ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 66
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರ ವಿಸ್ಮಯಕಾರಿ ಕೆಲಸಗಳು

        • “ಬನ್ನಿ, ದೇವರ ಕೆಲಸಗಳನ್ನ ನೋಡಿ” (5)

        • “ನಾನು ನನ್ನ ಹರಕೆಗಳನ್ನ ನಿನಗೆ ಸಲ್ಲಿಸುವೆ” (13)

        • ದೇವರು ಪ್ರಾರ್ಥನೆಗಳನ್ನ ಕೇಳಿಸಿಕೊಳ್ಳುತ್ತಾನೆ (18-20)

ಕೀರ್ತನೆ 66:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 98:4

ಕೀರ್ತನೆ 66:2

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:19; ಪ್ರಕ 4:11

ಕೀರ್ತನೆ 66:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:16; ಕೀರ್ತ 76:12; ಯೆಶಾ 2:19; ಯೆರೆ 10:10
  • +ಕೀರ್ತ 81:15

ಕೀರ್ತನೆ 66:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:27; ಮಲಾ 1:11
  • +ಯೆಶಾ 42:10; ಪ್ರಕ 15:4

ಕೀರ್ತನೆ 66:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 46:8; ಚೆಫ 2:11

ಕೀರ್ತನೆ 66:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:21, 22
  • +ಯೆಹೋ 3:15, 16
  • +ವಿಮೋ 15:1

ಕೀರ್ತನೆ 66:7

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:34; 1ತಿಮೊ 1:17
  • +ಕೀರ್ತ 11:4; ಜ್ಞಾನೋ 15:3; ಇಬ್ರಿ 4:13
  • +ಯೆಶಾ 37:29

ಕೀರ್ತನೆ 66:8

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:43; ರೋಮ 15:10

ಕೀರ್ತನೆ 66:9

ಪಾದಟಿಪ್ಪಣಿ

  • *

    ಅಥವಾ “ತತ್ತರಿಸಿ ಹೋಗೋಕೆ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 25:29
  • +1ಸಮು 2:9; ಕೀರ್ತ 121:3

ಕೀರ್ತನೆ 66:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 8:2

ಕೀರ್ತನೆ 66:11

ಪಾದಟಿಪ್ಪಣಿ

  • *

    ಅಕ್ಷ. “ನಮ್ಮ ಸೊಂಟದ ಮೇಲೆ.”

ಕೀರ್ತನೆ 66:12

ಪಾದಟಿಪ್ಪಣಿ

  • *

    ಅಕ್ಷ. “ನಮ್ಮ ತಲೆ.”

ಕೀರ್ತನೆ 66:13

ಮಾರ್ಜಿನಲ್ ರೆಫರೆನ್ಸ್

  • +ಅರ 15:3
  • +ಕೀರ್ತ 56:12; 116:14; ಪ್ರಸಂ 5:4, 5

ಕೀರ್ತನೆ 66:14

ಮಾರ್ಜಿನಲ್ ರೆಫರೆನ್ಸ್

  • +ಅರ 30:2; ನ್ಯಾಯ 11:35

ಕೀರ್ತನೆ 66:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:24

ಕೀರ್ತನೆ 66:18

ಮಾರ್ಜಿನಲ್ ರೆಫರೆನ್ಸ್

  • +ಯೋಬ 27:8, 9; ಜ್ಞಾನೋ 15:29; 28:9; ಯೆಶಾ 1:15; ಯೋಹಾ 9:31

ಕೀರ್ತನೆ 66:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:6; 65:2; 116:1; 1ಯೋಹಾ 3:22
  • +ಇಬ್ರಿ 5:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 66:1ಕೀರ್ತ 98:4
ಕೀರ್ತ. 66:2ಕೀರ್ತ 72:19; ಪ್ರಕ 4:11
ಕೀರ್ತ. 66:3ವಿಮೋ 15:16; ಕೀರ್ತ 76:12; ಯೆಶಾ 2:19; ಯೆರೆ 10:10
ಕೀರ್ತ. 66:3ಕೀರ್ತ 81:15
ಕೀರ್ತ. 66:4ಕೀರ್ತ 22:27; ಮಲಾ 1:11
ಕೀರ್ತ. 66:4ಯೆಶಾ 42:10; ಪ್ರಕ 15:4
ಕೀರ್ತ. 66:5ಕೀರ್ತ 46:8; ಚೆಫ 2:11
ಕೀರ್ತ. 66:6ವಿಮೋ 14:21, 22
ಕೀರ್ತ. 66:6ಯೆಹೋ 3:15, 16
ಕೀರ್ತ. 66:6ವಿಮೋ 15:1
ಕೀರ್ತ. 66:7ದಾನಿ 4:34; 1ತಿಮೊ 1:17
ಕೀರ್ತ. 66:7ಕೀರ್ತ 11:4; ಜ್ಞಾನೋ 15:3; ಇಬ್ರಿ 4:13
ಕೀರ್ತ. 66:7ಯೆಶಾ 37:29
ಕೀರ್ತ. 66:8ಧರ್ಮೋ 32:43; ರೋಮ 15:10
ಕೀರ್ತ. 66:91ಸಮು 25:29
ಕೀರ್ತ. 66:91ಸಮು 2:9; ಕೀರ್ತ 121:3
ಕೀರ್ತ. 66:10ಧರ್ಮೋ 8:2
ಕೀರ್ತ. 66:13ಅರ 15:3
ಕೀರ್ತ. 66:13ಕೀರ್ತ 56:12; 116:14; ಪ್ರಸಂ 5:4, 5
ಕೀರ್ತ. 66:14ಅರ 30:2; ನ್ಯಾಯ 11:35
ಕೀರ್ತ. 66:16ಕೀರ್ತ 22:24
ಕೀರ್ತ. 66:18ಯೋಬ 27:8, 9; ಜ್ಞಾನೋ 15:29; 28:9; ಯೆಶಾ 1:15; ಯೋಹಾ 9:31
ಕೀರ್ತ. 66:19ಕೀರ್ತ 34:6; 65:2; 116:1; 1ಯೋಹಾ 3:22
ಕೀರ್ತ. 66:19ಇಬ್ರಿ 5:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 66:1-20

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ಇದೊಂದು ಮಧುರ ಗೀತೆ.

66 ಇಡೀ ಭೂಮಿಯ ನಿವಾಸಿಗಳೇ, ದೇವರಿಗೆ ಜೈಕಾರ ಹಾಕಿ.+

 2 ಗೌರವದಿಂದ ಕೂಡಿರೋ ಆತನ ಹೆಸ್ರನ್ನ ಹಾಡಿ ಹೊಗಳಿ.*

ಆತನನ್ನ ಕೊಂಡಾಡ್ತಾ ಮಹಿಮೆಪಡಿಸಿ.+

 3 ದೇವರಿಗೆ ಹೀಗೆ ಹೇಳಿ “ನಿನ್ನ ಕೆಲಸಗಳು ಎಷ್ಟೋ ಆಶ್ಚರ್ಯ ತರುತ್ತೆ!+

ನಿನ್ನ ಮಹಾ ಶಕ್ತಿಯಿಂದ,

ನಿನ್ನ ಶತ್ರುಗಳು ನಿನ್ನ ಹತ್ರ ಗಡಗಡ ಅಂತ ನಡುಗ್ತಾ ಬರ್ತಾರೆ.+

 4 ಭೂಮಿಯ ಎಲ್ಲ ಜನ್ರು ನಿನಗೆ ಬಗ್ಗಿ ನಮಸ್ಕಾರ ಮಾಡ್ತಾರೆ,+

ಅವರು ನಿನಗೆ ಹಾಡಿ ಹೊಗಳ್ತಾರೆ,

ಅವರು ನಿನ್ನ ಹೆಸ್ರಿಗೆ ಗೌರವ ಕೊಡೋಕೆ ಸ್ತುತಿ ಗೀತೆಗಳನ್ನ ಹಾಡ್ತಾರೆ.”+ (ಸೆಲಾ)

 5 ಬನ್ನಿ, ದೇವರ ಕೆಲಸಗಳನ್ನ ನೋಡಿ.

ಮನುಷ್ಯರಿಗಾಗಿ ಆತನು ಮಾಡಿರೋ ಕೆಲಸಗಳು ಭಯವಿಸ್ಮಯ ಹುಟ್ಟಿಸುತ್ತೆ.+

 6 ಆತನು ಸಮುದ್ರವನ್ನ ಒಣನೆಲದ ತರ ಮಾಡಿದ,+

ಜನ್ರು ನದಿಯನ್ನ ನಡ್ಕೊಂಡೇ ದಾಟಿದ್ರು.+

ದೇವರಿಂದಾಗಿ ನಾವು ಖುಷಿಯಲ್ಲಿ ತೇಲಾಡಿದ್ವಿ.+

 7 ಆತನು ತನ್ನ ಶಕ್ತಿಯಿಂದ ಶಾಶ್ವತವಾಗಿ ಆಳ್ತಾನೆ.+

ಆತನ ಕಣ್ಣುಗಳು ಜನ್ರನ್ನ ಗಮನಿಸ್ತಾನೇ ಇರುತ್ತೆ.+

ಹಠಮಾರಿಗಳು ತಮ್ಮನ್ನ ತಾವೇ ಹೆಚ್ಚಿಸ್ಕೊಬಾರದು.+ (ಸೆಲಾ)

 8 ದೇಶಗಳ ಜನ್ರೇ, ನಮ್ಮ ದೇವರನ್ನ ಸ್ತುತಿಸಿ,+

ಆತನನ್ನ ಹೊಗಳೋದು ಎಲ್ಲ ಕಡೆ ಕೇಳಿಸಲಿ.

 9 ಆತನು ನಮ್ಮ ಜೀವವನ್ನ ಕಾಪಾಡ್ತಾನೆ,+

ನಮ್ಮ ಕಾಲು ಎಡವಿ ಬೀಳೋಕೆ* ಆತನು ಬಿಡಲ್ಲ.+

10 ಯಾಕಂದ್ರೆ ದೇವರೇ, ನೀನು ನಮ್ಮನ್ನ ಪರೀಕ್ಷಿಸಿದ್ದೀಯ,+

ಬೆಳ್ಳಿಯನ್ನ ಪರಿಷ್ಕರಿಸೋ ಹಾಗೆ ನೀನು ನಮ್ಮನ್ನ ಪರಿಷ್ಕರಿಸಿದ್ದೀಯ.

11 ನೀನು ನಮ್ಮನ್ನ ನಿನ್ನ ಬಲೆಯಲ್ಲಿ ಸಿಕ್ಕಿಸಿದೆ,

ಜಜ್ಜಿಹಾಕೋ ಹೊರೆಯನ್ನ ನಮ್ಮ ಮೇಲೆ* ಹೊರಿಸಿದೆ.

12 ನಾಶವಾಗೋ ಮನುಷ್ಯ ನಮ್ಮ* ಮೇಲೆ ಸವಾರಿ ಮಾಡೋಕೆ ಬಿಟ್ಟೆ,

ನಾವು ಬೆಂಕಿ ಮತ್ತು ನೀರನ್ನ ದಾಟಿ ಬಂದ್ವಿ,

ಆಮೇಲೆ, ನೀನು ನಮ್ಮನ್ನ ಒಂದು ನೆಮ್ಮದಿಯ ನೆಲೆಗೆ ಕರ್ಕೊಂಡು ಬಂದೆ.

13 ಸರ್ವಾಂಗಹೋಮ ಬಲಿಗಳನ್ನ ತಗೊಂಡು ನಾನು ನಿನ್ನ ಆಲಯಕ್ಕೆ ಬರ್ತಿನಿ,+

ನಾನು ನನ್ನ ಹರಕೆಗಳನ್ನ ನಿನಗೆ ಸಲ್ಲಿಸ್ತೀನಿ,+

14 ನಾನು ಕಷ್ಟದಲ್ಲಿದ್ದಾಗ ನನ್ನ ತುಟಿಗಳು ಹೊತ್ತ ಆ ಹರಕೆಗಳನ್ನ ಒಪ್ಪಿಸ್ತೀನಿ,+

ನಾನು ತೊಂದರೆಯಲ್ಲಿದ್ದಾಗ ನನ್ನ ಬಾಯಿಂದ ಕೊಟ್ಟ ಆ ಮಾತನ್ನ ತೀರಿಸ್ತೀನಿ.

15 ನಾನು ಕೊಬ್ಬಿದ ಪ್ರಾಣಿಗಳ ಸರ್ವಾಂಗಹೋಮ ಬಲಿಗಳನ್ನ ನಿನಗೆ ಕೊಡ್ತೀನಿ

ಟಗರನ್ನ ಬಲಿಕೊಟ್ಟು ಅದ್ರ ಹೊಗೆ ಮೇಲೆ ಏರೋ ತರ ಮಾಡ್ತೀನಿ.

ಆಡುಗಳ ಜೊತೆ ಹೋರಿಗಳನ್ನೂ ಬಲಿಯಾಗಿ ಕೊಡ್ತೀನಿ. (ಸೆಲಾ)

16 ದೇವರಿಗೆ ಭಯಪಡೋರೇ, ನೀವೆಲ್ಲ ಬಂದು ಕೇಳಿಸ್ಕೊಳ್ಳಿ,

ಆತನು ನನಗಾಗಿ ಏನೆಲ್ಲ ಮಾಡಿದ್ದಾನೆ ಅಂತ ನಾನು ನಿಮಗೆ ಹೇಳ್ತೀನಿ.+

17 ನಾನು ನನ್ನ ಬಾಯಿಂದ ಆತನನ್ನ ಕೂಗಿದೆ

ನನ್ನ ನಾಲಿಗೆಯಿಂದ ಆತನಿಗೆ ಗೌರವ ಕೊಟ್ಟೆ.

18 ನಾನು ನನ್ನ ಹೃದಯದಲ್ಲಿ ಯಾವ ರೀತಿ ಆದ್ರೂ ಕೆಟ್ಟ ವಿಷ್ಯಗಳನ್ನ ಇಟ್ಕೊಂಡಿದ್ರೆ,

ಯೆಹೋವ ನನ್ನ ಕೂಗನ್ನ ಕೇಳಿಸಿಕೊಳ್ತಾ ಇರಲಿಲ್ಲ.+

19 ಆದ್ರೆ ದೇವರು ನನ್ನ ಮೊರೆಯನ್ನ ಕೇಳಿಸ್ಕೊಂಡನು,+

ನನ್ನ ಪ್ರಾರ್ಥನೆಗೆ ಗಮನಕೊಟ್ಟನು.+

20 ನನ್ನ ಪ್ರಾರ್ಥನೆಯನ್ನ ತಳ್ಳಿಹಾಕದ ದೇವರಿಗೆ,

ತನ್ನ ಶಾಶ್ವತ ಪ್ರೀತಿಯನ್ನ ನನಗೆ ಕೊಡೋಕೆ ಹಿಂದೆಮುಂದೆ ನೋಡದ ದೇವರಿಗೆ ಹೊಗಳಿಕೆಯಾಗಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ