ನಹೂಮ
2 ನಿನೆವೆಯೇ, ಚದರಿಸುವವನು ನಿನ್ನ ವಿರುದ್ಧ ಬಂದಿದ್ದಾನೆ.+
ಹೋಗು, ಹೋಗಿ ನಿನ್ನ ಭದ್ರ ಕೋಟೆಗಳನ್ನ ಕಾಪಾಡ್ಕೊ,
ದಾರಿ ಮೇಲೆ ಕಣ್ಣಿಡು,
ನಿನ್ನ ಶಕ್ತಿನೆಲ್ಲ ಸೇರಿಸ್ಕೊಂಡು* ಯುದ್ಧಕ್ಕೆ ತಯಾರಾಗು.
2 ಯೆಹೋವ ಯಾಕೋಬನ ವೈಭವವನ್ನ,
ಇಸ್ರಾಯೇಲಿನ ವೈಭವವನ್ನೂ ವಾಪಸ್ ಕೊಡ್ತಾನೆ,
ಯಾಕಂದ್ರೆ ನಾಶಕರು ಅವ್ರನ್ನ ನಾಶ ಮಾಡಿದ್ರು,+
ಅವ್ರ ಕೊಂಬೆಗಳನ್ನ ಹಾಳು ಮಾಡಿದ್ರು.
3 ನಿನೆವೆಯ ಶತ್ರುಗಳ ವೀರ ಸೈನಿಕರ ಗುರಾಣಿಗಳು ಕೆಂಪಾಗಿವೆ.
ಅವ್ರ ವೀರ ಸೈನಿಕರು ಕಡುಗೆಂಪು ಬಟ್ಟೆ ಹಾಕೊಂಡಿದ್ದಾರೆ.
ಯುದ್ಧಕ್ಕೆ ಅವರು ತಯಾರಾಗೋ ದಿನ,
ಅವ್ರ ಯುದ್ಧ ರಥಗಳ ಕಬ್ಬಿಣದ ಭಾಗಗಳು ಬೆಂಕಿ ತರ ಹೊಳಿಯುತ್ತೆ.
ಅವರು ಜುನಿಪರ್ ಮರದಿಂದ ಮಾಡಿದ ಈಟಿಗಳನ್ನ ಬೀಸ್ತಿದ್ದಾರೆ.
4 ಯುದ್ಧರಥಗಳು ಬೀದಿಗಳಲ್ಲಿ ವೇಗವಾಗಿ ಓಡ್ತಿವೆ.
ಪಟ್ಟಣದ ಮುಖ್ಯಸ್ಥಳಗಳಲ್ಲಿ ಆಕಡೆಯಿಂದ ಈಕಡೆ ತಿರುಗ್ತಿವೆ.
ಅವು ಪಂಜುಗಳ ಹಾಗೆ ಹೊಳೀತಿವೆ, ಮಿಂಚಿನ ಹಾಗೆ ಪ್ರಕಾಶಿಸ್ತಿವೆ.
5 ಆತನು* ತನ್ನ ಅಧಿಕಾರಿಗಳನ್ನ ಬರೋಕೆ ಹೇಳ್ತಾನೆ.
ಅವರು ಆ ಪಟ್ಟಣದ ಗೋಡೆ ಕಡೆ ಓಡ್ತಾರೆ,
ಎದ್ದು ಬಿದ್ದು ಅಲ್ಲಿಗೆ ಹೋಗಿ,
ಅದ್ರ ಕಾವಲು ಕಾಯ್ತಾರೆ.
7 ಈ ವಿಷ್ಯ ಈಗಾಗ್ಲೇ ತೀರ್ಮಾನ ಆಗಿದೆ:
ಪಟ್ಟಣದ ಜನ್ರು ಎಲ್ರ ಮುಂದೆ ತಲೆ ತಗ್ಗಿಸ್ತಾರೆ,
ಅವ್ರನ್ನ ಕೈದಿಗಳಾಗಿ ಹಿಡ್ಕೊಂಡು ಹೋಗ್ತಾರೆ, ಅವ್ರ ದಾಸಿಯರು ಗೋಳಾಡ್ತಾರೆ.
ಅವರು ಎದೆ* ಬಡ್ಕೊಳ್ತಾ ಪಾರಿವಾಳಗಳ ತರ ಮುಲುಗ್ತಾರೆ.
8 ನಿನೆವೆ+ ಯಾವಾಗಿಂದ ಇದ್ಯೋ ಅವಾಗಿಂದ ನೀರಿನ ಕೊಳದ ತರ ಇತ್ತು,
ಆದ್ರೆ ಈಗ ಜನ ಅದ್ರಿಂದ ದೂರ ಓಡ್ತಿದ್ದಾರೆ.
“ನಿಲ್ಲಿ! ನಿಲ್ಲಿ!” ಅಂತ ಕರೆದ್ರೂ
ಯಾರೂ ಹಿಂದೆ ತಿರುಗಿ ನೋಡ್ತಿಲ್ಲ.+
9 ಚಿನ್ನ ಬೆಳ್ಳಿ ಎಲ್ಲ ಲೂಟಿ ಮಾಡಿ.
ಕೂಡಿಸಿಟ್ಟಿರೋ ವಸ್ತುಗಳಿಗೇನೂ ಕಮ್ಮಿ ಇಲ್ಲ.
ಎಲ್ಲ ರೀತಿಯ ಅಮೂಲ್ಯ ವಸ್ತುಗಳು ಗೋಡೌನಲ್ಲಿ ತುಂಬಿವೆ.
10 ಪಟ್ಟಣ ಖಾಲಿ ಖಾಲಿ ಹೊಡಿತಿದೆ, ನಿರ್ಜನವಾಗಿ ಹಾಳುಬಿದ್ದಿದೆ!+
ಜನ್ರ ಹೃದಯ ಭಯದಿಂದ ಕರಗಿ ಹೋಗಿದೆ, ಮಂಡಿಯೂರಿ ಅದರುತ್ತಿದೆ, ಸೊಂಟ ನಡುಗ್ತಿದೆ,
ಅವ್ರೆಲ್ರ ಮುಖ ಬಿಳಿಚಿಕೊಂಡಿದೆ.
11 ಸಿಂಹಗಳ ಗುಹೆ ಎಲ್ಲಿದೆ?+ ಎಳೇ ಸಿಂಹಗಳು ಎಲ್ಲಿ ಕೂತು ತಿನ್ನುತ್ತೆ?
ಸಿಂಹ ಯಾರಿಗೂ ಭಯಪಡದೆ,
ತನ್ನ ಮರಿಗಳ ಜೊತೆ ಸುತ್ತೋ ಜಾಗ ಯಾವುದು?
12 ಸಿಂಹ ತನ್ನ ಮರಿಗಳಿಗಾಗಿ ಬೇಕಾದಷ್ಟು ಬೇಟೆಯನ್ನ ಸೀಳಿ ತರ್ತಿತ್ತು,
ತನ್ನ ಸಿಂಹಿಣಿಗಳಿಗೋಸ್ಕರ ಬೇಟೆಯ ಕುತ್ತಿಗೆ ಮೇಲೆ ಕಾಲಿಡ್ತಿತ್ತು,
ಬೇಟೆ ಆಡಿ ಪ್ರಾಣಿಗಳಿಂದ ತನ್ನ ಗುಹೆಗಳನ್ನ ತುಂಬಿಸಿತ್ತು,
ಹೌದು ತನ್ನ ಗವಿಗಳನ್ನ ಸೀಳಿದ ಪ್ರಾಣಿಗಳಿಂದ ತುಂಬಿಸಿತ್ತು.
13 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ:
“ನೋಡು! ನಾನು ನಿನಗೆ ವಿರುದ್ಧವಾಗಿದ್ದೀನಿ,+
ನಿನ್ನ ಯುದ್ಧರಥಗಳನ್ನ ಪೂರ್ತಿ ಬೆಂಕಿಯಿಂದ ಸುಟ್ಟುಹಾಕ್ತೀನಿ,+
ನಿನ್ನ ಎಳೇ ಸಿಂಹಗಳನ್ನ ಕತ್ತಿ ನುಂಗಿಬಿಡುತ್ತೆ.
ಭೂಮಿ ಮೇಲೆ ನಿನಗೆ ಬೇಟೆ ಸಿಗದ ಹಾಗೆ ಮಾಡ್ತೀನಿ,
ನಿನ್ನ ಸಂದೇಶವಾಹಕರ ಶಬ್ದ ಇನ್ಮುಂದೆ ಕೇಳಿಸದ ಹಾಗೆ ಮಾಡ್ತೀನಿ.”+