ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಬೇರೆಯವರ ಪ್ರಾಣಿಗಳನ್ನ ಅಲಕ್ಷಿಸಬಾರದು (1-4)

      • ವಿರುದ್ಧ ಲಿಂಗದವರ ಬಟ್ಟೆ ಹಾಕಬಾರದು (5)

      • ಪ್ರಾಣಿಪಕ್ಷಿಗಳಿಗೆ ದಯೆ ತೋರಿಸಿ (6, 7)

      • ಮಾಳಿಗೆ ಸುತ್ತ ಸಣ್ಣ ಗೋಡೆ (8)

      • ತಪ್ಪಾದ ಬೆರಕೆ (9-11)

      • ಬಟ್ಟೆಯಲ್ಲಿ ಕುಚ್ಚುಗಳು (12)

      • ತಪ್ಪಾದ ಲೈಂಗಿಕ ಸಂಬಂಧಗಳ ಬಗ್ಗೆ ನಿಯಮಗಳು (13-30)

ಧರ್ಮೋಪದೇಶಕಾಂಡ 22:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:4

ಧರ್ಮೋಪದೇಶಕಾಂಡ 22:2

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:12

ಧರ್ಮೋಪದೇಶಕಾಂಡ 22:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:5; ಯಾಜ 19:18; ಲೂಕ 10:27; ಗಲಾ 6:10

ಧರ್ಮೋಪದೇಶಕಾಂಡ 22:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 52

    ಕಾವಲಿನಬುರುಜು (ಅಧ್ಯಯನ),

    9/2016, ಪು. 18

ಧರ್ಮೋಪದೇಶಕಾಂಡ 22:6

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:28; ಕೀರ್ತ 145:9; ಜ್ಞಾನೋ 12:10; ಮತ್ತಾ 10:29

ಧರ್ಮೋಪದೇಶಕಾಂಡ 22:8

ಪಾದಟಿಪ್ಪಣಿ

  • *

    ಅಥವಾ “ತಾರಸಿಯ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 11:2; ಅಕಾ 10:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2001, ಪು. 4-5

ಧರ್ಮೋಪದೇಶಕಾಂಡ 22:9

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:19

ಧರ್ಮೋಪದೇಶಕಾಂಡ 22:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2003, ಪು. 32

    11/15/1995, ಪು. 31

ಧರ್ಮೋಪದೇಶಕಾಂಡ 22:11

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:19

ಧರ್ಮೋಪದೇಶಕಾಂಡ 22:12

ಮಾರ್ಜಿನಲ್ ರೆಫರೆನ್ಸ್

  • +ಅರ 15:38; ಮತ್ತಾ 23:2, 5

ಧರ್ಮೋಪದೇಶಕಾಂಡ 22:13

ಪಾದಟಿಪ್ಪಣಿ

  • *

    ಅಥವಾ “ತಿರಸ್ಕರಿಸಿ.”

ಧರ್ಮೋಪದೇಶಕಾಂಡ 22:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2021, ಪು. 5

ಧರ್ಮೋಪದೇಶಕಾಂಡ 22:16

ಪಾದಟಿಪ್ಪಣಿ

  • *

    ಅಥವಾ “ತಿರಸ್ಕರಿಸ್ತಾ ಇದ್ದಾನೆ.”

ಧರ್ಮೋಪದೇಶಕಾಂಡ 22:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:21; ಧರ್ಮೋ 1:13; 16:18
  • +ಧರ್ಮೋ 25:2; ಜ್ಞಾನೋ 10:13; 19:29

ಧರ್ಮೋಪದೇಶಕಾಂಡ 22:19

ಪಾದಟಿಪ್ಪಣಿ

  • *

    ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಮಲಾ 2:16

ಧರ್ಮೋಪದೇಶಕಾಂಡ 22:21

ಪಾದಟಿಪ್ಪಣಿ

  • *

    ಅಥವಾ “ವೇಶ್ಯೆಯಾಗಿ ನಡ್ಕೊಂಡು.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 21:9
  • +ಇಬ್ರಿ 13:4
  • +ಯಾಜ 11:45; 1ಕೊರಿಂ 5:13

ಧರ್ಮೋಪದೇಶಕಾಂಡ 22:22

ಮಾರ್ಜಿನಲ್ ರೆಫರೆನ್ಸ್

  • +ಆದಿ 20:3; ವಿಮೋ 20:14; ಯಾಜ 20:10; 1ಕೊರಿಂ 6:9, 10, 18

ಧರ್ಮೋಪದೇಶಕಾಂಡ 22:24

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:10; ಧರ್ಮೋ 5:18; 1ಥೆಸ 4:3, 6; ಇಬ್ರಿ 13:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2019, ಪು. 14

ಧರ್ಮೋಪದೇಶಕಾಂಡ 22:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2019, ಪು. 14

ಧರ್ಮೋಪದೇಶಕಾಂಡ 22:26

ಮಾರ್ಜಿನಲ್ ರೆಫರೆನ್ಸ್

  • +ಆದಿ 4:8; ಅರ 35:20, 21; ಯಾಕೋ 2:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2019, ಪು. 14

ಧರ್ಮೋಪದೇಶಕಾಂಡ 22:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2019, ಪು. 14

ಧರ್ಮೋಪದೇಶಕಾಂಡ 22:28

ಮಾರ್ಜಿನಲ್ ರೆಫರೆನ್ಸ್

  • +ಆದಿ 34:2, 5

ಧರ್ಮೋಪದೇಶಕಾಂಡ 22:29

ಮಾರ್ಜಿನಲ್ ರೆಫರೆನ್ಸ್

  • +ಆದಿ 34:11, 12; ವಿಮೋ 22:16

ಧರ್ಮೋಪದೇಶಕಾಂಡ 22:30

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:8; 20:11; ಧರ್ಮೋ 27:20; 1ಕೊರಿಂ 5:1

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 22:1ವಿಮೋ 23:4
ಧರ್ಮೋ. 22:2ಮತ್ತಾ 7:12
ಧರ್ಮೋ. 22:4ವಿಮೋ 23:5; ಯಾಜ 19:18; ಲೂಕ 10:27; ಗಲಾ 6:10
ಧರ್ಮೋ. 22:6ಯಾಜ 22:28; ಕೀರ್ತ 145:9; ಜ್ಞಾನೋ 12:10; ಮತ್ತಾ 10:29
ಧರ್ಮೋ. 22:82ಸಮು 11:2; ಅಕಾ 10:9
ಧರ್ಮೋ. 22:9ಯಾಜ 19:19
ಧರ್ಮೋ. 22:10ಜ್ಞಾನೋ 12:10
ಧರ್ಮೋ. 22:11ಯಾಜ 19:19
ಧರ್ಮೋ. 22:12ಅರ 15:38; ಮತ್ತಾ 23:2, 5
ಧರ್ಮೋ. 22:18ವಿಮೋ 18:21; ಧರ್ಮೋ 1:13; 16:18
ಧರ್ಮೋ. 22:18ಧರ್ಮೋ 25:2; ಜ್ಞಾನೋ 10:13; 19:29
ಧರ್ಮೋ. 22:19ಮಲಾ 2:16
ಧರ್ಮೋ. 22:21ಯಾಜ 21:9
ಧರ್ಮೋ. 22:21ಇಬ್ರಿ 13:4
ಧರ್ಮೋ. 22:21ಯಾಜ 11:45; 1ಕೊರಿಂ 5:13
ಧರ್ಮೋ. 22:22ಆದಿ 20:3; ವಿಮೋ 20:14; ಯಾಜ 20:10; 1ಕೊರಿಂ 6:9, 10, 18
ಧರ್ಮೋ. 22:24ಯಾಜ 20:10; ಧರ್ಮೋ 5:18; 1ಥೆಸ 4:3, 6; ಇಬ್ರಿ 13:4
ಧರ್ಮೋ. 22:26ಆದಿ 4:8; ಅರ 35:20, 21; ಯಾಕೋ 2:11
ಧರ್ಮೋ. 22:28ಆದಿ 34:2, 5
ಧರ್ಮೋ. 22:29ಆದಿ 34:11, 12; ವಿಮೋ 22:16
ಧರ್ಮೋ. 22:30ಯಾಜ 18:8; 20:11; ಧರ್ಮೋ 27:20; 1ಕೊರಿಂ 5:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 22:1-30

ಧರ್ಮೋಪದೇಶಕಾಂಡ

22 ನಿಮ್ಮ ಸಹೋದರನ ಹೋರಿ ಅಥವಾ ಕುರಿ ತಪ್ಪಿಸ್ಕೊಂಡು ಹೋಗ್ತಿರೋದು ನಿಮ್ಮ ಕಣ್ಣಿಗೆ ಬಿದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು.+ ನೀವು ಅದನ್ನ ಹೊಡ್ಕೊಂಡು ಹೋಗಿ ನಿಮ್ಮ ಸಹೋದರನಿಗೆ ಕೊಡ್ಲೇಬೇಕು. 2 ನಿಮ್ಮ ಸಹೋದರ ತುಂಬ ದೂರದಲ್ಲಿದ್ರೆ ಅಥವಾ ಆ ಪ್ರಾಣಿ ಯಾರದು ಅಂತ ನಿಮಗೆ ಗೊತ್ತಿಲ್ಲಾಂದ್ರೆ ಅದನ್ನ ನಿಮ್ಮ ಮನೆಗೆ ಹೊಡ್ಕೊಂಡು ಹೋಗಿ ಇಟ್ಕೊಬೇಕು. ನಿಮ್ಮ ಸಹೋದರ ಅದನ್ನ ಹುಡ್ಕೊಂಡು ಬರೋ ತನಕ ಅದು ನಿಮ್ಮ ಮನೆಲೇ ಇರಬೇಕು. ಅವನು ಬಂದ್ಮೇಲೆ ಅದನ್ನ ವಾಪಾಸ್‌ ಕೊಡಬೇಕು.+ 3 ನಿಮ್ಮ ಸಹೋದರನ ಕತ್ತೆ, ಬಟ್ಟೆ ಅಥವಾ ಬೇರೆ ಏನೇ ವಸ್ತು ಕಳೆದುಹೋಗಿದ್ರೂ ನಿಮಗೆ ಅದು ಸಿಕ್ಕಿದಾಗ ನೋಡಿನೂ ನೋಡದ ಹಾಗೆ ಇರಬಾರದು. ಅವನಿಗೆ ಹಿಂದೆ ಕೊಡಬೇಕು.

4 ನಿಮ್ಮ ಸಹೋದರನ ಕತ್ತೆ ಅಥವಾ ಹೋರಿ ದಾರೀಲಿ ಬಿದ್ದಿರೋದಾದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು. ಆ ಪ್ರಾಣಿನ ಎತ್ತೋಕೆ ಅವನಿಗೆ ಸಹಾಯ ಮಾಡ್ಲೇಬೇಕು.+

5 ಸ್ತ್ರೀ ಪುರುಷನ ಬಟ್ಟೆ ಹಾಕೊಳ್ಳಬಾರದು. ಪುರುಷ ಸ್ತ್ರೀಯ ಬಟ್ಟೆ ಹಾಕೊಳ್ಳಬಾರದು. ಹಾಗೆ ಹಾಕೊಳ್ಳೋರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.

6 ನೀವು ದಾರಿಲಿ ಹೋಗುವಾಗ ಮರದ ಮೇಲೆ ಅಥವಾ ನೆಲದ ಮೇಲೆ ಒಂದು ಹಕ್ಕಿ ಗೂಡನ್ನ ನೋಡಿದ್ರೆ, ಅದ್ರೊಳಗೆ ತಾಯಿಹಕ್ಕಿ ಮರಿಗಳ ಮೇಲೆ ಅಥವಾ ಮೊಟ್ಟೆಗಳ ಮೇಲೆ ಕೂತಿದ್ರೆ ನೀವು ಆ ಮರಿಗಳ ಜೊತೆ ತಾಯಿ ಹಕ್ಕಿಯನ್ನೂ ತಗೊಬಾರದು.+ 7 ತಾಯಿ ಹಕ್ಕಿಯನ್ನ ಹಾರಿಹೋಗೋಕೆ ಬಿಟ್ಟು ಮರಿಗಳನ್ನ ಮಾತ್ರ ತಗೊಬಹುದು. ಹೀಗೆ ಮಾಡಿದ್ರೆ ನಿಮಗೆ ಒಳ್ಳೇದಾಗುತ್ತೆ, ಜಾಸ್ತಿ ವರ್ಷ ಬದುಕ್ತೀರ.

8 ನೀವು ಒಂದು ಹೊಸ ಮನೆ ಕಟ್ಟಿದ್ರೆ ಮನೆ ಮಾಳಿಗೆ* ಸುತ್ತ ಒಂದು ಸಣ್ಣ ಗೋಡೆ ಕಟ್ಟಬೇಕು.+ ಇಲ್ಲಾಂದ್ರೆ ಯಾರಾದ್ರೂ ನಿಮ್ಮ ಮನೆ ಮಾಳಿಗೆಯಿಂದ ಕೆಳಗೆ ಬೀಳಬಹುದು. ಆಗ ಆ ಕೊಲೆ ಅಪರಾಧ ನಿಮ್ಮ ಕುಟುಂಬದ ಮೇಲೆ ಬರುತ್ತೆ.

9 ನಿಮ್ಮ ದ್ರಾಕ್ಷಿತೋಟದಲ್ಲಿ ದ್ರಾಕ್ಷಿ ಜೊತೆ ಬೇರೆ ಯಾವ ಬೀಜವನ್ನೂ ಬಿತ್ತಬಾರದು.+ ಬಿತ್ತಿದ್ರೆ ಆ ಬೆಳೆಯನ್ನೂ ದ್ರಾಕ್ಷಿ ಬೆಳೆಯನ್ನೂ ಆರಾಧನಾ ಸ್ಥಳಕ್ಕೆ ಕೊಡಬೇಕಾಗುತ್ತೆ.

10 ಹೋರಿ ಮತ್ತೆ ಕತ್ತೆ ಎರಡನ್ನೂ ಒಂದೇ ನೇಗಿಲಿಗೆ ಕಟ್ಟಿ ಹೊಲ ಉಳಬಾರದು.+

11 ಉಣ್ಣೆ ಮತ್ತೆ ನಾರು ಎರಡನ್ನೂ ಸೇರಿಸಿ ಮಾಡಿರೋ ಬಟ್ಟೆ ಹಾಕೊಳ್ಳಬಾರದು.+

12 ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಕುಚ್ಚುಗಳನ್ನ ಕಟ್ಟಬೇಕು.+

13 ಒಬ್ಬ ಪುರುಷ ಒಬ್ಬ ಸ್ತ್ರೀಯನ್ನ ಮದುವೆಯಾಗಿ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಅವಳನ್ನ ದ್ವೇಷಿಸಿ* 14 ಅವಳ ನಡತೆ ಸರಿಯಿಲ್ಲ ಅಂತ ಹೇಳ್ತಾ ‘ನಾನು ಇವಳನ್ನ ಮದುವೆ ಆದೆ. ಆದ್ರೆ ಇವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಇವಳು ಕನ್ಯೆ ಅಲ್ಲ ಅಂತ ಗೊತ್ತಾಯ್ತು’ ಅಂತ ಹೇಳಿ ಅವಳ ಹೆಸ್ರನ್ನ ಹಾಳು ಮಾಡಿದ್ರೆ 15 ಅವಳ ತಂದೆತಾಯಿ ಪಟ್ಟಣದ ಬಾಗಿಲ ಹತ್ರ ಇರೋ ಹಿರಿಯರ ಹತ್ರ ಹೋಗಿ ತಮ್ಮ ಮಗಳು ಕನ್ಯೆ ಆಗಿರೋದಕ್ಕೆ ಪುರಾವೆ ತೋರಿಸಬೇಕು. 16 ಅವಳ ತಂದೆ ಆ ಹಿರಿಯರಿಗೆ ‘ನನ್ನ ಮಗಳನ್ನ ಇವನಿಗೆ ಕೊಟ್ಟು ಮದುವೆ ಮಾಡ್ದೆ. ಆದ್ರೆ ಇವನು ಅವಳನ್ನ ದ್ವೇಷಿಸ್ತಿದ್ದಾನೆ.* 17 “ಇವಳು ಕನ್ಯೆ ಅಲ್ಲ ಅಂತ ಗೊತ್ತಾಯ್ತು” ಅಂತ ಹೇಳಿ ಅವಳ ನಡತೆ ಸರಿಯಿಲ್ಲ ಅಂತ ಆರೋಪ ಹಾಕ್ತಿದ್ದಾನೆ. ಆದ್ರೆ ನಮ್ಮ ಮಗಳು ಕನ್ಯೆ ಆಗಿದ್ದಳು ಅನ್ನೋದಕ್ಕೆ ಪುರಾವೆ ಇಲ್ಲಿದೆ ನೋಡಿ’ ಅಂತ ಹೇಳಬೇಕು. ಆಮೇಲೆ ಅವಳ ತಂದೆತಾಯಿ ಪುರಾವೆಯಾಗಿ ತಂದಿರೋ ಬಟ್ಟೆನ ಪಟ್ಟಣದ ಹಿರಿಯರ ಮುಂದೆ ಹಾಸಬೇಕು. 18 ಆಗ ಪಟ್ಟಣದ ಹಿರಿಯರು+ ಆ ಪುರುಷನನ್ನ ಹಿಡಿದು ಅವನಿಗೆ ಶಿಕ್ಷೆ ಕೊಡಬೇಕು.+ 19 ಅವನು ಇಸ್ರಾಯೇಲಿನ ಒಬ್ಬ ಕನ್ಯೆಯ ಹೆಸ್ರನ್ನ ಹಾಳು ಮಾಡಿದ್ರಿಂದ+ ಆ ಹಿರಿಯರು ಅವನಿಗೆ 100 ಬೆಳ್ಳಿ ಶೆಕೆಲ್‌* ದಂಡ ಹಾಕಿ ಆ ಹಣನ ಅವಳ ತಂದೆಗೆ ಕೊಡಬೇಕು. ಅವಳು ಅವನ ಹೆಂಡತಿಯಾಗೇ ಇರಬೇಕು. ಅವನು ಸಾಯೋ ತನಕ ಅವಳಿಗೆ ವಿಚ್ಛೇದನ ಕೊಡೋ ಹಾಗಿಲ್ಲ.

20 ಅವನ ಆರೋಪ ನಿಜ ಆಗಿದ್ರೆ, ಅವಳು ಕನ್ಯೆಯಾಗಿದ್ದಳು ಅನ್ನೋದಕ್ಕೆ ಯಾವ ಪುರಾವೆನೂ ಇಲ್ಲದಿದ್ರೆ 21 ಅವಳನ್ನ ಅವಳ ತಂದೆ ಮನೆ ಬಾಗಿಲ ಮುಂದೆ ತಂದು ನಿಲ್ಲಿಸಬೇಕು. ಅವಳು ತಂದೆ ಮನೇಲಿ ಇರುವಾಗ ಲೈಂಗಿಕ ಅನೈತಿಕತೆ ನಡೆಸಿ*+ ಇಸ್ರಾಯೇಲಿಗೆ ಕಳಂಕ ತರೋ ಕೆಲಸ ಮಾಡಿದ್ರಿಂದ+ ಆ ಪಟ್ಟಣದವರೆಲ್ಲ ಅವಳನ್ನ ಕಲ್ಲು ಹೊಡೆದು ಸಾಯಿಸಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.+

22 ಒಬ್ಬ ಪುರುಷ ಇನ್ನೊಬ್ಬನ ಹೆಂಡತಿ ಜೊತೆ ಮಲಗಿಕೊಂಡಿರುವಾಗ ಸಿಕ್ಕಿಬಿದ್ರೆ ಆ ಪುರುಷ ಮತ್ತು ಸ್ತ್ರೀ ಇಬ್ರನ್ನೂ ಸಾಯಿಸಬೇಕು.+ ಹೀಗೆ ಇಸ್ರಾಯೇಲ್ಯರ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.

23 ಒಬ್ಬನಿಗೆ ನಿಶ್ಚಯ ಆಗಿರೋ ಕನ್ಯೆನ ಇನ್ನೊಬ್ಬ ಪುರುಷ ಪಟ್ಟಣದಲ್ಲಿ ನೋಡಿ ಅವಳ ಜೊತೆ ಮಲಗಿಕೊಂಡ್ರೆ 24 ಅವರಿಬ್ರನ್ನೂ ಆ ಪಟ್ಟಣದ ಬಾಗಿಲಿಗೆ ಕರ್ಕೊಂಡು ಬಂದು ಕಲ್ಲುಹೊಡೆದು ಸಾಯಿಸಬೇಕು. ಅವಳು ಪಟ್ಟಣದಲ್ಲಿದ್ರೂ ಕೂಗಿಕೊಳ್ಳದೆ ಇದ್ದಿದ್ರಿಂದ, ಆ ಪುರುಷ ಇನ್ನೊಬ್ಬನ ಹೆಂಡತಿಯ ಶೀಲ ಕೆಡಿಸಿದ್ರಿಂದ ಅವರಿಬ್ರನ್ನೂ ಸಾಯಿಸಬೇಕು.+ ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.

25 ಒಬ್ಬ ಪುರುಷ ಇನ್ನೊಬ್ಬನಿಗೆ ನಿಶ್ಚಯ ಆಗಿರೋ ಹೆಣ್ಣನ್ನ ಬಯಲಲ್ಲಿ ನೋಡಿ ಬಲಾತ್ಕಾರ ಮಾಡಿದ್ರೆ ಅವನನ್ನ ಸಾಯಿಸಬೇಕು. 26 ಅವಳನ್ನ ಸಾಯಿಸಬಾರದು. ಯಾಕಂದ್ರೆ ಅವಳು ಪಾಪ ಮಾಡಲಿಲ್ಲ. ಇದು, ನಿರಪರಾಧಿ ಮೇಲೆ ಒಬ್ಬ ದಾಳಿ ಮಾಡಿ ಕೊಲ್ಲೋದಕ್ಕೆ ಸಮ.+ 27 ಅವಳು ಬಯಲಲ್ಲಿದ್ದಾಗ ಅವನು ಹಾಗೆ ಮಾಡಿದ್ರಿಂದ, ಅವಳು ಕೂಗ್ಕೊಂಡ್ರೂ ಅವಳನ್ನ ಕಾಪಾಡೋಕೆ ಅಲ್ಲಿ ಯಾರೂ ಇಲ್ಲದಿದ್ರಿಂದ ಅವಳು ನಿರಪರಾಧಿ.

28 ಯಾರಿಗೂ ನಿಶ್ಚಯ ಆಗಿರದ ಕನ್ಯೆಯನ್ನ ಒಬ್ಬ ಪುರುಷ ನೋಡಿ ಬಲಾತ್ಕಾರ ಮಾಡಿ ಆ ವಿಷ್ಯ ಬೆಳಕಿಗೆ ಬಂದ್ರೆ+ 29 ಅವನು ಅವಳ ತಂದೆಗೆ 50 ಬೆಳ್ಳಿ ಶೆಕೆಲ್‌ ಕೊಟ್ಟು ಅವಳನ್ನ ಮದುವೆ ಆಗಬೇಕು.+ ಅವನು ಅವಳನ್ನ ಕೆಡಿಸಿದ್ರಿಂದ ಅವನು ಸಾಯೋ ತನಕ ಅವಳಿಗೆ ವಿಚ್ಛೇದನ ಕೊಡೋ ಹಾಗಿಲ್ಲ.

30 ಯಾವ ಪುರುಷನೂ ತನ್ನ ತಂದೆಯ ಹೆಂಡತಿಯನ್ನ ಮದುವೆ ಆಗಬಾರದು. ಹಾಗೆ ಮಾಡಿದ್ರೆ ಅವನು ತನ್ನ ತಂದೆಗೆ ಅವಮಾನ ಮಾಡಿದ ಹಾಗೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ