ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಕೊರಿಂಥ 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಕೊರಿಂಥ ಮುಖ್ಯಾಂಶಗಳು

      • ಪೌಲ ಮತ್ತು ಮಹಾ ಅಪೊಸ್ತಲರು (1-15)

      • ಅಪೊಸ್ತಲನಾಗಿ ಪೌಲ ಪಟ್ಟ ಕಷ್ಟಗಳು (16-33)

2 ಕೊರಿಂಥ 11:2

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 2:19; ಎಫೆ 5:23; ಪ್ರಕ 21:2, 9

2 ಕೊರಿಂಥ 11:3

ಮಾರ್ಜಿನಲ್ ರೆಫರೆನ್ಸ್

  • +ಆದಿ 3:4, 5; ಯೋಹಾ 8:44
  • +1ತಿಮೊ 6:3-5; ಇಬ್ರಿ 13:9; 2ಪೇತ್ರ 3:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 220

    ಕಾವಲಿನಬುರುಜು,

    10/15/2002, ಪು. 8

2 ಕೊರಿಂಥ 11:4

ಮಾರ್ಜಿನಲ್ ರೆಫರೆನ್ಸ್

  • +ಗಲಾ 1:7, 8

2 ಕೊರಿಂಥ 11:5

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:23

2 ಕೊರಿಂಥ 11:6

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 10:10

2 ಕೊರಿಂಥ 11:7

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:3; 1ಕೊರಿಂ 9:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 148-150

    ಕಾವಲಿನಬುರುಜು (ಅಧ್ಯಯನ),

    4/2019, ಪು. 4

2 ಕೊರಿಂಥ 11:8

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 4:10

2 ಕೊರಿಂಥ 11:9

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 4:15, 16
  • +1ಥೆಸ 2:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 151

    ಕಾವಲಿನಬುರುಜು,

    1/1/1991, ಪು. 28-29

2 ಕೊರಿಂಥ 11:10

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 9:14, 15

2 ಕೊರಿಂಥ 11:12

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 9:11, 12

2 ಕೊರಿಂಥ 11:13

ಮಾರ್ಜಿನಲ್ ರೆಫರೆನ್ಸ್

  • +ರೋಮ 16:17, 18; 2ಪೇತ್ರ 2:1

2 ಕೊರಿಂಥ 11:14

ಮಾರ್ಜಿನಲ್ ರೆಫರೆನ್ಸ್

  • +ಗಲಾ 1:8; 2ಥೆಸ 2:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 171

    ಕಾವಲಿನಬುರುಜು,

    2/15/2004, ಪು. 4-5

    3/1/2002, ಪು. 11

2 ಕೊರಿಂಥ 11:15

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 16:27; ಫಿಲಿ 3:18, 19; 2ತಿಮೊ 4:14

2 ಕೊರಿಂಥ 11:22

ಮಾರ್ಜಿನಲ್ ರೆಫರೆನ್ಸ್

  • +ಅಕಾ 22:3
  • +ರೋಮ 11:1; ಫಿಲಿ 3:4, 5

2 ಕೊರಿಂಥ 11:23

ಮಾರ್ಜಿನಲ್ ರೆಫರೆನ್ಸ್

  • +ರೋಮ 11:13; 1ಕೊರಿಂ 15:10
  • +ಅಕಾ 16:23, 24
  • +ಅಕಾ 9:15, 16; 2ಕೊರಿಂ 6:4, 5; 1ಪೇತ್ರ 2:20, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2021, ಪು. 26

    ಕಾವಲಿನಬುರುಜು,

    7/15/2000, ಪು. 26-27

2 ಕೊರಿಂಥ 11:24

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 25:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 26-27

2 ಕೊರಿಂಥ 11:25

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:22
  • +ಅಕಾ 14:19
  • +ಅಕಾ 27:41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 26-27

    1/1/1991, ಪು. 22, 26

2 ಕೊರಿಂಥ 11:26

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:3; 23:10
  • +ಅಕಾ 14:5, 6
  • +ಅಕಾ 13:50

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 26-27

    12/1/1992, ಪು. 12

    ಕಾವಲಿನಬುರುಜು

2 ಕೊರಿಂಥ 11:27

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:31
  • +1ಕೊರಿಂ 4:11
  • +2ಕೊರಿಂ 6:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2000, ಪು. 26-27

2 ಕೊರಿಂಥ 11:28

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 2:4; ಕೊಲೊ 2:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!, 11/8/1998, ಪು. 26

2 ಕೊರಿಂಥ 11:33

ಪಾದಟಿಪ್ಪಣಿ

  • *

    ಅಥವಾ “ಚಾಪೆಕಡ್ಡಿಯ ಬುಟ್ಟಿಯಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:24, 25

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಕೊರಿಂ. 11:2ಮಾರ್ಕ 2:19; ಎಫೆ 5:23; ಪ್ರಕ 21:2, 9
2 ಕೊರಿಂ. 11:3ಆದಿ 3:4, 5; ಯೋಹಾ 8:44
2 ಕೊರಿಂ. 11:31ತಿಮೊ 6:3-5; ಇಬ್ರಿ 13:9; 2ಪೇತ್ರ 3:17
2 ಕೊರಿಂ. 11:4ಗಲಾ 1:7, 8
2 ಕೊರಿಂ. 11:52ಕೊರಿಂ 11:23
2 ಕೊರಿಂ. 11:62ಕೊರಿಂ 10:10
2 ಕೊರಿಂ. 11:7ಅಕಾ 18:3; 1ಕೊರಿಂ 9:18
2 ಕೊರಿಂ. 11:8ಫಿಲಿ 4:10
2 ಕೊರಿಂ. 11:9ಫಿಲಿ 4:15, 16
2 ಕೊರಿಂ. 11:91ಥೆಸ 2:9
2 ಕೊರಿಂ. 11:101ಕೊರಿಂ 9:14, 15
2 ಕೊರಿಂ. 11:121ಕೊರಿಂ 9:11, 12
2 ಕೊರಿಂ. 11:13ರೋಮ 16:17, 18; 2ಪೇತ್ರ 2:1
2 ಕೊರಿಂ. 11:14ಗಲಾ 1:8; 2ಥೆಸ 2:9
2 ಕೊರಿಂ. 11:15ಮತ್ತಾ 16:27; ಫಿಲಿ 3:18, 19; 2ತಿಮೊ 4:14
2 ಕೊರಿಂ. 11:22ಅಕಾ 22:3
2 ಕೊರಿಂ. 11:22ರೋಮ 11:1; ಫಿಲಿ 3:4, 5
2 ಕೊರಿಂ. 11:23ರೋಮ 11:13; 1ಕೊರಿಂ 15:10
2 ಕೊರಿಂ. 11:23ಅಕಾ 16:23, 24
2 ಕೊರಿಂ. 11:23ಅಕಾ 9:15, 16; 2ಕೊರಿಂ 6:4, 5; 1ಪೇತ್ರ 2:20, 21
2 ಕೊರಿಂ. 11:24ಧರ್ಮೋ 25:3
2 ಕೊರಿಂ. 11:25ಅಕಾ 16:22
2 ಕೊರಿಂ. 11:25ಅಕಾ 14:19
2 ಕೊರಿಂ. 11:25ಅಕಾ 27:41
2 ಕೊರಿಂ. 11:26ಅಕಾ 20:3; 23:10
2 ಕೊರಿಂ. 11:26ಅಕಾ 14:5, 6
2 ಕೊರಿಂ. 11:26ಅಕಾ 13:50
2 ಕೊರಿಂ. 11:27ಅಕಾ 20:31
2 ಕೊರಿಂ. 11:271ಕೊರಿಂ 4:11
2 ಕೊರಿಂ. 11:272ಕೊರಿಂ 6:4, 5
2 ಕೊರಿಂ. 11:282ಕೊರಿಂ 2:4; ಕೊಲೊ 2:1
2 ಕೊರಿಂ. 11:33ಅಕಾ 9:24, 25
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಕೊರಿಂಥ 11:1-33

ಕೊರಿಂಥದವರಿಗೆ ಬರೆದ ಎರಡನೇ ಪತ್ರ

11 ನಾನು ಬುದ್ಧಿ ಇಲ್ಲದವನು ಅಂತ ನಿಮಗೆ ಅನಿಸಿದ್ರೂ ನನ್ನನ್ನ ಸಹಿಸ್ಕೊಳ್ಳಿ ಅಂತ ಕೇಳ್ಕೊಳ್ತೀನಿ. ನಿಜ ಹೇಳಬೇಕಾದ್ರೆ ನೀವು ನನ್ನನ್ನ ಸಹಿಸ್ಕೊಳ್ತಾ ಇದ್ದೀರ. 2 ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇರೋ ಹಾಗೆ ನನಗೂ ನಿಮ್ಮ ಬಗ್ಗೆ ತುಂಬ ಚಿಂತೆ ಇದೆ. ಯಾಕಂದ್ರೆ ನಾನು ನಿಮಗೆ ಒಬ್ಬ ಮದುಮಗನ ಜೊತೆ ಅಂದ್ರೆ ಕ್ರಿಸ್ತನ ಜೊತೆ ಮದುವೆ ನಿಶ್ಚಯ ಮಾಡಿದ್ದೀನಿ. ಆತನಿಗೆ ಪವಿತ್ರ ಕನ್ಯೆ ತರ ನಿಮ್ಮನ್ನ ಒಪ್ಪಿಸೋಕೆ ಬಯಸ್ತೀನಿ.+ 3 ಹಾವು ಕುತಂತ್ರದಿಂದ ಹವ್ವಳಿಗೆ ಮೋಸ ಮಾಡಿದ ತರ ನಿಮ್ಮ ಯೋಚ್ನೆ ಎಲ್ಲಿ ಹಾಳಾಗುತ್ತೋ,+ ಕ್ರಿಸ್ತನಿಗೆ ನಂಬಿಗಸ್ತರಾಗಿ ಪವಿತ್ರವಾಗಿ ಉಳಿಬೇಕಾದ ನೀವು ಎಲ್ಲಿ ತಪ್ಪಿಹೋಗ್ತಿರೋ ಅಂತ ನನಗೆ ಭಯ ಆಗ್ತಿದೆ.+ 4 ಯಾಕಂದ್ರೆ ಯೇಸು ಬಗ್ಗೆ ನಾವು ನಿಮಗೆ ಸಾರಿದ ವಿಷ್ಯ ಬಿಟ್ಟು ಯಾವನಾದ್ರೂ ಬೇರೆ ಏನಾದ್ರೂ ಸಾರಿದ್ರೆ ಅಥವಾ ಇಲ್ಲಿ ತನಕ ನಿಮ್ಮಲ್ಲಿದ್ದ ಮನೋಭಾವಕ್ಕಿಂತ ಬೇರೆ ಮನೋಭಾವವನ್ನ ನಿಮ್ಮಲ್ಲಿ ಹುಟ್ಟಿಸಿದ್ರೆ ಅಥವಾ ನೀವು ನಂಬಿದ ಸಿಹಿಸುದ್ದಿಯನ್ನ ಬಿಟ್ಟು+ ಬೇರೆ ಸಿಹಿಸುದ್ದಿಯನ್ನ ತಿಳಿಸಿದ್ರೆ ನೀವು ಹಿಂದೆಮುಂದೆ ನೋಡ್ದೆ ಅವನ ಮಾತನ್ನ ನಂಬ್ತೀರ. 5 ನಿಮ್ಮ ಆ ಮಹಾ ಅಪೊಸ್ತಲರಿಗಿಂತ ನಾನು ಯಾವುದ್ರಲ್ಲೂ ಕಮ್ಮಿಯಿಲ್ಲ ಅಂದ್ಕೊಳ್ತೀನಿ.+ 6 ನಾನು ಅಷ್ಟು ಚೆನ್ನಾಗಿ ಮಾತಾಡ್ದೇ ಇರಬಹುದು,+ ಆದ್ರೆ ನನಗೆ ಒಳ್ಳೇ ಜ್ಞಾನ ಇದೆ. ಇದನ್ನ ನಾವು ನಿಮಗೆ ಎಲ್ಲ ವಿಧದಲ್ಲೂ ಎಲ್ಲ ವಿಷ್ಯಗಳಲ್ಲೂ ಸ್ಪಷ್ಟವಾಗಿ ತೋರಿಸಿದ್ದೀವಿ.

7 ನೀವು ಮಹಿಮೆ ಪಡಿಬೇಕಂತ ನಾನು ನನ್ನನ್ನೇ ತಗ್ಗಿಸ್ಕೊಂಡೆ, ನಿಮ್ಮಿಂದ ಏನೂ ತಗೊಳ್ಳದೆ ಸಿಹಿಸುದ್ದಿಯನ್ನ ಖುಷಿಖುಷಿಯಿಂದ ಸಾರಿದೆ. ನಾನು ಹೀಗೆ ಮಾಡಿದ್ದು ಪಾಪನಾ?+ 8 ನಿಮ್ಮ ಸೇವೆ ಮಾಡೋಕೆ ನಾನು ಬೇರೆ ಬೇರೆ ಸಭೆಯವ್ರಿಂದ ಸಹಾಯ ಪಡ್ಕೊಂಡೆ. ಇದು ಒಂದು ಅರ್ಥದಲ್ಲಿ ನಾನು ಅವ್ರನ್ನ ಲೂಟಿ ಮಾಡಿದ ಹಾಗಿತ್ತು.+ 9 ನಾನು ನಿಮ್ಮ ಜೊತೆ ಇದ್ದಾಗ ನನಗೆ ಬೇಕಾಗಿರೋದು ನನ್ನ ಹತ್ರ ಇಲ್ಲದಿದ್ರೂ ನಿಮ್ಮ ಮೇಲೆ ಭಾರ ಹಾಕಲಿಲ್ಲ. ಆದ್ರೆ ಮಕೆದೋನ್ಯದಿಂದ ಬಂದ ಸಹೋದರರು ನನಗೆ ಬೇಕಾಗಿದ್ದನ್ನೆಲ್ಲ ಸಾಕಷ್ಟು ಕೊಟ್ಟು ಸಹಾಯ ಮಾಡಿದ್ರು.+ ನಿಮಗೆ ಭಾರವಾಗಿ ಇರಬಾರದು ಅಂತ ನನ್ನಿಂದ ಆಗಿದ್ದನ್ನೆಲ್ಲ ಮಾಡಿದೆ, ಇನ್ಮುಂದೆನೂ ಮಾಡ್ತೀನಿ.+ 10 ಇದ್ರ ಬಗ್ಗೆ ನಾನು ಅಖಾಯದ ಪ್ರದೇಶಗಳಲ್ಲೆಲ್ಲ ಹೆಮ್ಮೆಯಿಂದ ಹೇಳೋದನ್ನ ನಿಲ್ಲಿಸಲ್ಲ.+ ಕ್ರಿಸ್ತನ ಸತ್ಯ ನನ್ನಲ್ಲಿ ಇರೋದು ಎಷ್ಟು ನಿಜನೋ ಇದೂ ಅಷ್ಟೇ ನಿಜ. 11 ನಾನು ಯಾಕೆ ನಿಮಗೆ ಭಾರವಾಗಿ ಇರಲಿಲ್ಲ? ನನಗೆ ನಿಮ್ಮ ಮೇಲೆ ಪ್ರೀತಿಯಿಲ್ಲ ಅಂತನಾ? ನನಗೆ ನಿಮ್ಮ ಮೇಲೆ ಪ್ರೀತಿ ಇದೆ ಅಂತ ದೇವರಿಗೆ ಗೊತ್ತು.

12 ನಾನೀಗ ಮಾಡ್ತಿರೋದನ್ನ ಮುಂದುವರಿಸ್ತೀನಿ.+ ಯಾಕಂದ್ರೆ ‘ನಾವೂ ಅಪೊಸ್ತಲರು’ ಅಂತ ಸಾಬೀತು ಮಾಡೋಕೆ ಇಷ್ಟಪಡ್ತಾ ಕೊಚ್ಕೊಳ್ತಾ ಇರುವವ್ರಿಗೆ ಏನೂ ಕಾರಣ ಸಿಗಬಾರದು ಅಂತ ಹೀಗೆ ಮಾಡ್ತೀನಿ. 13 ಅಂಥವರು ಸುಳ್ಳು ಅಪೊಸ್ತಲರು, ಮೋಸ ಮಾಡುವವರು ಮತ್ತು ಕ್ರಿಸ್ತನ ಅಪೊಸ್ತಲರು ಅಂತ ತೋರಿಸ್ಕೊಳ್ಳೋಕೆ ವೇಷ ಹಾಕೊಳ್ಳೋರು ಆಗಿದ್ದಾರೆ.+ 14 ಇದೇನೂ ಆಶ್ಚರ್ಯ ಅಲ್ಲ, ಯಾಕಂದ್ರೆ ಸೈತಾನ ಕೂಡ ಬೆಳಕಿನ ದೇವದೂತನ ತರ ಕಾಣಿಸ್ಕೊಳ್ಳೋಕೆ ವೇಷ ಹಾಕೊಳ್ತಾ ಇರ್ತಾನೆ.+ 15 ಹಾಗಾಗಿ ಅವನ ಸೇವಕರೂ ನೀತಿಯನ್ನ ಅನುಸರಿಸೋ ಸೇವಕರ ತರ ತೋರಿಸ್ಕೊಳ್ಳೋಕೆ ವೇಷ ಹಾಕೊಳ್ತಾ ಇರೋದು ದೊಡ್ಡದೇನಲ್ಲ. ಆದ್ರೆ ಅವ್ರಿಗೆ ಕೊನೆಗೆ ಬರೋ ಗತಿ ಅವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಇರುತ್ತೆ.+

16 ನಾನು ಮತ್ತೆ ಹೇಳ್ತೀನಿ, ನಾನು ಬುದ್ಧಿ ಇಲ್ಲದವನು ಅಂತ ಯಾರು ಅಂದ್ಕೊಬೇಡಿ. ಒಂದುವೇಳೆ ಹಾಗೆ ಅಂದ್ಕೊಂಡ್ರೂ ಬುದ್ಧಿ ಇಲ್ಲದವನ ತರಾನೇ ನನ್ನನ್ನ ಸೇರಿಸ್ಕೊಳ್ಳಿ. ಆಗ ಸ್ವಲ್ಪನಾದ್ರೂ ಹೆಮ್ಮೆಯಿಂದ ಮಾತಾಡೋಕೆ ನನಗೆ ಆಗುತ್ತೆ. 17 ನಾನೀಗ ಪ್ರಭು ಯೇಸುನ ಅನುಸರಿಸಿ ಮಾತಾಡ್ತಿಲ್ಲ, ಬುದ್ಧಿ ಇಲ್ಲದ ವ್ಯಕ್ತಿ ಆತ್ಮವಿಶ್ವಾಸದಿಂದ ಕೊಚ್ಕೊಳ್ಳೋ ತರ ಮಾತಾಡ್ತಿದ್ದೀನಿ. 18 ತುಂಬ ಜನ ಈ ಲೋಕದ ವಿಷ್ಯಗಳ ಬಗ್ಗೆ ಹೆಮ್ಮೆ ಪಡೋದ್ರಿಂದ ನಾನೂ ಹೆಮ್ಮೆಪಡ್ತೀನಿ. 19 ನೀವು ನಿಮ್ಮನ್ನ ತುಂಬ ಬುದ್ಧಿವಂತರು ಅಂದ್ಕೊಳ್ತೀರಲ್ಲಾ. ಹಾಗಾದ್ರೆ ಅದ್ಹೇಗೆ ನೀವು ಬುದ್ಧಿ ಇಲ್ಲದವ್ರನ್ನ ಖುಷಿಯಿಂದ ಸಹಿಸ್ಕೊಳ್ತಿದ್ದೀರ? 20 ನಿಜ ಹೇಳಬೇಕಾದ್ರೆ ನಿಮ್ಮನ್ನ ದಾಸರಾಗಿ ಮಾಡ್ಕೊಳ್ಳೋರನ್ನ, ನಿಮ್ಮ ಆಸ್ತಿಪಾಸ್ತಿ ನುಂಗಿ ಹಾಕುವವ್ರನ್ನ, ನಿಮ್ಮ ಹತ್ರ ಇರೋದನ್ನ ದೋಚ್ಕೊಳ್ಳೋರನ್ನ, ನಿಮ್ಮನ್ನ ಕೀಳಾಗಿ ನೋಡಿ ತಮ್ಮನ್ನ ಶ್ರೇಷ್ಠರಾಗಿ ಮಾಡ್ಕೊಳ್ಳೋರನ್ನ, ನಿಮ್ಮ ಮುಖಕ್ಕೆ ಬಾರಿಸೋರನ್ನ ನೀವು ಸಹಿಸ್ಕೊಳ್ತೀರ.

21 ಇದನ್ನ ಹೇಳೋಕೆ ನನಗೇ ನಾಚಿಕೆ ಆಗುತ್ತೆ, ಯಾಕಂದ್ರೆ ಸ್ವಲ್ಪ ಜನ ನಮ್ಮನ್ನ ಕೈಲಾಗದವರು ಅಂದ್ಕೊಬಹುದು.

ಹೆಮ್ಮೆಪಡೋಕೆ ಕೆಲವರು ನಾಚಿಕೆಪಡದಿದ್ರೆ ನಾನೂ ಹೆಮ್ಮೆಪಡೋಕೆ ನಾಚಿಕೆಪಡಲ್ಲ. ನನಗೆ ಬುದ್ಧಿಯಿಲ್ಲ ಅಂತ ಅಂದ್ಕೊಂಡ್ರೂ ಪರವಾಗಿಲ್ಲ. 22 ಅವರು ಇಬ್ರಿಯರಾ? ನಾನೂ ಇಬ್ರಿಯನೇ.+ ಅವರು ಇಸ್ರಾಯೇಲ್ಯರಾ? ನಾನೂ ಇಸ್ರಾಯೇಲ್ಯನೇ. ಅವರು ಅಬ್ರಹಾಮನ ಸಂತತಿಯವರಾ? ನಾನೂ ಅವನ ಸಂತತಿಯವನೇ.+ 23 ಅವರು ಕ್ರಿಸ್ತನ ಸೇವಕರಾ? ನಾನು ಹುಚ್ಚನ ತರ ಕಿರಿಚಿ ಹೇಳ್ತೀನಿ, ಅವ್ರಿಗಿಂತ ನಾನು ಇನ್ನೂ ಒಳ್ಳೇ ಸೇವಕ. ಅವ್ರಿಗಿಂತ ತುಂಬ ಕಷ್ಟಪಟ್ಟೆ,+ ತುಂಬ ಸಲ ಜೈಲಿಗೆ ಹೋದೆ,+ ಲೆಕ್ಕ ಇಲ್ಲದಷ್ಟು ಏಟು ತಿಂದೆ, ತುಂಬ ಸಲ ಸಾವಿನ ದವಡೆಯಲ್ಲಿ ಸಿಕ್ಕಿಬಿದ್ದಿದ್ದೆ.+ 24 ಐದು ಸಲ ನನಗೆ ಯೆಹೂದ್ಯರು ಹೊಡೆದ್ರು, ಒಂದೊಂದು ಸಾರಿನೂ 39 ಏಟುಗಳನ್ನ ತಿಂದೆ,+ 25 ಮೂರು ಸಲ ದೊಣ್ಣೆಗಳಿಂದ ಏಟು ತಿಂದೆ,+ ಒಂದು ಸಲ ನನ್ನ ಮೇಲೆ ಕಲ್ಲುಗಳನ್ನ ಎಸೆದ್ರು,+ ಮೂರು ಸಲ ನಾನಿದ್ದ ಹಡಗು ಒಡೆದು ಹೋಯ್ತು,+ ಒಂದು ಸಲ ಇಡೀ ದಿನ ಅಂದ್ರೆ ಒಂದು ರಾತ್ರಿ ಒಂದು ಹಗಲು ಸಮುದ್ರದ ಮಧ್ಯ ಕಳೆದೆ. 26 ನಾನು ಪದೇ ಪದೇ ಪ್ರಯಾಣ ಮಾಡ್ದೆ, ನದಿಗಳಿಂದ, ದರೋಡೆಕೋರರಿಂದ, ಸ್ವಂತ ಜನ್ರಿಂದ,+ ಬೇರೆ ಬೇರೆ ಜನ್ರಿಂದ ಅಪಾಯ ಬಂದ್ವು,+ ಅಷ್ಟೇ ಅಲ್ಲ ಪಟ್ಟಣದಲ್ಲಿ,+ ಕಾಡಲ್ಲಿ, ಸಮುದ್ರದಲ್ಲಿ, ಸುಳ್ಳು ಸಹೋದರರಿಂದ ಅಪಾಯಗಳು ಬಂದ್ವು. 27 ತುಂಬ ಕಷ್ಟ ಪಟ್ಟೆ, ಮೈ ಮುರಿದು ಕೆಲಸಮಾಡ್ದೆ, ಎಷ್ಟೋ ರಾತ್ರಿ ನಿದ್ದೆ ಇಲ್ಲದೆ ಕಳೆದೆ,+ ಹಸಿವು ಬಾಯಾರಿಕೆಯಿಂದ ಇದ್ದೆ,+ ಎಷ್ಟೋ ಸಲ ಹೊಟ್ಟೆಗೇ ಇರಲಿಲ್ಲ,+ ಚಳಿಯಲ್ಲಿ ನಡುಗ್ತಿದ್ದೆ, ಬಟ್ಟೆ ಇಲ್ಲದೆ ಇದ್ದೆ.

28 ಇಷ್ಟೆಲ್ಲ ಕಷ್ಟದ ಜೊತೆ ಎಲ್ಲ ಸಭೆಗಳ ಬಗ್ಗೆ ಚಿಂತೆ ದಿನಾ ನನ್ನನ್ನ ಕಿತ್ತು ತಿಂತಿತ್ತು.+ 29 ಯಾರಾದ್ರೂ ಬಲ ಕಳ್ಕೊಂಡ್ರೆ ನನಗೆ ಬೇಜಾರಾಗಲ್ವಾ? ಯಾರಾದ್ರೂ ಎಡವಿದ್ರೆ ನನಗೆ ಕೋಪ ಬರಲ್ವಾ?

30 ನಾನು ಹೆಮ್ಮೆಪಡಬೇಕಾದ್ರೆ ನನ್ನ ತಪ್ಪುಗಳನ್ನ ಎತ್ತಿತೋರಿಸೋ ವಿಷ್ಯಗಳ ಬಗ್ಗೆ ಹೆಮ್ಮೆಪಡ್ತೀನಿ. 31 ನಾನು ಸುಳ್ಳು ಹೇಳ್ತಿಲ್ಲ ಅಂತ ಪ್ರಭು ಯೇಸುವಿನ ತಂದೆಯಾಗಿರೋ ಮತ್ತು ಯಾವಾಗ್ಲೂ ಗೌರವ ಪಡಿಯೋಕೆ ಯೋಗ್ಯವಾಗಿರೋ ದೇವರಿಗೆ ಗೊತ್ತು. 32 ದಮಸ್ಕದಲ್ಲಿ ರಾಜ ಅರೇತನ ಕೈಕೆಳಗಿದ್ದ ರಾಜ್ಯಪಾಲ ನನ್ನನ್ನ ಹಿಡೀಬೇಕಂತ ಪಟ್ಟಣದ ಬಾಗಿಲಲ್ಲಿ ಕಾವಲುಗಾರರನ್ನ ಇಟ್ಟಿದ್ದ. 33 ಆದ್ರೆ ಸಹೋದರರು ನನ್ನನ್ನ ಒಂದು ಬುಟ್ಟಿಯಲ್ಲಿ* ಕೂರಿಸಿ ಪಟ್ಟಣದ ಗೋಡೆಯ ಕಿಟಕಿಯಿಂದ ಕೆಳಗಿಳಿಸಿದ್ರು.+ ಹೀಗೆ ನಾನು ತಪ್ಪಿಸ್ಕೊಂಡೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ