ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ಒಬ್ಬ ಸ್ತ್ರೀ, ಗಂಡು ಮಗು, ಘಟಸರ್ಪ (1-6)

      • ಮೀಕಾಯೇಲನಿಗೂ ಘಟಸರ್ಪಕ್ಕೂ ಯುದ್ಧ (7-12)

        • ಘಟಸರ್ಪವನ್ನ ಭೂಮಿಗೆ ತಳ್ಳಿಬಿಟ್ರು (9)

        • ಕಮ್ಮಿ ಸಮಯ ಇದೆ ಅಂತ ಸೈತಾನನಿಗೆ ಗೊತ್ತು (12)

      • ಘಟಸರ್ಪ ಸ್ತ್ರೀಗೆ ಹಿಂಸೆ ಕೊಡುತ್ತೆ (13-17)

ಪ್ರಕಟನೆ 12:1

ಮಾರ್ಜಿನಲ್ ರೆಫರೆನ್ಸ್

  • +ಆದಿ 3:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 177-178

ಪ್ರಕಟನೆ 12:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 177-178

ಪ್ರಕಟನೆ 12:3

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 12:9; 20:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 178

    ಕಾವಲಿನಬುರುಜು,

    9/1/2001, ಪು. 6

ಪ್ರಕಟನೆ 12:4

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:7
  • +ಆದಿ 6:2; ಯೂದ 6
  • +ಆದಿ 3:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2018, ಪು. 23

    ಪ್ರಕಟನೆ, ಪು. 178-179

ಪ್ರಕಟನೆ 12:5

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 11:15
  • +ಕೀರ್ತ 2:9; 110:2; ಪ್ರಕ 19:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 177, 179-180

ಪ್ರಕಟನೆ 12:6

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 12:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ಪ್ರಕಟನೆ, ಪು. 179-180, 184

ಪ್ರಕಟನೆ 12:7

ಪಾದಟಿಪ್ಪಣಿ

  • *

    ಅರ್ಥ “ದೇವರ ತರ ಯಾರಿದ್ದಾರೆ?”

ಮಾರ್ಜಿನಲ್ ರೆಫರೆನ್ಸ್

  • +ದಾನಿ 10:13; 12:1; ಯೂದ 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 121

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 24

    ಪ್ರಕಟನೆ, ಪು. 180-182

ಪ್ರಕಟನೆ 12:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 24

    ಪ್ರಕಟನೆ, ಪು. 180-182

ಪ್ರಕಟನೆ 12:9

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 12:3; 20:2
  • +ಮತ್ತಾ 4:1; ಯೋಹಾ 8:44; ಇಬ್ರಿ 2:14; ಯಾಕೋ 4:7; 1ಪೇತ್ರ 5:8
  • +1ಪೂರ್ವ 21:1; ಯೋಬ 1:6; ಜೆಕ 3:2; ಮತ್ತಾ 4:10; ಯೋಹಾ 13:27; ರೋಮ 16:20; 2ಥೆಸ 2:9
  • +ಆದಿ 3:1; 2ಕೊರಿಂ 11:3; ಪ್ರಕ 12:14
  • +2ಕೊರಿಂ 4:4; 11:14; ಎಫೆ 2:2; 1ಯೋಹಾ 5:19
  • +ಲೂಕ 10:18; ಪ್ರಕ 12:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 171

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 24

    ಕಾವಲಿನಬುರುಜು,

    5/15/2015, ಪು. 9-10

    5/15/2009, ಪು. 18

    2/15/2004, ಪು. 16

    ಪ್ರಕಟನೆ, ಪು. 180-182

ಪ್ರಕಟನೆ 12:10

ಮಾರ್ಜಿನಲ್ ರೆಫರೆನ್ಸ್

  • +ರೋಮ 13:11; ಇಬ್ರಿ 9:28; 1ಪೇತ್ರ 1:5
  • +ಪ್ರಕ 11:15, 17
  • +ಯೋಬ 1:9; ಜೆಕ 3:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ಕಲಿಸುತ್ತದೆ, ಪು. 86

    ಬೈಬಲ್‌ ಬೋಧಿಸುತ್ತದೆ, ಪು. 80

    ಕಾವಲಿನಬುರುಜು,

    1/15/2006, ಪು. 22

    4/15/1999, ಪು. 17

    3/1/1991, ಪು. 19-20

    ಪ್ರಕಟನೆ, ಪು. 182-183

ಪ್ರಕಟನೆ 12:11

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 1:18, 19
  • +ಅಕಾ 1:8; 2ತಿಮೊ 1:8; ಪ್ರಕ 1:9
  • +1ಯೋಹಾ 2:14
  • +ಮತ್ತಾ 16:25; ಲೂಕ 14:26; ಅಕಾ 20:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2007, ಪು. 31

    3/1/1991, ಪು. 19-20

    ಪ್ರಕಟನೆ, ಪು. 182-183

ಪ್ರಕಟನೆ 12:12

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 57:20; 60:2; ಪ್ರಕ 17:15
  • +ಮತ್ತಾ 24:34; ರೋಮ 16:20; 2ತಿಮೊ 3:1; 2ಪೇತ್ರ 3:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 24

    ಬೈಬಲ್‌ ಕಲಿಸುತ್ತದೆ, ಪು. 86-87

    ಬೈಬಲ್‌ ಬೋಧಿಸುತ್ತದೆ, ಪು. 80

    ಪ್ರಕಟನೆ, ಪು. 182-183

    ಕಾವಲಿನಬುರುಜು,

    10/15/2001, ಪು. 6

    10/1/1999, ಪು. 4

    4/1/1996, ಪು. 17-18

    11/1/1995, ಪು. 19

ಪ್ರಕಟನೆ 12:13

ಮಾರ್ಜಿನಲ್ ರೆಫರೆನ್ಸ್

  • +ಲೂಕ 10:18
  • +ಆದಿ 3:15; ಪ್ರಕ 12:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 183-184

ಪ್ರಕಟನೆ 12:14

ಪಾದಟಿಪ್ಪಣಿ

  • *

    ಅಕ್ಷ. “ಒಂದು ಕಾಲ, ಎರಡು ಕಾಲ ಮತ್ತು ಅರ್ಧ ಕಾಲ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:4; ಯೆಶಾ 40:31
  • +ಪ್ರಕ 12:6
  • +ಆದಿ 3:1; 2ಕೊರಿಂ 11:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ಪ್ರಕಟನೆ, ಪು. 183-184

ಪ್ರಕಟನೆ 12:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2020, ಪು. 6

    ಪ್ರಕಟನೆ, ಪು. 184-185

ಪ್ರಕಟನೆ 12:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 6

    ಕೂಲಂಕಷ ಸಾಕ್ಷಿ, ಪು. 164

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    12/2019, ಪು. 8

    ಕಾವಲಿನಬುರುಜು,

    1/15/2009, ಪು. 32

    6/1/1991, ಪು. 15

    ಪ್ರಕಟನೆ, ಪು. 185-186

ಪ್ರಕಟನೆ 12:17

ಮಾರ್ಜಿನಲ್ ರೆಫರೆನ್ಸ್

  • +ಆದಿ 3:15
  • +ಮತ್ತಾ 24:9; ಅಕಾ 1:8; ಪ್ರಕ 1:9; 6:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 5-6, 16

    ಪ್ರಕಟನೆ, ಪು. 11-12, 183, 185-186, 279

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 12:1ಆದಿ 3:15
ಪ್ರಕ. 12:3ಪ್ರಕ 12:9; 20:2
ಪ್ರಕ. 12:4ಯೋಬ 38:7
ಪ್ರಕ. 12:4ಆದಿ 6:2; ಯೂದ 6
ಪ್ರಕ. 12:4ಆದಿ 3:15
ಪ್ರಕ. 12:5ಪ್ರಕ 11:15
ಪ್ರಕ. 12:5ಕೀರ್ತ 2:9; 110:2; ಪ್ರಕ 19:15
ಪ್ರಕ. 12:6ಪ್ರಕ 12:14
ಪ್ರಕ. 12:7ದಾನಿ 10:13; 12:1; ಯೂದ 9
ಪ್ರಕ. 12:9ಪ್ರಕ 12:3; 20:2
ಪ್ರಕ. 12:9ಮತ್ತಾ 4:1; ಯೋಹಾ 8:44; ಇಬ್ರಿ 2:14; ಯಾಕೋ 4:7; 1ಪೇತ್ರ 5:8
ಪ್ರಕ. 12:91ಪೂರ್ವ 21:1; ಯೋಬ 1:6; ಜೆಕ 3:2; ಮತ್ತಾ 4:10; ಯೋಹಾ 13:27; ರೋಮ 16:20; 2ಥೆಸ 2:9
ಪ್ರಕ. 12:9ಆದಿ 3:1; 2ಕೊರಿಂ 11:3; ಪ್ರಕ 12:14
ಪ್ರಕ. 12:92ಕೊರಿಂ 4:4; 11:14; ಎಫೆ 2:2; 1ಯೋಹಾ 5:19
ಪ್ರಕ. 12:9ಲೂಕ 10:18; ಪ್ರಕ 12:13
ಪ್ರಕ. 12:10ರೋಮ 13:11; ಇಬ್ರಿ 9:28; 1ಪೇತ್ರ 1:5
ಪ್ರಕ. 12:10ಪ್ರಕ 11:15, 17
ಪ್ರಕ. 12:10ಯೋಬ 1:9; ಜೆಕ 3:1
ಪ್ರಕ. 12:111ಪೇತ್ರ 1:18, 19
ಪ್ರಕ. 12:11ಅಕಾ 1:8; 2ತಿಮೊ 1:8; ಪ್ರಕ 1:9
ಪ್ರಕ. 12:111ಯೋಹಾ 2:14
ಪ್ರಕ. 12:11ಮತ್ತಾ 16:25; ಲೂಕ 14:26; ಅಕಾ 20:24
ಪ್ರಕ. 12:12ಯೆಶಾ 57:20; 60:2; ಪ್ರಕ 17:15
ಪ್ರಕ. 12:12ಮತ್ತಾ 24:34; ರೋಮ 16:20; 2ತಿಮೊ 3:1; 2ಪೇತ್ರ 3:3
ಪ್ರಕ. 12:13ಲೂಕ 10:18
ಪ್ರಕ. 12:13ಆದಿ 3:15; ಪ್ರಕ 12:1
ಪ್ರಕ. 12:14ವಿಮೋ 19:4; ಯೆಶಾ 40:31
ಪ್ರಕ. 12:14ಪ್ರಕ 12:6
ಪ್ರಕ. 12:14ಆದಿ 3:1; 2ಕೊರಿಂ 11:3
ಪ್ರಕ. 12:17ಆದಿ 3:15
ಪ್ರಕ. 12:17ಮತ್ತಾ 24:9; ಅಕಾ 1:8; ಪ್ರಕ 1:9; 6:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 12:1-17

ಯೋಹಾನನಿಗೆ ಕೊಟ್ಟ ಪ್ರಕಟನೆ

12 ಸ್ವರ್ಗದಲ್ಲಿ ಒಂದು ದೊಡ್ಡ ಸೂಚನೆ ಕಾಣಿಸ್ತು. ಒಬ್ಬ ಸ್ತ್ರೀ+ ಸೂರ್ಯನನ್ನ ಬಟ್ಟೆ ತರ ಹಾಕೊಂಡಿದ್ದಳು. ಅವಳ ಕಾಲ ಕೆಳಗೆ ಚಂದ್ರ ಇದ್ದ. ಅವಳ ತಲೆ ಮೇಲೆ 12 ನಕ್ಷತ್ರ ಇರೋ ಒಂದು ಕಿರೀಟ ಇತ್ತು. 2 ಅವಳು ಗರ್ಭಿಣಿ ಆಗಿದ್ದಳು. ಇನ್ನೇನು ಅವಳಿಗೆ ಮಗು ಹುಟ್ಟೋ ಸಮಯ ಅದಾಗಿತ್ತು. ಅವಳು ಆ ನೋವು ತಡಿಯೋಕೆ ಆಗದೆ ಜೋರಾಗಿ ಕಿರಿಚ್ತಿದ್ದಳು.

3 ಸ್ವರ್ಗದಲ್ಲಿ ಇನ್ನೊಂದು ಸೂಚನೆ ಕಾಣಿಸ್ತು. ಅದೇನಂದ್ರೆ ಬೆಂಕಿ ಬಣ್ಣದ ಒಂದು ದೊಡ್ಡ ಘಟಸರ್ಪ.+ ಅದಕ್ಕೆ ಏಳು ತಲೆ, ಹತ್ತು ಕೊಂಬಿತ್ತು. ಅದ್ರ ತಲೆಗಳ ಮೇಲೆ ಏಳು ಕಿರೀಟ ಇತ್ತು. 4 ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ+ ಮೂರನೇ ಒಂದು ಭಾಗವನ್ನ ಎಳೆದು ಭೂಮಿಗೆ ಎಸಿತು.+ ಇನ್ನೇನು ಮಗು ಹುಟ್ತಿದ್ದ ಆ ಸ್ತ್ರೀ+ ಮುಂದೆ ಆ ಘಟಸರ್ಪ ನಿಂತ್ಕೊಂಡಿತ್ತು. ಯಾಕಂದ್ರೆ ಅವಳು ಮಗು ಹೆತ್ತಾಗ ಅದನ್ನ ನುಂಗಬೇಕಂತ ಅದು ಕಾಯ್ತಿತ್ತು.

5 ಅವಳಿಗೆ ಒಂದು ಗಂಡು ಮಗು ಆಯ್ತು.+ ಆತನು ಎಲ್ಲ ದೇಶಗಳನ್ನ ಕಬ್ಬಿಣದ ಕೋಲಿಂದ+ ಕುರುಬನ ತರ ನೋಡ್ಕೊಳ್ತಾನೆ. ಆ ಮಗು ಹುಟ್ಟಿದ ತಕ್ಷಣ ಅವರು ಅದನ್ನ ದೇವರ ಹತ್ರ, ಆತನ ಸಿಂಹಾಸನದ ಹತ್ರ ತಗೊಂಡು ಹೋದ್ರು. 6 ಆ ಸ್ತ್ರೀ ಕಾಡಿಗೆ ಓಡಿಹೋದಳು. ಅಲ್ಲಿ ಅವಳಿಗೆ ದೇವರು ಸಿದ್ಧಮಾಡಿದ್ದ ಜಾಗ ಇತ್ತು. ಅಲ್ಲಿ ಅವಳನ್ನ 1,260 ದಿನ ತನಕ ನೋಡ್ಕೊಂಡ್ರು.+

7 ಸ್ವರ್ಗದಲ್ಲಿ ಯುದ್ಧ ಆಯ್ತು. ಮೀಕಾಯೇಲ*+ ಮತ್ತು ಆತನ ದೇವದೂತರು ಘಟಸರ್ಪದ ಜೊತೆ ಯುದ್ಧ ಮಾಡಿದ್ರು. ಘಟಸರ್ಪ ಮತ್ತು ಅದ್ರ ದೂತರು ಅವ್ರ ಜೊತೆ ಯುದ್ಧ ಮಾಡಿದ್ರು. 8 ಆದ್ರೆ ಘಟಸರ್ಪ ಮತ್ತು ಅದ್ರ ದೂತರು ಸೋತು ಹೋದ್ರು. ಸ್ವರ್ಗದಲ್ಲಿ ಅವ್ರಿಗೆ ಇನ್ಮುಂದೆ ಜಾಗ ಇರಲಿಲ್ಲ. 9 ಅದಕ್ಕೇ ಈ ದೊಡ್ಡ ಘಟಸರ್ಪವನ್ನ+ ಭೂಮಿಗೆ ತಳ್ಳಿಬಿಟ್ರು. ಈ ಘಟಸರ್ಪಕ್ಕೆ ಪಿಶಾಚ,+ ಸೈತಾನ,+ ಹಳೇ ಹಾವು+ ಅಂತ ಹೆಸ್ರಿದೆ. ಇವನು ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ.+ ಇವನನ್ನ, ಇವನ ದೂತರನ್ನ ಭೂಮಿಗೆ ಎಸೆದ್ರು.+ 10 ಆಗ ಸ್ವರ್ಗದಲ್ಲಿ ಒಂದು ಧ್ವನಿ ಜೋರಾಗಿ ಕೇಳಿಸ್ತು. ಅದೇನಂದ್ರೆ:

“ಈಗ ನಮ್ಮ ದೇವರು ರಕ್ಷಣೆ ತಂದಿದ್ದಾನೆ.+ ದೇವರ ಶಕ್ತಿಗೆ ಜಯ ಸಿಕ್ಕಿದೆ. ದೇವರ ಆಳ್ವಿಕೆ ಶುರು ಆಗಿದೆ.+ ಕ್ರಿಸ್ತನ ಅಧಿಕಾರ ಶುರು ಆಗಿದೆ. ಯಾಕಂದ್ರೆ ಹಗಲೂರಾತ್ರಿ ನಮ್ಮ ದೇವರ ಮುಂದೆ ನಮ್ಮ ಸಹೋದರರ ಬಗ್ಗೆ ದೂರು ಹೇಳ್ತಿದ್ದ ಆ ಚಾಡಿಕೋರನನ್ನ+ ಕೆಳಗೆ ತಳ್ಳಿಬಿಟ್ಟಿದ್ದಾರೆ! 11 ಅವರು ಕುರಿಮರಿಯ ರಕ್ತದಿಂದ,+ ಅವರು ಸಾರಿದ ಸಂದೇಶದಿಂದ+ ಅವನನ್ನ ಸೋಲಿಸಿದ್ರು.+ ಸಾವಿಗೆ ಎದೆಕೊಟ್ಟು ನಿಲ್ಲೋಕೆ ಅವರು ಭಯಪಡಲಿಲ್ಲ.+ 12 ಹಾಗಾಗಿ ಸ್ವರ್ಗವೇ, ಅದ್ರಲ್ಲಿ ಇರುವವ್ರೇ ಖುಷಿಪಡಿ! ಆದ್ರೆ ಭೂಮಿಯೇ, ಸಮುದ್ರವೇ ಇನ್ಮುಂದೆ ನಿಮಗೆ ತುಂಬ ಕಷ್ಟ ಆಗುತ್ತೆ.+ ಯಾಕಂದ್ರೆ ತನಗಿರೋ ಸಮಯ ತುಂಬ ಕಮ್ಮಿ ಅಂತ ಸೈತಾನನಿಗೆ ಗೊತ್ತು. ಅದಕ್ಕೇ ಅವನು ತುಂಬ ಕೋಪದಿಂದ ಭೂಮಿಗೆ ಬಂದಿದ್ದಾನೆ.”+

13 ಘಟಸರ್ಪವನ್ನ ಭೂಮಿಗೆ ತಳ್ಳಿದ್ರಿಂದ+ ಅದು ಆ ಮಗುನ ಹೆತ್ತ ಸ್ತ್ರೀಗೆ ಹಿಂಸೆ ಕೊಡ್ತು.+ 14 ಆಗ ಆ ಸ್ತ್ರೀಗೆ ದೊಡ್ಡ ಗರುಡಪಕ್ಷಿಯ+ ಎರಡು ರೆಕ್ಕೆ ಕೊಟ್ರು. ಅವಳು ಕಾಡಲ್ಲಿರೋ ತನ್ನ ಜಾಗಕ್ಕೆ ಹಾರಿ ಹೋದಳು. ಅಲ್ಲಿ ಅವಳನ್ನ ಮೂರೂವರೆ ಕಾಲ*+ ಹಾವಿಂದ ದೂರ ಇಟ್ಟು ನೋಡ್ಕೊಂಡ್ರು.+

15 ಆ ಸ್ತ್ರೀಯನ್ನ ನದಿಯಲ್ಲಿ ಮುಳುಗಿಸಿ ಸಾಯಿಸೋಕೆ ಘಟಸರ್ಪ ತನ್ನ ಬಾಯಿಂದ ನೀರನ್ನ ಅವಳ ಹಿಂದೆ ಉಗೀತು. 16 ಆದ್ರೆ ಭೂಮಿ ಆ ಸ್ತ್ರೀನ ಕಾಪಾಡ್ತು. ಆ ಘಟಸರ್ಪ ಉಗಿದ ನೀರನ್ನ ಆ ಭೂಮಿ ಬಾಯಿ ತೆಗೆದು ನುಂಗಿಬಿಡ್ತು. 17 ಆಗ ಘಟಸರ್ಪಕ್ಕೆ ಸ್ತ್ರೀ ಮೇಲೆ ತುಂಬ ಕೋಪ ಬಂತು. ಹಾಗಾಗಿ ಅದು ಅವಳ ಸಂತತಿಯಲ್ಲಿ ಉಳಿದವ್ರ ಮೇಲೆ ಯುದ್ಧ ಮಾಡೋಕೆ ಹೋಯ್ತು.+ ಅವರು ದೇವರ ಆಜ್ಞೆಗಳನ್ನ ಪಾಲಿಸ್ತಿದ್ರು, ಯೇಸು ಬಗ್ಗೆ ಸಾಕ್ಷಿ ಹೇಳ್ತಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ