ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಸಮುವೇಲ ಮುಖ್ಯಾಂಶಗಳು

      • ಸೌಲನ ಸಾವಿನ ಸುದ್ದಿ ದಾವೀದನಿಗೆ ಗೊತ್ತಾಯ್ತು (1-16)

      • ಸೌಲನ, ಯೋನಾತಾನನ ಬಗ್ಗೆ ದಾವೀದನ ಶೋಕಗೀತೆ (17-27)

2 ಸಮುವೇಲ 1:1

ಪಾದಟಿಪ್ಪಣಿ

  • *

    ಅಥವಾ “ಸಾಯಿಸಿ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 27:5, 6

2 ಸಮುವೇಲ 1:4

ಮಾರ್ಜಿನಲ್ ರೆಫರೆನ್ಸ್

  • +1ಸಮು 31:1, 6; 1ಪೂರ್ವ 10:4, 6

2 ಸಮುವೇಲ 1:6

ಮಾರ್ಜಿನಲ್ ರೆಫರೆನ್ಸ್

  • +1ಸಮು 28:4; 1ಪೂರ್ವ 10:1
  • +1ಸಮು 31:3; 1ಪೂರ್ವ 10:3

2 ಸಮುವೇಲ 1:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:16; ಧರ್ಮೋ 25:19; 1ಸಮು 15:20; 30:1

2 ಸಮುವೇಲ 1:10

ಮಾರ್ಜಿನಲ್ ರೆಫರೆನ್ಸ್

  • +1ಸಮು 31:4

2 ಸಮುವೇಲ 1:12

ಮಾರ್ಜಿನಲ್ ರೆಫರೆನ್ಸ್

  • +1ಸಮು 31:11, 13
  • +1ಸಮು 31:1

2 ಸಮುವೇಲ 1:14

ಮಾರ್ಜಿನಲ್ ರೆಫರೆನ್ಸ್

  • +ಅರ 12:8; 1ಸಮು 24:6; 26:9; 31:4

2 ಸಮುವೇಲ 1:15

ಮಾರ್ಜಿನಲ್ ರೆಫರೆನ್ಸ್

  • +2ಸಮು 4:10

2 ಸಮುವೇಲ 1:16

ಮಾರ್ಜಿನಲ್ ರೆಫರೆನ್ಸ್

  • +2ಸಮು 1:6, 10

2 ಸಮುವೇಲ 1:17

ಮಾರ್ಜಿನಲ್ ರೆಫರೆನ್ಸ್

  • +1ಸಮು 31:6

2 ಸಮುವೇಲ 1:18

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:13

2 ಸಮುವೇಲ 1:19

ಮಾರ್ಜಿನಲ್ ರೆಫರೆನ್ಸ್

  • +1ಸಮು 31:8

2 ಸಮುವೇಲ 1:20

ಮಾರ್ಜಿನಲ್ ರೆಫರೆನ್ಸ್

  • +1ಸಮು 31:9

2 ಸಮುವೇಲ 1:21

ಮಾರ್ಜಿನಲ್ ರೆಫರೆನ್ಸ್

  • +1ಸಮು 31:1; 1ಪೂರ್ವ 10:1
  • +ಯಾಜ 27:16

2 ಸಮುವೇಲ 1:22

ಮಾರ್ಜಿನಲ್ ರೆಫರೆನ್ಸ್

  • +1ಸಮು 18:4; 20:20
  • +1ಸಮು 14:47

2 ಸಮುವೇಲ 1:23

ಮಾರ್ಜಿನಲ್ ರೆಫರೆನ್ಸ್

  • +1ಸಮು 18:1
  • +1ಸಮು 31:6; 1ಪೂರ್ವ 10:6
  • +ಯೋಬ 9:26
  • +ಜ್ಞಾನೋ 30:30

2 ಸಮುವೇಲ 1:25

ಮಾರ್ಜಿನಲ್ ರೆಫರೆನ್ಸ್

  • +1ಸಮು 31:8

2 ಸಮುವೇಲ 1:26

ಮಾರ್ಜಿನಲ್ ರೆಫರೆನ್ಸ್

  • +1ಸಮು 18:1, 3
  • +1ಸಮು 19:2; 20:17, 41; 23:16-18; ಜ್ಞಾನೋ 17:17; 18:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2022, ಪು. 3

    ಕಾವಲಿನಬುರುಜು,

    12/1/1991, ಪು. 11-12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಸಮು. 1:11ಸಮು 27:5, 6
2 ಸಮು. 1:41ಸಮು 31:1, 6; 1ಪೂರ್ವ 10:4, 6
2 ಸಮು. 1:61ಸಮು 28:4; 1ಪೂರ್ವ 10:1
2 ಸಮು. 1:61ಸಮು 31:3; 1ಪೂರ್ವ 10:3
2 ಸಮು. 1:8ವಿಮೋ 17:16; ಧರ್ಮೋ 25:19; 1ಸಮು 15:20; 30:1
2 ಸಮು. 1:101ಸಮು 31:4
2 ಸಮು. 1:121ಸಮು 31:11, 13
2 ಸಮು. 1:121ಸಮು 31:1
2 ಸಮು. 1:14ಅರ 12:8; 1ಸಮು 24:6; 26:9; 31:4
2 ಸಮು. 1:152ಸಮು 4:10
2 ಸಮು. 1:162ಸಮು 1:6, 10
2 ಸಮು. 1:171ಸಮು 31:6
2 ಸಮು. 1:18ಯೆಹೋ 10:13
2 ಸಮು. 1:191ಸಮು 31:8
2 ಸಮು. 1:201ಸಮು 31:9
2 ಸಮು. 1:211ಸಮು 31:1; 1ಪೂರ್ವ 10:1
2 ಸಮು. 1:21ಯಾಜ 27:16
2 ಸಮು. 1:221ಸಮು 18:4; 20:20
2 ಸಮು. 1:221ಸಮು 14:47
2 ಸಮು. 1:231ಸಮು 18:1
2 ಸಮು. 1:231ಸಮು 31:6; 1ಪೂರ್ವ 10:6
2 ಸಮು. 1:23ಯೋಬ 9:26
2 ಸಮು. 1:23ಜ್ಞಾನೋ 30:30
2 ಸಮು. 1:251ಸಮು 31:8
2 ಸಮು. 1:261ಸಮು 18:1, 3
2 ಸಮು. 1:261ಸಮು 19:2; 20:17, 41; 23:16-18; ಜ್ಞಾನೋ 17:17; 18:24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಸಮುವೇಲ 1:1-27

ಎರಡನೇ ಸಮುವೇಲ

1 ಸೌಲ ತೀರಿಹೋದ ಮೇಲೆ ದಾವೀದ ಅಮಾಲೇಕ್ಯರನ್ನ ಸೋಲಿಸಿ* ವಾಪಸ್‌ ಬಂದು ಎರಡು ದಿನ ಚಿಕ್ಲಗ್‌ನಲ್ಲಿ+ ಉಳ್ಕೊಂಡ. 2 ಮೂರನೇ ದಿನ ಸೌಲನ ಪಾಳೆಯದಿಂದ ಒಬ್ಬ ಅಲ್ಲಿಗೆ ಬಂದ. ಅವನು ಬಟ್ಟೆಗಳನ್ನ ಹರ್ಕೊಂಡು, ತಲೆ ಮೇಲೆ ಮಣ್ಣು ಹಾಕೊಂಡಿದ್ದ. ಅವನು ದಾವೀದನ ಹತ್ರ ಬಂದು ನೆಲಕ್ಕೆ ಬಿದ್ದು ಮಂಡಿಯೂರಿ ಬಗ್ಗಿ ನಮಸ್ಕಾರ ಮಾಡಿದ.

3 ದಾವೀದ ಅವನಿಗೆ “ನೀನು ಎಲ್ಲಿಂದ ಬಂದೆ?” ಅಂತ ಕೇಳಿದ. ಅದಕ್ಕೆ ಅವನು “ನಾನು ಇಸ್ರಾಯೇಲಿನ ಪಾಳೆಯದಿಂದ ತಪ್ಪಿಸ್ಕೊಂಡು ಬಂದಿದ್ದೀನಿ” ಅಂದ. 4 ಆಗ ದಾವೀದ “ಏನಾಯ್ತು? ದಯವಿಟ್ಟು ಹೇಳು” ಅಂದ. ಅದಕ್ಕೆ ಅವನು “ಯುದ್ಧ ಬಿಟ್ಟು ಜನ ಓಡಿಹೋದ್ರು. ತುಂಬ ಜನ ಸತ್ತುಹೋದ್ರು. ಸೌಲ, ಯೋನಾತಾನ ಇಬ್ರೂ ತೀರಿಹೋದ್ರು”+ ಅಂದ. 5 ಈ ಸುದ್ದಿ ಹೇಳಿದ ಆ ಯುವಕನಿಗೆ “ಸೌಲ, ಯೋನಾತಾನ ತೀರಿಹೋದ್ರು ಅಂತ ನಿನಗೆ ಹೇಗೆ ಗೊತ್ತು?” ಅಂತ ದಾವೀದ ಕೇಳಿದ. 6 ಅದಕ್ಕೆ ಅವನು “ನಾನು ಗಿಲ್ಬೋವ+ ಬೆಟ್ಟಕ್ಕೆ ಹೋದಾಗ ಸೌಲ ತನ್ನ ಈಟಿ ಮೇಲೆ ಒರಗಿಕೊಂಡು ನಿಂತಿದ್ದ. ರಥಗಳು, ಕುದುರೆ ಸವಾರರು ಅವನ ಹತ್ರ ಬರೋದನ್ನ ನೋಡಿದೆ.+ 7 ಅವನು ಹಿಂದೆ ತಿರುಗಿ ನನ್ನನ್ನ ನೋಡಿ ಕರೆದ. ಆಗ ನಾನು ‘ಹೇಳಿ, ನಾನೇನು ಮಾಡಬೇಕು?’ ಅಂದೆ. 8 ಅದಕ್ಕೆ ‘ನೀನ್ಯಾರು?’ ಅಂತ ಕೇಳಿದ. ‘ನಾನೊಬ್ಬ ಅಮಾಲೇಕ್ಯ’+ ಅಂತ ಹೇಳಿದೆ. 9 ಆಮೇಲೆ ಅವನು ‘ದಯವಿಟ್ಟು ನನ್ನನ್ನ ಸಾಯಿಸು. ನನಗೆ ಈ ನೋವು ಸಹಿಸೋಕೆ ಆಗ್ತಿಲ್ಲ. ನನ್ನ ಜೀವನೂ ಹೋಗ್ತಿಲ್ಲ’ ಅಂದ. 10 ಆಗ ನಾನು ಅವನ ಹತ್ರ ಹೋಗಿ ಅವನನ್ನ ಕೊಂದುಬಿಟ್ಟೆ.+ ಯಾಕಂದ್ರೆ ಅವನಿಗೆ ಎಷ್ಟು ದೊಡ್ಡ ಗಾಯ ಆಗಿತ್ತಂದ್ರೆ ಅವನು ಉಳಿಯೋದಿಲ್ಲ ಅಂತ ನಂಗೊತ್ತಾಯ್ತು. ಅವನ ತಲೆಯಲ್ಲಿದ್ದ ಕಿರೀಟ, ಕೈಯಲ್ಲಿದ್ದ ಕಡಗ ತಗೊಂಡು ನಿನ್ನ ಹತ್ರ ತಂದೆ, ಒಡೆಯ” ಅಂತ ಹೇಳಿದ.

11 ಅದನ್ನ ಕೇಳಿ ದಾವೀದ ತನ್ನ ಬಟ್ಟೆ ಹರ್ಕೊಂಡ. ಅವನ ಜೊತೆ ಇದ್ದ ಗಂಡಸ್ರೂ ಬಟ್ಟೆ ಹರ್ಕೊಂಡ್ರು. 12 ಅವ್ರೆಲ್ಲ ಸಂಜೆ ತನಕ ಅತ್ತು ಗೋಳಾಡಿ, ಉಪವಾಸ ಮಾಡಿದ್ರು.+ ಯಾಕಂದ್ರೆ ಸೌಲ, ಅವನ ಮಗ ಯೋನಾತಾನ, ಯೆಹೋವನ ಜನ ಹೀಗೆ ತುಂಬ ಇಸ್ರಾಯೇಲ್ಯರು+ ಕತ್ತಿಯಿಂದ ಪ್ರಾಣ ಕಳ್ಕೊಂಡಿದ್ರು.

13 ದಾವೀದ ಈ ಸುದ್ದಿಯನ್ನ ತಂದ ಯುವಕನಿಗೆ “ನೀನ್ಯಾರು, ನಿನ್ನ ಊರು ಯಾವುದು?” ಅಂತ ಕೇಳಿದ. ಅದಕ್ಕೆ ಅವನು “ನಾನು ಇಸ್ರಾಯೇಲಲ್ಲಿ ವಿದೇಶಿಯಾಗಿರೋ ಅಮಾಲೇಕ್ಯನ ಮಗ” ಅಂದ. 14 ಆಗ ದಾವೀದ “ಯೆಹೋವನ ಅಭಿಷಿಕ್ತನ ಮೇಲೆ ಕೈಯೆತ್ತಿ ಅವನನ್ನ ಕೊಲ್ಲೋಕೆ ನಿನಗೆಷ್ಟು ಧೈರ್ಯ?”+ ಅಂತ ಹೇಳಿ 15 ಇನ್ನೊಬ್ಬ ಯುವಕನನ್ನ ಕರೆದು “ಬಾ ಇವನನ್ನ ಕೊಂದುಹಾಕು” ಅಂದ. ಅವನು ಆ ಅಮಾಲೇಕ್ಯನನ್ನ ಕೊಂದುಹಾಕಿದ.+ 16 ದಾವೀದನು ಆ ಅಮಾಲೇಕ್ಯನಿಗೆ “ನಿನ್ನ ಸಾವಿಗೆ ನೀನೇ ಕಾರಣ. ಯಾಕಂದ್ರೆ ‘ಯೆಹೋವನ ಅಭಿಷಿಕ್ತನನ್ನ ಕೊಂದವನು ನಾನೇ’+ ಅಂತ ನಿನ್ನ ಬಾಯಿನೇ ನಿನ್ನ ವಿರುದ್ಧ ಸಾಕ್ಷಿ ಹೇಳ್ತು” ಅಂದ.

17 ಆಮೇಲೆ ದಾವೀದ ಸೌಲನ ಬಗ್ಗೆ, ಯೋನಾತಾನನ ಬಗ್ಗೆ ಒಂದು ಶೋಕಗೀತೆ ರಚಿಸಿ ಹಾಡಿದ.+ 18 “ಬಿಲ್ಲಿನ ಗೀತೆ” ಅನ್ನೋ ಈ ಶೋಕಗೀತೆಯನ್ನ ಯೆಹೂದದ ಜನ್ರಿಗೆ ಕಲಿಸಬೇಕು ಅಂತ ಹೇಳಿದ. ಈ ಗೀತೆಯನ್ನ ಯಾಷಾರ್‌ ಪುಸ್ತಕದಲ್ಲಿ+ ಬರೆದಿಡಲಾಗಿದೆ.

19 “ಇಸ್ರಾಯೇಲೇ, ನಿನ್ನ ಗೌರವ ಬೆಟ್ಟಗಳಲ್ಲಿ ಮಣ್ಣಾಗಿ ಹೋಯ್ತಲ್ಲಾ.+

ಅಯ್ಯೋ, ನಿನ್ನ ಶೂರರು ಸತ್ತು ಬಿದ್ರಲ್ಲಾ!

20 ಇದ್ರ ಬಗ್ಗೆ ಗತ್‌ ಊರಲ್ಲಿ ಹೇಳಬೇಡ,+

ಅಷ್ಕೆಲೋನಿನ ಬೀದಿಗಳಲ್ಲಿ ಹೇಳಬೇಡ,

ಹೇಳಿದ್ರೆ ಫಿಲಿಷ್ಟಿಯರ ಹೆಣ್ಣು ಮಕ್ಕಳು ಸಂತೋಷ ಪಡ್ತಾರೆ,

ಸುನ್ನತಿ ಆಗದೆ ಇರುವವರ ಹೆಣ್ಣು ಮಕ್ಕಳು ಬೀಗ್ತಾರೆ.

21 ಗಿಲ್ಬೋವಿನ ಬೆಟ್ಟಗಳೇ,+

ನಿಮ್ಮ ಮೇಲೆ ಮಳೆ, ಮಂಜು ಬೀಳದಿರಲಿ,

ನಿಮ್ಮ ಹೊಲಗಳಲ್ಲಿ ದೇವರಿಗೆ ಅರ್ಪಿಸಬೇಕಾದ

ಕಾಣಿಕೆಯ ಫಸಲುಗಳು ಬರದಿರಲಿ,+

ಯಾಕಂದ್ರೆ ಅಲ್ಲಿ ವೀರ ಸೈನಿಕರ ಗುರಾಣಿ ಕಲುಷಿತ ಆಗಿದೆ,

ಇನ್ಮುಂದೆ ಸೌಲನ ಗುರಾಣಿಗೆ ಎಣ್ಣೆ ಅಭಿಷೇಕ ಇರಲ್ಲ.

22 ಶತ್ರುಗಳ ರಕ್ತ ಸುರಿಸದೆ, ಶೂರರ ಕೊಬ್ಬು ಮುರಿಯದೆ,

ಯೋನಾತಾನನ ಬಿಲ್ಲು ವಾಪಸ್‌ ಬರ್ತಾ ಇರಲಿಲ್ಲ,+

ಯಶಸ್ಸು ಪಡಿಯದೆ ಸೌಲನ ಕತ್ತಿ ವಾಪಸ್‌ ಬರ್ತಾ ಇರಲಿಲ್ಲ.+

23 ಸೌಲ, ಯೋನಾತಾನರಿಗೆ+ ಜೀವಮಾನವಿಡೀ ಪ್ರೀತಿ-ವಾತ್ಸಲ್ಯ ಸಿಕ್ತು,

ಸಾವಲ್ಲೂ ಒಬ್ರನ್ನೊಬ್ರು ಅಗಲಲಿಲ್ಲ.+

ಅವರು ಹದ್ದುಗಳಿಗಿಂತ ಹೆಚ್ಚು ವೇಗಿಗಳು,+

ಸಿಂಹಗಳಿಗಿಂತ ಹೆಚ್ಚು ಶಕ್ತಿಶಾಲಿಗಳು.+

24 ನಿಮಗೆ ಕಡುಗೆಂಪು ಬಣ್ಣದ, ಆಡಂಬರದ ಉಡುಗೆ ತೊಡಿಸಿದ್ದ,

ಚಿನ್ನದ ಆಭರಣಗಳನ್ನ ನಿಮ್ಮ ಉಡುಗೆ ಮೇಲೆ ಹಾಕಿದ್ದ

ಸೌಲನಿಗಾಗಿ, ಓ ಇಸ್ರಾಯೇಲಿನ ಹೆಣ್ಣು ಮಕ್ಕಳೇ ಗೋಳಾಡಿ.

25 ಇಸ್ರಾಯೇಲೇ! ಶೂರರು ಹೇಗೆ ಯುದ್ಧದಲ್ಲಿ ತೀರಿಹೋದ್ರು?

ನಿನ್ನ ಬೆಟ್ಟಗಳಲ್ಲಿ ಯೋನಾತಾನ ಹೆಣವಾದನಲ್ಲ!+

26 ನನ್ನ ಸಹೋದರ ಯೋನಾತಾನ, ನಿನ್ನನ್ನ ಕಳ್ಕೊಂಡು ದುಃಖದಲ್ಲಿದ್ದೀನಿ,

ನೀನಂದ್ರೆ ನನಗೆ ಪಂಚಪ್ರಾಣ.+

ನೀನು ನನಗೆ ತೋರಿಸಿದ ಪ್ರೀತಿ ಸ್ತ್ರೀಯರು ತೋರಿಸಿದ್ದಕ್ಕಿಂತ ಜಾಸ್ತಿ.+

27 ಶೂರರು ಹೇಗೆ ಯುದ್ಧದಲ್ಲಿ ಸತ್ರು!

ಯುದ್ಧದ ಆಯುಧಗಳು ಹೇಗೆ ನಾಶ ಆಯ್ತು!”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ