ಹಬಕ್ಕೂಕ
3 ಶೋಕಗೀತೆ ತರ ಇರೋ ಪ್ರವಾದಿ ಹಬಕ್ಕೂಕನ ಪ್ರಾರ್ಥನೆ:
2 ಯೆಹೋವ, ನಾನು ನಿನ್ನ ಬಗ್ಗೆ ಕೇಳಿಸ್ಕೊಂಡೆ.
ಯೆಹೋವ, ನಿನ್ನ ಕೆಲಸಗಳು ನನ್ನಲ್ಲಿ ಭಯ ಆಶ್ಚರ್ಯ ಹುಟ್ಟಿಸಿವೆ.
ಆ ಕೆಲಸಗಳು ಇನ್ನೊಂದು ಸಲ ಮಾಡು,
ಈಗ ಅವನ್ನ ತೋರಿಸು.
ಕೋಪ ಬಂದಾಗ್ಲೂ ಕರುಣೆ ತೋರಿಸೋಕೆ ಮರಿಬೇಡ.+
ಆತನ ಮಹಿಮೆ ಆಕಾಶವನ್ನ ಮುಚ್ಕೊಳ್ತು,+
ಆತನ ಕೀರ್ತಿ ಭೂಮಿಯನ್ನ ತುಂಬ್ಕೊಳ್ತು.
4 ಆತನ ತೇಜಸ್ಸು ದಿನದ ಬೆಳಕಿನ ತರ ಇತ್ತು.+
ಎರಡು ಕಿರಣಗಳು ಆತನ ಕೈಯಿಂದ ಬರ್ತಿದ್ವು,
ಅದ್ರಲ್ಲೇ ಆತನ ಶಕ್ತಿ ಅಡಗಿತ್ತು.
ಆತನು ನೋಡಿದಾಗ ಜನಾಂಗಗಳು ನಡುಗಿದ್ವು.+
ಯುಗಗಳಿಂದ ನಿಂತಿದ್ದ ಪರ್ವತಗಳು ಚೂರುಚೂರಾದ್ವು.
ಹಳೇ ಕಾಲದ ಬೆಟ್ಟಗಳು ತಲೆಬಾಗಿದ್ವು.+
ಮೊದಲಿಂದಾನೂ ಆತನು ಹೀಗೇ ಮಾಡ್ತಿದ್ದಾನೆ.
7 ನಾನು ಕೂಷಾನಿನ ಡೇರೆಗಳಲ್ಲಿ ಕಷ್ಟ ನೋಡಿದೆ.
ಮಿದ್ಯಾನಿನ ಡೇರೆಯ ಬಟ್ಟೆ ಅಲ್ಲಾಡ್ತಿತ್ತು.+
8 ಯೆಹೋವನೇ, ನಿನಗೆ ನದಿಗಳ ಮೇಲೆ ಸಿಟ್ಟು ಬಂತಾ?
ನಿನ್ನ ಉರಿಯೋ ಕೋಪ ನದಿಗಳ ಮೇಲಾ?
ಇಲ್ಲಾ ನಿನ್ನ ಕ್ರೋಧ ಸಮುದ್ರದ ಮೇಲಾ?+
9 ನೀನು ನಿನ್ನ ಬಿಲ್ಲನ್ನ ತಗೊಂಡು ಅದನ್ನ ಸಿದ್ಧವಾಗಿ ಇಟ್ಕೊಳ್ತೀಯ.
ನಿನ್ನ ಮಾತನ್ನ ನಿಜ ಮಾಡೋಕೆ ಕೋಲುಗಳು* ಎದ್ದು ನಿಂತಿವೆ. (ಸೆಲಾ)
ನೀನು ನದಿಗಳಿಂದ ಭೂಮಿಯನ್ನ ಸೀಳಿಬಿಡ್ತೀಯ.
10 ನಿನ್ನನ್ನ ನೋಡಿ ಬೆಟ್ಟಗಳು ನೋವಿಂದ ವಿಲವಿಲಾ ಅಂತ ಒದ್ದಾಡಿದ್ವು.+
ರಭಸವಾದ ಮಳೆಯಿಂದ ದೇಶದಲ್ಲಿ ಪ್ರವಾಹ ಆಯ್ತು.
ಭೂಮಿಯ ಆಳದಿಂದ ಸಾಗರ ಗರ್ಜಿಸಿ,+
ತನ್ನ ನೀರನ್ನ ಮೇಲಕ್ಕೆ ಹಾಕ್ತು.
11 ನಿನ್ನ ಬಾಣಗಳು ಬೆಳಕಿನ ತರ ತೂರಿಹೋದ್ವು.+
ನಿನ್ನ ಈಟಿ ಪಳಪಳ ಹೊಳೀತು.
ಹಾಗಾಗಿ ಸೂರ್ಯಚಂದ್ರ ತಮ್ಮತಮ್ಮ ಜಾಗದಲ್ಲಿ ನಿಂತುಬಿಟ್ರು.+
12 ವಿಪರೀತ ಕೋಪದಿಂದ ನೀನು ಭೂಮಿ ಮೇಲೆ ನಡ್ಕೊಂಡು ಹೋದೆ.
ಸಿಟ್ಟಿಂದ ಜನಾಂಗಗಳನ್ನ ತುಳಿದುಬಿಟ್ಟೆ.
13 ನಿನ್ನ ಜನ್ರನ್ನ ರಕ್ಷಿಸೋಕೆ, ನಿನ್ನ ಅಭಿಷಿಕ್ತನನ್ನ ಕಾಪಾಡೋಕೆ ನೀನು ಹೋದೆ.
ಕೆಟ್ಟವನ ಮನೆಯ ನಾಯಕನನ್ನ* ಜಜ್ಜಿಬಿಟ್ಟೆ.
ಆ ಮನೆ ಮೇಲಿಂದ* ಹಿಡಿದು ಅಡಿಪಾಯದ ತನಕ ನಾಶ ಮಾಡಿಬಿಟ್ಟೆ. (ಸೆಲಾ)
14 ಅವನ ವೀರ ಸೈನಿಕರು ನನ್ನನ್ನ ಚದರಿಸೋಕೆ ಸುಂಟರಗಾಳಿ ತರ ಬಂದ್ರು,
ಯಾಕಂದ್ರೆ ಕಷ್ಟದಲ್ಲಿ ಇರುವವ್ರನ್ನ ಗುಟ್ಟಾಗಿ ನುಂಗೋದಂದ್ರೆ ಅವ್ರಿಗೆ ತುಂಬ ಇಷ್ಟ.
ಆದ್ರೆ ನೀನು ಅವನ ವೀರ ಸೈನಿಕರ ತಲೆಗಳನ್ನ ಅವನ ಆಯುಧಗಳಿಂದಾನೇ* ಜಜ್ಜಿಬಿಟ್ಟೆ.
15 ನೀನು ನಿನ್ನ ಕುದುರೆಗಳನ್ನ ತಗೊಂಡು ಸಮುದ್ರವನ್ನ,
ಅದ್ರ ದೊಡ್ಡದೊಡ್ಡ ಅಲೆಗಳನ್ನ ತುಳಿತಾ ಬಂದೆ.
ನನ್ನ ಮೂಳೆಗಳು ಕೊಳೆತು ಹೋದ್ವು.+
ನನ್ನ ಕಾಲು ಗಡಗಡ ಅಂತ ನಡುಗ್ತು.
ಆದ್ರೆ ನಾನು ಕಷ್ಟದ ಆ ದಿನಕ್ಕಾಗಿ ಸಮಾಧಾನವಾಗಿ ಕಾಯ್ತೀನಿ.+
ಯಾಕಂದ್ರೆ, ಆ ದಿನ ಧಾವಿಸಿ ಬರ್ತಿರೋದು ನಮ್ಮನ್ನ ದಾಳಿ ಮಾಡೋ ಜನ್ರ ಮೇಲೆ.
17 ಅಂಜೂರದ ಮರ ಚಿಗುರದಿದ್ರೂ,
ದ್ರಾಕ್ಷಾಬಳ್ಳಿಗಳಲ್ಲಿ ದಾಕ್ಷಿಗಳು ಸಿಗದಿದ್ರೂ,
ಆಲಿವ್ ಮರ ಹಣ್ಣು ಕೊಡದಿದ್ರೂ,
ಹೊಲಗಳಲ್ಲಿ ಬೆಳೆ ಬೆಳೀದಿದ್ರೂ,
ಹಟ್ಟಿಯೊಳಗಿನ ಕುರಿಗಳು ಕಾಣದೆ ಹೋದ್ರೂ,
ಕೊಟ್ಟಿಗೆಗಳ ಒಳಗೆ ಪ್ರಾಣಿಗಳು ಇಲ್ಲದಿದ್ರೂ,
18 ನಾನು ಮಾತ್ರ ಯೆಹೋವನಿಂದಾಗಿ ಖುಷಿಪಡ್ತೀನಿ.
ನನ್ನ ರಕ್ಷಕನಾದ ದೇವರಿಂದಾಗಿ ಸಂತೋಷಪಡ್ತೀನಿ.+
19 ವಿಶ್ವದ ರಾಜ ಯೆಹೋವನೇ ನನ್ನ ಬಲ.+
ಆತನು ನನ್ನ ಕಾಲುಗಳನ್ನ ಜಿಂಕೆಯ ಕಾಲುಗಳ ಹಾಗೆ ಮಾಡ್ತಾನೆ.
ನನ್ನನ್ನ ಎತ್ತರದ ಜಾಗಗಳಲ್ಲಿ ನಡಿಸ್ತಾನೆ.+
ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆಯನ್ನ ನನ್ನ ತಂತಿವಾದ್ಯಗಳ ಜೊತೆ ಹಾಡಬೇಕು.