ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೋಶುವ ಮುಖ್ಯಾಂಶಗಳು

      • ಗಿಲ್ಗಾಲಲ್ಲಿ ಸುನ್ನತಿ ಮಾಡಿದ್ರು (1-9)

      • ಪಸ್ಕ ಹಬ್ಬ ಮಾಡಿದ್ರು; ಮನ್ನ ನಿಂತೋಯ್ತು (10-12)

      • ಯೆಹೋವನ ಸೈನ್ಯದ ನಾಯಕ (13-15)

ಯೆಹೋಶುವ 5:1

ಪಾದಟಿಪ್ಪಣಿ

  • *

    ಅಕ್ಷ. “ಹೃದಯ ಕರಗ್ತು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 10:15, 16
  • +ಅರ 13:29
  • +ವಿಮೋ 15:15; ಯೆಹೋ 2:24
  • +ಯೆಹೋ 2:9-11

ಯೆಹೋಶುವ 5:2

ಪಾದಟಿಪ್ಪಣಿ

  • *

    ಅಕ್ಷ. “ಮತ್ತೆ ಸುನ್ನತಿಮಾಡಿಸು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 17:9-11

ಯೆಹೋಶುವ 5:3

ಪಾದಟಿಪ್ಪಣಿ

  • *

    ಅರ್ಥ “ಮುಂದೊಗಲಿನ ಗುಡ್ಡ”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 5:8, 9

ಯೆಹೋಶುವ 5:4

ಪಾದಟಿಪ್ಪಣಿ

  • *

    ಅಥವಾ “ಸೈನ್ಯದಲ್ಲಿ ಕೆಲಸ ಮಾಡೋಷ್ಟು ವಯಸ್ಸಿನ ಗಂಡಸ್ರೆಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಅರ 14:29; 26:65; ಧರ್ಮೋ 2:14

ಯೆಹೋಶುವ 5:6

ಮಾರ್ಜಿನಲ್ ರೆಫರೆನ್ಸ್

  • +ಅರ 14:22, 23
  • +ಅರ 14:33; ಧರ್ಮೋ 1:3
  • +ವಿಮೋ 3:8; ಅರ 13:26, 27; ಯೆಹೆ 20:6
  • +ಆದಿ 13:14, 15; ವಿಮೋ 33:1
  • +ಧರ್ಮೋ 1:35

ಯೆಹೋಶುವ 5:7

ಮಾರ್ಜಿನಲ್ ರೆಫರೆನ್ಸ್

  • +ಅರ 14:31

ಯೆಹೋಶುವ 5:9

ಪಾದಟಿಪ್ಪಣಿ

  • *

    ಅಕ್ಷ. “ಉರುಳಿಸಿಬಿಡ್ತೀನಿ.”

  • *

    ಅರ್ಥ “ಉರುಳಿಸಿ ಬಿಡು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:19; 5:3

ಯೆಹೋಶುವ 5:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:24, 25; ಅರ 9:5

ಯೆಹೋಶುವ 5:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:18

ಯೆಹೋಶುವ 5:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 16:35
  • +ಧರ್ಮೋ 6:10-12; 8:10

ಯೆಹೋಶುವ 5:13

ಮಾರ್ಜಿನಲ್ ರೆಫರೆನ್ಸ್

  • +ಆದಿ 18:2; ನ್ಯಾಯ 13:6; ಅಕಾ 1:10
  • +ವಿಮೋ 23:23; ಅರ 22:23; 1ಪೂರ್ವ 21:16

ಯೆಹೋಶುವ 5:14

ಪಾದಟಿಪ್ಪಣಿ

  • *

    ಅಥವಾ “ಮುಖ್ಯಸ್ಥ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:20; 1ಅರ 22:19; ದಾನಿ 10:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2018, ಪು. 23

    ಕಾವಲಿನಬುರುಜು,

    12/1/2004, ಪು. 9

    6/15/1998, ಪು. 24

ಯೆಹೋಶುವ 5:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:4, 5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೋ. 5:1ಆದಿ 10:15, 16
ಯೆಹೋ. 5:1ಅರ 13:29
ಯೆಹೋ. 5:1ವಿಮೋ 15:15; ಯೆಹೋ 2:24
ಯೆಹೋ. 5:1ಯೆಹೋ 2:9-11
ಯೆಹೋ. 5:2ಆದಿ 17:9-11
ಯೆಹೋ. 5:3ಯೆಹೋ 5:8, 9
ಯೆಹೋ. 5:4ಅರ 14:29; 26:65; ಧರ್ಮೋ 2:14
ಯೆಹೋ. 5:6ಅರ 14:22, 23
ಯೆಹೋ. 5:6ಅರ 14:33; ಧರ್ಮೋ 1:3
ಯೆಹೋ. 5:6ವಿಮೋ 3:8; ಅರ 13:26, 27; ಯೆಹೆ 20:6
ಯೆಹೋ. 5:6ಆದಿ 13:14, 15; ವಿಮೋ 33:1
ಯೆಹೋ. 5:6ಧರ್ಮೋ 1:35
ಯೆಹೋ. 5:7ಅರ 14:31
ಯೆಹೋ. 5:9ಯೆಹೋ 4:19; 5:3
ಯೆಹೋ. 5:10ವಿಮೋ 12:24, 25; ಅರ 9:5
ಯೆಹೋ. 5:11ವಿಮೋ 12:18
ಯೆಹೋ. 5:12ವಿಮೋ 16:35
ಯೆಹೋ. 5:12ಧರ್ಮೋ 6:10-12; 8:10
ಯೆಹೋ. 5:13ಆದಿ 18:2; ನ್ಯಾಯ 13:6; ಅಕಾ 1:10
ಯೆಹೋ. 5:13ವಿಮೋ 23:23; ಅರ 22:23; 1ಪೂರ್ವ 21:16
ಯೆಹೋ. 5:14ವಿಮೋ 23:20; 1ಅರ 22:19; ದಾನಿ 10:13
ಯೆಹೋ. 5:15ವಿಮೋ 3:4, 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೋಶುವ 5:1-15

ಯೆಹೋಶುವ

5 ಇಸ್ರಾಯೇಲ್ಯರು ಯೋರ್ದನ್‌ ನದಿ ದಾಟೋಕೆ ಯೆಹೋವ ಅದನ್ನ ಒಣಗಿಸಿಬಿಟ್ಟನು ಅನ್ನೋ ಸುದ್ದಿ ಯೋರ್ದನಿನ ಪಶ್ಚಿಮದಲ್ಲಿದ್ದ ಅಮೋರಿಯರ+ ಮತ್ತು ಸಮುದ್ರದ ಕಡೆಗಿದ್ದ ಕಾನಾನ್ಯರ+ ಎಲ್ಲ ರಾಜರಿಗೆ ಮುಟ್ತು. ಇದನ್ನ ಕೇಳಿ ಭಯದಿಂದ ಅವ್ರ ಹೃದಯ ನಡುಗ್ತು.*+ ಇಸ್ರಾಯೇಲ್ಯರಿಂದಾಗಿ ಅವ್ರಿಗೆ ಧೈರ್ಯನೇ ಇಲ್ಲದ ಹಾಗಾಯ್ತು.+

2 ಆ ಸಮಯದಲ್ಲಿ ಯೆಹೋವ ಯೆಹೋಶುವನಿಗೆ “ಕಲ್ಲಿನ ಚೂರಿಗಳನ್ನ ಮಾಡ್ಕೊಂಡು ಇಸ್ರಾಯೇಲಿನ ಗಂಡಸ್ರಿಗೆ ಸುನ್ನತಿ ಮಾಡು”*+ ಅಂದನು. 3 ಆಗ ಯೆಹೋಶುವ ಕಲ್ಲಿನ ಚೂರಿಗಳನ್ನ ಮಾಡ್ಕೊಂಡು ಗಿಬೆಯತ್‌-ಹಾರಲೊತ್‌* ಅನ್ನೋ ಜಾಗದಲ್ಲಿ ಇಸ್ರಾಯೇಲಿನ ಗಂಡಸ್ರಿಗೆ ಸುನ್ನತಿ ಮಾಡಿದನು.+ 4 ಯೆಹೋಶುವ ಯಾಕೆ ಸುನ್ನತಿ ಮಾಡಿದನಂದ್ರೆ, ಈಜಿಪ್ಟಿಂದ ಬಂದಿದ್ದ ಗಂಡಸ್ರೆಲ್ಲ ಅಂದ್ರೆ ಯುದ್ಧ ಮಾಡ್ತಿದ್ದ ಗಂಡಸ್ರೆಲ್ಲ* ಕಾಡಲ್ಲಿ ಪ್ರಯಾಣ ಮಾಡುವಾಗ ತೀರಿಹೋದ್ರು.+ 5 ಈಜಿಪ್ಟನ್ನ ಬಿಟ್ಟುಬಂದ ಎಲ್ಲ ಗಂಡಸ್ರಿಗೆ ಸುನ್ನತಿ ಆಗಿತ್ತು. ಆದ್ರೆ ಅಲ್ಲಿಂದ ಹೊರಟ ಮೇಲೆ ಕಾಡಲ್ಲಿ ಹುಟ್ಟಿದವರಿಗೆ ಸುನ್ನತಿ ಆಗಿರಲಿಲ್ಲ. 6 ಈಜಿಪ್ಟನ್ನ ಬಿಟ್ಟು ಬಂದ ಇಡೀ ಜನಾಂಗ ಅಂದ್ರೆ ಯುದ್ಧ ಮಾಡೋಕೆ ಅರ್ಹರಾಗಿದ್ದ ಗಂಡಸ್ರೆಲ್ಲ ಯೆಹೋವನ ಮಾತು ಕೇಳದೆ ಇದ್ದದ್ರಿಂದ ಅವ್ರೆಲ್ಲ ಸಾಯೋ ತನಕ+ ಇಸ್ರಾಯೇಲ್ಯರು ಕಾಡಲ್ಲೇ 40 ವರ್ಷ ಅಲೆದಾಡಿದ್ರು.+ ಯೆಹೋವ ತನ್ನ ಜನ್ರಿಗೆ ಹಾಲೂ ಜೇನೂ ಹರಿಯೋ ದೇಶ+ ಕೊಡ್ತೀನಿ ಅಂತ ಅವ್ರ ತಾತ-ಮುತ್ತಾತರಿಗೆ ಮಾತು ಕೊಟ್ಟಿದ್ದನು.+ ಆದ್ರೆ ಯಾವುದೇ ಕಾರಣಕ್ಕೂ ಅವ್ರಿಗೆ ಆ ದೇಶ ನೋಡೋಕೆ ಬಿಡಲ್ಲ ಅಂತ ಯೆಹೋವ ಶಪಥ ಮಾಡಿದ್ದನು.+ 7 ಹಾಗಾಗಿ ದೇವರು ಅವ್ರ ಬದ್ಲು ಅವ್ರ ಮಕ್ಕಳನ್ನ ಆ ದೇಶಕ್ಕೆ ಕರ್ಕೊಂಡು ಬಂದನು.+ ಯೆಹೋಶುವ ಅವ್ರಿಗೆ ಸುನ್ನತಿ ಮಾಡಿದ. ಯಾಕಂದ್ರೆ ಪ್ರಯಾಣದ ಸಮಯದಲ್ಲಿ ಅವ್ರಿಗೆ ಸುನ್ನತಿ ಆಗಿರಲಿಲ್ಲ.

8 ಇಡೀ ಜನಾಂಗಕ್ಕೆ ಸುನ್ನತಿಯಾದ ಮೇಲೆ ಅವರು ಚೇತರಿಸ್ಕೊಳ್ಳೋ ತನಕ ತಾವು ಪಾಳೆಯ ಹೂಡಿದ್ದಲ್ಲೇ ಉಳ್ಕೊಂಡ್ರು.

9 ಆಗ ಯೆಹೋವ ಯೆಹೋಶುವನಿಗೆ “ಈಜಿಪ್ಟ್‌ ಜನ್ರು ನಿಮಗೆ ಮಾಡಿದ ಅವಮಾನವನ್ನ ಇವತ್ತು ತೆಗೆದುಹಾಕ್ತಿನಿ”* ಅಂದನು. ಹಾಗಾಗಿ ಇವತ್ತಿಗೂ ಆ ಜಾಗಕ್ಕೆ ಗಿಲ್ಗಾಲ್‌*+ ಅಂತ ಹೆಸ್ರಿದೆ.

10 ಇಸ್ರಾಯೇಲ್ಯರು ಯೆರಿಕೋವಿನ ಬಯಲು ಪ್ರದೇಶದ ಗಿಲ್ಗಾಲಲ್ಲಿ ಹೂಡಿದ್ದ ಪಾಳೆಯದಲ್ಲೇ ಇದ್ರು. ಆ ತಿಂಗಳ 14ನೇ ದಿನ ಸಾಯಂಕಾಲ ಪಸ್ಕ ಹಬ್ಬ ಮಾಡಿದ್ರು.+ 11 ಪಸ್ಕ ಹಬ್ಬದ ಮಾರನೇ ದಿನ ದೇಶದ ಬೆಳೆಯನ್ನ ತಿನ್ನೋಕೆ ಶುರು ಮಾಡಿದ್ರು. ಅದೇ ದಿನ ಅವರು ಹುಳಿ ಇಲ್ಲದ ರೊಟ್ಟಿ,+ ಸುಟ್ಟ ಧಾನ್ಯಗಳನ್ನ ತಿಂದ್ರು. 12 ದೇಶದ ಬೆಳೆಯನ್ನ ತಿಂದ ದಿನಾನೇ ಮನ್ನ ನಿಂತೋಯ್ತು. ಅವತ್ತಿಂದ ಇಸ್ರಾಯೇಲ್ಯರಿಗೆ ಮನ್ನ ಸಿಗಲಿಲ್ಲ.+ ಆದ್ರೆ ಆ ವರ್ಷದಿಂದ ಅವರು ಕಾನಾನ್‌ ದೇಶದ ಬೆಳೆಯನ್ನ ತಿನ್ನೋಕೆ ಶುರು ಮಾಡಿದ್ರು.+

13 ಒಂದಿನ ಯೆಹೋಶುವ ಯೆರಿಕೋವಿನ ಹತ್ರ ಇದ್ದಾಗ ಒಬ್ಬ ಮನುಷ್ಯ+ ಕೈಯಲ್ಲಿ ಕತ್ತಿ ಹಿಡ್ಕೊಂಡು ನಿಂತಿರೋದನ್ನ+ ನೋಡಿದ. ಯೆಹೋಶುವ ಅವನ ಹತ್ರ ಹೋಗಿ “ನೀನು ನಮ್ಮ ಕಡೆಯವ್ನಾ ಅಥವಾ ನಮ್ಮ ವಿರೋಧಿಗಳ ಕಡೆಯವ್ನಾ?” ಅಂತ ಕೇಳಿದ. 14 ಅದಕ್ಕೆ ಅವನು “ನಾನು ಇಬ್ರ ಕಡೆಯವನೂ ಅಲ್ಲ, ನಾನು ಯೆಹೋವನ ಸೈನ್ಯದ ನಾಯಕ”*+ ಅಂದನು. ಆಗ ಯೆಹೋಶುವ ಮಂಡಿಯೂರಿ ಬಗ್ಗಿ “ನಿಮ್ಮ ಈ ಸೇವಕ ಏನ್‌ ಮಾಡಬೇಕು, ಹೇಳಿ ಯಜಮಾನ” ಅಂದ. 15 ಆಗ ಯೆಹೋವನ ಸೈನ್ಯದ ನಾಯಕ ಯೆಹೋಶುವನಿಗೆ “ನಿನ್ನ ಚಪ್ಪಲಿ ಬಿಚ್ಚಿಡು, ಯಾಕಂದ್ರೆ ನೀನು ನಿಂತಿರೋ ಜಾಗ ಪವಿತ್ರವಾದ ಜಾಗ” ಅಂದನು. ತಕ್ಷಣ ಯೆಹೋಶುವ ಹಾಗೇ ಮಾಡಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ