ಕೀರ್ತನೆ
ದಾವೀದನ ಮಧುರ ಗೀತೆ.
24 ಭೂಮಿ ಮತ್ತು ಅದ್ರಲ್ಲಿ ಇರೋದೆಲ್ಲ ಯೆಹೋವನ ಆಸ್ತಿ,+
ಲೋಕ ಮತ್ತು ಅದ್ರಲ್ಲಿ ಇರೋರೆಲ್ಲ ಆತನ ಸೊತ್ತು.
2 ಯಾಕಂದ್ರೆ, ಆತನೇ ಭೂಮಿನ ಸಮುದ್ರಗಳ ಮೇಲೆ,+
ನದಿಗಳ ಮೇಲೆ ದೃಢವಾಗಿ ಭದ್ರವಾಗಿ ಇಟ್ಟಿದ್ದಾನೆ.
3 ಯೆಹೋವನ ಬೆಟ್ಟವನ್ನ ಯಾರಿಗೆ ಹತ್ತಕ್ಕಾಗುತ್ತೆ?+
ಆತನ ಪವಿತ್ರ ಸ್ಥಳದಲ್ಲಿ ಯಾರಿಗೆ ನಿಲ್ಲಕ್ಕಾಗುತ್ತೆ?
4 ಯಾವ ತಪ್ಪೂ ಮಾಡದವನು, ಶುದ್ಧ ಮನಸ್ಸು ಇರೋನು,+
ನನ್ನ ಜೀವದ* ಮೇಲೆ ಸುಳ್ಳಾಣೆ ಇಡದವನು,
ಆಣೆಯಿಟ್ಟು ಮೋಸ ಮಾಡದವನೇ ಅಲ್ವಾ?+
6 ದೇವರನ್ನ ಹುಡುಕೋ ಪೀಳಿಗೆ ಇದೇ,
ಯಾಕೋಬನ ದೇವರೇ, ನಿನ್ನ ಅನುಗ್ರಹ ಪಡೆಯೋಕೆ ಬಯಸ್ತಿರೋರು ಇವರೇ. (ಸೆಲಾ)
7 ಬಾಗಿಲುಗಳೇ, ನಿಮ್ಮ ತಲೆಗಳನ್ನ ಎತ್ತಿ!+
ಹಳೇ ಕದಗಳೇ ತೆರೆದುಕೊಳ್ಳಿ!
ಮಹಿಮೆ ಇರೋ ರಾಜ ಬರ್ತಾನೆ.+
8 ಮಹಿಮೆ ಇರೋ ಈ ರಾಜ ಯಾರು?
9 ಮಹಿಮೆ ಇರೋ ರಾಜ ಬರೋಕೆ ಆಗೋ ತರ
ಬಾಗಿಲುಗಳೇ, ನಿಮ್ಮ ತಲೆಗಳನ್ನ ಎತ್ತಿ!+
ಹಳೇ ಕದಗಳೇ ತೆರೆದುಕೊಳ್ಳಿ!
10 ಮಹಿಮೆ ಇರೋ ಈ ರಾಜ ಯಾರು?
ಸೈನ್ಯಗಳ ದೇವರಾಗಿರೋ ಯೆಹೋವನೇ ಮಹಿಮೆ ಇರೋ ರಾಜ.+ (ಸೆಲಾ)