ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಹಡಗಿನ ಒಳಗೆ (1-10)

      • ಇಡೀ ಭೂಮಿಯಲ್ಲಿ ಜಲಪ್ರಳಯ (11-24)

ಆದಿಕಾಂಡ 7:1

ಮಾರ್ಜಿನಲ್ ರೆಫರೆನ್ಸ್

  • +ಆದಿ 6:9; ಇಬ್ರಿ 10:38; 11:7; 1ಪೇತ್ರ 3:12; 2ಪೇತ್ರ 2:5, 9

ಆದಿಕಾಂಡ 7:2

ಪಾದಟಿಪ್ಪಣಿ

  • *

    ಪ್ರಾಯಶಃ ಬಲಿಗೆ ಯೋಗ್ಯವಾದ ಪ್ರಾಣಿಗಳನ್ನ ಸೂಚಿಸುತ್ತೆ.

  • *

    ಬಹುಶಃ “ಪ್ರತಿಯೊಂದು ಶುದ್ಧಪ್ರಾಣಿಯಲ್ಲಿ ಏಳು ಜೊತೆಗಳು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 8:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2004, ಪು. 29-30

ಆದಿಕಾಂಡ 7:3

ಪಾದಟಿಪ್ಪಣಿ

  • *

    ಬಹುಶಃ “ಆಕಾಶದಲ್ಲಿ ಹಾರೋ ಜೀವಿಗಳ ಏಳು ಜೊತೆಗಳು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 7:23; 8:19

ಆದಿಕಾಂಡ 7:4

ಮಾರ್ಜಿನಲ್ ರೆಫರೆನ್ಸ್

  • +ಆದಿ 2:5
  • +ಆದಿ 7:11, 12
  • +ಆದಿ 6:7, 17

ಆದಿಕಾಂಡ 7:6

ಮಾರ್ಜಿನಲ್ ರೆಫರೆನ್ಸ್

  • +ಆದಿ 8:13

ಆದಿಕಾಂಡ 7:7

ಮಾರ್ಜಿನಲ್ ರೆಫರೆನ್ಸ್

  • +ಲೂಕ 17:27; ಇಬ್ರಿ 11:7

ಆದಿಕಾಂಡ 7:8

ಮಾರ್ಜಿನಲ್ ರೆಫರೆನ್ಸ್

  • +ಆದಿ 6:19, 20

ಆದಿಕಾಂಡ 7:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 25

ಆದಿಕಾಂಡ 7:11

ಪಾದಟಿಪ್ಪಣಿ

  • *

    ಅಕ್ಷ. “ಅತಿ ವಿಶಾಲವಾದ, ಆಳವಾದ ನೀರಿನ ಬುಗ್ಗೆಗಳೆಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 1:7; 8:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2004, ಪು. 30

ಆದಿಕಾಂಡ 7:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 10

ಆದಿಕಾಂಡ 7:13

ಮಾರ್ಜಿನಲ್ ರೆಫರೆನ್ಸ್

  • +ಆದಿ 9:18; 1ಪೂರ್ವ 1:4
  • +ಆದಿ 6:18; 1ಪೇತ್ರ 3:20; 2ಪೇತ್ರ 2:5

ಆದಿಕಾಂಡ 7:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 11-12

ಆದಿಕಾಂಡ 7:19

ಮಾರ್ಜಿನಲ್ ರೆಫರೆನ್ಸ್

  • +2ಪೇತ್ರ 3:5, 6

ಆದಿಕಾಂಡ 7:20

ಪಾದಟಿಪ್ಪಣಿ

  • *

    ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.

ಆದಿಕಾಂಡ 7:21

ಪಾದಟಿಪ್ಪಣಿ

  • *

    ಅಥವಾ “ಗುಂಪು ಗುಂಪಾಗಿರೋ ಜೀವಿಗಳು.” ಈ ಪದ ಕೀಟ, ಸರೀಸೃಪ, ಬೇರೆ ಚಿಕ್ಕ ಜೀವಿಗಳನ್ನೂ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಲೂಕ 17:27
  • +ಆದಿ 6:7, 17

ಆದಿಕಾಂಡ 7:22

ಮಾರ್ಜಿನಲ್ ರೆಫರೆನ್ಸ್

  • +ಆದಿ 2:7; 7:15; ಪ್ರಸಂ 3:19; ಯೆಶಾ 42:5

ಆದಿಕಾಂಡ 7:23

ಮಾರ್ಜಿನಲ್ ರೆಫರೆನ್ಸ್

  • +ಆದಿ 6:7; 2ಪೇತ್ರ 3:5, 6
  • +ಮತ್ತಾ 24:37-39; 1ಪೇತ್ರ 3:20; 2ಪೇತ್ರ 2:5, 9

ಆದಿಕಾಂಡ 7:24

ಮಾರ್ಜಿನಲ್ ರೆಫರೆನ್ಸ್

  • +ಆದಿ 8:3

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 7:1ಆದಿ 6:9; ಇಬ್ರಿ 10:38; 11:7; 1ಪೇತ್ರ 3:12; 2ಪೇತ್ರ 2:5, 9
ಆದಿ. 7:2ಆದಿ 8:20
ಆದಿ. 7:3ಆದಿ 7:23; 8:19
ಆದಿ. 7:4ಆದಿ 2:5
ಆದಿ. 7:4ಆದಿ 7:11, 12
ಆದಿ. 7:4ಆದಿ 6:7, 17
ಆದಿ. 7:6ಆದಿ 8:13
ಆದಿ. 7:7ಲೂಕ 17:27; ಇಬ್ರಿ 11:7
ಆದಿ. 7:8ಆದಿ 6:19, 20
ಆದಿ. 7:11ಆದಿ 1:7; 8:2
ಆದಿ. 7:13ಆದಿ 9:18; 1ಪೂರ್ವ 1:4
ಆದಿ. 7:13ಆದಿ 6:18; 1ಪೇತ್ರ 3:20; 2ಪೇತ್ರ 2:5
ಆದಿ. 7:192ಪೇತ್ರ 3:5, 6
ಆದಿ. 7:21ಲೂಕ 17:27
ಆದಿ. 7:21ಆದಿ 6:7, 17
ಆದಿ. 7:22ಆದಿ 2:7; 7:15; ಪ್ರಸಂ 3:19; ಯೆಶಾ 42:5
ಆದಿ. 7:23ಆದಿ 6:7; 2ಪೇತ್ರ 3:5, 6
ಆದಿ. 7:23ಮತ್ತಾ 24:37-39; 1ಪೇತ್ರ 3:20; 2ಪೇತ್ರ 2:5, 9
ಆದಿ. 7:24ಆದಿ 8:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 7:1-24

ಆದಿಕಾಂಡ

7 ಆಮೇಲೆ ಯೆಹೋವ ನೋಹಗೆ “ನೀನು ಈ ಪೀಳಿಗೆ ಜನ್ರ ತರ ಇರದೆ ನನ್ನ ದೃಷ್ಟಿಯಲ್ಲಿ ನೀತಿವಂತನಾಗಿ ನಡಿಯೋದನ್ನ ನೋಡಿದ್ದೀನಿ.+ ಹಾಗಾಗಿ ನೀನು, ನಿನ್ನ ಕುಟುಂಬ ಹಡಗೊಳಗೆ ಹೋಗಿ. 2 ಶುದ್ಧ* ಪ್ರಾಣಿಗಳಲ್ಲಿ ಪ್ರತಿಯೊಂದು ಜಾತಿಯ ಏಳು* ಪ್ರಾಣಿಗಳನ್ನ+ ನಿನ್ನ ಜೊತೆ ಕರ್ಕೊಂಡು ಹೋಗಬೇಕು. ಅವುಗಳಲ್ಲಿ ಗಂಡುಹೆಣ್ಣು ಇರಬೇಕು. ಶುದ್ಧವಲ್ಲದ ಎಲ್ಲ ಪ್ರಾಣಿಗಳಲ್ಲಿ ಬರೀ ಎರಡನ್ನ ಅಂದ್ರೆ ಒಂದು ಗಂಡು, ಒಂದು ಹೆಣ್ಣನ್ನ ಕರ್ಕೊಂಡು ಹೋಗಬೇಕು. 3 ಆಕಾಶದಲ್ಲಿ ಹಾರೋ ಜೀವಿಗಳಲ್ಲಿ ಏಳೇಳನ್ನ* ಕರ್ಕೊಂಡು ಹೋಗಬೇಕು. ಅವುಗಳಲ್ಲಿ ಗಂಡುಹೆಣ್ಣು ಇರಬೇಕು. ಅವು ಬದುಕಿ ಉಳಿಯೋದ್ರಿಂದ ಅವುಗಳ ಜಾತಿ ಭೂಮಿ ಮೇಲಿಂದ ಅಳಿದು ಹೋಗಲ್ಲ.+ 4 ನಾನು ಇನ್ನು ಏಳೇ ದಿನದಲ್ಲಿ ಭೂಮಿ ಮೇಲೆ ಮಳೆ+ ಬರೋ ತರ ಮಾಡ್ತೀನಿ. 40 ದಿನ ಹಗಲೂ ರಾತ್ರಿ+ ಮಳೆ ಸುರಿಯುತ್ತೆ. ನಾನು ಮಾಡಿದ ಪ್ರತಿಯೊಂದು ಜೀವಿಯನ್ನ ಭೂಮಿ ಮೇಲಿಂದ ಅಳಿಸಿಹಾಕ್ತೀನಿ” ಅಂದನು.+ 5 ಯೆಹೋವ ಏನೇನು ಮಾಡಬೇಕಂತ ಆಜ್ಞೆ ಕೊಟ್ನೋ ಅದೆಲ್ಲ ನೋಹ ಮಾಡಿದ.

6 ಭೂಮಿ ಮೇಲೆ ಜಲಪ್ರಳಯ ಬಂದಾಗ ನೋಹಗೆ 600 ವರ್ಷ.+ 7 ಜಲಪ್ರಳಯ+ ಬರೋ ಮುಂಚೆ ನೋಹ ತನ್ನ ಹೆಂಡತಿ, ಮಕ್ಕಳು, ಸೊಸೆಯರ ಜೊತೆ ಹಡಗಿನ ಒಳಗೆ ಹೋದ. 8 ಶುದ್ಧ, ಶುದ್ಧವಲ್ಲದ ಎಲ್ಲ ಪ್ರಾಣಿಗಳಲ್ಲಿ ಮತ್ತು ಹಾರೋ, ನೆಲದ ಮೇಲೆ ಚಲಿಸೋ ಎಲ್ಲ ಜೀವಿಗಳಲ್ಲಿ+ 9 ಗಂಡುಹೆಣ್ಣು ಜೋಡಿಜೋಡಿಯಾಗಿ ಹಡಗಲ್ಲಿ ನೋಹನ ಹತ್ರ ಬಂದ್ವು. ಹೀಗೆ ದೇವರು ನೋಹಗೆ ಆಜ್ಞೆ ಕೊಟ್ಟ ತರಾನೇ ಅವು ಹಡಗೊಳಗೆ ಹೋದ್ವು. 10 ಏಳು ದಿನ ಆದ್ಮೇಲೆ ಮಳೆ ಶುರು ಆಗಿ ಭೂಮಿ ಮುಚ್ಕೊಳ್ಳೋ ತರ ಪ್ರವಾಹ ಆಯ್ತು.

11 ನೋಹನ ಜೀವನದ 600ನೇ ವರ್ಷದ ಎರಡನೇ ತಿಂಗಳಿನ 17ನೇ ದಿನದಲ್ಲಿ ಆಕಾಶದಲ್ಲಿದ್ದ ನೀರಿನ ಬುಗ್ಗೆಗಳೆಲ್ಲ* ಒಡಿತು, ಆಕಾಶದ ನೀರಿನ ಬಾಗಿಲುಗಳು ತೆರೀತು.+ 12 ಭೂಮಿ ಮೇಲೆ 40 ದಿನ ಹಗಲೂ ರಾತ್ರಿ ಮಳೆ ಧಾರಾಕಾರವಾಗಿ ಸುರಿತು. 13 ಅದೇ ದಿನ ನೋಹ ತನ್ನ ಹೆಂಡತಿ, ಮಕ್ಕಳಾದ ಶೇಮ್‌, ಹಾಮ್‌, ಯೆಫೆತ್‌+ ಮತ್ತು ಮೂರು ಸೊಸೆಯರ ಜೊತೆ ಹಡಗೊಳಗೆ ಹೋದ.+ 14 ಅವರ ಜೊತೆ ಎಲ್ಲ ಜಾತಿಯ ಕಾಡುಪ್ರಾಣಿಗಳು, ಎಲ್ಲ ಜಾತಿಯ ಸಾಕುಪ್ರಾಣಿಗಳು, ಎಲ್ಲ ಜಾತಿಯ ಹರಿದಾಡೋ ಪ್ರಾಣಿಗಳು, ಎಲ್ಲ ಜಾತಿಯ ಹಾರೋ ಜೀವಿಗಳು ಅಂದ್ರೆ ಪಕ್ಷಿಗಳು, ರೆಕ್ಕೆಯಿರೋ ಬೇರೆ ಜೀವಿಗಳು ಹಡಗೊಳಗೆ ಹೋಯ್ತು. 15 ಎಲ್ಲ ರೀತಿಯ ಉಸಿರಾಡೋ ಪ್ರಾಣಿಗಳು ಜೋಡಿಜೋಡಿಯಾಗಿ ಹಡಗಿನ ಒಳಗೆ ನೋಹನ ಹತ್ರ ಹೋಗ್ತಾ ಇತ್ತು. 16 ಹೀಗೆ ದೇವರು ಅವನಿಗೆ ಆಜ್ಞೆ ಕೊಟ್ಟ ತರಾನೇ ಎಲ್ಲ ಜಾತಿಯ ಪ್ರಾಣಿಗಳಲ್ಲಿ ಗಂಡುಹೆಣ್ಣು ಹಡಗಿನ ಒಳಗೆ ಹೋಯ್ತು. ಆಮೇಲೆ ಯೆಹೋವ ಹಡಗಿನ ಬಾಗಿಲು ಮುಚ್ಚಿದನು.

17 ಭೂಮಿ ಮೇಲೆ 40 ದಿನ ಮಳೆ ಸುರೀತು. ಪ್ರವಾಹದ ನೀರು ಜಾಸ್ತಿ ಆಗ್ತಾ ಹೋದ ಹಾಗೆ ಹಡಗನ್ನ ತುಂಬ ಮೇಲೆ ಎತ್ತಿತ್ತು. ಭೂಮಿ ಮೇಲೆ ತುಂಬಿದ್ದ ನೀರಲ್ಲಿ ಹಡಗು ತೇಲ್ತಾ ಇತ್ತು. 18 ನೀರು ಹೆಚ್ಚಾಗ್ತಾ ಭೂಮಿ ಮೇಲೆಲ್ಲಾ ತುಂಬ್ಕೊಳ್ತು. ಹಡಗು ಮಾತ್ರ ನೀರಿನ ಮೇಲೆ ತೇಲ್ತಿತ್ತು. 19 ಭೂಮಿ ಮೇಲೆ ನೀರು ಎಷ್ಟು ತುಂಬಿತಂದ್ರೆ ಭೂಮಿ ಮೇಲಿದ್ದ ಎಲ್ಲ ದೊಡ್ಡ ದೊಡ್ಡ ಬೆಟ್ಟಗಳು ಮುಳುಗಿಹೋಯ್ತು.+ 20 ದೊಡ್ಡ ಬೆಟ್ಟಗಳಿಗಿಂತ ಇನ್ನೂ 15 ಮೊಳ* ಎತ್ರ ತನಕ ನೀರು ತುಂಬ್ತು.

21 ಇದ್ರಿಂದ, ಭೂಮಿ ಮೇಲಿರೋ ಎಲ್ಲ ಜೀವಿಗಳು ಅಂದ್ರೆ ಹಾರೋ ಜೀವಿಗಳು, ಸಾಕುಪ್ರಾಣಿಗಳು, ಕಾಡುಪ್ರಾಣಿಗಳು, ಚಿಕ್ಕ ಚಿಕ್ಕ ಜೀವಿಗಳು,* ಎಲ್ಲ ಮನುಷ್ಯರು+ ನಾಶವಾದ್ರು.+ 22 ನೆಲದ ಮೇಲೆ ಉಸಿರಾಡ್ತಾ+ ಬದುಕ್ತಿದ್ದ ಎಲ್ಲಾ ಜೀವಿಗಳು ಸತ್ತುಹೋದ್ವು. 23 ಹೀಗೆ ಮನುಷ್ಯರು, ಪ್ರಾಣಿಗಳು, ಹರಿದಾಡೋ ಪ್ರಾಣಿಗಳು, ಆಕಾಶದಲ್ಲಿ ಹಾರೋ ಜೀವಿಗಳನ್ನ ಸೇರಿಸಿ ಭೂಮಿ ಮೇಲಿದ್ದ ಎಲ್ಲ ಜೀವಿಗಳನ್ನ ದೇವರು ನಾಶ ಮಾಡಿದನು. ಅವೆಲ್ಲ ಭೂಮಿಯಿಂದ ಕಣ್ಮರೆ ಆಯ್ತು.+ ನೋಹ ಮತ್ತು ಅವನ ಜೊತೆ ಹಡಗಲ್ಲಿ ಇದ್ದವರು ಮಾತ್ರ ಬದುಕಿ ಉಳಿದ್ರು.+ 24 ಪ್ರಳಯದ ನೀರು 150 ದಿನ ತನಕ+ ಇಡೀ ಭೂಮಿಯಲ್ಲಿ ತುಂಬಿತ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ