ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಇಸ್ರಾಯೇಲ್ಯರು ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನು ಆರಾಧಿಸಿದ್ರು (1-37)

        • ಇಸ್ರಾಯೇಲ್‌ ಕಾಡು ದ್ರಾಕ್ಷಿಬಳ್ಳಿ ತರ (21)

        • ಅವಳ ಲಂಗಗಳ ಮೇಲೆ ರಕ್ತದ ಕಲೆ (34)

ಯೆರೆಮೀಯ 2:2

ಪಾದಟಿಪ್ಪಣಿ

  • *

    ಅಥವಾ “ಶಾಶ್ವತ ಪ್ರೀತಿ.”

ಮಾರ್ಜಿನಲ್ ರೆಫರೆನ್ಸ್

  • +ಹೋಶೇ 2:15
  • +ವಿಮೋ 24:3
  • +ಧರ್ಮೋ 2:7

ಯೆರೆಮೀಯ 2:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:6; ಧರ್ಮೋ 7:6
  • +ವಿಮೋ 17:8, 13

ಯೆರೆಮೀಯ 2:5

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:4; ಮೀಕ 6:3
  • +ಧರ್ಮೋ 32:21
  • +ಕೀರ್ತ 115:4, 8

ಯೆರೆಮೀಯ 2:6

ಪಾದಟಿಪ್ಪಣಿ

  • *

    ಅಥವಾ “ಐಗುಪ್ತ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:30
  • +ಧರ್ಮೋ 1:1; 32:9, 10
  • +ಧರ್ಮೋ 8:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/2003, ಪು. 8

ಯೆರೆಮೀಯ 2:7

ಮಾರ್ಜಿನಲ್ ರೆಫರೆನ್ಸ್

  • +ಅರ 13:26, 27; ಧರ್ಮೋ 6:10, 11; 8:7-9
  • +ಯಾಜ 18:24; ಅರ 35:33; ಕೀರ್ತ 78:58; 106:38; ಯೆರೆ 16:18

ಯೆರೆಮೀಯ 2:8

ಮಾರ್ಜಿನಲ್ ರೆಫರೆನ್ಸ್

  • +1ಸಮು 2:12; ಪ್ರಲಾ 4:13
  • +ಯೆಹೆ 34:7, 8
  • +1ಅರ 18:19; ಯೆರೆ 23:13

ಯೆರೆಮೀಯ 2:9

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 20:35; ಮೀಕ 6:2

ಯೆರೆಮೀಯ 2:10

ಪಾದಟಿಪ್ಪಣಿ

  • *

    ಅಥವಾ “ಕರಾವಳಿ ಪ್ರದೇಶಗಳಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 10:2, 4
  • +ಆದಿ 25:13; ಕೀರ್ತ 120:5; ಯೆರೆ 49:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 9

ಯೆರೆಮೀಯ 2:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 106:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 9

ಯೆರೆಮೀಯ 2:13

ಪಾದಟಿಪ್ಪಣಿ

  • *

    ಅಥವಾ “ಬುಗ್ಗೆ ಆಗಿರೋ.”

  • *

    ಅಥವಾ “ಕಡಿದಿದ್ದಾರೆ,” ಬಂಡೆಗಳಿಂದ ಇರಬಹುದು.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 36:9; ಯೆರೆ 17:13; ಪ್ರಕ 22:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 10

    12/1/2003, ಪು. 32

ಯೆರೆಮೀಯ 2:15

ಪಾದಟಿಪ್ಪಣಿ

  • *

    ಅಥವಾ “ಕೇಸರವುಳ್ಳ ಸಿಂಹ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:29; ಯೆರೆ 4:7

ಯೆರೆಮೀಯ 2:16

ಪಾದಟಿಪ್ಪಣಿ

  • *

    ಅಥವಾ “ಮೋಫ್‌.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 46:19
  • +ಯೆರೆ 43:4, 7; 46:14; ಯೆಹೆ 30:18

ಯೆರೆಮೀಯ 2:17

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 28:9; 2ಪೂರ್ವ 7:19, 20

ಯೆರೆಮೀಯ 2:18

ಪಾದಟಿಪ್ಪಣಿ

  • *

    ಅದು, ನೈಲ್‌ ನದಿಯ ಒಂದು ಕವಲು.

  • *

    ಅದು, ಯೂಫ್ರೆಟಿಸ್‌.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 30:2; 31:1; ಪ್ರಲಾ 5:6; ಯೆಹೆ 16:26; 17:15
  • +2ಅರ 16:7; ಹೋಶೇ 5:13

ಯೆರೆಮೀಯ 2:19

ಮಾರ್ಜಿನಲ್ ರೆಫರೆನ್ಸ್

  • +ಯೆರೆ 4:18
  • +ಯೆರೆ 5:22

ಯೆರೆಮೀಯ 2:20

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:13
  • +1ಅರ 14:22, 23; ಯೆಹೆ 6:13
  • +ವಿಮೋ 34:15; ಯೆಹೆ 16:15, 16

ಯೆರೆಮೀಯ 2:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:17; ಕೀರ್ತ 80:8; ಯೆಶಾ 5:1
  • +ಯೆಶಾ 5:4

ಯೆರೆಮೀಯ 2:22

ಪಾದಟಿಪ್ಪಣಿ

  • *

    ಅಕ್ಷ. “ಕ್ಷಾರ ದ್ರಾವಣ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 16:17

ಯೆರೆಮೀಯ 2:25

ಪಾದಟಿಪ್ಪಣಿ

  • *

    ಅಥವಾ “ಬೇರೆ ದೇವರುಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 18:12
  • +ಯೆಶಾ 2:6; ಯೆರೆ 3:13
  • +ಯೆರೆ 44:17

ಯೆರೆಮೀಯ 2:26

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 9:7

ಯೆರೆಮೀಯ 2:27

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 44:13
  • +2ಪೂರ್ವ 29:6; ಯೆರೆ 32:33
  • +ನ್ಯಾಯ 10:13-15; ಕೀರ್ತ 78:34; 106:47; ಯೆಶಾ 26:16; ಹೋಶೇ 5:15

ಯೆರೆಮೀಯ 2:28

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:37, 38
  • +ಯೆರೆ 11:13

ಯೆರೆಮೀಯ 2:29

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:1; 9:2; ದಾನಿ 9:11

ಯೆರೆಮೀಯ 2:30

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 28:20-22; ಯೆಶಾ 9:13
  • +ಯೆಶಾ 1:5; ಯೆರೆ 5:3; ಚೆಫ 3:2
  • +2ಪೂರ್ವ 36:15, 16; ನೆಹೆ 9:26; ಅಕಾ 7:52

ಯೆರೆಮೀಯ 2:31

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:15

ಯೆರೆಮೀಯ 2:32

ಪಾದಟಿಪ್ಪಣಿ

  • *

    ಅಥವಾ “ತನ್ನ ವಿವಾಹದ ಸೊಂಟಪಟ್ಟಿಯನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 106:21; ಯೆಶಾ 17:10; ಯೆರೆ 18:15; ಹೋಶೇ 8:14

ಯೆರೆಮೀಯ 2:33

ಪಾದಟಿಪ್ಪಣಿ

  • *

    “ಇಲ್ಲಿ ‘ನೀನು’ ಅನ್ನೋದು ಯೆರೂಸಲೇಮ್‌ ಅಥವಾ ಚೀಯೋನ್‌. ಅದನ್ನ ಸ್ತ್ರೀ ತರ ಹೇಳಲಾಗಿದೆ.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 33:9

ಯೆರೆಮೀಯ 2:34

ಮಾರ್ಜಿನಲ್ ರೆಫರೆನ್ಸ್

  • +2ಅರ 21:16; ಕೀರ್ತ 106:38; ಯೆಶಾ 10:1, 2; ಮತ್ತಾ 23:35
  • +ವಿಮೋ 22:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1997, ಪು. 14

ಯೆರೆಮೀಯ 2:36

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 28:20, 21
  • +ಯೆಶಾ 30:3; ಯೆರೆ 37:7

ಯೆರೆಮೀಯ 2:37

ಮಾರ್ಜಿನಲ್ ರೆಫರೆನ್ಸ್

  • +2ಸಮು 13:19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 2:2ಹೋಶೇ 2:15
ಯೆರೆ. 2:2ವಿಮೋ 24:3
ಯೆರೆ. 2:2ಧರ್ಮೋ 2:7
ಯೆರೆ. 2:3ವಿಮೋ 19:6; ಧರ್ಮೋ 7:6
ಯೆರೆ. 2:3ವಿಮೋ 17:8, 13
ಯೆರೆ. 2:5ಯೆಶಾ 5:4; ಮೀಕ 6:3
ಯೆರೆ. 2:5ಧರ್ಮೋ 32:21
ಯೆರೆ. 2:5ಕೀರ್ತ 115:4, 8
ಯೆರೆ. 2:6ವಿಮೋ 14:30
ಯೆರೆ. 2:6ಧರ್ಮೋ 1:1; 32:9, 10
ಯೆರೆ. 2:6ಧರ್ಮೋ 8:14, 15
ಯೆರೆ. 2:7ಅರ 13:26, 27; ಧರ್ಮೋ 6:10, 11; 8:7-9
ಯೆರೆ. 2:7ಯಾಜ 18:24; ಅರ 35:33; ಕೀರ್ತ 78:58; 106:38; ಯೆರೆ 16:18
ಯೆರೆ. 2:81ಸಮು 2:12; ಪ್ರಲಾ 4:13
ಯೆರೆ. 2:8ಯೆಹೆ 34:7, 8
ಯೆರೆ. 2:81ಅರ 18:19; ಯೆರೆ 23:13
ಯೆರೆ. 2:9ಯೆಹೆ 20:35; ಮೀಕ 6:2
ಯೆರೆ. 2:10ಆದಿ 10:2, 4
ಯೆರೆ. 2:10ಆದಿ 25:13; ಕೀರ್ತ 120:5; ಯೆರೆ 49:28
ಯೆರೆ. 2:11ಕೀರ್ತ 106:20
ಯೆರೆ. 2:13ಕೀರ್ತ 36:9; ಯೆರೆ 17:13; ಪ್ರಕ 22:1
ಯೆರೆ. 2:15ಯೆಶಾ 5:29; ಯೆರೆ 4:7
ಯೆರೆ. 2:16ಯೆರೆ 46:19
ಯೆರೆ. 2:16ಯೆರೆ 43:4, 7; 46:14; ಯೆಹೆ 30:18
ಯೆರೆ. 2:171ಪೂರ್ವ 28:9; 2ಪೂರ್ವ 7:19, 20
ಯೆರೆ. 2:18ಯೆಶಾ 30:2; 31:1; ಪ್ರಲಾ 5:6; ಯೆಹೆ 16:26; 17:15
ಯೆರೆ. 2:182ಅರ 16:7; ಹೋಶೇ 5:13
ಯೆರೆ. 2:19ಯೆರೆ 4:18
ಯೆರೆ. 2:19ಯೆರೆ 5:22
ಯೆರೆ. 2:20ಯಾಜ 26:13
ಯೆರೆ. 2:201ಅರ 14:22, 23; ಯೆಹೆ 6:13
ಯೆರೆ. 2:20ವಿಮೋ 34:15; ಯೆಹೆ 16:15, 16
ಯೆರೆ. 2:21ವಿಮೋ 15:17; ಕೀರ್ತ 80:8; ಯೆಶಾ 5:1
ಯೆರೆ. 2:21ಯೆಶಾ 5:4
ಯೆರೆ. 2:22ಯೆರೆ 16:17
ಯೆರೆ. 2:25ಯೆರೆ 18:12
ಯೆರೆ. 2:25ಯೆಶಾ 2:6; ಯೆರೆ 3:13
ಯೆರೆ. 2:25ಯೆರೆ 44:17
ಯೆರೆ. 2:26ಎಜ್ರ 9:7
ಯೆರೆ. 2:27ಯೆಶಾ 44:13
ಯೆರೆ. 2:272ಪೂರ್ವ 29:6; ಯೆರೆ 32:33
ಯೆರೆ. 2:27ನ್ಯಾಯ 10:13-15; ಕೀರ್ತ 78:34; 106:47; ಯೆಶಾ 26:16; ಹೋಶೇ 5:15
ಯೆರೆ. 2:28ಧರ್ಮೋ 32:37, 38
ಯೆರೆ. 2:28ಯೆರೆ 11:13
ಯೆರೆ. 2:29ಯೆರೆ 5:1; 9:2; ದಾನಿ 9:11
ಯೆರೆ. 2:302ಪೂರ್ವ 28:20-22; ಯೆಶಾ 9:13
ಯೆರೆ. 2:30ಯೆಶಾ 1:5; ಯೆರೆ 5:3; ಚೆಫ 3:2
ಯೆರೆ. 2:302ಪೂರ್ವ 36:15, 16; ನೆಹೆ 9:26; ಅಕಾ 7:52
ಯೆರೆ. 2:31ಧರ್ಮೋ 32:15
ಯೆರೆ. 2:32ಕೀರ್ತ 106:21; ಯೆಶಾ 17:10; ಯೆರೆ 18:15; ಹೋಶೇ 8:14
ಯೆರೆ. 2:332ಪೂರ್ವ 33:9
ಯೆರೆ. 2:342ಅರ 21:16; ಕೀರ್ತ 106:38; ಯೆಶಾ 10:1, 2; ಮತ್ತಾ 23:35
ಯೆರೆ. 2:34ವಿಮೋ 22:2
ಯೆರೆ. 2:362ಪೂರ್ವ 28:20, 21
ಯೆರೆ. 2:36ಯೆಶಾ 30:3; ಯೆರೆ 37:7
ಯೆರೆ. 2:372ಸಮು 13:19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 2:1-37

ಯೆರೆಮೀಯ

2 ಯೆಹೋವ ಈ ಮಾತುಗಳನ್ನ ನನಗೆ ಹೇಳಿದನು 2 “ನೀನು ಹೋಗಿ ಯೆರೂಸಲೇಮಲ್ಲಿ ಇರೋರಿಗೆ ಹೀಗೆ ಸಾರಿಹೇಳು ‘ಯೆಹೋವ ಹೇಳೋದು ಏನಂದ್ರೆ,

“ನಿನಗೆ ಯೌವನದಲ್ಲಿ ನನ್ನ ಮೇಲಿದ್ದ ಪ್ರೀತಿ,*+

ನನಗೂ ನಿನಗೂ ಮದುವೆ ನಿಶ್ಚಯ ಆದಾಗ ನೀನು ತೋರಿಸಿದ ಪ್ರೀತಿ,+

ಬೀಜವನ್ನೇ ಬಿತ್ತದ ಬರಡು ಭೂಮಿಯಲ್ಲಿ ನೀನು ನನ್ನ ಹಿಂದೆನೇ ಬಂದ ರೀತಿ ನನಗೆ ಚೆನ್ನಾಗಿ ನೆನಪಿದೆ.+

 3 ಇಸ್ರಾಯೇಲ ಯೆಹೋವನಿಗೆ ಪವಿತ್ರನಾಗಿದ್ದ,+ ದೇವರ ಕೊಯ್ಲಿನ ಮೊದಲ ಫಲ ಅವನಾಗಿದ್ದ.”’

‘ಅವನನ್ನ ನಾಶಮಾಡೋಕೆ ಪ್ರಯತ್ನ ಮಾಡಿದ್ರೆ ಅದು ದೊಡ್ಡ ತಪ್ಪು.

ಆ ತಪ್ಪು ಮಾಡಿದವರಿಗೆ ಕೆಟ್ಟದಾಗುತ್ತೆ’ ಅಂತ ಯೆಹೋವ ಹೇಳ್ತಿದ್ದಾನೆ.”+

 4 ಯಾಕೋಬನ ವಂಶದವರೇ,

ಇಸ್ರಾಯೇಲ್‌ ಜನ್ರ ಎಲ್ಲ ಕುಟುಂಬಗಳೇ, ಯೆಹೋವನ ಮಾತು ಕೇಳಿ.

 5 ಯೆಹೋವ ಹೇಳೋದು ಏನಂದ್ರೆ,

“ನಿಮ್ಮ ಪೂರ್ವಜರು ನನ್ನಿಂದ ಯಾಕೆ ಅಷ್ಟು ದೂರ ಹೋದ್ರು?

ನನ್ನಲ್ಲಿ ಅಂಥದ್ದೇನು ತಪ್ಪು ನೋಡಿದ್ರು?+

ಅವರು ಪ್ರಯೋಜನಕ್ಕೆ ಬಾರದ ಮೂರ್ತಿಗಳ+ ಹಿಂದೆ ಹೋಗಿ ಅವರೂ ಹಾಗಾಗಿ ಬಿಟ್ರಲ್ಲಾ.+

 6 ‘ಯೆಹೋವ ಎಲ್ಲಿ?’ ಅಂತ ಅವರು ಕೇಳಲಿಲ್ಲ.

‘ಈಜಿಪ್ಟ್‌* ದೇಶದಿಂದ ನಮ್ಮನ್ನ ಹೊರಗೆ ಕರ್ಕೊಂಡು ಬಂದವನು,+

ಕಾಡಲ್ಲಿ ನಮಗೆ ದಾರಿ ತೋರಿಸಿದವನು ಎಲ್ಲಿ?’ ಅಂತ ಅವರು ಕೇಳಲಿಲ್ಲ.

‘ಮರುಭೂಮಿ,+ ಗುಂಡಿ ಇದ್ದ ಪ್ರದೇಶದ ಮಧ್ಯದಲ್ಲಿ,

ನೀರಿಲ್ಲದ ಒಣಪ್ರದೇಶದಲ್ಲಿ,+ ಬರೀ ಕತ್ತಲೆ ತುಂಬಿದ್ದ ಪ್ರದೇಶದಲ್ಲಿ,

ಮನುಷ್ಯ ನಡೆದಾಡದ,

ಜನ ವಾಸ ಮಾಡದ ಪ್ರದೇಶದಲ್ಲಿ ನಮಗೆ ದಾರಿ ತೋರಿಸಿ ಕರ್ಕೊಂಡು ಬಂದವನು ಎಲ್ಲಿ?’ ಅಂತ ಅವರು ಕೇಳಲಿಲ್ಲ.

 7 ಆಮೇಲೆ ನಾನು ನಿಮ್ಮನ್ನ ಹಣ್ಣಿನ ತೋಟಗಳು ಇರೋ ದೇಶಕ್ಕೆ ಕರ್ಕೊಂಡು ಬಂದು

ಹಣ್ಣುಗಳನ್ನ ತಿನ್ನೋ ತರ, ಅಲ್ಲಿನ ಒಳ್ಳೊಳ್ಳೆ ವಸ್ತುಗಳು ನಿಮಗೆ ಸಿಗೋ ತರ ಮಾಡ್ದೆ.+

ಆದ್ರೆ ಅಲ್ಲಿಗೆ ಬಂದ ಮೇಲೆ ನೀವು ನನ್ನ ದೇಶವನ್ನ ಅಪವಿತ್ರ ಮಾಡಿದ್ರಿ,

ನನ್ನ ಆಸ್ತಿಯನ್ನ ಹಾಳು ಮಾಡಿದ್ರಿ.+

 8 ‘ಯೆಹೋವ ಎಲ್ಲಿ?’ ಅಂತ ಪುರೋಹಿತರು ಕೇಳಲಿಲ್ಲ,+

ನಿಯಮ ಪುಸ್ತಕವನ್ನ ಕಲಿಸೋ ಜವಾಬ್ದಾರಿ ಇರೋರು ನನ್ನ ಬಗ್ಗೆ ತಿಳ್ಕೊಂಡಿಲ್ಲ,

ಕುರುಬರು ನನ್ನ ವಿರುದ್ಧ ದಂಗೆ ಎದ್ರು,+

ಪ್ರವಾದಿಗಳು ಬಾಳನ ಹೆಸ್ರಲ್ಲಿ ಭವಿಷ್ಯ ಹೇಳಿದ್ರು,+

ತಮಗೆ ಯಾವ ಸಹಾಯವನ್ನೂ ಮಾಡದ ದೇವರುಗಳ ಹಿಂದೆ ಅವರು ಹೋದ್ರು.

 9 ‘ಹಾಗಾಗಿ ನಾನು ನಿಮ್ಮ ಮೇಲೆ ಇನ್ನೂ ತಪ್ಪು ಹೊರಿಸ್ತೀನಿ,+

ನಿಮ್ಮ ಮಕ್ಕಳ ಮಕ್ಕಳ ಮೇಲೂ ನಾನು ತಪ್ಪು ಹೊರಿಸ್ತೀನಿ’ ಅಂತ ಯೆಹೋವ ಹೇಳ್ತಾನೆ.

10 ‘ಆದ್ರೆ ನೀವು ಕಿತ್ತೀಮ್‌+ ಜನ್ರ ದ್ವೀಪಗಳಿಗೆ* ಹೋಗಿ ನೋಡಿ.

ಕೇದಾರಿಗೆ+ ಸಂದೇಶವಾಹಕನನ್ನ ಕಳಿಸಿ ವಿಚಾರಿಸಿ ನೋಡಿ,

ಇಂಥ ವಿಷ್ಯ ಅಲ್ಲಿ ಯಾವತ್ತಾದ್ರೂ ನಡಿದಿದ್ಯಾ ಅಂತ ಚೆನ್ನಾಗಿ ಯೋಚನೆ ಮಾಡಿ ನೋಡಿ.

11 ಯಾವ ದೇಶದ ಜನರಾದ್ರೂ ತಮ್ಮ ದೇವರುಗಳನ್ನ ಬಿಟ್ಟು ದೇವರಲ್ಲದವುಗಳನ್ನ ಯಾವತ್ತಾದ್ರೂ ಆರಾಧನೆ ಮಾಡಿದ್ದಾರಾ?

ಆದ್ರೆ ನನ್ನ ಜನ್ರು ನನಗೆ ಗೌರವ ಕೊಡದೆ ಕೆಲಸಕ್ಕೆ ಬಾರದ ವಸ್ತುಗಳನ್ನ ಪೂಜೆ ಮಾಡ್ತಾ ಇದ್ದಾರೆ.+

12 ಆಕಾಶವೇ, ಈಗ ನಡೀತಾ ಇರೋದನ್ನ ಆಶ್ಚರ್ಯದಿಂದ ನೋಡು,

ಗಾಬರಿಯಿಂದ ಗಡಗಡ ನಡುಗು’ ಅಂತ ಯೆಹೋವ ಹೇಳ್ತಾನೆ,

13 ‘ಯಾಕಂದ್ರೆ ನನ್ನ ಜನ್ರು ಎರಡು ಅಪರಾಧಗಳನ್ನ ಮಾಡಿದ್ದಾರೆ,

ಅವರು ನನ್ನನ್ನ, ಜೀವ ಕೊಡೋ ನೀರಿನ ಮೂಲನಾಗಿರೋ* ನನ್ನನ್ನ ಬಿಟ್ಟುಬಿಟ್ಟು+

ತಮಗಾಗಿ ನೀರು ಗುಂಡಿಗಳನ್ನ ತೋಡ್ಕೊಂಡಿದ್ದಾರೆ,*

ನೀರು ತುಂಬಿಡೋಕೆ ಆಗದ ಒಡೆದು ಹೋಗಿರೋ ಗುಂಡಿಗಳನ್ನ ತೋಡ್ಕೊಂಡಿದ್ದಾರೆ.’

14 ‘ಇಸ್ರಾಯೇಲ ಒಬ್ಬ ಸೇವಕನಾ? ಯಜಮಾನನ ಮನೆಯಲ್ಲಿ ಹುಟ್ಟಿದ ಸೇವಕನಾ?

ಮತ್ಯಾಕೆ ಜನ್ರು ಅವನನ್ನ ಕೈದಿಯಾಗಿ ಕರ್ಕೊಂಡು ಹೋದ್ರು?

15 ಅವನನ್ನ ನೋಡಿ ಎಳೇ ಸಿಂಹಗಳು* ಗರ್ಜಿಸುತ್ತೆ,+

ಅವು ಜೋರಾಗಿ ಆರ್ಭಟಿಸುತ್ತೆ.

ಅವು ಅವನ ದೇಶವನ್ನ ಎಂಥ ಕೆಟ್ಟ ಸ್ಥಿತಿಗೆ ತಂದಿವೆ ಅಂದ್ರೆ ನೋಡುವವರ ಎದೆ ಧಸಕ್‌ ಅಂತಿದೆ.

ಅವನ ಪಟ್ಟಣಗಳಿಗೆ ಬೆಂಕಿ ಇಟ್ರು, ಅಲ್ಲಿ ಒಬ್ಬರು ಕೂಡ ವಾಸಿಸ್ತಿಲ್ಲ.

16 ನೋಫ್‌,*+ ತಹಪನೇಸ್‌+ ಪಟ್ಟಣಗಳ ಜನ ನಿನ್ನ ತಲೆ ಮೇಯ್ದು ಬೋಳು ಮಾಡಿದ್ದಾರೆ.

17 ಇದನ್ನೆಲ್ಲ ನೀನೇ ನಿನ್ನ ಮೈಮೇಲೆ ಎಳ್ಕೊಂಡೆ,

ಯಾಕಂದ್ರೆ ನಿನಗೆ ದಾರಿ ತೋರಿಸ್ತಿದ್ದ

ನಿನ್ನ ದೇವರಾದ ಯೆಹೋವನನ್ನ ನೀನು ಬಿಟ್ಟುಬಿಟ್ಟೆ.+

18 ಈಗ ನೀನು ಶೀಹೋರಿನ* ನೀರು ಕುಡಿಯೋಕೆ ಈಜಿಪ್ಟಿಗೆ ಯಾಕೆ ಹೋಗಬೇಕಂತ ಇದ್ದೀಯಾ?+

ಅಶ್ಶೂರಕ್ಕೆ ಹೋಗಿ ಮಹಾನದಿಯ* ನೀರನ್ನ ಯಾಕೆ ಕುಡಿಬೇಕಂತ ಇಷ್ಟಪಡ್ತೀಯಾ?+

19 ನೀನು ಮಾಡಿದ ಕೆಟ್ಟ ವಿಷ್ಯಗಳಿಂದಾನೇ ನೀನೀಗ ಬುದ್ಧಿ ಕಲಿಬೇಕು,

ನೀನು ನಂಬಿಕೆದ್ರೋಹ ಮಾಡಿದ್ದೀಯಲ್ಲಾ ಅದೇ ಈಗ ನಿನ್ನನ್ನ ತಿದ್ದಬೇಕು.

ನಿನ್ನ ದೇವರಾದ ಯೆಹೋವನನ್ನ ಬಿಟ್ಟುಬಿಡೋದು ಎಷ್ಟು ಕೆಟ್ಟದ್ದು,

ಎಷ್ಟು ಭಯಂಕರ ಅಂತ ನೀನು ತಿಳ್ಕೊ, ಅರ್ಥಮಾಡ್ಕೊ.+

ನನಗೆ ಸ್ವಲ್ಪನೂ ಭಯಪಡಲಿಲ್ಲ’+ ಅಂತ ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಹೇಳ್ತಾನೆ.

20 ‘ತುಂಬ ಮುಂಚೆನೇ ನಿನ್ನ ನೊಗವನ್ನ ಜಜ್ಜಿ ಹಾಕ್ದೆ,+

ನಿನ್ನ ಸಂಕೋಲೆಗಳನ್ನ ಕಿತ್ತು ಹಾಕ್ದೆ.

ಆದ್ರೆ ನೀನು “ನಾನು ನಿನ್ನ ಸೇವೆ ಮಾಡಲ್ಲ” ಅಂದೆ,

ಎತ್ರವಾದ ಎಲ್ಲ ಬೆಟ್ಟಗಳ ಮೇಲೆ, ಚೆನ್ನಾಗಿ ಬೆಳೆದಿದ್ದ ಎಲ್ಲ ಮರಗಳ ಕೆಳಗೆ+ ನೀನು ಬಿದ್ಕೊಂಡು ವ್ಯಭಿಚಾರ ಮಾಡ್ತಿದ್ದೆ.+

21 ನಾನು ಒಳ್ಳೇ ಬೀಜ ಬಿತ್ತಿ ನಿನ್ನನ್ನ ಶ್ರೇಷ್ಠ ಕೆಂಪು ದ್ರಾಕ್ಷಿ ಬಳ್ಳಿಯಾಗಿ ನೆಟ್ಟೆ,+

ಆದ್ರೆ ನೀನು ಹೇಗೆ ಕಾಡು ದ್ರಾಕ್ಷಿಬಳ್ಳಿಯ ಕೆಟ್ಟ ಕೊಂಬೆಗಳಾಗಿ ಬೆಳೆದುಬಿಟ್ಟೆ?’+

22 ‘ನಿನ್ನ ಪಾಪದ ಕಲೆ ತೆಗಿಯೋಕೆ ನೀನು ಸೋಡ* ಹಾಕಿ, ಎಷ್ಟೇ ಸಾಬೂನು ಹಾಕಿ ಒಗೆದ್ರೂ

ಆ ಕಲೆ ಹೋಗಲ್ಲ, ಅದು ನನ್ನ ಮುಂದೆ ಹಾಗೇ ಇರುತ್ತೆ’+

ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

23 ಹಾಗಿದ್ರೂ ‘ನಾನು ನನ್ನನ್ನ ಅಪವಿತ್ರ ಮಾಡ್ಕೊಂಡಿಲ್ಲ,

ನಾನು ಬಾಳ್‌ ದೇವರುಗಳನ್ನ ಆರಾಧಿಸಿಲ್ಲ’ ಅಂತ ನೀನು ಹೇಗೆ ಹೇಳ್ತೀಯ?

ಕಣಿವೆಯಲ್ಲಿ ನೀನು ನಡ್ಕೊಂಡ ರೀತಿ ಬಗ್ಗೆ ಸ್ವಲ್ಪ ಯೋಚಿಸು.

ನೀನೇನು ಮಾಡ್ದೆ ಅಂತ ನೆನಪಿಸ್ಕೊ.

ಗೊತ್ತುಗುರಿ ಇಲ್ಲದೆ ವೇಗವಾಗಿ ಅಲ್ಲಿ ಇಲ್ಲಿ ಓಡೋ

ಹೆಣ್ಣು ಒಂಟೆ ತರ ಇದ್ದೀಯ,

24 ಕಾಡಿಗೆ ಒಗ್ಗಿಹೋಗಿರೋ ಹೆಣ್ಣು ಕಾಡುಕತ್ತೆ ತರ ಇದ್ದೀಯ,

ಅದು ಗಂಡು ಕತ್ತೆಯನ್ನ ಹುಡುಕ್ತಾ ತುಂಬ ಆಸೆಯಿಂದ ಗಾಳಿಯನ್ನ ಮೂಸಿಮೂಸಿ ನೋಡ್ತಾ ಇರುತ್ತೆ.

ಅದಕ್ಕೆ ಕಾಮದಿಂದ ಬಿಸಿ ಏರಿದಾಗ ತಡಿಯೋಕೆ ಯಾರಿಂದಾಗುತ್ತೆ?

ಗಂಡು ಕತ್ತೆಗಳು ಅದನ್ನ ಹುಡುಕಿ ಹುಡುಕಿ ಅಲಿಬೇಕಾಗಿಲ್ಲ,

ಸಂಗಮ ಕಾಲದಲ್ಲಿ ಬೇಗ ಸಿಗುತ್ತೆ.

25 ಇಸ್ರಾಯೇಲೇ, ನಿನ್ನ ಕಾಲು ಸವೆದು ಹೋಗದ ಹಾಗೆ,

ಗಂಟಲು ಒಣಗಿ ಹೋಗದ ಹಾಗೆ ನೋಡ್ಕೊ.

ಅದಕ್ಕೆ ನೀನು ‘ಅದು ನನ್ನಿಂದಾಗಲ್ಲ,+

ನಾನು ಅಪರಿಚಿತರನ್ನ* ಪ್ರೀತಿಸ್ತಾ ಇದ್ದೀನಿ,+

ಅವ್ರ ಹಿಂದೆನೇ ಹೋಗ್ತೀನಿ’+ ಅಂತ ಹೇಳ್ದೆ.

26 ಕಳ್ಳ ಸಿಕ್ಕಿಬಿದ್ದಾಗ ಅವನಿಗೆ ಹೇಗೆ ಅವಮಾನ ಆಗುತ್ತೋ

ಹಾಗೇ ಇಸ್ರಾಯೇಲ್‌ ಜನ್ರಿಗೂ ಅವಮಾನ ಆಗುತ್ತೆ,

ಅವ್ರಿಗೆ, ಅವ್ರ ರಾಜರಿಗೆ, ಅಧಿಕಾರಿಗಳಿಗೆ,

ಪುರೋಹಿತರಿಗೆ, ಪ್ರವಾದಿಗಳಿಗೆ ಅವಮಾನ ಆಗುತ್ತೆ.+

27 ಅವರು ಮರಕ್ಕೆ ‘ನೀನೇ ನನ್ನ ಅಪ್ಪ’ ಅಂತ+

ಕಲ್ಲಿಗೆ ‘ನೀನೇ ನನ್ನ ಹೆತ್ತ ಅಮ್ಮ’ ಅಂತಾನೂ ಹೇಳ್ತಿದ್ದಾರೆ.

ನನ್ನ ಕಡೆಗೆ ನೋಡ್ತಿಲ್ಲ, ನನಗೆ ಬೆನ್ನು ಹಾಕಿದ್ದಾರೆ.+

ಆದ್ರೆ ಕಷ್ಟ ಬಂದಾಗ ‘ಬಂದು ನಮ್ಮನ್ನ ಕಾಪಾಡು!’+ ಅಂತ ಕೂಗ್ತಾರೆ.

28 ಯೆಹೂದವೇ, ನೀನು ನಿನಗಾಗಿ ಮಾಡ್ಕೊಂಡ ದೇವರುಗಳು ಈಗ ಎಲ್ಲಿ?+

ಅವು ನಿನ್ನ ಕಷ್ಟಕಾಲದಲ್ಲಿ ಬಂದು ನಿನ್ನನ್ನ ಕಾಪಾಡಲಿ,

ನಿನ್ನ ಹತ್ರ ಎಷ್ಟು ಪಟ್ಟಣ ಇದ್ಯೋ ಅಷ್ಟೇ ದೇವರುಗಳನ್ನ ಮಾಡ್ಕೊಂಡಿದ್ದೀಯಲ್ಲಾ.+

29 ‘ನೀವು ನನ್ನ ಮೇಲೆ ಯಾಕೆ ತಪ್ಪು ಹೊರಿಸ್ತಾ ಇದ್ದೀರ?

ನೀವೆಲ್ಲ ನನ್ನ ವಿರುದ್ಧ ಯಾಕೆ ದಂಗೆ ಎದ್ದಿದ್ದೀರ?’+ ಅಂತ ಯೆಹೋವ ಕೇಳ್ತಾನೆ.

30 ನಾನು ನಿಮ್ಮ ಮಕ್ಕಳಿಗೆ ಹೊಡೆದಿದ್ದೆಲ್ಲ ವ್ಯರ್ಥ ಆಯ್ತು.+

ಅವ್ರನ್ನ ತಿದ್ದಿದ್ರೂ ಅವರು ತಿದ್ಕೊಳ್ಳಲ್ಲ,+

ಕೋಪ ಬಂದ ಸಿಂಹದ ತರ ನಿಮ್ಮ ಕತ್ತಿ ಪ್ರವಾದಿಗಳನ್ನ ಕೊಂದುಬಿಡ್ತು.+

31 ಈ ಪೀಳಿಗೆ ಜನ್ರೇ, ಯೆಹೋವನ ಮಾತು ಕೇಳಿ.

ನಾನು ಇಸ್ರಾಯೇಲಿಗೆ ಕಾಡಿನ ತರ ಆಗಿದ್ದೀನಾ?

ಭಯ ಹುಟ್ಟಿಸೋ ಕಾರ್ಗತ್ತಲೆ ತರ ಆಗಿದ್ದೀನಾ?

ನನ್ನ ಜನ್ರು ‘ನಮಗಿಷ್ಟ ಬಂದ ಕಡೆ ಹೋಗ್ತೀವಿ,

ಇನ್ನು ಮುಂದೆ ನಾವು ನಿನ್ನ ಹತ್ರ ಬರಲ್ಲ’+ ಅಂತ ನನ್ನ ಹತ್ರ ಹೇಳ್ತಾರಲ್ಲಾ.

32 ಒಬ್ಬ ಕನ್ಯೆ ತನ್ನ ಒಡವೆಗಳನ್ನ ಮರಿತಾಳಾ?

ಮದುಮಗಳು ತನ್ನ ಅಲಂಕಾರಿಕ ಎದೆಪಟ್ಟಿಯನ್ನ* ಮರಿತಾಳಾ?

ಆದ್ರೆ ನನ್ನ ಸ್ವಂತ ಜನ್ರು ಲೆಕ್ಕ ಇಲ್ಲದಷ್ಟು ದಿನ ನನ್ನನ್ನ ಮರೆತು ಬಿಟ್ಟಿದ್ದಾರೆ.+

33 ನೀನು* ಗಂಡಸರ ಪ್ರೇಮ ಪಡಿಯೋಕೆ ಎಷ್ಟೊಂದು ಚಾತುರ್ಯದಿಂದ ಪ್ರಯತ್ನಿಸ್ತಾ ಇದ್ದೀಯ!

ಕೆಟ್ಟ ದಾರಿಗಳಲ್ಲಿ ಹೋಗೋದು ನಿನಗೆ ರೂಢಿ ಆಗಿಬಿಟ್ಟಿದೆ.+

34 ಅಷ್ಟೇ ಅಲ್ಲ ನಿನ್ನ ಲಂಗಗಳ ಮೇಲೆ ಮುಗ್ಧ ಬಡಜನ್ರ ರಕ್ತದ ಕಲೆಗಳಿವೆ,+

ಅವರು ಕದಿಯೋಕೆ ಪ್ರಯತ್ನಿಸುವಾಗ ಸಿಕ್ಕಿಬಿದ್ದವರಲ್ಲ,

ಆದ್ರೂ ನಿನ್ನ ಲಂಗಗಳ ಮೇಲೆಲ್ಲಾ ಅವ್ರ ರಕ್ತದ ಕಲೆಗಳಿವೆ.+

35 ಹಾಗಿದ್ರೂ ‘ನಾನು ತಪ್ಪು ಮಾಡಿಲ್ಲ,

ಆತನಿಗೆ ನನ್ನ ಮೇಲೆ ಕೋಪ ಇಲ್ಲ’ ಅಂತ ನೀನು ಹೇಳ್ತಾ ಇದ್ದೀಯ.

‘ನಾನು ಪಾಪ ಮಾಡಲಿಲ್ಲ’ ಅಂತ ನೀನು ಹೇಳೋದ್ರಿಂದ

ಈಗ ನಾನು ನಿನಗೆ ನ್ಯಾಯತೀರಿಸ್ತೀನಿ.

36 ನಿನ್ನ ಚಂಚಲ ನಡತೆಯನ್ನ ನೀನ್ಯಾಕೆ ಅಷ್ಟು ಸಲೀಸಾಗಿ ತಗೊಂಡಿದ್ದೀಯಾ?

ಅಶ್ಶೂರದಿಂದ ನಿನಗೆ ಹೇಗೆ ಅವಮಾನ ಆಯ್ತೋ+

ಹಾಗೇ ಈಜಿಪ್ಟಿಂದಾನೂ ಅವಮಾನ ಆಗುತ್ತೆ.+

37 ನೀನು ಯಾರ ಮೇಲೆ ನಂಬಿಕೆ ಇಟ್ಟಿದ್ದೀಯೋ ಅವ್ರನ್ನ ಯೆಹೋವ ತಿರಸ್ಕರಿಸಿದ್ದಾನೆ,

ಅವರು ನಿನಗೆ ಸಹಾಯ ಮಾಡಲ್ಲ.

ಈ ಕಾರಣಕ್ಕಾಗಿ ಕೂಡ ನೀನು ಅವಮಾನದಿಂದ ತಲೆ ಮೇಲೆ ಕೈ ಇಟ್ಕೊಂಡು ಹೋಗ್ತೀಯ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ