ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಬಾರ್ನಬ ಮತ್ತು ಸೌಲನನ್ನ ಮಿಷನರಿಯಾಗಿ ಕಳಿಸಿದ್ರು (1-3)

      • ಸೈಪ್ರಸ್‌ನಲ್ಲಿ ಸೇವೆ (4-12)

      • ಪಿಸಿದ್ಯದ ಅಂತಿಯೋಕ್ಯದಲ್ಲಿ ಪೌಲನ ಭಾಷಣ (13-41)

      • ಯೆಹೂದ್ಯರಲ್ಲದ ಜನ್ರಿಗೆ ಸಾರೋಕೆ ಭವಿಷ್ಯವಾಣಿ (42-52)

ಅ. ಕಾರ್ಯ 13:1

ಪಾದಟಿಪ್ಪಣಿ

  • *

    ಅಂದ್ರೆ “ಕರಿಯ.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 12:28; ಎಫೆ 4:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 20

ಅ. ಕಾರ್ಯ 13:2

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:15
  • +1ತಿಮೊ 2:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 85-86

    ಕಾವಲಿನಬುರುಜು,

    11/15/2000, ಪು. 12

    10/1/1997, ಪು. 13-14

    12/1/1992, ಪು. 11

ಅ. ಕಾರ್ಯ 13:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 86

ಅ. ಕಾರ್ಯ 13:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 86-87

    ಕಾವಲಿನಬುರುಜು,

    7/1/2004, ಪು. 19-20

ಅ. ಕಾರ್ಯ 13:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 12:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 86-87

    ಕಾವಲಿನಬುರುಜು,

    3/15/2010, ಪು. 7

    7/1/2004, ಪು. 20-21

    1/1/1991, ಪು. 20

ಅ. ಕಾರ್ಯ 13:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 86-87

    ಕಾವಲಿನಬುರುಜು,

    7/1/2004, ಪು. 21-22

    12/1/1992, ಪು. 11

ಅ. ಕಾರ್ಯ 13:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 87

ಅ. ಕಾರ್ಯ 13:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 87-88

ಅ. ಕಾರ್ಯ 13:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 87-88

ಅ. ಕಾರ್ಯ 13:10

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:44

ಅ. ಕಾರ್ಯ 13:11

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 87-88

    ಕಾವಲಿನಬುರುಜು,

    1/1/1991, ಪು. 20-21

ಅ. ಕಾರ್ಯ 13:12

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಅ. ಕಾರ್ಯ 13:13

ಮಾರ್ಜಿನಲ್ ರೆಫರೆನ್ಸ್

  • +ಅಕಾ 12:12
  • +ಅಕಾ 15:37, 38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 88-89

    ಕಾವಲಿನಬುರುಜು,

    3/15/2010, ಪು. 7

ಅ. ಕಾರ್ಯ 13:14

ಮಾರ್ಜಿನಲ್ ರೆಫರೆನ್ಸ್

  • +ಅಕಾ 17:1, 2; 18:4; 19:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 89

    ಕಾವಲಿನಬುರುಜು,

    12/1/1992, ಪು. 12

    1/1/1991, ಪು. 21

ಅ. ಕಾರ್ಯ 13:15

ಮಾರ್ಜಿನಲ್ ರೆಫರೆನ್ಸ್

  • +ಅಕಾ 15:21

ಅ. ಕಾರ್ಯ 13:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 89-90

ಅ. ಕಾರ್ಯ 13:17

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:1, 6; ಧರ್ಮೋ 7:6, 8

ಅ. ಕಾರ್ಯ 13:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 16:35; ಅರ 14:33, 34

ಅ. ಕಾರ್ಯ 13:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:1; ಯೆಹೋ 14:1, 2

ಅ. ಕಾರ್ಯ 13:20

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:16; 1ಸಮು 3:20

ಅ. ಕಾರ್ಯ 13:21

ಮಾರ್ಜಿನಲ್ ರೆಫರೆನ್ಸ್

  • +1ಸಮು 8:4, 5
  • +1ಸಮು 10:21; 11:15

ಅ. ಕಾರ್ಯ 13:22

ಮಾರ್ಜಿನಲ್ ರೆಫರೆನ್ಸ್

  • +1ಸಮು 16:12, 13; ಕೀರ್ತ 89:20
  • +1ಸಮು 16:1
  • +1ಸಮು 13:13, 14

ಅ. ಕಾರ್ಯ 13:23

ಮಾರ್ಜಿನಲ್ ರೆಫರೆನ್ಸ್

  • +2ಸಮು 7:12; ಯೆಶಾ 11:1; ಲೂಕ 1:31, 32, 68, 69

ಅ. ಕಾರ್ಯ 13:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:1, 6

ಅ. ಕಾರ್ಯ 13:25

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:11; ಲೂಕ 3:16

ಅ. ಕಾರ್ಯ 13:26

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:5, 6; ಲೂಕ 24:47, 48

ಅ. ಕಾರ್ಯ 13:27

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:7, 8

ಅ. ಕಾರ್ಯ 13:28

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:59, 60; ಲೂಕ 23:13-15; ಯೋಹಾ 19:4
  • +ಮತ್ತಾ 27:22, 23; ಯೋಹಾ 19:15

ಅ. ಕಾರ್ಯ 13:29

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:59, 60; ಯೋಹಾ 19:40-42

ಅ. ಕಾರ್ಯ 13:30

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:5, 6; ಅಕಾ 2:24

ಅ. ಕಾರ್ಯ 13:31

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:16; ಅಕಾ 1:3; 3:15; 1ಕೊರಿಂ 15:4-7

ಅ. ಕಾರ್ಯ 13:33

ಮಾರ್ಜಿನಲ್ ರೆಫರೆನ್ಸ್

  • +ರೋಮ 1:4
  • +ಕೀರ್ತ 2:7; ಇಬ್ರಿ 1:5; 5:5

ಅ. ಕಾರ್ಯ 13:34

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 55:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1998, ಪು. 20

ಅ. ಕಾರ್ಯ 13:35

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 16:10; ಅಕಾ 2:31

ಅ. ಕಾರ್ಯ 13:36

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:29

ಅ. ಕಾರ್ಯ 13:37

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:27

ಅ. ಕಾರ್ಯ 13:38

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:46, 47; ಅಕಾ 5:31; 10:43

ಅ. ಕಾರ್ಯ 13:39

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 10:1
  • +ಯೆಶಾ 53:11; ರೋಮ 3:28; 5:18; 8:3; ಇಬ್ರಿ 7:19

ಅ. ಕಾರ್ಯ 13:41

ಮಾರ್ಜಿನಲ್ ರೆಫರೆನ್ಸ್

  • +ಹಬ 1:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2000, ಪು. 13

ಅ. ಕಾರ್ಯ 13:43

ಮಾರ್ಜಿನಲ್ ರೆಫರೆನ್ಸ್

  • +ಅಕಾ 11:23; 14:21, 22

ಅ. ಕಾರ್ಯ 13:44

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಅ. ಕಾರ್ಯ 13:45

ಮಾರ್ಜಿನಲ್ ರೆಫರೆನ್ಸ್

  • +ಅಕಾ 14:1, 2; 17:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 21

ಅ. ಕಾರ್ಯ 13:46

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:5, 6; ಅಕಾ 3:25, 26; ರೋಮ 1:16
  • +ಲೂಕ 2:29-32; ಅಕಾ 18:5, 6; ರೋಮ 10:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 90-92

ಅ. ಕಾರ್ಯ 13:47

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 49:6; ಅಕಾ 1:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಶಾಯನ ಪ್ರವಾದನೆ II, ಪು. 141-142

    ಕಾವಲಿನಬುರುಜು,

    4/15/1993, ಪು. 8-11

ಅ. ಕಾರ್ಯ 13:48

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2018, ಪು. 12

    ಕಾವಲಿನಬುರುಜು,

    7/1/2000, ಪು. 11-12

ಅ. ಕಾರ್ಯ 13:49

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಅ. ಕಾರ್ಯ 13:50

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 23:34; ಅಕಾ 14:2, 19; 17:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 91

    ಕಾವಲಿನಬುರುಜು,

    1/1/1991, ಪು. 21

ಅ. ಕಾರ್ಯ 13:51

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:14; ಲೂಕ 9:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 92, 93-95

    ಕಾವಲಿನಬುರುಜು,

    1/1/1991, ಪು. 21

ಅ. ಕಾರ್ಯ 13:52

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 21

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 13:11ಕೊರಿಂ 12:28; ಎಫೆ 4:11, 12
ಅ. ಕಾ. 13:2ಅಕಾ 9:15
ಅ. ಕಾ. 13:21ತಿಮೊ 2:7
ಅ. ಕಾ. 13:5ಅಕಾ 12:25
ಅ. ಕಾ. 13:10ಯೋಹಾ 8:44
ಅ. ಕಾ. 13:13ಅಕಾ 12:12
ಅ. ಕಾ. 13:13ಅಕಾ 15:37, 38
ಅ. ಕಾ. 13:14ಅಕಾ 17:1, 2; 18:4; 19:8
ಅ. ಕಾ. 13:15ಅಕಾ 15:21
ಅ. ಕಾ. 13:17ವಿಮೋ 6:1, 6; ಧರ್ಮೋ 7:6, 8
ಅ. ಕಾ. 13:18ವಿಮೋ 16:35; ಅರ 14:33, 34
ಅ. ಕಾ. 13:19ಧರ್ಮೋ 7:1; ಯೆಹೋ 14:1, 2
ಅ. ಕಾ. 13:20ನ್ಯಾಯ 2:16; 1ಸಮು 3:20
ಅ. ಕಾ. 13:211ಸಮು 8:4, 5
ಅ. ಕಾ. 13:211ಸಮು 10:21; 11:15
ಅ. ಕಾ. 13:221ಸಮು 16:12, 13; ಕೀರ್ತ 89:20
ಅ. ಕಾ. 13:221ಸಮು 16:1
ಅ. ಕಾ. 13:221ಸಮು 13:13, 14
ಅ. ಕಾ. 13:232ಸಮು 7:12; ಯೆಶಾ 11:1; ಲೂಕ 1:31, 32, 68, 69
ಅ. ಕಾ. 13:24ಮತ್ತಾ 3:1, 6
ಅ. ಕಾ. 13:25ಮತ್ತಾ 3:11; ಲೂಕ 3:16
ಅ. ಕಾ. 13:26ಮತ್ತಾ 10:5, 6; ಲೂಕ 24:47, 48
ಅ. ಕಾ. 13:27ಯೆಶಾ 53:7, 8
ಅ. ಕಾ. 13:28ಮತ್ತಾ 26:59, 60; ಲೂಕ 23:13-15; ಯೋಹಾ 19:4
ಅ. ಕಾ. 13:28ಮತ್ತಾ 27:22, 23; ಯೋಹಾ 19:15
ಅ. ಕಾ. 13:29ಮತ್ತಾ 27:59, 60; ಯೋಹಾ 19:40-42
ಅ. ಕಾ. 13:30ಮತ್ತಾ 28:5, 6; ಅಕಾ 2:24
ಅ. ಕಾ. 13:31ಮತ್ತಾ 28:16; ಅಕಾ 1:3; 3:15; 1ಕೊರಿಂ 15:4-7
ಅ. ಕಾ. 13:33ರೋಮ 1:4
ಅ. ಕಾ. 13:33ಕೀರ್ತ 2:7; ಇಬ್ರಿ 1:5; 5:5
ಅ. ಕಾ. 13:34ಯೆಶಾ 55:3
ಅ. ಕಾ. 13:35ಕೀರ್ತ 16:10; ಅಕಾ 2:31
ಅ. ಕಾ. 13:36ಅಕಾ 2:29
ಅ. ಕಾ. 13:37ಅಕಾ 2:27
ಅ. ಕಾ. 13:38ಲೂಕ 24:46, 47; ಅಕಾ 5:31; 10:43
ಅ. ಕಾ. 13:39ಇಬ್ರಿ 10:1
ಅ. ಕಾ. 13:39ಯೆಶಾ 53:11; ರೋಮ 3:28; 5:18; 8:3; ಇಬ್ರಿ 7:19
ಅ. ಕಾ. 13:41ಹಬ 1:5
ಅ. ಕಾ. 13:43ಅಕಾ 11:23; 14:21, 22
ಅ. ಕಾ. 13:45ಅಕಾ 14:1, 2; 17:4, 5
ಅ. ಕಾ. 13:46ಮತ್ತಾ 10:5, 6; ಅಕಾ 3:25, 26; ರೋಮ 1:16
ಅ. ಕಾ. 13:46ಲೂಕ 2:29-32; ಅಕಾ 18:5, 6; ರೋಮ 10:19
ಅ. ಕಾ. 13:47ಯೆಶಾ 49:6; ಅಕಾ 1:8
ಅ. ಕಾ. 13:50ಮತ್ತಾ 23:34; ಅಕಾ 14:2, 19; 17:5
ಅ. ಕಾ. 13:51ಮತ್ತಾ 10:14; ಲೂಕ 9:5
ಅ. ಕಾ. 13:52ಮತ್ತಾ 5:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 13:1-52

ಅಪೊಸ್ತಲರ ಕಾರ್ಯ

13 ಅಂತಿಯೋಕ್ಯದ ಸಭೆಯಲ್ಲಿ ಪ್ರವಾದಿಗಳು, ಬೋಧಕರು ಇದ್ರು.+ ಅವರು ಯಾರಂದ್ರೆ ಬಾರ್ನಬ, ನೀಗರ* ಅಂತ ಹೆಸ್ರಿದ್ದ ಸಿಮೆಯೋನ, ಕುರೇನ್ಯದ ಲೂಕ್ಯ, ಜಿಲ್ಲಾಧಿಕಾರಿ ಆಗಿದ್ದ ಹೆರೋದನ ಜೊತೆ ಶಿಕ್ಷಣ ಪಡೆದ ಮೆನಹೇನ ಮತ್ತು ಸೌಲ. 2 ಅವರು ಯೆಹೋವನಿಗೆ* ಸೇವೆಮಾಡ್ತಾ ಉಪವಾಸಮಾಡ್ತಾ ಇದ್ದಾಗ ಪವಿತ್ರಶಕ್ತಿ ಮೂಲಕ ದೇವರು ಅವ್ರಿಗೆ “ಬಾರ್ನಬ ಮತ್ತು ಸೌಲನನ್ನ ಒಂದು ಕೆಲಸಕ್ಕಾಗಿ ನಾನು ಆರಿಸ್ಕೊಂಡಿದ್ದೀನಿ.+ ಅವ್ರಿಗೆ ಆ ಕೆಲಸ ಮಾತ್ರ ಕೊಡಿ”+ ಅಂದನು. 3 ಆಗ ಅವರು ಮತ್ತೆ ಉಪವಾಸ ಮಾಡಿ ಪ್ರಾರ್ಥನೆ ಮಾಡಿದ್ರು. ಆಮೇಲೆ ಬಾರ್ನಬ ಮತ್ತು ಸೌಲನ ಮೇಲೆ ಕೈಯಿಟ್ಟು ನೇಮಿಸಿ ಕಳಿಸ್ಕೊಟ್ರು.

4 ಹೀಗೆ ಪವಿತ್ರಶಕ್ತಿಯ ಮಾರ್ಗದರ್ಶನದಿಂದ ಬಾರ್ನಬ ಮತ್ತು ಸೌಲ ಸೆಲ್ಯೂಕ್ಯಕ್ಕೆ ಹೋಗಿ ಅಲ್ಲಿಂದ ಹಡಗಲ್ಲಿ ಪ್ರಯಾಣಮಾಡಿ ಸೈಪ್ರಸ್‌ಗೆ ಹೋದ್ರು. 5 ಅವರು ಸಲಮೀಸ್‌ ಪಟ್ಟಣಕ್ಕೆ ಬಂದಾಗ ಅಲ್ಲಿದ್ದ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವ್ರ ಸಂದೇಶ ಸಾರಿದ್ರು. ಅವ್ರಿಗೆ ಯೋಹಾನ ಸಹಾಯಕ ಆಗಿದ್ದ.+

6 ಅವರು ಇಡೀ ದ್ವೀಪದಲ್ಲಿ ಸುತ್ತಾಡಿ ಪಾಫೋಸ್‌ ಅನ್ನೋ ಜಾಗಕ್ಕೆ ಬಂದ್ರು. ಅಲ್ಲಿ ಬಾರ್‌ಯೇಸು ಅನ್ನೋ ಒಬ್ಬ ಯೆಹೂದಿ ಅವ್ರನ್ನ ಭೇಟಿ ಮಾಡಿದ. ಅವನೊಬ್ಬ ಮಂತ್ರವಾದಿ, ಸುಳ್ಳು ಪ್ರವಾದಿ ಆಗಿದ್ದ. 7 ಅವನು ಸೆರ್ಗ್ಯ ಪೌಲ ಅನ್ನೋ ಪ್ರಾಂತ್ಯದ ರಾಜ್ಯಪಾಲನ ಹತ್ರ ಕೆಲಸ ಮಾಡ್ತಿದ್ದ. ಈ ರಾಜ್ಯಪಾಲ ಬುದ್ಧಿವಂತನಾಗಿದ್ದ. ಅವನು ಬಾರ್ನಬ ಮತ್ತು ಸೌಲನನ್ನ ಬರೋಕೆ ಹೇಳಿದ. ಯಾಕಂದ್ರೆ ಅವನಿಗೆ ದೇವ್ರ ಸಂದೇಶ ಕೇಳೋಕೆ ತುಂಬ ಆಸೆ ಇತ್ತು. 8 ಆದ್ರೆ ಎಲುಮ ಅನ್ನೋ ಹೆಸ್ರಿದ್ದ ಬಾರ್‌ಯೇಸು ಅವ್ರನ್ನ ವಿರೋಧಿಸಿ ರಾಜ್ಯಪಾಲ ಅವ್ರ ಮಾತನ್ನ ನಂಬದ ಹಾಗೆ ಮಾಡೋಕೆ ಪ್ರಯತ್ನಿಸಿದ. (ಎಲುಮ ಅಂದ್ರೆ ಮಂತ್ರವಾದಿ ಅಂತರ್ಥ.) 9 ಆಗ ಪೌಲ ಅನ್ನೋ ಇನ್ನೊಂದು ಹೆಸ್ರಿದ್ದ ಸೌಲನಿಗೆ ಪವಿತ್ರಶಕ್ತಿ ಸಿಕ್ತು. ಅವನು ಎಲುಮನನ್ನೇ ನೋಡ್ತಾ 10 “ನಿನ್ನ ಮನಸ್ಸಲ್ಲಿ ಬರೀ ಮೋಸ, ಕೆಟ್ಟದ್ದೇ ತುಂಬ್ಕೊಂಡಿದೆ. ನೀನು ಸೈತಾನನ ಮಗ.+ ಒಳ್ಳೇದನ್ನ ದ್ವೇಷಿಸ್ತೀಯ. ಯೆಹೋವನ* ಸರಿಯಾದ ದಾರಿಗಳನ್ನ ಹಾಳುಮಾಡೋದು ನೀನು ನಿಲ್ಲಿಸಲ್ವಾ? 11 ನೋಡು! ಯೆಹೋವ* ನಿನಗೆ ಶಿಕ್ಷೆ ಕೊಡ್ತಾನೆ. ನೀನು ಕುರುಡನಾಗಿ ಸ್ವಲ್ಪ ಸಮಯದ ತನಕ ಬೆಳಕನ್ನ ನೋಡೋಕಾಗಲ್ಲ” ಅಂದ. ತಕ್ಷಣ ಅವನ ಕಣ್ಣು ಮಂಜಾಗಿ ಕತ್ತಲಾಯ್ತು. ಯಾರಾದ್ರೂ ನನ್ನ ಕೈಹಿಡಿದು ನಡಿಸ್ತಾರಾ ಅಂತ ಆಕಡೆ ಈಕಡೆ ಹುಡುಕೋಕೆ ಶುರುಮಾಡಿದ. 12 ಆಗಿದ್ದನ್ನ ನೋಡಿ ಆ ರಾಜ್ಯಪಾಲ ಯೇಸು ಪ್ರಭು ಮೇಲೆ ನಂಬಿಕೆ ಇಟ್ಟ. ಯಾಕಂದ್ರೆ ಯೆಹೋವ* ಕಲಿಸಿದ ರೀತಿ ನೋಡಿ ಅವನಿಗೆ ತುಂಬ ಆಶ್ಚರ್ಯ ಆಗಿತ್ತು.

13 ಪೌಲ ಮತ್ತು ಅವನ ಜೊತೆಯಲ್ಲಿ ಇದ್ದವರು ಪಾಫೋಸ್‌ನಿಂದ ಹಡಗು ಹತ್ತಿ ಪಂಫುಲ್ಯದ ಪೆರ್ಗಕ್ಕೆ ಬಂದ್ರು. ಆದ್ರೆ ಯೋಹಾನ ಮಾರ್ಕ+ ಅವ್ರನ್ನ ಬಿಟ್ಟು ಯೆರೂಸಲೇಮಿಗೆ ವಾಪಸ್‌ ಹೋದ.+ 14 ಆಮೇಲೆ ಅವರು ಪೆರ್ಗದಿಂದ ಪಿಸಿದ್ಯದ ಅಂತಿಯೋಕ್ಯಕ್ಕೆ ಬಂದ್ರು. ಸಬ್ಬತ್‌ ದಿನ ಅವರು ಸಭಾಮಂದಿರಕ್ಕೆ+ ಹೋಗಿ ಕೂತ್ಕೊಂಡ್ರು. 15 ನಿಯಮ ಪುಸ್ತಕ ಮತ್ತು ಪ್ರವಾದಿಗಳ ಪುಸ್ತಕಗಳನ್ನ ಓದಿದ+ ಮೇಲೆ ಸಭಾಮಂದಿರದ ಅಧಿಕಾರಿಗಳು ಅವ್ರಿಗೆ “ಸಹೋದರರೇ, ಜನ್ರಿಗೆ ಪ್ರೋತ್ಸಾಹಿಸಲು ನೀವು ಮಾತಾಡೋಕೆ ಇಷ್ಟಪಡ್ತೀರಾ?” ಅಂತ ಕೇಳಿದ್ರು. 16 ಆಗ ಪೌಲ ಎದ್ದು ಜನ್ರಿಗೆ ಸುಮ್ಮನಿರೋಕೆ ಕೈಸನ್ನೆ ಮಾಡಿ ಹೀಗೆ ಹೇಳಿದ

“ಇಸ್ರಾಯೇಲ್ಯರೇ, ದೇವ್ರ ಮೇಲೆ ಭಯಭಕ್ತಿ ಇರೋ ಬೇರೆ ಜನ್ರೇ, ನಾನು ಹೇಳೋದನ್ನ ಕೇಳಿ. 17 ಇಸ್ರಾಯೇಲ್ಯರ ದೇವರು ನಮ್ಮ ಪೂರ್ವಜರನ್ನ ಆರಿಸ್ಕೊಂಡನು. ಅವರು ಈಜಿಪ್ಟಲ್ಲಿ ವಿದೇಶಿಯರಾಗಿ ಇದ್ದಾಗ ದೇವರು ಅವ್ರಿಗೆ ಸಹಾಯ ಮಾಡಿದನು. ತನ್ನ ಮಹಾ ಶಕ್ತಿ ಬಳಸಿ ಅವ್ರನ್ನ ಬಿಡಿಸಿ ಅಲ್ಲಿಂದ ಹೊರಗೆ ಕರ್ಕೊಂಡು ಬಂದನು.+ 18 ಸುಮಾರು 40 ವರ್ಷ ಕಾಡಲ್ಲಿ ದೇವರು ಅವ್ರನ್ನ ಸಹಿಸ್ಕೊಂಡನು.+ 19 ಕಾನಾನ್‌ ದೇಶದಲ್ಲಿ ಏಳು ಜನಾಂಗಗಳನ್ನ ನಾಶಮಾಡಿ ಆ ದೇಶವನ್ನ ಆಸ್ತಿಯಾಗಿ ಕೊಟ್ಟನು.+ 20 ಇದೆಲ್ಲ ಆಗೋಕೆ ಸುಮಾರು 450 ವರ್ಷ ಹಿಡಿತು.

“ಆಮೇಲೆ ಅವ್ರಿಗೆ ನ್ಯಾಯಾಧೀಶರನ್ನ ಕೊಟ್ಟನು. ಪ್ರವಾದಿ ಸಮುವೇಲನ ಕಾಲದ ತನಕ ಅವರಿದ್ರು.+ 21 ಆದ್ರೆ ಆಮೇಲೆ ಇಸ್ರಾಯೇಲ್ಯರು ತಮಗೆ ಒಬ್ಬ ರಾಜ ಬೇಕು ಅಂತ ಹಠ ಮಾಡಿದ್ರು.+ ಆಗ ದೇವರು ಬೆನ್ಯಾಮೀನ್‌ ಕುಲದ ಕೀಷನ ಮಗ ಸೌಲನನ್ನ ರಾಜ ಮಾಡಿದನು.+ ಸೌಲ 40 ವರ್ಷ ಆಳಿದ. 22 ದೇವರು ಅವನನ್ನ ತೆಗೆದುಹಾಕಿ ಅವ್ರಿಗೋಸ್ಕರ ದಾವೀದನನ್ನ ರಾಜನಾಗಿ ಆರಿಸ್ಕೊಂಡನು.+ ದಾವೀದನ ಬಗ್ಗೆ ದೇವರು ಹೀಗೆ ಹೇಳಿದನು ‘ಇಷಯನ ಮಗ ದಾವೀದ+ ಅಂದ್ರೆ ನನ್ನ ಮನಸ್ಸಿಗೆ ತುಂಬ ಇಷ್ಟ.+ ನನಗೆ ಖುಷಿ ಕೊಡೋದನ್ನೇ ಅವನು ಮಾಡ್ತಾನೆ’ ಅಂದನು. 23 ದೇವರು ಮಾತುಕೊಟ್ಟ ಪ್ರಕಾರ ದಾವೀದನ ವಂಶದಿಂದ ಇಸ್ರಾಯೇಲ್ಯರಿಗೆ ಒಬ್ಬ ರಕ್ಷಕನನ್ನ ಕಳಿಸಿದನು. ಆತನೇ ಯೇಸು.+ 24 ಆತನು ಬರೋದಕ್ಕಿಂತ ಮುಂಚೆ ಯೋಹಾನ ಪಶ್ಚಾತ್ತಾಪದ ಗುರುತಾಗಿ ದೀಕ್ಷಾಸ್ನಾನ ಮಾಡಿಸ್ಕೊಳ್ಳಿ ಅಂತ ಇಸ್ರಾಯೇಲಿನ ಜನ್ರೆಲ್ಲರಿಗೆ ಸಾರಿದ.+ 25 ಆದ್ರೆ ಯೋಹಾನ ತನ್ನ ಸೇವೆ ಇನ್ನೇನು ಮುಗಿಯೋಕೆ ಬಂದಾಗ ಹೀಗೆ ಹೇಳ್ತಿದ್ದ: ‘ನಾನು ಯಾರಂತ ನೀವು ಅಂದ್ಕೊಳ್ತಾ ಇದ್ದೀರೋ ಅವನು ನಾನಲ್ಲ. ಆದ್ರೆ ನೋಡಿ, ನಾನು ಆದಮೇಲೆ ಒಬ್ಬ ಬರ್ತಾನೆ. ಅವನ ಚಪ್ಪಲಿ ಬಿಚ್ಚೋಕೂ ನನಗೆ ಯೋಗ್ಯತೆ ಇಲ್ಲ.’+

26 “ಸಹೋದರರೇ, ಅಬ್ರಹಾಮನ ವಂಶದವ್ರೇ, ದೇವ್ರ ಮೇಲೆ ಭಯಭಕ್ತಿ ಇರೋ ಬೇರೆ ಜನ್ರೇ, ನಮ್ಮನ್ನ ರಕ್ಷಿಸೋ ಸಂದೇಶವನ್ನ ದೇವರು ಆತನ ಮೂಲಕ ಕಳಿಸಿದ್ದಾನೆ.+ 27 ಯೆರೂಸಲೇಮಿನ ಜನ್ರು, ಅವ್ರ ನಾಯಕರು ಆತನನ್ನ ಗುರುತಿಸಲಿಲ್ಲ. ಆದ್ರೆ ಅವರು ಆತನಿಗೆ ತೀರ್ಪು ಕೊಡುವಾಗ ಪ್ರವಾದಿಗಳು ಹೇಳಿದ ಮಾತನ್ನ ನಿಜ ಮಾಡಿದ್ರು.+ ಅದನ್ನೇ ಪ್ರತಿ ಸಬ್ಬತ್‌ ದಿನದಲ್ಲಿ ಅವರು ಓದ್ತಾ ಇದ್ರು. 28 ಆತನಿಗೆ ಮರಣಶಿಕ್ಷೆ ಕೊಡೋಕೆ ಕಾರಣನೇ ಇಲ್ಲದಿದ್ರೂ+ ಅವರು ಪಿಲಾತನ ಹತ್ರ ಆತನನ್ನ ಕೊಲ್ಲೋಕೆ ಒತ್ತಾಯಿಸಿದ್ರು.+ 29 ಆತನ ಬಗ್ಗೆ ಪವಿತ್ರಗ್ರಂಥದಲ್ಲಿ ಏನೆಲ್ಲ ಬರೆದಿತ್ತೋ ಅದೆಲ್ಲ ಮಾಡಿದ ಮೇಲೆನೇ ಆತನನ್ನ ಕಂಬದಿಂದ ಇಳಿಸಿ ಸಮಾಧಿ ಮಾಡಿದ್ರು.+ 30 ಆದ್ರೆ ದೇವರು ಆತನನ್ನ ಎಬ್ಬಿಸಿ ಮತ್ತೆ ಜೀವ ಕೊಟ್ಟನು.+ 31 ಆಮೇಲೆ ಆತನು ತುಂಬ ದಿನಗಳ ತನಕ ಗಲಿಲಾಯದಿಂದ ಯೆರೂಸಲೇಮಿಗೆ ತನ್ನ ಜೊತೆ ಬಂದವ್ರಿಗೆ ಕಾಣಿಸ್ಕೊಳ್ತಾ ಇದ್ದ. ಆ ಜನ್ರೇ ಈಗ ಆತನ ಬಗ್ಗೆ ಬೇರೆಯವ್ರಿಗೆ ಹೇಳ್ತಿದ್ದಾರೆ.+

32 “ಹಾಗಾಗಿ ದೇವರು ನಮ್ಮ ಪೂರ್ವಜರಿಗೆ ಕೊಟ್ಟ ಮಾತಿನ ಬಗ್ಗೆ ಇರೋ ಸಿಹಿಸುದ್ದಿಯನ್ನ ನಾವು ನಿಮಗೆ ಹೇಳ್ತಿದ್ದೀವಿ. 33 ಆ ಮಾತನ್ನ ದೇವರು ಯೇಸುಗೆ ಮತ್ತೆ ಜೀವ ಕೊಡೋ ಮೂಲಕ ಪೂರ್ವಜರ ಮಕ್ಕಳಾದ ನಮಗೋಸ್ಕರ ಪೂರ್ತಿ ನೆರವೇರಿಸಿದ್ದಾನೆ.+ ಹೀಗೆ ‘ನೀನು ನನ್ನ ಮಗ, ಇವತ್ತಿಂದ ನಾನು ನಿನ್ನ ಅಪ್ಪ’+ ಅಂತ ಎರಡನೇ ಕೀರ್ತನೆಯಲ್ಲಿ ಬರೆದಿರೋ ಮಾತು ನಿಜ ಆಯ್ತು. 34 ಯೇಸು ಸತ್ತಾಗ ದೇವರು ಆತನಿಗೆ ಮತ್ತೆ ಜೀವ ಕೊಟ್ಟನು. ಹೀಗೆ ಯೇಸುವನ್ನ ಇನ್ಯಾವತ್ತೂ ಕೊಳೆಯೋಕೆ ಬಿಟ್ಟಿಲ್ಲ ಅನ್ನೋದನ್ನ ಮುಂಚೆನೇ ಹೀಗೆ ಮಾತಿನ ಮೂಲಕ ಹೇಳಿದ್ದನು ‘ನಾನು ದಾವೀದನಿಗೆ ಮಾತು ಕೊಟ್ಟ ಹಾಗೆ ನಿಮಗೆ ಶಾಶ್ವತ ಪ್ರೀತಿಯನ್ನ ತೋರಿಸೇ ತೋರಿಸ್ತೀನಿ.’+ 35 ದೇವರು ಇನ್ನೊಂದು ಕೀರ್ತನೆಯಲ್ಲಿ ‘ನೀನು ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆಯೋಕೆ ಬಿಡಲ್ಲ’ ಅಂತಾನೂ ಹೇಳಿದ್ದಾನೆ.+ 36 ದಾವೀದ ಬದುಕಿರೋ ತನಕ ದೇವ್ರ ಸೇವೆ ಮಾಡಿ ಸತ್ತುಹೋದ. ಅವನನ್ನ ಸಮಾಧಿ ಮಾಡಿದ್ರು, ಅವನು ಕೊಳೆತು ಹೋದ.+ 37 ಆದ್ರೆ ದೇವರು ಯೇಸುವಿನ ದೇಹವನ್ನ ಕೊಳೆಯೋಕೆ ಬಿಡದೆ ಆತನನ್ನ ಎಬ್ಬಿಸಿದನು.+

38 “ಹಾಗಾಗಿ ಸಹೋದರರೇ, ಯೇಸುವಿನ ಮೂಲಕ ಮಾತ್ರ ಪಾಪಗಳಿಗೆ ಕ್ಷಮೆ ಸಿಗುತ್ತೆ. ಅದನ್ನೇ ನಾನೀಗ ಹೇಳ್ತಾ ಇದ್ದೀನಿ.+ 39 ಮೋಶೆಯ ನಿಯಮ ಪುಸ್ತಕಕ್ಕೆ ನಿಮ್ಮನ್ನ ನೀತಿವಂತರಾಗಿ ಮಾಡೋಕಾಗಲ್ಲ.+ ಆದ್ರೆ ಈ ಮನುಷ್ಯ ಜೀವ ಕೊಟ್ಟಿದ್ರಿಂದ, ನಂಬುವವ್ರನ್ನೆಲ್ಲ ದೇವರು ನೀತಿವಂತ್ರು ಅಂತಾನೆ.+ 40 ಹಾಗಾಗಿ ಪ್ರವಾದಿಗಳು ಬರೆದಿರೋ ತರ ನಿಮಗೆ ಆಗದ ಹಾಗೆ ನೋಡ್ಕೊಳ್ಳಿ. 41 ‘ತಿರಸ್ಕಾರ ಮಾಡೋದನ್ನ ಇಷ್ಟಪಡುವವ್ರೇ, ನಿಮ್ಮ ಕಾಲದಲ್ಲಿ ನಾನು ಮಾಡ್ತಿರೋ ಕೆಲಸವನ್ನ ನೋಡಿ. ನಿಮಗೆ ಮಾಡ್ತಾ ಇರೋ ಕೆಲಸದ ಬಗ್ಗೆ ಯಾರಾದ್ರೂ ವಿವರಿಸಿದ್ರೂ ನೀವು ಅದನ್ನ ನಂಬಲ್ಲ. ಆದ್ರೆ ನಿಮಗೆ ಆಶ್ಚರ್ಯ ಆಗುತ್ತೆ. ನೀವು ನಾಶ ಆಗ್ತೀರ.’”+

42 ಪೌಲ ಮತ್ತು ಬಾರ್ನಬ ಸಭಾಮಂದಿರದಿಂದ ಹೋಗ್ತಿದ್ದಾಗ ಜನ ಅವ್ರ ಹತ್ರ ಬಂದು ಮುಂದಿನ ಸಬ್ಬತ್‌ ದಿನದಲ್ಲೂ ಇದೇ ವಿಷ್ಯದ ಬಗ್ಗೆ ಮಾತಾಡಬೇಕು ಅಂತ ಕೇಳ್ಕೊಂಡ್ರು. 43 ಕೂಟ ಮುಗಿದು ಎಲ್ರೂ ಹೋಗ್ತಿದ್ದಾಗ ಅವ್ರಲ್ಲಿ ತುಂಬ ಜನ ಯೆಹೂದ್ಯರು ಮತ್ತು ಯೆಹೂದ್ಯರಾಗಿ ಮತಾಂತರ ಆದವರು ಪೌಲ ಮತ್ತು ಬಾರ್ನಬನ ಹಿಂದೆನೇ ಹೋದ್ರು. ಪೌಲ ಮತ್ತು ಬಾರ್ನಬ ಅವ್ರ ಜೊತೆ ಮಾತಾಡ್ತಾ ದೇವ್ರ ಅಪಾರ ಕೃಪೆಯನ್ನ ಉಳಿಸ್ಕೊಳ್ಳಿ ಅಂತೇಳಿ ಅವ್ರನ್ನ ಉತ್ತೇಜಿಸಿದ್ರು.+

44 ಮುಂದಿನ ಸಬ್ಬತ್‌ ದಿನದಲ್ಲಿ ಹೆಚ್ಚುಕಡಿಮೆ ಪಟ್ಟಣದ ಎಲ್ಲಾ ಜನ ಯೆಹೋವನ* ಸಂದೇಶ ಕೇಳಿಸ್ಕೊಳ್ಳೋಕೆ ಬಂದಿದ್ರು. 45 ಅವ್ರನ್ನೆಲ್ಲ ನೋಡಿದಾಗ ಯೆಹೂದ್ಯರಿಗೆ ಹೊಟ್ಟೆಕಿಚ್ಚಾಯ್ತು. ಹಾಗಾಗಿ ಪೌಲ ಹೇಳೋದನ್ನ ಒಪ್ಪಿಕೊಳ್ಳದೆ ದೇವ್ರ ವಿರುದ್ಧ ಮಾತಾಡ್ತಿದ್ರು.+ 46 ಆಗ ಪೌಲ ಮತ್ತು ಬಾರ್ನಬ ಧೈರ್ಯದಿಂದ ಯೆಹೂದ್ಯರಿಗೆ ಹೀಗೆ ಹೇಳಿದ್ರು “ದೇವ್ರ ಸಂದೇಶವನ್ನ ಮೊದಲು ನಿಮಗೇ ಹೇಳಬೇಕಂತ ಬಂದ್ವಿ.+ ಆದ್ರೆ ನೀವು ಅದನ್ನ ಒಪ್ಕೊಳ್ಳಲಿಲ್ಲ. ಹೀಗೆ ಶಾಶ್ವತ ಜೀವ ಪಡ್ಕೊಳ್ಳೋ ಯೋಗ್ಯತೆ ನಿಮಗಿಲ್ಲ ಅಂತ ತೋರಿಸ್ಕೊಟ್ರಿ. ಹಾಗಾಗಿ ಈಗ ನಾವು ಬೇರೆ ಜನ್ರ ಹತ್ರ ಹೋಗ್ತಾ ಇದ್ದೀವಿ.+ 47 ಯಾಕಂದ್ರೆ ಯೆಹೋವ* ನಮಗೆ ಹೀಗೆ ಆಜ್ಞೆ ಕೊಟ್ಟಿದ್ದಾನೆ ‘ಭೂಮಿಯ ಮೂಲೆಮೂಲೆಗೂ ಹೋಗಿ ನಾನು ಜನ್ರನ್ನ ಹೇಗೆ ರಕ್ಷಿಸ್ತೀನಿ ಅಂತ ಹೇಳು. ಅದಕ್ಕೆ ನಾನು ನಿನ್ನನ್ನ ಎಲ್ಲ ದೇಶಗಳ ಜನ್ರಿಗೆ ಬೆಳಕಾಗಿ ನೇಮಿಸಿದ್ದೀನಿ.’”+

48 ಯೆಹೂದ್ಯರಲ್ಲದ ಬೇರೆ ಜನ ಈ ಮಾತನ್ನ ಕೇಳಿಸ್ಕೊಂಡಾಗ ಅವ್ರಿಗೆ ತುಂಬ ಖುಷಿ ಆಯ್ತು. ಆ ಸಂದೇಶವನ್ನ ಕೊಟ್ಟಿದ್ದಕ್ಕೆ ಯೆಹೋವನನ್ನ* ಹಾಡಿಹೊಗಳಿದ್ರು. ಶಾಶ್ವತ ಜೀವ ಪಡೆಯೋ ಯೋಗ್ಯತೆ ಇದ್ದ ಒಳ್ಳೇ ಮನಸ್ಸಿನ ಜನ್ರೆಲ್ಲ ಶಿಷ್ಯರಾದ್ರು. 49 ಅಷ್ಟೇ ಅಲ್ಲ ಯೆಹೋವನ* ಸಂದೇಶ ಆ ಇಡೀ ದೇಶದಲ್ಲಿ ಹಬ್ತಾ ಬಂತು. 50 ಆದ್ರೆ ಯೆಹೂದ್ಯರು ದೇವಭಕ್ತಿಯಿದ್ದು ಆ ಪಟ್ಟಣದಲ್ಲಿ ಹೆಸ್ರು ಮಾಡಿದ್ದ ಕೆಲವು ಸ್ತ್ರೀ-ಪುರುಷರನ್ನ ಪ್ರಚೋದಿಸಿದ್ರು. ಹಾಗಾಗಿ ಅವರು ಪೌಲ, ಬಾರ್ನಬರ ಮೇಲೆ ವಿರೋಧ-ಹಿಂಸೆ+ ತಂದು, ಅವ್ರನ್ನ ಆ ಪ್ರದೇಶದಿಂದನೇ ಹೊರಗೆ ಹಾಕಿದ್ರು. 51 ಆಗ ಪೌಲ ಮತ್ತು ಬಾರ್ನಬ ಆ ಜನ್ರಿಗೆ ಎಚ್ಚರಿಕೆಯಾಗಿ ತಮ್ಮ ಕಾಲಿಗಿದ್ದ ಧೂಳನ್ನ ಝಾಡಿಸಿ ಇಕೋನ್ಯಕ್ಕೆ ಹೋದ್ರು.+ 52 ಶಿಷ್ಯರಿಗೆ ಪವಿತ್ರಶಕ್ತಿ ಸಹಾಯ ಮಾಡ್ತಾನೇ ಇತ್ತು. ಅವರು ತುಂಬ ಖುಷಿಯಾಗಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ