ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ದಾನಿಯೇಲ ಮುಖ್ಯಾಂಶಗಳು

      • ರಾಜ ನೆಬೂಕದ್ನೆಚ್ಚರ ದೇವರ ರಾಜಾಧಿಕಾರ ಒಪ್ಕೊಂಡ (1-3)

      • ಒಂದು ಮರದ ಬಗ್ಗೆ ರಾಜನ ಕನಸು (4-18)

        • ಮರ ಬಿದ್ದ ಮೇಲೆ ಏಳು ಕಾಲ ಕಳೀಬೇಕು (16)

        • ಮನುಷ್ಯರ ಸಾಮ್ರಾಜ್ಯದ ಮೇಲೆ ದೇವರೇ ಅಧಿಕಾರಿ (17)

      • ದಾನಿಯೇಲ ಕನಸಿನ ಅರ್ಥ ಹೇಳಿದ (19-27)

      • ಆ ಕನಸು ಮೊದ್ಲು ರಾಜನಲ್ಲಿ ನಿಜ ಆಯ್ತು (28-36)

        • ರಾಜನಿಗೆ ಏಳು ಕಾಲ ತನಕ ಹುಚ್ಚು ಹಿಡಿತು (32, 33)

      • ಸ್ವರ್ಗದ ದೇವರನ್ನ ರಾಜ ಗೌರವಿಸಿದ (37)

ದಾನಿಯೇಲ 4:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 82-84

ದಾನಿಯೇಲ 4:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:16; 90:2; ಯೆರೆ 10:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 82-84

ದಾನಿಯೇಲ 4:5

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:1

ದಾನಿಯೇಲ 4:6

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:2

ದಾನಿಯೇಲ 4:7

ಪಾದಟಿಪ್ಪಣಿ

  • *

    ಅದು, ಕಣಿ ಹೇಳೋದ್ರಲ್ಲಿ, ಜ್ಯೋತಿಷದಲ್ಲಿ ನಿಪುಣರಾಗಿರೋ ಒಂದು ಗುಂಪು.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 47:13
  • +ದಾನಿ 2:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2650

ದಾನಿಯೇಲ 4:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 46:1; ಯೆರೆ 50:2
  • +ದಾನಿ 1:7
  • +ದಾನಿ 4:18; 5:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2016, ಪು. 14

    ದಾನಿಯೇಲನ ಪ್ರವಾದನೆ, ಪು. 84-85

ದಾನಿಯೇಲ 4:9

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:20; 2:48
  • +ಆದಿ 41:38; ದಾನಿ 6:3
  • +ದಾನಿ 1:17, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2007, ಪು. 19

ದಾನಿಯೇಲ 4:10

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:20-22
  • +ದಾನಿ 4:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 85

    ಕಾವಲಿನಬುರುಜು,

    6/15/1997, ಪು. 4-5

ದಾನಿಯೇಲ 4:13

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:23-26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 85-86

ದಾನಿಯೇಲ 4:14

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:31; 5:18, 20

ದಾನಿಯೇಲ 4:15

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:32, 33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 85-86, 90-92

ದಾನಿಯೇಲ 4:16

ಮಾರ್ಜಿನಲ್ ರೆಫರೆನ್ಸ್

  • +ಲೂಕ 21:24
  • +ದಾನಿ 4:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ದಾನಿಯೇಲನ ಪ್ರವಾದನೆ, ಪು. 86, 90-92, 94-97

ದಾನಿಯೇಲ 4:17

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:34
  • +ದಾನಿ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2022, ಪು. 15-16

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ಕಾವಲಿನಬುರುಜು,

    1/1/2015, ಪು. 9

    10/15/2005, ಪು. 27

    ದಾನಿಯೇಲನ ಪ್ರವಾದನೆ, ಪು. 97

ದಾನಿಯೇಲ 4:18

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 47:13; ದಾನಿ 2:27; 5:8, 15

ದಾನಿಯೇಲ 4:19

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:7

ದಾನಿಯೇಲ 4:20

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ಕಾವಲಿನಬುರುಜು,

    9/1/2007, ಪು. 19

ದಾನಿಯೇಲ 4:21

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

ದಾನಿಯೇಲ 4:22

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 14:13, 14
  • +ದಾನಿ 2:37, 38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ದಾನಿಯೇಲನ ಪ್ರವಾದನೆ, ಪು. 86-87

ದಾನಿಯೇಲ 4:23

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:13; 8:13
  • +ದಾನಿ 4:13-16; ಲೂಕ 21:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ದಾನಿಯೇಲನ ಪ್ರವಾದನೆ, ಪು. 94-97

    ಜ್ಞಾನ, ಪು. 96-97

ದಾನಿಯೇಲ 4:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

ದಾನಿಯೇಲ 4:25

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:31-33
  • +ಲೂಕ 21:24; ಪ್ರಕ 12:6, 14
  • +ದಾನಿ 4:16
  • +1ಸಮು 2:7, 8; ಯೋಬ 34:24; ಯೆರೆ 27:5; ಯೆಹೆ 21:26, 27; ದಾನಿ 2:21; 7:13, 14; ಲೂಕ 1:32, 33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2023, ಪು. 3

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ದಾನಿಯೇಲನ ಪ್ರವಾದನೆ, ಪು. 87-88, 94-97

ದಾನಿಯೇಲ 4:26

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ದಾನಿಯೇಲನ ಪ್ರವಾದನೆ, ಪು. 88

ದಾನಿಯೇಲ 4:27

ಮಾರ್ಜಿನಲ್ ರೆಫರೆನ್ಸ್

  • +1ಅರ 21:29; ಯೋವೇ 2:14; ಯೋನ 3:8-10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 88-89

ದಾನಿಯೇಲ 4:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2023, ಪು. 31

    ದಾನಿಯೇಲನ ಪ್ರವಾದನೆ, ಪು. 20-21, 89

ದಾನಿಯೇಲ 4:31

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:25; ಅಕಾ 12:22, 23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

ದಾನಿಯೇಲ 4:32

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ದಾನಿಯೇಲನ ಪ್ರವಾದನೆ, ಪು. 89-92, 94-97

ದಾನಿಯೇಲ 4:33

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ದಾನಿಯೇಲನ ಪ್ರವಾದನೆ, ಪು. 90

ದಾನಿಯೇಲ 4:34

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:16
  • +ಕೀರ್ತ 10:16; ದಾನಿ 4:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

ದಾನಿಯೇಲ 4:35

ಪಾದಟಿಪ್ಪಣಿ

  • *

    ಅಥವಾ “ಆತನ ಕೈಯನ್ನ ಹಿಂದಕ್ಕೆ ತಳ್ಳೋನಾಗಲಿ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 34:24; ಯೆಶಾ 43:13
  • +ಯೆಶಾ 45:9

ದಾನಿಯೇಲ 4:36

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ದಾನಿಯೇಲನ ಪ್ರವಾದನೆ, ಪು. 92-93

ದಾನಿಯೇಲ 4:37

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:2, 3
  • +ಧರ್ಮೋ 32:4; ಕೀರ್ತ 33:5
  • +ವಿಮೋ 18:10, 11; ಯಾಕೋ 4:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 93

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ದಾನಿ. 4:3ಕೀರ್ತ 10:16; 90:2; ಯೆರೆ 10:10
ದಾನಿ. 4:5ದಾನಿ 2:1
ದಾನಿ. 4:6ದಾನಿ 2:2
ದಾನಿ. 4:7ಯೆಶಾ 47:13
ದಾನಿ. 4:7ದಾನಿ 2:10, 11
ದಾನಿ. 4:8ಯೆಶಾ 46:1; ಯೆರೆ 50:2
ದಾನಿ. 4:8ದಾನಿ 1:7
ದಾನಿ. 4:8ದಾನಿ 4:18; 5:11, 12
ದಾನಿ. 4:9ದಾನಿ 1:20; 2:48
ದಾನಿ. 4:9ಆದಿ 41:38; ದಾನಿ 6:3
ದಾನಿ. 4:9ದಾನಿ 1:17, 20
ದಾನಿ. 4:10ದಾನಿ 4:20-22
ದಾನಿ. 4:10ದಾನಿ 4:26
ದಾನಿ. 4:13ದಾನಿ 4:23-26
ದಾನಿ. 4:14ದಾನಿ 4:31; 5:18, 20
ದಾನಿ. 4:15ದಾನಿ 4:32, 33
ದಾನಿ. 4:16ಲೂಕ 21:24
ದಾನಿ. 4:16ದಾನಿ 4:32
ದಾನಿ. 4:17ದಾನಿ 4:34
ದಾನಿ. 4:17ದಾನಿ 4:13
ದಾನಿ. 4:18ಯೆಶಾ 47:13; ದಾನಿ 2:27; 5:8, 15
ದಾನಿ. 4:19ದಾನಿ 1:7
ದಾನಿ. 4:20ದಾನಿ 4:10, 11
ದಾನಿ. 4:21ದಾನಿ 4:12
ದಾನಿ. 4:22ಯೆಶಾ 14:13, 14
ದಾನಿ. 4:22ದಾನಿ 2:37, 38
ದಾನಿ. 4:23ದಾನಿ 4:13; 8:13
ದಾನಿ. 4:23ದಾನಿ 4:13-16; ಲೂಕ 21:24
ದಾನಿ. 4:25ದಾನಿ 4:31-33
ದಾನಿ. 4:25ಲೂಕ 21:24; ಪ್ರಕ 12:6, 14
ದಾನಿ. 4:25ದಾನಿ 4:16
ದಾನಿ. 4:251ಸಮು 2:7, 8; ಯೋಬ 34:24; ಯೆರೆ 27:5; ಯೆಹೆ 21:26, 27; ದಾನಿ 2:21; 7:13, 14; ಲೂಕ 1:32, 33
ದಾನಿ. 4:26ದಾನಿ 4:15
ದಾನಿ. 4:271ಅರ 21:29; ಯೋವೇ 2:14; ಯೋನ 3:8-10
ದಾನಿ. 4:31ದಾನಿ 4:25; ಅಕಾ 12:22, 23
ದಾನಿ. 4:32ದಾನಿ 4:17
ದಾನಿ. 4:33ದಾನಿ 4:25
ದಾನಿ. 4:34ದಾನಿ 4:16
ದಾನಿ. 4:34ಕೀರ್ತ 10:16; ದಾನಿ 4:3
ದಾನಿ. 4:35ಯೋಬ 34:24; ಯೆಶಾ 43:13
ದಾನಿ. 4:35ಯೆಶಾ 45:9
ದಾನಿ. 4:36ದಾನಿ 4:26
ದಾನಿ. 4:37ದಾನಿ 4:2, 3
ದಾನಿ. 4:37ಧರ್ಮೋ 32:4; ಕೀರ್ತ 33:5
ದಾನಿ. 4:37ವಿಮೋ 18:10, 11; ಯಾಕೋ 4:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ದಾನಿಯೇಲ 4:1-37

ದಾನಿಯೇಲ

4 “ಭೂಮಿಯಲ್ಲಿ ಇರೋ ಎಲ್ಲ ಜನ್ರಿಗೆ, ದೇಶಗಳಿಗೆ, ಬೇರೆಬೇರೆ ಭಾಷೆ ಮಾತಾಡೋ ಜನ್ರ ಗುಂಪುಗಳಿಗೆ ರಾಜ ನೆಬೂಕದ್ನೆಚ್ಚರನಿಂದ ಈ ಸಂದೇಶ ಸಿಕ್ತು: ನಿಮಗೆ ಒಳ್ಳೇದಾಗ್ಲಿ! 2 ಸರ್ವೋನ್ನತ ದೇವರು ನನ್ನ ವಿಷ್ಯದಲ್ಲಿ ಮಾಡಿರೋ ಸೂಚಕಕಾರ್ಯಗಳ ಬಗ್ಗೆ, ಅದ್ಭುತಗಳ ಬಗ್ಗೆ ಹೇಳೋಕೆ ನನಗೆ ತುಂಬ ಸಂತೋಷ ಆಗ್ತಿದೆ. 3 ಆತನ ಸೂಚಕಕಾರ್ಯಗಳು ಎಷ್ಟೋ ದೊಡ್ಡದು, ಆತನ ಅದ್ಭುತಗಳು ಎಷ್ಟೋ ಶ್ರೇಷ್ಠ! ಆತನ ಆಡಳಿತ ಶಾಶ್ವತವಾಗಿ ಇರುತ್ತೆ, ಆತನೇ ಸದಾಕಾಲ ರಾಜನಾಗಿ ಇರ್ತಾನೆ.+

4 ನಾನು ನೆಬೂಕದ್ನೆಚ್ಚರ ನನ್ನ ಮನೇಲಿ ಆರಾಮವಾಗಿದ್ದೆ, ನನ್ನ ಅರಮನೇಲಿ ಎಲ್ಲನೂ ಚೆನ್ನಾಗಿ ನಡಿತಿತ್ತು. 5 ಒಂದಿನ ನನಗೆ ಒಂದು ಕನಸು ಬಿತ್ತು. ಅದ್ರಿಂದ ತುಂಬ ಹೆದರಿಹೋದೆ. ಮಂಚದ ಮೇಲೆ ಮಲಗಿದ್ದಾಗ ನಾನು ನೋಡಿದ ಆ ದೃಶ್ಯಗಳಿಂದ, ದರ್ಶನಗಳಿಂದ ನನಗೆ ಭಯ ಆಯ್ತು.+ 6 ಹಾಗಾಗಿ ನಾನು ಎಲ್ರಿಗೂ ಒಂದು ಅಪ್ಪಣೆ ಕೊಟ್ಟೆ. ಬಾಬೆಲಿನ ಎಲ್ಲ ವಿವೇಕಿಗಳು ನನ್ನ ಮುಂದೆ ಬಂದು ಆ ಕನಸಿನ ಅರ್ಥ ವಿವರಿಸಿ ಅಂದೆ.+

7 ಆಗ ಮಂತ್ರವಾದಿಗಳು, ಕಸ್ದೀಯರು,* ಜ್ಯೋತಿಷಿಗಳು+ ನನ್ನ ಮುಂದೆ ಹಾಜರಾದ್ರು. ಆ ಕನಸು ಏನಂತ ಅವ್ರಿಗೆ ಹೇಳ್ದೆ. ಆದ್ರೆ ಅವ್ರಿಗೆ ಅದ್ರ ಅರ್ಥ ಹೇಳೋಕೆ ಆಗಲಿಲ್ಲ.+ 8 ಕೊನೆಗೆ ನನ್ನ ದೇವರ+ ಹೆಸ್ರಿಗೆ ಗೌರವ ತರೋಕೆ ಬೇಲ್ತೆಶಚ್ಚರ+ ಅನ್ನೋ ಹೆಸ್ರಿದ್ದ ದಾನಿಯೇಲ ನನ್ನ ಮುಂದೆ ಬಂದು ನಿಂತ. ಅವನಲ್ಲಿ ಪವಿತ್ರ ದೇವರುಗಳ ಶಕ್ತಿ ಇತ್ತು.+ ನಾನು ಅವನಿಗೆ ನನ್ನ ಕನಸು ಹೇಳ್ದೆ:

9 ‘ಮಂತ್ರವಾದಿಗಳ ಮುಖ್ಯಸ್ಥನಾದ ಬೇಲ್ತೆಶಚ್ಚರನೇ,+ ಪವಿತ್ರ ದೇವರುಗಳ ಶಕ್ತಿ ನಿನ್ನಲ್ಲಿದೆ,+ ನಿನ್ನಿಂದ ಹೇಳೋಕೆ ಆಗದಿರೋ ರಹಸ್ಯ ಯಾವುದೂ ಇಲ್ಲ+ ಅಂತ ನಂಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾನು ಕನಸಲ್ಲಿ ನೋಡಿದ ದರ್ಶನಗಳನ್ನ, ಅದ್ರ ಅರ್ಥವನ್ನ ವಿವರಿಸು.

10 ನಾನು ಮಂಚದ ಮೇಲೆ ಮಲಗಿದ್ದಾಗ ನೋಡಿದ ದರ್ಶನಗಳಲ್ಲಿ, ಭೂಮಿ ಮಧ್ಯ ತುಂಬ ಎತ್ತರ ಬೆಳೆದ+ ಒಂದು ಮರ ನೋಡ್ದೆ.+ 11 ಆ ಮರ ಬೆಳೆದು ಬಲಿಷ್ಠ ಆಯ್ತು. ಅದ್ರ ತುದಿ ಆಕಾಶ ಮುಟ್ಟಿತು, ಭೂಮಿಯ ಯಾವ ಮೂಲೆಯಿಂದ ನೋಡಿದ್ರೂ ಅದು ಕಾಣಿಸ್ತಿತ್ತು. 12 ಅದ್ರ ಎಲೆಗಳು ತುಂಬ ಸುಂದರವಾಗಿ ಇದ್ವು, ಅದ್ರಲ್ಲಿ ತುಂಬ ಹಣ್ಣು ಇತ್ತು, ಆ ಮರದಲ್ಲಿ ಎಲ್ಲ ಜೀವಿಗಳಿಗೂ ಸಾಕಾಗುವಷ್ಟು ಆಹಾರ ಇತ್ತು. ಅದ್ರ ನೆರಳಲ್ಲಿ ಬಯಲಿನ ಪ್ರಾಣಿಗಳು ಆಶ್ರಯ ಪಡ್ಕೊಂಡಿದ್ವು. ಅದ್ರ ರೆಂಬೆಕೊಂಬೆಗಳಲ್ಲಿ ಪಕ್ಷಿಗಳು ಗೂಡು ಕಟ್ಕೊಂಡಿದ್ದವು. ಅದ್ರ ಹಣ್ಣುಗಳನ್ನ ಎಲ್ಲಾ ಜೀವಿಗಳು ತಿಂತಾ ಇದ್ವು.

13 ನಾನು ಮಂಚದ ಮೇಲೆ ಮಲಗಿದ್ದಾಗ ನೋಡಿದ ದರ್ಶನಗಳಲ್ಲಿ ಒಬ್ಬ ಸಂದೇಶವಾಹಕ ಅಂದ್ರೆ ಒಬ್ಬ ಪವಿತ್ರ ದೂತ ಸ್ವರ್ಗದಿಂದ ಇಳಿದು ಬರೋದನ್ನ ನೋಡ್ದೆ.+ 14 ಅವನು ಗಟ್ಟಿಯಾದ ಸ್ವರದಲ್ಲಿ ಹೀಗಂದ: “ಆ ಮರವನ್ನ ಕಡಿದು ಹಾಕಿ,+ ಅದ್ರ ರೆಂಬೆಕೊಂಬೆಗಳನ್ನ ಕತ್ತರಿಸಿ, ಅದ್ರ ಎಲೆಗಳನ್ನ ಉದುರಿಸಿ, ಅದ್ರ ಹಣ್ಣುಗಳನ್ನ ಚೆಲ್ಲಾಪಿಲ್ಲಿ ಮಾಡಿ! ಅದ್ರ ಕೆಳಗಿರೋ ಪ್ರಾಣಿಗಳು ಓಡಿಹೋಗುತ್ತೆ, ಅದ್ರ ರೆಂಬೆಕೊಂಬೆಗಳಲ್ಲಿ ಇರೋ ಪಕ್ಷಿಗಳು ಹಾರಿಹೋಗುತ್ತೆ. 15 ಆದ್ರೆ ಅದ್ರ ಬುಡವನ್ನ ಬೇರು ಸಮೇತ ಹಾಗೇ ಬಿಡಿ. ಬುಡದ ಸುತ್ತಾ ಕಬ್ಬಿಣ ಮತ್ತು ತಾಮ್ರದ ಪಟ್ಟಿ ಜಡಿದು ಮೈದಾನದ ಹುಲ್ಲಿನ ಮಧ್ಯ ಬಿಟ್ಟುಬಿಡಿ. ಅದು ಆಕಾಶದ ಇಬ್ಬನಿಯಿಂದ ನೆನೆಯುತ್ತೆ, ಭೂಮಿಯ ಗಿಡಮರಗಳ ಮಧ್ಯ ಕಾಡುಪ್ರಾಣಿಗಳ ಜೊತೆ ಇದ್ದುಬಿಡುತ್ತೆ.+ 16 ಅದ್ರ ಹೃದಯ ಬದಲಾಗುತ್ತೆ, ಮನುಷ್ಯನ ಹೃದಯ ಹೋಗಿ ಅದಕ್ಕೆ ಪ್ರಾಣಿ ಹೃದಯ ಬರುತ್ತೆ. ಹೀಗೆ ಏಳು ಕಾಲಗಳು+ ಕಳಿಯುತ್ತೆ.+ 17 ಮನುಷ್ಯರ ಸಾಮ್ರಾಜ್ಯದ ಮೇಲೆ ಸರ್ವೋನ್ನತ ದೇವರು ಅಧಿಕಾರಿ ಆಗಿದ್ದಾನೆ,+ ಆತನು ಅದನ್ನ ಇಷ್ಟ ಬಂದವ್ರಿಗೆ ಕೊಡ್ತಾನೆ, ಅದನ್ನ ಸಾಮಾನ್ಯರಲ್ಲಿ ತುಂಬ ಸಾಮಾನ್ಯನಾದ ಒಬ್ಬ ವ್ಯಕ್ತಿಗೆ ಬೇಕಾದ್ರೂ ಕೊಡ್ತಾನೆ ಅಂತ ಜೀವಿಸ್ತಿರೋ ಜನ್ರು ತಿಳ್ಕೋಬೇಕು ಅಂತ ಸಂದೇಶವಾಹಕರು+ ಈ ಆದೇಶವನ್ನ ಹೇಳಿದ್ರು, ಪವಿತ್ರ ದೇವದೂತರು ಈ ತೀರ್ಪನ್ನ ಸಾರಿ ಹೇಳಿದ್ರು.”

18 ರಾಜನಾದ ನೆಬೂಕದ್ನೆಚ್ಚರ ನೋಡಿದ ಕನಸು ಇದೇ. ಈಗ ಬೇಲ್ತೆಶಚ್ಚರನೇ, ಇದ್ರ ಅರ್ಥ ಹೇಳು. ಯಾಕಂದ್ರೆ ನನ್ನ ಸಾಮ್ರಾಜ್ಯದಲ್ಲಿ ಇರೋ ಬೇರೆ ಯಾವ ವಿವೇಕಿಗಳಿಂದಾನೂ ಇದ್ರ ಅರ್ಥ ಹೇಳೋಕೆ ಆಗಲ್ಲ.+ ಆದ್ರೆ ನೀನು ಹೇಳ್ತಿಯ. ಯಾಕಂದ್ರೆ ಪವಿತ್ರ ದೇವರುಗಳ ಶಕ್ತಿ ನಿನ್ನಲ್ಲಿದೆ.’

19 ಆಗ ಬೇಲ್ತೆಶಚ್ಚರ+ ಅನ್ನೋ ಹೆಸ್ರಿದ್ದ ದಾನಿಯೇಲನಿಗೆ ಒಂದು ಕ್ಷಣಕ್ಕೆ ದಂಗುಬಡಿತು. ಅವನಿಗೆ ಬಂದ ಆಲೋಚನೆಗಳು ಅವನನ್ನ ಬೆಚ್ಚಿಬೀಳಿಸ್ತು.

ರಾಜನು ದಾನಿಯೇಲನಿಗೆ ‘ಬೇಲ್ತೆಶಚ್ಚರನೇ, ಈ ಕನಸಿನ ಬಗ್ಗೆ ಆಗ್ಲಿ, ಇದ್ರ ಅರ್ಥದ ಬಗ್ಗೆ ಆಗ್ಲಿ ಯೋಚಿಸಿ ಹೆದರಬೇಡ’ ಅಂದ.

ಅದಕ್ಕೆ ಬೇಲ್ತೆಶಚ್ಚರ ಹೀಗೆ ಉತ್ತರ ಕೊಟ್ಟ: ‘ನನ್ನ ಒಡೆಯ, ನಿನ್ನನ್ನ ದ್ವೇಷಿಸೋ ಜನ್ರ ವಿಷ್ಯದಲ್ಲಿ ಈ ಕನಸು ನಿಜ ಆಗ್ಲಿ, ನಿನ್ನ ಶತ್ರುಗಳ ವಿಷ್ಯದಲ್ಲಿ ಇದ್ರ ಅರ್ಥ ನಿಜ ಆಗ್ಲಿ.

20 ನೀನು ಕನಸಲ್ಲಿ ನೋಡಿದ ಆ ಮರ ಅಂದ್ರೆ, ತುಂಬ ಎತ್ತರವಾಗಿ ಬಲಿಷ್ಠವಾಗಿ ಬೆಳೆದಿದ್ದ, ಆಕಾಶ ಮುಟ್ತಿದ್ದ, ಭೂಮಿಯ ಯಾವ ಮೂಲೆಯಿಂದ ನೋಡಿದ್ರೂ ಕಾಣಿಸ್ತಿದ್ದ,+ 21 ಅಂದವಾದ ಎಲೆಗಳಿದ್ದ, ತುಂಬ ಹಣ್ಣುಗಳಿದ್ದ, ಎಲ್ಲ ಜೀವಿಗಳಿಗೂ ಸಾಕಾಗುವಷ್ಟು ಆಹಾರ ಕೊಡ್ತಿದ್ದ, ಬಯಲಿನ ಪ್ರಾಣಿಗಳು ಆಶ್ರಯ ಪಡಿತಿದ್ದ, ಪಕ್ಷಿಗಳು ಗೂಡು ಕಟ್ಕೊಂಡಿದ್ದ+ 22 ಆ ಮರ ನೀನೇ. ಯಾಕಂದ್ರೆ ರಾಜನೇ, ನೀನು ತುಂಬ ಎತ್ತರಕ್ಕೆ ಬೆಳೆದಿದ್ದೀಯ, ಬಲಿಷ್ಠ ಆಗಿದ್ದೀಯ, ನಿನ್ನ ಹೆಸ್ರು ಬೆಳೆದು ಆಕಾಶ ಮುಟ್ಟಿದೆ,+ ನಿನ್ನ ಆಡಳಿತ ಭೂಮಿಯ ಮೂಲೆಮೂಲೆಗೂ ಹರಡಿದೆ.+

23 ರಾಜ, ಒಬ್ಬ ಸಂದೇಶವಾಹಕ ಅಂದ್ರೆ ಒಬ್ಬ ಪವಿತ್ರ ದೂತ+ ಸ್ವರ್ಗದಿಂದ ಬರೋದನ್ನ ನೀನು ನೋಡ್ದೆ. ಅವನು ಹೀಗೆ ಹೇಳ್ತಿದ್ದ: “ಆ ಮರ ಕಡಿದು ಹಾಕಿ ನಾಶ ಮಾಡಿ. ಆದ್ರೆ ಅದ್ರ ಬುಡವನ್ನ ಬೇರು ಸಮೇತ ಹಾಗೇ ಬಿಡಿ, ಬುಡದ ಸುತ್ತಾ ಕಬ್ಬಿಣ ಮತ್ತು ತಾಮ್ರದ ಪಟ್ಟಿ ಜಡಿದು ಮೈದಾನದ ಹುಲ್ಲಿನ ಮಧ್ಯ ಬಿಟ್ಟುಬಿಡಿ. ಅದು ಆಕಾಶದ ಇಬ್ಬನಿಯಿಂದ ನೆನೆಯುತ್ತೆ, ಕಾಡುಪ್ರಾಣಿಗಳ ಜೊತೆ ಇರುತ್ತೆ. ಹೀಗೆ ಏಳು ಕಾಲಗಳು ಕಳೀಲಿ.”+ 24 ರಾಜ, ಈ ಕನಸಿನ ಅರ್ಥ ಏನಂದ್ರೆ, ನನ್ನ ಒಡೆಯನಾದ ರಾಜನಿಗೆ ಇದೆಲ್ಲಾ ನಡಿಬೇಕು ಅನ್ನೋದೇ ಸರ್ವೋನ್ನತನ ತೀರ್ಪು. 25 ನಿನ್ನನ್ನ ಮನುಷ್ಯರ ಮಧ್ಯದಿಂದ ಓಡಿಸಿಬಿಡ್ತಾರೆ. ನೀನು ಕಾಡುಪ್ರಾಣಿಗಳ ಜೊತೆ ವಾಸ ಮಾಡ್ತೀಯ. ಹೋರಿಗಳು ಹುಲ್ಲು ಮೇಯೋ ತರ ನೀನು ಹುಲ್ಲು ತಿಂತೀಯ. ಆಕಾಶದ ಇಬ್ಬನಿಯಿಂದ ನೆನಿತೀಯ.+ ಹೀಗೆ ಏಳು ಕಾಲಗಳು+ ಕಳಿಯುತ್ತೆ.+ ಆಗ ನೀನು ಮನುಷ್ಯರ ಸಾಮ್ರಾಜ್ಯದ ಮೇಲೆ ಸರ್ವೋನ್ನತ ದೇವರು ಅಧಿಕಾರಿ ಆಗಿದ್ದಾನೆ, ಆತನು ಅದನ್ನ ಇಷ್ಟ ಬಂದವ್ರಿಗೆ ಕೊಡ್ತಾನೆ ಅಂತ ತಿಳ್ಕೊಳ್ತೀಯ.+

26 ಆದ್ರೆ ಅವರು ಮರದ ಬುಡವನ್ನ ಅದ್ರ ಬೇರು ಸಮೇತ ಉಳಿಸಬೇಕಂತ ಹೇಳಿದ್ರು.+ ಅದ್ರ ಅರ್ಥ ಏನಂದ್ರೆ ನಿಜವಾಗಿ ಆಳ್ವಿಕೆ ಮಾಡುವವನು ಸ್ವರ್ಗದಲ್ಲಿ ಇದ್ದಾನೆ ಅಂತ ನೀನು ತಿಳ್ಕೊಂಡಾಗ ನಿನ್ನ ಸಾಮ್ರಾಜ್ಯ ಮತ್ತೆ ನಿನಗೆ ಸಿಗುತ್ತೆ. 27 ಹಾಗಾಗಿ ರಾಜ, ದಯವಿಟ್ಟು ನಾನು ಹೇಳೋ ತರ ಮಾಡು. ಪಾಪ ಮಾಡೋದನ್ನ ಬಿಟ್ಟು ಸರಿಯಾಗಿ ಇರೋದನ್ನ ಮಾಡು. ದೌರ್ಜನ್ಯ ಬಿಟ್ಟು ಬಡವ್ರಿಗೆ ದಯೆ ತೋರಿಸು. ಆಗ ನೀನು ಇನ್ನೂ ಅಭಿವೃದ್ಧಿ ಆಗಿ ತುಂಬ ವರ್ಷ ಬದುಕ್ತೀಯ.’”+

28 ರಾಜ ನೆಬೂಕದ್ನೆಚ್ಚರನ ಜೀವನದಲ್ಲಿ ಈ ಎಲ್ಲ ವಿಷ್ಯ ನಡೀತು.

29 ಹನ್ನೆರಡು ತಿಂಗಳಾದ ಮೇಲೆ ಒಮ್ಮೆ ರಾಜ ಬಾಬೆಲಲ್ಲಿದ್ದ ತನ್ನ ಅರಮನೆಯ ಮಹಡಿ ಮೇಲೆ ನಡೆದಾಡ್ತಾ 30 ಹೀಗೆ ಹೇಳಿದ: “ನನ್ನ ವೈಭವ ಘನತೆಗಾಗಿ, ರಾಜಮನೆತನಕ್ಕಾಗಿ ಈ ಮಹಾ ಬಾಬೆಲನ್ನ ನನ್ನ ಸ್ವಂತ ಶಕ್ತಿಯಿಂದ ಕಟ್ಟಿದ್ದು ನಾನೇ ಅಲ್ವಾ?”

31 ಈ ಮಾತು ಇನ್ನೂ ರಾಜನ ಬಾಯಲ್ಲಿ ಇರುವಾಗ್ಲೇ ಸ್ವರ್ಗದಿಂದ ಒಂದು ಸ್ವರ ಕೇಳಿಸ್ತು. ಅದೇನಂದ್ರೆ “ರಾಜ ನೆಬೂಕದ್ನೆಚ್ಚರ, ಕೇಳು ನಿನಗೆ ಬಂದಿರೋ ತೀರ್ಪು ಇದು: ‘ನಿನ್ನಿಂದ ಸಾಮ್ರಾಜ್ಯವನ್ನ ಕಿತ್ಕೊಳ್ಳಲಾಗಿದೆ,+ 32 ಮನುಷ್ಯರ ಸಾಮ್ರಾಜ್ಯದ ಮೇಲೆ ಸರ್ವೋನ್ನತ ದೇವರು ಅಧಿಕಾರಿ ಆಗಿದ್ದಾನೆ, ಆತನು ಅದನ್ನ ಇಷ್ಟ ಬಂದವ್ರಿಗೆ ಕೊಡ್ತಾನೆ+ ಅಂತ ನೀನು ತಿಳ್ಕೊಳ್ಳೋ ತನಕ ನಿನ್ನನ್ನ ಮನುಷ್ಯರ ಮಧ್ಯದಿಂದ ಓಡಿಸಿಬಿಡ್ತಾರೆ. ನೀನು ಕಾಡುಪ್ರಾಣಿಗಳ ಜೊತೆ ವಾಸ ಮಾಡ್ತೀಯ. ಹೋರಿಗಳು ಹುಲ್ಲು ಮೇಯೋ ತರ ನೀನು ಹುಲ್ಲು ತಿಂತೀಯ. ಹೀಗೆ ಏಳು ಕಾಲಗಳು ಕಳೆಯುತ್ತೆ.’”

33 ಈ ಮಾತು ಅದೇ ಕ್ಷಣದಲ್ಲಿ ನೆಬೂಕದ್ನೆಚ್ಚರನಲ್ಲಿ ನಿಜ ಆಯ್ತು. ಅವನನ್ನ ಮನುಷ್ಯರ ಮಧ್ಯದಿಂದ ಓಡಿಸಿಬಿಟ್ರು, ಅವನು ಹೋರಿ ತರ ಹುಲ್ಲು ತಿನ್ನೋಕೆ ಶುರು ಮಾಡಿದ, ಅವನ ಶರೀರ ಆಕಾಶದ ಇಬ್ಬನಿಯಿಂದ ನೆನಿತು. ಅವನ ಕೂದಲು ಹದ್ದಿನ ರೆಕ್ಕೆ ತರ ಉದ್ದ ಬೆಳೀತು, ಅವನ ಉಗುರುಗಳು ಪಕ್ಷಿಯ ಉಗುರು ತರ ಬೆಳೀತು.+

34 “ಆ ಕಾಲ ಮುಗಿದ ಮೇಲೆ+ ನೆಬೂಕದ್ನೆಚ್ಚರನಾದ ನಾನು ಆಕಾಶ ನೋಡಿದಾಗ ಹೋದ ತಿಳುವಳಿಕೆ ನನಗೆ ಮತ್ತೆ ಬಂತು. ಆಗ ನಾನು ಸರ್ವೋನ್ನತನನ್ನ ಹೊಗಳಿದೆ. ಸದಾಕಾಲ ಇರೋ ದೇವರ ಗುಣಗಾನಮಾಡಿ ಆತನನ್ನ ಗೌರವಿಸಿದೆ. ಯಾಕಂದ್ರೆ ಆತನ ಆಡಳಿತ ಶಾಶ್ವತ, ಆತನೇ ಸದಾಕಾಲ ರಾಜನಾಗಿ ಇರ್ತಾನೆ.+ 35 ಆತನ ಮುಂದೆ ಭೂಮಿಯಲ್ಲಿರೋ ಜನ್ರು ಏನೇನೂ ಅಲ್ಲ. ಆತನು ಆಕಾಶದ ಸೈನ್ಯಕ್ಕೆ, ಜನ್ರಿಗೆ ತನ್ನ ಇಷ್ಟದ ಪ್ರಕಾರ ಮಾಡ್ತಾನೆ. ಆತನನ್ನ ತಡಿಯುವವನು ಆಗಲಿ,*+ ‘ನೀನೇನ್‌ ಮಾಡ್ತಿದ್ದೀಯಾ?’ ಅಂತ ಆತನನ್ನ ಕೇಳುವವರು ಆಗಲಿ ಯಾರೂ ಇಲ್ಲ.+

36 ಅದೇ ಸಮಯದಲ್ಲಿ ನನ್ನ ತಿಳುವಳಿಕೆ, ನನ್ನ ಸಾಮ್ರಾಜ್ಯದ ವೈಭವ, ನನ್ನ ಘನತೆ, ನನ್ನ ಗೌರವ ನನಗೆ ಮತ್ತೆ ಸಿಕ್ತು.+ ನನ್ನ ದೊಡ್ಡ ದೊಡ್ಡ ಅಧಿಕಾರಿಗಳು, ಪ್ರಮುಖರು ನನ್ನನ್ನ ಭೇಟಿ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ನಾನು ನನ್ನ ಸಾಮ್ರಾಜ್ಯವನ್ನ ಮತ್ತೆ ಪಡ್ಕೊಂಡೆ. ನನಗೆ ಇನ್ನೂ ಗೌರವ ಸಿಗೋ ತರ ಆಯ್ತು.

37 ನೆಬೂಕದ್ನೆಚ್ಚರನಾದ ನಾನು, ಈಗ ಸ್ವರ್ಗದ ರಾಜನನ್ನ ಹೊಗಳ್ತೀನಿ,+ ಆತನನ್ನ ಗೌರವಿಸ್ತೀನಿ. ಯಾಕಂದ್ರೆ ಆತನ ಕೆಲಸಗಳೆಲ್ಲ ಸತ್ಯ, ಆತನು ಮಾಡೋದೆಲ್ಲ ನ್ಯಾಯ.+ ಸೊಕ್ಕಿಂದ ನಡಿಯೋರನ್ನ ತಲೆ ತಗ್ಗಿಸೋ ತರ ಮಾಡ್ತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ