ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಸಮುವೇಲ ಮುಖ್ಯಾಂಶಗಳು

      • ಈಷ್ಬೋಶೆತನ ಕೊಲೆ (1-8)

      • ಕೊಲೆಗಾರರನ್ನ ದಾವೀದ ಸಾಯಿಸಿದ (9-12)

2 ಸಮುವೇಲ 4:1

ಮಾರ್ಜಿನಲ್ ರೆಫರೆನ್ಸ್

  • +2ಸಮು 3:27
  • +2ಸಮು 2:8

2 ಸಮುವೇಲ 4:2

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 9:17; 18:21, 25

2 ಸಮುವೇಲ 4:3

ಮಾರ್ಜಿನಲ್ ರೆಫರೆನ್ಸ್

  • +ನೆಹೆ 11:31, 33

2 ಸಮುವೇಲ 4:4

ಪಾದಟಿಪ್ಪಣಿ

  • *

    ಅಥವಾ “ಕುಂಟನಾಗಿದ್ದ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 20:16
  • +2ಸಮು 9:3
  • +1ಸಮು 29:1, 11
  • +2ಸಮು 9:13; 1ಪೂರ್ವ 8:34

2 ಸಮುವೇಲ 4:6

ಮಾರ್ಜಿನಲ್ ರೆಫರೆನ್ಸ್

  • +2ಸಮು 4:2

2 ಸಮುವೇಲ 4:8

ಮಾರ್ಜಿನಲ್ ರೆಫರೆನ್ಸ್

  • +2ಸಮು 2:10
  • +1ಸಮು 18:10, 11; 20:1, 33; 23:15
  • +1ಸಮು 18:28, 29

2 ಸಮುವೇಲ 4:9

ಮಾರ್ಜಿನಲ್ ರೆಫರೆನ್ಸ್

  • +1ಸಮು 24:12; 26:25; 2ಸಮು 12:7; ಕೀರ್ತ 34:7

2 ಸಮುವೇಲ 4:10

ಮಾರ್ಜಿನಲ್ ರೆಫರೆನ್ಸ್

  • +2ಸಮು 1:2, 4
  • +2ಸಮು 1:13-15

2 ಸಮುವೇಲ 4:11

ಮಾರ್ಜಿನಲ್ ರೆಫರೆನ್ಸ್

  • +ಆದಿ 9:6; ವಿಮೋ 21:12; ಅರ 35:16, 30

2 ಸಮುವೇಲ 4:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:23
  • +ಧರ್ಮೋ 21:22

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಸಮು. 4:12ಸಮು 3:27
2 ಸಮು. 4:12ಸಮು 2:8
2 ಸಮು. 4:2ಯೆಹೋ 9:17; 18:21, 25
2 ಸಮು. 4:3ನೆಹೆ 11:31, 33
2 ಸಮು. 4:41ಸಮು 20:16
2 ಸಮು. 4:42ಸಮು 9:3
2 ಸಮು. 4:41ಸಮು 29:1, 11
2 ಸಮು. 4:42ಸಮು 9:13; 1ಪೂರ್ವ 8:34
2 ಸಮು. 4:62ಸಮು 4:2
2 ಸಮು. 4:82ಸಮು 2:10
2 ಸಮು. 4:81ಸಮು 18:10, 11; 20:1, 33; 23:15
2 ಸಮು. 4:81ಸಮು 18:28, 29
2 ಸಮು. 4:91ಸಮು 24:12; 26:25; 2ಸಮು 12:7; ಕೀರ್ತ 34:7
2 ಸಮು. 4:102ಸಮು 1:2, 4
2 ಸಮು. 4:102ಸಮು 1:13-15
2 ಸಮು. 4:11ಆದಿ 9:6; ವಿಮೋ 21:12; ಅರ 35:16, 30
2 ಸಮು. 4:12ಕೀರ್ತ 55:23
2 ಸಮು. 4:12ಧರ್ಮೋ 21:22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಸಮುವೇಲ 4:1-12

ಎರಡನೇ ಸಮುವೇಲ

4 ಅಬ್ನೇರ ಹೆಬ್ರೋನಲ್ಲಿ+ ತೀರಿಹೋದ ಅನ್ನೋ ಸುದ್ದಿ ಸೌಲನ ಮಗ ಈಷ್ಬೋಶೆತ+ ಕೇಳಿಸ್ಕೊಂಡಾಗ ಧೈರ್ಯ ಕಳ್ಕೊಂಡ. ಎಲ್ಲ ಇಸ್ರಾಯೇಲ್ಯರೂ ಭಯಪಟ್ರು. 2 ಸೌಲನ ಮಗನಿಗೆ ಸೇರಿದ ಲೂಟಿಗಾರರ ಗುಂಪಲ್ಲಿ ಇಬ್ರು ಮುಖ್ಯಸ್ಥರಿದ್ರು. ಒಬ್ಬನ ಹೆಸ್ರು ಬಾಣ, ಇನ್ನೊಬ್ಬನ ಹೆಸ್ರು ರೇಕಾಬ್‌. ಇವರು ಬೆನ್ಯಾಮೀನ್‌ ಕುಲದ ಬೇರೋತ್ಯನಾಗಿದ್ದ ರಿಮ್ಮೋನನ ಮಕ್ಕಳು. (ಬೇರೋತ್‌+ ಬೆನ್ಯಾಮೀನಿಗೆ ಸೇರಿದ ಭಾಗ. 3 ಬೇರೋತ್ಯರು ಗಿತ್ತಯಿಮಿಗೆ+ ಓಡಿಹೋದ್ರು. ಇವತ್ತಿಗೂ ಅವರು ಅಲ್ಲೇ ವಿದೇಶಿಗಳಾಗಿ ವಾಸ ಮಾಡ್ತಿದ್ದಾರೆ.)

4 ಸೌಲನ ಮಗ ಯೋನಾತಾನನಿಗೆ+ ಅಂಗವಿಕಲನಾದ*+ ಒಬ್ಬ ಮಗ ಇದ್ದ. ಸೌಲ, ಯೋನಾತಾನ ತೀರಿಹೋಗಿರೋ ಸುದ್ದಿ ಇಜ್ರೇಲ್‌ನಿಂದ+ ಸಿಕ್ಕಿದಾಗ ಅವನಿಗೆ ಐದು ವರ್ಷ. ಈ ಸುದ್ದಿ ಕೇಳಿ ಅವನನ್ನ ನೋಡ್ಕೊಳ್ತಿದ್ದ ಸ್ತ್ರೀ ಅವನನ್ನ ಎತ್ಕೊಂಡು ಭಯದಿಂದ ಓಡ್ತಾ ಇರುವಾಗ ಅವನು ಬಿದ್ದು ಅಂಗವಿಕಲನಾದ. ಅವನ ಹೆಸ್ರು ಮೆಫೀಬೋಶೆತ್‌.+

5 ಬೇರೋತ್ಯನಾಗಿದ್ದ ರಿಮ್ಮೋನನ ಮಕ್ಕಳಾದ ರೇಕಾಬ್‌, ಬಾಣ ಮಟಮಟ ಮಧ್ಯಾಹ್ನ ಈಷ್ಬೋಶೆತನ ಮನೆಗೆ ಹೋದ್ರು. ಆಗ ಈಷ್ಬೋಶೆತ ನಿದ್ದೆ ಮಾಡ್ತಿದ್ದ. 6 ಆಗ ಅವರು ಗೋದಿ ತಗೊಳ್ಳೋಕೆ ಹೋಗೋ ತರ ಮನೆ ಒಳಗೆ ಹೋದ್ರು. ಅವನ ಹೊಟ್ಟೆಗೆ ತಿವಿದು ರೇಕಾಬ್‌, ಬಾಣ+ ಪರಾರಿಯಾದ್ರು. 7 ಅವರು ಮನೆ ಒಳಗೆ ಹೋದಾಗ ಈಷ್ಬೋಶೆತ ಮಲಗೋ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ. ಅವರು ಅವನನ್ನ ತಿವಿದು ಕೊಂದುಹಾಕಿದ್ರು. ಆಮೇಲೆ ಅವನ ತಲೆ ಕಡಿದ್ರು. ಅವನ ತಲೆ ತಗೊಂಡು ಇಡೀ ರಾತ್ರಿ ಅರಾಬಾದ ದಾರೀಲಿ ನಡ್ಕೊಂಡು ಹೋದ್ರು. 8 ಅವರು ಈಷ್ಬೋಶೆತನ+ ತಲೆಯನ್ನ ಹೆಬ್ರೋನಲ್ಲಿದ್ದ ದಾವೀದನ ಹತ್ರ ತಂದು ರಾಜನಿಗೆ “ನೋಡು, ನಿನ್ನ ಪ್ರಾಣ ತೆಗಿಬೇಕಂತ ಇದ್ದ+ ನಿನ್ನ ಶತ್ರುವಾದ ಸೌಲನ+ ಮಗ ಈಷ್ಬೋಶೆತನ ತಲೆ. ಇವತ್ತು ಯೆಹೋವ ನಮ್ಮ ಒಡೆಯನಾದ ರಾಜನ ಪರವಾಗಿ ಸೌಲನ, ಅವನ ವಂಶದವ್ರ ಮೇಲೆ ಸೇಡು ತೀರಿಸಿದ್ದಾನೆ” ಅಂದ್ರು.

9 ಆದ್ರೆ ದಾವೀದ ಬೇರೋತ್ಯನಾಗಿದ್ದ ರಿಮ್ಮೋನನ ಮಕ್ಕಳಾದ ರೇಕಾಬ್‌, ಬಾಣರಿಗೆ “ನನ್ನನ್ನ ಎಲ್ಲ ಕಷ್ಟದಿಂದ ಕಾಪಾಡಿದ+ ಜೀವ ಇರೋ ಯೆಹೋವನ ಆಣೆ, 10 ‘ಸೌಲ ಸತ್ತ’+ ಅಂತ ಒಬ್ಬ ನನಗೆ ವರದಿಸಿ, ಒಳ್ಳೇ ಸುದ್ದಿ ತಂದಿದ್ದೀನಿ ಅಂದ್ಕೊಂಡ. ನಾನು ಅವನನ್ನ ಚಿಕ್ಲಗಿನಲ್ಲಿ ಸಾಯಿಸಿಬಿಟ್ಟೆ.+ ಆ ಸುದ್ದಿ ತಂದಿದ್ದಕ್ಕೆ ಅವನಿಗೆ ನಾನು ಕೊಟ್ಟ ಬಹುಮಾನ ಅದು. 11 ಅಂದ್ಮೇಲೆ ನೀತಿವಂತನನ್ನ ಅವನ ಮನೆಗೆ ಹೋಗಿ ಅವನ ಮಂಚದ ಮೇಲೆನೇ ಸಾಯಿಸಿರೋ ಕೆಟ್ಟವ್ರಿಗೆ ಅದಕ್ಕಿಂತ ದೊಡ್ಡ ಬಹುಮಾನ ಕೊಡಬೇಕಲ್ವಾ! ನಾನು ಅವನ ರಕ್ತಕ್ಕಾಗಿ ನಿಮ್ಮ ಹತ್ರ ಲೆಕ್ಕ ಕೇಳಬಾರದಾ?+ ನಿಮ್ಮನ್ನ ಭೂಮಿಯಿಂದ ತೆಗೆದುಹಾಕಬಾರದಾ?” ಅಂದ. 12 ಆಮೇಲೆ ದಾವೀದ ಅವ್ರನ್ನ ಸಾಯಿಸಿ ಅಂತ ಯುವಕರಿಗೆ ಹೇಳಿದ.+ ಅವ್ರ ಕೈಕಾಲು ಕತ್ತರಿಸಿ, ಅವ್ರನ್ನ ಹೆಬ್ರೋನ್‌ ಹಳ್ಳದ ಹತ್ರ ನೇತುಹಾಕಿದ್ರು,+ ಈಷ್ಬೋಶೆತನ ತಲೆಯನ್ನ ಹೆಬ್ರೋನಲ್ಲಿದ್ದ ಅಬ್ನೇರನ ಸಮಾಧಿಯಲ್ಲಿ ಹೂಣಿಟ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ