ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಜನ ಕೈದಿಗಳಾಗಿ ಹೋಗೋದನ್ನ ಮಾಡಿ ತೋರಿಸಿದ್ದು (1-20)

        • ಕೈದಿಯಾಗಿ ಹೋಗೋಕೆ ಗಂಟುಮೂಟೆ (1-7)

        • ಪ್ರಧಾನನು ಕತ್ತಲೆಯಲ್ಲಿ ಹೋಗ್ತಾನೆ (8-16)

        • ಭಯದಿಂದ ಊಟ ಮಾಡಿ ಗಾಬರಿಯಿಂದ ನೀರು ಕುಡಿಯೋದು (17-20)

      • ಮೋಸದ ಮಾತು ಸುಳ್ಳಾಯ್ತು (21-28)

        • “ನಾನು ಹೇಳೋ ಒಂದೊಂದು ಮಾತೂ ಬೇಗ ನಿಜ ಆಗುತ್ತೆ” (28)

ಯೆಹೆಜ್ಕೇಲ 12:2

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:9, 10; ಯೆರೆ 5:21; ರೋಮ 11:8
  • +ಯೆಹೆ 2:3, 5

ಯೆಹೆಜ್ಕೇಲ 12:4

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:20; ಯೆರೆ 52:10, 11

ಯೆಹೆಜ್ಕೇಲ 12:5

ಮಾರ್ಜಿನಲ್ ರೆಫರೆನ್ಸ್

  • +2ಅರ 25:4

ಯೆಹೆಜ್ಕೇಲ 12:6

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 8:18; ಯೆಹೆ 4:3; 24:24

ಯೆಹೆಜ್ಕೇಲ 12:10

ಮಾರ್ಜಿನಲ್ ರೆಫರೆನ್ಸ್

  • +ಯೆರೆ 21:7; ಯೆಹೆ 21:25

ಯೆಹೆಜ್ಕೇಲ 12:11

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 24:24
  • +ಯೆರೆ 52:15

ಯೆಹೆಜ್ಕೇಲ 12:12

ಮಾರ್ಜಿನಲ್ ರೆಫರೆನ್ಸ್

  • +2ಅರ 25:4; ಯೆರೆ 39:4

ಯೆಹೆಜ್ಕೇಲ 12:13

ಮಾರ್ಜಿನಲ್ ರೆಫರೆನ್ಸ್

  • +ಯೆರೆ 52:9; ಯೆಹೆ 17:20, 21
  • +2ಅರ 25:6, 7; ಯೆರೆ 34:3; 52:11; ಯೆಹೆ 17:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2017, ಪು. 1-2

ಯೆಹೆಜ್ಕೇಲ 12:14

ಮಾರ್ಜಿನಲ್ ರೆಫರೆನ್ಸ್

  • +2ಅರ 25:5
  • +ಯಾಜ 26:33; ಯೆರೆ 42:15, 16

ಯೆಹೆಜ್ಕೇಲ 12:18

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:26

ಯೆಹೆಜ್ಕೇಲ 12:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 107:33, 34; ಯೆರೆ 6:7
  • +ಯೆಶಾ 6:11; ಜೆಕ 7:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 53

ಯೆಹೆಜ್ಕೇಲ 12:20

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 64:10; ಯೆರೆ 25:9
  • +ಯೆಹೆ 6:13

ಯೆಹೆಜ್ಕೇಲ 12:22

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:19; ಆಮೋ 6:3; 2ಪೇತ್ರ 3:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 53

ಯೆಹೆಜ್ಕೇಲ 12:23

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:1; ಚೆಫ 1:14

ಯೆಹೆಜ್ಕೇಲ 12:24

ಪಾದಟಿಪ್ಪಣಿ

  • *

    ಅಥವಾ “ಮೋಸ ಮಾಡೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:14; ಪ್ರಲಾ 2:14; ಯೆಹೆ 13:23

ಯೆಹೆಜ್ಕೇಲ 12:25

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 2:17; ಜೆಕ 1:6
  • +ಯೆರೆ 16:9; ಹಬ 1:5

ಯೆಹೆಜ್ಕೇಲ 12:27

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:19; 28:15; 2ಪೇತ್ರ 3:3, 4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 12:2ಯೆಶಾ 6:9, 10; ಯೆರೆ 5:21; ರೋಮ 11:8
ಯೆಹೆ. 12:2ಯೆಹೆ 2:3, 5
ಯೆಹೆ. 12:42ಪೂರ್ವ 36:20; ಯೆರೆ 52:10, 11
ಯೆಹೆ. 12:52ಅರ 25:4
ಯೆಹೆ. 12:6ಯೆಶಾ 8:18; ಯೆಹೆ 4:3; 24:24
ಯೆಹೆ. 12:10ಯೆರೆ 21:7; ಯೆಹೆ 21:25
ಯೆಹೆ. 12:11ಯೆಹೆ 24:24
ಯೆಹೆ. 12:11ಯೆರೆ 52:15
ಯೆಹೆ. 12:122ಅರ 25:4; ಯೆರೆ 39:4
ಯೆಹೆ. 12:13ಯೆರೆ 52:9; ಯೆಹೆ 17:20, 21
ಯೆಹೆ. 12:132ಅರ 25:6, 7; ಯೆರೆ 34:3; 52:11; ಯೆಹೆ 17:16
ಯೆಹೆ. 12:142ಅರ 25:5
ಯೆಹೆ. 12:14ಯಾಜ 26:33; ಯೆರೆ 42:15, 16
ಯೆಹೆ. 12:18ಯಾಜ 26:26
ಯೆಹೆ. 12:19ಕೀರ್ತ 107:33, 34; ಯೆರೆ 6:7
ಯೆಹೆ. 12:19ಯೆಶಾ 6:11; ಜೆಕ 7:14
ಯೆಹೆ. 12:20ಯೆಶಾ 64:10; ಯೆರೆ 25:9
ಯೆಹೆ. 12:20ಯೆಹೆ 6:13
ಯೆಹೆ. 12:22ಯೆಶಾ 5:19; ಆಮೋ 6:3; 2ಪೇತ್ರ 3:3, 4
ಯೆಹೆ. 12:23ಯೋವೇ 2:1; ಚೆಫ 1:14
ಯೆಹೆ. 12:24ಯೆರೆ 14:14; ಪ್ರಲಾ 2:14; ಯೆಹೆ 13:23
ಯೆಹೆ. 12:25ಪ್ರಲಾ 2:17; ಜೆಕ 1:6
ಯೆಹೆ. 12:25ಯೆರೆ 16:9; ಹಬ 1:5
ಯೆಹೆ. 12:27ಯೆಶಾ 5:19; 28:15; 2ಪೇತ್ರ 3:3, 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 12:1-28

ಯೆಹೆಜ್ಕೇಲ

12 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಯಾರ ಮಧ್ಯ ವಾಸಿಸ್ತಾ ಇದ್ದಿಯೋ ಆ ಜನ್ರು ದಂಗೆಕೋರರು. ಅವರು ಕಣ್ಣಿದ್ರೂ ನೋಡ್ತಿಲ್ಲ, ಕಿವಿಯಿದ್ರೂ ಕೇಳ್ತಿಲ್ಲ.+ ಯಾಕಂದ್ರೆ ಅವರು ದಂಗೆಕೋರ ಜನ್ರು.+ 3 ಮನುಷ್ಯಕುಮಾರನೇ, ನೀನು ಕೈದಿಯಾಗಿ ಹೋಗೋಕೆ ಗಂಟುಮೂಟೆ ಕಟ್ಕೊ. ಹಗಲಲ್ಲಿ ಜನ್ರ ಕಣ್ಮುಂದೆ ಕೈದಿಯಾಗಿ ಹೋಗೋ ತರ ನೀನು ಅಲ್ಲಿಂದ ಹೋಗಬೇಕು. ಅವರು ನೋಡ್ತಾ ಇರುವಾಗ ನೀನು ನಿನ್ನ ಮನೆಯನ್ನ ಬಿಟ್ಟು ಬೇರೆ ಜಾಗಕ್ಕೆ ಹೋಗು. ಅವರು ದಂಗೆಕೋರ ಜನ್ರಾಗಿದ್ರೂ ನಿನ್ನನ್ನ ನೋಡಿ ಅರ್ಥಮಾಡ್ಕೊಬಹುದು. 4 ಕೈದಿಯಾಗಿ ಹೋಗೋಕೆ ನೀನು ಮೂಟೆ ಕಟ್ಟಿರೋ ಸಾಮಾನನ್ನ ಹಗಲಲ್ಲಿ ಅವ್ರ ಕಣ್ಮುಂದೆನೇ ಮನೆಯಿಂದ ಹೊರಗೆ ತಗೊಂಡು ಬಾ. ಸಂಜೆ ಅವರು ನೋಡ್ತಾ ಇರೋವಾಗ ನಿನ್ನನ್ನ ಯಾರೋ ಕೈದಿಯಾಗಿ ಕರ್ಕೊಂಡು ಹೋಗ್ತಿದ್ದಾರೆ ಅನ್ನೋ ತರ ಅಲ್ಲಿಂದ ಹೋಗು.+

5 ನೀನು ಅವ್ರ ಕಣ್ಮುಂದೆ ಗೋಡೆ ಕೊರೆದು ಅದ್ರೊಳಗಿಂದ ನಿನ್ನ ಮೂಟೆನ ಗೋಡೆ ಆಚೆ ತಗೊಂಡು ಬಾ.+ 6 ಕತ್ತಲಾದಾಗ ಅವ್ರ ಮುಂದೆನೇ ನಿನ್ನ ಸಾಮಾನನ್ನ ಹೆಗಲ ಮೇಲೆ ಹೊತ್ಕೊಂಡು ಹೋಗು. ನೆಲ ಕಾಣದ ಹಾಗೆ ನಿನ್ನ ಮುಖ ಮುಚ್ಕೊ. ಯಾಕಂದ್ರೆ ನಾನು ನಿನ್ನನ್ನ ಇಸ್ರಾಯೇಲ್ಯರಿಗೆ ಒಂದು ಗುರುತಾಗಿ ಮಾಡಿದ್ದೀನಿ.”+

7 ಆತನು ಆಜ್ಞೆ ಕೊಟ್ಟ ಹಾಗೇ ನಾನು ಮಾಡ್ದೆ. ಕೈದಿಯಾಗಿ ಹೋಗೋಕೆ ಗಂಟುಮೂಟೆ ತಗೊಳ್ಳೋ ಹಾಗೆ ನಾನು ಹಗಲಲ್ಲಿ ನನ್ನ ಮೂಟೆ ತಗೊಂಡು ಹೊರಗೆ ಬಂದೆ. ಸಂಜೆ ಗೋಡೆಯನ್ನ ಕೈಯಿಂದ ಕೊರೆದೆ. ಕತ್ತಲಾದಾಗ ನನ್ನ ಮೂಟೆಯನ್ನ ಹೊರಗೆ ತಂದು ಅವ್ರ ಕಣ್ಮುಂದೆನೇ ಅದನ್ನ ಹೆಗಲ ಮೇಲೆ ಹೊತ್ಕೊಂಡು ಹೋದೆ.

8 ಬೆಳಿಗ್ಗೆ ಮತ್ತೆ ಯೆಹೋವ ನನಗೆ ಹೀಗಂದನು: 9 “ಮನುಷ್ಯಕುಮಾರನೇ, ದಂಗೆಕೋರ ಇಸ್ರಾಯೇಲ್ಯರು ‘ನೀನು ಏನು ಮಾಡ್ತಿದ್ಯಾ?’ ಅಂತ ನಿನ್ನನ್ನ ಕೇಳಿದ್ರೆ 10 ನೀನು ಅವ್ರಿಗೆ: ‘ಯೆರೂಸಲೇಮಲ್ಲಿರೋ ಪ್ರಧಾನನ+ ಬಗ್ಗೆ ಮತ್ತು ಆ ಪಟ್ಟಣದ ಒಳಗಿರೋ ಎಲ್ಲ ಇಸ್ರಾಯೇಲ್ಯರ ಬಗ್ಗೆ ವಿಶ್ವದ ರಾಜ ಯೆಹೋವ ನನಗೆ ಹೇಳಿದ್ದು ಏನಂದ್ರೆ

11 “ನೀನು ಅವ್ರಿಗೆ ಒಂದು ಗುರುತಾಗಿದ್ದೀಯ.+ ನಾನು ಈಗ ನಿನಗೆ ಏನು ಮಾಡ್ತಿದ್ದಿನೋ ಅದನ್ನೇ ಅವ್ರಿಗೂ ಮಾಡ್ತೀನಿ. ಅವರು ಬೇರೆ ದೇಶಕ್ಕೆ ಕೈದಿಗಳಾಗಿ ಹೋಗ್ತಾರೆ.+ 12 ಅವ್ರ ಪ್ರಧಾನ ತನ್ನ ಸಾಮಾನುಗಳನ್ನ ಹೆಗಲ ಮೇಲೆ ಹೊತ್ಕೊಂಡು ಕತ್ತಲಲ್ಲಿ ಹೋಗ್ತಾನೆ. ಗೋಡೆ ಕೊರೆದು ಒಳಗೆ ಹೋಗಿ ತನ್ನ ಮೂಟೆ ತಗೊಂಡು ಹೊರಗೆ ಹೋಗ್ತಾನೆ.+ ನೆಲವನ್ನ ನೋಡೋಕೆ ಆಗದ ಹಾಗೆ ಅವನು ತನ್ನ ಮುಖವನ್ನ ಮುಚ್ಕೊಳ್ತಾನೆ” ಅಂತ ಹೇಳು. 13 ನಾನು ಅವನನ್ನ ಹಿಡಿಯೋಕೆ ಬಲೆ ಬೀಸ್ತೀನಿ. ಅವನು ಅದ್ರಲ್ಲಿ ಸಿಕ್ಕಿಬೀಳ್ತಾನೆ.+ ಆಮೇಲೆ ನಾನು ಅವನನ್ನ ಬಾಬೆಲಿಗೆ ಅಂದ್ರೆ ಕಸ್ದೀಯರ ದೇಶಕ್ಕೆ ತರ್ತಿನಿ, ಆದ್ರೆ ಅವನು ಆ ದೇಶನ ನೋಡದೇ ಅಲ್ಲೇ ಸಾಯ್ತಾನೆ.+ 14 ಅವನ ಸುತ್ತ ಇರೋ ಎಲ್ರನ್ನ, ಅವನ ಸಹಾಯಕರನ್ನ, ಸೈನಿಕರನ್ನ ನಾನು ಎಲ್ಲ ಕಡೆ ಚೆಲ್ಲಾಪಿಲ್ಲಿ ಮಾಡ್ತೀನಿ.+ ನಾನು ಕತ್ತಿಯನ್ನ ಹೊರಗೆ ತೆಗೆದು ಅವ್ರನ್ನ ಅಟ್ಟಿಸ್ಕೊಂಡು ಹೋಗ್ತೀನಿ.+ 15 ನಾನು ಅವ್ರನ್ನ ಜನಾಂಗಗಳಲ್ಲಿ ಚದರಿಸಿಬಿಟ್ಟಾಗ ಮತ್ತು ಬೇರೆ ಬೇರೆ ದೇಶಗಳಿಗೆ ಓಡಿಸಿಬಿಟ್ಟಾಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ. 16 ಆದ್ರೆ ಅವ್ರಲ್ಲಿ ಸ್ವಲ್ಪ ಜನ್ರನ್ನ ಕತ್ತಿ, ಬರಗಾಲ ಮತ್ತು ಅಂಟುರೋಗದಿಂದ ತಪ್ಪಿಸ್ತೀನಿ. ಇದ್ರಿಂದ ಅವರು ಹೋಗೋ ಜನಾಂಗಗಳಲ್ಲಿ ಅವರು ಮಾಡಿದ ಅಸಹ್ಯ ಕೆಲಸಗಳ ಬಗ್ಗೆ ಹೇಳೋಕೆ ಆಗುತ್ತೆ. ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”

17 ಯೆಹೋವ ಮತ್ತೆ ನನಗೆ 18 “ಮನುಷ್ಯಕುಮಾರನೇ, ನೀನು ನಡುಗ್ತಾ ಊಟ ಮಾಡಬೇಕು ಮತ್ತು ಗಾಬರಿಯಿಂದ ಚಿಂತೆ ಮಾಡ್ತಾ ನೀರು ಕುಡಿಬೇಕು.+ 19 ನೀನು ದೇಶದ ಜನ್ರಿಗೆ ಹೀಗೆ ಹೇಳು: ‘ಯೆರೂಸಲೇಮಲ್ಲಿರೋ ಇಸ್ರಾಯೇಲ್‌ ದೇಶದ ಜನ್ರ ಬಗ್ಗೆ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಅವರು ನಡುಗ್ತಾ ಊಟ ಮಾಡ್ತಾರೆ, ಭಯದಿಂದ ನೀರು ಕುಡಿತಾರೆ. ಅಲ್ಲಿ ಇರೋರು ಮಾಡಿದ ಹಿಂಸಾಚಾರದಿಂದ+ ಆ ದೇಶ ಪೂರ್ತಿ ಖಾಲಿಖಾಲಿ ಹೊಡಿಯುತ್ತೆ.+ 20 ಜನ್ರಿದ್ದ ಪಟ್ಟಣಗಳು ನಾಶ ಆಗುತ್ತೆ. ದೇಶ ಬಂಜರು ಭೂಮಿ ಆಗುತ್ತೆ.+ ಆಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ”’”+ ಅಂದನು.

21 ಯೆಹೋವ ಮತ್ತೆ ನನಗೆ ಹೀಗಂದನು: 22 “ಮನುಷ್ಯಕುಮಾರನೇ, ಇಸ್ರಾಯೇಲಲ್ಲಿ ಜನ್ರು ಅದೆಂಥ ಗಾದೆ ಹೇಳ್ತಿದ್ದಾರೆ? ‘ದಿನಗಳು ಓಡ್ತಿವೆ, ಆದ್ರೆ ಒಂದು ದರ್ಶನನೂ ನಿಜ ಆಗ್ತಿಲ್ಲ’ ಅಂತಿದ್ದಾರಲ್ಲಾ!+ 23 ಹಾಗಾಗಿ ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ: “ಈ ಗಾದೆ ಜನ್ರ ಬಾಯಲ್ಲಿ ಬರದ ಹಾಗೆ ನಾನು ಮಾಡ್ತೀನಿ. ಇಸ್ರಾಯೇಲಲ್ಲಿ ಇನ್ಮುಂದೆ ಅವರು ಆ ಗಾದೆ ಹೇಳಲ್ಲ”’ ಅಂತ ಹೇಳು. ಅಲ್ಲದೆ, ‘ಆ ದಿನಗಳು ಹತ್ತಿರ ಆಗಿವೆ,+ ಎಲ್ಲ ದರ್ಶನಗಳು ನಿಜ ಆಗುತ್ತೆ’ ಅಂತ ಅವ್ರಿಗೆ ಹೇಳು. 24 ಇನ್ಮುಂದೆ ಯಾರಿಗೂ ಸುಳ್ಳು ದರ್ಶನ ಆಗಲ್ಲ, ಬೇರೆಯವ್ರಿಗೆ ಹಿಡಿಸೋ ಹಾಗೆ* ಕಣಿ ಹೇಳೋರು ಯಾರೂ ಇಸ್ರಾಯೇಲ್ಯರಲ್ಲಿ ಇರಲ್ಲ.+ 25 ‘ಯಾಕಂದ್ರೆ ಯೆಹೋವನಾದ ನಾನೇ ಮಾತಾಡ್ತೀನಿ, ನಾನು ಏನು ಹೇಳ್ತೀನೋ ಅದು ನಡೆದೇ ನಡಿಯುತ್ತೆ, ತಡ ಆಗಲ್ಲ.+ ದಂಗೆಕೋರ ಜನ್ರೇ ನೀವು ಬದುಕಿರುವಾಗ್ಲೇ+ ನನ್ನ ಮಾತನ್ನ ಹೇಳ್ತೀನಿ ಮತ್ತು ನೀವು ಬದುಕಿರುವಾಗ್ಲೇ ಅದನ್ನ ನಿಜಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

26 ಯೆಹೋವ ನನಗೆ ಮತ್ತೆ 27 “ಮನುಷ್ಯಕುಮಾರನೇ ಇಸ್ರಾಯೇಲ್ಯರು, ‘ಇವನು ನೋಡೋ ದರ್ಶನ ನಮ್ಮ ಕಾಲದಲ್ಲಂತೂ ನಿಜ ಆಗಲ್ಲ, ಇವನು ಮುಂದೆ ಯಾವತ್ತೋ ಆಗೋದ್ರ ಬಗ್ಗೆ ಭವಿಷ್ಯ ಹೇಳ್ತಿದ್ದಾನೆ’+ ಅಂತ ಹೇಳ್ತಿದ್ದಾರೆ. 28 ಹಾಗಾಗಿ ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗನ್ನುತ್ತಾನೆ: “ನಾನು ಹೇಳೋ ಒಂದೊಂದು ಮಾತೂ ಬೇಗ ನಿಜ ಆಗುತ್ತೆ, ನಾನು ಏನೇ ಹೇಳಿದ್ರೂ ಅದು ನಡೆದೇ ನಡಿಯುತ್ತೆ” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ’ ಅಂತ ಹೇಳು.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ