ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪರಮ ಗೀತ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪರಮಗೀತ ಮುಖ್ಯಾಂಶಗಳು

    • ಸೊಲೊಮೋನನ ಪಾಳೆಯದಲ್ಲಿ ಶೂಲಮಿನ ಹೆಣ್ಣು (1:1–3:5)

ಪರಮ ಗೀತ 2:1

ಪಾದಟಿಪ್ಪಣಿ

  • *

    ಅಥವಾ “ಕ್ರೋಕಸ್‌.”

ಮಾರ್ಜಿನಲ್ ರೆಫರೆನ್ಸ್

  • +ಪರಮ 2:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2015, ಪು. 31

ಪರಮ ಗೀತ 2:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2015, ಪು. 31

ಪರಮ ಗೀತ 2:5

ಮಾರ್ಜಿನಲ್ ರೆಫರೆನ್ಸ್

  • +1ಸಮು 30:11, 12

ಪರಮ ಗೀತ 2:6

ಮಾರ್ಜಿನಲ್ ರೆಫರೆನ್ಸ್

  • +ಪರಮ 8:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2006, ಪು. 4

ಪರಮ ಗೀತ 2:7

ಮಾರ್ಜಿನಲ್ ರೆಫರೆನ್ಸ್

  • +2ಸಮು 2:18
  • +ಪರಮ 3:5; 8:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2015, ಪು. 31

    12/1/2006, ಪು. 4-5

ಪರಮ ಗೀತ 2:9

ಮಾರ್ಜಿನಲ್ ರೆಫರೆನ್ಸ್

  • +ಪರಮ 2:17; 8:14

ಪರಮ ಗೀತ 2:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2015, ಪು. 32

ಪರಮ ಗೀತ 2:11

ಪಾದಟಿಪ್ಪಣಿ

  • *

    ಅಥವಾ “ಮಳೆಗಾಲ.”

ಪರಮ ಗೀತ 2:12

ಮಾರ್ಜಿನಲ್ ರೆಫರೆನ್ಸ್

  • +ಪರಮ 6:11
  • +ಯೆಶಾ 18:5; ಯೋಹಾ 15:2
  • +ಯೆರೆ 8:7

ಪರಮ ಗೀತ 2:13

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 28:4; ನಹೂ 3:12

ಪರಮ ಗೀತ 2:14

ಮಾರ್ಜಿನಲ್ ರೆಫರೆನ್ಸ್

  • +ಪರಮ 5:2; ಯೆರೆ 48:28
  • +ಪರಮ 8:13
  • +ಪರಮ 1:5; 6:10

ಪರಮ ಗೀತ 2:16

ಮಾರ್ಜಿನಲ್ ರೆಫರೆನ್ಸ್

  • +ಪರಮ 7:10
  • +ಪರಮ 1:7; 2:1; 6:3

ಪರಮ ಗೀತ 2:17

ಪಾದಟಿಪ್ಪಣಿ

  • *

    ಅಥವಾ “ಬೆತೆರ್‌ ಬೆಟ್ಟಗಳ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 2:18
  • +ಪರಮ 2:9; 8:14

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪರಮ. 2:1ಪರಮ 2:16
ಪರಮ. 2:51ಸಮು 30:11, 12
ಪರಮ. 2:6ಪರಮ 8:3
ಪರಮ. 2:72ಸಮು 2:18
ಪರಮ. 2:7ಪರಮ 3:5; 8:4
ಪರಮ. 2:9ಪರಮ 2:17; 8:14
ಪರಮ. 2:12ಪರಮ 6:11
ಪರಮ. 2:12ಯೆಶಾ 18:5; ಯೋಹಾ 15:2
ಪರಮ. 2:12ಯೆರೆ 8:7
ಪರಮ. 2:13ಯೆಶಾ 28:4; ನಹೂ 3:12
ಪರಮ. 2:14ಪರಮ 5:2; ಯೆರೆ 48:28
ಪರಮ. 2:14ಪರಮ 8:13
ಪರಮ. 2:14ಪರಮ 1:5; 6:10
ಪರಮ. 2:16ಪರಮ 7:10
ಪರಮ. 2:16ಪರಮ 1:7; 2:1; 6:3
ಪರಮ. 2:172ಸಮು 2:18
ಪರಮ. 2:17ಪರಮ 2:9; 8:14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪರಮ ಗೀತ 2:1-17

ಪರಮಗೀತ

2 “ಕರಾವಳಿ ಬಯಲಲ್ಲಿ ಬೆಳಿಯೋ ಸಾಧಾರಣ ಕೇಸರಿ ಹೂವು* ನಾನು,

ಕಣಿವೆಗಳಲ್ಲಿ ಬೆಳಿಯೋ ಲಿಲಿ ಹೂವು ನಾನು.”+

 2 “ಯುವತಿಯರಲ್ಲಿ ನನ್ನ ಪ್ರೇಯಸಿ

ಮುಳ್ಳುಗಳ ಮಧ್ಯೆ ಅರಳಿದ ಲಿಲಿ ಹೂವಿನ ತರ.”

 3 “ಯುವಕರಲ್ಲಿ ನನ್ನ ಪ್ರಿಯಕರ

ಕಾಡಿನ ಮರಗಳ ಮಧ್ಯ ಇರೋ ಸೇಬು ಮರದ ತರ.

ಅವನ ನೆರಳಲ್ಲಿ ಕೂರಲು ನನ್ನ ಮನ ತುಡಿಯುತ್ತೆ,

ಅವನ ಫಲ ನನಗೆ ರುಚಿಕರ.

 4 ಅವನು ನನ್ನನ್ನ ಔತಣದ ಮನೆಗೆ ಕರ್ಕೊಂಡು ಹೋದ,

ನನ್ನ ಮೇಲೆ ಪ್ರೀತಿಯ ಧ್ವಜ ಹಾರಿಸಿದ.

 5 ನಾನು ಪ್ರೇಮಜ್ವ​ರದಿಂದ ಬಳಲ್ತಿದ್ದೀನಿ,

ಒಣದ್ರಾಕ್ಷಿಗಳನ್ನ+ ಕೊಟ್ಟು ನನ್ನಲ್ಲಿ ಚೈತನ್ಯ ತುಂಬಿ,

ಸೇಬುಗಳನ್ನ ಕೊಟ್ಟು ನನ್ನನ್ನ ಪುಷ್ಟಿಗೊಳಿಸಿ.

 6 ಅವನ ಎಡಗೈ ನನಗೆ ತಲೆದಿಂಬಾಗಿರಲಿ,

ಅವನ ಬಲಗೈ ನನ್ನನ್ನ ತಬ್ಬಿಹಿಡಿಯಲಿ.+

 7 ಯೆರೂಸಲೇಮಿನ ಹೆಣ್ಣುಮಕ್ಕಳೇ,

ನನ್ನಲ್ಲಿ ಪ್ರೀತಿ ತಾನಾಗಿ ಹುಟ್ಟೋ ತನಕ ನನ್ನೊಳಗೆ ಅದನ್ನ ಬಡಿದೆಬ್ಬಿಸೋಕೆ ಪ್ರಯತ್ನಿಸಬೇಡಿ,

ಹಾಗೆ ಮಾಡಲ್ಲ ಅಂತ ಕಾಡಿನ ಜಿಂಕೆಗಳ+ ಮೇಲೆ, ಹರಿಣಿಗಳ ಮೇಲೆ ಆಣೆಯಿಟ್ಟು ಹೇಳಿ.+

 8 ಹಾ... ಅದು ನನ್ನ ನಲ್ಲ ಬರೋ ಸಪ್ಪಳ!

ಅಲ್ಲಿ ನೋಡಿ, ಅವನು ಬರ್ತಿ​ದ್ದಾನೆ,

ಪರ್ವತಗಳನ್ನ ಹತ್ತಿ ಇಳಿತಾ, ಬೆಟ್ಟಗುಡ್ಡಗಳ ಮೇಲೆ ಜಿಗಿತಾ ಬರ್ತಿದ್ದಾನೆ.

 9 ನನ್ನ ಇನಿಯ ಜಿಂಕೆ ತರ, ಎಳೇ ಸಾರಂಗದ ತರ ಇದ್ದಾನೆ.+

ಅಲ್ಲಿ ನೋಡಿ, ನಮ್ಮ ಗೋಡೆ ಹಿಂದೆನೇ ನಿಂತಿದ್ದಾನೆ,

ಕಿಟಕಿಗಳಿಂದ ನೋಡ್ತಿದ್ದಾನೆ,

ಜಾಲರಿಗಳಲ್ಲಿ ಇಣುಕಿ ನೋಡ್ತಿದ್ದಾನೆ.

10 ನನ್ನ ಮನಸ್ಸಲ್ಲಿರೋ ಇನಿಯ ನನಗೆ ಹೀಗಂದ:

‘ನನ್ನ ರೂಪಸಿಯೇ ಬಾ,

ನನ್ನ ಪ್ರಾಣಸಖಿಯೇ ನನ್ನ ಜೊತೆ ಬಂದುಬಿಡು.

11 ನೋಡು, ಚಳಿಗಾಲ* ಕಳೆದಿದೆ,

ಸುರಿತಿದ್ದ ಮಳೆ ನಿಂತಿದೆ.

12 ದೇಶದಲ್ಲೆಲ್ಲ ಹೂಗಳು ಅರಳಿ ನಗ್ತಿವೆ,+

ದ್ರಾಕ್ಷಿಬಳ್ಳಿಗಳನ್ನ ಸಮರುವ ಕಾಲ ಶುರುವಾಗಿದೆ,+

ಎಲ್ಲೆಲ್ಲೂ ಕಾಡುಪಾರಿವಾಳದ ಗಾನ ಕೇಳಿಬರ್ತಿದೆ.+

13 ಅಂಜೂರ ಮರದ ಮೊದಲ ಕಾಯಿಗಳು ಮಾಗಿವೆ,+

ದ್ರಾಕ್ಷಿಬಳ್ಳಿಗಳು ಹೂಬಿಟ್ಟು ಪರಿಮಳ ಬೀರ್ತಿವೆ.

ನನ್ನ ಒಲವೇ, ಎದ್ದು ಬಾ.

ನನ್ನ ಚೆಲುವೆಯೇ, ನನ್ನ ಜೊತೆ ಬಾ.

14 ಬಂಡೆಯ ಸಂದುಗಳಲ್ಲಿರೋ, ಕಡಿದಾದ ಬಂಡೆಯ ರಂಧ್ರಗಳಲ್ಲಿ ಅವಿತಿರೋ+

ನನ್ನ ಪಾರಿವಾಳವೇ, ಹೊರಗೆ ಬಾ.

ನನಗೆ ನಿನ್ನ ಮೊಗ ತೋರಿಸು, ನಿನ್ನ ದನಿ ಕೇಳಿಸು,+

ನಿನ್ನ ಸ್ವರ ಮಧುರ, ನಿನ್ನ ರೂಪ ಮನೋಹರ.’”+

15 “ಆ ನರಿಗಳನ್ನ ಹಿಡಿರಿ,

ಇಲ್ಲದಿದ್ರೆ ಅವು ದ್ರಾಕ್ಷಿತೋಟಗಳನ್ನ ಹಾಳುಮಾಡ್ತವೆ,

ನಮ್ಮ ದ್ರಾಕ್ಷಿಬಳ್ಳಿಗಳು ಈಗಷ್ಟೇ ಹೂಬಿಟ್ಟಿವೆ.”

16 “ನನ್ನ ಇನಿಯ ನನಗೆ ಸೇರಿದವನು, ನಾನು ಅವನ ಸೊತ್ತು.+

ಅವನು ಲಿಲಿ ಹೂಗಳ ಮಧ್ಯ ಹಿಂಡನ್ನ ಮೇಯಿಸ್ತಿದ್ದಾನೆ.+

17 ನನ್ನ ಪ್ರಿಯತಮನೇ, ತಂಗಾಳಿ ಬೀಸೋ ಮೊದಲು,

ನೆರಳು ಮರೆಯಾಗೋ ಮೊದಲು ನೀ ಬಂದು ಸೇರು.

ನಮ್ಮನ್ನ ಬೇರೆ ಮಾಡಿರೋ ಬೆಟ್ಟಗಳ* ಮೇಲೆ

ಜಿಂಕೆ+ ತರ, ಎಳೇ ಸಾರಂಗದ ತರ ಓಡೋಡಿ ಬಾ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ