ಆಮೋಸ
3 “ಇಸ್ರಾಯೇಲ್ಯರೇ, ಯೆಹೋವ ನಿಮ್ಮ ಬಗ್ಗೆ ಏನು ಹೇಳಿದ್ದಾನೆ ಅಂತ ಕೇಳಿಸ್ಕೊಳ್ಳಿ. ಆತನು ಈಜಿಪ್ಟ್ ದೇಶದಿಂದ ಕರ್ಕೊಂಡು ಬಂದ ಇಡೀ ಜನಾಂಗದ ಬಗ್ಗೆ ಹೇಳಿದ ಈ ಮಾತುಗಳಿಗೆ ಕಿವಿಗೊಡಿ:
2 ‘ಭೂಮಿಯಲ್ಲಿರೋ ಎಲ್ಲ ಜನಾಂಗಗಳಲ್ಲಿ ನಿಮ್ಮನ್ನ ಮಾತ್ರ ನಾನು ಚೆನ್ನಾಗಿ ತಿಳ್ಕೊಂಡಿದ್ದೀನಿ.+
ಅದಕ್ಕೇ ನೀವು ಮಾಡಿರೋ ಎಲ್ಲ ಪಾಪಗಳಿಗಾಗಿ ನಾನು ನಿಮ್ಮನ್ನ ಶಿಕ್ಷಿಸ್ತೀನಿ.+
3 ಭೇಟಿ ಮಾಡೋಕೆ ಇಬ್ರು ಮೊದ್ಲೇ ಮಾತಾಡ್ಕೊಳ್ಳದಿದ್ರೆ ಅವರು ಒಟ್ಟಿಗೆ ನಡ್ಕೊಂಡು ಹೋಗೋಕೆ ಆಗುತ್ತಾ?
4 ಕಾಡಲ್ಲಿ ಬೇಟೆ ಮಾಡೋಕೆ ಪ್ರಾಣಿನೇ ಇಲ್ಲದಿದ್ರೆ ಸಿಂಹ ಗರ್ಜಿಸುತ್ತಾ?
ಎಳೇ ಸಿಂಹ ಬೇಟೆ ಹಿಡಿಯದೆ ಇದ್ರೆ ತನ್ನ ಗವಿಯಲ್ಲಿ ಗುರುಗುಟ್ಟುತ್ತಾ?
5 ನೆಲದಲ್ಲಿ ಬೋನು ಇಡದಿದ್ರೆ* ಹಕ್ಕಿ ಸಿಕ್ಕಿಬೀಳುತ್ತಾ?
ಏನೂ ಸಿಕ್ಕಿಬೀಳದಿದ್ರೆ ಬೋನು ಮೇಲಕ್ಕೆ ಹಾರುತ್ತಾ?
6 ಪಟ್ಟಣದಲ್ಲಿ ಕೊಂಬೂದಿದ್ರೆ ಜನ ಹೆದರಿ ನಡುಗೋದಿಲ್ವಾ?
ಪಟ್ಟಣದಲ್ಲಿ ಏನಾದ್ರೂ ಕಷ್ಟ ಬಂದ್ರೆ ಅದನ್ನ ಬರಮಾಡಿದ್ದು ಯೆಹೋವನೇ ಅಲ್ವಾ?
8 ಸಿಂಹ ಗರ್ಜಿಸಿದೆ!+ ಯಾರಾದ್ರೂ ಭಯಪಡದೇ ಇರ್ತಾರಾ?
ವಿಶ್ವದ ರಾಜ ಯೆಹೋವ ಮಾತಾಡಿದ್ದಾನೆ! ಯಾವ ಪ್ರವಾದಿಯಾದ್ರೂ ಸುಮ್ನೆ ಇರ್ತಾನಾ?’+
9 ‘ಅಷ್ಡೋದಿನ ಭದ್ರ ಕೋಟೆಗಳ ಮೇಲೆ ನಿಂತು,
ಈಜಿಪ್ಟ್ ದೇಶದ ಭದ್ರ ಕೋಟೆಗಳ ಮೇಲೆ ನಿಂತು
ಹೀಗೆ ಹೇಳು: “ಸಮಾರ್ಯದ ಬೆಟ್ಟಗಳ ವಿರುದ್ಧ ಕೂಡಿ ಬನ್ನಿ,+
ಅಲ್ಲಿ ಎಷ್ಟೊಂದು ಗಲಭೆ, ಮೋಸ ನಡಿತಿದೆ ಅಂತ ನೋಡಿ.+
10 ಯಾಕಂದ್ರೆ ಸರಿಯಾದದ್ದನ್ನ ಹೇಗೆ ಮಾಡೋದು ಅಂತ ಅವ್ರಿಗೆ ಗೊತ್ತಿಲ್ಲ,
ಅವರು ತಮ್ಮ ಭದ್ರ ಕೋಟೆಗಳಲ್ಲಿ ಹಿಂಸೆ ಮತ್ತು ವಿನಾಶವನ್ನ ಕೂಡಿಸಿ ಇಟ್ಕೊಳ್ತಿದ್ದಾರೆ”
ಅಂತ ಯೆಹೋವ ಹೇಳ್ತಾನೆ.’
11 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ:
‘ಒಬ್ಬ ಶತ್ರು ದೇಶಕ್ಕೆ ಮುತ್ತಿಗೆ ಹಾಕ್ತಾನೆ,+
ಅವನು ನಿನ್ನ ಶಕ್ತಿಯನ್ನ ಹೀರಿಬಿಡ್ತಾನೆ,
ನಿನ್ನ ಭದ್ರ ಕೋಟೆಗಳನ್ನ ಲೂಟಿ ಮಾಡ್ತಾನೆ.’+
12 ಯೆಹೋವ ಹೀಗೆ ಹೇಳ್ತಾನೆ:
‘ಇಸ್ರಾಯೇಲ್ ಜನ ಸಮಾರ್ಯದಲ್ಲಿ ವೈಭವಯುತ ಹಾಸಿಗೆಗಳ ಮೇಲೆ ಮಲಗಿದ್ದಾರೆ, ಒಳ್ಳೊಳ್ಳೇ* ಒರಗುಮಂಚಗಳ ಮೇಲೆ ಕೂತಿದ್ದಾರೆ,
ಅವ್ರಲ್ಲಿ ಸ್ವಲ್ಪ ಜನ ಮಾತ್ರ ತಪ್ಪಿಸ್ಕೊಳ್ತಾರೆ,
ಅದು, ಕುರುಬ ಸಿಂಹದ ಬಾಯಿಂದ ಕುರಿಯ ಬರೀ ಎರಡು ಕಾಲುಗಳನ್ನ ಅಥವಾ ಕಿವಿಯ ತುಂಡನ್ನ ಎಳ್ಕೊಳೋ ತರ ಇರುತ್ತೆ.’+
13 ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಹೀಗೆ ಹೇಳ್ತಾನೆ:
‘ಕೇಳಿಸ್ಕೊಳ್ಳಿ, ಯಾಕೋಬನ ವಂಶದವ್ರನ್ನ ಎಚ್ಚರಿಸಿ.*
14 ಯಾಕಂದ್ರೆ ಇಸ್ರಾಯೇಲ್ ಇಲ್ಲಿ ತನಕ ನನ್ನ ವಿರುದ್ಧ ದಂಗೆ ಎದ್ದದಕ್ಕಾಗಿ* ನಾನು ಅದಕ್ಕೆ ಶಿಕ್ಷೆ ಕೊಡೋ ದಿನದಲ್ಲಿ+
ಬೆತೆಲಿನ ಯಜ್ಞವೇದಿಗಳನ್ನೂ ನಾಶಮಾಡ್ತೀನಿ.+
ಯಜ್ಞವೇದಿಯ ಕೊಂಬುಗಳನ್ನ ಕತ್ತರಿಸಿ ನೆಲಕ್ಕೆ ಬೀಳಿಸ್ತೀನಿ.+
15 ನಾನು ಅವ್ರ ಚಳಿಗಾಲದ ಮನೆಯನ್ನೂ ಬೇಸಿಗೆ ಕಾಲದ ಮನೆಯನ್ನೂ ಕೆಡವಿಹಾಕ್ತೀನಿ.’