ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಸ್ತೇರ್‌ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಎಸ್ತೇರ್‌ ಮುಖ್ಯಾಂಶಗಳು

      • ಮೊರ್ದೆಕೈಗೆ ಉನ್ನತ ಸ್ಥಾನ ಸಿಕ್ತು (1, 2)

      • ಎಸ್ತೇರ್‌ ರಾಜನ ಹತ್ರ ಬೇಡ್ಕೊಂಡಳು (3-6)

      • ರಾಜ ಹೊರಡಿಸಿದ ಎರಡನೇ ರಾಜಾಜ್ಞೆ (7-14)

      • ಯೆಹೂದ್ಯರಿಗೆ ನೆಮ್ಮದಿ ಮತ್ತು ಸಂತೋಷ ಸಿಕ್ತು (15-17)

ಎಸ್ತೇರ್‌ 8:1

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:8; 9:24
  • +ಎಸ್ತೇ 5:11
  • +ಎಸ್ತೇ 2:5, 7

ಎಸ್ತೇರ್‌ 8:2

ಮಾರ್ಜಿನಲ್ ರೆಫರೆನ್ಸ್

  • +ಆದಿ 41:41, 42; ಎಸ್ತೇ 3:10; ದಾನಿ 6:17
  • +ದಾನಿ 2:48

ಎಸ್ತೇರ್‌ 8:3

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:9; 7:4; 9:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 164-165

ಎಸ್ತೇರ್‌ 8:4

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 4:11

ಎಸ್ತೇರ್‌ 8:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:16; ಅರ 24:7; ಧರ್ಮೋ 25:19; 1ಸಮು 15:8, 33
  • +ಎಸ್ತೇ 3:12, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2006, ಪು. 11

ಎಸ್ತೇರ್‌ 8:7

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 8:1
  • +ಎಸ್ತೇ 7:10

ಎಸ್ತೇರ್‌ 8:8

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:8, 15

ಎಸ್ತೇರ್‌ 8:9

ಪಾದಟಿಪ್ಪಣಿ

  • *

    ಪರಿಶಿಷ್ಟ ಬಿ15 ನೋಡಿ.

  • *

    ಅಥವಾ “ರಾಜನ ಕೈಕೆಳಗಿದ್ದ ಜಿಲ್ಲೆಗಳಲ್ಲಿದ್ದ.”

  • *

    ಅಥವಾ “ಬರವಣಿಗೆ ಶೈಲಿಯಲ್ಲಿ.”

  • *

    ಅಥವಾ “ಬರವಣಿಗೆ ಶೈಲಿಯಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:1
  • +ಎಸ್ತೇ 9:3

ಎಸ್ತೇರ್‌ 8:10

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 8:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    7/8/1993, ಪು. 18

ಎಸ್ತೇರ್‌ 8:11

ಪಾದಟಿಪ್ಪಣಿ

  • *

    ಅಥವಾ “ರಾಜನ ಕೈಕೆಳಗಿದ್ದ ಜಿಲ್ಲೆಗಳಲ್ಲಿದ್ದ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 9:5-10

ಎಸ್ತೇರ್‌ 8:12

ಪಾದಟಿಪ್ಪಣಿ

  • *

    ಪರಿಶಿಷ್ಟ ಬಿ15 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:13; 9:1, 2, 16, 17

ಎಸ್ತೇರ್‌ 8:13

ಪಾದಟಿಪ್ಪಣಿ

  • *

    ಅಥವಾ “ಪತ್ರದ ಪ್ರತಿಯನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 149:6, 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    3/2016, ಪು. 3

ಎಸ್ತೇರ್‌ 8:14

ಪಾದಟಿಪ್ಪಣಿ

  • *

    ಅಥವಾ “ಸೂಸಾ.”

  • *

    ಅಥವಾ “ಅರಮನೆಯಲ್ಲೂ.”

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 4:9; ನೆಹೆ 1:1; ಎಸ್ತೇ 1:2; ದಾನಿ 8:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    3/2016, ಪು. 3

    ಎಚ್ಚರ!,

    7/8/1993, ಪು. 18

ಎಸ್ತೇರ್‌ 8:15

ಪಾದಟಿಪ್ಪಣಿ

  • *

    ಅಥವಾ “ಸೂಸಾ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 6:7, 8

ಎಸ್ತೇರ್‌ 8:16

ಪಾದಟಿಪ್ಪಣಿ

  • *

    ಅಕ್ಷ. “ಬೆಳಕು.”

ಎಸ್ತೇರ್‌ 8:17

ಮಾರ್ಜಿನಲ್ ರೆಫರೆನ್ಸ್

  • +ಜೆಕ 8:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2006, ಪು. 11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಎಸ್ತೇ. 8:1ಎಸ್ತೇ 3:8; 9:24
ಎಸ್ತೇ. 8:1ಎಸ್ತೇ 5:11
ಎಸ್ತೇ. 8:1ಎಸ್ತೇ 2:5, 7
ಎಸ್ತೇ. 8:2ಆದಿ 41:41, 42; ಎಸ್ತೇ 3:10; ದಾನಿ 6:17
ಎಸ್ತೇ. 8:2ದಾನಿ 2:48
ಎಸ್ತೇ. 8:3ಎಸ್ತೇ 3:9; 7:4; 9:24, 25
ಎಸ್ತೇ. 8:4ಎಸ್ತೇ 4:11
ಎಸ್ತೇ. 8:5ವಿಮೋ 17:16; ಅರ 24:7; ಧರ್ಮೋ 25:19; 1ಸಮು 15:8, 33
ಎಸ್ತೇ. 8:5ಎಸ್ತೇ 3:12, 14
ಎಸ್ತೇ. 8:7ಎಸ್ತೇ 8:1
ಎಸ್ತೇ. 8:7ಎಸ್ತೇ 7:10
ಎಸ್ತೇ. 8:8ದಾನಿ 6:8, 15
ಎಸ್ತೇ. 8:9ದಾನಿ 6:1
ಎಸ್ತೇ. 8:9ಎಸ್ತೇ 9:3
ಎಸ್ತೇ. 8:10ಎಸ್ತೇ 8:2
ಎಸ್ತೇ. 8:11ಎಸ್ತೇ 9:5-10
ಎಸ್ತೇ. 8:12ಎಸ್ತೇ 3:13; 9:1, 2, 16, 17
ಎಸ್ತೇ. 8:13ಕೀರ್ತ 149:6, 7
ಎಸ್ತೇ. 8:14ಎಜ್ರ 4:9; ನೆಹೆ 1:1; ಎಸ್ತೇ 1:2; ದಾನಿ 8:2
ಎಸ್ತೇ. 8:15ಎಸ್ತೇ 6:7, 8
ಎಸ್ತೇ. 8:17ಜೆಕ 8:23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಎಸ್ತೇರ್‌ 8:1-17

ಎಸ್ತೇರ್‌

8 ಆ ದಿನದಲ್ಲಿ ರಾಜ ಅಹಷ್ವೇರೋಷ ಯೆಹೂದ್ಯರ ಶತ್ರುವಾಗಿದ್ದ+ ಹಾಮಾನನಿಗೆ ಸೇರಿದ್ದ ಎಲ್ಲವನ್ನೂ+ ಎಸ್ತೇರ್‌ ರಾಣಿಗೆ ಕೊಟ್ಟ. ಮೊರ್ದೆಕೈ ತನಗೆ ಹೇಗೆ ಸಂಬಂಧಿ ಆಗಿದ್ದಾನೆ+ ಅಂತ ಎಸ್ತೇರ್‌ ರಾಜನಿಗೆ ಹೇಳಿದ್ರಿಂದ ಮೊರ್ದೆಕೈ ರಾಜನ ಆಸ್ಥಾನಕ್ಕೆ ಬಂದ. 2 ಆಮೇಲೆ ರಾಜನು ಹಾಮಾನನಿಂದ ವಾಪಸ್‌ ತಗೊಂಡಿದ್ದ ತನ್ನ ಮುದ್ರೆ ಉಂಗುರವನ್ನ+ ಮೊರ್ದೆಕೈಗೆ ಕೊಟ್ಟ. ಜೊತೆಗೆ ಎಸ್ತೇರ್‌ ಹಾಮಾನನಿಗೆ ಸೇರಿದ್ದ ಎಲ್ಲ ವಿಷ್ಯಗಳ ಮೇಲಿನ ಅಧಿಕಾರವನ್ನ ಮೊರ್ದೆಕೈಗೆ ಒಪ್ಪಿಸಿದಳು.+

3 ಎಸ್ತೇರ್‌ ಮತ್ತೊಮ್ಮೆ ರಾಜನ ಹತ್ರ ಮಾತಾಡಿದಳು. ಅವನ ಕಾಲಿಗೆ ಬಿದ್ದು, ಅಳ್ತಾ ಅಗಾಗನ ವಂಶದವನಾದ ಹಾಮಾನ ತಂದಿದ್ದ ಆಪತ್ತನ್ನ, ಯೆಹೂದ್ಯರ ವಿರುದ್ಧ ಅವನು ಮಾಡಿದ ಯೋಜನೆಯನ್ನ+ ರದ್ದು ಮಾಡಬೇಕು ಅಂತ ಬೇಡ್ಕೊಂಡಳು. 4 ರಾಜ ತನ್ನ ಸುವರ್ಣದಂಡವನ್ನ ಎಸ್ತೇರ್‌ ಕಡೆ ಚಾಚಿದ.+ ಆಗ ಎಸ್ತೇರ್‌ ಎದ್ದು ರಾಜನ ಮುಂದೆ ನಿಂತ್ಕೊಂಡು 5 ಹೀಗಂದಳು: “ರಾಜ, ನಾನು ನಿಜವಾಗ್ಲೂ ನಿನ್ನ ಮೆಚ್ಚಿಗೆ ಪಡ್ಕೊಂಡಿದ್ರೆ, ನಿನ್ನ ದಯೆ ನನ್ನ ಮೇಲಿದ್ರೆ ನನ್ನ ಮನವಿ ಕೇಳಿಸ್ಕೊ. ನಿನಗೆ ಸರಿ ಅನಿಸಿದ್ರೆ ಒಂದು ಆಜ್ಞೆ ಕೊಡು. ಸಾಮ್ರಾಜ್ಯದಲ್ಲಿರೋ ಯೆಹೂದ್ಯರನ್ನ ನಾಶಮಾಡೋಕೆ ಆ ಸಂಚುಗಾರ ಅಂದ್ರೆ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನ ಬರೆಸಿದ್ದ ಆಜ್ಞೆ ರದ್ದು ಮಾಡು.+ 6 ಯಾಕಂದ್ರೆ ರಾಜ, ನನ್ನ ಜನ್ರ ಮೇಲೆ ಆಪತ್ತು ಬರೋದನ್ನ ನೋಡ್ಕೊಂಡು ನಾನು ಹೇಗೆ ಸುಮ್ನೆ ಇರ್ಲಿ? ನನ್ನ ಸಂಬಂಧಿಕರ ನಾಶವನ್ನ ಹೇಗೆ ಸಹಿಸ್ಲಿ?”

7 ಇದನ್ನ ಕೇಳಿ ರಾಜ ಅಹಷ್ವೇರೋಷ ಎಸ್ತೇರ್‌ ರಾಣಿಗೆ ಮತ್ತು ಯೆಹೂದ್ಯನಾಗಿದ್ದ ಮೊರ್ದೆಕೈಗೆ “ನೋಡಿ, ನಾನು ಹಾಮಾನನಿಗೆ ಸೇರಿದ ಎಲ್ಲವನ್ನೂ ಎಸ್ತೇರ್‌ಗೆ ಕೊಟ್ಟೆ.+ ಅಷ್ಟೇ ಅಲ್ಲ ಯೆಹೂದ್ಯರನ್ನ ನಾಶ ಮಾಡಬೇಕಂತ ಸಂಚು ಮಾಡಿದ್ದಕ್ಕಾಗಿ ಹಾಮಾನನನ್ನ ಕಂಬಕ್ಕೆ ನೇತುಹಾಕಿಸ್ದೆ.+ 8 ಈಗ ನೀವು ಯೆಹೂದ್ಯರಿಗೆ ಒಳಿತಾಗೋ ತರ ಏನು ಬರಿಬೇಕೋ ಅದನ್ನ ರಾಜನಾದ ನನ್ನ ಹೆಸ್ರಲ್ಲಿ ಬರೆದು ಅದ್ರ ಮೇಲೆ ರಾಜನ ಮುದ್ರೆ ಉಂಗುರ ಒತ್ತಿ. ಯಾಕಂದ್ರೆ ರಾಜನ ಹೆಸ್ರಲ್ಲಿ ಒಂದು ಆಜ್ಞೆ ಬರೆದು, ಅದ್ರ ಮೇಲೆ ರಾಜನ ಮುದ್ರೆ ಉಂಗುರ ಒತ್ತಿದ್ರೆ ಆ ಆಜ್ಞೆಯನ್ನ ಯಾವುದೇ ಕಾರಣಕ್ಕೂ ರದ್ದು ಮಾಡೋಕ್ಕಾಗಲ್ಲ”+ ಅಂದ.

9 ಹಾಗಾಗಿ ಮೂರನೇ ತಿಂಗಳಾದ ಸೀವಾನ್‌* ತಿಂಗಳ 23ನೇ ದಿನ ರಾಜನ ಕಾರ್ಯದರ್ಶಿಗಳನ್ನ ಕರೆಸಿ ಮೊರ್ದೆಕೈ ಕೊಟ್ಟ ಆಜ್ಞೆನ ಅವ್ರಿಂದ ಬರೆಸಿದ್ರು. ಆ ಆಜ್ಞೆಯನ್ನ ಯೆಹೂದ್ಯರಿಗೆ, ಪ್ರಾಂತ್ಯಾಧಿಕಾರಿಗಳಿಗೆ,+ ರಾಜ್ಯಪಾಲರಿಗೆ, ಭಾರತದಿಂದ ಇಥಿಯೋಪ್ಯದ ತನಕ 127 ಪ್ರಾಂತ್ಯಗಳಲ್ಲಿದ್ದ* ಎಲ್ಲ ಅಧಿಕಾರಿಗಳಿಗೆ+ ಕೊಡಬೇಕಾಗಿತ್ತು. ಹಾಗಾಗಿ ಆ ಆಜ್ಞೆಯನ್ನ ಅವ್ರವ್ರ ಪ್ರಾಂತ್ಯದ ಲಿಪಿಯಲ್ಲಿ* ಮತ್ತು ಭಾಷೆಯಲ್ಲಿ ಹಾಗೂ ಯೆಹೂದ್ಯರಿಗೆ ಅವ್ರವ್ರ ಲಿಪಿಯಲ್ಲಿ* ಮತ್ತು ಭಾಷೆಯಲ್ಲಿ ಬರೆಸಿದ್ರು.

10 ಮೊರ್ದೆಕೈ ಆ ಆಜ್ಞೆಯನ್ನ ರಾಜ ಅಹಷ್ವೇರೋಷನ ಹೆಸ್ರಲ್ಲಿ ಬರೆದು ಅದ್ರ ಮೇಲೆ ರಾಜನ ಮುದ್ರೆ ಉಂಗುರ+ ಒತ್ತಿದ. ಆ ಆಜ್ಞೆಯನ್ನ ಪತ್ರಗಳ ರೂಪದಲ್ಲಿ ಸಂದೇಶವಾಹಕರಿಗೆ ಕೊಟ್ಟ. ಅವುಗಳನ್ನ ತಲುಪಿಸೋಕೆ ಅವರು ವೇಗವಾಗಿ ಓಡ್ತಿದ್ದ ಕುದುರೆಗಳ ಮೇಲೆ ಹೋದ್ರು. ಆ ಕುದುರೆಗಳನ್ನ ರಾಜಮನೆತನದ ಸೇವೆಗಾಗೇ ಬಳಸ್ತಿದ್ರು. 11 ರಾಜ ಆ ಪತ್ರದಲ್ಲಿ, ಯೆಹೂದ್ಯರು ತಮ್ಮ ಪ್ರಾಣಗಳನ್ನ ಉಳಿಸ್ಕೊಳ್ಳೋಕೆ ಹೋರಾಡಬಹುದು, ಬೇರೆಬೇರೆ ಪ್ರಾಂತ್ಯಗಳಲ್ಲಿದ್ದ* ಯೆಹೂದ್ಯರು ಒಟ್ಟುಸೇರಬಹುದು, ತಮ್ಮ ಮೇಲೆ ದಾಳಿ ಮಾಡೋ ಜನ್ರನ್ನ ಕೊಂದು ಸರ್ವನಾಶ ಮಾಡಬಹುದು, ಅವ್ರ ಆಸ್ತಿಯನ್ನ ಕೊಳ್ಳೆ ಹೊಡಿಬಹುದು ಅಂತ ಅನುಮತಿ ಕೊಟ್ಟಿದ್ದ. ದಾಳಿ ಮಾಡೋ ಸೈನ್ಯ ಯಾವುದೇ ಜನಾಂಗವಾಗಿರಲಿ, ಯಾವುದೇ ಪ್ರದೇಶದವರು ಆಗಿರಲಿ, ಅವ್ರಲ್ಲಿ ಸ್ತ್ರೀಯರೇ ಇರಲಿ, ಮಕ್ಕಳೇ ಇರಲಿ ಯೆಹೂದ್ಯರು ನಾಶಮಾಡಬಹುದಿತ್ತು.+ 12 ಈ ಆಜ್ಞೆ ರಾಜ ಅಹಷ್ವೇರೋಷನಿಗೆ ಸೇರಿದ್ದ ಪ್ರಾಂತ್ಯಗಳಲ್ಲೆಲ್ಲ ಒಂದೇ ದಿನ ಅಂದ್ರೆ 12ನೇ ತಿಂಗಳಾದ ಅದಾರ್‌* ತಿಂಗಳ 13ನೇ ದಿನ+ ಜಾರಿಗೆ ಬರಲಿತ್ತು. 13 ಪತ್ರದಲ್ಲಿ ಬರೆದಿದ್ದ ಮಾತುಗಳನ್ನ* ಎಲ್ಲ ಪ್ರಾಂತ್ಯಗಳಲ್ಲಿ ನಿಯಮವಾಗಿ ಜಾರಿಗೆ ತರಬೇಕಿತ್ತು. ಆ ದಿನ ಎಲ್ಲ ಯೆಹೂದ್ಯರು ತಮ್ಮ ಶತ್ರುಗಳ ವಿರುದ್ಧ ಸೇಡು ತೀರಿಸೋಕೆ+ ಸಿದ್ಧರಿರೋಕೆ ಅದನ್ನ ಎಲ್ಲ ಜನ್ರಿಗೆ ಪ್ರಕಟಣೆ ಮಾಡಬೇಕಿತ್ತು. 14 ರಾಜನ ಅಪ್ಪಣೆ ಸಿಕ್ಕಿದ ತಕ್ಷಣ ಅವನ ಸಂದೇಶವಾಹಕರು ರಾಜಮನೆತನದ ಸೇವೆಗಂತಾನೇ ಬಳಸ್ತಿದ್ದ ವೇಗವಾಗಿ ಓಡೋ ಕುದುರೆಗಳನ್ನ ಹತ್ತಿ ಬೇಗಬೇಗ ಹೋದ್ರು. ಶೂಷನ್‌*+ ಕೋಟೆಯಲ್ಲೂ* ಆ ನಿಯಮವನ್ನ ಹೊರಡಿಸಿದ್ರು.

15 ಮೊರ್ದೆಕೈ, ರಾಜನ ಆಸ್ಥಾನದಿಂದ ಹೋದಾಗ ಅವನ ತಲೆ ಮೇಲೆ ಬಂಗಾರದ ಕಿರೀಟ ಇತ್ತು. ಅವನು ನೀಲಿ ಮತ್ತು ಬಿಳಿ ಬಣ್ಣದ ಬಟ್ಟೆಯನ್ನ, ನೇರಳೆ ಬಣ್ಣದ ಉಣ್ಣೆಯಿಂದ ಮಾಡಿದ ಒಳ್ಳೇ ಮೇಲಂಗಿಯನ್ನ ಹಾಕಿದ್ದ.+ ಶೂಷನ್‌* ಪಟ್ಟಣದಲ್ಲಿ ಸಂಭ್ರಮದ ಅಲೆಗಳು ಎದ್ದಿದ್ದವು. 16 ಯಾಕಂದ್ರೆ ಯೆಹೂದ್ಯರಿಗೆ ನೆಮ್ಮದಿ* ಸಿಕ್ಕಿತ್ತು. ಜನ್ರಿಂದ ಅವ್ರಿಗೆ ಗೌರವ ಸಿಕ್ಕಿತ್ತು. ಹಾಗಾಗಿ ಅವರು ಆನಂದದಿಂದ ಸಂಭ್ರಮಿಸ್ತಿದ್ರು. 17 ರಾಜನ ಆದೇಶ, ಅವನ ನಿಯಮ ಯಾವೆಲ್ಲ ಪ್ರಾಂತ್ಯಗಳಿಗೆ ಮತ್ತು ಪಟ್ಟಣಗಳಿಗೆ ತಲುಪಿತ್ತೋ ಅಲ್ಲಿನ ಯೆಹೂದ್ಯರು ಸಂತೋಷದಿಂದ ಕುಣಿದಾಡಿದ್ರು. ಅವರು ಔತಣ ಏರ್ಪಡಿಸಿ ಸಂಭ್ರಮಿಸಿದ್ರು. ದೇಶದ ಜನ್ರಲ್ಲಿ ಅನೇಕರಿಗೆ ಯೆಹೂದ್ಯರ ಬಗ್ಗೆ ಭಯ ಇದ್ದಿದ್ರಿಂದ ಅವ್ರಲ್ಲಿ ಹೆಚ್ಚಿನವರು ತಾವು ಕೂಡ ಯೆಹೂದ್ಯರು ಅಂತ ಹೇಳ್ಕೊಳ್ತಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ