ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ತೂರಿನ ವಿರುದ್ಧ ಭವಿಷ್ಯವಾಣಿ (1-21)

        • “ಮೀನು ಬಲೆಗಳನ್ನ ಒಣಗಿಸೋ ಜಾಗ” (5, 14)

        • ಕಲ್ಲು ಮಣ್ಣನ್ನ ಸಮುದ್ರಕ್ಕೆ ಬಿಸಾಡಲಾಗುತ್ತೆ (12)

ಯೆಹೆಜ್ಕೇಲ 26:1

ಪಾದಟಿಪ್ಪಣಿ

  • *

    ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 11ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)

ಯೆಹೆಜ್ಕೇಲ 26:2

ಮಾರ್ಜಿನಲ್ ರೆಫರೆನ್ಸ್

  • +ಯೋವೇ 3:4-6; ಆಮೋ 1:9
  • +ಪ್ರಲಾ 1:1

ಯೆಹೆಜ್ಕೇಲ 26:4

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 23:11; ಆಮೋ 1:10; ಜೆಕ 9:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2017, ಪು. 2

ಯೆಹೆಜ್ಕೇಲ 26:5

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:32

ಯೆಹೆಜ್ಕೇಲ 26:7

ಪಾದಟಿಪ್ಪಣಿ

  • *

    ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:9; ಯೆಹೆ 29:18
  • +ದಾನಿ 2:37
  • +ಹಬ 1:8
  • +ಯೆರೆ 4:13

ಯೆಹೆಜ್ಕೇಲ 26:9

ಪಾದಟಿಪ್ಪಣಿ

  • *

    ಅಥವಾ “ಆಕ್ರಮಣ ಮಾಡೋಕೆ ಬಳಸೋ ಯಂತ್ರದಿಂದ.”

  • *

    ಅಥವಾ “ಕತ್ತಿಯಿಂದ.”

ಯೆಹೆಜ್ಕೇಲ 26:11

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:28; ಹಬ 1:8

ಯೆಹೆಜ್ಕೇಲ 26:12

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:32, 33; 28:5, 18; ಜೆಕ 9:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2017, ಪು. 2

    ಕಾವಲಿನಬುರುಜು,

    1/1/2008, ಪು. 23

ಯೆಹೆಜ್ಕೇಲ 26:13

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 23:16

ಯೆಹೆಜ್ಕೇಲ 26:14

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 26:4, 5

ಯೆಹೆಜ್ಕೇಲ 26:15

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:28

ಯೆಹೆಜ್ಕೇಲ 26:16

ಪಾದಟಿಪ್ಪಣಿ

  • *

    ಅಥವಾ “ಪ್ರಧಾನರು.”

  • *

    ಅಥವಾ “ತೋಳಿಲ್ಲದ ಅಂಗಿಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:35; 32:10

ಯೆಹೆಜ್ಕೇಲ 26:17

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:32
  • +ಯೆಹೆ 28:2
  • +ಆಮೋ 1:9, 10

ಯೆಹೆಜ್ಕೇಲ 26:18

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 23:5

ಯೆಹೆಜ್ಕೇಲ 26:19

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:34

ಯೆಹೆಜ್ಕೇಲ 26:20

ಪಾದಟಿಪ್ಪಣಿ

  • *

    ಅಥವಾ “ಸಮಾಧಿಯಲ್ಲಿ.”

  • *

    ಅಥವಾ “ಅಲಂಕಾರ ಮಾಡ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 28:8

ಯೆಹೆಜ್ಕೇಲ 26:21

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:36

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 26:2ಯೋವೇ 3:4-6; ಆಮೋ 1:9
ಯೆಹೆ. 26:2ಪ್ರಲಾ 1:1
ಯೆಹೆ. 26:4ಯೆಶಾ 23:11; ಆಮೋ 1:10; ಜೆಕ 9:4
ಯೆಹೆ. 26:5ಯೆಹೆ 27:32
ಯೆಹೆ. 26:7ಯೆರೆ 25:9; ಯೆಹೆ 29:18
ಯೆಹೆ. 26:7ದಾನಿ 2:37
ಯೆಹೆ. 26:7ಹಬ 1:8
ಯೆಹೆ. 26:7ಯೆರೆ 4:13
ಯೆಹೆ. 26:11ಯೆಶಾ 5:28; ಹಬ 1:8
ಯೆಹೆ. 26:12ಯೆಹೆ 27:32, 33; 28:5, 18; ಜೆಕ 9:3
ಯೆಹೆ. 26:13ಯೆಶಾ 23:16
ಯೆಹೆ. 26:14ಯೆಹೆ 26:4, 5
ಯೆಹೆ. 26:15ಯೆಹೆ 27:28
ಯೆಹೆ. 26:16ಯೆಹೆ 27:35; 32:10
ಯೆಹೆ. 26:17ಯೆಹೆ 27:32
ಯೆಹೆ. 26:17ಯೆಹೆ 28:2
ಯೆಹೆ. 26:17ಆಮೋ 1:9, 10
ಯೆಹೆ. 26:18ಯೆಶಾ 23:5
ಯೆಹೆ. 26:19ಯೆಹೆ 27:34
ಯೆಹೆ. 26:20ಯೆಹೆ 28:8
ಯೆಹೆ. 26:21ಯೆಹೆ 27:36
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 26:1-21

ಯೆಹೆಜ್ಕೇಲ

26 ಹನ್ನೊಂದನೇ ವರ್ಷದ* ಮೊದಲನೇ ತಿಂಗಳ ಮೊದಲನೇ ದಿನ ಯೆಹೋವ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ತೂರ್‌ ಅನ್ನೋಳು ಯೆರೂಸಲೇಮನ್ನ ಅಣಕಿಸ್ತಾ,+ ‘ಆ ಪಟ್ಟಣ ಜನಾಂಗಗಳಿಗೆ ಬಾಗಿಲ ಹಾಗೆ ಇತ್ತು. ಈಗ ಅದು ನಾಶವಾಗಿದೆ.+ ಅದಕ್ಕೆ ಹಾಗೇ ಆಗಬೇಕಿತ್ತು! ಆ ಪಟ್ಟಣ ನಾಶ ಆಗಿರೋದ್ರಿಂದ ಈಗ ಎಲ್ಲ ಜನ ನನ್ನ ಹತ್ರ ಬರ್ತಾರೆ. ನಾನೀಗ ಶ್ರೀಮಂತಳಾಗ್ತೀನಿ’ ಅಂತ ಹೇಳಿದ್ದಾಳೆ. 3 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ತೂರ್‌ ಅನ್ನೋಳೇ, ನಾನು ನಿನಗೆ ವಿರುದ್ಧವಾಗಿ ಇದ್ದೀನಿ. ಸಮುದ್ರ ಅಲೆಗಳನ್ನ ಎಬ್ಬಿಸೋ ಹಾಗೆ ನಿನ್ನ ಮೇಲೆ ದಾಳಿ ಮಾಡೋಕೆ ನಾನು ತುಂಬ ಜನಾಂಗಗಳನ್ನ ಎಬ್ಬಿಸ್ತೀನಿ. 4 ಅವರು ನಿನ್ನ ಗೋಡೆಗಳನ್ನ ನೆಲಸಮ ಮಾಡ್ತಾರೆ, ನಿನ್ನ ಗೋಪುರಗಳನ್ನ ನಾಶ ಮಾಡ್ತಾರೆ.+ ನಾನು ನಿನ್ನಲ್ಲಿರೋ ಮಣ್ಣನ್ನ ಕೆರೆದು ನಿನ್ನನ್ನ ಹೊಳೆಯೋ ಬೋಳು ಬಂಡೆಯಾಗಿ ಮಾಡ್ತೀನಿ. 5 ನೀನು ಸಮುದ್ರದ ಮಧ್ಯ ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಆಗ್ತೀಯ.’+

ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನೇ ಹೇಳಿದ್ದೀನಿ, ಹಾಗಾಗಿ ಜನಾಂಗಗಳು ನಿನ್ನನ್ನ ಲೂಟಿ ಮಾಡ್ತವೆ. 6 ನಿನ್ನ ಸುತ್ತಮುತ್ತ ಇರೋ ಊರಲ್ಲಿರೋ ಜನ ಕತ್ತಿಯಿಂದ ಸಾಯ್ತಾರೆ. ಆಗ, ನಾನೇ ಯೆಹೋವ ಅಂತ ಜನ್ರಿಗೆ ಗೊತ್ತಾಗುತ್ತೆ.’

7 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ತೂರಿನ ಮೇಲೆ ದಾಳಿ ಮಾಡೋಕೆ ನಾನು ಉತ್ತರದಿಂದ ಬಾಬೆಲಿನ ರಾಜ ನೆಬೂಕದ್ನೆಚ್ಚರನನ್ನ* ಕರ್ಕೊಂಡು ಬರ್ತಿದ್ದೀನಿ.+ ಅವನು ರಾಜರ ರಾಜ.+ ಅವನ ಹತ್ರ ಕುದುರೆಗಳು,+ ಯುದ್ಧರಥಗಳು,+ ಕುದುರೆ ಸವಾರರು, ತುಂಬ ಸೈನಿಕರಿರೋ ಸೈನ್ಯ ಇದೆ. 8 ನಿನ್ನ ಊರಲ್ಲಿರೋ ಜನ್ರನ್ನ ಅವನು ಕತ್ತಿಯಿಂದ ಸಾಯಿಸ್ತಾನೆ. ಅವನು ನಿನ್ನ ವಿರುದ್ಧ ದಾಳಿ ಮಾಡೋಕೆ ಇಳಿಜಾರು ದಿಬ್ಬವನ್ನೂ ಗೋಡೆಯನ್ನೂ ಕಟ್ತಾನೆ. ಅಷ್ಟೇ ಅಲ್ಲ, ಅವನು ದೊಡ್ಡ ಗುರಾಣಿ ಮಾಡ್ತಾನೆ. 9 ಅವನು ಗೋಡೆ ಒಡಿಯೋ ಯಂತ್ರದಿಂದ* ನಿನ್ನ ಗೋಡೆಗಳನ್ನ ಗುದ್ದಿ ಗುದ್ದಿ ಒಡೆದು ಹಾಕ್ತಾನೆ, ಕೊಡಲಿಗಳಿಂದ* ನಿನ್ನ ಗೋಪುರಗಳನ್ನ ಬೀಳಿಸ್ತಾನೆ. 10 ಅವನ ಹತ್ರ ಎಷ್ಟು ಕುದುರೆ ಇದೆ ಅಂದ್ರೆ ಅವು ಓಡುವಾಗ ಧೂಳಿನ ಮೋಡ ಎದ್ದು ನಿನ್ನನ್ನ ಮುಚ್ಕೊಳುತ್ತೆ. ಅವನು ನಿನ್ನ ಬಾಗಿಲ ಹತ್ರ ಬರೋವಾಗ ಕುದುರೆ ಸವಾರರ, ರಥಗಳ ಮತ್ತು ಚಕ್ರಗಳ ಶಬ್ದಕ್ಕೆ ನಿನ್ನ ಗೋಡೆಗಳೇ ನಡುಗುತ್ತವೆ. ಗೋಡೆಗಳು ಬಿದ್ದುಹೋಗಿರೋ ಪಟ್ಟಣದ ಒಳಗೆ ಜನ್ರು ನುಗ್ಗೋ ಹಾಗೆ ಅವನು ನಿನ್ನ ಬಾಗಿಲ ಒಳಗೆ ನುಗ್ತಾನೆ. 11 ಅವನ ಕುದುರೆಗಳು ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲ ತುಳಿದುಬಿಡ್ತವೆ.+ ಅವನು ನಿನ್ನ ಜನ್ರನ್ನ ಕತ್ತಿಯಿಂದ ಸಾಯಿಸ್ತಾನೆ. ನಿನ್ನ ದೊಡ್ಡ ದೊಡ್ಡ ಸ್ತಂಭಗಳು ನೆಲಕ್ಕೆ ಬಿದ್ದು ಪುಡಿಪುಡಿಯಾಗ್ತವೆ. 12 ಸೈನ್ಯಗಳು ನಿನ್ನ ಸಂಪತ್ತನ್ನೆಲ್ಲ ಲೂಟಿ ಮಾಡ್ತವೆ, ನಿನ್ನ ಸರಕುಗಳನ್ನ ಕೊಳ್ಳೆ ಹೊಡೀತವೆ,+ ನಿನ್ನ ಗೋಡೆಗಳನ್ನ ಒಡೆದು ಹಾಕ್ತವೆ, ನಿನ್ನ ಒಳ್ಳೊಳ್ಳೆ ಮನೆಗಳನ್ನ ನೆಲಸಮ ಮಾಡಿಬಿಡ್ತವೆ. ಆಮೇಲೆ ನಿನ್ನಲ್ಲಿರೋ ಕಲ್ಲುಗಳನ್ನ, ಮರದ ವಸ್ತುಗಳನ್ನ, ಮಣ್ಣನ್ನ ಸಮುದ್ರಕ್ಕೆ ಬಿಸಾಕ್ತವೆ.’

13 ‘ನಾನು ನಿನ್ನ ಹಾಡುಗಳನ್ನ ನಿಲ್ಲಿಸಿಬಿಡ್ತೀನಿ, ನಿನ್ನಲ್ಲಿ ತಂತಿವಾದ್ಯಗಳ ಸಂಗೀತ ಇನ್ಮುಂದೆ ಕೇಳಿಸಲ್ಲ.+ 14 ನಾನು ನಿನ್ನನ್ನ ಹೊಳಿಯೋ ಬಂಡೆ ತರ ಮಾಡ್ತೀನಿ. ನೀನು ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಆಗ್ತೀಯ.+ ನಿನ್ನನ್ನ ಮತ್ತೆ ಯಾವತ್ತೂ ಯಾರೂ ಕಟ್ಟಲ್ಲ. ಯಾಕಂದ್ರೆ, ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

15 ವಿಶ್ವದ ರಾಜ ಯೆಹೋವ ತೂರಿಗೆ ಹೇಳೋದು ಏನಂದ್ರೆ ‘ನೀನು ಬೀಳೋ ಶಬ್ದಕ್ಕೆ, ಜೀವ ಹೋಗೋ ಸ್ಥಿತಿಯಲ್ಲಿರೋ ನಿನ್ನ ಜನ್ರ ನರಳಾಟಕ್ಕೆ, ನಿನ್ನ ಮಧ್ಯ ಆಗೋ ಯುದ್ಧಕ್ಕೆ ದ್ವೀಪಗಳು ಗಡಗಡ ಅಂತ ನಡುಗ್ತವೆ.+ 16 ಸಮುದ್ರದ ಎಲ್ಲ ಅಧಿಕಾರಿಗಳು* ಅವ್ರ ಸಿಂಹಾಸನದಿಂದ ಇಳಿದು ಬರ್ತಾರೆ. ಅವ್ರ ಉದ್ದ ಅಂಗಿಗಳನ್ನ* ತೆಗೆದು ಹಾಕ್ತಾರೆ, ಕಸೂತಿಹಾಕಿರೋ ಅವ್ರ ಬಟ್ಟೆಗಳನ್ನ ಬಿಚ್ಚಿಡ್ತಾರೆ. ಅವರು ಭಯದಿಂದ ಬಿದ್ದು ಹೋಗ್ತಾರೆ. ನೆಲದ ಮೇಲೆ ಕೂತು ಒಂದೇ ಸಮ ನಡುಗ್ತಾರೆ ಮತ್ತು ತುಂಬ ಆಶ್ಚರ್ಯದಿಂದ ನಿನ್ನನ್ನೇ ಕಣ್ಣು ಮಿಟುಕಿಸದೆ ನೋಡ್ತಾರೆ.+ 17 ಅವರು ನಿನ್ನ ಬಗ್ಗೆ ಶೋಕಗೀತೆ ಹಾಡ್ತಾ+ ಹೀಗೆ ಹೇಳ್ತಾರೆ:

“ಎಲ್ರೂ ಹೊಗಳ್ತಿದ್ದ ಪಟ್ಟಣ ನೀನಾಗಿದ್ದೆ, ಸಮುದ್ರದಿಂದ ಜನ ಬಂದು ನಿನ್ನಲ್ಲಿ ವಾಸಿಸ್ತಿದ್ರು.

ಸಮುದ್ರದ ಮೇಲೆ ನೀನು, ನಿನ್ನ ಜನ್ರು ತುಂಬ ಶಕ್ತಿಶಾಲಿಗಳಾಗಿದ್ರಿ.+

ಭೂಮಿಯ ಎಲ್ಲ ಜನ್ರ ಎದೆಯಲ್ಲಿ ಭಯ ಹುಟ್ಟಿಸಿದ್ರಿ.

ಆದ್ರೆ ತೂರ್‌ ಪಟ್ಟಣವೇ, ನೀನೀಗ ನಾಶವಾಗಿ ಹೋಗಿದ್ದಿಯಲ್ಲಾ!+

18 ನೀನು ನಾಶವಾಗೋ ದಿನ ದ್ವೀಪಗಳು ನಡುಗ್ತವೆ,

ನೀನು ಇಲ್ಲದೇ ಹೋದ ಮೇಲೆ ಸಮುದ್ರದ ದ್ವೀಪಗಳು ಆತಂಕ ಪಡ್ತವೆ.”’+

19 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ನಿನ್ನನ್ನ ಹಾಳು ಮಾಡಿ ನಿರ್ಜನ ಪಟ್ಟಣಗಳ ಸ್ಥಿತಿಗೆ ತರ್ತಿನಿ. ನಾನು ಉಕ್ಕೇರೋ ನೀರಲ್ಲಿ ನಿನ್ನನ್ನ ಹಾಕ್ತೀನಿ, ಆಗ ನೀನು ವಿಶಾಲ ಸಮುದ್ರದಲ್ಲಿ ಮುಳುಗಿಹೋಗ್ತಿಯ.+ 20 ತುಂಬ ಕಾಲದ ಹಿಂದೆ ಸತ್ತವರು ಎಲ್ಲಿದ್ದಾರೋ ಆ ಗುಂಡಿಯಲ್ಲಿ* ನಾನು ಬೇರೆ ಜನ್ರನ್ನ ಸೇರಿಸೋ ತರ ನಿನ್ನನ್ನೂ ಸೇರಿಸ್ತೀನಿ. ಹಿಂದಿನ ಕಾಲದಲ್ಲಿ ನಾಶವಾದ ಪಟ್ಟಣಗಳು ಎಲ್ಲಿದ್ವೋ ಆ ತಗ್ಗಾದ ಜಾಗಕ್ಕೆ ನೀನೂ ಹೋಗೋ ತರ ಮಾಡ್ತೀನಿ. ಬೇರೆ ಜನ್ರನ್ನ ಹಾಕೋ ಗುಂಡಿಗೆ ನಿನ್ನನ್ನೂ ಹಾಕ್ತೀನಿ.+ ನಿನ್ನಲ್ಲಿ ಯಾರೂ ವಾಸಿಸದ ಹಾಗೆ ಮಾಡ್ತೀನಿ. ಆಮೇಲೆ ನಾನು ಜೀವಿಸೋರ ದೇಶಕ್ಕೆ ಗೌರವ ತರ್ತಿನಿ.*

21 ನೀನು ಥಟ್ಟಂತ ನಾಶ ಆಗೋ ಹಾಗೆ ನಾನು ಮಾಡ್ತೀನಿ. ಆಗ ನೀನು ಇಲ್ಲದೆ ಹೋಗ್ತೀಯ.+ ಅವರು ನಿನ್ನನ್ನ ಹುಡುಕ್ತಾರೆ. ಆದ್ರೆ ನೀನು ಯಾವತ್ತೂ ಸಿಗಲ್ಲ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ