ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಯೆಹೋವ ತನ್ನ ತೀರ್ಪನ್ನ ಬದಲಾಯಿಸಲ್ಲ (1-9)

      • ಯೆರೆಮೀಯನ ದೂರು (10)

      • ಯೆಹೋವನ ಉತ್ರ (11-14)

      • ಯೆರೆಮೀಯನ ಪ್ರಾರ್ಥನೆ (15-18)

        • ದೇವರ ಮಾತನ್ನ ಸವಿದಾಗ ಸಿಗೋ ಸಂತೋಷ (16)

      • ಯೆಹೋವ ಯೆರೆಮೀಯನನ್ನ ಬಲಪಡಿಸಿದನು (19-21)

ಯೆರೆಮೀಯ 15:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:11; 1ಸಮು 7:9; ಕೀರ್ತ 99:6; 106:23

ಯೆರೆಮೀಯ 15:2

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 5:2
  • +ಯೆಹೆ 12:11

ಯೆರೆಮೀಯ 15:3

ಪಾದಟಿಪ್ಪಣಿ

  • *

    ಬಹುಶಃ, “ನಾಲ್ಕು ವಿಧದ ಶಿಕ್ಷೆಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 14:21
  • +ಧರ್ಮೋ 28:26; ಯೆರೆ 7:33

ಯೆರೆಮೀಯ 15:4

ಮಾರ್ಜಿನಲ್ ರೆಫರೆನ್ಸ್

  • +2ಅರ 21:11; 23:26; 24:3, 4
  • +ಧರ್ಮೋ 28:15, 25; ಯೆರೆ 24:9; ಯೆಹೆ 23:46

ಯೆರೆಮೀಯ 15:6

ಮಾರ್ಜಿನಲ್ ರೆಫರೆನ್ಸ್

  • +ಯೆರೆ 2:13
  • +ಯೆಶಾ 1:4
  • +ಚೆಫ 1:4

ಯೆರೆಮೀಯ 15:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:15, 18; ಯೆರೆ 9:21; ಯೆಹೆ 24:21
  • +ಯೆರೆ 5:3

ಯೆರೆಮೀಯ 15:9

ಪಾದಟಿಪ್ಪಣಿ

  • *

    ಬಹುಶಃ, “ಅದಕ್ಕೆ ಮುಖ ತೋರಿಸೋಕೆ ಆಗ್ತಿಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 44:27; ಯೆಹೆ 5:12

ಯೆರೆಮೀಯ 15:10

ಮಾರ್ಜಿನಲ್ ರೆಫರೆನ್ಸ್

  • +ಯೆರೆ 20:14

ಯೆರೆಮೀಯ 15:13

ಪಾದಟಿಪ್ಪಣಿ

  • *

    ಅಂದ್ರೆ ಯೆಹೂದದ ಜನ್ರು ಇರಬಹುದು.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 20:5

ಯೆರೆಮೀಯ 15:14

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:38; ಯೆರೆ 16:13
  • +ಧರ್ಮೋ 32:22; ಯೆಶಾ 42:24, 25; ಯೆರೆ 17:4

ಯೆರೆಮೀಯ 15:15

ಮಾರ್ಜಿನಲ್ ರೆಫರೆನ್ಸ್

  • +ಯೆರೆ 11:20; 12:3; 17:18; 37:15
  • +ಕೀರ್ತ 69:7

ಯೆರೆಮೀಯ 15:16

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 3:1-3; ಪ್ರಕ 10:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 47

    ಕಾವಲಿನಬುರುಜು (ಅಧ್ಯಯನ),

    5/2017, ಪು. 20

    ಕಾವಲಿನಬುರುಜು,

    3/15/2011, ಪು. 30

    4/1/2007, ಪು. 10

ಯೆರೆಮೀಯ 15:17

ಪಾದಟಿಪ್ಪಣಿ

  • *

    ಅಥವಾ “ಖಂಡನೆಯ ಸಂದೇಶವನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 1:1
  • +ಯೆರೆ 20:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 10

    5/1/2004, ಪು. 12

    11/15/1992, ಪು. 17

ಯೆರೆಮೀಯ 15:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 9

    3/1/1998, ಪು. 28

ಯೆರೆಮೀಯ 15:19

ಪಾದಟಿಪ್ಪಣಿ

  • *

    ಅಥವಾ “ನನ್ನ ಬಾಯಿ ಆಗ್ತೀಯ.”

ಯೆರೆಮೀಯ 15:20

ಪಾದಟಿಪ್ಪಣಿ

  • *

    ಅಥವಾ “ನಿನ್ನನ್ನ ಸೋಲಿಸಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 1:18; ಯೆಹೆ 3:9
  • +ಯೆರೆ 20:11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 15:1ವಿಮೋ 32:11; 1ಸಮು 7:9; ಕೀರ್ತ 99:6; 106:23
ಯೆರೆ. 15:2ಯೆಹೆ 5:2
ಯೆರೆ. 15:2ಯೆಹೆ 12:11
ಯೆರೆ. 15:3ಯೆಹೆ 14:21
ಯೆರೆ. 15:3ಧರ್ಮೋ 28:26; ಯೆರೆ 7:33
ಯೆರೆ. 15:42ಅರ 21:11; 23:26; 24:3, 4
ಯೆರೆ. 15:4ಧರ್ಮೋ 28:15, 25; ಯೆರೆ 24:9; ಯೆಹೆ 23:46
ಯೆರೆ. 15:6ಯೆರೆ 2:13
ಯೆರೆ. 15:6ಯೆಶಾ 1:4
ಯೆರೆ. 15:6ಚೆಫ 1:4
ಯೆರೆ. 15:7ಧರ್ಮೋ 28:15, 18; ಯೆರೆ 9:21; ಯೆಹೆ 24:21
ಯೆರೆ. 15:7ಯೆರೆ 5:3
ಯೆರೆ. 15:9ಯೆರೆ 44:27; ಯೆಹೆ 5:12
ಯೆರೆ. 15:10ಯೆರೆ 20:14
ಯೆರೆ. 15:13ಯೆರೆ 20:5
ಯೆರೆ. 15:14ಯಾಜ 26:38; ಯೆರೆ 16:13
ಯೆರೆ. 15:14ಧರ್ಮೋ 32:22; ಯೆಶಾ 42:24, 25; ಯೆರೆ 17:4
ಯೆರೆ. 15:15ಯೆರೆ 11:20; 12:3; 17:18; 37:15
ಯೆರೆ. 15:15ಕೀರ್ತ 69:7
ಯೆರೆ. 15:16ಯೆಹೆ 3:1-3; ಪ್ರಕ 10:9, 10
ಯೆರೆ. 15:17ಕೀರ್ತ 1:1
ಯೆರೆ. 15:17ಯೆರೆ 20:8
ಯೆರೆ. 15:20ಯೆರೆ 1:18; ಯೆಹೆ 3:9
ಯೆರೆ. 15:20ಯೆರೆ 20:11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 15:1-21

ಯೆರೆಮೀಯ

15 ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು “ಮೋಶೆ, ಸಮುವೇಲ ಈಗ ಇದ್ದಿದ್ರೆ+ ಈ ಜನ್ರ ಪರವಾಗಿ ನನ್ನ ಹತ್ರ ಬೇಡ್ಕೊಂಡ್ರೂ ನಾನು ಅವ್ರಿಗೆ ದಯೆ ತೋರಿಸಲ್ಲ. ನಾನು ಈ ಜನ್ರನ್ನ ನನ್ನ ಕಣ್ಮುಂದೆಯಿಂದ ಓಡಿಸಿಬಿಡ್ತೀನಿ. ಅವರು ಹೋಗ್ಲಿ. 2 ಅವರು ನಿನಗೆ ‘ಆಗ ನಮ್ಮ ಗತಿ ಏನು?’ ಅಂತ ಕೇಳಿದ್ರೆ, ನೀನು ಅವ್ರಿಗೆ ಹೀಗೆ ಹೇಳು ‘ಯೆಹೋವ ಹೇಳೋದು ಏನಂದ್ರೆ,

“ಸಾವು ತರೋ ಕಾಯಿಲೆಯಿಂದ ಸಾಯಬೇಕಾದವರು ಅದ್ರಿಂದಾನೇ ಸಾಯ್ತಾರೆ!

ಕತ್ತಿಯಿಂದ ಸಾಯಬೇಕಾದವರು ಅದ್ರಿಂದಾನೇ ಸಾಯ್ತಾರೆ!+

ಬರಗಾಲಕ್ಕೆ ತುತ್ತಾಗಬೇಕಾದವರು ಅದ್ರಿಂದಾನೇ ಸಾಯ್ತಾರೆ!

ಕೈದಿಗಳಾಗಿ ಹೋಗಬೇಕಾದವರು ಕೈದಿಗಳಾಗೇ ಹೋಗ್ತಾರೆ!”’+

3 ಯೆಹೋವ ಹೇಳೋದು ಏನಂದ್ರೆ ‘ನಾನು ಅವ್ರ ಮೇಲೆ ನಾಲ್ಕು ಕಷ್ಟಗಳನ್ನ* ತರ್ತಿನಿ+ ಅಂದ್ರೆ ಅವ್ರನ್ನ ಕೊಲ್ಲೋಕೆ ಕತ್ತಿಗೆ, ಅವ್ರನ್ನ ಎಳ್ಕೊಂಡು ಹೋಗೋಕೆ ನಾಯಿಗಳಿಗೆ, ಅವ್ರನ್ನ ತಿನ್ನೋಕೆ, ನಾಶಮಾಡೋಕೆ ಪಕ್ಷಿಗಳಿಗೆ, ಭೂಮಿಯಲ್ಲಿರೋ ಪ್ರಾಣಿಗಳಿಗೆ ಹೇಳ್ತಿನಿ.+ 4 ಹಿಜ್ಕೀಯನ ಮಗನೂ ಯೆಹೂದದ ರಾಜನೂ ಆದ ಮನಸ್ಸೆ ಯೆರೂಸಲೇಮಲ್ಲಿ ಮಾಡಿದ ಕೆಟ್ಟ ಕೆಲಸಗಳಿಗೆ ಈ ಶಿಕ್ಷೆ ತರ್ತಿನಿ.+ ಈ ಜನ್ರಿಗೆ ಬರೋ ಸ್ಥಿತಿ ನೋಡಿ ಭೂಮಿಯ ಎಲ್ಲ ಸಾಮ್ರಾಜ್ಯಗಳಿಗೆ ಗಾಬರಿ ಆಗುತ್ತೆ.+

 5 ಯೆರೂಸಲೇಮೇ, ನಿನಗೆ ಯಾರು ಕನಿಕರ ತೋರಿಸ್ತಾರೆ?

ನಿನ್ನ ಸ್ಥಿತಿ ನೋಡಿ ಯಾರು ಸಮಾಧಾನ ಮಾಡ್ತಾರೆ?

ಯಾರು ನಿಂತು ನಿನ್ನ ಆರೋಗ್ಯ ವಿಚಾರಿಸ್ತಾರೆ?’

 6 ಯೆಹೋವ ಹೇಳೋದು ಏನಂದ್ರೆ ‘ನೀನು ನನ್ನನ್ನ ಬಿಟ್ಟು ಹೋಗಿದ್ದೀಯ.+

ನೀನು ಪದೇಪದೇ ನನಗೆ ಬೆನ್ನು ಹಾಕಿ ನನ್ನಿಂದ ದೂರ ಹೋಗ್ತೀಯ.+

ಹಾಗಾಗಿ ನಾನು ನಿನ್ನ ವಿರುದ್ಧ ಕೈಚಾಚಿ ನಿನ್ನನ್ನ ನಾಶ ಮಾಡ್ತೀನಿ.+

ನಿನಗೆ ಕರುಣೆ ತೋರಿಸಿ ತೋರಿಸಿ ನನಗೆ ಸಾಕಾಗಿ ಹೋಗಿದೆ.

 7 ನಾನು ಅವ್ರನ್ನ ಈ ದೇಶದ ಬಾಗಿಲುಗಳ ಹತ್ರ ಕವಲುಗೋಲಿಂದ ತೂರಿ ಬಿಡ್ತೀನಿ.

ನಾನು ಅವ್ರ ಮಕ್ಕಳನ್ನ ಕಿತ್ಕೊಳ್ತೀನಿ.+

ನನ್ನ ಜನ್ರು ಕೆಟ್ಟ ದಾರಿ ಬಿಟ್ಟುಬಿಡದೆ ಇರೋದ್ರಿಂದ+

ಅವ್ರನ್ನ ನಾಶ ಮಾಡ್ತೀನಿ.

 8 ಅವ್ರ ವಿಧವೆಯರ ಸಂಖ್ಯೆ ಸಮುದ್ರದ ಮರಳಿಗಿಂತ ಜಾಸ್ತಿ ಆಗುತ್ತೆ.

ನಾಶ ಮಾಡೋನು ಹಾಡಹಗಲಲ್ಲೇ ತಾಯಂದಿರ ಮೇಲೆ, ಯುವಕರ ಮೇಲೆ ದಾಳಿ ಮಾಡೋ ಹಾಗೆ ಮಾಡ್ತೀನಿ.

ಅವರು ತಕ್ಷಣ ಕಳವಳಕ್ಕೂ ಭಯಕ್ಕೂ ತುತ್ತಾಗೋ ತರ ಮಾಡ್ತೀನಿ.

 9 ಏಳು ಮಕ್ಕಳನ್ನ ಹೆತ್ತ ಹೆಂಗಸು ಮೂರ್ಛೆ ಹೋಗಿದ್ದಾಳೆ,

ಅವಳು ಉಸಿರಾಡೋಕೆ ಕಷ್ಟಪಡ್ತಿದ್ದಾಳೆ.

ಅವಳ ಪಾಲಿಗೆ ಹಗಲಲ್ಲೇ ಸೂರ್ಯ ಮುಳುಗಿದ್ದಾನೆ,

ಇದ್ರಿಂದ ಅವಳಿಗೆ ನಾಚಿಕೆ ಅವಮಾನ ಆಗಿದೆ.’*

‘ಅವ್ರಲ್ಲಿ ಉಳಿದ ಕೆಲವೇ ಜನ್ರನ್ನ ಶತ್ರುಗಳ ಕತ್ತಿಗೆ ಸಾಯೋ ತರ ಮಾಡ್ತೀನಿ’ ಅಂತ ಯೆಹೋವ ಹೇಳ್ತಾನೆ.”+

10 ಅಮ್ಮಾ, ನೀನು ಯಾಕಾದ್ರೂ ನನ್ನನ್ನ ಹುಟ್ಟಿಸ್ದೆ?+

ನಾನು ಇಡೀ ದೇಶದಲ್ಲಿ ಜಗಳ, ವಿವಾದಕ್ಕೆ ಕಾರಣ ಆಗಿದ್ದೀನಿ.

ನಾನು ಅವ್ರಿಗೆ ಸಾಲ ಕೊಡಲಿಲ್ಲ, ಅವ್ರಿಂದ ಸಾಲ ತಗೊಂಡಿಲ್ಲ,

ಆದ್ರೂ ನನಗೆ ಎಲ್ರೂ ಶಾಪ ಹಾಕ್ತಿದ್ದಾರೆ.

11 ಯೆಹೋವ ಹೀಗೆ ಹೇಳಿದನು “ನಾನು ನಿನಗೆ ಖಂಡಿತ ಒಳ್ಳೇದನ್ನ ಮಾಡ್ತೀನಿ,

ಕಷ್ಟ, ತೊಂದ್ರೆ ಬಂದಾಗ ನಿನಗೋಸ್ಕರ

ನಾನು ಶತ್ರು ಮುಂದೆ ಮಧ್ಯಸ್ತಿಕೆ ವಹಿಸ್ತೀನಿ.

12 ಕಬ್ಬಿಣ ಅದರಲ್ಲೂ ಉತ್ತರದಿಂದ ಬರೋ ಕಬ್ಬಿಣವನ್ನ ತುಂಡು ತುಂಡು ಮಾಡೋಕೆ ಯಾರಿಂದಾದ್ರೂ ಆಗುತ್ತಾ?

ತಾಮ್ರವನ್ನ ತುಂಡು ತುಂಡು ಮಾಡೋಕೆ ಯಾರಿಂದಾದ್ರೂ ಆಗುತ್ತಾ?

13 ನಿನಗೆ* ಸೇರಿದ ಎಲ್ಲ ಪ್ರದೇಶಗಳಲ್ಲಿ ನೀನು ಮಾಡಿದ ಎಲ್ಲ ಪಾಪಗಳಿಗೋಸ್ಕರ

ನಿನ್ನ ಸಿರಿಸಂಪತ್ತು, ನಿಧಿನಿಕ್ಷೇಪಗಳನ್ನ ಬೇರೆಯವರು ಲೂಟಿ ಮಾಡೋ ತರ ಮಾಡ್ತೀನಿ,+

ಅವುಗಳನ್ನ ಪುಕ್ಕಟೆಯಾಗಿ ಕೊಡ್ತೀನಿ.

14 ಅವುಗಳನ್ನ ನಿನಗೆ ಗೊತ್ತಿಲ್ಲದ ದೇಶಕ್ಕೆ ತಗೊಂಡು ಹೋಗ್ತೀನಿ

ನಿನ್ನ ಶತ್ರುಗಳಿಗೆ ಅವುಗಳನ್ನ ಕೊಡ್ತೀನಿ.+

ಯಾಕಂದ್ರೆ ನನ್ನ ಕೋಪಾಗ್ನಿ ಹತ್ತಿ ಉರಿತಾ ಇದೆ,

ಅದು ನಿನ್ನನ್ನ ಸುಡ್ತಿದೆ.”+

15 ಯೆಹೋವನೇ, ನನ್ನ ಪರಿಸ್ಥಿತಿ ನಿಂಗೊತ್ತು,

ನನ್ನನ್ನ ನೆನಪಿಸ್ಕೊ, ನನಗೆ ಗಮನಕೊಡು.

ನನಗೋಸ್ಕರ ನನಗೆ ಹಿಂಸೆ ಕೊಡುವವ್ರಿಗೆ ಸೇಡು ತೀರಿಸು.+

ನೀನು ಬೇಗ ಕೋಪಿಸ್ಕೊಳ್ಳಲ್ಲ ಅಂತ ನಂಗೊತ್ತು, ಹಾಗಂತ ನಾನು ನಾಶ ಆಗೋ ತರ ಬಿಡಬೇಡ.

ನಿನಗೋಸ್ಕರನೇ ನಾನು ಇಷ್ಟೆಲ್ಲ ಅವಮಾನ ಸಹಿಸ್ಕೊಳ್ತಾ ಇದ್ದೀನಿ ಅಂತ ನೆನಪಿಸ್ಕೊ.+

16 ನಿನ್ನ ಮಾತುಗಳು ನನಗೆ ಸಿಕ್ತು, ಅವುಗಳನ್ನ ತಿಂದೆ.+

ಆಗ ನಿನ್ನ ಮಾತುಗಳು ನನಗೆ ಖುಷಿ ಕೊಡ್ತು, ಹೃದಯಕ್ಕೆ ಉಲ್ಲಾಸ ಬಂತು,

ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವನೇ, ನನ್ನನ್ನ ನಿನ್ನ ಹೆಸ್ರಿಂದ ಕರಿತಾರೆ.

17 ಮಜಾ ಮಾಡೋರ ಜೊತೆಯಲ್ಲಿ ನಾನು ಕೂತು ಸಂತೋಷಪಡಲ್ಲ,+

ನೀನು ನನ್ನ ಮೇಲೆ ಕೈ ಇಟ್ಟಿರೋದ್ರಿಂದ ನಾನು ಒಂಟಿಯಾಗಿ ಕೂತಿದ್ದೀನಿ,

ನೀನು ನನ್ನಲ್ಲಿ ಕೋಪವನ್ನ* ತುಂಬಿಸಿದ್ದೀಯ.+

18 ಇಷ್ಟು ಸಮಯ ಆದ್ರೂ ಯಾಕೆ ನನ್ನ ನೋವು ಕಡಿಮೆ ಆಗ್ತಿಲ್ಲ? ನನ್ನ ಗಾಯ ಯಾಕೆ ವಾಸಿ ಆಗ್ತಿಲ್ಲ?

ವಾಸಿ ಆಗೋ ಲಕ್ಷಣನೇ ಕಾಣ್ತಿಲ್ಲ.

ನೀನು ನನಗೆ ಬತ್ತಿಹೋದ ಬುಗ್ಗೆ ತರ ಆಗಿದ್ದೀಯಾ?

ನೀರು ಸಿಗುತ್ತೆ ಅನ್ನೋ ನಂಬಿಕೆನೇ ಇಲ್ಲ.

19 ಹಾಗಾಗಿ ಯೆಹೋವ ಹೇಳೋದು ಏನಂದ್ರೆ,

“ನೀನು ವಾಪಸ್‌ ಬಂದ್ರೆ ನಿನ್ನನ್ನ ಮುಂಚಿನ ತರ ಮಾಡ್ತೀನಿ, ನೀನು ನನ್ನ ಮುಂದೆ ನಿಲ್ತೀಯ.

ಅಮೂಲ್ಯ ವಸ್ತುಗಳನ್ನ, ಬೇಡವಾದ ವಸ್ತುಗಳನ್ನ ಬೇರೆಬೇರೆ ಮಾಡಿದ್ರೆ

ನೀನು ನನ್ನ ಮಾತುಗಳನ್ನ ತಿಳಿಸ್ತೀಯ.*

ಜನ್ರು ನಿನ್ನ ಹತ್ರ ವಾಪಸ್‌ ಬರ್ತಾರೆ,

ಆದ್ರೆ ನೀನು ಅವ್ರ ಹತ್ರ ಹೋಗಲ್ಲ.”

20 ಯೆಹೋವ ಹೇಳೋದು ಏನಂದ್ರೆ “ಈ ಜನ್ರ ಮಧ್ಯ ನಿನ್ನನ್ನ ತಾಮ್ರದ ಭದ್ರ ಗೋಡೆ ತರ ಮಾಡ್ತೀನಿ.+

ಅವರು ಖಂಡಿತ ನಿನ್ನ ಜೊತೆ ಹೋರಾಡ್ತಾರೆ,

ಆದ್ರೆ ಗೆಲ್ಲಲ್ಲ,*+

ಯಾಕಂದ್ರೆ ನಾನೇ ನಿನ್ನ ಜೊತೆ ಇದ್ದು ಕಾಪಾಡ್ತೀನಿ.”

21 “ನಾನು ನಿನ್ನನ್ನ ಕೆಟ್ಟವರ ಕೈಯಿಂದ ತಪ್ಪಿಸ್ತೀನಿ,

ಕ್ರೂರಿಗಳ ಕೈಯಿಂದ ಬಿಡಿಸ್ತೀನಿ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ