ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜೆಕರ್ಯ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜೆಕರ್ಯ ಮುಖ್ಯಾಂಶಗಳು

      • ಮೂರ್ತಿಗಳನ್ನ ಮತ್ತು ಸುಳ್ಳು ಪ್ರವಾದಿಗಳನ್ನ ನಾಶ ಮಾಡಿ (1-6)

        • ಸುಳ್ಳು ಪ್ರವಾದಿಗಳು ಅವಮಾನವನ್ನ ಅನುಭವಿಸ್ತಾರೆ (4-6)

      • ಕುರುಬನ ಮೇಲೆ ದಾಳಿ (7-9)

        • ಮೂರನೇ ಭಾಗದ ಜನ್ರನ್ನ ಪರಿಷ್ಕರಿಸಲಾಗುತ್ತೆ (9)

ಜೆಕರ್ಯ 13:1

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 36:25, 29

ಜೆಕರ್ಯ 13:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:13
  • +ಧರ್ಮೋ 13:5

ಜೆಕರ್ಯ 13:3

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 13:6-9; 18:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2007, ಪು. 15

ಜೆಕರ್ಯ 13:4

ಮಾರ್ಜಿನಲ್ ರೆಫರೆನ್ಸ್

  • +2ಅರ 1:8; ಮತ್ತಾ 3:4

ಜೆಕರ್ಯ 13:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2015, ಪು. 15-16

ಜೆಕರ್ಯ 13:6

ಪಾದಟಿಪ್ಪಣಿ

  • *

    ಅಕ್ಷ. “ಕೈಗಳ ನಡುವೆ.” ಅದು ಎದೆ ಮೇಲೆ ಅಥವಾ ಬೆನ್ನಿನ ಮೇಲೆ.

  • *

    ಅಥವಾ “ನನ್ನನ್ನ ಪ್ರೀತಿಸುವವರ.”

ಜೆಕರ್ಯ 13:7

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:23; ಮೀಕ 5:4; ಯೋಹಾ 10:11; ಇಬ್ರಿ 13:20
  • +ಯೆಶಾ 53:8; ದಾನಿ 9:26; ಅಕಾ 3:18
  • +ಮತ್ತಾ 26:31, 55, 56; ಮಾರ್ಕ 14:27, 50; ಯೋಹಾ 16:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    8/15/2011, ಪು. 13-14

ಜೆಕರ್ಯ 13:8

ಪಾದಟಿಪ್ಪಣಿ

  • *

    ಅಥವಾ “ಸಾಯ್ತಾರೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2007, ಪು. 15

ಜೆಕರ್ಯ 13:9

ಮಾರ್ಜಿನಲ್ ರೆಫರೆನ್ಸ್

  • +ಮಲಾ 3:2, 3
  • +ಯೆರೆ 30:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2007, ಪು. 15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜೆಕ. 13:1ಯೆಹೆ 36:25, 29
ಜೆಕ. 13:2ವಿಮೋ 23:13
ಜೆಕ. 13:2ಧರ್ಮೋ 13:5
ಜೆಕ. 13:3ಧರ್ಮೋ 13:6-9; 18:20
ಜೆಕ. 13:42ಅರ 1:8; ಮತ್ತಾ 3:4
ಜೆಕ. 13:7ಯೆಹೆ 34:23; ಮೀಕ 5:4; ಯೋಹಾ 10:11; ಇಬ್ರಿ 13:20
ಜೆಕ. 13:7ಯೆಶಾ 53:8; ದಾನಿ 9:26; ಅಕಾ 3:18
ಜೆಕ. 13:7ಮತ್ತಾ 26:31, 55, 56; ಮಾರ್ಕ 14:27, 50; ಯೋಹಾ 16:32
ಜೆಕ. 13:9ಮಲಾ 3:2, 3
ಜೆಕ. 13:9ಯೆರೆ 30:22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜೆಕರ್ಯ 13:1-9

ಜೆಕರ್ಯ

13 ದಾವೀದನ ಮನೆತನದವರು, ಯೆರೂಸಲೇಮಿನ ನಿವಾಸಿಗಳು ತಮ್ಮ ಪಾಪಗಳನ್ನ ಮತ್ತು ಅಶುದ್ಧತೆಯನ್ನ ತೊಳ್ಕೊಳ್ಳೋಕೆ+ ಆಗೋ ತರ ಆ ದಿನ ಒಂದು ಬಾವಿ ತೋಡಲಾಗುತ್ತೆ.”

2 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ಆ ದಿನ ನಾನು ದೇಶದಲ್ಲಿರೋ ಮೂರ್ತಿಗಳನ್ನ ಹೇಳಹೆಸ್ರಿಲ್ಲದ ಹಾಗೆ ಮಾಡ್ತೀನಿ.+ ಜನ ಇನ್ನು ಯಾವತ್ತೂ ಅವುಗಳನ್ನ ನೆನಪಿಸ್ಕೊಳ್ಳಲ್ಲ. ನಾನು ಪ್ರವಾದಿಗಳನ್ನ ಮತ್ತು ದುಷ್ಟ ಶಕ್ತಿಯನ್ನ ದೇಶದಿಂದ ತೆಗೆದುಹಾಕ್ತೀನಿ.+ 3 ಯಾರಾದ್ರೂ ಮತ್ತೆ ಭವಿಷ್ಯ ಹೇಳೋದಾದ್ರೆ ಅವನನ್ನ ಹೆತ್ತ ತಂದೆತಾಯಿ ‘ನೀನು ಯೆಹೋವನ ಹೆಸ್ರಲ್ಲಿ ಸುಳ್ಳು ಹೇಳಿದ್ರಿಂದ ನೀನು ಜೀವಂತವಾಗಿ ಇರೋದಿಲ್ಲ’ ಅಂತ ಹೇಳ್ತಾರೆ. ಅವನು ಭವಿಷ್ಯ ಹೇಳಿದ್ರಿಂದ ಅವನ ಹೆತ್ತ ತಂದೆತಾಯಿ ಅವನನ್ನ ಇರಿದು ಕೊಂದುಹಾಕ್ತಾರೆ.+

4 ಆ ದಿನ ಪ್ರವಾದಿಗಳಲ್ಲಿ ಪ್ರತಿಯೊಬ್ಬರು ತಾವು ನೋಡಿದ ದರ್ಶನದ ಬಗ್ಗೆ ಭವಿಷ್ಯ ಹೇಳೋಕೆ ನಾಚಿಕೆಪಡ್ತಾರೆ. ಜನ್ರಿಗೆ ಮೋಸ ಮಾಡುವಾಗ ಹಾಕ್ತಿದ್ದ ಕೂದಲಿಂದ ಮಾಡಿದ ವಿಶೇಷ ಬಟ್ಟೆಯನ್ನ ಅವರು ಇನ್ಮುಂದೆ ಹಾಕಲ್ಲ.+ 5 ಅವ್ರಲ್ಲಿ ಪ್ರತಿಯೊಬ್ಬನೂ ‘ನಾನು ಪ್ರವಾದಿಯಲ್ಲ. ನಾನು ಚಿಕ್ಕವನಿಂದ ಒಬ್ಬ ವ್ಯಕ್ತಿ ಹತ್ರ ದಾಸನಾಗಿ ವ್ಯವಸಾಯ ಮಾಡ್ತಿದ್ದೀನಿ’ ಅಂತಾನೆ. 6 ಯಾರಾದ್ರೂ ಅವನಿಗೆ ‘ನಿನ್ನ ಭುಜಗಳ ಮಧ್ಯ ಇರೋ* ಈ ಗಾಯಗಳು ಹೇಗಾದ್ವು?’ ಅಂತ ಕೇಳಿದ್ರೆ ‘ಇವು ನನ್ನ ಗೆಳೆಯರ* ಮನೇಲಿ ಆದ ಗಾಯಗಳು’ ಅಂತಾನೆ.”

 7 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ:

“ಕತ್ತಿಯೇ, ನನ್ನ ಕುರುಬನ ವಿರುದ್ಧ ಎದ್ದೇಳು!+

ನನ್ನ ಸಂಗಡಿಗನ ವಿರುದ್ಧ ಎದ್ದೇಳು!

ಕುರುಬನ ಮೇಲೆ ದಾಳಿ ಮಾಡಿ+ ಕುರಿಗಳು ಚದರಿಹೋಗೋ ತರ ಮಾಡು.+

ನಾನು ನನ್ನ ಕೈಯನ್ನ ಅಲ್ಪನ ಮೇಲೆ ಎತ್ತುತ್ತೀನಿ.”

 8 ಯೆಹೋವ ಹೀಗೆ ಹೇಳ್ತಿದ್ದಾನೆ “ಇಡೀ ದೇಶದಲ್ಲಿ ಎಷ್ಟು ಜನ್ರಿದ್ದಾರೋ,

ಅವ್ರಲ್ಲಿ ಮೂರರಲ್ಲಿ ಎರಡು ಭಾಗದಷ್ಟು ಜನ್ರನ್ನ ಸಾಯಿಸಲಾಗುತ್ತೆ ಮತ್ತು ಅವರು ನಾಶವಾಗಿ ಹೋಗ್ತಾರೆ.*

ಮೂರರಲ್ಲಿ ಒಂದು ಭಾಗದಷ್ಟು ಜನ್ರನ್ನ ಬಿಟ್ಟುಬಿಡಲಾಗುತ್ತೆ.

 9 ನಾನು ಆ ಮೂರರಲ್ಲಿ ಒಂದು ಭಾಗದ ಜನ್ರನ್ನ ಬೆಂಕಿ ಹಾಕಿ

ನಾನು ಅವ್ರನ್ನ ಬೆಳ್ಳಿ ಶೋಧಿಸೋ ತರ ಶೋಧಿಸ್ತೀನಿ,

ಚಿನ್ನವನ್ನ ಪರಿಷ್ಕರಿಸೋ ತರ ಪರಿಷ್ಕರಿಸ್ತೀನಿ.+

ಅವರು ನನ್ನ ಹೆಸ್ರನ್ನ ಬಳಸಿ ಪ್ರಾರ್ಥಿಸ್ತಾರೆ,

ನಾನು ಅವ್ರ ಪ್ರಾರ್ಥನೆಗೆ ಉತ್ತರ ಕೊಡ್ತೀನಿ.

‘ಅವರು ನನ್ನ ಜನ್ರು’ ಅಂತ ನಾನು ಹೇಳ್ತೀನಿ.+

‘ಯೆಹೋವ ನಮ್ಮ ದೇವರು’ ಅಂತ ಅವರು ಹೇಳ್ತಾರೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ