ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ಕ್ರಿಸ್ತನ ಹಾಗೆ ನೀವೂ ಒಬ್ರನ್ನೊಬ್ರು ಸೇರಿಸ್ಕೊಳ್ಳಿ (1-13)

      • ಪೌಲ, ಬೇರೆ ಜನಾಂಗಗಳಿಗೆ ಸೇವಕ (14-21)

      • ಪೌಲನ ಪ್ರಯಾಣದ ಯೋಜನೆ (22-33)

ರೋಮನ್ನರಿಗೆ 15:1

ಮಾರ್ಜಿನಲ್ ರೆಫರೆನ್ಸ್

  • +ರೋಮ 14:1; 1ಥೆಸ 5:14
  • +1ಕೊರಿಂ 10:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 35

    ಕಾವಲಿನಬುರುಜು,

    6/15/2014, ಪು. 24

    9/1/2004, ಪು. 11-13

    9/1/2000, ಪು. 6-7

    3/1/1998, ಪು. 29

    “ದೇವರ ಪ್ರೀತಿ”, ಪು. 22-24

ರೋಮನ್ನರಿಗೆ 15:2

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 9:22; ಫಿಲಿ 2:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 52

    ಕಾವಲಿನಬುರುಜು,

    9/1/2000, ಪು. 6-8

ರೋಮನ್ನರಿಗೆ 15:3

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 10:45; ಯೋಹಾ 5:30
  • +ಕೀರ್ತ 69:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 26-27

    9/1/2004, ಪು. 13

    9/1/2000, ಪು. 6-8

    ಶುಶ್ರೂಷಾ ಶಾಲೆ, ಪು. 133-134

ರೋಮನ್ನರಿಗೆ 15:4

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:11; 2ತಿಮೊ 3:16, 17; 2ಪೇತ್ರ 1:19
  • +ರೋಮ 5:3, 4
  • +ಕೀರ್ತ 119:49, 50; ಇಬ್ರಿ 3:6; 1ಪೇತ್ರ 1:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 1

    ಕಾವಲಿನಬುರುಜು (ಅಧ್ಯಯನ),

    7/2017, ಪು. 14

    ಕಾವಲಿನಬುರುಜು,

    3/15/2015, ಪು. 18

    7/1/2006, ಪು. 17

    9/1/2000, ಪು. 9

    11/1/1996, ಪು. 10

    2/1/1992, ಪು. 16-17

ರೋಮನ್ನರಿಗೆ 15:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2016, ಪು. 14

    ಕಾವಲಿನಬುರುಜು,

    9/1/2004, ಪು. 13

    9/1/2000, ಪು. 6-11

ರೋಮನ್ನರಿಗೆ 15:6

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 1:10; 2ಕೊರಿಂ 13:11; ಫಿಲಿ 2:2; 1ಪೇತ್ರ 3:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2004, ಪು. 8-13

ರೋಮನ್ನರಿಗೆ 15:7

ಪಾದಟಿಪ್ಪಣಿ

  • *

    ಅಥವಾ “ಸ್ವಾಗತಿಸಿ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 6:37
  • +ಫಿಲೆ 10, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2023, ಪು. 6

    ಕಾವಲಿನಬುರುಜು,

    11/15/2009, ಪು. 21

    6/15/2008, ಪು. 31

    8/15/2000, ಪು. 28

ರೋಮನ್ನರಿಗೆ 15:8

ಪಾದಟಿಪ್ಪಣಿ

  • *

    ಅಕ್ಷ. “ಸುನ್ನತಿಯಾದವ್ರ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 15:24; ಯೋಹಾ 1:11
  • +ಆದಿ 22:16-18; ಕೀರ್ತ 89:3

ರೋಮನ್ನರಿಗೆ 15:9

ಮಾರ್ಜಿನಲ್ ರೆಫರೆನ್ಸ್

  • +ರೋಮ 9:23, 24
  • +2ಸಮು 22:50; ಕೀರ್ತ 18:49

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1997, ಪು. 18-19

ರೋಮನ್ನರಿಗೆ 15:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:43

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1997, ಪು. 18-19

ರೋಮನ್ನರಿಗೆ 15:11

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 117:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1997, ಪು. 18-19

ರೋಮನ್ನರಿಗೆ 15:12

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 5:5
  • +ಆದಿ 49:10
  • +ಯೆಶಾ 11:1, 10; ಮತ್ತಾ 12:21

ರೋಮನ್ನರಿಗೆ 15:13

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2014, ಪು. 14

    10/1/2006, ಪು. 28

    3/1/1991, ಪು. 18

ರೋಮನ್ನರಿಗೆ 15:14

ಪಾದಟಿಪ್ಪಣಿ

  • *

    ಅಥವಾ “ಬೋಧಿಸೋ.”

ರೋಮನ್ನರಿಗೆ 15:16

ಮಾರ್ಜಿನಲ್ ರೆಫರೆನ್ಸ್

  • +ರೋಮ 11:13; ಗಲಾ 2:7, 8
  • +ಅಕಾ 20:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ರಾಜ್ಯ ಸೇವೆ,

    9/2011, ಪು. 1

ರೋಮನ್ನರಿಗೆ 15:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 15:12; 2ಕೊರಿಂ 12:12
  • +ಅಕಾ 21:18, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2005, ಪು. 16-17

ರೋಮನ್ನರಿಗೆ 15:20

ಪಾದಟಿಪ್ಪಣಿ

  • *

    ಅಕ್ಷ. “ಕ್ರಿಸ್ತನ ಹೆಸ್ರಿನ.”

ರೋಮನ್ನರಿಗೆ 15:21

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 52:15

ರೋಮನ್ನರಿಗೆ 15:23

ಪಾದಟಿಪ್ಪಣಿ

  • *

    ಬಹುಶಃ, “ಕೆಲವು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2020, ಪು. 17

ರೋಮನ್ನರಿಗೆ 15:25

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:21; 20:22

ರೋಮನ್ನರಿಗೆ 15:26

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 16:1; 2ಕೊರಿಂ 8:1-4; 9:2, 12

ರೋಮನ್ನರಿಗೆ 15:27

ಮಾರ್ಜಿನಲ್ ರೆಫರೆನ್ಸ್

  • +ಗಲಾ 6:6; ಇಬ್ರಿ 13:16

ರೋಮನ್ನರಿಗೆ 15:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 214

ರೋಮನ್ನರಿಗೆ 15:30

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 1:11; ಎಫೆ 6:18; ಕೊಲೊ 4:3; 1ಥೆಸ 5:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2002, ಪು. 5

    3/15/2001, ಪು. 31

ರೋಮನ್ನರಿಗೆ 15:31

ಮಾರ್ಜಿನಲ್ ರೆಫರೆನ್ಸ್

  • +2ಥೆಸ 3:1, 2
  • +ರೋಮ 15:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2001, ಪು. 31

ರೋಮನ್ನರಿಗೆ 15:33

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 14:33; ಫಿಲಿ 4:9

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 15:1ರೋಮ 14:1; 1ಥೆಸ 5:14
ರೋಮ. 15:11ಕೊರಿಂ 10:24
ರೋಮ. 15:21ಕೊರಿಂ 9:22; ಫಿಲಿ 2:4
ರೋಮ. 15:3ಮಾರ್ಕ 10:45; ಯೋಹಾ 5:30
ರೋಮ. 15:3ಕೀರ್ತ 69:9
ರೋಮ. 15:41ಕೊರಿಂ 10:11; 2ತಿಮೊ 3:16, 17; 2ಪೇತ್ರ 1:19
ರೋಮ. 15:4ರೋಮ 5:3, 4
ರೋಮ. 15:4ಕೀರ್ತ 119:49, 50; ಇಬ್ರಿ 3:6; 1ಪೇತ್ರ 1:10
ರೋಮ. 15:61ಕೊರಿಂ 1:10; 2ಕೊರಿಂ 13:11; ಫಿಲಿ 2:2; 1ಪೇತ್ರ 3:8
ರೋಮ. 15:7ಯೋಹಾ 6:37
ರೋಮ. 15:7ಫಿಲೆ 10, 17
ರೋಮ. 15:8ಮತ್ತಾ 15:24; ಯೋಹಾ 1:11
ರೋಮ. 15:8ಆದಿ 22:16-18; ಕೀರ್ತ 89:3
ರೋಮ. 15:9ರೋಮ 9:23, 24
ರೋಮ. 15:92ಸಮು 22:50; ಕೀರ್ತ 18:49
ರೋಮ. 15:10ಧರ್ಮೋ 32:43
ರೋಮ. 15:11ಕೀರ್ತ 117:1
ರೋಮ. 15:12ಪ್ರಕ 5:5
ರೋಮ. 15:12ಆದಿ 49:10
ರೋಮ. 15:12ಯೆಶಾ 11:1, 10; ಮತ್ತಾ 12:21
ರೋಮ. 15:13ಯೆಶಾ 40:31
ರೋಮ. 15:16ರೋಮ 11:13; ಗಲಾ 2:7, 8
ರೋಮ. 15:16ಅಕಾ 20:24
ರೋಮ. 15:19ಅಕಾ 15:12; 2ಕೊರಿಂ 12:12
ರೋಮ. 15:19ಅಕಾ 21:18, 19
ರೋಮ. 15:21ಯೆಶಾ 52:15
ರೋಮ. 15:25ಅಕಾ 19:21; 20:22
ರೋಮ. 15:261ಕೊರಿಂ 16:1; 2ಕೊರಿಂ 8:1-4; 9:2, 12
ರೋಮ. 15:27ಗಲಾ 6:6; ಇಬ್ರಿ 13:16
ರೋಮ. 15:302ಕೊರಿಂ 1:11; ಎಫೆ 6:18; ಕೊಲೊ 4:3; 1ಥೆಸ 5:25
ರೋಮ. 15:312ಥೆಸ 3:1, 2
ರೋಮ. 15:31ರೋಮ 15:26
ರೋಮ. 15:331ಕೊರಿಂ 14:33; ಫಿಲಿ 4:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 15:1-33

ರೋಮನ್ನರಿಗೆ ಬರೆದ ಪತ್ರ

15 ಬಲವಾದ ನಂಬಿಕೆ ಇರೋ ನಾವು ಬಲವಾದ ನಂಬಿಕೆ ಇಲ್ಲದವ್ರ ಬಲಹೀನತೆಗಳನ್ನ ಸಹಿಸ್ಕೊಬೇಕು.+ ನಮಗೆ ಖುಷಿ ಕೊಡೋದನ್ನೇ ಮಾಡ್ತಾ ಇರಬಾರದು.+ 2 ಪ್ರತಿಯೊಬ್ಬನು ಬೇರೆಯವ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಬೇಕು, ಅವ್ರನ್ನ ಬಲಪಡಿಸೋಕೆ ಅವ್ರಿಗೇನು ಒಳ್ಳೇದೋ ಅದನ್ನ ಮಾಡಬೇಕು.+ 3 ಕ್ರಿಸ್ತನೂ ತನಗೆ ಖುಷಿ ಕೊಡೋದನ್ನೇ ಮಾಡಲಿಲ್ಲ.+ “ನಿನ್ನನ್ನ ಬೈಯುವವ್ರ ಮಾತುಗಳನ್ನ ನಾನು ಸಹಿಸ್ಕೊಂಡೆ” ಅಂತ ಆತನ ಬಗ್ಗೆ ಬರೆದಿರೋ ಮಾತು ನಿಜ ಆಯ್ತು.+ 4 ಹಿಂದಿನ ಕಾಲದಲ್ಲಿ ಬರೆದ ವಿಷ್ಯಗಳನ್ನೆಲ್ಲ ನಾವು ಕಲಿಬೇಕಂತ ಬರೆದ್ರು.+ ಈ ಪವಿತ್ರ ಬರಹಗಳು ತಾಳಿಕೊಳ್ಳೋಕೆ,+ ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.+ 5 ತಾಳಿಕೊಳ್ಳೋಕೆ ಮತ್ತು ಸಾಂತ್ವನ ಪಡಿಯೋಕೆ ನಮಗೆ ಸಹಾಯ ಮಾಡೋ ದೇವರು ಕ್ರಿಸ್ತ ಯೇಸುವಿನ ಮನಸ್ಸನ್ನ ನಿಮಗೆ ಕೊಡ್ಲಿ. 6 ಆಗ ನೀವು ಒಂದಾಗಿದ್ದು+ ಒಂದೇ ಸ್ವರದಲ್ಲಿ ನಮ್ಮ ಪ್ರಭು ಯೇಸು ಕ್ರಿಸ್ತನ ತಂದೆಯಾಗಿರೋ ದೇವರಿಗೆ ಗೌರವ ಕೊಡ್ತೀರ.

7 ಕ್ರಿಸ್ತ ನಿಮ್ಮನ್ನ ಸೇರಿಸ್ಕೊಂಡ ಹಾಗೆ+ ನೀವೂ ಒಬ್ರು ಇನ್ನೊಬ್ರನ್ನ ಸೇರಿಸ್ಕೊಳ್ಳಿ.*+ ಇದು ದೇವರಿಗೆ ಮಹಿಮೆ ತರುತ್ತೆ. 8 ನಿಮಗೆ ಒಂದು ವಿಷ್ಯ ಗೊತ್ತಿರಲಿ. ಏನಂದ್ರೆ ಕ್ರಿಸ್ತನು ಯೆಹೂದ್ಯರ* ಸೇವಕನಾದನು.+ ದೇವರು ಸತ್ಯವನ್ನೇ ಹೇಳ್ತಾನೆ ಅಂತ ತೋರಿಸೋಕೆ ಮತ್ತು ಅವ್ರ ಪೂರ್ವಜರಿಗೆ ಆತನು ಕೊಟ್ಟ ಮಾತೆಲ್ಲ ನಿಜ ಅಂತ ತೋರಿಸೋಕೆ,+ 9 ಅಷ್ಟೇ ಅಲ್ಲ, ಬೇರೆ ಜನಾಂಗಗಳ ಜನ್ರು ತಮಗೆ ದೇವರು ಕರುಣೆ ತೋರಿಸಿದ್ದಕ್ಕಾಗಿ ಆತನಿಗೆ ಮಹಿಮೆ ಸಲ್ಲಿಸೋ ತರ ಆಗೋಕೆ ಕ್ರಿಸ್ತ ಯೆಹೂದ್ಯರ ಸೇವಕನಾದನು.+ “ಹಾಗಾಗಿ ಜನಾಂಗಗಳಲ್ಲಿ ಎಲ್ರ ಮುಂದೆ ನಾನು ನಿನ್ನನ್ನ ಹೊಗಳ್ತೀನಿ, ನಿನ್ನ ಹೆಸ್ರನ್ನ ಗೌರವಿಸೋಕೆ ಹಾಡುಗಳನ್ನ ಹಾಡ್ತೀನಿ”+ ಅಂತ ಪವಿತ್ರ ಗ್ರಂಥ ಹೇಳುತ್ತೆ. 10 “ಜನಾಂಗಗಳೇ, ದೇವರ ಜನ್ರ ಜೊತೆ ಹರ್ಷಿಸಿ”+ ಅಂತಾನೂ ಹೇಳುತ್ತೆ. 11 “ಎಲ್ಲ ಜನಾಂಗಗಳೇ, ಯೆಹೋವನನ್ನ* ಹಾಡಿ ಹೊಗಳಿ. ಎಲ್ಲ ದೇಶಗಳ ಜನ್ರು ಆತನನ್ನ ಸ್ತುತಿಸ್ಲಿ”+ ಅಂತಾನೂ ವಚನ ಹೇಳುತ್ತೆ. 12 ಅಷ್ಟೇ ಅಲ್ಲ “ಇಷಯನ ಬೇರು ಕಾಣಿಸ್ಕೊಳ್ತಾನೆ,+ ಜನಾಂಗಗಳನ್ನ ಆಳೋಕೆ ಆತನು ಏಳ್ತಾನೆ.+ ಜನಾಂಗಗಳು ಆತನ ಮೇಲೆ ನಿರೀಕ್ಷೆ ಇಡುತ್ತೆ”+ ಅಂತ ಯೆಶಾಯ ಹೇಳಿದ. 13 ನಿರೀಕ್ಷೆ ಕೊಡೋ ದೇವರಲ್ಲಿ ನೀವು ಭರವಸೆ ಇಟ್ಟಿರೋದ್ರಿಂದ ಆತನು ನಿಮ್ಮಲ್ಲಿ ಆನಂದ ಮತ್ತು ಶಾಂತಿ ತುಂಬಿತುಳುಕೋ ಹಾಗೆ ಮಾಡ್ಲಿ. ಇದ್ರಿಂದ ಪವಿತ್ರಶಕ್ತಿಯ ಬಲದಿಂದ ನಿಮ್ಮ ನಿರೀಕ್ಷೆ ಇನ್ನೂ ದೃಢ ಆಗ್ಲಿ.+

14 ನನ್ನ ಸಹೋದರರೇ, ಒಳ್ಳೇತನ, ಎಲ್ಲ ತರದ ಜ್ಞಾನದಿಂದ ತುಂಬ್ಕೊಂಡು, ಒಬ್ರು ಇನ್ನೊಬ್ರಿಗೆ ಬುದ್ಧಿಹೇಳೋ* ಸಾಮರ್ಥ್ಯ ನಿಮಗಿದೆ ಅಂತ ನನಗೆ ಭರವಸೆ ಇದೆ. 15 ಆದ್ರೂ ದೇವರು ನನಗೆ ಅಪಾರ ಕೃಪೆ ತೋರಿಸಿದ್ರಿಂದ ಸ್ವಲ್ಪ ವಿಷ್ಯಗಳನ್ನ ನಿಮಗೆ ನೆನಪು ಹುಟ್ಟಿಸೋಕೆ ಅವನ್ನ ಮುಚ್ಚುಮರೆ ಇಲ್ಲದೆ ಬರೆದಿದ್ದೀನಿ. 16 ದೇವರ ಸಿಹಿಸುದ್ದಿಯನ್ನ ಬೇರೆ ಜನಾಂಗಗಳಿಗೆ ಸಾರೋಕೆ ನನ್ನನ್ನ ಕ್ರಿಸ್ತ ಯೇಸುವಿನ ಸೇವಕನಾಗಿ ಆರಿಸಲಾಗಿದೆ.+ ಈ ಜನಾಂಗಗಳನ್ನ ಪವಿತ್ರಶಕ್ತಿಯಿಂದ ಪವಿತ್ರ ಮಾಡಿದ ಅರ್ಪಣೆಯಾಗಿ ದೇವರು ಸ್ವೀಕರಿಸಬೇಕಂತ ನಾನು ಈ ಪವಿತ್ರ ಕೆಲಸವನ್ನ ಕಷ್ಟಪಟ್ಟು ಮಾಡ್ತಿದ್ದೀನಿ.+

17 ನಾನು ಕ್ರಿಸ್ತ ಯೇಸುವಿನ ಶಿಷ್ಯನಾಗಿ ಇರೋಕೆ, ದೇವರ ಕೆಲಸ ಮಾಡೋಕೆ ತುಂಬ ಸಂತೋಷಪಡ್ತೀನಿ. 18 ನಾನು ಮಾಡಿದ ಯಾವ ಕೆಲಸದ ಬಗ್ಗೆನೂ ಮಾತಾಡಲ್ಲ. ಬೇರೆ ಜನಾಂಗಗಳ ಜನ್ರು ಕ್ರಿಸ್ತನ ಮಾತನ್ನ ಕೇಳೋಕೆ ಅವ್ರಿಗೆ ಸಹಾಯ ಮಾಡಬೇಕಂತ ಆತನು ನನ್ನಿಂದ ಮಾಡಿಸಿದ, ಹೇಳಿಸಿದ ವಿಷ್ಯಗಳ ಬಗ್ಗೆ ಮಾತ್ರ ಮಾತಾಡ್ತೀನಿ. 19 ಅವರು ತನ್ನ ಮಾತನ್ನ ಕೇಳಬೇಕಂತ ಆತನು ದೇವರ ಪವಿತ್ರಶಕ್ತಿಯಿಂದ ಅದ್ಭುತಗಳನ್ನ+ ಮಾಡಿದನು. ಹಾಗಾಗಿ ನಾನು ಯೆರೂಸಲೇಮಿಂದ ಇಲ್ಲುರಿಕ ಪ್ರದೇಶದ ತನಕ ಕ್ರಿಸ್ತನ ಬಗ್ಗೆ ಸಿಹಿಸುದ್ದಿಯನ್ನ ಪೂರ್ತಿಯಾಗಿ ಸಾರಿದ್ದೀನಿ.+ 20 ಕ್ರಿಸ್ತನ* ಬಗ್ಗೆ ಈಗಾಗ್ಲೇ ಸಾರಿರೋ ಜಾಗಗಳಲ್ಲಿ ಸಿಹಿಸುದ್ದಿಯನ್ನ ಹೇಳೋಕೆ ನನಗಿಷ್ಟ ಇಲ್ಲ. ಯಾಕಂದ್ರೆ ಇನ್ನೊಬ್ಬ ಹಾಕಿದ ಅಡಿಪಾಯದ ಮೇಲೆ ಕಟ್ಟೋದು ನಂಗೆ ಇಷ್ಟ ಇಲ್ಲ. 21 “ಆತನ ಬಗ್ಗೆ ಯಾರಿಗೆ ಗೊತ್ತಿಲ್ವೋ ಅವರು ಆತನ ಬಗ್ಗೆ ತಿಳ್ಕೊಳ್ತಾರೆ, ಯಾರು ಕೇಳಿಸ್ಕೊಂಡಿಲ್ವೋ ಅವರು ಅರ್ಥಮಾಡ್ಕೊತಾರೆ” ಅಂತ ವಚನದಲ್ಲಿ ಹೇಳಿರೋ ಹಾಗೆ ನಡಿದಿದೆ.+

22 ಅದಕ್ಕೇ ನಾನು ನಿಮ್ಮ ಹತ್ರ ಬರೋಕೆ ತುಂಬ ಸಲ ಪ್ರಯತ್ನ ಮಾಡಿದ್ರೂ ಏನಾದ್ರೂ ಒಂದು ಅಡ್ಡಿ ಬರ್ತಾನೇ ಇತ್ತು. 23 ಆದ್ರೆ ಈಗ ಈ ಎಲ್ಲ ಪ್ರದೇಶಗಳಲ್ಲಿ ನಾನು ಸಾರಿ ಆಗಿದೆ. ಅಷ್ಟೇ ಅಲ್ಲ ತುಂಬ* ವರ್ಷಗಳಿಂದ ನಿಮ್ಮನ್ನ ನೋಡೋಕೆ ಆಸೆಯಿಂದ ಕಾಯ್ತಿದ್ದೆ. 24 ಹಾಗಾಗಿ ನಾನು ಸ್ಪೇನ್‌ ದೇಶಕ್ಕೆ ಹೋಗುವಾಗ ನಿಮ್ಮನ್ನ ನೋಡೋಕೆ ಇಷ್ಟಪಡ್ತೀನಿ. ನಾನು ಸ್ವಲ್ಪ ಸಮಯ ನಿಮ್ಮ ಜೊತೆ ಇದ್ದು ಆನಂದಿಸಿದ ಮೇಲೆ ಸ್ಪೇನಿಗೆ ಹೋಗ್ತೀನಿ. ನೀವು ಸ್ವಲ್ಪ ದೂರ ಬಂದು ನನ್ನನ್ನ ಕಳಿಸ್ಕೊಡ್ತೀರ ಅಂತ ನಂಬ್ತೀನಿ. 25 ಆದ್ರೆ ಈಗ ನಾನು ಯೆರೂಸಲೇಮಿಗೆ ಪ್ರಯಾಣ ಮಾಡ್ತೀನಿ. ಅಲ್ಲಿ ಪವಿತ್ರ ಜನ್ರ ಸೇವೆ ಮಾಡೋದು ಬಾಕಿ ಇದೆ.+ 26 ಮಕೆದೋನ್ಯ ಮತ್ತು ಅಖಾಯದಲ್ಲಿರೋ ಸಹೋದರರು ಯೆರೂಸಲೇಮಿನ ಪವಿತ್ರ ಜನ್ರಲ್ಲಿರೋ ಬಡವ್ರಿಗಾಗಿ ಕಾಣಿಕೆ ಕೊಟ್ಟಿದ್ದಾರೆ. ಹೀಗೆ ಅವರು ತಮ್ಮ ಹತ್ರ ಇರೋದನ್ನೆಲ್ಲ ಖುಷಿಯಿಂದ ಹಂಚ್ಕೊಂಡಿದ್ದಾರೆ.+ 27 ನಿಜ ಹೇಳಬೇಕಾದ್ರೆ ಅವರು ಇವ್ರಿಗೆ ಸಾಲಗಾರರು. ಅವ್ರ ಜೊತೆ ಯೆರೂಸಲೇಮಿನ ಸಹೋದರರು ಆಧ್ಯಾತ್ಮಿಕ ವಿಷ್ಯಗಳನ್ನ ಹಂಚ್ಕೊಂಡಿದ್ದಾರೆ. ಹಾಗಾಗಿ ಈ ಪವಿತ್ರ ಜನ್ರಿಗೆ ಅಗತ್ಯವಿರೋ ವಸ್ತುಗಳನ್ನ ಕೊಟ್ಟು ಸಹಾಯ ಮಾಡೋ ಹಂಗು ಅವ್ರಿಗಿದೆ.+ 28 ಈ ಕಾಣಿಕೆಯನ್ನ ಅವ್ರಿಗೆ ಸುರಕ್ಷಿತವಾಗಿ ತಲುಪಿಸಿದ ಮೇಲೆ ನಾನು ಸ್ಪೇನ್‌ ದೇಶಕ್ಕೆ ಹೋಗುವಾಗ ದಾರಿಯಲ್ಲಿ ನಿಮ್ಮನ್ನ ಭೇಟಿಮಾಡಿ ಹೋಗ್ತೀನಿ. 29 ನಾನು ನಿಮ್ಮ ಹತ್ರ ಬರುವಾಗ ಕ್ರಿಸ್ತನಿಂದ ತುಂಬ ಆಶೀರ್ವಾದಗಳನ್ನ ತರ್ತಿನಿ.

30 ಸಹೋದರರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಮಗೆ ನಂಬಿಕೆ ಇರೋದ್ರಿಂದ, ಪವಿತ್ರಶಕ್ತಿಯಿಂದಾಗಿ ನಮ್ಮಲ್ಲಿ ಪ್ರೀತಿ ಇರೋದ್ರಿಂದ ನಾನು ನಿಮ್ಮನ್ನ ಬೇಡ್ಕೊಳ್ಳೋದು ಏನಂದ್ರೆ, ನಾನು ಪ್ರಾರ್ಥಿಸೋ ತರ ನೀವೂ ತುಂಬ ಆಸಕ್ತಿಯಿಂದ ನನಗಾಗಿ ಪ್ರಾರ್ಥನೆ ಮಾಡಿ.+ 31 ಯೂದಾಯದಲ್ಲಿ ಕ್ರೈಸ್ತರಲ್ಲದ ಜನ್ರ ಕೈಗೆ ನಾನು ಸಿಕ್ಕಿಬೀಳಬಾರದು.+ ನಾನು ತಗೊಂಡು ಹೋಗ್ತಿರೋ ಕಾಣಿಕೆಯನ್ನ ಯೆರೂಸಲೇಮಿನ ಪವಿತ್ರ ಜನ್ರು ಖುಷಿಯಾಗಿ ತಗೊಬೇಕು ಅಂತ ದೇವರಿಗೆ ಪ್ರಾರ್ಥಿಸಿ.+ 32 ಆಗ ದೇವರಿಗೆ ಇಷ್ಟ ಇದ್ರೆ ನಾನು ಸಂತೋಷದಿಂದ ಬಂದು ನಿಮ್ಮ ಜೊತೆ ಇದ್ದು ಚೈತನ್ಯ ಪಡ್ಕೊಳ್ತೀನಿ. 33 ಶಾಂತಿಯನ್ನ ಕೊಡೋ ದೇವರು ನಿಮ್ಮೆಲ್ರ ಜೊತೆ ಇರಲಿ.+ ಆಮೆನ್‌.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ