ನೆಹೆಮೀಯ
11 ಇಸ್ರಾಯೇಲ್ಯರ ಅಧಿಕಾರಿಗಳು ಯೆರೂಸಲೇಮಲ್ಲಿ ವಾಸಿಸ್ತಿದ್ರು.+ ಆದ್ರೆ ಬೇರೆ ಪಟ್ಟಣಗಳಲ್ಲಿ ನೆಲೆಸಿದ್ದ ಉಳಿದ ಜನ್ರು ಚೀಟು ಹಾಕಿ+ ಪ್ರತಿ 10 ಮನೆತನಗಳಲ್ಲಿ ಯಾವ ಮನೆತನಕ್ಕೆ ಚೀಟು ಬೀಳುತ್ತೋ ಆ ಮನೆತನದವರು ಪವಿತ್ರ ಪಟ್ಟಣವಾದ ಯೆರೂಸಲೇಮಲ್ಲಿ ವಾಸಿಸಬೇಕು, ಉಳಿದ ಒಂಬತ್ತು ಮನೆತನಗಳವರು ಬೇರೆ ಪಟ್ಟಣಗಳಲ್ಲಿ ವಾಸ ಮಾಡಬೇಕು ಅಂತ ನಿರ್ಧರಿಸಿದ್ರು. 2 ಅಷ್ಟೇ ಅಲ್ಲ ಯೆರೂಸಲೇಮಲ್ಲಿ ವಾಸ ಮಾಡೋಕೆ ಅವರಾಗೇ ಮುಂದೆ ಬಂದ ಗಂಡಸ್ರನ್ನೆಲ್ಲ ಜನ ಮನಸಾರೆ ಹೊಗಳಿದ್ರು.
3 ಯೆರೂಸಲೇಮಿಗೆ ಬಂದು ವಾಸಿಸಿದ ಪ್ರಾಂತ್ಯದ ಅಧಿಕಾರಿಗಳು. (ಉಳಿದ ಇಸ್ರಾಯೇಲ್ಯರು, ಪುರೋಹಿತರು, ಲೇವಿಯರು, ಆಲಯದ ಸೇವಕರು*+ ಮತ್ತು ಸೊಲೊಮೋನನ ಸೇವಕರ ಗಂಡು ಮಕ್ಕಳು+ ಯೆಹೂದದ ಬೇರೆ ಪಟ್ಟಣಗಳಲ್ಲಿ ವಾಸಿಸ್ತಿದ್ರು ಅಂದ್ರೆ ಅವರು ತಮಗೆ ಸಿಕ್ಕಿದ್ದ ಪಟ್ಟಣಗಳಲ್ಲಿ ವಾಸಿಸ್ತಿದ್ರು.+
4 ಯೆಹೂದದ ಮತ್ತು ಬೆನ್ಯಾಮೀನಿನ ಕೆಲವು ಜನ್ರು ಯೆರೂಸಲೇಮಲ್ಲಿ ವಾಸಿಸ್ತಿದ್ರು.) ಯೆಹೂದದ ಜನ್ರಿಂದ ಅತಾಯ ಬಂದ. ಇವನು ಉಜ್ಜೀಯನ ಮಗ, ಉಜ್ಜೀಯ ಜೆಕರ್ಯನ ಮಗ, ಜೆಕರ್ಯ ಅಮರ್ಯನ ಮಗ, ಅಮರ್ಯ ಶೆಫಟ್ಯನ ಮಗ, ಶೆಫಟ್ಯ ಮಹಲಲೇಲನ ಮಗ, ಮಹಲಲೇಲ ಪೆರೆಚನ ವಂಶದವನಾಗಿದ್ದ.+ 5 ಅಷ್ಟೇ ಅಲ್ಲ ಮಾಸೇಯ ಬಂದ. ಇವನು ಬಾರೂಕನ ಮಗ, ಬಾರೂಕ ಕೊಲ್ಹೋಜೆಯ ಮಗ, ಕೊಲ್ಹೋಜೆ ಹಜಾಯನ ಮಗ, ಹಜಾಯ ಅದಾಯನ ಮಗ, ಅದಾಯ ಯೋಯಾರೀಬನ ಮಗ, ಯೋಯಾರೀಬ್ ಜೆಕರ್ಯನ ಮಗ, ಜೆಕರ್ಯ ಶೇಲಹನ ವಂಶದವನಾಗಿದ್ದ. 6 ಯೆರೂಸಲೇಮಲ್ಲಿ ವಾಸವಿದ್ದ ಪೆರೆಚನ ವಂಶದವ್ರ ಒಟ್ಟು ಸಂಖ್ಯೆ 468. ಇವ್ರೆಲ್ಲ ವೀರ ಸೈನಿಕರಾಗಿದ್ರು.
7 ಬೆನ್ಯಾಮೀನಿನ ಜನ್ರಿಂದ ಸಲ್ಲು+ ಬಂದ. ಇವನು ಮೆಷುಲ್ಲಾಮನ ಮಗ, ಮೆಷುಲ್ಲಾಮ ಯೋವೇದನ ಮಗ, ಯೋವೇದ ಪೆದಾಯನ ಮಗ, ಪೆದಾಯ ಕೋಲಾಯನ ಮಗ, ಕೋಲಾಯ ಮಾಸೇಯನ ಮಗ, ಮಾಸೇಯ ಈತೀಯೇಲನ ಮಗ, ಈತೀಯೇಲ ಯೆಶಾಯನ ಮಗ. 8 ಅವನಾದ ಮೇಲೆ ಗಬ್ಬಾಯ ಮತ್ತು ಸಲ್ಲೈ ಬಂದ್ರು. ಹೀಗೆ ಒಟ್ಟು 928 ಗಂಡಸ್ರು. 9 ಜಿಕ್ರಿಯ ಮಗ ಯೋವೇಲ ಅವ್ರ ಮೇಲ್ವಿಚಾರಕನಾಗಿದ್ದ. ಹಸ್ಸೆನೂವನ ಮಗ ಯೆಹೂದ ಪಟ್ಟಣದ ಉಪಾಧಿಪತಿ ಆಗಿದ್ದ.
10 ಪುರೋಹಿತರಲ್ಲಿ ಬಂದವರು ಯಾರಂದ್ರೆ: ಯೋಯಾರೀಬನ ಮಗ ಯೆದಾಯ, ಯಾಕೀನ್,+ 11 ಸೆರಾಯ. ಸೆರಾಯ ಹಿಲ್ಕೀಯನ ಮಗ, ಹಿಲ್ಕೀಯ ಮೆಷುಲ್ಲಾಮನ ಮಗ, ಮೆಷುಲ್ಲಾಮ ಚಾದೋಕನ ಮಗ, ಚಾದೋಕ್ ಮೆರಾಯೋತನ ಮಗ, ಮೆರಾಯೋತ ಅಹೀಟೂಬನ+ ಮಗ. ಅಹೀಟೂಬ ಸತ್ಯ ದೇವರ ಆಲಯದ ಮುಖ್ಯಸ್ಥನಾಗಿದ್ದ. 12 ಇವರಲ್ಲದೆ ಆಲಯದ ಕೆಲಸವನ್ನ ಮಾಡಿದ್ದ ಇವ್ರ ಸಹೋದರರು ಯೆರೂಸಲೇಮಿಗೆ ಬಂದ್ರು. ಎಲ್ಲ ಸೇರಿ 822 ಜನ ಇದ್ರು. ಇವ್ರ ಜೊತೆ ಅದಾಯ ಕೂಡ ಬಂದ. ಅದಾಯ ಯೆರೋಹಾಮನ ಮಗ, ಯೆರೋಹಾಮ ಪೆಲಲ್ಯನ ಮಗ, ಪೆಲಲ್ಯ ಅಮ್ಚಿಯ ಮಗ, ಅಮ್ಚಿ ಜೆಕರ್ಯನ ಮಗ, ಜೆಕರ್ಯ ಪಷ್ಹೂರನ+ ಮಗ, ಪಷ್ಹೂರ ಮಲ್ಕೀಯನ ಮಗ. 13 ಅದಾಯನ ಸಹೋದರರು ಕೂಡ ಯೆರೂಸಲೇಮಿಗೆ ಬಂದ್ರು. ಅವ್ರೆಲ್ಲ ಕುಲಗಳ ಮುಖ್ಯಸ್ಥರಾಗಿದ್ರು. ಎಲ್ಲ ಸೇರಿ 242 ಜನ ಇದ್ರು. ಅಮಷಸೈ ಕೂಡ ಬಂದ. ಇವನು ಅಜರೇಲನ ಮಗ, ಅಜರೇಲ್ ಅಹಜೈಯ ಮಗ, ಅಹಜೈ ಮೆಷಿಲ್ಲೇಮೋತನ ಮಗ, ಮೆಷಿಲ್ಲೇಮೋತ್ ಇಮ್ಮೇರನ ಮಗ. 14 ಅಮಷಸೈ ಜೊತೆಗೆ ಅವನ ಸಹೋದರರು ಕೂಡ ಯೆರೂಸಲೇಮಿಗೆ ಬಂದ್ರು. ಅವರು ಬಲಶಾಲಿಗಳು, ಧೈರ್ಯವಂತರು ಆಗಿದ್ರು. ಎಲ್ಲ ಸೇರಿ 128 ಜನ ಇದ್ರು. ಜಬ್ದೀಯೇಲ ಅವ್ರ ಮೇಲ್ವಿಚಾರಕನಾಗಿದ್ದ. ಇವನು ಒಂದು ಗಣ್ಯ ಮನೆತನಕ್ಕೆ ಸೇರಿದವನಾಗಿದ್ದ.
15 ಲೇವಿಯರಲ್ಲಿ ಶೆಮಾಯ+ ಬಂದ. ಶೆಮಾಯ ಹಷ್ಷೂಬನ ಮಗ, ಹಷ್ಷೂಬ ಅಜ್ರೀಕಾಮನ ಮಗ, ಅಜ್ರೀಕಾಮ್ ಹಷಬ್ಯನ ಮಗ, ಹಷಬ್ಯ ಬುನ್ನಿಯ ಮಗ. 16 ಶಬ್ಬೆತೈ+ ಮತ್ತು ಯೋಜಾಬಾದ+ ಅನ್ನೋರು ಬಂದ್ರು. ಇವರು ಲೇವಿಯರ ಮುಖ್ಯಸ್ಥರಾಗಿದ್ದು ಸತ್ಯ ದೇವರ ಆಲಯಕ್ಕೆ ಸಂಬಂಧಪಟ್ಟ ಹೊರಗಿನ ವಿಷ್ಯಗಳನ್ನ ನೋಡ್ಕೊಳ್ತಿದ್ರು. 17 ಅಷ್ಟೇ ಅಲ್ಲ ಮತ್ತನ್ಯ+ ಬಂದ. ಇವನು ಮೀಕನ ಮಗ. ಮೀಕ ಜಬ್ದಿಯ ಮಗ, ಜಬ್ದಿ ಆಸಾಫನ+ ಮಗ. ಮತ್ತನ್ಯ ಸಂಗೀತಗಾರರ ಮೇಲ್ವಿಚಾರಣೆ ಮಾಡ್ತಿದ್ದ. ಪ್ರಾರ್ಥನೆಯ ಸಮಯದಲ್ಲಿ ಹಾಡಿ ಹೊಗಳುವವರ ಮುಂದಾಳತ್ವ ವಹಿಸ್ತಿದ್ದ.+ ಮತ್ತನ್ಯನ ಸಹಾಯಕನಾಗಿದ್ದ ಬಕ್ಬುಕ್ಯ ಕೂಡ ಬಂದ. ಶಮ್ಮೂವನ ಮಗ ಅಬ್ದ ಕೂಡ ಬಂದ. ಶಮ್ಮೂವ ಗಾಲಾಲನ ಮಗ, ಗಾಲಾಲ ಯೆದೂತೂನನ+ ಮಗ. 18 ಹೀಗೆ ಪವಿತ್ರ ಪಟ್ಟಣದಲ್ಲಿ ನೆಲೆಸಿದ್ದ ಲೇವಿಯರ ಒಟ್ಟು ಸಂಖ್ಯೆ 284 ಆಗಿತ್ತು.
19 ಬಾಗಿಲಲ್ಲಿ ನಿಂತು ಕಾವಲು ಕಾಯ್ತಿದ್ದವರಲ್ಲಿ ಅಕ್ಕೂಬ, ಟಲ್ಮೋನ್+ ಮತ್ತು ಅವ್ರ ಸಹೋದರರು ಬಂದ್ರು. ಎಲ್ಲ ಸೇರಿ 172 ಜನ.
20 ಉಳಿದ ಇಸ್ರಾಯೇಲ್ಯರು, ಪುರೋಹಿತರು, ಲೇವಿಯರು ಯೆಹೂದದ ಬೇರೆ ಪಟ್ಟಣಗಳಲ್ಲಿ ಅಂದ್ರೆ ತಮಗೆ ಆಸ್ತಿಯಾಗಿ ಸಿಕ್ಕಿದ್ದ ಜಾಗಗಳಲ್ಲಿ ವಾಸ ಮಾಡಿದ್ರು. 21 ಆಲಯದ ಸೇವಕರು*+ ಓಫೇಲಿನಲ್ಲಿ+ ವಾಸ ಇದ್ರು. ಜೀಹ ಮತ್ತು ಗಿಷ್ಪ ಅನ್ನೋರು ಆಲಯದ ಸೇವಕರ* ಮೇಲ್ವಿಚಾರಕರಾಗಿದ್ರು.
22 ಯೆರೂಸಲೇಮಲ್ಲಿ ಲೇವಿಯರ ಮೇಲೆ ಉಜ್ಜಿ ಮೇಲ್ವಿಚಾರಕನಾಗಿದ್ದ. ಉಜ್ಜಿ ಬಾನಿಯ ಮಗ, ಬಾನಿ ಹಷಬ್ಯನ ಮಗ, ಹಷಬ್ಯ ಮತ್ತನ್ಯನ+ ಮಗ, ಮತ್ತನ್ಯ ಮೀಕನ ಮಗ, ಮೀಕ ಆಸಾಫನ ಮಗ. ಉಜ್ಜಿ ಆಸಾಫನ ಗಾಯಕರ ಮನೆತನಕ್ಕೆ ಸೇರಿದವನಾಗಿದ್ದ. ಸತ್ಯ ದೇವರ ಆಲಯದ ಕೆಲಸಗಳನ್ನ ನೋಡ್ಕೊಳ್ತಿದ್ದ. 23 ಈ ಗಾಯಕರಿಗೆ ಆಯಾ ದಿನಕ್ಕೆ ಬೇಕಾಗುವಷ್ಟು ಆಹಾರವನ್ನ ಕೊಡಬೇಕಂತ ರಾಜಾಜ್ಞೆಯಾಗಿತ್ತು.+ 24 ಪೆತಹ್ಯ ರಾಜನ ಸಲಹೆಗಾರನಾಗಿದ್ದ. ಜನ್ರಿಗೆ ಸಂಬಂಧಪಟ್ಟ ವಿಷ್ಯಗಳಲ್ಲಿ ರಾಜನಿಗೆ ಸಲಹೆ ಕೊಡ್ತಿದ್ದ. ಪೆತಹ್ಯ ಮೆಷೇಜಬೇಲನ ಮಗ, ಮೆಷೇಜಬೇಲ್ ಜೆರಹನ ಮಗ, ಜೆರಹ ಯೆಹೂದನ ಮಗ.
25 ಯೆಹೂದದ ಕೆಲವು ಜನ್ರು ಹೊಲಗಳಿರೋ ಹಳ್ಳಿಗಳಲ್ಲಿ ವಾಸ ಮಾಡಿದ್ರು. ಅವು ಯಾವುದಂದ್ರೆ: ಕಿರ್ಯತ್-ಅರ್ಬ,+ ದೀಬೋನ್, ಮತ್ತು ಅವುಗಳ ಸುತ್ತಮುತ್ತ ಇರೋ ಊರುಗಳು, ಯೆಕಬ್ಜೆಯೇಲ್+ ಮತ್ತು ಅದಕ್ಕೆ ಸೇರಿದ ಹಳ್ಳಿಗಳು, 26 ಅಷ್ಟೇ ಅಲ್ಲ ಯೆಷೂವ, ಮೋಲಾದಾ,+ ಬೇತ್-ಪೆಲೆಟ್,+ 27 ಹಚರ್-ಷೂವಾಲ್,+ ಬೇರ್ಷೆಬ ಮತ್ತು ಅದ್ರ ಸುತ್ತಮುತ್ತ ಇರೋ ಊರುಗಳು, 28 ಚಿಕ್ಲಗ್,+ ಮೆಕೋನ ಮತ್ತು ಅದ್ರ ಸುತ್ತಮುತ್ತ ಇರೋ ಊರುಗಳು, 29 ಏನ್-ರಿಮ್ಮೋನ್,+ ಚೊರ್ಗ,+ ಯರ್ಮೂತ್, 30 ಜಾನೋಹ,+ ಅದುಲ್ಲಾಮ್ ಮತ್ತು ಅದಕ್ಕೆ ಸೇರಿದ ಹಳ್ಳಿಗಳು, ಲಾಕೀಷ್+ ಮತ್ತು ಅದಕ್ಕೆ ಸೇರಿದ ಹೊಲಗಳು, ಅಜೇಕ+ ಮತ್ತು ಅದ್ರ ಸುತ್ತಮುತ್ತ ಇರೋ ಊರುಗಳು. ಹೀಗೆ ಅವರು ಬೇರ್ಷೆಬದಿಂದ ಹಿನ್ನೋಮ್ ಕಣಿವೆ+ ತನಕ ಇದ್ರು.*
31 ಬೆನ್ಯಾಮೀನಿನ ಜನ್ರಿದ್ದ ಪಟ್ಟಣಗಳು ಯಾವುದಂದ್ರೆ: ಗೆಬ,+ ಮಿಕ್ಮಾಷ್, ಅಯ್ಯಾ, ಬೆತೆಲ್+ ಮತ್ತು ಅದ್ರ ಸುತ್ತಮುತ್ತ ಇರೋ ಊರುಗಳು, 32 ಅನಾತೋತ್,+ ನೋಬ್,+ ಅನನ್ಯ, 33 ಹಾಚೋರ್, ರಾಮ,+ ಗಿತ್ತಯಿಮ್, 34 ಹಾದೀದ್, ಚೆಬೋಯೀಮ್, ನೆಬಲ್ಲಾಟ್, 35 ಲೋದ್, ಓನೋ+ ಮತ್ತು ಕರಕುಶಲಗಾರರ ಕಣಿವೆ. 36 ಯೆಹೂದದ ಪ್ರಾಂತ್ಯಗಳಲ್ಲಿ ವಾಸ ಇದ್ದ ಲೇವಿಯರ ಕೆಲವು ದಳದವರು ಬೆನ್ಯಾಮೀನಿನ ಪ್ರಾಂತ್ಯಗಳಿಗೆ ಬಂದು ವಾಸ ಮಾಡಿದ್ರು.