ಯೆಶಾಯ
51 ನೀತಿಯನ್ನ ಬೆನ್ನಟ್ತಿರುವವ್ರೇ,
ಯೆಹೋವನನ್ನ ಹುಡುಕ್ತಿರುವವ್ರೇ ನನಗೆ ಕಿವಿಗೊಡಿ.
ಯಾವ ಬಂಡೆಯಿಂದ ನಿಮ್ಮನ್ನ ಕೊರೆಯಲಾಯ್ತೋ ಆ ಬಂಡೆ ಕಡೆ,
ಯಾವ ಗಣಿಯನ್ನ ಅಗೆದು ನಿಮ್ಮನ್ನ ತೆಗೆಯಲಾಯ್ತೋ ಆ ಗಣಿ ಕಡೆ ನೋಡಿ.
3 ಯೆಹೋವ ಚೀಯೋನಿಗೆ ಸಾಂತ್ವನ ನೀಡ್ತಾನೆ.+
ಪಾಳುಬಿದ್ದಿರೋ ಅದ್ರ ಎಲ್ಲ ಸ್ಥಳಗಳನ್ನ ಆತನು ಮತ್ತೆ ಸರಿಮಾಡ್ತಾನೆ,*+
ಅದ್ರ ಮರಳುಗಾಡನ್ನ ಏದೆನಿನ ತರ ಮಾಡ್ತಾನೆ,+
ಅದ್ರ ಬಯಲು ಪ್ರದೇಶವನ್ನ ಯೆಹೋವನ ತೋಟದ ಹಾಗೆ ಮಾಡ್ತಾನೆ.+
ಆ ಪಟ್ಟಣದಲ್ಲಿ ಸಂತೋಷ, ಸಂಭ್ರಮ ತುಂಬಿರುತ್ತೆ.
ಅಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತೆ, ಇಂಪಾದ ಗೀತೆಯನ್ನ ಹಾಡಲಾಗುತ್ತೆ.+
ದ್ವೀಪಗಳು ನನ್ನಲ್ಲಿ ನಿರೀಕ್ಷೆ ಇಡ್ತವೆ,+
ನಾನು ಕ್ರಿಯೆಗೈಬೇಕಂತ ಜನಾಂಗಗಳು ನನಗಾಗಿ ಕಾಯ್ತವೆ.
6 ಆಕಾಶಕ್ಕೆ ನಿಮ್ಮ ಕಣ್ಣುಗಳನ್ನೆತ್ತಿ ನೋಡಿ,
ಕೆಳಗೆ ಭೂಮಿಯನ್ನ ನೋಡಿ.
ಯಾಕಂದ್ರೆ ಆಕಾಶ ಹೊಗೆ ತರ ಮಾಯವಾಗುತ್ತೆ,
ಭೂಮಿ ಬಟ್ಟೆ ತರ ಸವೆದುಹೋಗುತ್ತೆ,
ಅದ್ರ ನಿವಾಸಿಗಳು ಸೊಳ್ಳೆಗಳ ತರ ಸಾಯ್ತಾರೆ.
ನಶಿಸಿ ಹೋಗೋ ಮನುಷ್ಯರ ಕೆಣಕು ನುಡಿಗೆ ಭಯಪಡಬೇಡಿ,
ಅವ್ರ ಅವಮಾನದ ಮಾತುಗಳಿಗೆ ಹೆದರಬೇಡಿ.
8 ಯಾಕಂದ್ರೆ ನುಸಿಯು ಬಟ್ಟೆ ತಿಂದುಹಾಕೋ ತರ ಅವ್ರನ್ನ ತಿಂದುಹಾಕುತ್ತೆ,
ಆದ್ರೆ ನನ್ನ ನೀತಿ ಸದಾಕಾಲ ನೆಲೆಸುತ್ತೆ,
ನನ್ನ ರಕ್ಷಣೆ ತಲತಲಾಂತರಕ್ಕೂ ಇರುತ್ತೆ.”+
ಹಿಂದಿನ ಕಾಲದಲ್ಲಿ ಈ ಮುಂಚಿನ ತಲೆಮಾರುಗಳಲ್ಲಿ ಎದ್ದ ಹಾಗೇ ಈಗಲೂ ಏಳು.
10 ಸಮುದ್ರವನ್ನ, ಆಳವಾದ ಮಹಾಸಾಗರಗಳನ್ನ ಬತ್ತಿಹೋಗೋ ತರ ಮಾಡಿದವನು ನೀನೇ ಅಲ್ವಾ?+
ಬಿಡಿಸ್ಕೊಂಡು ಬಂದವರು ದಾಟೋಕೆ ಆಗೋ ತರ ಸಮುದ್ರದ ಆಳದಲ್ಲಿ ದಾರಿಯನ್ನ ಮಾಡಿದವನು ನೀನೇ ಅಲ್ವಾ?+
11 ಯೆಹೋವ ಯಾರನ್ನ ಬಿಡಿಸ್ತಾನೋ ಅವರು ಸಂತೋಷದಿಂದ ಜೈಕಾರ ಹಾಕ್ತಾ ಚೀಯೋನಿಗೆ ವಾಪಸ್ ಹೋದ್ರು.+
ಯಾವತ್ತೂ ಅಳಿದುಹೋಗದ ಸಂತೋಷ ಅನ್ನೋ ಕಿರೀಟ ಅವ್ರ ಮೇಲೆ ಇರುತ್ತೆ.+
ಸಂಭ್ರಮ, ಸಂತಸ ಅವ್ರದ್ದಾಗುವವು,
ಗೋಳಾಟ, ನರಳಾಟ ಅವ್ರನ್ನ ಬಿಟ್ಟು ಓಡಿಹೋಗುವವು.+
12 “ಸ್ವತಃ ನಾನೇ ನಿನ್ನನ್ನ ಸಂತೈಸುತ್ತಿದ್ದೀನಿ.+
ಹಾಗಿರುವಾಗ ತೀರಿಹೋಗೋ ನಶ್ವರ ಮನುಷ್ಯನಿಗೆ,
ಹಸಿರು ಹುಲ್ಲಿನ ತರ ಒಣಗಿಹೋಗೋ ಮನುಷ್ಯನಿಗೆ ನೀನ್ಯಾಕೆ ಭಯಪಡಬೇಕು?+
ದಬ್ಬಾಳಿಕೆ ಮಾಡುವವನು ನಿನ್ನನ್ನ ನಾಶಮಾಡಿಬಿಡ್ತಾನಂತ ನೆನಸಿ,
ಅವನ ಕೋಪಕ್ಕೆ ದಿನವಿಡೀ ನೀನು ಭಯಪಟ್ಟೆ.
ದಬ್ಬಾಳಿಕೆ ಮಾಡುವವನ ಕೋಪ ಈಗ ಎಲ್ಲಿ?
ಅವನಿಗೆ ಆಹಾರದ ಕೊರತೆ ಆಗಲ್ಲ.
ಸೈನ್ಯಗಳ ದೇವರಾದ ಯೆಹೋವ ನನ್ನ ಹೆಸ್ರು.+
16 ಆಕಾಶವನ್ನ ಸ್ಥಿರಪಡಿಸೋಕೆ, ಭೂಮಿಯ ಅಡಿಪಾಯವನ್ನ ಹಾಕೋಕೆ+
ಚೀಯೋನಿಗೆ ‘ನೀನು ನನ್ನ ಜನಾಂಗ’ ಅಂತ ಹೇಳೋಕೆ,+
ನಾನು ನನ್ನ ಮಾತುಗಳನ್ನ ನಿನ್ನ ಬಾಯಲ್ಲಿ ಇಡ್ತೀನಿ,
ನನ್ನ ಕೈಯ ನೆರಳಿಂದ ನಿನ್ನನ್ನ ಮುಚ್ತೀನಿ.+
ನೀನು ಆ ಪಾನಪಾತ್ರೆಯಲ್ಲಿ ಇರೋದನ್ನ ಕುಡಿದೆ,
ತತ್ತರಿಸೋ ತರ ಮಾಡೋ ಲೋಟದಲ್ಲಿ ಇರೋದನ್ನ ಹೀರಿಬಿಟ್ಟೆ.+
18 ನೀನು ಹೆತ್ತ ಗಂಡು ಮಕ್ಕಳಲ್ಲಿ ನಿನಗೆ ದಾರಿ ತೋರಿಸುವವರು ಒಬ್ರೂ ಇಲ್ಲ,
ನೀನು ಸಾಕಿಸಲುಹಿದ ಗಂಡು ಮಕ್ಕಳಲ್ಲಿ ನಿನ್ನ ಕೈ ಹಿಡಿಯುವವರು ಒಬ್ರೂ ಇಲ್ಲ.
ನಿನಗೆ ಯಾರು ಅನುಕಂಪ ತೋರಿಸ್ತಾರೆ?
ನಿನ್ನನ್ನ ಯಾರು ಸಂತೈಸ್ತಾರೆ?+
20 ನಿನ್ನ ಗಂಡು ಮಕ್ಕಳು ತಲೆತಿರುಗಿ ಬಿದ್ದಿದ್ದಾರೆ.+
ಬಲೆಗೆ ಸಿಕ್ಕಿಕೊಂಡಿರೋ ಕಾಡು ಕುರಿ ತರ
ಅವರು ಬೀದಿಬೀದಿಯ ಮೂಲೆಗಳಲ್ಲಿ ಬಿದ್ಕೊಂಡಿದ್ದಾರೆ.
ಯೆಹೋವನ ಕ್ರೋಧ ಅವ್ರ ಮೇಲೆ ಬಂದೆರಗಿದೆ, ನಿನ್ನ ದೇವರ ಗದರಿಕೆ ಅವ್ರಿಗೆ ಸರಿಯಾಗಿ ಸಿಕ್ಕಿದೆ.”
21 ಹಾಗಾಗಿ ಕಡುವೇದನೆಯಲ್ಲಿ ಇರುವವಳೇ ಕೇಳು!
ದ್ರಾಕ್ಷಾಮದ್ಯ ಕುಡಿಯದೆ ಅಮಲೇರಿರುವವಳೇ ದಯವಿಟ್ಟು ಇದಕ್ಕೆ ಕಿವಿಗೊಡು.
22 ನಿನ್ನ ಒಡೆಯನೂ, ತನ್ನ ಜನ್ರನ್ನ ರಕ್ಷಿಸೋ ನಿನ್ನ ದೇವರೂ ಆಗಿರೋ ಯೆಹೋವ ಹೀಗೆ ಹೇಳ್ತಿದ್ದಾನೆ
“ಇಗೋ! ತತ್ತರಿಸೋ ತರ ಮಾಡೋ ಲೋಟವನ್ನ,+
ನನ್ನ ಕ್ರೋಧ ಅನ್ನೋ ಪಾನಪಾತ್ರೆಯನ್ನ ನಾನು ನಿನ್ನ ಕೈಯಿಂದ ಕಿತ್ಕೊಳ್ತೀನಿ.
ನೀನು ಯಾವತ್ತೂ ಅದ್ರಲ್ಲಿ ಇರೋದನ್ನ ಕುಡಿಯಲ್ಲ.+
23 ಅದನ್ನ ನಾನು ನಿನ್ನ ಹಿಂಸಕರ ಕೈಯಲ್ಲಿ ಇಡ್ತೀನಿ,+
ಅವರು ನಿನಗೆ ‘ನಾವು ನಿನ್ನ ಮೇಲೆ ನಡ್ಕೊಂಡು ಹೋಗೋ ತರ ನೀನು ನೆಲಕ್ಕೆ ಬಾಗು!’ ಅಂತ ಹೇಳ್ತಾರೆ.
ಹಾಗಾಗಿ ನೀನು ನಿನ್ನ ಬೆನ್ನನ್ನ ನೆಲದ ತರ,
ಅವರು ನಡ್ಕೊಂಡು ಹೋಗೋಕೆ ದಾರಿ ತರ ಮಾಡ್ಕೊಂಡೆ.”