ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ದೇವರ ಸೇವೆ ಮಾಡೋ ಫೊಯಿಬೆಯನ್ನ ಪೌಲ ಪರಿಚಯಿಸಿದ್ದು (1, 2)

      • ರೋಮ್‌ನಲ್ಲಿರೋ ಕ್ರೈಸ್ತರಿಗೆ ವಂದನೆ (3-16)

      • ಒಡಕು ಹುಟ್ಟಿಸುವವ್ರ ಬಗ್ಗೆ ಎಚ್ಚರಿಕೆ (17-20)

      • ಪೌಲನ ಜೊತೆಕೆಲಸಗಾರರು ತಿಳಿಸಿದ ವಂದನೆ (21-24)

      • ಪವಿತ್ರ ರಹಸ್ಯ ಈಗ ಗೊತ್ತಾಗಿದೆ (25-27)

ರೋಮನ್ನರಿಗೆ 16:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2005, ಪು. 21, 23

    7/15/1997, ಪು. 31

ರೋಮನ್ನರಿಗೆ 16:2

ಮಾರ್ಜಿನಲ್ ರೆಫರೆನ್ಸ್

  • +ರೋಮ 12:13; 1ಯೋಹಾ 3:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2005, ಪು. 21, 23

    7/15/1997, ಪು. 31

ರೋಮನ್ನರಿಗೆ 16:3

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:2, 24, 26; 2ತಿಮೊ 4:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/1996, ಪು. 22

ರೋಮನ್ನರಿಗೆ 16:4

ಮಾರ್ಜಿನಲ್ ರೆಫರೆನ್ಸ್

  • +1ಯೋಹಾ 3:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2013, ಪು. 10-11

    12/15/1996, ಪು. 22, 24

    11/15/1993, ಪು. 20-21

ರೋಮನ್ನರಿಗೆ 16:5

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 16:19; ಕೊಲೊ 4:15; ಫಿಲೆ 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2002, ಪು. 7

ರೋಮನ್ನರಿಗೆ 16:7

ಮಾರ್ಜಿನಲ್ ರೆಫರೆನ್ಸ್

  • +ರೋಮ 16:11

ರೋಮನ್ನರಿಗೆ 16:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2013, ಪು. 28-29

ರೋಮನ್ನರಿಗೆ 16:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2019, ಪು. 2-3

    ಕಾವಲಿನಬುರುಜು,

    10/15/1993, ಪು. 15

    8/1/1990, ಪು. 27

ರೋಮನ್ನರಿಗೆ 16:17

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:15; ತೀತ 3:10; 2ಯೋಹಾ 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2011, ಪು. 16

ರೋಮನ್ನರಿಗೆ 16:18

ಪಾದಟಿಪ್ಪಣಿ

  • *

    ಅಥವಾ “ಹೊಟ್ಟೆಗೆ.”

  • *

    ಅಕ್ಷ. “ಜನ್ರ ಮನಸ್ಸನ್ನ.”

ರೋಮನ್ನರಿಗೆ 16:19

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 14:20

ರೋಮನ್ನರಿಗೆ 16:20

ಮಾರ್ಜಿನಲ್ ರೆಫರೆನ್ಸ್

  • +ಆದಿ 3:15; ಇಬ್ರಿ 2:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    ನಂ. 1 2021 ಪು. 12-13

    ಕಾವಲಿನಬುರುಜು,

    1/1/2012, ಪು. 29

    ಪ್ರಕಟನೆ, ಪು. 287

ರೋಮನ್ನರಿಗೆ 16:21

ಮಾರ್ಜಿನಲ್ ರೆಫರೆನ್ಸ್

  • +ರೋಮ 16:7

ರೋಮನ್ನರಿಗೆ 16:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1997, ಪು. 30-31

ರೋಮನ್ನರಿಗೆ 16:23

ಪಾದಟಿಪ್ಪಣಿ

  • *

    ಅಥವಾ “ಖಜಾನೆಯ ಮೇಲ್ವಿಚಾರಕ.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 1:14

ರೋಮನ್ನರಿಗೆ 16:24

ಪಾದಟಿಪ್ಪಣಿ

  • *

    ಪರಿಶಿಷ್ಟ ಎ3 ನೋಡಿ.

ರೋಮನ್ನರಿಗೆ 16:25

ಮಾರ್ಜಿನಲ್ ರೆಫರೆನ್ಸ್

  • +ಎಫೆ 1:9-12; ಕೊಲೊ 1:26, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2019, ಪು. 3

    ಕಾವಲಿನಬುರುಜು,

    6/1/1997, ಪು. 13

ರೋಮನ್ನರಿಗೆ 16:27

ಮಾರ್ಜಿನಲ್ ರೆಫರೆನ್ಸ್

  • +ರೋಮ 11:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 176-178

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2023, ಪು. 13-14

    ಕಾವಲಿನಬುರುಜು,

    4/15/2009, ಪು. 15

    6/1/2007, ಪು. 16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 16:1ಅಕಾ 18:18
ರೋಮ. 16:2ರೋಮ 12:13; 1ಯೋಹಾ 3:17
ರೋಮ. 16:3ಅಕಾ 18:2, 24, 26; 2ತಿಮೊ 4:19
ರೋಮ. 16:41ಯೋಹಾ 3:16
ರೋಮ. 16:51ಕೊರಿಂ 16:19; ಕೊಲೊ 4:15; ಫಿಲೆ 2
ರೋಮ. 16:7ರೋಮ 16:11
ರೋಮ. 16:17ಮತ್ತಾ 7:15; ತೀತ 3:10; 2ಯೋಹಾ 10
ರೋಮ. 16:191ಕೊರಿಂ 14:20
ರೋಮ. 16:20ಆದಿ 3:15; ಇಬ್ರಿ 2:14
ರೋಮ. 16:21ರೋಮ 16:7
ರೋಮ. 16:231ಕೊರಿಂ 1:14
ರೋಮ. 16:25ಎಫೆ 1:9-12; ಕೊಲೊ 1:26, 27
ರೋಮ. 16:27ರೋಮ 11:33
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 16:1-27

ರೋಮನ್ನರಿಗೆ ಬರೆದ ಪತ್ರ

16 ಕೆಂಕ್ರೆಯ ಸಭೆಯಲ್ಲಿ ಸೇವೆ ಮಾಡೋ ನಮ್ಮ ಸಹೋದರಿ ಫೊಯಿಬೆಯನ್ನ ನಾನು ನಿಮಗೆ ಪರಿಚಯ ಮಾಡ್ತಿದ್ದೀನಿ.+ 2 ನೀವು ಅವಳನ್ನ ಒಡೆಯನ ಹೆಸ್ರಲ್ಲಿ ಸ್ವಾಗತಿಸಿ. ಇದನ್ನ ಪವಿತ್ರ ಜನ್ರಿಗೆ ಯೋಗ್ಯವಾಗಿರೋ ತರ ಮಾಡಿ. ಅವಳಿಗೆ ಬೇಕಾಗಿರೋ ಎಲ್ಲ ಸಹಾಯ ಮಾಡಿ.+ ಯಾಕಂದ್ರೆ ಅವಳು ತುಂಬ ಜನ್ರಿಗೆ ಸಹಾಯ ಮಾಡಿದ್ದಾಳೆ, ನನಗೂ ಮಾಡಿದ್ದಾಳೆ.

3 ನನ್ನ ಜೊತೆ ಕ್ರಿಸ್ತ ಯೇಸುವಿನ ಕೆಲಸ ಮಾಡೋ ಪ್ರಿಸ್ಕಳಿಗೆ, ಅಕ್ವಿಲನಿಗೆ ನನ್ನ ವಂದನೆ ಹೇಳಿ.+ 4 ನನ್ನ ಜೀವ ಉಳಿಸೋಕೆ ಅವರು ತಮ್ಮ ಜೀವಾನೇ ಪಣಕ್ಕಿಟ್ರು.+ ನಾನಷ್ಟೇ ಅಲ್ಲ ಬೇರೆ ಜನಾಂಗಗಳ ಎಲ್ಲ ಸಭೆಯವರೂ ಅವ್ರಿಗೆ ಧನ್ಯವಾದ ಹೇಳಿದ್ದಾರೆ. 5 ಅವ್ರ ಮನೇಲಿ ಸೇರಿಬರೋ ಸಭೆಯವ್ರಿಗೂ ನನ್ನ ವಂದನೆ.+ ಪ್ರಿಯ ಎಪೈನೆತನಿಗೂ ವಂದನೆ. ಏಷ್ಯಾದಲ್ಲಿ ಮೊದಮೊದ್ಲು ಕ್ರಿಸ್ತನ ಶಿಷ್ಯರಾದವ್ರಲ್ಲಿ ಅವನೂ ಒಬ್ಬ. 6 ನಿಮಗಾಗಿ ಕಷ್ಟಪಟ್ಟು ಕೆಲಸಮಾಡಿದ ಮರಿಯಳಿಗೂ ವಂದನೆ. 7 ನನ್ನ ಸಂಬಂಧಿಕರಾದ ಆಂದ್ರೋನಿಕ ಮತ್ತು ಯೂನ್ಯನಿಗೆ ವಂದನೆ.+ ಅವರು ನನ್ನ ಜೊತೆ ಜೈಲಲ್ಲಿ ಇದ್ರು. ಅವ್ರ ಬಗ್ಗೆ ಅಪೊಸ್ತಲರಿಗೆ ಒಳ್ಳೇ ಅಭಿಪ್ರಾಯ ಇದೆ. ನನಗಿಂತ ಮುಂಚೆನೇ ಅವರು ಕ್ರಿಸ್ತನನ್ನ ಹಿಂಬಾಲಿಸ್ತಿದ್ದಾರೆ.

8 ಒಡೆಯನನ್ನ ಹಿಂಬಾಲಿಸೋ ನನ್ನ ಪ್ರೀತಿಯ ಅಂಪ್ಲಿಯಾತನಿಗೆ ನನ್ನ ವಂದನೆ ಹೇಳಿ. 9 ನಮ್ಮ ಜೊತೆ ಕ್ರಿಸ್ತನ ಕೆಲಸ ಮಾಡೋ ಉರ್ಬಾನನಿಗೆ, ನನ್ನ ಪ್ರಿಯ ಸ್ತಾಖುಯನಿಗೆ ವಂದನೆ. 10 ಕ್ರಿಸ್ತನ ಮೆಚ್ಚುಗೆ ಪಡ್ಕೊಂಡಿರೋ ಅಪೆಲ್ಲನಿಗೆ ವಂದನೆ. ಅರಿಸ್ತೊಬೂಲನ ಮನೆಯವ್ರಿಗೆ ವಂದನೆ. 11 ನನ್ನ ಸಂಬಂಧಿಕ ಹೆರೊಡಿಯೋನನಿಗೆ ವಂದನೆ. ನಾರ್ಕಿಸ್ಸನ ಮನೆಯವ್ರಲ್ಲಿ ಒಡೆಯನನ್ನ ಹಿಂಬಾಲಿಸೋರಿಗೆ ವಂದನೆ. 12 ಒಡೆಯನಿಗಾಗಿ ಕಷ್ಟಪಟ್ಟು ಕೆಲಸಮಾಡ್ತಿರೋ ತ್ರುಫೈನಳಿಗೆ, ತ್ರುಫೋಸಳಿಗೆ ವಂದನೆ. ನಮ್ಮ ಪ್ರಿಯ ಪೆರ್ಸೀಸಳಿಗೂ ವಂದನೆ. ಅವಳು ಒಡೆಯನಿಗಾಗಿ ತುಂಬ ಕಷ್ಟಪಟ್ಟು ಕೆಲಸ ಮಾಡಿದ್ದಾಳೆ. 13 ಒಡೆಯನ ಒಳ್ಳೇ ಸೇವಕನಾದ ರೂಫನಿಗೆ ಮತ್ತು ಅವನ ತಾಯಿಗೆ ವಂದನೆ. ಅವಳು ನನಗೂ ಅಮ್ಮನ ತರ. 14 ಅಸುಂಕ್ರಿತ, ಪ್ಲೆಗೋನ, ಹೆರ್ಮೇಯ, ಪತ್ರೋಬ, ಹೆರ್ಮಾನ ಮತ್ತು ಅವ್ರ ಜೊತೆ ಇರೋ ಸಹೋದರರಿಗೆ ವಂದನೆ. 15 ಫಿಲೊಲೊಗನಿಗೆ ಮತ್ತು ಯೂಲ್ಯಳಿಗೆ, ನೇರ್ಯನಿಗೆ ಮತ್ತು ಅವನ ಸಹೋದರಿಗೆ, ಒಲುಂಪನಿಗೆ ಮತ್ತು ಅವ್ರ ಜೊತೆ ಇರೋ ಎಲ್ಲ ಪವಿತ್ರ ಜನ್ರಿಗೆ ವಂದನೆ. 16 ಒಬ್ರು ಇನ್ನೊಬ್ರಿಗೆ ಪವಿತ್ರವಾದ ಮುತ್ತು ಕೊಟ್ಟು ವಂದಿಸಿ. ಕ್ರಿಸ್ತನ ಎಲ್ಲ ಸಭೆಯವರು ನಿಮಗೆ ವಂದನೆ ಹೇಳಿದ್ದಾರೆ.

17 ಸಹೋದರರೇ, ನೀವು ಕಲಿತಿರೋ ಬೋಧನೆಗೆ ವಿರುದ್ಧ ಹೋಗಿ ನಿಮ್ಮಲ್ಲಿ ಒಡಕು ತರೋ ಮತ್ತು ಇನ್ನೊಬ್ರ ನಂಬಿಕೆ ಹಾಳು ಮಾಡೋ ವ್ಯಕ್ತಿಗಳನ್ನ ಕಂಡುಹಿಡಿದು ಅವ್ರಿಂದ ದೂರ ಇರಿ ಅಂತ ನಾನು ನಿಮ್ಮನ್ನ ಬೇಡ್ಕೊಳ್ತೀನಿ.+ 18 ಅಂಥವರು ನಮ್ಮ ಪ್ರಭುವಾದ ಕ್ರಿಸ್ತನ ದಾಸರಲ್ಲ, ಅವ್ರ ಆಸೆಗಳಿಗೆ* ದಾಸರು. ಅವರು ನಯವಾದ ಮಾತುಗಳನ್ನ ಹೇಳಿ, ಹೊಗಳಿ ಅಟ್ಟಕ್ಕೇರಿಸಿ ಮುಗ್ಧ ಜನ್ರನ್ನ* ವಂಚಿಸ್ತಾರೆ. 19 ನೀವು ದೇವರ ಮಾತು ಕೇಳುವವರು ಅಂತ ಎಲ್ರಿಗೂ ಗೊತ್ತು. ಹಾಗಾಗಿ ನಿಮ್ಮ ಬಗ್ಗೆ ನನಗೆ ತುಂಬ ಖುಷಿ ಆಗುತ್ತೆ. ನೀವು ವಿವೇಕಿಗಳಾಗಿ ಇರಬೇಕು, ಒಳ್ಳೇದು ಮಾಡಬೇಕು, ಮುಗ್ಧರ ತರ ಕೆಟ್ಟದ್ರ ಬಗ್ಗೆ ಏನೂ ಗೊತ್ತಿಲ್ಲದವರಾಗಿ ಇರಬೇಕು ಅನ್ನೋದೇ ನನ್ನಾಸೆ.+ 20 ಶಾಂತಿಯನ್ನ ಕೊಡೋ ದೇವರು ಬೇಗ ಸೈತಾನನನ್ನ ನಿಮ್ಮ ಕಾಲ ಕೆಳಗೆ ಹಾಕಿ ಜಜ್ಜಿಬಿಡ್ತಾನೆ.+ ನಮ್ಮ ಪ್ರಭು ಯೇಸು ನಿಮಗೆ ಅಪಾರ ಕೃಪೆ ತೋರಿಸ್ಲಿ.

21 ನನ್ನ ಜೊತೆ ಕೆಲಸ ಮಾಡೋ ತಿಮೊತಿ, ನನ್ನ ಸಂಬಂಧಿಕರಾದ ಲೂಕ್ಯ, ಯಾಸೋನ, ಸೋಸಿಪತ್ರ ನಿಮಗೆ ವಂದನೆ ಹೇಳಿದ್ದಾರೆ.+

22 ಈ ಪತ್ರವನ್ನ ಬರೆದ ತೆರ್ತ್ಯನಾದ ನಾನು ನಿಮಗೆ ಒಡೆಯನ ಹೆಸ್ರಲ್ಲಿ ವಂದನೆ ಹೇಳ್ತೀನಿ.

23 ನನಗೆ ಅತಿಥಿಸತ್ಕಾರ ಮಾಡ್ತಿರೋ ಗಾಯ+ ಮತ್ತು ಅವನ ಮನೇಲಿ ಸೇರಿಬರೋ ಸಭೆಯವ್ರೆಲ್ಲ ನಿಮಗೆ ವಂದನೆ ಹೇಳಿದ್ದಾರೆ. ಪಟ್ಟಣದ ಖಜಾಂಚಿ* ಎರಸ್ತ ಮತ್ತು ಅವನ ಸಹೋದರ ಕ್ವರ್ತ ನಿಮಗೆ ವಂದನೆ ಹೇಳಿದ್ದಾರೆ. 24 *——

25 ನಾನು ಸಾರಿದ ಸಿಹಿಸುದ್ದಿಯಿಂದ ಮತ್ತು ಯೇಸು ಕ್ರಿಸ್ತನ ಬಗ್ಗೆ ಸಾರಿದ ವಿಷ್ಯದಿಂದ ದೇವರು ನಿಮ್ಮನ್ನ ಬಲಪಡಿಸ್ತಾನೆ. ಆ ಸಂದೇಶ ದೇವರು ಹೇಳಿದ ಪವಿತ್ರ ರಹಸ್ಯಕ್ಕೆ ಹೊಂದಿಕೆಯಲ್ಲಿದೆ.+ ಈ ಪವಿತ್ರ ರಹಸ್ಯ ತುಂಬ ಸಮಯದಿಂದ ಗುಟ್ಟಾಗಿತ್ತು. 26 ಆದ್ರೆ ಈಗ ಆ ಗುಟ್ಟು ಪವಿತ್ರ ಗ್ರಂಥದಲ್ಲಿರೋ ಭವಿಷ್ಯವಾಣಿಗಳ ಮೂಲಕ ನಮಗೆ ಸ್ಪಷ್ಟವಾಗಿ ಗೊತ್ತಾಗಿದೆ ಮತ್ತು ಅರ್ಥ ಆಗಿದೆ. ಈ ರಹಸ್ಯವನ್ನ ಎಲ್ಲ ಜನ್ರಿಗೆ ಹೇಳಬೇಕಂತ ಶಾಶ್ವತಕ್ಕೂ ಇರೋ ದೇವರು ಆಜ್ಞೆ ಕೊಟ್ಟಿದ್ದಾನೆ. ಯಾಕಂದ್ರೆ ಅವ್ರೆಲ್ಲ ಆತನ ಮೇಲೆ ನಂಬಿಕೆಯಿಟ್ಟು ಮಾತು ಕೇಳಬೇಕು ಅನ್ನೋದೇ ಆತನ ಇಷ್ಟ. 27 ಆತನೊಬ್ಬನೇ ವಿವೇಕಿ,+ ಆತನಿಗೆ ಯೇಸು ಕ್ರಿಸ್ತನ ಮೂಲಕ ಯಾವಾಗ್ಲೂ ಗೌರವ ಸಲ್ಲಲಿ. ಆಮೆನ್‌.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ