ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೆಹೆಮೀಯ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನೆಹೆಮೀಯ ಮುಖ್ಯಾಂಶಗಳು

      • ಪುರೋಹಿತರು ಮತ್ತು ಲೇವಿಯರು (1-26)

      • ಗೋಡೆಯ ಉದ್ಘಾಟನೆ (27-43)

      • ಆಲಯದ ಸೇವೆಗಾಗಿ ಬೆಂಬಲ (44-47)

ನೆಹೆಮೀಯ 12:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 1:12
  • +ಎಜ್ರ 1:8, 11
  • +ಜೆಕ 3:1

ನೆಹೆಮೀಯ 12:8

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 2:1, 40; 3:9
  • +1ಪೂರ್ವ 9:2, 15; ನೆಹೆ 11:17; 12:25

ನೆಹೆಮೀಯ 12:9

ಪಾದಟಿಪ್ಪಣಿ

  • *

    ಬಹುಶಃ, “ಸೇವೆಯ ಸಮಯದಲ್ಲಿ.”

ನೆಹೆಮೀಯ 12:10

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:1
  • +ನೆಹೆ 13:28

ನೆಹೆಮೀಯ 12:12

ಮಾರ್ಜಿನಲ್ ರೆಫರೆನ್ಸ್

  • +ನೆಹೆ 11:3, 11

ನೆಹೆಮೀಯ 12:13

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:1

ನೆಹೆಮೀಯ 12:15

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 2:1, 39

ನೆಹೆಮೀಯ 12:17

ಪಾದಟಿಪ್ಪಣಿ

  • *

    ಪವಿತ್ರಗ್ರಂಥದ ಪ್ರಾಚೀನ ಹೀಬ್ರು ಪ್ರತಿಗಳಲ್ಲಿ ಈ ಹೆಸ್ರನ್ನ ಬಿಟ್ಟುಬಿಡಲಾಗಿದೆ.

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:1, 4

ನೆಹೆಮೀಯ 12:18

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:1, 5

ನೆಹೆಮೀಯ 12:19

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:1, 6

ನೆಹೆಮೀಯ 12:22

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:10, 11

ನೆಹೆಮೀಯ 12:24

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 2:1, 40
  • +ನೆಹೆ 8:7
  • +1ಪೂರ್ವ 16:4; 23:28, 30

ನೆಹೆಮೀಯ 12:25

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 9:2, 15
  • +1ಪೂರ್ವ 9:17; ಎಜ್ರ 2:1, 42; ನೆಹೆ 11:1, 19
  • +1ಪೂರ್ವ 9:22-27

ನೆಹೆಮೀಯ 12:26

ಪಾದಟಿಪ್ಪಣಿ

  • *

    ಅಥವಾ “ಬರಹಗಾರನೂ.”

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 3:2, 8
  • +ಎಜ್ರ 7:1, 6

ನೆಹೆಮೀಯ 12:27

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 5:13; 7:6

ನೆಹೆಮೀಯ 12:28

ಪಾದಟಿಪ್ಪಣಿ

  • *

    ಅಥವಾ “ತರಬೇತಿ ಪಡೆದ ಗಾಯಕರ.”

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 2:54; 9:2, 16; ನೆಹೆ 7:6, 26

ನೆಹೆಮೀಯ 12:29

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:7, 12
  • +ಯೆಹೋ 21:8, 17; ನೆಹೆ 11:31
  • +ಎಜ್ರ 2:1, 24

ನೆಹೆಮೀಯ 12:30

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:10
  • +ನೆಹೆ 7:1
  • +ನೆಹೆ 6:15

ನೆಹೆಮೀಯ 12:31

ಮಾರ್ಜಿನಲ್ ರೆಫರೆನ್ಸ್

  • +ನೆಹೆ 2:13; 3:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 8/2020, ಪು. 3

ನೆಹೆಮೀಯ 12:35

ಮಾರ್ಜಿನಲ್ ರೆಫರೆನ್ಸ್

  • +ಅರ 10:2; 2ಪೂರ್ವ 5:12
  • +1ಪೂರ್ವ 25:1, 2

ನೆಹೆಮೀಯ 12:36

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 23:5
  • +ನೆಹೆ 8:4

ನೆಹೆಮೀಯ 12:37

ಮಾರ್ಜಿನಲ್ ರೆಫರೆನ್ಸ್

  • +ನೆಹೆ 2:14
  • +2ಸಮು 5:7, 9
  • +ನೆಹೆ 3:15
  • +ನೆಹೆ 3:26; 8:1

ನೆಹೆಮೀಯ 12:38

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:11
  • +ನೆಹೆ 3:8

ನೆಹೆಮೀಯ 12:39

ಮಾರ್ಜಿನಲ್ ರೆಫರೆನ್ಸ್

  • +2ಅರ 14:13; ನೆಹೆ 8:16
  • +ನೆಹೆ 3:6
  • +2ಪೂರ್ವ 33:14; ನೆಹೆ 3:3
  • +ಯೆರೆ 31:38; ಜೆಕ 14:10
  • +ನೆಹೆ 3:1; ಯೋಹಾ 5:2

ನೆಹೆಮೀಯ 12:43

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 6:16, 17
  • +ಯೆರೆ 31:13
  • +ಎಜ್ರ 3:10, 13

ನೆಹೆಮೀಯ 12:44

ಪಾದಟಿಪ್ಪಣಿ

  • *

    ಅಥವಾ “ದಶಮಾಂಶವನ್ನ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 10:39
  • +ನೆಹೆ 10:35-37
  • +ನೆಹೆ 10:38; 13:12, 13
  • +2ಪೂರ್ವ 31:11
  • +ವಿಮೋ 34:26; ಅರ 15:18, 19; 18:21; ಧರ್ಮೋ 26:2

ನೆಹೆಮೀಯ 12:46

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 25:1, 6

ನೆಹೆಮೀಯ 12:47

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 3:2; ಹಗ್ಗಾ 1:12; ಲೂಕ 3:23, 27
  • +ನೆಹೆ 11:23
  • +ನೆಹೆ 10:39
  • +ಅರ 18:21

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನೆಹೆ. 12:1ಮತ್ತಾ 1:12
ನೆಹೆ. 12:1ಎಜ್ರ 1:8, 11
ನೆಹೆ. 12:1ಜೆಕ 3:1
ನೆಹೆ. 12:8ಎಜ್ರ 2:1, 40; 3:9
ನೆಹೆ. 12:81ಪೂರ್ವ 9:2, 15; ನೆಹೆ 11:17; 12:25
ನೆಹೆ. 12:10ನೆಹೆ 3:1
ನೆಹೆ. 12:10ನೆಹೆ 13:28
ನೆಹೆ. 12:12ನೆಹೆ 11:3, 11
ನೆಹೆ. 12:13ನೆಹೆ 12:1
ನೆಹೆ. 12:15ಎಜ್ರ 2:1, 39
ನೆಹೆ. 12:17ನೆಹೆ 12:1, 4
ನೆಹೆ. 12:18ನೆಹೆ 12:1, 5
ನೆಹೆ. 12:19ನೆಹೆ 12:1, 6
ನೆಹೆ. 12:22ನೆಹೆ 12:10, 11
ನೆಹೆ. 12:24ಎಜ್ರ 2:1, 40
ನೆಹೆ. 12:24ನೆಹೆ 8:7
ನೆಹೆ. 12:241ಪೂರ್ವ 16:4; 23:28, 30
ನೆಹೆ. 12:251ಪೂರ್ವ 9:2, 15
ನೆಹೆ. 12:251ಪೂರ್ವ 9:17; ಎಜ್ರ 2:1, 42; ನೆಹೆ 11:1, 19
ನೆಹೆ. 12:251ಪೂರ್ವ 9:22-27
ನೆಹೆ. 12:26ಎಜ್ರ 3:2, 8
ನೆಹೆ. 12:26ಎಜ್ರ 7:1, 6
ನೆಹೆ. 12:272ಪೂರ್ವ 5:13; 7:6
ನೆಹೆ. 12:281ಪೂರ್ವ 2:54; 9:2, 16; ನೆಹೆ 7:6, 26
ನೆಹೆ. 12:29ಯೆಹೋ 15:7, 12
ನೆಹೆ. 12:29ಯೆಹೋ 21:8, 17; ನೆಹೆ 11:31
ನೆಹೆ. 12:29ಎಜ್ರ 2:1, 24
ನೆಹೆ. 12:30ವಿಮೋ 19:10
ನೆಹೆ. 12:30ನೆಹೆ 7:1
ನೆಹೆ. 12:30ನೆಹೆ 6:15
ನೆಹೆ. 12:31ನೆಹೆ 2:13; 3:13
ನೆಹೆ. 12:35ಅರ 10:2; 2ಪೂರ್ವ 5:12
ನೆಹೆ. 12:351ಪೂರ್ವ 25:1, 2
ನೆಹೆ. 12:361ಪೂರ್ವ 23:5
ನೆಹೆ. 12:36ನೆಹೆ 8:4
ನೆಹೆ. 12:37ನೆಹೆ 2:14
ನೆಹೆ. 12:372ಸಮು 5:7, 9
ನೆಹೆ. 12:37ನೆಹೆ 3:15
ನೆಹೆ. 12:37ನೆಹೆ 3:26; 8:1
ನೆಹೆ. 12:38ನೆಹೆ 3:11
ನೆಹೆ. 12:38ನೆಹೆ 3:8
ನೆಹೆ. 12:392ಅರ 14:13; ನೆಹೆ 8:16
ನೆಹೆ. 12:39ನೆಹೆ 3:6
ನೆಹೆ. 12:392ಪೂರ್ವ 33:14; ನೆಹೆ 3:3
ನೆಹೆ. 12:39ಯೆರೆ 31:38; ಜೆಕ 14:10
ನೆಹೆ. 12:39ನೆಹೆ 3:1; ಯೋಹಾ 5:2
ನೆಹೆ. 12:43ಎಜ್ರ 6:16, 17
ನೆಹೆ. 12:43ಯೆರೆ 31:13
ನೆಹೆ. 12:43ಎಜ್ರ 3:10, 13
ನೆಹೆ. 12:44ನೆಹೆ 10:39
ನೆಹೆ. 12:44ನೆಹೆ 10:35-37
ನೆಹೆ. 12:44ನೆಹೆ 10:38; 13:12, 13
ನೆಹೆ. 12:442ಪೂರ್ವ 31:11
ನೆಹೆ. 12:44ವಿಮೋ 34:26; ಅರ 15:18, 19; 18:21; ಧರ್ಮೋ 26:2
ನೆಹೆ. 12:461ಪೂರ್ವ 25:1, 6
ನೆಹೆ. 12:47ಎಜ್ರ 3:2; ಹಗ್ಗಾ 1:12; ಲೂಕ 3:23, 27
ನೆಹೆ. 12:47ನೆಹೆ 11:23
ನೆಹೆ. 12:47ನೆಹೆ 10:39
ನೆಹೆ. 12:47ಅರ 18:21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನೆಹೆಮೀಯ 12:1-47

ನೆಹೆಮೀಯ

12 ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ್‌+ ಮತ್ತು ಯೇಷೂವನ+ ಜೊತೆ ಕೈದಿಗಳಾಗಿದ್ದು ವಾಪಸ್‌ ಬಂದಿದ್ದ ಪುರೋಹಿತರು ಹಾಗೂ ಲೇವಿಯರು ಯಾರಂದ್ರೆ: ಸೆರಾಯ, ಯೆರೆಮೀಯ, ಎಜ್ರ, 2 ಅಮರ್ಯ, ಮಲ್ಲೂಕ್‌, ಹಟ್ಟೂಷ್‌, 3 ಶೆಕನ್ಯ, ರೆಹೂಮ್‌, ಮೆರೇಮೋತ್‌, 4 ಇದ್ದೋವ್‌, ಗಿನ್ನೆತೋಯಿ, ಅಬೀಯ, 5 ಮಿಯ್ಯಾಮೀನ್‌, ಮಾದ್ಯ, ಬಿಲ್ಗ, 6 ಶೆಮಾಯ, ಯೋಯಾರೀಬ್‌, ಯೆದಾಯ, 7 ಸಲ್ಲು, ಅಮೋಕ್‌, ಹಿಲ್ಕೀಯ, ಯೆದಾಯ. ಇವರು ಯೆಷೂವನ ಕಾಲದಲ್ಲಿ ಪುರೋಹಿತರ, ತಮ್ಮ ಸಹೋದರರ ಮುಖ್ಯಸ್ಥರಾಗಿದ್ರು.

8 ಲೇವಿಯರಲ್ಲಿ ಯೆಷೂವ, ಬಿನ್ನೂಯ್‌, ಕದ್ಮೀಯೇಲ್‌,+ ಶೇರೇಬ್ಯ, ಯೆಹೂದ ಮತ್ತು ಮತ್ತನ್ಯ+ ವಾಪಸ್‌ ಬಂದಿದ್ರು. ಮತ್ತನ್ಯ ಮತ್ತು ಅವನ ಸಹೋದರರು ಧನ್ಯವಾದ ಗೀತೆಗಳನ್ನ ಹಾಡೋದ್ರಲ್ಲಿ ಮುಂದಾಳತ್ವ ವಹಿಸ್ತಿದ್ರು. 9 ಅವ್ರ ಸಹೋದರರಾದ ಬಕ್ಬುಕ್ಯ ಮತ್ತು ಉನ್ನಿ ಅವ್ರ ಮುಂದೆ ನಿಂತು ಕಾವಲು ಕಾಯ್ತಿದ್ರು.* 10 ಯೆಷೂವನ ಮಗ ಯೋಯಾಕೀಮ, ಯೋಯಾಕೀಮನ ಮಗ ಎಲ್ಯಾಷೀಬ್‌,+ ಎಲ್ಯಾಷೀಬ್‌ನ ಮಗ ಯೋಯಾದ,+ 11 ಯೋಯಾದನ ಮಗ ಯೋನಾತಾನ, ಯೋನಾತಾನನ ಮಗ ಯದ್ದೂವ.

12 ಯೋಯಾಕೀಮನ ಕಾಲದಲ್ಲಿ ತಮ್ಮತಮ್ಮ ಕುಲಗಳ ಮುಖ್ಯಸ್ಥರಾಗಿದ್ದ ಪುರೋಹಿತರು ಯಾರಂದ್ರೆ: ಸೆರಾಯನ+ ಕುಲಕ್ಕೆ ಮೆರಾಯ, ಯೆರೆಮೀಯನ ಕುಲಕ್ಕೆ ಹನನ್ಯ, 13 ಎಜ್ರನ+ ಕುಲಕ್ಕೆ ಮೆಷುಲ್ಲಾಮ, ಅಮರ್ಯನ ಕುಲಕ್ಕೆ ಯೆಹೋಹಾನಾನ್‌, 14 ಮಲ್ಲೂಕಿಯ ಕುಲಕ್ಕೆ ಯೋನಾತಾನ, ಶೆಬನ್ಯನ ಕುಲಕ್ಕೆ ಯೋಸೇಫ, 15 ಹಾರಿಮನ+ ಕುಲಕ್ಕೆ ಅದ್ನ, ಮೆರಾಯೋತನ ಕುಲಕ್ಕೆ ಹೆಲ್ಕೈ, 16 ಇದ್ದೋವನ ಕುಲಕ್ಕೆ ಜೆಕರ್ಯ, ಗಿನ್ನೆತೋನನ ಕುಲಕ್ಕೆ ಮೆಷುಲ್ಲಾಮ, 17 ಅಬೀಯನ+ ಕುಲಕ್ಕೆ ಜಿಕ್ರಿ, ಮಿನ್ಯಾಮೀನನ ಕುಲಕ್ಕೆ . . . ,* ಮೋವದ್ಯನ ಕುಲಕ್ಕೆ ಪಿಲ್ಟೈ, 18 ಬಿಲ್ಗಾ+ ಕುಲಕ್ಕೆ ಶಮ್ಮೂವ, ಶೆಮಾಯನ ಕುಲಕ್ಕೆ ಯೆಹೋನಾತಾನ್‌, 19 ಯೋಯಾರೀಬನ ಕುಲಕ್ಕೆ ಮತ್ತೆನೈ, ಯೆದಾಯನ+ ಕುಲಕ್ಕೆ ಉಜ್ಜಿ, 20 ಸಲ್ಲೈಯ ಕುಲಕ್ಕೆ ಕಲ್ಲೈ, ಅಮೋಕನ ಕುಲಕ್ಕೆ ಎಬೆರ, 21 ಹಿಲ್ಕೀಯನ ಕುಲಕ್ಕೆ ಹಷಬ್ಯ, ಯೆದಾಯನ ಕುಲಕ್ಕೆ ನೆತನೇಲ್‌.

22 ಪರ್ಶಿಯ ರಾಜ ದಾರ್ಯಾವೆಷನ ಆಳ್ವಿಕೆ ತನಕ ಅಂದ್ರೆ ಎಲ್ಯಾಷೀಬ್‌, ಯೋಯಾದ, ಯೋಹಾನಾನ್‌ ಮತ್ತು ಯದ್ದೂವನ+ ಕಾಲದಲ್ಲಿ ಲೇವಿಯರ ಮತ್ತು ಪುರೋಹಿತರ ಕುಲದ ಮುಖ್ಯಸ್ಥರ ಹೆಸ್ರುಗಳನ್ನ ಬರೆದಿಡಲಾಗಿತ್ತು.

23 ಎಲ್ಯಾಷೀಬನ ಮಗ ಯೋಹಾನಾನನ ಕಾಲದ ತನಕ ಕುಲದ ಮುಖ್ಯಸ್ಥರಾಗಿದ್ದ ಲೇವಿಯರ ಹೆಸ್ರುಗಳನ್ನ ಇತಿಹಾಸ ಪುಸ್ತಕದಲ್ಲಿ ಬರೆಯಲಾಗಿತ್ತು. 24 ಅವರು ಯಾರಂದ್ರೆ: ಹಷಬ್ಯ, ಶೇರೇಬ್ಯ ಮತ್ತು ಕದ್ಮೀಯೇಲನ+ ಮಗ ಯೆಷೂವ.+ ಕಾವಲುಗಾರರಾಗಿದ್ದ ಅವ್ರ ಸಹೋದರರು ಅವ್ರ ಮುಂದೆ ಗುಂಪುಗಳಾಗಿ ನಿಂತು ದೇವರನ್ನ ಹಾಡಿ ಹೊಗಳ್ತಿದ್ರು. ಸತ್ಯ ದೇವರ ಸೇವಕನಾಗಿದ್ದ ದಾವೀದ ಕೊಟ್ಟಿದ್ದ ನಿರ್ದೇಶನ ಪ್ರಕಾರ ಧನ್ಯವಾದ ಸಲ್ಲಿಸ್ತಿದ್ರು.+ 25 ಮತ್ತನ್ಯ,+ ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ, ಟಲ್ಮೋನ್‌ ಮತ್ತು ಅಕ್ಕೂಬ್‌+ ಕಾವಲುಗಾರರಾಗಿದ್ರು.+ ಇವರು ಆಲಯದ ಬಾಗಿಲ ಹತ್ರ ಇದ್ದ ಕಣಜಗಳನ್ನ ಕಾಯ್ತಿದ್ರು. 26 ಇವರು ಯೋಚಾದಾಕನ ಮೊಮ್ಮಗನೂ ಯೆಷೂವನ+ ಮಗನೂ ಆದ ಯೋಯಾಕೀಮನ ಕಾಲದಲ್ಲಿ ಸೇವೆ ಮಾಡ್ತಿದ್ರು. ಅಷ್ಟೇ ಅಲ್ಲ ರಾಜ್ಯಪಾಲನಾಗಿದ್ದ ನೆಹೆಮೀಯನ ಮತ್ತು ಪುರೋಹಿತನೂ ನಕಲುಗಾರನೂ* ಆಗಿದ್ದ ಎಜ್ರನ+ ಕಾಲದಲ್ಲೂ ಸೇವೆ ಮಾಡ್ತಿದ್ರು.

27 ಯೆರೂಸಲೇಮಿನ ಗೋಡೆಯ ಉದ್ಘಾಟನೆಯ ಸಂದರ್ಭದಲ್ಲಿ ಲೇವಿಯರಿಗಾಗಿ ಅವರು ವಾಸಿಸ್ತಿದ್ದ ಎಲ್ಲ ಸ್ಥಳಗಳಲ್ಲಿ ಹುಡುಕಿದ್ರು. ಝಲ್ಲರಿಗಳನ್ನ, ತಂತಿವಾದ್ಯಗಳನ್ನ ನುಡಿಸ್ತಾ ಧನ್ಯವಾದ ಗೀತೆಗಳ+ ಜೊತೆ ಸಂಭ್ರಮಿಸ್ತಾ ಗೋಡೆಯನ್ನ ಉದ್ಘಾಟಿಸೋಕೆ ಅವ್ರನ್ನ ಯೆರೂಸಲೇಮಿಗೆ ಕರ್ಕೊಂಡು ಬಂದ್ರು. 28 ಗಾಯಕರ* ಗಂಡು ಮಕ್ಕಳನ್ನ ಬೇರೆಬೇರೆ ಸ್ಥಳಗಳಿಂದ ಒಟ್ಟುಸೇರಿಸಿದ್ರು. ಆ ಸ್ಥಳಗಳು ಯಾವುದಂದ್ರೆ: ಯೋರ್ದನಿನ ಜಿಲ್ಲೆ, ಯೆರೂಸಲೇಮಿನ ಸುತ್ತಮುತ್ತ ಇದ್ದ ಪ್ರದೇಶಗಳು, ನೆಟೋಫಾತ್ಯರ+ ಹಳ್ಳಿಗಳು, 29 ಬೇತ್‌-ಹಗಿಲ್ಗಾಲ್‌,+ ಗೆಬ+ ಮತ್ತು ಅಜ್ಮಾವೇತಿನ+ ಹೊಲಗಳು. ಗಾಯಕರು ಯೆರೂಸಲೇಮಿನ ಸುತ್ತಮುತ್ತ ಇದ್ದ ಪ್ರಾಂತ್ಯಗಳಲ್ಲಿ ತಮಗೋಸ್ಕರ ಹಳ್ಳಿಗಳನ್ನ ಮಾಡ್ಕೊಂಡಿದ್ರಿಂದ ಇವ್ರನ್ನ ಬೇರೆಬೇರೆ ಸ್ಥಳಗಳಿಂದ ಒಟ್ಟುಸೇರಿಸಿದ್ರು. 30 ಪುರೋಹಿತರು ಮತ್ತು ಲೇವಿಯರು ತಮ್ಮನ್ನ ತಾವು ಪವಿತ್ರೀಕರಿಸಿಕೊಂಡ+ ಮೇಲೆ ಜನ್ರನ್ನ, ಬಾಗಿಲುಗಳನ್ನ+ ಮತ್ತು ಗೋಡೆಯನ್ನ ಪವಿತ್ರೀಕರಿಸಿದ್ರು.+

31 ಆಮೇಲೆ ನಾನು ಯೆಹೂದದ ನಾಯಕರನ್ನ ಗೋಡೆ ಮೇಲೆ ಕರ್ಕೊಂಡು ಬಂದೆ. ಅಷ್ಟೇ ಅಲ್ಲ ಧನ್ಯವಾದ ಗೀತೆಗಳನ್ನ ಹಾಡೋ ಎರಡು ದೊಡ್ಡ ಗಾಯಕವೃಂದಗಳನ್ನ, ಅವ್ರನ್ನ ಹಿಂಬಾಲಿಸೋ ಗುಂಪುಗಳನ್ನ ನೇಮಿಸಿದೆ. ಒಂದು ವೃಂದ ಗೋಡೆ ಮೇಲೆ ಬಲಗಡೆಗೆ ನಡೆದು ‘ಬೂದಿ ರಾಶಿಯ ಬಾಗಿಲಿನ’+ ಕಡೆ ಹೋಯ್ತು. 32 ಹೋಷಾಯ ಮತ್ತು ಯೆಹೂದದ ನಾಯಕರಲ್ಲಿ ಅರ್ಧ ಜನ್ರು ಅದ್ರ ಹಿಂದೆಹಿಂದೆ ನಡೆದ್ರು. 33 ಅವ್ರ ಜೊತೆ ಅಜರ್ಯ, ಎಜ್ರ, ಮೆಷುಲ್ಲಾಮ, 34 ಯೆಹೂದ, ಬೆನ್ಯಾಮೀನ್‌, ಶೆಮಾಯ, ಯೆರೆಮೀಯ ಇದ್ರು. 35 ಅಷ್ಟೇ ಅಲ್ಲ ಪುರೋಹಿತರ ಗಂಡು ಮಕ್ಕಳಲ್ಲಿ ಕೆಲವರು ತುತ್ತೂರಿಗಳನ್ನ+ ಹಿಡ್ಕೊಂಡು ಅವ್ರ ಜೊತೆ ಹೋದ್ರು. ಅವ್ರಲ್ಲಿ ಜೆಕರ್ಯ ಒಬ್ಬನಾಗಿದ್ದ. ಇವನು ಯೋನಾತಾನನ ಮಗ, ಯೋನಾತಾನ ಶೆಮಾಯನ ಮಗ, ಶೆಮಾಯ ಮತ್ತನ್ಯನ ಮಗ, ಮತ್ತನ್ಯ ಮೀಕಾಯನ ಮಗ, ಮೀಕಾಯ ಜಕ್ಕೂರನ ಮಗ, ಜಕ್ಕೂರ್‌ ಆಸಾಫನ+ ಮಗ. 36 ಜೆಕರ್ಯನ ಜೊತೆ ಅವನ ಸಹೋದರರಾದ ಶೆಮಾಯ, ಅಜರೇಲ್‌, ಮಿಲಲೈ, ಗಿಲಲೈ, ಮಾಯೈ, ನೆತನೇಲ್‌, ಯೆಹೂದ, ಹನಾನಿ ಅನ್ನೋರು ಸತ್ಯ ದೇವರ ಸೇವಕನಾಗಿದ್ದ ದಾವೀದನ ಸಂಗೀತ ಉಪಕರಣಗಳನ್ನ+ ಹಿಡ್ಕೊಂಡು ನಡೆದ್ರು. ನಕಲುಗಾರನಾಗಿದ್ದ ಎಜ್ರ+ ಅವ್ರ ಮುಂದೆ ನಡೆದ.⁠ 37 ಇವ್ರೆಲ್ಲ ‘ಬುಗ್ಗೆ ಬಾಗಿಲಿಂದ’+ ನೇರವಾಗಿ ಮುಂದೆ ನಡಿತಾ ದಾವೀದಪಟ್ಟಣದ+ ಮೆಟ್ಟಿಲುಗಳನ್ನ+ ದಾಟಿ ದಾವೀದನ ಅರಮನೆ ಮುಂದಿದ್ದ ದಿಬ್ಬ ಹತ್ತಿ ಪೂರ್ವಕ್ಕಿದ್ದ ‘ನೀರು ಬಾಗಿಲಿನ+ ತನಕ’ ಹೋದ್ರು.

38 ಧನ್ಯವಾದ ಗೀತೆಗಳನ್ನ ಹಾಡ್ತಿದ್ದ ಎರಡನೇ ಗಾಯಕವೃಂದ ವಿರುದ್ಧ ದಿಕ್ಕಲ್ಲಿ ನಡಿತಾ ಹೋದ್ರು. ನಾನು ಮತ್ತು ಉಳಿದ ಜನ ಅವ್ರ ಹಿಂದೆನೇ ಹೋದ್ವಿ. ಅವರು ಗೋಡೆ ಮೇಲೆ ‘ಒಲೆಗಳ ಕೋಟೆ’+ ದಾಟಿ ಅಗಲವಾದ ಗೋಡೆಯನ್ನ+ ದಾಟಿ, 39 ‘ಎಫ್ರಾಯೀಮ್‌ ಬಾಗಿಲು’+ ದಾಟಿ, ‘ಹಳೇ ಪಟ್ಟಣದ ಬಾಗಿಲು’+ ದಾಟಿ, ‘ಮೀನುಬಾಗಿಲು’+ ದಾಟಿ, ‘ಹನನೇಲ್‌ ಕೋಟೆ’+ ದಾಟಿ, ‘ಹಮ್ಮೆಯಾ ಕೋಟೆ’ ದಾಟಿ ‘ಕುರಿ ಬಾಗಿಲಿನ’+ ಕಡೆ ನಡೆದ್ರು. ಅವರು ‘ಕಾವಲುಗಾರರ ಬಾಗಿಲ’ ಹತ್ರ ನಿಂತ್ರು.

40 ಸ್ವಲ್ಪ ಸಮಯ ಆದ್ಮೇಲೆ ಧನ್ಯವಾದ ಗೀತೆಗಳನ್ನ ಹಾಡ್ತಿದ್ದ ಎರಡೂ ಗಾಯಕವೃಂದ ಸತ್ಯ ದೇವರ ಆಲಯದ ಮುಂದೆ ನಿಂತ್ರು. ಜೊತೆಗೆ ನಾನೂ ಮತ್ತು ನನ್ನ ಜೊತೆ ಅಧಿಪತಿಗಳಲ್ಲಿ ಅರ್ಧ ಜನ ಅಲ್ಲಿ ಬಂದು ನಿಂತ್ವಿ. 41 ಪುರೋಹಿತರಾದ ಎಲ್ಯಕೀಮ, ಮಾಸೇಯ, ಮಿನ್ಯಾಮೀನ್‌, ಮೀಕಾಯ, ಎಲ್ಯೋವೇನೈ, ಜೆಕರ್ಯ, ಹನನ್ಯರು ಕೂಡ ತುತ್ತೂರಿಗಳನ್ನ ಹಿಡ್ಕೊಂಡು ನಿಂತಿದ್ರು. 42 ಅವ್ರ ಜೊತೆ ಮಾಸೇಯ, ಶೆಮಾಯ, ಎಲ್ಲಾಜಾರ್‌, ಉಜ್ಜಿ, ಯೆಹೋಹಾನಾನ್‌, ಮಲ್ಕೀಯ, ಏಲಾಮ್‌, ಏಚೆರ ಅನ್ನೋರು ಕೂಡ ಇದ್ರು. ಇಜ್ರಹ್ಯನ ಮೇಲ್ವಿಚಾರಣೆಯ ಕೆಳಗೆ ಗಾಯಕರು ಗಟ್ಟಿಯಾಗಿ ಹಾಡಿದ್ರು.

43 ಆ ದಿನ ಅವರು ಅನೇಕ ಬಲಿಗಳನ್ನ ಅರ್ಪಿಸಿ ಸಂತೋಷ ಪಟ್ರು.+ ಯಾಕಂದ್ರೆ ಅವರು ತುಂಬ ಆನಂದದಿಂದ ಸಂಭ್ರಮಿಸೋ ತರ ಸತ್ಯ ದೇವರು ಮಾಡಿದನು. ಅವ್ರ ಜೊತೆ ಸ್ತ್ರೀಯರು, ಮಕ್ಕಳು ಕೂಡ ಸಂಭ್ರಮಿಸಿದ್ರು.+ ಯೆರೂಸಲೇಮಿನ ಸಂಭ್ರಮದ ಸದ್ದು ತುಂಬ ದೂರದ ತನಕ ಕೇಳಿಸ್ತಿತ್ತು.+

44 ಆ ದಿನ ಕಾಣಿಕೆಗಳನ್ನ,+ ಮೊದಲ ಫಲಗಳನ್ನ,+ ಹತ್ತರಲ್ಲಿ ಒಂದು ಭಾಗವನ್ನ*+ ಸಂಗ್ರಹಿಸೋ ಕಣಜಗಳನ್ನ+ ನೋಡ್ಕೊಳ್ಳೋಕೆ ಗಂಡಸ್ರನ್ನ ನೇಮಿಸಿದ್ರು. ಅವರು ಪುರೋಹಿತರಿಗೆ, ಲೇವಿಯರಿಗೆ ನಿಯಮ ಪುಸ್ತಕದ ಪ್ರಕಾರ ಸಿಗಬೇಕಾಗಿದ್ದ ಪಾಲನ್ನ+ ಪಟ್ಟಣಗಳ ಹೊಲಗಳಿಂದ ತಂದು ಆ ಕಣಜಗಳಲ್ಲಿ ಸಂಗ್ರಹಿಸ್ತಾ ಇದ್ರು. ಸೇವೆಮಾಡ್ತಿದ್ದ ಪುರೋಹಿತರಿಂದಾಗಿ, ಲೇವಿಯರಿಂದಾಗಿ ಯೆಹೂದದ ಜನ ತುಂಬ ಖುಷಿ ಪಟ್ರು. 45 ಪುರೋಹಿತರು, ಲೇವಿಯರು ದೇವರ ಸೇವೆಯಲ್ಲಿ ತಮ್ಮತಮ್ಮ ಜವಾಬ್ದಾರಿಯನ್ನ ನಿಭಾಯಿಸೋಕೆ ಶುರು ಮಾಡಿದ್ರು. ಜೊತೆಗೆ ವಸ್ತುಗಳನ್ನ ಶುದ್ಧಮಾಡಿ ಅವುಗಳನ್ನ ಪವಿತ್ರ ಕೆಲಸಕ್ಕೆ ಮೀಸಲಾಗಿಡೋ ತಮ್ಮ ಜವಾಬ್ದಾರಿಯನ್ನ ಕೂಡ ಮಾಡ್ತಿದ್ರು. ದಾವೀದ ಮತ್ತು ಅವನ ಮಗ ಸೊಲೊಮೋನ ಕೊಟ್ಟಿದ್ದ ನಿರ್ದೇಶನಗಳ ಪ್ರಕಾರ ಗಾಯಕರು ಮತ್ತು ಬಾಗಿಲು ಕಾಯೋರು ತಮ್ಮ ಜವಾಬ್ದಾರಿಗಳನ್ನ ಪೂರೈಸಿದ್ರು. 46 ಸುಮಾರು ವರ್ಷಗಳ ಹಿಂದೆ ಅಂದ್ರೆ ದಾವೀದ ಮತ್ತು ಆಸಾಫನ ಸಮಯದಲ್ಲಿ ಗಾಯಕರನ್ನ ನಿರ್ದೇಶಿಸೋಕೆ ನಿರ್ದೇಶಕರು ಇರ್ತಿದ್ರು. ಅಷ್ಟೇ ಅಲ್ಲ ದೇವರನ್ನ ಹಾಡಿ ಹೊಗಳೋಕೆ, ಧನ್ಯವಾದ ಗೀತೆಗಳನ್ನ ಹಾಡೋಕೆ ಬೇರೆಬೇರೆ ಹಾಡುಗಳು ಇತ್ತು.+ 47 ಜೆರುಬ್ಬಾಬೆಲನ+ ದಿನಗಳಲ್ಲಿ ಮತ್ತು ನೆಹೆಮೀಯನ ದಿನಗಳಲ್ಲಿ ಇಸ್ರಾಯೇಲ್ಯರೆಲ್ಲ ಗಾಯಕರಿಗೆ,+ ಬಾಗಿಲು ಕಾಯೋರಿಗೆ+ ಅವ್ರವ್ರ ದೈನಂದಿನ ಅಗತ್ಯಕ್ಕೆ ತಕ್ಕ ಹಾಗೆ ಆಹಾರ ಕೊಡ್ತಿದ್ರು. ಅವರು ಅದ್ರಲ್ಲಿ ಲೇವಿಯರಿಗೂ ಪಾಲು ಕೊಡ್ತಿದ್ರು.+ ಲೇವಿಯರು ತಮ್ಮ ಪಾಲಲ್ಲಿ ಆರೋನನ ವಂಶದವ್ರಿಗೆ ಪಾಲು ಕೊಡ್ತಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ