ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ಬೆನ್ಯಾಮೀನ್ಯರ ವಿರುದ್ಧ ಯುದ್ಧ (1-48)

ನ್ಯಾಯಸ್ಥಾಪಕರು 20:1

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 22:9
  • +ಯೆಹೋ 19:47, 48; ನ್ಯಾಯ 18:29
  • +1ಸಮು 7:5; 10:17; 2ಅರ 25:23

ನ್ಯಾಯಸ್ಥಾಪಕರು 20:2

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:17; 2ಸಮು 24:9

ನ್ಯಾಯಸ್ಥಾಪಕರು 20:3

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 19:22

ನ್ಯಾಯಸ್ಥಾಪಕರು 20:4

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 19:1, 2
  • +ನ್ಯಾಯ 19:12, 14

ನ್ಯಾಯಸ್ಥಾಪಕರು 20:5

ಪಾದಟಿಪ್ಪಣಿ

  • *

    ಬಹುಶಃ, “ಭೂಮಾಲೀಕರು.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 19:25, 26

ನ್ಯಾಯಸ್ಥಾಪಕರು 20:6

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 19:29

ನ್ಯಾಯಸ್ಥಾಪಕರು 20:7

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 19:30

ನ್ಯಾಯಸ್ಥಾಪಕರು 20:9

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:18; ಜ್ಞಾನೋ 16:33

ನ್ಯಾಯಸ್ಥಾಪಕರು 20:13

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 19:22, 25
  • +ಧರ್ಮೋ 13:5; 17:7; 22:22; 1ಕೊರಿಂ 5:6, 13

ನ್ಯಾಯಸ್ಥಾಪಕರು 20:16

ಪಾದಟಿಪ್ಪಣಿ

  • *

    ಅಥವಾ “ಎಡಚರಾಗಿದ್ರು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 96

ನ್ಯಾಯಸ್ಥಾಪಕರು 20:17

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:2

ನ್ಯಾಯಸ್ಥಾಪಕರು 20:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:30; ಅರ 27:21; ನ್ಯಾಯ 20:27

ನ್ಯಾಯಸ್ಥಾಪಕರು 20:23

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:28

ನ್ಯಾಯಸ್ಥಾಪಕರು 20:25

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:21

ನ್ಯಾಯಸ್ಥಾಪಕರು 20:26

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:23
  • +2ಪೂರ್ವ 20:3; ಎಜ್ರ 8:21
  • +ಯಾಜ 1:3
  • +ಯಾಜ 3:1

ನ್ಯಾಯಸ್ಥಾಪಕರು 20:27

ಮಾರ್ಜಿನಲ್ ರೆಫರೆನ್ಸ್

  • +ಅರ 27:21; ನ್ಯಾಯ 20:18

ನ್ಯಾಯಸ್ಥಾಪಕರು 20:28

ಪಾದಟಿಪ್ಪಣಿ

  • *

    ಅಕ್ಷ. “ನಿಲ್ತಿದ್ದ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:25; ಅರ 25:7
  • +ನ್ಯಾಯ 20:23

ನ್ಯಾಯಸ್ಥಾಪಕರು 20:29

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 8:3, 4

ನ್ಯಾಯಸ್ಥಾಪಕರು 20:30

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:20, 22

ನ್ಯಾಯಸ್ಥಾಪಕರು 20:31

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:36
  • +ನ್ಯಾಯ 20:39

ನ್ಯಾಯಸ್ಥಾಪಕರು 20:32

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:21, 25

ನ್ಯಾಯಸ್ಥಾಪಕರು 20:35

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:28, 48
  • +ನ್ಯಾಯ 20:14, 15, 46

ನ್ಯಾಯಸ್ಥಾಪಕರು 20:36

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:31
  • +ನ್ಯಾಯ 20:29

ನ್ಯಾಯಸ್ಥಾಪಕರು 20:39

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:31
  • +ನ್ಯಾಯ 20:21, 25

ನ್ಯಾಯಸ್ಥಾಪಕರು 20:44

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:15

ನ್ಯಾಯಸ್ಥಾಪಕರು 20:45

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 21:13

ನ್ಯಾಯಸ್ಥಾಪಕರು 20:46

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:15, 35

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 20:1ಯೆಹೋ 22:9
ನ್ಯಾಯ. 20:1ಯೆಹೋ 19:47, 48; ನ್ಯಾಯ 18:29
ನ್ಯಾಯ. 20:11ಸಮು 7:5; 10:17; 2ಅರ 25:23
ನ್ಯಾಯ. 20:2ನ್ಯಾಯ 20:17; 2ಸಮು 24:9
ನ್ಯಾಯ. 20:3ನ್ಯಾಯ 19:22
ನ್ಯಾಯ. 20:4ನ್ಯಾಯ 19:1, 2
ನ್ಯಾಯ. 20:4ನ್ಯಾಯ 19:12, 14
ನ್ಯಾಯ. 20:5ನ್ಯಾಯ 19:25, 26
ನ್ಯಾಯ. 20:6ನ್ಯಾಯ 19:29
ನ್ಯಾಯ. 20:7ನ್ಯಾಯ 19:30
ನ್ಯಾಯ. 20:9ನ್ಯಾಯ 20:18; ಜ್ಞಾನೋ 16:33
ನ್ಯಾಯ. 20:13ನ್ಯಾಯ 19:22, 25
ನ್ಯಾಯ. 20:13ಧರ್ಮೋ 13:5; 17:7; 22:22; 1ಕೊರಿಂ 5:6, 13
ನ್ಯಾಯ. 20:17ನ್ಯಾಯ 20:2
ನ್ಯಾಯ. 20:18ವಿಮೋ 28:30; ಅರ 27:21; ನ್ಯಾಯ 20:27
ನ್ಯಾಯ. 20:23ನ್ಯಾಯ 20:28
ನ್ಯಾಯ. 20:25ನ್ಯಾಯ 20:21
ನ್ಯಾಯ. 20:26ನ್ಯಾಯ 20:23
ನ್ಯಾಯ. 20:262ಪೂರ್ವ 20:3; ಎಜ್ರ 8:21
ನ್ಯಾಯ. 20:26ಯಾಜ 1:3
ನ್ಯಾಯ. 20:26ಯಾಜ 3:1
ನ್ಯಾಯ. 20:27ಅರ 27:21; ನ್ಯಾಯ 20:18
ನ್ಯಾಯ. 20:28ವಿಮೋ 6:25; ಅರ 25:7
ನ್ಯಾಯ. 20:28ನ್ಯಾಯ 20:23
ನ್ಯಾಯ. 20:29ಯೆಹೋ 8:3, 4
ನ್ಯಾಯ. 20:30ನ್ಯಾಯ 20:20, 22
ನ್ಯಾಯ. 20:31ನ್ಯಾಯ 20:36
ನ್ಯಾಯ. 20:31ನ್ಯಾಯ 20:39
ನ್ಯಾಯ. 20:32ನ್ಯಾಯ 20:21, 25
ನ್ಯಾಯ. 20:35ನ್ಯಾಯ 20:28, 48
ನ್ಯಾಯ. 20:35ನ್ಯಾಯ 20:14, 15, 46
ನ್ಯಾಯ. 20:36ನ್ಯಾಯ 20:31
ನ್ಯಾಯ. 20:36ನ್ಯಾಯ 20:29
ನ್ಯಾಯ. 20:39ನ್ಯಾಯ 20:31
ನ್ಯಾಯ. 20:39ನ್ಯಾಯ 20:21, 25
ನ್ಯಾಯ. 20:44ನ್ಯಾಯ 20:15
ನ್ಯಾಯ. 20:45ನ್ಯಾಯ 21:13
ನ್ಯಾಯ. 20:46ನ್ಯಾಯ 20:15, 35
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 20:1-48

ನ್ಯಾಯಸ್ಥಾಪಕರು

20 ಆಗ ಗಿಲ್ಯಾದಲ್ಲಿದ್ದ+ ಮತ್ತು ದಾನಿನಿಂದ+ ಬೇರ್ಷೆಬದ ತನಕ ಇದ್ದ ಎಲ್ಲ ಇಸ್ರಾಯೇಲ್ಯರು ಬಂದು ಮಿಚ್ಪಾದಲ್ಲಿರೋ+ ಯೆಹೋವನ ಸನ್ನಿಧಿಯಲ್ಲಿ ಒಂದೇ ಮನಸ್ಸಿಂದ ಸಭೆ ಸೇರಿದ್ರು. 2 ಹಾಗಾಗಿ ಜನ್ರ ಅಧಿಪತಿಗಳು, ಇಸ್ರಾಯೇಲಿನ ಎಲ್ಲ ಕುಲಗಳವರು ದೇವರ ಜನ್ರ ಸಭೆಯಲ್ಲಿ ಅವ್ರವ್ರ ಜಾಗದಲ್ಲಿ ಬಂದು ನಿಂತ್ರು. ಅವ್ರಲ್ಲಿ ಆಯುಧ ಇದ್ದ 4,00,000 ಕಾಲಾಳುಗಳು ಇದ್ರು.+

3 ಇಸ್ರಾಯೇಲಿನ ಗಂಡಸ್ರು ಮಿಚ್ಪಾಗೆ ಹೋಗಿರೋ ಸುದ್ದಿ ಬೆನ್ಯಾಮೀನ್ಯರ ಕಿವಿಗೆ ಬಿತ್ತು.

ಇಸ್ರಾಯೇಲ್‌ ಗಂಡಸ್ರು “ಈ ಭಯಂಕರ ಘಟನೆ ಹೇಗಾಯ್ತು ನಮಗೆ ಹೇಳು”+ ಅಂತ ಕೇಳಿದಾಗ 4 ಸತ್ತ ಹುಡುಗಿಯ ಗಂಡ+ ಹೀಗಂದ: “ನನ್ನ ಉಪಪತ್ನಿ ಜೊತೆ ಬೆನ್ಯಾಮೀನ್ಯರ ಗಿಬೆಯಾದಲ್ಲಿ+ ಒಂದು ರಾತ್ರಿ ಉಳ್ಕೊಂಡೆ. 5 ಗಿಬೆಯಾದ ಜನ್ರು* ಅದೇ ರಾತ್ರಿ ನನ್ನ ವಿರುದ್ಧ ಬಂದು ಮನೆನ ಸುತ್ತುವರಿದ್ರು. ನನ್ನನ್ನ ಕೊಂದು ಹಾಕಬೇಕು ಅಂದ್ಕೊಂಡ್ರು. ಆದ್ರೆ ಅವರು ನನ್ನ ಉಪಪತ್ನಿ ಮೇಲೆ ಅತ್ಯಾಚಾರ ಮಾಡಿದ್ರು, ಅವಳು ಸತ್ತುಹೋದಳು.+ 6 ಹಾಗಾಗಿ ನನ್ನ ಉಪಪತ್ನಿಯ ದೇಹನ ಕತ್ತರಿಸಿ ತುಂಡು ಮಾಡಿ ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಕಳಿಸ್ದೆ.+ ಯಾಕಂದ್ರೆ ಅವರು ಇಸ್ರಾಯೇಲಲ್ಲಿ ನಾಚಿಕೆಗೆಟ್ಟ ಮತ್ತು ಅವಮಾನ ತರೋ ಕೆಲಸ ಮಾಡಿದ್ದಾರೆ. 7 ಇಸ್ರಾಯೇಲಿನ ಜನ್ರೇ, ಈಗ ಈ ವಿಷ್ಯದ ಬಗ್ಗೆ ಏನು ಮಾಡೋದು ಅಂತ ನೀವೇ ಸಲಹೆ ಕೊಡಿ.”+

8 ಆಗ ಎಲ್ಲ ಜನ್ರು ಒಂದೇ ಮನಸ್ಸಿಂದ “ನಮ್ಮಲ್ಲಿ ಒಬ್ಬನೂ ತನ್ನ ಡೇರೆಗೆ, ತನ್ನ ಮನೆಗೆ ವಾಪಸ್‌ ಹೋಗಲ್ಲ. 9 ಬನ್ನಿ ನಾವು ಚೀಟಿ+ ಹಾಕಿ ಗಿಬೆಯಾದ ವಿರುದ್ಧ ಯುದ್ಧ ಮಾಡೋಕೆ ಯಾರು ಹೋಗಬೇಕು ಅಂತ ನೋಡೋಣ. 10 ಇಸ್ರಾಯೇಲಲ್ಲಿ ನಾಚಿಕೆಗೆಟ್ಟ, ಅವಮಾನ ತರೋ ಕೆಲಸ ಮಾಡಿರೋ ಬೆನ್ಯಾಮೀನ್ಯರಾದ ಗಿಬೆಯಾದವ್ರ ಮೇಲೆ ದಾಳಿ ಮಾಡೋಣ. ಸೈನ್ಯಕ್ಕೆ ಬೇಕಾಗಿರೋ ಆಹಾರ ತರೋಕೆ ಇಸ್ರಾಯೇಲಿನ ಎಲ್ಲ ಕುಲಗಳಿಂದ 100ಕ್ಕೆ 10, 1,000ಕ್ಕೆ 100, 10,000ಕ್ಕೆ 1,000 ಗಂಡಸ್ರನ್ನ ಆರಿಸ್ಕೊಳ್ಳೋಣ” ಅಂದ್ರು. 11 ಹೀಗೆ ಇಸ್ರಾಯೇಲಿನ ಎಲ್ಲ ಗಂಡಸ್ರು ಆ ಪಟ್ಟಣದ ವಿರುದ್ಧ ಒಂದಾಗಿ ನಿಂತ್ರು.

12 ಆಮೇಲೆ ಇಸ್ರಾಯೇಲ್‌ ಕುಲದವರು ಎಲ್ಲ ಬೆನ್ಯಾಮೀನ್ಯರ ಹತ್ರ ಗಂಡಸ್ರನ್ನ ಕಳಿಸಿ ಅವ್ರಿಗೆ “ನಿಮ್ಮ ಜನ್ರು ಎಂಥ ನೀಚ ಕೆಲಸ ಮಾಡಿದ್ದಾರೆ! 13 ಈಗ ಗಿಬೆಯಾದ ಆ ಅಯೋಗ್ಯ ಜನ್ರನ್ನ+ ನಮ್ಮ ಕೈಗೆ ಒಪ್ಪಿಸಿ. ನಾವು ಅವ್ರನ್ನ ಸಾಯಿಸಿ ಇಸ್ರಾಯೇಲಿನ ಮಧ್ಯದಿಂದ ಈ ಕೆಟ್ಟತನ ತೆಗೆದುಹಾಕ್ತೀವಿ”+ ಅಂದ್ರು. ಬೆನ್ಯಾಮೀನ್ಯರು ಅವ್ರ ಮಾತು ಕೇಳಲಿಲ್ಲ.

14 ಆಮೇಲೆ ಬೆನ್ಯಾಮೀನ್ಯರು ತಮ್ಮ ಪಟ್ಟಣಗಳಿಂದ ಹೊರಗೆ ಬಂದು ಇಸ್ರಾಯೇಲಿನ ಗಂಡಸ್ರ ವಿರುದ್ಧ ಯುದ್ಧ ಮಾಡೋಕೆ ಗಿಬೆಯಾದಲ್ಲಿ ಸೇರಿ ಬಂದ್ರು. 15 ಅವತ್ತು ಬೆನ್ಯಾಮೀನ್ಯರು ತಮ್ಮ ಪಟ್ಟಣಗಳಿಂದ ಆಯುಧ ಇದ್ದ 26,000 ಸೈನಿಕರನ್ನ ಒಟ್ಟುಸೇರಿಸಿದ್ರು. ಗಿಬೆಯಾದ 700 ನಿಪುಣ ಸೈನಿಕರಿದ್ರು. 16 ಈ ಸೈನ್ಯದಲ್ಲಿದ್ದ 700 ನಿಪುಣ ಸೈನಿಕರು ಎಡಗೈಯವರಾಗಿದ್ರು.* ಅವ್ರೆಲ್ರು ಕೂದಲೆಳೆಯಷ್ಟೂ ಗುರಿತಪ್ಪದ ಹಾಗೆ ಕವಣೆ ಬೀಸೋದ್ರಲ್ಲಿ ನಿಪುಣರಾಗಿದ್ರು.

17 ಬೆನ್ಯಾಮೀನ್ಯರನ್ನ ಬಿಟ್ಟು ಇಸ್ರಾಯೇಲ್ಯರು ಆಯುಧ ಇದ್ದ 4,00,000 ಸೈನಿಕರನ್ನ ಒಟ್ಟುಸೇರಿಸಿದ್ರು.+ ಅವ್ರಲ್ಲಿ ಪ್ರತಿಯೊಬ್ರಿಗೂ ಯುದ್ಧ ಮಾಡೋದ್ರಲ್ಲಿ ಒಳ್ಳೇ ಅನುಭವ ಇತ್ತು. 18 ಅವರು ದೇವರ ಮಾರ್ಗದರ್ಶನ ಕೇಳೋಕೆ ಎದ್ದು ಬೆತೆಲಿಗೆ ಹೋದ್ರು.+ ಇಸ್ರಾಯೇಲಿನ ಜನ್ರು “ನಮ್ಮಲ್ಲಿ ಮೊದ್ಲು ಯಾರು ಬೆನ್ಯಾಮೀನ್ಯರ ವಿರುದ್ಧ ಯುದ್ಧಕ್ಕೆ ಹೋಗಬೇಕು?” ಅಂತ ಕೇಳಿದ್ರು. ಅದಕ್ಕೆ ಯೆಹೋವ “ಯೆಹೂದ ಕುಲದವರು” ಅಂದನು.

19 ಇದಾದ್ಮೇಲೆ ಇಸ್ರಾಯೇಲ್ಯರು ಬೆಳಿಗ್ಗೆ ಎದ್ದು ಗಿಬೆಯಾದ ವಿರುದ್ಧ ಪಾಳೆಯ ಹಾಕಿದ್ರು.

20 ಇಸ್ರಾಯೇಲಿನ ಗಂಡಸ್ರು ಬೆನ್ಯಾಮೀನ್ಯರ ವಿರುದ್ಧ ಯುದ್ಧ ಮಾಡೋಕೆ ಹೋದ್ರು. ಬೆನ್ಯಾಮೀನ್ಯರ ವಿರುದ್ಧ ಗಿಬೆಯಾದಲ್ಲಿ ಸೈನ್ಯ ಕಟ್ಟಿದ್ರು. 21 ಬೆನ್ಯಾಮೀನ್ಯರು ಗಿಬೆಯಾದಿಂದ ಹೊರಗೆ ಬಂದು 22,000 ಇಸ್ರಾಯೇಲ್ಯರನ್ನ ಆ ದಿನ ಸಾಯಿಸಿದ್ರು. 22 ಹಾಗಿದ್ರೂ ಇಸ್ರಾಯೇಲ್ಯರ ಸೈನ್ಯ ಹೆದರಲಿಲ್ಲ. ಮೊದಲ್ನೇ ದಿನ ಹೋದ ಜಾಗಕ್ಕೆ ಮತ್ತೆ ಹೋಗಿ ಸೈನ್ಯ ಕಟ್ಟಿದ್ರು. 23 ಆಮೇಲೆ ಇಸ್ರಾಯೇಲ್ಯರು ಯೆಹೋವನ ಮುಂದೆ ಹೋಗಿ ಸಂಜೆ ತನಕ ಗೋಳಾಡಿದ್ರು. ಅವರು ಯೆಹೋವನಿಗೆ “ನಾವು ಮತ್ತೆ ನಮ್ಮ ಸಹೋದರರಾದ ಬೆನ್ಯಾಮೀನ್ಯರ ವಿರುದ್ಧ ಹೋಗಬೇಕಾ?”+ ಅಂತ ಕೇಳಿದ್ರು. ಅದಕ್ಕೆ ಯೆಹೋವ “ಹೋಗಿ” ಅಂದನು.

24 ಹಾಗಾಗಿ ಇಸ್ರಾಯೇಲ್ಯರು ಎರಡನೇ ದಿನ ಬೆನ್ಯಾಮೀನ್ಯರ ವಿರುದ್ಧ ಹೋದ್ರು. 25 ಬೆನ್ಯಾಮೀನ್ಯರೂ ಯುದ್ಧ ಮಾಡೋಕೆ ಗಿಬೆಯಾದಿಂದ ಬಂದ್ರು. ಈ ಸಲ ಅವರು ಆಯುಧ ಇದ್ದ 18,000 ಇಸ್ರಾಯೇಲ್ಯರನ್ನ ಸಾಯಿಸಿದ್ರು.+ 26 ಆಗ ಇಸ್ರಾಯೇಲಿನ ಎಲ್ಲ ಗಂಡಸ್ರು ಬೆತೆಲಿಗೆ ಹೋದ್ರು. ಅವರು ಯೆಹೋವನ ಮುಂದೆ ಕೂತು ಗೋಳಾಡಿದ್ರು.+ ಅವರು ಸಂಜೆ ತನಕ ಉಪವಾಸ ಮಾಡಿ,+ ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ+ ಸಮಾಧಾನ ಬಲಿಗಳನ್ನ+ ಕೊಟ್ರು. 27 ಇದಾದ್ಮೇಲೆ ಯೆಹೋವನ ಮಾರ್ಗದರ್ಶನಕ್ಕಾಗಿ ಕೇಳ್ಕೊಂಡ್ರು.+ ಯಾಕಂದ್ರೆ ಆ ಕಾಲದಲ್ಲಿ ಸತ್ಯದೇವರ ಒಪ್ಪಂದದ ಮಂಜೂಷ ಬೆತೆಲಿನಲ್ಲಿ ಇತ್ತು. 28 ಆರೋನನ ಮೊಮ್ಮಗ, ಎಲ್ಲಾಜಾರನ ಮಗ ಫೀನೆಹಾಸ+ ಅದ್ರ ಮುಂದೆ ಸೇವೆ ಮಾಡ್ತಿದ್ದ.* ಅವರು “ನಾವು ಮತ್ತೆ ಬೆನ್ಯಾಮೀನ್ಯರ ವಿರುದ್ಧ ಯುದ್ಧಕ್ಕೆ ಹೋಗಬೇಕಾ ಅಥವಾ ಯುದ್ಧ ನಿಲ್ಲಿಸಬೇಕಾ?”+ ಅಂತ ಕೇಳಿದ್ರು. ಯೆಹೋವ ಅವ್ರಿಗೆ “ಹೋಗಿ, ನಾಳೆ ನಾನು ಅವ್ರನ್ನ ನಿಮ್ಮ ಕೈಗೆ ಒಪ್ಪಿಸ್ತೀನಿ” ಅಂದನು. 29 ಆಗ ಇಸ್ರಾಯೇಲ್ಯರು ಗಿಬೆಯಾದ ಸುತ್ತ ಹೊಂಚುಹಾಕೋಕೆ+ ಗಂಡಸ್ರನ್ನ ನೇಮಿಸಿದ್ರು.

30 ಇಸ್ರಾಯೇಲ್ಯರು ಮೂರನೇ ದಿನ ಬೆನ್ಯಾಮೀನ್ಯರ ವಿರುದ್ಧ ಹೋದ್ರು. ಮುಂಚಿನ ತರಾನೇ ಇಸ್ರಾಯೇಲ್ಯರು ಗಿಬೆಯಾದ ವಿರುದ್ಧ ಮತ್ತೆ ಸೈನ್ಯ ಕಟ್ಟಿದ್ರು.+ 31 ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡೋಕೆ ಬೆನ್ಯಾಮೀನ್ಯರು ತಮ್ಮ ಪಟ್ಟಣ ಬಿಟ್ಟು ದೂರಬಂದ್ರು.+ ಈ ಮುಂಚೆ ಮಾಡಿದ ತರಾನೇ ಬೆನ್ಯಾಮೀನ್ಯರ ಮೇಲೆ ದಾಳಿ ಮಾಡಿ ಬೆತೆಲಿಗೆ ಹೋಗೋ ಹೆದ್ದಾರಿಯಲ್ಲಿ, ಗಿಬೆಯಾಗೆ ಹೋಗೋ ಹೆದ್ದಾರಿಯಲ್ಲಿ ಕೊಲ್ಲೋಕೆ ಶುರು ಮಾಡಿದ್ರು. ಸುಮಾರು 30 ಇಸ್ರಾಯೇಲ್ಯರು ಬಯಲಲ್ಲಿ ಸತ್ರು.+ 32 ಆಗ ಬೆನ್ಯಾಮೀನ್ಯರು “ಇಸ್ರಾಯೇಲ್ಯರು ಮುಂಚಿನ ತರಾನೇ ಈಗ್ಲೂ ನಮ್ಮ ಮುಂದೆ ಸೋಲ್ತಿದ್ದಾರೆ”+ ಅಂತ ಮಾತಾಡ್ಕೊಂಡ್ರು. ಆದ್ರೆ ಇಸ್ರಾಯೇಲ್ಯರು “ನಾವು ಓಡಿಹೋಗಿ ಬೆನ್ಯಾಮೀನ್ಯರನ್ನ ಪಟ್ಟಣದಿಂದ ದೂರಕ್ಕೆ ಹೆದ್ದಾರಿಗಳ ಹತ್ರ ಕರ್ಕೊಂಡು ಬರೋಣ” ಅಂದ್ರು. 33 ಹಾಗಾಗಿ ಎಲ್ಲ ಇಸ್ರಾಯೇಲ್ಯರು ತಮ್ಮ ಜಾಗದಿಂದ ಎದ್ದು ಬಾಳ್‌-ತಾಮರಿಗೆ ಸೈನ್ಯವನ್ನ ಕಟ್ಕೊಂಡು ಬಂದ್ರು. ಅದೇ ಸಮಯದಲ್ಲಿ ಗಿಬೆಯಾದ ಸುತ್ತ ಹೊಂಚುಹಾಕಿದ್ದ ಇಸ್ರಾಯೇಲ್ಯರು ಪಟ್ಟಣದ ಮೇಲೆ ದಾಳಿ ಮಾಡಿದ್ರು. 34 ಇಡೀ ಇಸ್ರಾಯೇಲಿನಲ್ಲಿದ್ದ 10,000 ನಿಪುಣ ಸೈನಿಕರು ಗಿಬೆಯಾದ ಮುಂದೆ ಬಂದ್ರು. ತುಂಬ ದೊಡ್ಡ ಯುದ್ಧ ನಡಿತು. ಆದ್ರೆ ಅಪಾಯ ತಮ್ಮ ಹೊಸ್ತಿಲಲ್ಲೇ ಇದೆ ಅಂತ ಬೆನ್ಯಾಮೀನ್ಯರಿಗೆ ಗೊತ್ತಾಗಲಿಲ್ಲ.

35 ಯೆಹೋವ ಬೆನ್ಯಾಮೀನ್ಯರನ್ನ ಇಸ್ರಾಯೇಲಿನ ಮುಂದೆ ಸೋಲಿಸಿದನು.+ ಆ ದಿನ ಇಸ್ರಾಯೇಲ್ಯರು ಆಯುಧ ಇದ್ದ 25,100 ಬೆನ್ಯಾಮೀನ್ಯರನ್ನ ಕೊಂದ್ರು.+

36 ಇಸ್ರಾಯೇಲ್ಯರು ವಾಪಸ್‌ ಹೋದಾಗ ಅವರು ಸೋಲು ಒಪ್ಕೊಂಡು ಹೋಗ್ತಿದ್ದಾರೆ ಅಂತ ಬೆನ್ಯಾಮೀನ್ಯರು ಅಂದ್ಕೊಂಡ್ರು.+ ಆದ್ರೆ ಕೆಲವು ಇಸ್ರಾಯೇಲ್ಯರು ಗಿಬೆಯಾ ಮೇಲೆ ದಾಳಿ ಮಾಡೋಕೆ ಹೊಂಚುಹಾಕಿ ಕೂತಿದ್ದಾರೆ ಅಂತ ಇವ್ರಿಗೆ ಗೊತ್ತಿತ್ತು.+ ಅದಕ್ಕೆ ವಾಪಸ್‌ ಹೋಗ್ತಿದ್ರು. 37 ಹೊಂಚುಹಾಕಿ ಕೂತಿದ್ದವರು ತಟ್ಟಂತ ಎದ್ದು ಗಿಬೆಯಾ ಮೇಲೆ ದಾಳಿ ಮಾಡಿದ್ರು. ಚೆದರಿ ಹೋಗಿ ಆ ಪಟ್ಟಣದಲ್ಲಿದ್ದ ಎಲ್ರರನ್ನ ಕತ್ತಿಯಿಂದ ಸಾಯಿಸಿದ್ರು.

38 ಪಟ್ಟಣದಿಂದ ಹೊಗೆ ಏರಿಸಿ ಗುರುತು ಕೊಡಬೇಕು ಅಂತ ಇಸ್ರಾಯೇಲಿನ ಗಂಡಸ್ರು ಪಟ್ಟಣದ ಸುತ್ತ ಹೊಂಚುಹಾಕಿ ಕೂತಿದ್ದವ್ರಿಗೆ ಮೊದ್ಲೇ ಹೇಳಿದ್ರು.

39 ಇಸ್ರಾಯೇಲ್ಯರು ಯುದ್ಧದಿಂದ ತಪ್ಪಿಸ್ಕೊಂಡು ಓಡ್ತಾ ಇರೋ ತರ ನಾಟಕ ಮಾಡಿದಾಗ ಬೆನ್ಯಾಮೀನ್ಯರು ಅವ್ರ ಮೇಲೆ ದಾಳಿ ಮಾಡಿ 30 ಇಸ್ರಾಯೇಲ್ಯರನ್ನ ಸಾಯಿಸಿದ್ರು.+ ಆಗ ಬೆನ್ಯಾಮೀನ್ಯರು “ಅವರು ಮುಂಚಿನ ತರಾನೇ ನಮ್ಮ ಮುಂದೆ ಸೋಲ್ತಿದ್ದಾರೆ”+ ಅಂತ ಮಾತಾಡ್ಕೊಂಡ್ರು. 40 ಆದ್ರೆ ಗುರುತಾಗಿದ್ದ ಹೊಗೆ ಪಟ್ಟಣದಿಂದ ಏರಿ ಹೋಗೋಕೆ ಶುರುಮಾಡ್ತು. ಬೆನ್ಯಾಮೀನ್ಯರು ತಿರುಗಿ ನೋಡಿದಾಗ ಇಡೀ ಪಟ್ಟಣ ಸುಟ್ಟು ಅದ್ರ ಹೊಗೆ ಆಕಾಶಕ್ಕೆ ಏರೋದನ್ನ ನೋಡಿದ್ರು. 41 ಆಗ ಓಡಿಹೋಗ್ತಿದ್ದ ಇಸ್ರಾಯೇಲ್ಯರು ಬೆನ್ಯಾಮೀನ್ಯರ ವಿರುದ್ಧ ತಿರುಗಿದ್ರು. ಬೆನ್ಯಾಮೀನ್ಯರು ಭಯಪಟ್ರು. ತಮ್ಮ ಮೇಲೆ ಅಪಾಯ ಬಂದಿದೆ ಅಂತ ಅವ್ರಿಗೆ ಅರ್ಥ ಆಯ್ತು. 42 ಅವರು ಇಸ್ರಾಯೇಲ್ಯರಿಂದ ತಪ್ಪಿಸ್ಕೊಂಡು ಕಾಡು ದಾರಿಯಲ್ಲಿ ಓಡಿಹೋದ್ರು. ಆದ್ರೆ ಸೈನ್ಯ ಅವ್ರನ್ನ ಅಟ್ಟಿಸ್ಕೊಂಡು ಹೋಯ್ತು. ಪಟ್ಟಣದಿಂದ ಹೊರಗೆ ಬಂದ ಗಂಡಸ್ರು ಅವ್ರನ್ನ ಸಾಯಿಸೋಕೆ ಸೈನ್ಯಕ್ಕೆ ಸೇರ್ಕೊಂಡ್ರು. 43 ಬೆನ್ಯಾಮೀನ್ಯರನ್ನ ಸುತ್ತುವರಿದು ಬಿಡದೆ ಓಡಿಸ್ಕೊಂಡು ಹೋಗಿ ಗಿಬೆಯಾದ ಪೂರ್ವಕ್ಕೆ ಬಂದು ಅದ್ರ ಮುಂದೆ ಅವ್ರನ್ನ ಸೋಲಿಸಿಬಿಟ್ರು. 44 ಕೊನೆಗೆ ಬೆನ್ಯಾಮೀನ್ಯರ 18,000 ಯುದ್ಧವೀರರು ಎಲ್ರೂ ಸತ್ತುಹೋದ್ರು.+

45 ಬೆನ್ಯಾಮೀನಿನ ಗಂಡಸ್ರು ತಿರುಗಿ ಕಾಡಲ್ಲಿರೋ ರಿಮ್ಮೋನಿನ ಕಡಿದಾದ ಬಂಡೆ+ ಹತ್ರ ಓಡಿಹೋದ್ರು. ಇಸ್ರಾಯೇಲ್ಯರು ಅವ್ರಲ್ಲಿ 5,000 ಗಂಡಸ್ರನ್ನ ಹೆದ್ದಾರಿಯಲ್ಲಿ ಕೊಂದುಹಾಕಿದ್ರು. ಆಮೇಲೆ ಗಿದೋಮಿನ ತನಕ ಅಟ್ಟಿಸ್ಕೊಂಡು ಇನ್ನೂ 2,000 ಗಂಡಸ್ರನ್ನ ಸಾಯಿಸಿದ್ರು. 46 ಹೀಗೆ ಆ ದಿನ ಬೆನ್ಯಾಮೀನಿನ 25,000 ಆಯುಧ ಇದ್ದ+ ಬಲಿಷ್ಠ ಯುದ್ಧವೀರರು ಸತ್ರು. 47 ಆದ್ರೆ 600 ಗಂಡಸ್ರು ಕಾಡು ದಾರೀಲಿ ತಪ್ಪಿಸ್ಕೊಂಡು ರಿಮ್ಮೋನಿನ ಕಡಿದಾದ ಬಂಡೆ ಹತ್ರ ಓಡಿಹೋದ್ರು. ಅವರು ನಾಲ್ಕು ತಿಂಗಳು ಅಲ್ಲೇ ಇದ್ರು.

48 ಇಸ್ರಾಯೇಲಿನ ಗಂಡಸ್ರು ಬೆನ್ಯಾಮೀನ್ಯರ ವಿರುದ್ಧ ತಿರುಗಿ ಬಂದು ದೇಶದ ಉಳಿದ ಜನ್ರನ್ನ, ಪ್ರಾಣಿಗಳನ್ನ, ಸಿಕ್ಕಿದ್ದೆಲ್ಲವನ್ನ ಕೊಂದುಹಾಕಿದ್ರು. ಅವರು ತಮ್ಮ ದಾರಿಯಲ್ಲಿದ್ದ ಎಲ್ಲ ಪಟ್ಟಣಗಳನ್ನ ಸುಟ್ಟು ಹಾಕಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ