ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಕೊರಿಂಥ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಕೊರಿಂಥ ಮುಖ್ಯಾಂಶಗಳು

      • ಪೌಲನ ಸೇವೆಯ ಸಾಧನೆ (1-18)

        • ನಮ್ಮ ಆಯುಧಗಳು ಲೋಕದ ಆಯುಧಗಳ ತರ ಅಲ್ಲ (4, 5)

2 ಕೊರಿಂಥ 10:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 11:29, 30
  • +1ಕೊರಿಂ 2:3
  • +2ಕೊರಿಂ 10:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2003, ಪು. 24

    8/1/1994, ಪು. 15-16

2 ಕೊರಿಂಥ 10:4

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:52; 1ತಿಮೊ 1:18, 19
  • +2ಕೊರಿಂ 6:4, 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2016, ಪು. 8

    ಕಾವಲಿನಬುರುಜು,

    2/15/2010, ಪು. 12-13

    9/15/2009, ಪು. 22

    10/1/1999, ಪು. 11-12

    2/1/1994, ಪು. 12

2 ಕೊರಿಂಥ 10:5

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 1:19, 20; 3:19, 20; 2ತಿಮೊ 2:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2019, ಪು. 8-13

    ಕಾವಲಿನಬುರುಜು,

    8/15/2013, ಪು. 27

    2/15/2010, ಪು. 12-13

    10/1/1999, ಪು. 11-12

    2/1/1994, ಪು. 12

    ಎಚ್ಚರ!,

    6/8/1994, ಪು. 19

2 ಕೊರಿಂಥ 10:6

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 1:20

2 ಕೊರಿಂಥ 10:8

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 13:17

2 ಕೊರಿಂಥ 10:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2000, ಪು. 13

    11/15/1996, ಪು. 13

2 ಕೊರಿಂಥ 10:11

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 13:2

2 ಕೊರಿಂಥ 10:12

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 5:12
  • +ಜ್ಞಾನೋ 26:12; ಗಲಾ 6:3

2 ಕೊರಿಂಥ 10:13

ಪಾದಟಿಪ್ಪಣಿ

  • *

    ಅಥವಾ “ಅಳತೆಮಾಡಿ ನೇಮಿಸಿರೋ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:15; ಗಲಾ 2:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2008, ಪು. 28

2 ಕೊರಿಂಥ 10:14

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 3:10; 4:15

2 ಕೊರಿಂಥ 10:17

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 9:24; 1ಕೊರಿಂ 1:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    8/8/1999, ಪು. 20-21

2 ಕೊರಿಂಥ 10:18

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಲೂಕ 18:10-14
  • +1ಕೊರಿಂ 4:5; 2ತಿಮೊ 2:15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಕೊರಿಂ. 10:1ಮತ್ತಾ 11:29, 30
2 ಕೊರಿಂ. 10:11ಕೊರಿಂ 2:3
2 ಕೊರಿಂ. 10:12ಕೊರಿಂ 10:10
2 ಕೊರಿಂ. 10:4ಮತ್ತಾ 26:52; 1ತಿಮೊ 1:18, 19
2 ಕೊರಿಂ. 10:42ಕೊರಿಂ 6:4, 7
2 ಕೊರಿಂ. 10:51ಕೊರಿಂ 1:19, 20; 3:19, 20; 2ತಿಮೊ 2:24, 25
2 ಕೊರಿಂ. 10:61ತಿಮೊ 1:20
2 ಕೊರಿಂ. 10:8ಇಬ್ರಿ 13:17
2 ಕೊರಿಂ. 10:112ಕೊರಿಂ 13:2
2 ಕೊರಿಂ. 10:122ಕೊರಿಂ 5:12
2 ಕೊರಿಂ. 10:12ಜ್ಞಾನೋ 26:12; ಗಲಾ 6:3
2 ಕೊರಿಂ. 10:13ಅಕಾ 9:15; ಗಲಾ 2:8
2 ಕೊರಿಂ. 10:141ಕೊರಿಂ 3:10; 4:15
2 ಕೊರಿಂ. 10:17ಯೆರೆ 9:24; 1ಕೊರಿಂ 1:31
2 ಕೊರಿಂ. 10:18ಲೂಕ 18:10-14
2 ಕೊರಿಂ. 10:181ಕೊರಿಂ 4:5; 2ತಿಮೊ 2:15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಕೊರಿಂಥ 10:1-18

ಕೊರಿಂಥದವರಿಗೆ ಬರೆದ ಎರಡನೇ ಪತ್ರ

10 ಪೌಲನಾದ ನಾನು ಕ್ರಿಸ್ತನ ಸೌಮ್ಯತೆ ಮತ್ತು ದಯೆಯನ್ನ ಅನುಕರಿಸ್ತಾ ನಿಮ್ಮನ್ನ ಕೇಳ್ಕೊಳ್ತೀನಿ.+ ನಾನು ನಿಮ್ಮ ಮುಂದಿದ್ದಾಗ+ ತುಂಬ ಸಾಧು, ಹಿಂದೆ ಇದ್ದಾಗ ತುಂಬ ಕ್ರೂರಿ ಅಂತ ನಿಮ್ಮಲ್ಲಿ ಸ್ವಲ್ಪ ಜನ ಹೇಳ್ತಾರೆ.+ 2 ನಾನು ನಿಮ್ಮ ಹತ್ರ ಕೇಳ್ಕೊಳ್ಳೋದು ಏನಂದ್ರೆ, ನಾನು ಅಲ್ಲಿಗೆ ಬಂದಾಗ ಅಂಥವ್ರ ಹತ್ರ ಧೈರ್ಯವಾಗಿ, ಖಂಡಿಸೋ ಪರಿಸ್ಥಿತಿ ಬರದೆ ಇರೋ ತರ ನೋಡ್ಕೊಳ್ಳಿ. ಯಾಕಂದ್ರೆ ನಾವು ಈ ಲೋಕದ ಆಲೋಚನೆ ಪ್ರಕಾರ ನಡೀತಾ ಇದ್ದೀವಿ ಅಂತ ಅವರು ಅಂದ್ಕೊಂಡಿದ್ದಾರೆ. 3 ನಾವು ಈ ಲೋಕದಲ್ಲಿ ಜೀವಿಸೋದಾದ್ರೂ ಲೋಕದ ಜನ್ರ ತರ ಯುದ್ಧ ಮಾಡಲ್ಲ. 4 ಯಾಕಂದ್ರೆ ನಮ್ಮ ಆಯುಧಗಳು ಈ ಲೋಕದ ಜನ್ರ ಆಯುಧಗಳ ತರ ಇಲ್ಲ.+ ನಮಗೆ ಆ ಆಯುಧಗಳನ್ನ ಕೊಟ್ಟಿದ್ದು ದೇವರು.+ ಆ ಆಯುಧಗಳಿಗೆ ದೊಡ್ಡದೊಡ್ಡ ಕೋಟೆಗಳ ತರ ಇರೋ ವಿಷ್ಯಗಳನ್ನೂ ಕೆಡವಿಹಾಕೋ ಶಕ್ತಿ ಇದೆ. 5 ನಾವು ದೇವರ ಜ್ಞಾನಕ್ಕೆ ವಿರುದ್ಧವಾದ ತಪ್ಪು ವಾದಗಳನ್ನ, ಎಲ್ಲ ಅಡ್ಡಿತಡೆಗಳನ್ನ ಕೆಡವಿಹಾಕ್ತೀವಿ.+ ಪ್ರತಿಯೊಂದು ಯೋಚ್ನೆಯನ್ನ ಸೆರೆಹಿಡಿದು ಕ್ರಿಸ್ತನ ಮಾತನ್ನ ಕೇಳೋ ತರ ಮಾಡ್ತೀವಿ. 6 ಮಾತು ಕೇಳದ ಪ್ರತಿಯೊಬ್ರಿಗೆ ಶಿಕ್ಷೆ ಕೊಡೋಕೆ ನಾವು ಸಿದ್ಧರಾಗಿದ್ದೀವಿ.+ ಅದಕ್ಕೂ ಮುಂಚೆ ನೀವು ಮಾತನ್ನ ಕೇಳುವವರು ಅಂತ ತೋರಿಸ್ಕೊಡಿ.

7 ನೀವು ಮುಖನೋಡಿ ತೀರ್ಮಾನ ಮಾಡ್ತೀರ. ಯಾರಿಗಾದ್ರೂ ‘ನಾನು ಕ್ರಿಸ್ತನಿಗೆ ಸೇರಿದವನು’ ಅಂತ ಪೂರ್ತಿ ಭರವಸೆ ಇದ್ರೆ ಅವನು ಈ ವಿಷ್ಯ ಮರಿಬಾರದು, ಅವನು ಹೇಗೆ ಕ್ರಿಸ್ತನಿಗೆ ಸೇರಿದ್ದಾನೋ ಹಾಗೇ ನಾವೂ ಕ್ರಿಸ್ತನಿಗೆ ಸೇರಿದವರು. 8 ನಿಮ್ಮ ನಂಬಿಕೆಯನ್ನ ಹಾಳು ಮಾಡೋಕಲ್ಲ, ಬಲಪಡಿಸೋಕೆ ಪ್ರಭು ನಮಗೆ ಅಧಿಕಾರ ಕೊಟ್ಟಿದ್ದಾನೆ.+ ಇದ್ರ ಬಗ್ಗೆ ಒಂದುವೇಳೆ ನಾನು ತುಂಬ ಹೊಗಳ್ಕೊಂಡ್ರೂ ಅದಕ್ಕಾಗಿ ನಾಚಿಕೆ ಪಡಬೇಕಾಗಿಲ್ಲ. 9 ನನ್ನ ಪತ್ರಗಳಿಂದ ನಿಮ್ಮನ್ನ ಹೆದರಿಸೋಕೆ ಪ್ರಯತ್ನಿಸ್ತಿದ್ದೀನಿ ಅನ್ನೋ ಅಭಿಪ್ರಾಯ ಮೂಡಿಸೋಕೆ ನನಗೆ ಇಷ್ಟ ಇಲ್ಲ. 10 ಸ್ವಲ್ಪ ಜನ ನನ್ನ ಬಗ್ಗೆ “ಪತ್ರಗಳನ್ನ ಮಾತ್ರ ಅವನೇನೋ ತುಂಬ ಅಧಿಕಾರ ಇರುವವನ ತರ, ಮನಸ್ಸಿಗೆ ನಾಟೋ ತರ ಬರಿತಾನೆ. ಆದ್ರೆ ಮುಂದೆ ಬಂದ್ರೆ ಅವನಲ್ಲಿ ಹೇಳ್ಕೊಳ್ಳುವಷ್ಟು ಸಾಮರ್ಥ್ಯ ಏನೂ ಇಲ್ಲ. ಬರೀ ಪ್ರಯೋಜನಕ್ಕೆ ಬಾರದ ಮಾತುಗಳನ್ನ ಆಡ್ತಾನೆ” ಅಂತಾರೆ. 11 ಈ ತರ ಮಾತಾಡುವವರು ಒಂದು ವಿಷ್ಯ ತಿಳ್ಕೊಳ್ಳಿ. ನಾವು ಪತ್ರಗಳಲ್ಲಿ ಹೇಳಿದ್ದನ್ನ ಅಲ್ಲಿಗೆ ಬಂದಾಗ ಮಾಡೇ ಮಾಡ್ತೀವಿ.+ 12 ಅವ್ರಿಗೆ ಬುದ್ಧಿನೇ ಇಲ್ಲ ‘ನಾವೇ ದೊಡ್ಡವರು’ ಅಂತ ಹೇಳ್ಕೊಳ್ಳುವವ್ರ ಮಟ್ಟಕ್ಕೆ ಇಳಿಯೋಕೂ ಅವ್ರ ಜೊತೆ ನಮ್ಮನ್ನ ಹೋಲಿಸೋಕೂ ನಮಗಿಷ್ಟ ಇಲ್ಲ.+ ಅವರು ತಮ್ಮನ್ನ ತಮ್ಮದೇ ಅಳತೆಯಿಂದ ಅಳಿತಾರೆ, ಅವರು ತಮ್ಮನ್ನ ತಮ್ಮ ಜೊತೆನೇ ಹೋಲಿಸ್ಕೊಳ್ತಾರೆ.+

13 ನಮ್ಮ ಬಗ್ಗೆ ನಾವು ಮಿತಿಮೀರಿ ಹೆಮ್ಮೆಪಡಲ್ಲ. ದೇವರು ನಮಗೆ ಕೊಟ್ಟಿರೋ* ಮೇರೆಯೊಳಗೆ ನಮ್ಮಿಂದ ಏನು ಸಾಧಿಸೋಕೆ ಆಯ್ತೋ ಅದ್ರ ಬಗ್ಗೆ ನಾವು ಹೆಮ್ಮೆ ಪಡ್ತೀವಿ. ಆ ಮೇರೆಯೊಳಗೆ ನೀವೂ ಇದ್ದೀರ.+ 14 ಕ್ರಿಸ್ತನ ಬಗ್ಗೆ ಸಿಹಿಸುದ್ದಿಯನ್ನ ನಿಮಗೆ ಮೊದ್ಲು ಸಾರಿದ್ದು ನಾವೇ. ಆದ್ರೆ ನಾವು ನಿಮ್ಮ ಹತ್ರ ಬಂದಾಗ ನಮಗೆ ಕೊಟ್ಟಿದ್ದ ಮೇರೆಯನ್ನ ದಾಟಿ ಬರಲಿಲ್ಲ.+ 15 ನಮಗೆ ಕೊಟ್ಟ ಮೇರೆಯ ಹೊರಗೆ ಇನ್ನೊಬ್ಬ ಮಾಡಿದ ಕೆಲಸದ ಬಗ್ಗೆ ನಾವು ಹೆಮ್ಮೆಪಡ್ತಿಲ್ಲ. ಬದಲಿಗೆ ನಮ್ಮ ಮೇರೆಯೊಳಗೆ ನಾವು ಮಾಡಿದ ಕೆಲಸ ಬೆಳೀತಾ ಹೋಗ್ಲಿ ಅಂದ್ರೆ ನಿಮ್ಮ ನಂಬಿಕೆ ಜಾಸ್ತಿ ಆಗ್ತಾ ಹೋಗ್ಲಿ ಅಂತ ಬಯಸ್ತೀವಿ. ಆಗ ನಾವು ಇನ್ನೂ ಜಾಸ್ತಿ ಸೇವೆ ಮಾಡಕ್ಕಾಗುತ್ತೆ, 16 ನಿಮ್ಮ ಪ್ರದೇಶಕ್ಕಿಂತ ದೂರ ಇರೋ ದೇಶಗಳಲ್ಲೂ ಸಿಹಿಸುದ್ದಿಯನ್ನ ಸಾರಕ್ಕಾಗುತ್ತೆ. ಹೀಗೆ ಬೇರೆಯವರು ಅವ್ರ ಮೇರೆಯೊಳಗೆ ಮಾಡಿರೋ ಕೆಲಸಕ್ಕಾಗಿ ನಾವು ಹೆಮ್ಮೆಪಡಲ್ಲ. 17 “ಆದ್ರೆ ಹೆಮ್ಮೆಪಡುವವನು ಯೆಹೋವನ* ಬಗ್ಗೆ ಹೆಮ್ಮೆಪಡ್ಲಿ.”+ 18 ಯೆಹೋವ* ಯಾರನ್ನ ಹೊಗಳ್ತಾನೋ ಅವನನ್ನೇ ಮೆಚ್ತಾನೆ,+ ತನ್ನನ್ನ ತಾನೇ ಹೊಗಳಿಕೊಳ್ಳೋನನ್ನ ಮೆಚ್ಚಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ