ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೆಹೆಮೀಯ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನೆಹೆಮೀಯ ಮುಖ್ಯಾಂಶಗಳು

      • ಶೋಷಣೆಯನ್ನ ನೆಹೆಮೀಯ ತಡೆದ (1-13)

      • ನೆಹೆಮೀಯನ ನಿಸ್ವಾರ್ಥತೆ (14-19)

ನೆಹೆಮೀಯ 5:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:9

ನೆಹೆಮೀಯ 5:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:15, 33; ನೆಹೆ 9:36, 37

ನೆಹೆಮೀಯ 5:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:7; ಧರ್ಮೋ 15:12

ನೆಹೆಮೀಯ 5:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:25; ಧರ್ಮೋ 23:19; ಕೀರ್ತ 15:5; ಯೆಹೆ 22:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2006, ಪು. 9

ನೆಹೆಮೀಯ 5:8

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:35; ಧರ್ಮೋ 15:7, 8; ಯೆರೆ 34:8, 9

ನೆಹೆಮೀಯ 5:9

ಪಾದಟಿಪ್ಪಣಿ

  • *

    ಅಕ್ಷ. “ನಮ್ಮ ದೇವರ ಭಯದಲ್ಲಿ ನಡಿರಿ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:36; ನೆಹೆ 5:15

ನೆಹೆಮೀಯ 5:10

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 18:5, 8

ನೆಹೆಮೀಯ 5:11

ಪಾದಟಿಪ್ಪಣಿ

  • *

    ಅಕ್ಷ. “ನೂರರಲ್ಲಿ ಒಂದು ಭಾಗ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 5:3

ನೆಹೆಮೀಯ 5:13

ಪಾದಟಿಪ್ಪಣಿ

  • *

    ಅಥವಾ “ಒದರಿ, ಕೊಡವಿ.”

  • *

    ಅಕ್ಷ. “ಆಮೆನ್‌.”

ನೆಹೆಮೀಯ 5:14

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 8:1
  • +ನೆಹೆ 2:1
  • +ನೆಹೆ 10:1
  • +ನೆಹೆ 13:6
  • +1ಕೊರಿಂ 9:14, 15; 2ಥೆಸ 3:8

ನೆಹೆಮೀಯ 5:15

ಪಾದಟಿಪ್ಪಣಿ

  • *

    ಒಂದು ಶೆಕೆಲ್‌=11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ನೆಹೆ 5:9
  • +2ಕೊರಿಂ 11:9; 12:14

ನೆಹೆಮೀಯ 5:16

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:33; 2ಕೊರಿಂ 12:17

ನೆಹೆಮೀಯ 5:18

ಪಾದಟಿಪ್ಪಣಿ

  • *

    ಅಥವಾ “ನನ್ನ ಹಣದಿಂದ.”

ನೆಹೆಮೀಯ 5:19

ಪಾದಟಿಪ್ಪಣಿ

  • *

    ಅಥವಾ “ನಂಗೆ ಒಳ್ಳೇದು ಮಾಡು.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 13:14; ಕೀರ್ತ 18:24; ಯೆಶಾ 38:3; ಮಲಾ 3:16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನೆಹೆ. 5:1ಧರ್ಮೋ 15:9
ನೆಹೆ. 5:4ಧರ್ಮೋ 28:15, 33; ನೆಹೆ 9:36, 37
ನೆಹೆ. 5:5ವಿಮೋ 21:7; ಧರ್ಮೋ 15:12
ನೆಹೆ. 5:7ವಿಮೋ 22:25; ಧರ್ಮೋ 23:19; ಕೀರ್ತ 15:5; ಯೆಹೆ 22:12
ನೆಹೆ. 5:8ಯಾಜ 25:35; ಧರ್ಮೋ 15:7, 8; ಯೆರೆ 34:8, 9
ನೆಹೆ. 5:9ಯಾಜ 25:36; ನೆಹೆ 5:15
ನೆಹೆ. 5:10ಯೆಹೆ 18:5, 8
ನೆಹೆ. 5:11ನೆಹೆ 5:3
ನೆಹೆ. 5:14ಎಜ್ರ 8:1
ನೆಹೆ. 5:14ನೆಹೆ 2:1
ನೆಹೆ. 5:14ನೆಹೆ 10:1
ನೆಹೆ. 5:14ನೆಹೆ 13:6
ನೆಹೆ. 5:141ಕೊರಿಂ 9:14, 15; 2ಥೆಸ 3:8
ನೆಹೆ. 5:15ನೆಹೆ 5:9
ನೆಹೆ. 5:152ಕೊರಿಂ 11:9; 12:14
ನೆಹೆ. 5:16ಅಕಾ 20:33; 2ಕೊರಿಂ 12:17
ನೆಹೆ. 5:19ನೆಹೆ 13:14; ಕೀರ್ತ 18:24; ಯೆಶಾ 38:3; ಮಲಾ 3:16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನೆಹೆಮೀಯ 5:1-19

ನೆಹೆಮೀಯ

5 ಆಮೇಲೆ ಕೆಲವು ಗಂಡಸ್ರು, ಅವ್ರ ಹೆಂಡತಿಯರು ಜೋರಾಗಿ ಕೂಗ್ತಾ ತಮ್ಮ ಸಹೋದರರಾದ ಯೆಹೂದ್ಯರನ್ನ ಬೈಯ್ತಿದ್ರು.+ 2 “ನಮಗೆ ತುಂಬ ಮಕ್ಕಳಿದ್ದಾರೆ. ಜೀವದಿಂದ ಇರಬೇಕಾದ್ರೆ ಸ್ವಲ್ಪವಾದ್ರೂ ಊಟ ಬೇಕು” ಅಂತ ಕೆಲವರು ಹೇಳ್ತಿದ್ರು. 3 ಇನ್ನು ಕೆಲವರು “ಬರಗಾಲದ ಸಮಯದಲ್ಲಿ ಊಟಕ್ಕಾಗಿ ನಮ್ಮ ಹೊಲ ದ್ರಾಕ್ಷಿತೋಟ ಮನೆಗಳನ್ನ ಅಡ ಇಡಬೇಕಾಗ್ತಿದೆ” ಅಂತಿದ್ರು. 4 ಮತ್ತೆ ಕೆಲವರು “ರಾಜನಿಗೆ ಕಪ್ಪ ಕೊಡೋಕೆ ನಮ್ಮ ಹೊಲ ದ್ರಾಕ್ಷಿತೋಟ ಅಡ ಇಟ್ಟು ಸಾಲ ತಗೊಬೇಕಾಯ್ತು.+ 5 ನಮ್ಮಲ್ಲಿ, ನಮ್ಮ ಸಹೋದರರಲ್ಲಿ ಹರಿತಿರೋ ರಕ್ತ ಒಂದೇ. ನಮ್ಮ ಮಕ್ಕಳು, ಅವ್ರ ಮಕ್ಕಳು ಬೇರೆ ಅಲ್ಲ. ಆದ್ರೂ ನಮ್ಮ ಮಕ್ಕಳನ್ನ ಗುಲಾಮಗಿರಿ ಮಾಡೋಕೆ ಕಳಿಸಬೇಕಾಗಿದೆ. ನಮ್ಮ ಹೆಣ್ಣು ಮಕ್ಕಳಲ್ಲಿ ಕೆಲವರು ಈಗಾಗ್ಲೇ ಗುಲಾಮರಾಗಿದ್ದಾರೆ.+ ಆದ್ರೆ ಇದನ್ನೆಲ್ಲ ನಿಲ್ಲಿಸೋ ಶಕ್ತಿ ನಮಗೆ ಇಲ್ಲ. ನಮ್ಮ ಹೊಲ ದ್ರಾಕ್ಷಿತೋಟ ಈಗ ಬೇರೆಯವ್ರ ಸೊತ್ತು” ಅಂದ್ರು.

6 ಅವ್ರ ಈ ಪಾಡು ನೋಡಿ ನನಗೆ ತುಂಬ ಕೋಪ ಬಂತು. 7 ಆ ಸಮಸ್ಯೆ ಬಗ್ಗೆ ತುಂಬ ಯೋಚ್ನೆ ಮಾಡ್ದೆ. ಪ್ರಧಾನರಿಗೆ, ಉಪಾಧಿಪತಿಗಳಿಗೆ, “ನಿಮ್ಮಲ್ಲಿ ಪ್ರತಿಯೊಬ್ರು ನಿಮ್ಮ ಸ್ವಂತ ಸಹೋದರನಿಂದ ಬಡ್ಡಿ ವಸೂಲಿ ಮಾಡ್ತಿದ್ದೀರ, ಸರಿನಾ?”+ ಅಂದೆ.

ಆ ಸಮಸ್ಯೆಯನ್ನ ಪರಿಹರಿಸೋಕೆ ಒಂದು ದೊಡ್ಡ ಸಭೆ ಕರೆದೆ. 8 ಅವ್ರಿಗೆ “ನಮ್ಮ ಯೆಹೂದಿ ಸಹೋದರರನ್ನ ಬೇರೆ ದೇಶಗಳಿಗೆ ಮಾರಲಾಯ್ತು. ನಮ್ಮ ಕೈಲಾಗಿದ್ದೆಲ್ಲ ಮಾಡಿ ಅವ್ರನ್ನ ಅಲ್ಲಿಂದ ಬಿಡಿಸ್ಕೊಂಡು ಬಂದ್ವಿ. ಆದ್ರೆ ಈಗ ನಿಮ್ಮ ಆ ಸ್ವಂತ ಸಹೋದರರನ್ನ ಗುಲಾಮಗಿರಿಗೆ ಮಾರ್ತಾ ಇದ್ದೀರಲ್ಲಾ?+ ಅವ್ರನ್ನ ಬಿಡಿಸ್ಕೊಳ್ಳೋಕೆ ನಿಮಗೂ ಹಣ ಕೊಡಬೇಕಾ?” ಅಂತ ಕೇಳಿದೆ. ಆಗ ಏನೂ ಹೇಳೋಕಾಗದೆ ಸುಮ್ಮನಿದ್ರು. 9 ಆಮೇಲೆ ಅವ್ರಿಗೆ “ನೀವು ಮಾಡ್ತಿರೋದು ಸರಿಯಲ್ಲ. ನಮ್ಮ ದೇವರ ದಾರೀಲಿ ನಡಿರಿ.*+ ಆಗ ಬೇರೆ ಜನಾಂಗದವರು, ನಮ್ಮ ಶತ್ರುಗಳು ನಮಗೆ ಅವಮಾನ ಮಾಡಲ್ಲ. 10 ದಯವಿಟ್ಟು ಬಡ್ಡಿಗಾಗಿ ಸಾಲ ಕೊಡೋದನ್ನ ನಿಲ್ಸಿ.+ ನಾನು, ನನ್ನ ಸಹೋದರರು, ನನ್ನ ಸೇವಕರು ಹಣವನ್ನ, ದವಸಧಾನ್ಯವನ್ನ ಬಡ್ಡಿ ತಗೊಳ್ಳದೆ ನಮ್ಮ ಯೆಹೂದಿ ಸಹೋದರರಿಗೆ ಕೊಡ್ತಿದ್ದೀವಿ. 11 ಇವತ್ತೇ ನಿಮ್ಮ ಸಹೋದರರ ಹೊಲ ದ್ರಾಕ್ಷಿತೋಟ ಆಲಿವ್‌ ತೋಟ ಅವ್ರ ಮನೆಗಳನ್ನ ವಾಪಸ್‌ ಕೊಡಿ.+ ಈಗಾಗ್ಲೇ ಅವ್ರಿಂದ ಬಡ್ಡಿಯ ಲೆಕ್ಕದಲ್ಲಿ* ವಸೂಲಿ ಮಾಡಿರೋ ಹಣ, ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ವಾಪಸ್‌ ಕೊಡಿ” ಅಂದೆ.

12 ಅದಕ್ಕೆ ಅವರು “ಅವ್ರಿಂದ ತಗೊಂಡಿರೋ ಎಲ್ಲವನ್ನ ವಾಪಸ್‌ ಕೊಡ್ತೀವಿ. ಅವ್ರಿಂದ ಏನನ್ನೂ ಕೇಳಲ್ಲ. ನೀನು ಹೇಳಿದಾಗೇ ಮಾಡ್ತೀವಿ” ಅಂದ್ರು. ಆಗ ನಾನು ಪುರೋಹಿತರನ್ನ ಕರೆದು ಕೊಟ್ಟ ಮಾತಿನ ಪ್ರಕಾರ ನಡ್ಕೊಬೇಕು ಅಂತ ಆ ಗಂಡಸ್ರಿಂದ ಆಣೆ ಮಾಡಿಸಿದೆ. 13 ಜೊತೆಗೆ ನನ್ನ ಬಟ್ಟೆಯನ್ನ ಝಾಡಿಸಿ* “ಈ ಮಾತಿನ ತರ ನಡೆಯದ ಮನುಷ್ಯನನ್ನ ಸತ್ಯ ದೇವರು ಅವನ ಮನೆಯಿಂದ, ಅವನ ಆಸ್ತಿಯಿಂದ ದೂರಮಾಡ್ಲಿ. ನಾನು ಝಾಡಿಸಿದ ಹಾಗೆ ದೇವರು ಅವನನ್ನ ಝಾಡಿಸಿ ಅವನ ಹತ್ರ ಏನೂ ಇಲ್ಲದ ಹಾಗೆ ಮಾಡ್ಲಿ” ಅಂದೆ. ಅದಕ್ಕೆ ಇಡೀ ಸಭೆ “ಹಾಗೇ ಆಗ್ಲಿ”* ಅಂತ ಹೇಳಿದ್ರು. ಆಮೇಲೆ ಅವರು ಯೆಹೋವನನ್ನ ಹೊಗಳಿದ್ರು, ಕೊಟ್ಟ ಮಾತಿನ ಹಾಗೆ ನಡ್ಕೊಂಡ್ರು.

14 ರಾಜ ಅರ್ತಷಸ್ತ+ ಆಳ್ತಿದ್ದ 20ನೇ ವರ್ಷದಲ್ಲಿ+ ನನ್ನನ್ನ ಯೆಹೂದ ಪ್ರದೇಶದ ಮೇಲೆ ರಾಜ್ಯಪಾಲನಾಗಿ ನೇಮಿಸಿದ.+ ಅವನು ಆಳ್ತಿದ್ದ 32ನೇ ವರ್ಷದ+ ತನಕ ನಾನು ಯೆಹೂದದ ರಾಜ್ಯಪಾಲನಾಗಿ ಕೆಲಸ ಮಾಡ್ದೆ. ಆದ್ರೆ ಆ 12 ವರ್ಷಗಳಲ್ಲಿ ನಾನಾಗ್ಲಿ ನನ್ನ ಸಹೋದರರಾಗ್ಲಿ ಯಾವತ್ತೂ ಯೆಹೂದ್ಯರಿಂದ ಆಹಾರಕ್ಕಾಗಿ ತಗಲೋ ಖರ್ಚನ್ನ ಕೇಳಲಿಲ್ಲ. ಅದು ರಾಜ್ಯಪಾಲನ ಹಕ್ಕಾಗಿದ್ರೂ ಅವ್ರಿಂದ ನಾನು ತಗೊಳ್ಳಲಿಲ್ಲ.+ 15 ಆದ್ರೆ ನನಗಿಂತ ಮುಂಚೆ ಇದ್ದ ರಾಜ್ಯಪಾಲರು ಜನ್ರ ಮೇಲೆ ಭಾರ ಹಾಕಿ ಪ್ರತಿದಿನ ಆಹಾರಕ್ಕೆ, ದ್ರಾಕ್ಷಾಮದ್ಯಕ್ಕೆ 40 ಬೆಳ್ಳಿ ಶೆಕೆಲ್‌ಗಳನ್ನ* ವಸೂಲಿ ಮಾಡ್ತಿದ್ರು. ಅವ್ರ ಸೇವಕರು ಜನ್ರ ಮೇಲೆ ದಾಳಿ ಮಾಡ್ತಿದ್ರು. ಆದ್ರೆ ನನ್ನಲ್ಲಿ ದೇವ್ರ ಭಯ ಇದ್ದ ಕಾರಣ+ ಹಾಗೆ ಮಾಡಲಿಲ್ಲ.+

16 ಅಷ್ಟೇ ಅಲ್ಲ ಗೋಡೆ ಕಟ್ಟೋ ಕೆಲ್ಸಕ್ಕೆ ನಾನೂ ಕೈಜೋಡಿಸಿದೆ. ನನ್ನ ಸೇವಕರು ಕೂಡ ಆ ಕೆಲ್ಸದಲ್ಲಿ ಸಹಾಯ ಮಾಡಿದ್ರು. ಆದ್ರೆ ನಮಗಾಗಿ ಒಂದು ಹೊಲ ಕೂಡ ತಗೊಳ್ಳಲಿಲ್ಲ.+ 17 ನನ್ನ ಮೇಜಲ್ಲಿ 150 ಯೆಹೂದ್ಯರು, ಉಪಾಧಿಪತಿಗಳು, ಬೇರೆ ದೇಶಗಳಿಂದ ಬರ್ತಿದ್ದ ಜನ್ರು ಊಟ ಮಾಡ್ತಿದ್ರು. 18 ನಾನು ಆಜ್ಞೆ ಕೊಟ್ಟ ಹಾಗೆನೇ* ಪ್ರತಿದಿನ ಒಂದು ಹೋರಿ ಆರು ದಷ್ಟಪುಷ್ಟ ಕುರಿ ಪಕ್ಷಿಗಳ ಅಡುಗೆ ತಯಾರಾಗ್ತಾ ಇತ್ತು. 10 ದಿನಕ್ಕೊಮ್ಮೆ ಎಲ್ಲ ತರದ ದ್ರಾಕ್ಷಾಮದ್ಯವನ್ನ ಸಾಕಷ್ಟು ಸಿಗೋ ಹಾಗೆ ನೊಡ್ಕೊಳ್ತಿದ್ದೆ. ಆದ್ರೆ ರಾಜ್ಯಪಾಲನಿಗೆ ಸಿಗಬೇಕಾಗಿದ್ದ ಭತ್ಯವನ್ನ ನಾನು ಯಾವತ್ತೂ ಕೇಳಲಿಲ್ಲ. ಯಾಕಂದ್ರೆ ಈಗಾಗ್ಲೇ ಜನ ರಾಜನ ಸೇವೆ ಮಾಡೋದ್ರಲ್ಲಿ ಬೇಸತ್ತು ಹೋಗಿದ್ರು. 19 ನನ್ನ ದೇವರೇ, ಈ ಜನ್ರ ಪರವಾಗಿ ನಾನು ಮಾಡಿರೋ ಒಳ್ಳೇ ಕೆಲಸಗಳನ್ನ ನೆನಪಿಸ್ಕೊಂಡು ಆಶೀರ್ವಾದ ಮಾಡು.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ