ಕೀರ್ತನೆ
ದಾವೀದನ ಮಧುರ ಗೀತೆ.
108 ದೇವರೇ, ನನ್ನ ಹೃದಯ ಸ್ಥಿರವಾಗಿದೆ,
ನನ್ನ ತನುಮನದಿಂದ ಹಾಡ್ತೀನಿ, ಸಂಗೀತ ರಚಿಸ್ತೀನಿ.+
2 ತಂತಿವಾದ್ಯವೇ, ಎಚ್ಚರ ಆಗು. ಸಂಗೀತ ವಾದ್ಯಗಳೇ,+ ನೀವೂ ಎಚ್ಚರವಾಗಿ.
ನಾನು ನಸುಕನ್ನ ಎಬ್ಬಿಸ್ತೀನಿ.
3 ಯೆಹೋವನೇ ದೇಶಗಳ ಜನ್ರ ಮಧ್ಯ ನಾನು ನಿನ್ನನ್ನ ಕೊಂಡಾಡ್ತೀನಿ,
ಅವ್ರ ಮಧ್ಯ ನಿನ್ನನ್ನ ಹೊಗಳ್ತೀನಿ.*
4 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು.
ಅದು ಆಕಾಶವನ್ನು, ನಿನ್ನ ಸತ್ಯತೆ ಗಗನವನ್ನು ಮುಟ್ಟುತ್ತೆ.+
5 ದೇವರೇ, ನಿನ್ನ ಮಹಿಮೆ ಭೂಮಿಯಲ್ಲೆಲ್ಲಾ ಇರಲಿ,
ಮೇಲೆ ಸ್ವರ್ಗದಲ್ಲೂ ನಿನಗೆ ಘನತೆಯಾಗಲಿ.+
6 ನಿನ್ನ ಬಲಗೈಯಿಂದ ನಮ್ಮನ್ನ ಕಾಪಾಡು, ನನಗೆ ಉತ್ರ ಕೊಡು,
ಆಗ ನಿನ್ನ ಪ್ರೀತಿಪಾತ್ರರು ಉಳಿತಾರೆ.+
7 ದೇವರು ಪವಿತ್ರನಾಗಿ ಇರೋದ್ರಿಂದ* ಮಾತಾಡಿದ್ದಾನೆ:
9 ಮೋವಾಬ್ ನನ್ನ ಕೈಕಾಲನ್ನ ತೊಳೆಯೋ ಪಾತ್ರೆ.+
ಎದೋಮಿನ ಮೇಲೆ ನಾನು ನನ್ನ ಚಪ್ಪಲಿ ಎಸೀತೀನಿ.+
ಫಿಲಿಷ್ಟಿಯನ್ನ ಸೋಲಿಸಿ ನಾನು ಖುಷಿಪಡ್ತೀನಿ.+
10 ಭದ್ರಕೋಟೆ ಇರೋ ಪಟ್ಟಣಕ್ಕೆ ನನ್ನನ್ನ ಯಾರು ಕರ್ಕೊಂಡು ಹೋಗ್ತಾರೆ?
ಎದೋಮಿನ ತನಕ ಯಾರು ನನ್ನನ್ನ ನಡಿಸ್ತಾರೆ?+
11 ದೇವರೇ, ನಿಜವಾಗ್ಲೂ ನಮ್ಮನ್ನ ಅಲ್ಲಿಗೆ ಕರ್ಕೊಂಡು ಹೋಗೋನು ನೀನೇ!
ಆದ್ರೆ ನೋಡು, ನೀನು ನಮ್ಮನ್ನ ತಳ್ಳಿಬಿಟ್ಟಿದ್ದೀಯ,
ನಮ್ಮ ದೇವರಾಗಿರೋ ನೀನು ಈಗ ನಮ್ಮ ಸೈನ್ಯದ ಜೊತೆ ಬರಲ್ಲ.+