ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಯಾರು ದೇವರ ಸಭೆಯ ಸದಸ್ಯರಾಗಬಾರದು (1-8)

      • ಪಾಳೆಯದ ಶುದ್ಧತೆ (9-14)

      • ದಾಸ ಓಡಿ ಹೋದ್ರೆ (15, 16)

      • ವೇಶ್ಯಾವಾಟಿಕೆಗೆ ಇಳಿಬಾರದು (17, 18)

      • ಬಡ್ಡಿ ಮತ್ತು ಹರಕೆ (19-23)

      • ಬೇರೆಯವರ ತೋಟ ಗದ್ದೆಯಲ್ಲಿ ಏನು ತಿನ್ನಬಹುದು (24, 25)

ಧರ್ಮೋಪದೇಶಕಾಂಡ 23:1

ಮಾರ್ಜಿನಲ್ ರೆಫರೆನ್ಸ್

  • +ಯಾಜ 21:18, 20; ಯೆಶಾ 56:4, 5

ಧರ್ಮೋಪದೇಶಕಾಂಡ 23:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:14; ಯಾಜ 20:10

ಧರ್ಮೋಪದೇಶಕಾಂಡ 23:3

ಮಾರ್ಜಿನಲ್ ರೆಫರೆನ್ಸ್

  • +ನೆಹೆ 13:1, 2

ಧರ್ಮೋಪದೇಶಕಾಂಡ 23:4

ಪಾದಟಿಪ್ಪಣಿ

  • *

    ಅಥವಾ “ಕೇಡಾಗ್ಲಿ ಅಂತ ಬೈಯೋಕೆ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:18
  • +ಅರ 22:6; ಯೆಹೋ 24:9

ಧರ್ಮೋಪದೇಶಕಾಂಡ 23:5

ಮಾರ್ಜಿನಲ್ ರೆಫರೆನ್ಸ್

  • +ಅರ 22:35
  • +ಅರ 23:11, 25; 24:10
  • +ಧರ್ಮೋ 7:7, 8

ಧರ್ಮೋಪದೇಶಕಾಂಡ 23:6

ಮಾರ್ಜಿನಲ್ ರೆಫರೆನ್ಸ್

  • +2ಸಮು 8:2; 12:31

ಧರ್ಮೋಪದೇಶಕಾಂಡ 23:7

ಮಾರ್ಜಿನಲ್ ರೆಫರೆನ್ಸ್

  • +ಆದಿ 25:25, 26; 36:1; ಅರ 20:14
  • +ಆದಿ 46:6; ಯಾಜ 19:34; ಕೀರ್ತ 105:23

ಧರ್ಮೋಪದೇಶಕಾಂಡ 23:9

ಮಾರ್ಜಿನಲ್ ರೆಫರೆನ್ಸ್

  • +1ಸಮು 21:5; 2ಸಮು 11:11

ಧರ್ಮೋಪದೇಶಕಾಂಡ 23:10

ಮಾರ್ಜಿನಲ್ ರೆಫರೆನ್ಸ್

  • +ಯಾಜ 15:16

ಧರ್ಮೋಪದೇಶಕಾಂಡ 23:11

ಮಾರ್ಜಿನಲ್ ರೆಫರೆನ್ಸ್

  • +ಯಾಜ 15:31

ಧರ್ಮೋಪದೇಶಕಾಂಡ 23:12

ಪಾದಟಿಪ್ಪಣಿ

  • *

    ಅದು, ಪಾಯಿಖಾನೆ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕುಟುಂಬ ಸಂತೋಷ, ಪು. 47

ಧರ್ಮೋಪದೇಶಕಾಂಡ 23:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕುಟುಂಬ ಸಂತೋಷ, ಪು. 47

    ಎಚ್ಚರ!,

    12/8/1992, ಪು. 4

ಧರ್ಮೋಪದೇಶಕಾಂಡ 23:14

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 1:16
  • +ಯಾಜ 26:12

ಧರ್ಮೋಪದೇಶಕಾಂಡ 23:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:21

ಧರ್ಮೋಪದೇಶಕಾಂಡ 23:17

ಪಾದಟಿಪ್ಪಣಿ

  • *

    ಅಥವಾ “ದೇವದಾಸಿ ಆಗಬಾರದು.” ಕಾನಾನ್ಯರು ಆರಾಧನೆಯ ಭಾಗವಾಗಿ ವೇಶ್ಯಾವಾಟಿಕೆ ಮಾಡ್ತಿದ್ರು.

  • *

    ಅಂದ್ರೆ, ವಿಕೃತ ಕಾಮಕ್ಕಾಗಿ ಬಳಸ್ಕೊಳ್ಳೋ ಹುಡುಗರು.

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:29; 21:9
  • +1ಅರ 14:24; 2ಅರ 23:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1997, ಪು. 29

ಧರ್ಮೋಪದೇಶಕಾಂಡ 23:18

ಪಾದಟಿಪ್ಪಣಿ

  • *

    ಅಥವಾ “ಅವರು ಸಂಪಾದಿಸಿದ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1997, ಪು. 29

ಧರ್ಮೋಪದೇಶಕಾಂಡ 23:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:25; ಯಾಜ 25:36, 37; ನೆಹೆ 5:10; ಕೀರ್ತ 15:5

ಧರ್ಮೋಪದೇಶಕಾಂಡ 23:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:6
  • +ಜ್ಞಾನೋ 28:8
  • +ಧರ್ಮೋ 15:4, 7, 10; ಜ್ಞಾನೋ 19:17; ಲೂಕ 6:34, 35

ಧರ್ಮೋಪದೇಶಕಾಂಡ 23:21

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:30, 31; 1ಸಮು 1:11
  • +ಯೋನ 2:9
  • +ಪ್ರಸಂ 5:4, 6

ಧರ್ಮೋಪದೇಶಕಾಂಡ 23:22

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 5:5

ಧರ್ಮೋಪದೇಶಕಾಂಡ 23:23

ಮಾರ್ಜಿನಲ್ ರೆಫರೆನ್ಸ್

  • +ಅರ 30:2; ಕೀರ್ತ 15:4; ಜ್ಞಾನೋ 20:25
  • +ನ್ಯಾಯ 11:35; 1ಸಮು 14:24; ಮತ್ತಾ 5:33

ಧರ್ಮೋಪದೇಶಕಾಂಡ 23:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:11; ರೋಮ 13:10

ಧರ್ಮೋಪದೇಶಕಾಂಡ 23:25

ಪಾದಟಿಪ್ಪಣಿ

  • *

    ಅಂದ್ರೆ, ಕೊಯ್ಲು ಮಾಡೋಕೆ ಬಳಸೋ ಕತ್ತಿ.

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 12:1; ಲೂಕ 6:1

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 23:1ಯಾಜ 21:18, 20; ಯೆಶಾ 56:4, 5
ಧರ್ಮೋ. 23:2ವಿಮೋ 20:14; ಯಾಜ 20:10
ಧರ್ಮೋ. 23:3ನೆಹೆ 13:1, 2
ಧರ್ಮೋ. 23:4ನ್ಯಾಯ 11:18
ಧರ್ಮೋ. 23:4ಅರ 22:6; ಯೆಹೋ 24:9
ಧರ್ಮೋ. 23:5ಅರ 22:35
ಧರ್ಮೋ. 23:5ಅರ 23:11, 25; 24:10
ಧರ್ಮೋ. 23:5ಧರ್ಮೋ 7:7, 8
ಧರ್ಮೋ. 23:62ಸಮು 8:2; 12:31
ಧರ್ಮೋ. 23:7ಆದಿ 25:25, 26; 36:1; ಅರ 20:14
ಧರ್ಮೋ. 23:7ಆದಿ 46:6; ಯಾಜ 19:34; ಕೀರ್ತ 105:23
ಧರ್ಮೋ. 23:91ಸಮು 21:5; 2ಸಮು 11:11
ಧರ್ಮೋ. 23:10ಯಾಜ 15:16
ಧರ್ಮೋ. 23:11ಯಾಜ 15:31
ಧರ್ಮೋ. 23:141ಪೇತ್ರ 1:16
ಧರ್ಮೋ. 23:14ಯಾಜ 26:12
ಧರ್ಮೋ. 23:16ವಿಮೋ 22:21
ಧರ್ಮೋ. 23:17ಯಾಜ 19:29; 21:9
ಧರ್ಮೋ. 23:171ಅರ 14:24; 2ಅರ 23:7
ಧರ್ಮೋ. 23:19ವಿಮೋ 22:25; ಯಾಜ 25:36, 37; ನೆಹೆ 5:10; ಕೀರ್ತ 15:5
ಧರ್ಮೋ. 23:20ಧರ್ಮೋ 15:6
ಧರ್ಮೋ. 23:20ಜ್ಞಾನೋ 28:8
ಧರ್ಮೋ. 23:20ಧರ್ಮೋ 15:4, 7, 10; ಜ್ಞಾನೋ 19:17; ಲೂಕ 6:34, 35
ಧರ್ಮೋ. 23:21ನ್ಯಾಯ 11:30, 31; 1ಸಮು 1:11
ಧರ್ಮೋ. 23:21ಯೋನ 2:9
ಧರ್ಮೋ. 23:21ಪ್ರಸಂ 5:4, 6
ಧರ್ಮೋ. 23:22ಪ್ರಸಂ 5:5
ಧರ್ಮೋ. 23:23ಅರ 30:2; ಕೀರ್ತ 15:4; ಜ್ಞಾನೋ 20:25
ಧರ್ಮೋ. 23:23ನ್ಯಾಯ 11:35; 1ಸಮು 14:24; ಮತ್ತಾ 5:33
ಧರ್ಮೋ. 23:24ಮತ್ತಾ 6:11; ರೋಮ 13:10
ಧರ್ಮೋ. 23:25ಮತ್ತಾ 12:1; ಲೂಕ 6:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 23:1-25

ಧರ್ಮೋಪದೇಶಕಾಂಡ

23 ಯಾರಾದ್ರೂ ತನ್ನನ್ನ ನಪುಂಸಕ ಮಾಡ್ಕೊಳ್ಳೋಕೆ ಜನನಾಂಗ ಕತ್ತರಿಸಿಕೊಂಡ್ರೆ ಅಥವಾ ಬೀಜಗಳನ್ನ ಒಡೆಸಿಕೊಂಡ್ರೆ ಅಂಥವನು ಯೆಹೋವನ ಸಭೆಯ ಸದಸ್ಯ ಆಗಬಾರದು.+

2 ಅನೈತಿಕ ಸಂಬಂಧದಿಂದ ಹುಟ್ಟಿದ ಯಾವನೂ ಯೆಹೋವನ ಸಭೆಯ ಸದಸ್ಯ ಆಗಬಾರದು.+ ಅವನ ವಂಶದಲ್ಲಿ 10 ಪೀಳಿಗೆ ಕಳೆದ್ರೂ ಅವ್ರಲ್ಲಿ ಯಾರೂ ಯೆಹೋವನ ಸಭೆಯ ಸದಸ್ಯರು ಆಗಬಾರದು.

3 ಅಮ್ಮೋನಿಯರಲ್ಲಿ, ಮೋವಾಬ್ಯರಲ್ಲಿ ಯಾರೂ ಯೆಹೋವನ ಸಭೆಯ ಸದಸ್ಯರಾಗಬಾರದು.+ 10 ಪೀಳಿಗೆ ಕಳೆದ್ರೂ ಅವ್ರ ವಂಶದಲ್ಲಿ ಯಾರೂ ಯಾವತ್ತೂ ಯೆಹೋವನ ಸಭೆಯ ಸದಸ್ಯರಾಗಬಾರದು. 4 ಯಾಕಂದ್ರೆ ನೀವು ಈಜಿಪ್ಟನ್ನ ಬಿಟ್ಟು ಬರ್ತಿದ್ದಾಗ ಅವರು ಊಟ ನೀರು ಕೊಟ್ಟು ಸಹಾಯ ಮಾಡಲಿಲ್ಲ.+ ಅಷ್ಟೇ ಅಲ್ಲ ನಿಮ್ಮ ಮೇಲೆ ಶಾಪ ಹಾಕೋಕೆ* ಅವರು ಮೆಸಪಟೇಮ್ಯದ ಪೆತೋರಿನಿಂದ ಬೆಯೋರನ ಮಗ ಬಿಳಾಮನನ್ನ ಹಣಕೊಟ್ಟು ಕರೆಸಿದ್ರು.+ 5 ಆದ್ರೆ ಬಿಳಾಮನ ಮಾತನ್ನ ನಿಮ್ಮ ದೇವರಾದ ಯೆಹೋವ ಕೇಳಿಸ್ಕೊಳ್ಳಲಿಲ್ಲ.+ ಬಿಳಾಮ ಶಾಪಕ್ಕೆ ಬದ್ಲು ಆಶೀರ್ವಾದ ಹೇಳೋ ತರ ನಿಮ್ಮ ದೇವರಾದ ಯೆಹೋವ ಮಾಡಿದನು.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಪ್ರೀತಿಸೋದ್ರಿಂದ ಹಾಗೆ ಮಾಡಿದನು.+ 6 ಅಮ್ಮೋನಿಯರು, ಮೋವಾಬ್ಯರು ಚೆನ್ನಾಗಿರೋಕೆ, ಸಮಾಧಾನವಾಗಿ ಜೀವನ ಮಾಡೋಕೆ ನೀವು ಸಹಾಯ ಮಾಡಬಾರದು.+

7 ನೀವು ಎದೋಮ್ಯರನ್ನ ದ್ವೇಷಿಸಬಾರದು. ಯಾಕಂದ್ರೆ ಅವರು ನಿಮ್ಮ ಸಹೋದರರು.+

ನೀವು ಈಜಿಪ್ಟಿನ ಜನ್ರನ್ನ ದ್ವೇಷಿಸಬಾರದು. ಯಾಕಂದ್ರೆ ಅವ್ರ ದೇಶದಲ್ಲಿ ವಿದೇಶಿಗಳಾಗಿ ಇದ್ರಿ.+ 8 ಅವ್ರ ಮರಿಮಕ್ಕಳು ಯೆಹೋವನ ಸಭೆಯ ಸದಸ್ಯರಾಗಬಹುದು.

9 ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೋಗಿ ಪಾಳೆಯ ಹಾಕಿದಾಗ ಯಾವುದೇ ವಿಧದಲ್ಲೂ ಅಶುದ್ಧರಾಗಬಾರದು.+ 10 ರಾತ್ರಿ ಸಮಯದಲ್ಲಿ ಒಬ್ಬ ಪುರುಷನಿಗೆ ವೀರ್ಯ ಬಂದು ಅಶುದ್ಧನಾದ್ರೆ+ ಅವನು ಪಾಳೆಯದ ಹೊರಗೆ ಹೋಗಿ ಅಲ್ಲೇ ಇರಬೇಕು. 11 ಸಂಜೆ ಆದಾಗ ಸ್ನಾನ ಮಾಡಬೇಕು. ಸೂರ್ಯ ಮುಳುಗಿದ ಮೇಲೆ ಅವನು ಪಾಳೆಯದ ಒಳಗೆ ಬರಬಹುದು.+ 12 ಪಾಳೆಯದ ಹೊರಗೆ ಬಯಲಿಗೆ ಹೋಗೋಕೆ* ನೀವು ಒಂದು ಜಾಗ ಗೊತ್ತು ಮಾಡಿ ಅಲ್ಲೇ ಹೋಗಬೇಕು. 13 ಯುದ್ಧ ಸಾಮಾಗ್ರಿಗಳ ಜೊತೆ ಒಂದು ಗೂಟ ಇಟ್ಕೊಬೇಕು. ಬಯಲಿಗೆ ಹೋದಾಗ ಆ ಗೂಟದಿಂದ ನೆಲ ಅಗೆದು ಗುಂಡಿ ಮಾಡಿ ಮಲವನ್ನ ಮಣ್ಣಿಂದ ಮುಚ್ಚಿಬಿಡಬೇಕು. 14 ನಿಮ್ಮ ಪಾಳೆಯ ಪವಿತ್ರವಾಗಿರಬೇಕು.+ ಯಾಕಂದ್ರೆ ನಿಮ್ಮನ್ನ ಕಾಪಾಡೋಕೆ, ಶತ್ರುಗಳನ್ನ ನಿಮ್ಮ ವಶ ಮಾಡೋಕೆ ನಿಮ್ಮ ದೇವರಾದ ಯೆಹೋವ ಪಾಳೆಯದಲ್ಲಿ ನಡೆದಾಡ್ತಾ ಇರ್ತಾನೆ.+ ನಿಮ್ಮ ಮಧ್ಯ ಅಸಹ್ಯವಾದ ಏನನ್ನಾದ್ರೂ ಆತನು ನೋಡಿದ್ರೆ ನಿಮ್ಮನ್ನ ಬಿಟ್ಟು ಹೋಗ್ತಾನೆ.

15 ಒಬ್ಬ ದಾಸ ಯಜಮಾನನಿಂದ ತಪ್ಪಿಸ್ಕೊಂಡು ನಿಮ್ಮ ಹತ್ರ ಬಂದ್ರೆ ಅವನನ್ನ ಯಜಮಾನನಿಗೆ ಒಪ್ಪಿಸಬಾರದು. 16 ಅವನು ನಿಮ್ಮ ಪಟ್ಟಣದಲ್ಲಿ ಎಲ್ಲಿ ಬೇಕಾದ್ರೂ ವಾಸ ಮಾಡಬಹುದು. ನೀವು ಅವನಿಗೆ ಕಿರುಕುಳ ಕೊಡಬಾರದು.+

17 ಇಸ್ರಾಯೇಲ್ಯರಲ್ಲಿ ಯಾವ ಹೆಣ್ಣುಮಕ್ಕಳೂ ವೇಶ್ಯೆ ಆಗಬಾರದು.*+ ಇಸ್ರಾಯೇಲ್ಯರಲ್ಲಿ ಯಾವ ಗಂಡಸರೂ ವೇಶ್ಯಾವಾಟಿಕೆಗೆ* ಇಳಿಬಾರದು.+ 18 ವೇಶ್ಯಾವಾಟಿಕೆಯಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀಗೆ ಸಿಕ್ಕಿದ* ಹಣನ ಯಾರೂ ಹರಕೆ ತೀರಿಸೋಕೆ ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬಾರದು. ಯಾಕಂದ್ರೆ ವೇಶ್ಯಾವಾಟಿಕೆ ಮಾಡೋರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.

19 ನೀವು ಹಣ, ಆಹಾರವಸ್ತುಗಳನ್ನ ಅಥವಾ ಬೇರೆ ಇನ್ನೇನಾದ್ರೂ ನಿಮ್ಮ ಸಹೋದರನಿಗೆ ಸಾಲ ಕೊಟ್ರೆ ಅವನಿಂದ ಬಡ್ಡಿ ತಗೊಬಾರದು.+ 20 ನೀವು ವಿದೇಶಿಯರಿಂದ ಬಡ್ಡಿ ತಗೊಬಹುದು,+ ಆದ್ರೆ ನಿಮ್ಮ ಸಹೋದರನಿಂದ ಬಡ್ಡಿ ತಗೊಬಾರದು.+ ಆಗ ನಿಮಗೆ ಸಿಗೋ ದೇಶದಲ್ಲಿ ನೀವು ಮಾಡೋ ಎಲ್ಲ ಕೆಲಸಗಳನ್ನ ನಿಮ್ಮ ದೇವರಾದ ಯೆಹೋವ ಆಶೀರ್ವದಿಸ್ತಾನೆ.+

21 ನಿಮ್ಮ ದೇವರಾದ ಯೆಹೋವನಿಗೆ ಒಂದು ಹರಕೆ ಮಾಡ್ಕೊಂಡ್ರೆ+ ಅದನ್ನ ತೀರಿಸೋಕೆ ತಡಮಾಡಬಾರದು.+ ಅದನ್ನ ತೀರಿಸ್ಲೇಬೇಕು ಅಂತ ನಿಮ್ಮ ದೇವರಾದ ಯೆಹೋವ ಬಯಸ್ತಾನೆ. ಹರಕೆ ತೀರಿಸದೇ ಇರೋದು ಪಾಪ.+ 22 ಹರಕೆಯನ್ನೇ ಮಾಡ್ಕೊಳ್ಳದೆ ಇದ್ರೆ ಅದು ಪಾಪ ಅಲ್ಲ.+ 23 ಮಾತುಕೊಟ್ಟ ಮೇಲೆ ಅದ್ರ ಪ್ರಕಾರ ನಡೀಬೇಕು.+ ನೀವು ಮಾಡೋ ಹರಕೆ ಸ್ವಇಷ್ಟದ ಕಾಣಿಕೆ ತರ ಇದೆ. ನಿಮ್ಮ ದೇವರಾದ ಯೆಹೋವನಿಗೆ ಮಾಡಿದ ಹರಕೆ ತೀರಿಸ್ಲೇಬೇಕು.+

24 ನೀವು ಇನ್ನೊಬ್ಬನ ದ್ರಾಕ್ಷಿತೋಟಕ್ಕೆ ಹೋದಾಗ ಹಸಿವಾದ್ರೆ ಆ ತೋಟದಲ್ಲಿ ಬೇಕಾದಷ್ಟು ದ್ರಾಕ್ಷಿ ತಿನ್ನಬಹುದು. ಆದ್ರೆ ಒಂದೇ ಒಂದು ದ್ರಾಕ್ಷಿನೂ ತಗೊಂಡು ಹೋಗಬಾರದು.+

25 ನೀವು ಇನ್ನೊಬ್ಬನ ಹೊಲಕ್ಕೆ ಹೋದಾಗ ಅಲ್ಲಿ ಪೈರು ಬೆಳೆದು ನಿಂತಿದ್ರೆ ತೆನೆಗಳನ್ನ ಕಿತ್ತು ತಿನ್ನಬಹುದು. ಆದ್ರೆ ಪೈರನ್ನ ಕುಡುಗೋಲಿಂದ* ಕೊಯ್ಯಬಾರದು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ