ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಜನ್ರ ಗುಂಪಿನ ಮುಂದೆ ಪೌಲನ ತರ್ಕ (1-21)

      • ಪೌಲ ತನ್ನ ರೋಮ್‌ ಪ್ರಜೆ ಹಕ್ಕನ್ನ ಬಳಸಿದ (22-29)

      • ಹಿರೀಸಭೆ ಸೇರಿಬಂತು (30)

ಅ. ಕಾರ್ಯ 22:1

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 1:7

ಅ. ಕಾರ್ಯ 22:3

ಮಾರ್ಜಿನಲ್ ರೆಫರೆನ್ಸ್

  • +ರೋಮ 11:1
  • +ಅಕಾ 21:39
  • +ಅಕಾ 5:34
  • +ಅಕಾ 26:4, 5
  • +ಗಲಾ 1:14; ಫಿಲಿ 3:4-6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1996, ಪು. 26-29

ಅ. ಕಾರ್ಯ 22:4

ಮಾರ್ಜಿನಲ್ ರೆಫರೆನ್ಸ್

  • +ಅಕಾ 8:3; 9:1, 2; 26:9-11; 1ತಿಮೊ 1:12, 13

ಅ. ಕಾರ್ಯ 22:6

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:3-8; 26:13-15

ಅ. ಕಾರ್ಯ 22:10

ಮಾರ್ಜಿನಲ್ ರೆಫರೆನ್ಸ್

  • +ಅಕಾ 26:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2012, ಪು. 28

ಅ. ಕಾರ್ಯ 22:13

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:17, 18

ಅ. ಕಾರ್ಯ 22:14

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 9:1; 15:8; ಗಲಾ 1:15, 16

ಅ. ಕಾರ್ಯ 22:15

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:11; 26:16

ಅ. ಕಾರ್ಯ 22:16

ಮಾರ್ಜಿನಲ್ ರೆಫರೆನ್ಸ್

  • +ಅಕಾ 10:43
  • +1ಕೊರಿಂ 6:11; 1ಯೋಹಾ 1:7; ಪ್ರಕ 1:5

ಅ. ಕಾರ್ಯ 22:17

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:26; ಗಲಾ 1:18

ಅ. ಕಾರ್ಯ 22:18

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:28, 29

ಅ. ಕಾರ್ಯ 22:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 8:3

ಅ. ಕಾರ್ಯ 22:20

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:58; 8:1; 1ತಿಮೊ 1:13, 15

ಅ. ಕಾರ್ಯ 22:21

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:15; 13:2; ರೋಮ 1:5; 11:13; ಗಲಾ 2:7; 1ತಿಮೊ 2:7

ಅ. ಕಾರ್ಯ 22:23

ಮಾರ್ಜಿನಲ್ ರೆಫರೆನ್ಸ್

  • +2ಸಮು 16:13

ಅ. ಕಾರ್ಯ 22:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2001, ಪು. 21-22

    2/1/1991, ಪು. 14

ಅ. ಕಾರ್ಯ 22:25

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:37, 38; 23:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2001, ಪು. 22

ಅ. ಕಾರ್ಯ 22:28

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 184

ಅ. ಕಾರ್ಯ 22:29

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:16

ಅ. ಕಾರ್ಯ 22:30

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:17, 18; ಲೂಕ 21:12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 22:1ಫಿಲಿ 1:7
ಅ. ಕಾ. 22:3ರೋಮ 11:1
ಅ. ಕಾ. 22:3ಅಕಾ 21:39
ಅ. ಕಾ. 22:3ಅಕಾ 5:34
ಅ. ಕಾ. 22:3ಅಕಾ 26:4, 5
ಅ. ಕಾ. 22:3ಗಲಾ 1:14; ಫಿಲಿ 3:4-6
ಅ. ಕಾ. 22:4ಅಕಾ 8:3; 9:1, 2; 26:9-11; 1ತಿಮೊ 1:12, 13
ಅ. ಕಾ. 22:6ಅಕಾ 9:3-8; 26:13-15
ಅ. ಕಾ. 22:10ಅಕಾ 26:16
ಅ. ಕಾ. 22:13ಅಕಾ 9:17, 18
ಅ. ಕಾ. 22:141ಕೊರಿಂ 9:1; 15:8; ಗಲಾ 1:15, 16
ಅ. ಕಾ. 22:15ಅಕಾ 23:11; 26:16
ಅ. ಕಾ. 22:16ಅಕಾ 10:43
ಅ. ಕಾ. 22:161ಕೊರಿಂ 6:11; 1ಯೋಹಾ 1:7; ಪ್ರಕ 1:5
ಅ. ಕಾ. 22:17ಅಕಾ 9:26; ಗಲಾ 1:18
ಅ. ಕಾ. 22:18ಅಕಾ 9:28, 29
ಅ. ಕಾ. 22:19ಅಕಾ 8:3
ಅ. ಕಾ. 22:20ಅಕಾ 7:58; 8:1; 1ತಿಮೊ 1:13, 15
ಅ. ಕಾ. 22:21ಅಕಾ 9:15; 13:2; ರೋಮ 1:5; 11:13; ಗಲಾ 2:7; 1ತಿಮೊ 2:7
ಅ. ಕಾ. 22:232ಸಮು 16:13
ಅ. ಕಾ. 22:25ಅಕಾ 16:37, 38; 23:27
ಅ. ಕಾ. 22:28ಅಕಾ 16:37
ಅ. ಕಾ. 22:29ಅಕಾ 25:16
ಅ. ಕಾ. 22:30ಮತ್ತಾ 10:17, 18; ಲೂಕ 21:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 22:1-30

ಅಪೊಸ್ತಲರ ಕಾರ್ಯ

22 “ನನ್ನ ಸಹೋದರರೇ ಮತ್ತು ಅಪ್ಪಂದಿರೇ, ನಾನು ಹೇಳೋದನ್ನ ಕೇಳಿಸ್ಕೊಳ್ಳಿ.”+ 2 ಪೌಲ ತಮ್ಮ ಜೊತೆ ಹೀಬ್ರು ಭಾಷೆಯಲ್ಲಿ ಮಾತಾಡೋದನ್ನ ಕೇಳಿ ಅವ್ರೆಲ್ಲ ಸುಮ್ಮನಾದ್ರು. ಆಗ ಪೌಲ ಹೀಗಂದ 3 “ನಾನೊಬ್ಬ ಯೆಹೂದಿ.+ ನಾನು ಹುಟ್ಟಿದ್ದು ಕಿಲಿಕ್ಯದ ತಾರ್ಸದಲ್ಲಿ.+ ಆದ್ರೆ ಈ ಪಟ್ಟಣದಲ್ಲೇ ಗಮಲಿಯೇಲನ+ ಹತ್ರ ಶಿಕ್ಷಣ ಪಡ್ಕೊಂಡೆ. ನಮ್ಮ ಪೂರ್ವಜರು ಪಾಲಿಸ್ತಿದ್ದ ನಿಯಮ ಪುಸ್ತಕದಲ್ಲಿ ಇರೋ ಪ್ರಕಾರ ನಡಿಬೇಕಂತ ನಂಗೆ ಕಲಿಸಿದ್ರು.+ ದೇವ್ರ ಸೇವೆ ಕಡೆ ನೀವೀಗ ತೋರಿಸ್ತಾ ಇರೋ ಹುರುಪನ್ನ ನಾನೂ ತೋರಿಸಿದೆ.+ 4 ‘ದೇವ್ರ ಮಾರ್ಗಕ್ಕೆ’ ಸೇರಿದ ಗಂಡಸರನ್ನ ಹೆಂಗಸರನ್ನ ಹಿಡಿದು ಜೈಲಿಗೆ ಹಾಕಿದೆ. ಅವ್ರಿಗೆ ಹಿಂಸೆ ಕೊಟ್ಟೆ, ಅವ್ರನ್ನ ಕೊಲ್ಲೋಕೂ ಹಿಂದೆಮುಂದೆ ನೋಡಲಿಲ್ಲ.+ 5 ಈ ವಿಷ್ಯ ಮಹಾ ಪುರೋಹಿತನಿಗೂ ಹಿರಿಯರ ಇಡೀ ಸಭೆಗೂ ಗೊತ್ತು. ಅಷ್ಟೇ ಅಲ್ಲ ದಮಸ್ಕದಲ್ಲಿ ‘ದೇವ್ರ ಮಾರ್ಗಕ್ಕೆ’ ಸೇರಿದ ಜನ್ರನ್ನ ಹಿಡಿದು ಯೆರೂಸಲೇಮಿಗೆ ಎಳ್ಕೊಂಡು ಬಂದು ಶಿಕ್ಷೆ ಕೊಡೋಕೆ ಅನುಮತಿ ಪಡ್ಕೊಂಡೆ. ಆ ಪತ್ರ ತಗೊಂಡು ದಮಸ್ಕದಲ್ಲಿದ್ದ ಯೆಹೂದ್ಯರ ಹತ್ರ ಹೊರಟೆ.

6 “ಆದ್ರೆ ನಾನು ಪ್ರಯಾಣ ಮಾಡ್ತಾ ದಮಸ್ಕದ ಹತ್ರ ಬಂದಾಗ ಸುಮಾರು ಮಧ್ಯಾಹ್ನದ ಸಮಯ ಆಗಿತ್ತು. ಆಗ ತಟ್ಟನೆ ಆಕಾಶದಿಂದ ತುಂಬ ಬೆಳಕು ನನ್ನ ಸುತ್ತಲೂ ಬಂತು.+ 7 ನಾನು ನೆಲಕ್ಕೆ ಬಿದ್ದೆ. ಆಗ ‘ಸೌಲ, ಸೌಲ, ನಂಗೆ ಯಾಕೆ ಹಿಂಸೆ ಕೊಡ್ತಾ ಇದ್ದೀಯ?’ ಅನ್ನೋ ಧ್ವನಿ ಕೇಳಿಸ್ತು. 8 ಅದಕ್ಕೆ ನಾನು ‘ಪ್ರಭು, ನೀನ್ಯಾರು?’ ಅಂತ ಕೇಳಿದೆ. ಆಗ ಆತನು ‘ನೀನು ಹಿಂಸೆ ಕೊಡ್ತಾ ಇರೋ ನಜರೇತಿನ ಯೇಸು’ ಅಂದನು. 9 ನನ್ನ ಜೊತೆ ಇದ್ದವ್ರಿಗೂ ಆ ಬೆಳಕು ಕಾಣಿಸ್ತು. ಆದ್ರೆ ಅವ್ರಿಗೆ ನನ್ನ ಜೊತೆ ಮಾತಾಡ್ತಿದ್ದವನ ಸ್ವರ ಕೇಳಿಸಲಿಲ್ಲ. 10 ಆಗ ನಾನು ‘ಪ್ರಭು, ನಾನೇನು ಮಾಡಬೇಕು?’ ಅಂತ ಕೇಳಿದೆ. ಅದಕ್ಕೆ ಪ್ರಭು ‘ನೀನು ದಮಸ್ಕಕ್ಕೆ ಹೋಗು. ನೀನೇನು ಮಾಡಬೇಕು ಅಂತ ಒಬ್ಬ ವ್ಯಕ್ತಿ ಅಲ್ಲಿಗೆ ಬಂದು ನಿನಗೆ ಹೇಳ್ತಾನೆ’+ ಅಂದನು. 11 ಆ ಬೆಳಕು ತುಂಬ ಮಿಂಚ್ತಾ ಇದ್ದಿದ್ರಿಂದ ಆಮೇಲೆ ನಂಗೆ ಏನೂ ಕಾಣಿಸದೆ ಹೋಯ್ತು. ಹಾಗಾಗಿ ನನ್ನ ಜೊತೆ ಇದ್ದವರು ನನ್ನ ಕೈ ಹಿಡಿದು ದಮಸ್ಕಕ್ಕೆ ಕರ್ಕೊಂಡು ಹೋದ್ರು.

12 “ಅಲ್ಲಿ ಅನನೀಯ ಅನ್ನೋ ವ್ಯಕ್ತಿ ನನ್ನ ಹತ್ರ ಬಂದ. ಅವನು ನಿಯಮ ಪುಸ್ತಕದಲ್ಲಿ ಇರೋದನ್ನ ತಪ್ಪದೆ ಪಾಲಿಸ್ತಿದ್ದ. ಅಲ್ಲಿದ್ದ ಎಲ್ಲ ಯೆಹೂದ್ಯರಿಗೆ ಅವನ ಬಗ್ಗೆ ಒಳ್ಳೇ ಅಭಿಪ್ರಾಯ ಇತ್ತು. 13 ಅವನು ನನ್ನ ಪಕ್ಕದಲ್ಲಿ ನಿಂತು ‘ಸಹೋದರ ಸೌಲ, ನಿಂಗೆ ಕಣ್ಣು ಕಾಣೋ ತರ ಆಗಲಿ!’ ಅಂದ. ತಕ್ಷಣ ನಂಗೆ ಕಣ್ಣು ಕಾಣಿಸ್ತು, ನಾನು ಅವನನ್ನ ನೋಡಿದೆ.+ 14 ಆಗ ಅವನು ನಂಗೆ ‘ನೀನು ದೇವ್ರ ಇಷ್ಟವನ್ನ ತಿಳ್ಕೊಬೇಕಂತ, ನೀತಿವಂತ ಯೇಸುವನ್ನ ನೋಡಬೇಕಂತ,+ ಆತನ ಸ್ವರ ಕೇಳಿಸ್ಕೊಬೇಕಂತ ನಮ್ಮ ಪೂರ್ವಜರ ದೇವರು ನಿನ್ನನ್ನ ಆರಿಸ್ಕೊಂಡಿದ್ದಾನೆ. 15 ಯಾಕಂದ್ರೆ ನೀನು ನೋಡಿರೋ ಮತ್ತು ಕೇಳಿರೋ ವಿಷ್ಯಗಳ ಬಗ್ಗೆ ಎಲ್ಲ ಜನ್ರಿಗೆ ಹೇಳೋಕೆ ನಿನ್ನನ್ನ ಯೇಸು ಆರಿಸ್ಕೊಂಡಿದ್ದಾನೆ.+ 16 ಆದ್ರೆ ನೀನು ಯಾವುದಕ್ಕಾಗಿ ಕಾಯ್ತಾ ಇದ್ದೀಯ? ಹೋಗು, ದೀಕ್ಷಾಸ್ನಾನ ಮಾಡಿಸ್ಕೊ. ಆತನ ಹೆಸ್ರಲ್ಲಿ+ ಪ್ರಾರ್ಥನೆ ಮಾಡಿ ನಿನ್ನ ಪಾಪಗಳನ್ನ ತೊಳ್ಕೊ’+ ಅಂದ.

17 “ಆಮೇಲೆ ನಾನು ಯೆರೂಸಲೇಮಿಗೆ+ ವಾಪಸ್‌ ಬಂದು ದೇವಾಲಯದಲ್ಲಿ ಪ್ರಾರ್ಥನೆ ಮಾಡ್ತಾ ಇದ್ದಾಗ ಒಂದು ದರ್ಶನ ಬಂತು. 18 ಅದ್ರಲ್ಲಿ ಪ್ರಭು ನನಗೆ ‘ನೀನು ಬೇಗ ಯೆರೂಸಲೇಮಿಂದ ಹೋಗು. ಯಾಕಂದ್ರೆ ನನ್ನ ಬಗ್ಗೆ ನೀನು ಹೇಳೋದನ್ನ ಅವರು ಒಪ್ಕೊಳ್ಳಲ್ಲ’+ ಅಂದನು. 19 ಅದಕ್ಕೆ ನಾನು ‘ಪ್ರಭು, ನಾನು ಎಲ್ಲ ಸಭಾಮಂದಿರಕ್ಕೆ ಹೋಗಿ ನಿನ್ನ ಮೇಲೆ ನಂಬಿಕೆ ಇಟ್ಟವರನ್ನ ಚಾಟಿಯಿಂದ ಹೊಡೆದು, ಅವ್ರನ್ನ ಜೈಲಿಗೆ ಹಾಕಿಸ್ತಾ ಇದ್ದೆ ಅಂತ ಅವ್ರಿಗೆ ಚೆನ್ನಾಗಿ ಗೊತ್ತು.+ 20 ನಿನ್ನ ಸಾಕ್ಷಿಯಾದ ಸ್ತೆಫನನನ್ನ ಕೊಲ್ತಾ ಇದ್ದಾಗ ನಾನೂ ಅಲ್ಲಿ ನಿಂತು ನೋಡ್ತಾ ಇದ್ದೆ. ಅವರು ಮಾಡಿದ್ದು ನಂಗೂ ಸರಿ ಅನಿಸ್ತು. ಅವನನ್ನ ಕೊಂದವ್ರ ಬಟ್ಟೆಗಳಿಗೆ ನಾನೇ ಕಾವಲಾಗಿದ್ದೆ’+ ಅಂದೆ. 21 ಆದ್ರೂ ಪ್ರಭು ನನಗೆ ‘ನೀನು ಹೋಗು, ನಾನು ನಿನ್ನನ್ನ ದೂರದಲ್ಲಿರೋ ಬೇರೆ ದೇಶಗಳ ಜನ್ರ ಹತ್ರ ಕಳಿಸ್ತೀನಿ’ ಅಂದನು.”+

22 ಪೌಲ ಮಾತಾಡೋ ತನಕ ಅವರು ಸುಮ್ಮನೆ ಕೇಳಿಸ್ಕೊಂಡ್ರು. ಆಮೇಲೆ ಅವರು “ಇವನು ಇನ್ನೊಂದು ಕ್ಷಣನೂ ಬದುಕಿರಬಾರದು. ಇವನು ಸಾಯಬೇಕು!” ಅಂತ ಜೋರಾಗಿ ಕಿರಿಚಿದ್ರು. 23 ಅವರು ಹೀಗೆ ಕೂಗ್ತಾ ತಮ್ಮ ಬಟ್ಟೆಯನ್ನ ಎಲ್ಲಿ ಬೇಕಂದ್ರಲ್ಲಿ ಗಾಳಿಯಲ್ಲಿ ತೂರ್ತಾ ಇದ್ರು.+ ಧೂಳು ಎಬ್ಬಿಸ್ತಾ ಇದ್ರು. 24 ಹಾಗಾಗಿ ಪೌಲನನ್ನ ಸೈನಿಕರು ಉಳ್ಕೊಳ್ಳೋ ಜಾಗಕ್ಕೆ ಕರ್ಕೊಂಡು ಹೋಗೋಕೆ ಸೇನಾಪತಿ ಆಜ್ಞೆ ಕೊಟ್ಟ. ಜನ ಇಷ್ಟು ಗಲಾಟೆ ಮಾಡೋ ತರ ಪೌಲ ಅಂಥದ್ದೇನು ಮಾಡಿದ್ದಾನೆ ಅಂತ ತಿಳ್ಕೊಳ್ಳೋಕೆ ಅವನನ್ನ ಚಾಟಿಯಿಂದ ಹೊಡೆದು ವಿಚಾರಣೆ ಮಾಡೋಕೆ ಸೈನಿಕರಿಗೆ ಹೇಳಿದ. 25 ಆದ್ರೆ ಅವನನ್ನ ಚಾಟಿಯಿಂದ ಹೊಡೆಯೋಕೆ ಕಟ್ಟಿಹಾಕಿದಾಗ ಪೌಲ ಅಲ್ಲೇ ನಿಂತಿದ್ದ ಸೇನಾಧಿಕಾರಿಗೆ “ತಪ್ಪು ಸಾಬೀತಾಗದೆ ಒಬ್ಬ ರೋಮ್‌ ಪ್ರಜೆಯನ್ನ ಚಾಟಿಯಿಂದ ಹೊಡೆಯೋ ಹಕ್ಕು ನಿಮಗಿದ್ಯಾ?”+ ಅಂತ ಕೇಳಿದ. 26 ಸೇನಾಧಿಕಾರಿ ಈ ಮಾತನ್ನ ಕೇಳಿಸ್ಕೊಂಡಾಗ ಸೇನಾಪತಿ ಹತ್ರ ಹೋಗಿ “ನೀನೇನು ಮಾಡಬೇಕಂತ ಅಂದ್ಕೊಂಡಿದ್ದೀಯಾ? ಇವನು ರೋಮಿನ ಪ್ರಜೆ” ಅಂದ. 27 ಆಗ ಆ ಸೇನಾಪತಿ ಪೌಲನ ಹತ್ರ ಬಂದು “ಹೇಳು, ನೀನು ರೋಮಿನ ಪ್ರಜೆನಾ?” ಅಂತ ಕೇಳಿದ. ಅದಕ್ಕೆ ಪೌಲ “ಹೌದು” ಅಂದ. 28 ಆಗ ಸೇನಾಪತಿ “ನಾನು ತುಂಬ ಹಣ ಕೊಟ್ಟು ರೋಮಿನ ಪ್ರಜೆ ಆಗಿದ್ದೀನಿ” ಅಂದ. ಅದಕ್ಕೆ ಪೌಲ “ಆದ್ರೆ ನಾನು ಹುಟ್ಟಿದಾಗಿನಿಂದ ರೋಮಿನ ಪ್ರಜೆ”+ ಅಂದ.

29 ಆಗ ಅವನನ್ನ ಹೊಡೆದು ವಿಚಾರಣೆ ಮಾಡಬೇಕಂತ ಇದ್ದವರು ತಕ್ಷಣ ಹಿಂದೆ ಹೋದ್ರು. ಪೌಲ ರೋಮಿನ ಪ್ರಜೆ ಅಂತ ಸೇನಾಪತಿಗೆ ಗೊತ್ತಾದಾಗ ಪೌಲನಿಗೆ ಬೇಡಿ ಹಾಕಿ ಬಂಧಿಸಿದ್ದನ್ನ ನೆನಸಿ ಅವನಿಗೆ ಭಯ ಆಯ್ತು.+

30 ಹಾಗಾಗಿ ಯೆಹೂದ್ಯರು ಯಾಕೆ ಅವನ ಮೇಲೆ ಆರೋಪ ಹಾಕಿದ್ದಾರೆ ಅನ್ನೋದನ್ನ ತಿಳ್ಕೊಬೇಕು ಅಂತ ಸೇನಾಪತಿ ಅಂದ್ಕೊಂಡ. ಅದಕ್ಕೆ ಮಾರನೇ ದಿನ ಅವನು ಪೌಲನಿಗೆ ಹಾಕಿಸಿದ್ದ ಬೇಡಿಗಳನ್ನ ಬಿಚ್ಚಿಸಿದ. ಮುಖ್ಯ ಪುರೋಹಿತರನ್ನ ಮತ್ತು ಹಿರೀಸಭೆಯವ್ರನ್ನೆಲ್ಲ ಬರೋಕೆ ಹೇಳಿದ. ಪೌಲನನ್ನ ಕರ್ಕೊಂಡು ಬಂದು ಅವ್ರ ಮಧ್ಯ ನಿಲ್ಲಿಸಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ