ಹೋಶೇಯ
4 ಇಸ್ರಾಯೇಲಿನ ಜನ್ರೇ, ಯೆಹೋವನ ಮಾತು ಕೇಳಿ,
ದೇಶದ ಜನ್ರ ಮೇಲೆ ಯೆಹೋವ ಮೊಕದ್ದಮೆ ಹೂಡಿದ್ದಾನೆ,+
ಯಾಕಂದ್ರೆ ಇವ್ರಲ್ಲಿ ಸತ್ಯ, ಶಾಶ್ವತ ಪ್ರೀತಿ, ದೇವರ ಬಗ್ಗೆ ಜ್ಞಾನ ಏನೂ ಇಲ್ಲ.+
2 ದೇಶದಲ್ಲಿ ಎಲ್ಲಿ ನೋಡಿದ್ರೂ ಸುಳ್ಳು,+ ಕೊಲೆ,+
ಸುಳ್ಳಾಣೆ, ಕಳ್ಳತನ, ವ್ಯಭಿಚಾರನೇ+ ತುಂಬಿ ತುಳುಕ್ತಿದೆ,
ಒಂದ್ರ ಮೇಲೆ ಒಂದು ಕೊಲೆ ಆಗ್ತಾ ಇದೆ.+
3 ಹಾಗಾಗಿ ದೇಶ ದುಃಖದಲ್ಲಿ ಮುಳುಗಿಹೋಗುತ್ತೆ,+
ದೇಶದ ಎಲ್ಲ ಜನ್ರು ಸೊರಗಿ ಸಾಯೋ ಸ್ಥಿತಿಗೆ ಬರ್ತಾರೆ,
ಕಾಡುಪ್ರಾಣಿಗಳೂ ಪಕ್ಷಿಗಳೂ ನಾಶವಾಗಿ ಹೋಗುತ್ತೆ,
ಅಷ್ಟೇ ಅಲ್ಲ ಸಮುದ್ರದ ಮೀನುಗಳೂ ಸತ್ತು ಹೋಗುತ್ತೆ.
4 “ಆದ್ರೂ ಯಾರೂ ನಿಮ್ಮ ಜೊತೆ ವಾದಿಸದಿರಲಿ, ಯಾರೂ ನಿಮ್ಮನ್ನ ಖಂಡಿಸದಿರಲಿ,+
ಯಾಕಂದ್ರೆ ನೀವು ಹಠಮಾರಿಗಳು, ಪುರೋಹಿತನ ಜೊತೆ ಹೋರಾಡುವವ್ರ ತರ ಇದ್ದೀರ.+
5 ಹಾಗಾಗಿ ರಾತ್ರಿಯಲ್ಲಿ ಎಡವಿಬೀಳೋ ಹಾಗೆ ಹಾಡುಹಗಲಲ್ಲೇ ಎಡವಿಬೀಳ್ತೀರ,
ಪ್ರವಾದಿ ಕೂಡ ನಿಮ್ಮ ಜೊತೆ ಎಡವಿಬೀಳ್ತಾನೆ.
ನಿಮ್ಮ ತಾಯಿಯ ಉಸಿರನ್ನ ನಿಲ್ಲಿಸಿಬಿಡ್ತೀನಿ.*
6 ನನ್ನ ಜನ ನನ್ನ ಬಗ್ಗೆ ಜ್ಞಾನ ಪಡ್ಕೊಳ್ಳದೇ ಹೋದದ್ರಿಂದ
ನಾನು ಅವ್ರ ಉಸಿರು ನಿಲ್ಲಿಸಿಬಿಡ್ತೀನಿ.*
ಅವರು ನನ್ನ ಜ್ಞಾನವನ್ನ ಬೇಡ ಅಂತ ತಳ್ಳಿಬಿಟ್ಟಿದ್ರಿಂದ+
ನೀವು ಪುರೋಹಿತರಾಗಿ ನನ್ನ ಸೇವೆ ಮಾಡದ ಹಾಗೆ ನಾನೂ ನಿಮ್ಮನ್ನ ತಳ್ಳಿಬಿಡ್ತೀನಿ,
ನಿಮ್ಮ ದೇವರಾಗಿರೋ ನನ್ನ ನಿಯಮಗಳನ್ನ* ನೀವು ಮರೆತು ಹೋಗಿದ್ರಿಂದ+
ನಾನು ನಿಮ್ಮ ಮಕ್ಕಳನ್ನ ಮರೆತುಬಿಡ್ತೀನಿ.
7 ಅವ್ರ ಸಂಖ್ಯೆ ದಿನೇದಿನೇ ಹೆಚ್ಚಾದ ಹಾಗೆ ನನ್ನ ವಿರುದ್ಧ ಅವರು ಮಾಡೋ ಪಾಪ ಕೂಡ ಹೆಚ್ಚಾಗ್ತಿದೆ.+
ಅವ್ರಿಗೆ ಸನ್ಮಾನಕ್ಕೆ ಬದಲಾಗಿ ಅವಮಾನ ಆಗೋ ತರ ಮಾಡ್ತೀನಿ.*
8 ನನ್ನ ಜನ ಮಾಡೋ ಪಾಪಗಳ ಕಾರಣ ಪುರೋಹಿತರು ಕೊಬ್ಬಿ ಹೋಗಿದ್ದಾರೆ,*
ನನ್ನ ಜನ ತಪ್ಪು ಮಾಡೋಕೆ ಅವರು ದುರಾಶೆಯಿಂದ ಕಾಯ್ತಿದ್ದಾರೆ.
9 ಜನ್ರಿಗೂ ಪುರೋಹಿತರಿಗೂ ಒಂದೇ ಗತಿಯಾಗುತ್ತೆ,
ಅವ್ರೆಲ್ಲರ ಕೆಟ್ಟ ನಡತೆಗಾಗಿ ಅವ್ರಿಗೆ ಶಿಕ್ಷೆ ಕೊಡ್ತೀನಿ,
ಅವರ ನಡತೆಯ ಪ್ರತಿಫಲವನ್ನ ಅವರೇ ಉಣ್ಣೋ ತರ ಮಾಡ್ತೀನಿ.+
10 ಅವರು ತಿಂತಾರೆ, ಆದ್ರೆ ಹೊಟ್ಟೆ ತುಂಬಲ್ಲ.+
ಅವರು ಅನೇಕರ ಜೊತೆ ಲೈಂಗಿಕ ಸಂಬಂಧ* ಇಟ್ಕೊಳ್ತಾರೆ, ಆದ್ರೆ ಮಕ್ಕಳೇ ಆಗಲ್ಲ.+
ಯಾಕಂದ್ರೆ ಯೆಹೋವನಾದ ನನಗೆ ಅವರು ಗೌರವ ತೋರಿಸ್ಲೇ ಇಲ್ಲ.
11 ವೇಶ್ಯಾವಾಟಿಕೆ, ಹಳೇ ದ್ರಾಕ್ಷಾಮದ್ಯ ಮತ್ತು ಹೊಸ ದ್ರಾಕ್ಷಾಮದ್ಯ
12 ನನ್ನ ಜನ ಮರದ ಮೂರ್ತಿಗಳ ಹತ್ರ ಮಾರ್ಗದರ್ಶನ ಕೇಳ್ತಾರೆ,
ಅವ್ರ ಕೋಲು* ಹೇಳಿದ ಹಾಗೆ ಮಾಡ್ತಾರೆ,
ವೇಶ್ಯಾವಾಟಿಕೆ ಮಾಡೋ ಮನಸ್ಸು ಅವ್ರನ್ನ ದಾರಿ ತಪ್ಪೋ ತರ ಮಾಡೋದ್ರಿಂದ,
ಅವರು ವೇಶ್ಯಾವಾಟಿಕೆ ಮಾಡಿ ತಮ್ಮ ದೇವರಾದ ನನಗೆ ಅಧೀನರಾಗೋಕೆ ಒಪ್ತಿಲ್ಲ.
13 ಪರ್ವತಗಳ ಮೇಲೆ ಅವರು ಬಲಿಗಳನ್ನ ಅರ್ಪಿಸ್ತಾರೆ,+
ಬೆಟ್ಟಗಳ ಮೇಲೆ ಬಲಿಗಳನ್ನ ಅರ್ಪಿಸಿ ಹೊಗೆ ಮೇಲೇರೋ ತರ ಮಾಡ್ತಾರೆ,
ಓಕ್ ಮರ, ಗುಗ್ಗುಳದ ಮರ, ಎಲ್ಲ ದೊಡ್ಡ ಮರಗಳ ಕೆಳಗೆ+
ನೆರಳು ಇರೋದ್ರಿಂದ ಅಲ್ಲಿ ಬಲಿ ಅರ್ಪಿಸ್ತಾರೆ.
ಅದಕ್ಕೇ ನಿಮ್ಮ ಹೆಣ್ಣುಮಕ್ಕಳು ವೇಶ್ಯಾವಾಟಿಕೆ ನಡೆಸ್ತಾರೆ,
ನಿಮ್ಮ ಸೊಸೆಯರು ವ್ಯಭಿಚಾರ ಮಾಡ್ತಾರೆ.
14 ನಿಮ್ಮ ಹೆಣ್ಣು ಮಕ್ಕಳು ವೇಶ್ಯಾವಾಟಿಕೆ ನಡೆಸಿದ್ದಕ್ಕಾಗಿ,
ನಿಮ್ಮ ಸೊಸೆಯರು ವ್ಯಭಿಚಾರ ಮಾಡಿದ್ದಕ್ಕಾಗಿ
ನಾನು ಅವ್ರನ್ನ ಶಿಕ್ಷಿಸಲ್ಲ.
ಯಾಕಂದ್ರೆ ಗಂಡಸ್ರು ವೇಶ್ಯೆಯರ ಜೊತೆ ಹೋಗ್ತಾರೆ,
ದೇವಸ್ಥಾನದ ವೇಶ್ಯೆಯರ ಜೊತೆ* ಬಲಿ ಅರ್ಪಿಸ್ತಾರೆ.
ತಿಳುವಳಿಕೆಯಿಲ್ಲದ ಈ ಜನ+ ನಾಶವಾಗಿ ಹೋಗ್ತಾರೆ.
16 ಹಠಮಾರಿ ಹಸುವಿನ ತರ ಇಸ್ರಾಯೇಲ್ ಹಠಮಾರಿ ಆಗಿದೆ,+
ಹೀಗಿರುವಾಗ ಗಂಡು ಕುರಿಮರಿಯನ್ನ ವಿಶಾಲ ಹುಲ್ಲುಗಾವಲಲ್ಲಿ ಮೇಯಿಸೋ ತರ
ಯೆಹೋವ ಅವನನ್ನ ಮೇಯಿಸ್ತಾನಾ?
17 ಎಫ್ರಾಯೀಮನು ಮೂರ್ತಿಗಳ ಜೊತೆ ಅಂಟ್ಕೊಂಡಿದ್ದಾನೆ.+
ಅವನನ್ನ ಬಿಟ್ಟುಬಿಡು!
ಅವನ ಪ್ರಭುಗಳಿಗೆ ಅವಮಾನನೇ ತುಂಬ ಇಷ್ಟ.+
19 ಸುಂಟರಗಾಳಿ ಅವನನ್ನ ತನ್ನ ರೆಕ್ಕೆಗಳಲ್ಲಿ ಸುತ್ಕೊಂಡು ಹೋಗುತ್ತೆ,
ತಾನು ಬಲಿಗಳನ್ನ ಅರ್ಪಿಸಿದ್ದಕ್ಕಾಗಿ ಅವನಿಗೇ ನಾಚಿಕೆಯಾಗುತ್ತೆ.”