • +1ಸಮು 1:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 4

    ಬೈಬಲ್‌ ಪಾಠಗಳು, ಪು. 88-89

    ಕಾವಲಿನಬುರುಜು (ಅಧ್ಯಯನ),

    4/2016, ಪು. 7-8

    ಕಾವಲಿನಬುರುಜು,

    2/15/2008, ಪು. 8

    1/15/2005, ಪು. 26

ನ್ಯಾಯಸ್ಥಾಪಕರು 11:34

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 10:17; 11:11

ನ್ಯಾಯಸ್ಥಾಪಕರು 11:35

ಮಾರ್ಜಿನಲ್ ರೆಫರೆನ್ಸ್

  • +ಅರ 30:2; ಕೀರ್ತ 15:4; ಪ್ರಸಂ 5:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 4

    ಕಾವಲಿನಬುರುಜು (ಅಧ್ಯಯನ),

    4/2016, ಪು. 7-8

ನ್ಯಾಯಸ್ಥಾಪಕರು 11:36

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:30, 31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2016, ಪು. 8-9

ನ್ಯಾಯಸ್ಥಾಪಕರು 11:37

ಪಾದಟಿಪ್ಪಣಿ

  • *

    ಅಥವಾ “ನನ್ನ ಅವಿವಾಹಿತ ಸ್ಥಿತಿಗಾಗಿ ನನ್ನ ಸ್ನೇಹಿತೆಯರ ಜೊತೆ ಅಳೋಕೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 4

ನ್ಯಾಯಸ್ಥಾಪಕರು 11:39

ಪಾದಟಿಪ್ಪಣಿ

  • *

    ಅಥವಾ “ನಿಯಮ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 1:22, 24

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 11:1ನ್ಯಾಯ 12:7; 1ಸಮು 12:11; ಇಬ್ರಿ 11:32
ನ್ಯಾಯ. 11:4ನ್ಯಾಯ 10:17
ನ್ಯಾಯ. 11:7ನ್ಯಾಯ 11:2
ನ್ಯಾಯ. 11:8ನ್ಯಾಯ 10:18
ನ್ಯಾಯ. 11:11ನ್ಯಾಯ 10:17; 11:34
ನ್ಯಾಯ. 11:12ಆದಿ 19:36, 38
ನ್ಯಾಯ. 11:13ಅರ 21:26
ನ್ಯಾಯ. 11:13ಧರ್ಮೋ 3:16, 17
ನ್ಯಾಯ. 11:13ಅರ 21:23, 24
ನ್ಯಾಯ. 11:15ಆದಿ 19:36, 37; ಧರ್ಮೋ 2:9
ನ್ಯಾಯ. 11:15ಧರ್ಮೋ 2:19, 37
ನ್ಯಾಯ. 11:16ಅರ 14:25
ನ್ಯಾಯ. 11:16ಅರ 20:1
ನ್ಯಾಯ. 11:17ಆದಿ 36:1; ಅರ 20:14; ಧರ್ಮೋ 2:4
ನ್ಯಾಯ. 11:17ಆದಿ 19:36, 37
ನ್ಯಾಯ. 11:17ಅರ 20:22
ನ್ಯಾಯ. 11:18ಅರ 21:4
ನ್ಯಾಯ. 11:18ಅರ 21:11
ನ್ಯಾಯ. 11:18ಅರ 21:13
ನ್ಯಾಯ. 11:19ಅರ 21:21-26; ಧರ್ಮೋ 2:26, 27
ನ್ಯಾಯ. 11:20ಧರ್ಮೋ 2:32, 33
ನ್ಯಾಯ. 11:21ಯೆಹೋ 13:15, 21
ನ್ಯಾಯ. 11:22ಧರ್ಮೋ 2:36
ನ್ಯಾಯ. 11:23ನೆಹೆ 9:22
ನ್ಯಾಯ. 11:241ಅರ 11:7
ನ್ಯಾಯ. 11:24ವಿಮೋ 23:28; 34:11; ಅರ 33:53; ಧರ್ಮೋ 9:5; 18:12
ನ್ಯಾಯ. 11:25ಅರ 22:2, 3; ಯೆಹೋ 24:9
ನ್ಯಾಯ. 11:26ಅರ 21:25
ನ್ಯಾಯ. 11:26ಅರ 21:26
ನ್ಯಾಯ. 11:27ಯೆಶಾ 33:22
ನ್ಯಾಯ. 11:29ನ್ಯಾಯ 3:9, 10; ಜೆಕ 4:6
ನ್ಯಾಯ. 11:29ನ್ಯಾಯ 10:17
ನ್ಯಾಯ. 11:30ಧರ್ಮೋ 23:21
ನ್ಯಾಯ. 11:311ಸಮು 1:11
ನ್ಯಾಯ. 11:311ಸಮು 1:24
ನ್ಯಾಯ. 11:34ನ್ಯಾಯ 10:17; 11:11
ನ್ಯಾಯ. 11:35ಅರ 30:2; ಕೀರ್ತ 15:4; ಪ್ರಸಂ 5:4
ನ್ಯಾಯ. 11:36ನ್ಯಾಯ 11:30, 31
ನ್ಯಾಯ. 11:391ಸಮು 1:22, 24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 11:1-40

ನ್ಯಾಯಸ್ಥಾಪಕರು

11 ಗಿಲ್ಯಾದ್ಯನಾದ ಯೆಫ್ತಾಹ+ ಒಬ್ಬ ವೀರ ಸೈನಿಕ, ಶಕ್ತಿಶಾಲಿ ಸೈನಿಕ ಆಗಿದ್ದ. ಅವನೊಬ್ಬ ವೇಶ್ಯೆ ಮಗ. ಗಿಲ್ಯಾದ ಯೆಫ್ತಾಹನ ತಂದೆ. 2 ಗಿಲ್ಯಾದನಿಗೆ ಮಕ್ಕಳು ಹುಟ್ಟಿದ್ರು. ಅವರು ಬೆಳೆದು ದೊಡ್ಡವ್ರಾದಾಗ ಯೆಫ್ತಾಹನಿಗೆ “ನೀನು ಬೇರೆಯವಳ ಮಗ, ಅಪ್ಪನ ಆಸ್ತೀಲಿ ನಿನಗೆ ಪಾಲು ಕೊಡಲ್ಲ” ಅಂತ ಹೇಳಿ ಹೊರಗೆ ಹಾಕಿದ್ರು. 3 ಹಾಗಾಗಿ ಯೆಫ್ತಾಹ ತನ್ನ ಸಹೋದರರನ್ನ ಬಿಟ್ಟು ಓಡೋಗಿ ಟೋಬ್‌ ಪ್ರದೇಶದಲ್ಲಿ ಇದ್ದ. ಕೆಲಸ ಇಲ್ಲದ ಗಂಡಸ್ರು ಯೆಫ್ತಾಹನ ಜೊತೆ ಸೇರ್ಕೊಂಡು ಶತ್ರುಗಳ ಮೇಲೆ ದಾಳಿ ಮಾಡೋಕೆ ಹೋಗ್ತಿದ್ರು.

4 ಸ್ವಲ್ಪ ಸಮಯ ಆದ್ಮೇಲೆ ಅಮ್ಮೋನಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡಿದ್ರು.+ 5 ಅಮ್ಮೋನಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡಿದ ತಕ್ಷಣ ಗಿಲ್ಯಾದಿನ ಹಿರಿಯರು ಯೆಫ್ತಾಹನನ್ನ ಟೋಬ್‌ ಪ್ರದೇಶದಿಂದ ಕರ್ಕೊಂಡು ಬರೋಕೆ ಹೋದ್ರು. 6 ಅವರು ಯೆಫ್ತಾಹನಿಗೆ “ನೀನು ಬಂದು ನಮ್ಮ ಸೇನಾಪತಿ ಆಗು. ಆಗ ಅಮ್ಮೋನಿಯರ ವಿರುದ್ಧ ಯುದ್ಧ ಮಾಡಕ್ಕಾಗುತ್ತೆ” ಅಂದ್ರು. 7 ಆಗ ಯೆಫ್ತಾಹ ಗಿಲ್ಯಾದಿನ ಹಿರಿಯರಿಗೆ “ಬೇಡ ಅಂತ ನನ್ನನ್ನ ತಂದೆ ಮನೆಯಿಂದ ಹೊರಗೆ ಹಾಕಿದವ್ರು ನೀವೇ ತಾನೇ?+ ಕಷ್ಟದಲ್ಲಿ ಇರುವಾಗ ನನ್ನ ಹತ್ರ ಯಾಕೆ ಬಂದ್ರಿ?” ಅಂದ. 8 ಆಗ ಅವರು “ಹೌದು ನಿಜ. ಈಗ ನಿನ್ನ ಹತ್ರ ವಾಪಸ್‌ ಬಂದಿದ್ದೀವಿ. ನಮ್ಮ ಜೊತೆ ಬಂದು ಅಮ್ಮೋನಿಯರ ವಿರುದ್ಧ ಯುದ್ಧ ಮಾಡೋದಾದ್ರೆ ನಿನ್ನನ್ನ ನಮ್ಮ ಮೇಲೆ, ಗಿಲ್ಯಾದಿನ ಎಲ್ಲ ಜನ್ರ ಮೇಲೆ ನಾಯಕನಾಗಿ ಮಾಡ್ತೀವಿ”+ ಅಂದ್ರು. 9 ಆಗ ಯೆಫ್ತಾಹ “ಅಮ್ಮೋನಿಯರ ವಿರುದ್ಧ ಯುದ್ಧ ಮಾಡೋಕೆ ನನ್ನನ್ನ ಕರ್ಕೊಂಡು ಹೋದಾಗ ಯೆಹೋವ ನನಗಾಗಿ ಅವ್ರನ್ನ ಸೋಲಿಸಿದ್ರೆ ಖಂಡಿತ ನಿಮ್ಮ ನಾಯಕ ಆಗ್ತೀನಿ” ಅಂದ. 10 ಅವರು ಯೆಫ್ತಾಹನಿಗೆ “ನೀನು ಹೇಳಿದ ಹಾಗೇ ಆಗ್ಲಿ. ನಮ್ಮ ಈ ಮಾತಿಗೆ ಯೆಹೋವನೇ ಸಾಕ್ಷಿ. ನೀನು ಹೇಳಿದ ಹಾಗೇ ನಾವು ಮಾಡದಿದ್ರೆ ಆತನೇ ನಮಗೆ ನ್ಯಾಯ ತೀರಿಸ್ಲಿ” ಅಂದ್ರು. 11 ಹೀಗೆ ಯೆಫ್ತಾಹ ಗಿಲ್ಯಾದಿನ ಹಿರಿಯರ ಜೊತೆ ಹೋದ. ಜನ ಅವನನ್ನ ತಮ್ಮ ನಾಯಕನಾಗಿ, ಸೇನಾಪತಿಯಾಗಿ ಮಾಡ್ಕೊಂಡ್ರು. ಯೆಫ್ತಾಹ ಈ ಮುಂಚೆ ಹೇಳಿದ ಮಾತುಗಳನ್ನೆಲ್ಲ ಮಿಚ್ಪಾದಲ್ಲಿ+ ಯೆಹೋವನ ಮುಂದೆ ಹೇಳಿದ.

12 ಯೆಫ್ತಾಹ ಸಂದೇಶವಾಹಕರನ್ನ ಅಮ್ಮೋನಿಯರ+ ರಾಜನ ಹತ್ರ ಕಳಿಸಿ “ನನಗೂ ನಿನಗೂ ಏನು ದ್ವೇಷ ಇದೆ ಅಂತ ನಮ್ಮ ದೇಶದ ಮೇಲೆ ದಾಳಿ ಮಾಡೋಕೆ ಬಂದೆ?” ಅಂತ ಕೇಳಿದ. 13 ಅದಕ್ಕೆ ಅಮ್ಮೋನಿಯರ ರಾಜ ಯೆಫ್ತಾಹನ ಸಂದೇಶವಾಹಕರಿಗೆ “ಇಸ್ರಾಯೇಲ್ಯರು ಈಜಿಪ್ಟಿಂದ ಹೊರಗೆ ಬಂದಾಗ ಅರ್ನೋನಿಂದ+ ಯಬ್ಬೋಕಿನ ತನಕ, ಯೋರ್ದನ್‌ ತನಕ+ ಇರೋ ನನ್ನ ದೇಶಗಳನ್ನೆಲ್ಲ ಕಿತ್ಕೊಂಡ್ರು.+ ಈಗೇನೂ ಮಾತಾಡ್ದೆ ಅದನ್ನ ವಾಪಸ್‌ ಕೊಟ್ಟುಬಿಡು” ಅಂದ. 14 ಆದ್ರೆ ಯೆಫ್ತಾಹ ಸಂದೇಶವಾಹಕರನ್ನ ಅಮ್ಮೋನಿಯರ ರಾಜನ ಹತ್ರ ಮತ್ತೆ ಕಳಿಸಿ 15 ಹೀಗಂದ:

“ಯೆಪ್ತಾಹ ಹೇಳೋದು ಏನಂದ್ರೆ ‘ಮೋವಾಬ್ಯರ+ ದೇಶನ, ಅಮ್ಮೋನಿಯರ+ ದೇಶನ ಇಸ್ರಾಯೇಲ್ಯರು ಕಿತ್ಕೊಳ್ಳಲಿಲ್ಲ. 16 ಇಸ್ರಾಯೇಲ್ಯರು ಈಜಿಪ್ಟಿಂದ ಬಂದಾಗ ಕಾಡಿನ ದಾರೀಲಿ ಕೆಂಪು ಸಮುದ್ರದ+ ತನಕ ನಡೆದು ಕಾದೇಶಿಗೆ+ ಬಂದ್ರು. 17 ಅವರು ಎದೋಮಿನ+ ರಾಜನ ಹತ್ರ ಸಂದೇಶವಾಹಕರನ್ನ ಕಳಿಸಿ “ದಯವಿಟ್ಟು ನಿಮ್ಮ ದೇಶ ದಾಟಿ ಹೋಗೋಕೆ ಬಿಡಿ” ಅಂತ ಕೇಳ್ಕೊಂಡ್ರು. ಆದ್ರೆ ಎದೋಮಿನ ರಾಜ ಒಪ್ಪಲಿಲ್ಲ. ಇಸ್ರಾಯೇಲ್ಯರು ಮೋವಾಬಿನ+ ರಾಜನಿಗೂ ಇದೇ ಸಂದೇಶ ಕಳಿಸಿದ್ರು. ಆದ್ರೆ ಅವನೂ ಒಪ್ಪಲಿಲ್ಲ. ಹಾಗಾಗಿ ಇಸ್ರಾಯೇಲ್ಯರು ಕಾದೇಶಲ್ಲೇ+ ವಾಸ ಮಾಡಿದ್ರು. 18 ಅವರು ಎದೋಮ್‌+ ಮತ್ತೆ ಮೋವಾಬ್‌ ಪ್ರದೇಶದ ಹೊರಗಿಂದ ಕಾಡಿನ ದಾರೀಲಿ ಹೋದ್ರು. ಅವರು ಮೋವಾಬಿನ+ ಪೂರ್ವ ದಿಕ್ಕಲ್ಲಿದ್ದ ಪ್ರದೇಶದಲ್ಲಿ ಪ್ರಯಾಣ ಮಾಡಿ ಅರ್ನೋನ್‌ ಪ್ರಾಂತ್ಯಕ್ಕೆ ಬಂದು ಅಲ್ಲಿ ಡೇರೆ ಹಾಕೊಂಡ್ರು. ಆದ್ರೆ ಅವರು ಅದನ್ನ ದಾಟಿ ಮೋವಾಬಿಗೆ+ ಕಾಲಿಡಲಿಲ್ಲ. ಯಾಕಂದ್ರೆ ಅರ್ನೋನ್‌ ಮೋವಾಬಿನ ಗಡಿ.

19 ಆಮೇಲೆ ಇಸ್ರಾಯೇಲ್ಯರು ಸಂದೇಶವಾಹಕರ ಮೂಲಕ ಹೆಷ್ಬೋನನ್ನ ಆಳ್ತಿದ್ದ ಅಮೋರಿಯರ ರಾಜ ಸೀಹೋನನಿಗೆ “ದಯವಿಟ್ಟು ನಿಮ್ಮ ದೇಶವನ್ನ ದಾಟಿ ನಮ್ಮ ಜಾಗಕ್ಕೆ ಹೋಗೋಕೆ ಬಿಡಿ” ಅಂತ ಹೇಳಿ ಕಳಿಸಿದ್ರು.+ 20 ಆದ್ರೆ ಸೀಹೋನ ಇಸ್ರಾಯೇಲ್ಯರನ್ನ ನಂಬದೆ ತನ್ನ ದೇಶವನ್ನ ದಾಟಿ ಹೋಗೋಕೆ ಬಿಡಲಿಲ್ಲ. ಸೀಹೋನ ತನ್ನ ಜನ್ರನ್ನೆಲ್ಲ ಸೇರಿಸಿ ಯಹಜದಲ್ಲಿ ಪಾಳೆಯ ಹೂಡಿ ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡಿದ.+ 21 ಆಗ ಇಸ್ರಾಯೇಲ್‌ ದೇವರಾದ ಯೆಹೋವ ಸೀಹೋನನನ್ನ, ಅವನ ಜನ್ರನ್ನೆಲ್ಲ ಇಸ್ರಾಯೇಲ್ಯರ ಕೈಗೆ ಒಪ್ಪಿಸಿದನು. ಹಾಗಾಗಿ ಇಸ್ರಾಯೇಲ್ಯರು ಅವ್ರನ್ನ ಸೋಲಿಸಿ ಆ ಪ್ರದೇಶದ ಜನ್ರಿಗೆ ಅಂದ್ರೆ ಅಮೋರಿಯರಿಗೆ ಸೇರಿದ ಪ್ರದೇಶವನ್ನೆಲ್ಲ ವಶ ಮಾಡ್ಕೊಂಡ್ರು.+ 22 ಹೀಗೆ ಅವರು ಅರ್ನೋನಿಂದ ಯಬ್ಬೋಕಿನ ತನಕ ಕಾಡಿಂದ ಯೋರ್ದನಿನ ತನಕ ಇದ್ದ ಅಮೋರಿಯರ ಪ್ರದೇಶಗಳನ್ನೆಲ್ಲ ವಶ ಮಾಡ್ಕೊಂಡ್ರು.+

23 ಇಸ್ರಾಯೇಲ್‌ ದೇವರಾದ ಯೆಹೋವನೇ ತನ್ನ ಜನ್ರಾದ ಇಸ್ರಾಯೇಲ್ಯರ ಮುಂದಿಂದ ಅಮೋರಿಯರನ್ನ ಓಡಿಸಿಬಿಟ್ಟನು.+ ಆ ಇಸ್ರಾಯೇಲ್ಯರನ್ನ ಈಗ ನೀನು ಓಡಿಸಬೇಕು ಅಂತಿದ್ದೀಯ? 24 ನಿಮ್ಮ ದೇವರಾದ ಕೆಮೋಷ+ ನಿಮಗೆ ಯಾವುದಾದ್ರೂ ಪ್ರದೇಶಗಳನ್ನ ವಶ ಮಾಡ್ಕೊಳ್ಳೋಕೆ ಕೊಟ್ರೆ ಅವುಗಳನ್ನ ವಶ ಮಾಡ್ಕೊಳ್ಳಲ್ವಾ? ಹಾಗೇ ನಮ್ಮ ದೇವರಾದ ಯೆಹೋವ ಯಾರನ್ನ ನಮ್ಮ ಮುಂದಿಂದ ಓಡಿಸಿಬಿಡ್ತಾನೋ ಅವ್ರ ಪ್ರದೇಶಗಳನ್ನ ವಶ ಮಾಡ್ಕೊಳ್ತೀವಿ.+ 25 ಮೋವಾಬಿನ ರಾಜನೂ ಚಿಪ್ಪೋರನ ಮಗನೂ ಆದ ಬಾಲಾಕನಿಗಿಂತ+ ನೀನೇನು ಶ್ರೇಷ್ಠನಾ? ಅವನು ಯಾವತ್ತಾದ್ರೂ ಇಸ್ರಾಯೇಲ್ಯರ ವಿರುದ್ಧ ವಾದ ಮಾಡಿದ್ನಾ ಅಥವಾ ಅವ್ರ ಮೇಲೆ ಯುದ್ಧಕ್ಕೆ ಬಂದ್ನಾ? 26 ಇಸ್ರಾಯೇಲ್ಯರು ಹೆಷ್ಬೋನ್‌,+ ಅರೋಯೇರ್‌ ಪಟ್ಟಣಗಳಲ್ಲಿ, ಅವುಗಳ ಸುತ್ತಮುತ್ತ ಇದ್ದ ಊರುಗಳಲ್ಲಿ, ಅರ್ನೋನ್‌ ತೀರಗಳಲ್ಲಿ ಇರೋ ಎಲ್ಲ ಪಟ್ಟಣಗಳಲ್ಲಿ 300 ವರ್ಷ ತನಕ ಇದ್ರು. ಆಗ ಆ ಪ್ರದೇಶಗಳನ್ನ ವಾಪಸ್‌ ತಗೊಳ್ಳೋಕೆ ನೀನ್ಯಾಕೆ ಪ್ರಯತ್ನಿಸಲಿಲ್ಲ?+ 27 ನಾನು ನಿನ್ನ ವಿರುದ್ಧ ಪಾಪ ಮಾಡಿಲ್ಲ. ಆದ್ರೆ ನನ್ನ ಮೇಲೆ ದಾಳಿ ಮಾಡಿ ತಪ್ಪು ಮಾಡ್ತಾ ಇದ್ದೀಯ. ಇಸ್ರಾಯೇಲ್ಯರ ಮತ್ತು ಅಮ್ಮೋನಿಯರ ಮಧ್ಯ ನ್ಯಾಯಾಧೀಶನಾಗಿರೋ ಯೆಹೋವನೇ ಇವತ್ತು ನ್ಯಾಯ ತೀರಿಸ್ಲಿ.’”+

28 ಆದ್ರೆ ಯೆಫ್ತಾಹ ಕಳಿಸಿದ ಸಂದೇಶವನ್ನ ಅಮ್ಮೋನಿಯರ ರಾಜ ಕಿವಿಗೇ ಹಾಕೊಳ್ಳಲಿಲ್ಲ.

29 ಯೆಹೋವನ ಪವಿತ್ರಶಕ್ತಿ ಯೆಫ್ತಾಹನ+ ಮೇಲೆ ಬಂದಾಗ ಅವನು ಗಿಲ್ಯಾದ್‌ ಮೂಲಕ, ಮನಸ್ಸೆಯ ಪ್ರದೇಶದ ಮೂಲಕ ಗಿಲ್ಯಾದಿನ ಮಿಚ್ಪೆಗೆ+ ಬಂದ. ಅಲ್ಲಿಂದ ಅಮ್ಮೋನಿಯರ ವಿರುದ್ಧ ಯುದ್ಧಕ್ಕೆ ಹೋದ.

30 ಯೆಫ್ತಾಹ ಯೆಹೋವನಿಗೆ ಒಂದು ಹರಕೆ+ ಮಾಡಿ ಹೀಗಂದ: “ನೀನು ಅಮ್ಮೋನಿಯರನ್ನ ನನ್ನ ಕೈಗೆ ಒಪ್ಪಿಸಿದ್ರೆ 31 ನಾನು ಅಲ್ಲಿಂದ ಸಮಾಧಾನವಾಗಿ ವಾಪಸ್‌ ಬರುವಾಗ ಯಾರು ನನ್ನ ಮನೆ ಬಾಗಿಲಿಂದ ನನ್ನನ್ನ ಸ್ವಾಗತಿಸೋಕೆ ಬರ್ತಾರೋ ಅವರು ಯೆಹೋವನಿಗೆ ಸೇರಿದವ್ರು.+ ನಾನು ಆ ವ್ಯಕ್ತಿಯನ್ನ ನಿನಗೆ ಸರ್ವಾಂಗಹೋಮ ಬಲಿ ತರ ಅರ್ಪಿಸ್ತೀನಿ.”+

32 ಯೆಫ್ತಾಹ ಅಮ್ಮೋನಿಯರ ವಿರುದ್ಧ ಯುದ್ಧ ಮಾಡೋಕೆ ಹೋದ. ಯೆಹೋವ ಅವ್ರನ್ನ ಅವನ ಕೈಗೆ ಒಪ್ಪಿಸಿದ. 33 ಅವನು ಅರೋಯೇರಿನಿಂದ ಮಿನ್ನೀತಿನ ತನಕ (20 ಪಟ್ಟಣಗಳು) ಆಬೇಲ್‌-ಕೆರಾಮೀಮಿನ ತನಕ ಇದ್ದ ಜನ್ರನ್ನ ಸೋಲಿಸಿ ಎಲ್ರನ್ನ ಕೊಂದುಹಾಕಿದ. ಹೀಗೆ ಅಮ್ಮೋನಿಯರು ಇಸ್ರಾಯೇಲ್ಯರ ಮುಂದೆ ಸೋತು ಹೋದ್ರು.

34 ಯೆಫ್ತಾಹ ಮಿಚ್ಪಾದಲ್ಲಿರೋ+ ತನ್ನ ಮನೆಗೆ ಬಂದಾಗ, ಅವನ ಮಗಳು ಅವನನ್ನ ಸ್ವಾಗತಿಸೋಕೆ ದಮ್ಮಡಿ ಬಡೀತಾ ಕುಣಿತಾ ಹೊರಗೆ ಬಂದಳು! ಅವನಿಗಿದ್ದ ಒಬ್ಬಳೇ ಮಗಳು ಅವಳು. ಬೇರೆ ಮಗ ಮಗಳಾಗ್ಲಿ ಇರಲಿಲ್ಲ. 35 ಅವಳನ್ನ ನೋಡಿದಾಗ ತನ್ನ ಬಟ್ಟೆ ಹರ್ಕೊಂಡು “ಅಯ್ಯೋ ನನ್ನ ಮಗಳೇ, ನನ್ನ ಹೃದಯ ಒಡೆದುಬಿಟ್ಯಲ್ಲಾ? ನಿನ್ನನ್ನ ಈಗ ನನ್ನಿಂದ ದೂರ ಕಳಿಸಬೇಕಾಗುತ್ತೆ? ನಾನು ಯೆಹೋವನಿಗೆ ಮಾತು ಕೊಟ್ಟಿದ್ದೀನಿ. ಅದನ್ನ ವಾಪಸ್‌ ತಗೊಳ್ಳಕ್ಕಾಗಲ್ಲ”+ ಅಂದ.

36 ಆಗ ಅವಳು “ಅಪ್ಪಾ, ನೀನು ಯೆಹೋವನಿಗೆ ಮಾತು ಕೊಟ್ಟಿದ್ರೆ ಅದ್ರ ತರಾನೇ ನನಗೆ ಮಾಡು.+ ಯಾಕಂದ್ರೆ ಯೆಹೋವ ನಿನಗೋಸ್ಕರ ನಿನ್ನ ಶತ್ರುಗಳಾಗಿರೋ ಅಮ್ಮೋನಿಯರ ಮೇಲೆ ಸೇಡು ತೀರಿಸಿದ್ದಾನೆ” ಅಂದಳು. 37 ಆಮೇಲೆ ತಂದೆಗೆ “ನಾನೊಂದು ವಿಷ್ಯ ಕೇಳ್ತೀನಿ. ಎರಡು ತಿಂಗಳು ನಂಗೆ ಒಬ್ಬಳೇ ಇರೋಕೆ ಬಿಡು. ಬೆಟ್ಟಗಳಿಗೆ ಹೋಗಿ ನನ್ನ ಕನ್ಯಾವಸ್ಥೆ ಬಗ್ಗೆ ನನ್ನ ಗೆಳತಿಯರ ಜೊತೆ ಗೋಳಾಡೋಕೆ* ಅನುಮತಿ ಕೊಡು” ಅಂದಳು.

38 ಅದಕ್ಕೆ ಅವನು “ಹೋಗು!” ಅಂದ. ಆಗ ಅವಳು ಸ್ನೇಹಿತೆಯರ ಜೊತೆ ಸೇರಿ ತನ್ನ ಕನ್ಯಾವಸ್ಥೆ ಬಗ್ಗೆ ಗೋಳಾಡೋಕೆ ಬೆಟ್ಟಗಳಿಗೆ ಹೋದಳು. ಹೀಗೆ ಅವಳನ್ನ ಎರಡು ತಿಂಗಳು ಕಳಿಸ್ಕೊಟ್ಟ. 39 ಎರಡು ತಿಂಗಳು ಆದ್ಮೇಲೆ ಅವಳು ತನ್ನ ತಂದೆ ಹತ್ರ ವಾಪಸ್‌ ಬಂದಳು. ಯೆಫ್ತಾಹ ಮಗಳ ಬಗ್ಗೆ ಮಾಡಿದ ಹರಕೆ ತೀರಿಸಿದ.+ ಅವಳು ಜೀವನ ಪೂರ್ತಿ ಕನ್ಯೆಯಾಗೇ ಉಳಿದಳು. ಆಮೇಲೆ ಇಸ್ರಾಯೇಲ್‌ನಲ್ಲಿ ಈ ಪದ್ಧತಿ* ಜಾರಿಗೆ ಬಂತು: 40 ಇಸ್ರಾಯೇಲಿನ ಯುವತಿಯರು ವರ್ಷದಲ್ಲಿ ನಾಲ್ಕು ದಿನ ಗಿಲ್ಯಾದ್ಯನಾದ ಯೆಫ್ತಾಹನ ಮಗಳನ್ನ ಹೊಗಳೋಕೆ ಹೋಗ್ತಿದ್ರು, ಪ್ರತಿವರ್ಷ ಹೀಗೆ ಮಾಡ್ತಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ