ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 31
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಇಸ್ರಾಯೇಲ್ಯರಲ್ಲಿ ಉಳಿದವರು ಪುನಃ ದೇಶದಲ್ಲಿ ವಾಸಿಸ್ತಾರೆ (1-30)

        • ರಾಹೇಲ ತನ್ನ ಮಕ್ಕಳಿಗಾಗಿ ಅಳ್ತಿದ್ದಾಳೆ (15)

      • ಹೊಸ ಒಪ್ಪಂದ (31-40)

ಯೆರೆಮೀಯ 31:1

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:12; ಯೆರೆ 30:22; 31:33

ಯೆರೆಮೀಯ 31:3

ಪಾದಟಿಪ್ಪಣಿ

  • *

    ಅಥವಾ “ನಿನಗೆ ಶಾಶ್ವತ ಪ್ರೀತಿ ತೋರಿಸ್ತಾ ಇದ್ದೀನಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:8

ಯೆರೆಮೀಯ 31:4

ಪಾದಟಿಪ್ಪಣಿ

  • *

    ಅಥವಾ “ನಗುನಗ್ತಾ ಕುಣಿಯೋ ಜನ್ರ ಜೊತೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 33:7; ಆಮೋ 9:11
  • +ಯೆರೆ 30:18, 19

ಯೆರೆಮೀಯ 31:5

ಮಾರ್ಜಿನಲ್ ರೆಫರೆನ್ಸ್

  • +ಆಮೋ 9:14; ಮೀಕ 4:4
  • +ಧರ್ಮೋ 30:9; ಯೆಶಾ 65:21, 22

ಯೆರೆಮೀಯ 31:6

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 2:3; ಯೆರೆ 50:4, 5

ಯೆರೆಮೀಯ 31:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:43; ಯೆಶಾ 44:23
  • +ಯೆಶಾ 1:9; ಯೆರೆ 23:3; ಯೋವೇ 2:32

ಯೆರೆಮೀಯ 31:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 43:6; ಯೆರೆ 3:12
  • +ಧರ್ಮೋ 30:4; ಯೆಹೆ 20:34; 34:12
  • +ಯೆಶಾ 35:6; 42:16
  • +ಎಜ್ರ 2:1, 64

ಯೆರೆಮೀಯ 31:9

ಮಾರ್ಜಿನಲ್ ರೆಫರೆನ್ಸ್

  • +ಯೆರೆ 50:4
  • +ಯೆಶಾ 35:7; 49:10
  • +ಆದಿ 48:14; ವಿಮೋ 4:22

ಯೆರೆಮೀಯ 31:10

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:11; 42:10
  • +ಯೆಶಾ 40:11; ಯೆಹೆ 34:11-13; ಮೀಕ 2:12

ಯೆರೆಮೀಯ 31:11

ಪಾದಟಿಪ್ಪಣಿ

  • *

    ಅಥವಾ “ಮತ್ತೆ ವಾಪಸ್‌ ಪಡ್ಕೊಳ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 44:23; 48:20
  • +ಯೆಶಾ 49:25

ಯೆರೆಮೀಯ 31:12

ಪಾದಟಿಪ್ಪಣಿ

  • *

    ಅಥವಾ “ಒಳ್ಳೇ ವಿಷ್ಯಗಳನ್ನ ಕೊಟ್ಟಿರೋದ್ರಿಂದ.”

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 3:13; ಕೀರ್ತ 126:1; ಯೆಶಾ 51:11
  • +ಯೋವೇ 3:18
  • +ಯೆಶಾ 65:10
  • +ಯೆಶಾ 58:11
  • +ಯೆಶಾ 35:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 278

ಯೆರೆಮೀಯ 31:13

ಮಾರ್ಜಿನಲ್ ರೆಫರೆನ್ಸ್

  • +ಜೆಕ 8:4
  • +ಎಜ್ರ 3:12
  • +ಯೆಶಾ 51:3; 65:19

ಯೆರೆಮೀಯ 31:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:9; ಯೆಶಾ 63:7

ಯೆರೆಮೀಯ 31:15

ಪಾದಟಿಪ್ಪಣಿ

  • *

    ಅಥವಾ “ಮಕ್ಕಳಿಗಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 18:21, 25; ಯೆರೆ 40:1
  • +ಪ್ರಲಾ 1:16
  • +ಮತ್ತಾ 2:16-18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    12/15/2014, ಪು. 21

    8/15/2011, ಪು. 10

ಯೆರೆಮೀಯ 31:16

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 1:5; ಯೆರೆ 23:3; ಯೆಹೆ 11:17; ಹೋಶೇ 1:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2014, ಪು. 21

ಯೆರೆಮೀಯ 31:17

ಮಾರ್ಜಿನಲ್ ರೆಫರೆನ್ಸ್

  • +ಯೆರೆ 29:11
  • +ಯೆರೆ 46:27

ಯೆರೆಮೀಯ 31:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2012, ಪು. 26-27

ಯೆರೆಮೀಯ 31:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:1-3
  • +ಎಜ್ರ 9:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2012, ಪು. 27

ಯೆರೆಮೀಯ 31:20

ಮಾರ್ಜಿನಲ್ ರೆಫರೆನ್ಸ್

  • +ಯೆರೆ 31:9; ಹೋಶೇ 14:4
  • +ಹೋಶೇ 11:8
  • +ಧರ್ಮೋ 32:36; ಮೀಕ 7:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1994, ಪು. 12-13

ಯೆರೆಮೀಯ 31:21

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 62:10
  • +ಯೆಶಾ 35:8

ಯೆರೆಮೀಯ 31:23

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 1:26
  • +ಜೆಕ 8:3

ಯೆರೆಮೀಯ 31:24

ಮಾರ್ಜಿನಲ್ ರೆಫರೆನ್ಸ್

  • +ಯೆರೆ 33:12; ಯೆಹೆ 36:10, 11

ಯೆರೆಮೀಯ 31:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 107:9

ಯೆರೆಮೀಯ 31:27

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:9; ಯೆಹೆ 36:9; ಹೋಶೇ 2:23

ಯೆರೆಮೀಯ 31:28

ಮಾರ್ಜಿನಲ್ ರೆಫರೆನ್ಸ್

  • +ಯೆರೆ 44:27; 45:4
  • +ಕೀರ್ತ 102:16; 147:2; ಯೆರೆ 24:6

ಯೆರೆಮೀಯ 31:29

ಪಾದಟಿಪ್ಪಣಿ

  • *

    ಅಕ್ಷ. “ಮರಗಟ್ಟಿತು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 18:2-4

ಯೆರೆಮೀಯ 31:31

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:27, 28; ಲೂಕ 22:20; 1ಕೊರಿಂ 11:25; ಇಬ್ರಿ 8:8-12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2010, ಪು. 26-27

    2/1/1998, ಪು. 12-13

    2/1/1990, ಪು. 18-19, 32

ಯೆರೆಮೀಯ 31:32

ಪಾದಟಿಪ್ಪಣಿ

  • *

    ಬಹುಶಃ, “ಗಂಡ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5
  • +ಯೆಹೆ 16:59

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1998, ಪು. 12-13

ಯೆರೆಮೀಯ 31:33

ಪಾದಟಿಪ್ಪಣಿ

  • *

    ಅಥವಾ “ಅವರೊಳಗೆ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 11:19
  • +ಇಬ್ರಿ 10:16
  • +ಯೆರೆ 24:7; 30:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 11

    3/15/1998, ಪು. 13-14

    2/1/1998, ಪು. 15, 19-20

ಯೆರೆಮೀಯ 31:34

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 54:13; ಯೋಹಾ 17:3
  • +ಯೆಶಾ 11:9; ಹಬ 2:14
  • +ಯೆರೆ 33:8; 50:20; ಮತ್ತಾ 26:27, 28; ಇಬ್ರಿ 8:10-12; 9:15; 10:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 175

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 265-267

    ಕಾವಲಿನಬುರುಜು,

    2/1/1998, ಪು. 15-16, 19-20

    12/1/1997, ಪು. 12-13

    2/1/1990, ಪು. 18-19

    ಎಚ್ಚರ!,

    6/8/1995, ಪು. 14-16

ಯೆರೆಮೀಯ 31:35

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 51:15

ಯೆರೆಮೀಯ 31:36

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 54:10; ಯೆರೆ 33:20, 21

ಯೆರೆಮೀಯ 31:37

ಮಾರ್ಜಿನಲ್ ರೆಫರೆನ್ಸ್

  • +ಯೆರೆ 30:11

ಯೆರೆಮೀಯ 31:38

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:1; ಜೆಕ 14:10
  • +2ಪೂರ್ವ 26:9
  • +ನೆಹೆ 12:27; ಯೆಶಾ 44:28; ಯೆರೆ 30:18

ಯೆರೆಮೀಯ 31:39

ಮಾರ್ಜಿನಲ್ ರೆಫರೆನ್ಸ್

  • +ಜೆಕ 1:16

ಯೆರೆಮೀಯ 31:40

ಪಾದಟಿಪ್ಪಣಿ

  • *

    ಅಂದ್ರೆ, ಇಳಿಜಾರು ನೆಲದ ಮೇಲೆ ಮೆಟ್ಟಿಲು ಮೆಟ್ಟಿಲಾಗಿ ಮಾಡಿರೋ ಕೃಷಿಭೂಮಿ.

ಮಾರ್ಜಿನಲ್ ರೆಫರೆನ್ಸ್

  • +2ಸಮು 15:23; 2ಅರ 23:6; ಯೋಹಾ 18:1
  • +ನೆಹೆ 3:28
  • +ಯೋವೇ 3:17

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 31:1ಯಾಜ 26:12; ಯೆರೆ 30:22; 31:33
ಯೆರೆ. 31:3ಧರ್ಮೋ 7:8
ಯೆರೆ. 31:4ಯೆರೆ 33:7; ಆಮೋ 9:11
ಯೆರೆ. 31:4ಯೆರೆ 30:18, 19
ಯೆರೆ. 31:5ಆಮೋ 9:14; ಮೀಕ 4:4
ಯೆರೆ. 31:5ಧರ್ಮೋ 30:9; ಯೆಶಾ 65:21, 22
ಯೆರೆ. 31:6ಯೆಶಾ 2:3; ಯೆರೆ 50:4, 5
ಯೆರೆ. 31:7ಧರ್ಮೋ 32:43; ಯೆಶಾ 44:23
ಯೆರೆ. 31:7ಯೆಶಾ 1:9; ಯೆರೆ 23:3; ಯೋವೇ 2:32
ಯೆರೆ. 31:8ಯೆಶಾ 43:6; ಯೆರೆ 3:12
ಯೆರೆ. 31:8ಧರ್ಮೋ 30:4; ಯೆಹೆ 20:34; 34:12
ಯೆರೆ. 31:8ಯೆಶಾ 35:6; 42:16
ಯೆರೆ. 31:8ಎಜ್ರ 2:1, 64
ಯೆರೆ. 31:9ಯೆರೆ 50:4
ಯೆರೆ. 31:9ಯೆಶಾ 35:7; 49:10
ಯೆರೆ. 31:9ಆದಿ 48:14; ವಿಮೋ 4:22
ಯೆರೆ. 31:10ಯೆಶಾ 11:11; 42:10
ಯೆರೆ. 31:10ಯೆಶಾ 40:11; ಯೆಹೆ 34:11-13; ಮೀಕ 2:12
ಯೆರೆ. 31:11ಯೆಶಾ 44:23; 48:20
ಯೆರೆ. 31:11ಯೆಶಾ 49:25
ಯೆರೆ. 31:12ಎಜ್ರ 3:13; ಕೀರ್ತ 126:1; ಯೆಶಾ 51:11
ಯೆರೆ. 31:12ಯೋವೇ 3:18
ಯೆರೆ. 31:12ಯೆಶಾ 65:10
ಯೆರೆ. 31:12ಯೆಶಾ 58:11
ಯೆರೆ. 31:12ಯೆಶಾ 35:10
ಯೆರೆ. 31:13ಜೆಕ 8:4
ಯೆರೆ. 31:13ಎಜ್ರ 3:12
ಯೆರೆ. 31:13ಯೆಶಾ 51:3; 65:19
ಯೆರೆ. 31:14ಧರ್ಮೋ 30:9; ಯೆಶಾ 63:7
ಯೆರೆ. 31:15ಯೆಹೋ 18:21, 25; ಯೆರೆ 40:1
ಯೆರೆ. 31:15ಪ್ರಲಾ 1:16
ಯೆರೆ. 31:15ಮತ್ತಾ 2:16-18
ಯೆರೆ. 31:16ಎಜ್ರ 1:5; ಯೆರೆ 23:3; ಯೆಹೆ 11:17; ಹೋಶೇ 1:11
ಯೆರೆ. 31:17ಯೆರೆ 29:11
ಯೆರೆ. 31:17ಯೆರೆ 46:27
ಯೆರೆ. 31:19ಧರ್ಮೋ 30:1-3
ಯೆರೆ. 31:19ಎಜ್ರ 9:6
ಯೆರೆ. 31:20ಯೆರೆ 31:9; ಹೋಶೇ 14:4
ಯೆರೆ. 31:20ಹೋಶೇ 11:8
ಯೆರೆ. 31:20ಧರ್ಮೋ 32:36; ಮೀಕ 7:18
ಯೆರೆ. 31:21ಯೆಶಾ 62:10
ಯೆರೆ. 31:21ಯೆಶಾ 35:8
ಯೆರೆ. 31:23ಯೆಶಾ 1:26
ಯೆರೆ. 31:23ಜೆಕ 8:3
ಯೆರೆ. 31:24ಯೆರೆ 33:12; ಯೆಹೆ 36:10, 11
ಯೆರೆ. 31:25ಕೀರ್ತ 107:9
ಯೆರೆ. 31:27ಧರ್ಮೋ 30:9; ಯೆಹೆ 36:9; ಹೋಶೇ 2:23
ಯೆರೆ. 31:28ಯೆರೆ 44:27; 45:4
ಯೆರೆ. 31:28ಕೀರ್ತ 102:16; 147:2; ಯೆರೆ 24:6
ಯೆರೆ. 31:29ಯೆಹೆ 18:2-4
ಯೆರೆ. 31:31ಮತ್ತಾ 26:27, 28; ಲೂಕ 22:20; 1ಕೊರಿಂ 11:25; ಇಬ್ರಿ 8:8-12
ಯೆರೆ. 31:32ವಿಮೋ 19:5
ಯೆರೆ. 31:32ಯೆಹೆ 16:59
ಯೆರೆ. 31:33ಯೆಹೆ 11:19
ಯೆರೆ. 31:33ಇಬ್ರಿ 10:16
ಯೆರೆ. 31:33ಯೆರೆ 24:7; 30:22
ಯೆರೆ. 31:34ಯೆಶಾ 54:13; ಯೋಹಾ 17:3
ಯೆರೆ. 31:34ಯೆಶಾ 11:9; ಹಬ 2:14
ಯೆರೆ. 31:34ಯೆರೆ 33:8; 50:20; ಮತ್ತಾ 26:27, 28; ಇಬ್ರಿ 8:10-12; 9:15; 10:17
ಯೆರೆ. 31:35ಯೆಶಾ 51:15
ಯೆರೆ. 31:36ಯೆಶಾ 54:10; ಯೆರೆ 33:20, 21
ಯೆರೆ. 31:37ಯೆರೆ 30:11
ಯೆರೆ. 31:38ನೆಹೆ 12:27; ಯೆಶಾ 44:28; ಯೆರೆ 30:18
ಯೆರೆ. 31:38ನೆಹೆ 3:1; ಜೆಕ 14:10
ಯೆರೆ. 31:382ಪೂರ್ವ 26:9
ಯೆರೆ. 31:39ಜೆಕ 1:16
ಯೆರೆ. 31:402ಸಮು 15:23; 2ಅರ 23:6; ಯೋಹಾ 18:1
ಯೆರೆ. 31:40ನೆಹೆ 3:28
ಯೆರೆ. 31:40ಯೋವೇ 3:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 31:1-40

ಯೆರೆಮೀಯ

31 ಯೆಹೋವ ಹೇಳೋದು ಏನಂದ್ರೆ “ಆ ಸಮಯದಲ್ಲಿ ಇಸ್ರಾಯೇಲಿನ ಎಲ್ಲ ಕುಟುಂಬಗಳಿಗೆ ನಾನು ದೇವರಾಗ್ತೀನಿ, ಅವರು ನನ್ನ ಜನ್ರಾಗ್ತಾರೆ.”+

 2 ಯೆಹೋವ ಹೇಳೋದು ಏನಂದ್ರೆ

“ಕತ್ತಿಯಿಂದ ಸಾಯದೇ ಉಳಿದವ್ರಿಗೆ ಕಾಡಲ್ಲಿ ದಯೆ ಸಿಕ್ತು

ಆಗ ಇಸ್ರಾಯೇಲ ತಾನು ವಾಸ ಇದ್ದಲ್ಲಿಗೆ ನಡ್ಕೊಂಡು ಹೋಗ್ತಿದ್ದ.”

 3 ದೂರದಿಂದ ಯೆಹೋವ ನನಗೆ ಕಾಣಿಸ್ಕೊಂಡು ಹೀಗಂದನು

“ನಿನ್ನನ್ನ ಪ್ರೀತಿಸಿದೆ, ನಿನ್ನ ಮೇಲೆ ಶಾಶ್ವತ ಪ್ರೀತಿ ಇಟ್ಟೆ.

ಅದಕ್ಕೆ ನಾನು ನಿನಗೆ ಶಾಶ್ವತ ಪ್ರೀತಿ ತೋರಿಸಿ ನಿನ್ನನ್ನ ನನ್ನ ಹತ್ರ ಸೆಳ್ಕೊಂಡಿದ್ದೀನಿ.*+

 4 ಅಷ್ಟೇ ಅಲ್ಲ ನಾನು ನಿನ್ನನ್ನ ಮತ್ತೆ ಕಟ್ತೀನಿ.+

ಕನ್ಯೆಯಾದ ಇಸ್ರಾಯೇಲೇ, ನೀನು ಮತ್ತೆ ದಮ್ಮಡಿಗಳನ್ನ ಕೈಯಲ್ಲಿ ಹಿಡ್ಕೊಂಡು

ಸಂತೋಷದಿಂದ ಕುಣಿತಾ* ಹೋಗ್ತೀಯ.+

 5 ನೀನು ಮತ್ತೆ ಸಮಾರ್ಯದ ಬೆಟ್ಟಗಳಲ್ಲಿ ದ್ರಾಕ್ಷಿತೋಟಗಳನ್ನ ಮಾಡ್ಕೊಳ್ತೀಯ.+

ಆ ತೋಟಗಳನ್ನ ಮಾಡಿದವ್ರೇ ಅದ್ರ ಹಣ್ಣು ತಿಂತಾರೆ.+

 6 ‘ಬನ್ನಿ, ಚೀಯೋನ್‌ ಬೆಟ್ಟ ಹತ್ತಿ ಹೋಗೋಣ, ನಮ್ಮ ದೇವರಾದ ಯೆಹೋವನ ಹತ್ರ ಹೋಗೋಣ’+

ಅಂತ ಎಫ್ರಾಯೀಮಿನ ಬೆಟ್ಟಗಳಲ್ಲಿರೋ ಕಾವಲುಗಾರರು ಕೂಗಿ ಹೇಳೋ ದಿನ ಬರುತ್ತೆ.”

 7 ಯೆಹೋವ ಹೀಗೆ ಹೇಳ್ತಾನೆ

“ಯಾಕೋಬನನ್ನ ನೋಡಿ ಖುಷಿಯಿಂದ ಹಾಡಿ.

ಅವ್ರೆಲ್ಲರಿಗಿಂತ ನೀವು ಮುಂದೆ ಇರೋದಕ್ಕೆ ಆನಂದದಿಂದ ಆರ್ಭಟಿಸಿ.+

ಸಂದೇಶವನ್ನ ಸಾರಿಹೇಳಿ, ಹಾಡಿ ಹೊಗಳ್ತಾ

‘ಯೆಹೋವನೇ, ಇಸ್ರಾಯೇಲ್ಯರಲ್ಲಿ ಉಳಿದಿರೋ ನಿನ್ನ ಜನ್ರನ್ನ ಕಾಪಾಡು’+ ಅಂತ ಹೇಳಿ.

 8 ನಾನು ಅವ್ರನ್ನ ಉತ್ತರದ ದೇಶದಿಂದ ವಾಪಸ್‌ ಕರ್ಕೊಂಡು ಬರ್ತಿನಿ.+

ಭೂಮಿಯ ಬಹುದೂರದ ಜಾಗಗಳಿಂದ ಅವ್ರನ್ನ ಒಟ್ಟುಗೂಡಿಸ್ತೀನಿ,+

ಅವ್ರಲ್ಲಿ ಕುರುಡರು, ಕುಂಟರು,+

ಗರ್ಭಿಣಿಯರು, ಹೆರಿಗೆ ಆಗ್ತಿರೋ ಸ್ತ್ರೀಯರು ಹೀಗೆ ಎಲ್ರೂ ಇರ್ತಾರೆ.

ಒಂದು ದೊಡ್ಡ ಸಭೆಯಾಗಿ ಅವರು ಇಲ್ಲಿಗೆ ವಾಪಸ್‌ ಬರ್ತಾರೆ.+

 9 ಅವರು ಅಳ್ತಾ ಬರ್ತಾರೆ.+

ನನ್ನ ದಯೆಗಾಗಿ ಬೇಡ್ತಾರೆ, ನಾನು ಅವ್ರಿಗೆ ದಾರಿ ತೋರಿಸ್ತೀನಿ.

ಅವ್ರನ್ನ ನೀರಿನ ಕಾಲುವೆ ಹತ್ರ ನಡಿಸ್ತೀನಿ,+

ಅವ್ರನ್ನ ಸಮತಟ್ಟಾದ ದಾರಿಯಲ್ಲಿ ನಡಿಸ್ತೀನಿ, ಹಾಗಾಗಿ ಅವರು ಎಡವಿ ಬೀಳಲ್ಲ.

ಯಾಕಂದ್ರೆ ನಾನು ಇಸ್ರಾಯೇಲನಿಗೆ ತಂದೆ, ಎಫ್ರಾಯೀಮ್‌ ನನ್ನ ಮೊದಲನೇ ಮಗ.”+

10 ದೇಶಗಳೇ, ಯೆಹೋವನ ಮಾತು ಕೇಳಿ

ದೂರದೂರದ ದ್ವೀಪಗಳಲ್ಲಿ ಹೀಗೆ ಸಾರಿಹೇಳಿ+

“ಇಸ್ರಾಯೇಲನನ್ನ ಚದರಿಸಿದಾತನೇ ಅವನನ್ನ ಒಟ್ಟುಸೇರಿಸ್ತಾನೆ.

ಕುರುಬ ತನ್ನ ಕುರಿಗಳನ್ನ ನೋಡ್ಕೊಳ್ಳೋ ತರ ಆತನು ಇಸ್ರಾಯೇಲನನ್ನ ಚೆನ್ನಾಗಿ ನೋಡ್ಕೊಳ್ತಾನೆ.+

11 ಯೆಹೋವ ಯಾಕೋಬನನ್ನ ಬಿಡಿಸ್ತಾನೆ+

ಅವನಿಗಿಂತ ಬಲಿಷ್ಠನ ಕೈಯಿಂದ ತಪ್ಪಿಸಿ ಕಾಪಾಡ್ತಾನೆ.*+

12 ಅವರು ಚೀಯೋನ್‌ ಬೆಟ್ಟದ ತುದಿಗೆ ಬಂದು ಆನಂದದಿಂದ ಆರ್ಭಟಿಸ್ತಾರೆ,+

ಯೆಹೋವ ಅವ್ರಿಗೆ ಒಳ್ಳೇದು ಮಾಡೋದ್ರಿಂದ,*

ಧಾನ್ಯ, ಹೊಸ ದ್ರಾಕ್ಷಾಮದ್ಯ,+ ಎಣ್ಣೆ ಕೊಡೋದ್ರಿಂದ,

ಅವ್ರ ಆಡುಕುರಿಗಳಿಗೆ ಪ್ರಾಣಿಗಳಿಗೆ ತುಂಬ ಮರಿಗಳು ಹುಟ್ಟೋದ್ರಿಂದ+

ಅವ್ರ ಮುಖ ಹೊಳಿಯುತ್ತೆ.

ಚೆನ್ನಾಗಿ ನೀರು ಹಾಕಿ ಬೆಳೆಸಿದ ತೋಟದ ತರ ಅವರಾಗ್ತಾರೆ,+

ಯಾವತ್ತೂ ಸೊರಗಿ ಹೋಗಲ್ಲ.”+

13 “ಆಗ ಕನ್ಯೆ ಖುಷಿಯಿಂದ ಕುಣಿದಾಡ್ತಾಳೆ.

ಯುವಕರು ವಯಸ್ಸಾದವರು ಜೊತೆಯಾಗಿ ಕುಣಿತಾರೆ.+

ಅವ್ರ ದುಃಖ ತೆಗೆದು ಸಂತೋಷಪಡೋ ತರ ಮಾಡ್ತೀನಿ.+

ಅವ್ರನ್ನ ಸಮಾಧಾನ ಮಾಡಿ, ಅವರು ತಮ್ಮ ನೋವನ್ನ ಬಿಟ್ಟು ಖುಷಿಯಿಂದ ಇರೋ ಹಾಗೆ ಮಾಡ್ತೀನಿ.+

14 ನಾನು ಪುರೋಹಿತರಿಗೆ ಸಮೃದ್ಧ ಆಹಾರ ಕೊಡ್ತೀನಿ,

ನಾನು ಒಳ್ಳೊಳ್ಳೆ ವಸ್ತುಗಳನ್ನ ಕೊಡೋದ್ರಿಂದ ನನ್ನ ಜನ್ರು ತೃಪ್ತಿಯಿಂದ ಇರ್ತಾರೆ”+ ಅಂತ ಯೆಹೋವ ಹೇಳ್ತಾನೆ.

15 “ಯೆಹೋವ ಹೇಳೋದು ಏನಂದ್ರೆ

‘ಗೋಳಾಡೋ, ಗೊಳೋ ಅಂತ ಅಳೋ ಶಬ್ದ ರಾಮದಿಂದ ಕೇಳಿಸ್ತು.+

ರಾಹೇಲ ತನ್ನ ಗಂಡು ಮಕ್ಕಳಿಗಾಗಿ* ಅಳ್ತಾ ಇದ್ದಾಳೆ,+

ಅವರು ಇಲ್ಲ ಅನ್ನೋ ದುಃಖ ಎಷ್ಟಿದೆ ಅಂದ್ರೆ ಅವಳನ್ನ ಎಷ್ಟು ಸಮಾಧಾನ ಮಾಡಿದ್ರು ಸಮಾಧಾನ ಆಗ್ತಿಲ್ಲ.’”+

16 ಯೆಹೋವ ಹೇಳೋದು ಏನಂದ್ರೆ

“‘ನೀನು ಅಳಬೇಡ, ಕಣ್ಣೀರು ಸುರಿಸಬೇಡ,

ಯಾಕಂದ್ರೆ ನೀನು ಮಾಡಿದ ಕೆಲಸಗಳಿಗೆ ನಾನು ಪ್ರತಿಫಲ ಕೊಡ್ತೀನಿ.

ನಿನ್ನ ಗಂಡು ಮಕ್ಕಳು ಶತ್ರು ದೇಶದಿಂದ ವಾಪಸ್‌ ಬರ್ತಾರೆ’+ ಅಂತ ಯೆಹೋವ ಹೇಳ್ತಾನೆ.

17 ‘ನಿನಗೆ ಒಳ್ಳೇ ಭವಿಷ್ಯ ಇದೆ,+

ನಿನ್ನ ಮಕ್ಕಳು ಅವ್ರ ದೇಶಕ್ಕೆ ವಾಪಸ್‌ ಬರ್ತಾರೆ’ ಅಂತ ಯೆಹೋವ ಹೇಳ್ತಾನೆ.”+

18 “ಎಫ್ರಾಯೀಮ ಗೋಳಾಡೋದನ್ನ ಕಿವಿಯಾರೆ ಕೇಳಿಸ್ಕೊಂಡಿದ್ದೀನಿ,

ಅವನು ಹೀಗಂದ ‘ನೊಗಕ್ಕೆ ಕಟ್ಟಿ ಪಳಗಿಸಿರದ ಎಳೆ ಹೋರಿ ತರ ನಾನಿದ್ದೆ,

ನನ್ನನ್ನ ತಿದ್ದಿದೆ, ನಾನು ತಿದ್ಕೊಂಡೆ.

ನನ್ನನ್ನ ಮತ್ತೆ ನಿನ್ನ ಹತ್ರ ಕರ್ಕೊ, ನಾನು ಮನಸಾರೆ ವಾಪಸ್‌ ಬರ್ತಿನಿ.

ಯಾಕಂದ್ರೆ ಯೆಹೋವನೇ, ನೀನೇ ನನ್ನ ದೇವರು.

19 ನಾನು ವಾಪಸ್‌ ಬಂದ ಮೇಲೆ ನಾನು ಮುಂಚೆ ಮಾಡಿದ್ದನ್ನ ನೆನಸಿ ನೋವು ಆಯ್ತು,+

ನನ್ನ ತಪ್ಪನ್ನ ನನಗೆ ಅರ್ಥ ಮಾಡಿಸಿದಾಗ ದುಃಖದಿಂದ ನನ್ನ ತೊಡೆ ಹೊಡ್ಕೊಂಡೆ.

ಯೌವನದಲ್ಲಿ ನಾನು ಮಾಡಿದ ಪಾಪಗಳ ಕಳಂಕ ನನ್ನ ಮೇಲಿದ್ದ ಕಾರಣ

ನನಗೆ ನಾಚಿಕೆ, ಅವಮಾನ ಆಯ್ತು.’”+

20 ಯೆಹೋವ ಹೇಳೋದು ಏನಂದ್ರೆ “ಎಫ್ರಾಯೀಮ ನನ್ನ ಪ್ರೀತಿಯ ಮಗ ಅಲ್ವಾ? ನನ್ನ ಮುದ್ದು ಮಗು ಅಲ್ವಾ?+

ನಾನು ಅವನನ್ನ ಎಷ್ಟೋ ಸಲ ಗದರಿಸಿದ್ರೂ ನನಗೆ ಈಗ್ಲೂ ತುಂಬ ನೆನಪಾಗ್ತಾನೆ.

ಹಾಗಾಗಿ ಅವನನ್ನ ನೆನಸ್ಕೊಂಡಾಗೆಲ್ಲ ನನ್ನ ಕರುಳು ಚುರ್ರೆನ್ನುತ್ತೆ.+

ನಾನು ಖಂಡಿತ ಅವನಿಗೆ ಕನಿಕರ ತೋರಿಸ್ತೀನಿ.”+

21 “ನೀನು ರಸ್ತೆ ಗುರುತುಗಳನ್ನ ನಿಲ್ಲಿಸ್ಕೊ,

ಸೂಚನಾ ಫಲಕಗಳನ್ನ ಹಾಕೊ.+

ನೀನು ಹೋಗಬೇಕಾದ ಹೆದ್ದಾರಿ ಮೇಲೆನೇ ನಿನ್ನ ಗಮನ ಇರಲಿ.+

ಕನ್ಯೆಯಾದ ಇಸ್ರಾಯೇಲೇ, ವಾಪಸ್‌ ಬಾ, ನಿನ್ನ ಈ ಪಟ್ಟಣಗಳಿಗೆ ವಾಪಸ್‌ ಬಾ.

22 ನಂಬಿಕೆ ದ್ರೋಹ ಮಾಡಿದ ಮಗಳೇ, ಇನ್ನೆಷ್ಟು ಸಮಯ ಅಲ್ಲಿಇಲ್ಲಿ ಅಂತ ಅಲೆದಾಡ್ತೀಯಾ?

ಯೆಹೋವ ಭೂಮಿಯಲ್ಲಿ ಏನೋ ಒಂದು ಹೊಸ ವಿಷ್ಯ ಮಾಡಿದ್ದಾನೆ,

ಅದೇನಂದ್ರೆ ಒಬ್ಬ ಸ್ತ್ರೀ ಪುರುಷನನ್ನ ತವಕದಿಂದ ಹುಡ್ಕೊಂಡು ಬರ್ತಾಳೆ.”

23 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ಕೈದಿಗಳಾಗಿ ಹೋದ ಜನ್ರನ್ನ ನಾನು ಒಟ್ಟುಗೂಡಿಸಿ ವಾಪಸ್‌ ಕರ್ಕೊಂಡು ಬಂದಾಗ ಅವರು ಯೆಹೂದ ದೇಶದಲ್ಲಿ, ಅದ್ರ ಪಟ್ಟಣಗಳಲ್ಲಿ ‘ಸರಿಯಾದ ವಿಷ್ಯಗಳನ್ನೇ ಮಾಡೋ ಊರೇ,+ ಪವಿತ್ರ ಬೆಟ್ಟವೇ+ ಯೆಹೋವ ನಿನ್ನನ್ನ ಆಶೀರ್ವದಿಸ್ಲಿ’ ಅಂತ ಮತ್ತೆ ಹೇಳ್ತಾರೆ. 24 ಯೆಹೂದದಲ್ಲಿ, ಅದ್ರ ಎಲ್ಲ ಪಟ್ಟಣಗಳಲ್ಲಿ ರೈತರು, ಕುರುಬರು ಹೀಗೆ ಎಲ್ರು ಒಟ್ಟಿಗೆ ಇರ್ತಾರೆ.+ 25 ಯಾಕಂದ್ರೆ ಸುಸ್ತಾಗಿರೋರಿಗೆ ನಾನು ಚೈತನ್ಯ ಕೊಡ್ತೀನಿ, ಸೊರಗಿ ಹೋದವರಿಗೆ ಬಲ ತುಂಬ್ತೀನಿ.”+

26 ಆಗ ನಾನು ನಿದ್ದೆಯಿಂದ ಎಚ್ಚೆತ್ಕೊಂಡು ಕಣ್ಣುಬಿಟ್ಟೆ, ಎಂಥಾ ಸುಖನಿದ್ದೆ ನನಗೆ!

27 ಯೆಹೋವ ಹೇಳೋದು ಏನಂದ್ರೆ “ನೋಡು! ಇಸ್ರಾಯೇಲಿನ ಜನ್ರ, ಯೆಹೂದದ ಜನ್ರ ಸಂಖ್ಯೆಯನ್ನ ತುಂಬ ಹೆಚ್ಚಿಸೋ ದಿನ ಬರುತ್ತೆ. ನಾನು ಅವ್ರ ಸಾಕುಪ್ರಾಣಿಗಳ ಸಂಖ್ಯೆಯನ್ನ ಕೂಡ ತುಂಬ ಜಾಸ್ತಿ ಮಾಡ್ತೀನಿ.”+

28 ಯೆಹೋವ ಹೇಳೋದು ಏನಂದ್ರೆ “ಅವ್ರನ್ನ ಕಿತ್ತುಹಾಕೋಕೆ, ಕೆಡವಿಹಾಕೋಕೆ, ಹಾಳುಮಾಡೋಕೆ, ನಾಶಮಾಡೋಕೆ, ಹಾನಿಮಾಡೋಕೆ ನಾನು ಅವ್ರ ಮೇಲೆ ಕಣ್ಣಿಟ್ಟಿದ್ದೆ.+ ಅದೇ ತರ ಇನ್ನು ಮೇಲೆ ಅವ್ರನ್ನ ಕಟ್ಟೋಕೆ, ನೆಡೋಕೆ ಅವ್ರ ಮೇಲೆ ಕಣ್ಣಿಡ್ತೀನಿ.+ 29 ಅವರು ಆ ದಿನಗಳಲ್ಲಿ ‘ಅಪ್ಪಂದಿರು ಹುಳಿದ್ರಾಕ್ಷಿ ತಿಂದ್ರು, ಆದ್ರೆ ಮಕ್ಕಳ ಹಲ್ಲು ಜುಮ್ಮಂತು’*+ ಅಂತ ಹೇಳಲ್ಲ. 30 ಯಾಕಂದ್ರೆ ಹುಳಿದ್ರಾಕ್ಷಿ ತಿಂದವನ ಹಲ್ಲುಗಳೇ ಜುಮ್ಮನ್ನುತ್ತೆ. ತಪ್ಪು ಮಾಡಿದವನೇ ಸಾಯ್ತಾನೆ.”

31 ಯೆಹೋವ ಹೇಳೋದು ಏನಂದ್ರೆ “ನೋಡು! ನಾನು ಇಸ್ರಾಯೇಲ್‌ ಜನ್ರ ಜೊತೆ, ಯೆಹೂದದ ಜನ್ರ ಜೊತೆ ಒಂದು ಹೊಸ ಒಪ್ಪಂದ ಮಾಡ್ಕೊಳ್ಳೋ ದಿನ ಬರುತ್ತೆ.+ 32 ಈ ಒಪ್ಪಂದ ನಾನು ಅವ್ರ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದದ ತರ ಇರಲ್ಲ. ಅವ್ರ ಪೂರ್ವಜರನ್ನ ನಾನು ಕೈಹಿಡಿದು ಈಜಿಪ್ಟ್‌ ದೇಶದಿಂದ ಕರ್ಕೊಂಡು ಬಂದ ದಿನ ನಾನು ಅವ್ರ ಜೊತೆ ಆ ಒಪ್ಪಂದ ಮಾಡ್ದೆ.+ ‘ನಾನು ಅವ್ರ ನಿಜವಾದ ಯಜಮಾನನಾಗಿದ್ರೂ* ಅವರು ನನ್ನ ಆ ಒಪ್ಪಂದ ಮುರಿದ್ರು’+ ಅಂತ ಯೆಹೋವ ಹೇಳ್ತಾನೆ.”

33 “ಆ ದಿನಗಳಾದ ಮೇಲೆ ನಾನು ಇಸ್ರಾಯೇಲ್‌ ಜನ್ರ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ. ಅದೇನಂದ್ರೆ ನಾನು ನನ್ನ ನಿಯಮಗಳನ್ನ ಅವ್ರ ಅಂತರಂಗದಲ್ಲಿ* ಇಡ್ತೀನಿ.+ ಅವ್ರ ಹೃದಯದಲ್ಲಿ ಅದನ್ನ ಬರಿತೀನಿ.+ ನಾನು ಅವ್ರಿಗೆ ದೇವರಾಗ್ತೀನಿ, ಅವರು ನನ್ನ ಜನ್ರಾಗ್ತಾರೆ”+ ಅಂತ ಯೆಹೋವ ಹೇಳ್ತಾನೆ.

34 “‘ಯೆಹೋವನನ್ನ ತಿಳ್ಕೊಳ್ಳಿ’+ ಅಂತ ಯಾರೂ ಅಕ್ಕಪಕ್ಕದ ಮನೆಯವರಿಗೆ ಅಣ್ಣ-ತಮ್ಮನಿಗೆ ಇನ್ನು ಮುಂದೆ ಹೇಳಲ್ಲ. ಯಾಕಂದ್ರೆ ಚಿಕ್ಕವರಿಂದ ದೊಡ್ಡವರ ತನಕ ಎಲ್ರಿಗೂ ನನ್ನ ಬಗ್ಗೆ ಗೊತ್ತಿರುತ್ತೆ.+ ನಾನು ಅವ್ರ ತಪ್ಪುಗಳನ್ನ ಕ್ಷಮಿಸ್ತೀನಿ. ಅವ್ರ ಪಾಪಗಳನ್ನ ಇನ್ನು ಯಾವತ್ತೂ ನೆನಪಿಸ್ಕೊಳ್ಳಲ್ಲ” ಅಂತ ಯೆಹೋವ ಹೇಳ್ತಾನೆ.+

35 ಯೆಹೋವ ಹಗಲಲ್ಲಿ ಬೆಳಕು ಕೊಡೋಕೆ ಸೂರ್ಯನನ್ನ ಮಾಡಿದನು

ರಾತ್ರಿಯಲ್ಲಿ ಬೆಳಕು ಕೊಡೋಕೆ ಚಂದ್ರ ನಕ್ಷತ್ರಗಳಿಗೆ ನಿಯಮಗಳನ್ನ ಇಟ್ಟನು

ಸಮುದ್ರ ಕದಡಿ ಅಲೆಗಳನ್ನ ಅಬ್ಬರಿಸೋ ಹಾಗೆ ಮಾಡೋ ಶಕ್ತಿ ಇರೋನು

ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋನು ಹೇಳೋದು ಏನಂದ್ರೆ,+

36 “‘ಈ ನಿಯಮಗಳು ಹೇಗೆ ಯಾವತ್ತೂ ಅಳಿದು ಹೋಗಲ್ವೋ

ಅದೇ ರೀತಿ ಇಸ್ರಾಯೇಲಿನ ವಂಶದವರು ಒಂದು ದೇಶವಾಗಿ ನನ್ನ ಕಣ್ಮುಂದಿಂದ ಯಾವತ್ತೂ ನಾಶ ಆಗಲ್ಲ’”+ ಅಂತ ಯೆಹೋವ ಹೇಳ್ತಾನೆ.

37 ಯೆಹೋವ ಹೀಗೆ ಹೇಳ್ತಾನೆ “‘ಮೇಲಿರೋ ಆಕಾಶ ಅಳೆಯೋಕೆ ಹೇಗೆ ಆಗಲ್ವೋ, ಕೆಳಗಿರೋ ಭೂಮಿಯ ಅಡಿಪಾಯ ಕಂಡುಹಿಡಿಯೋಕೆ ಹೇಗೆ ಆಗಲ್ವೋ ಹಾಗೇ ಇಸ್ರಾಯೇಲ್ಯರ ವಂಶದವರು ಮಾಡೋ ಕೆಲಸಗಳಿಗಾಗಿ ಅವ್ರೆಲ್ಲರನ್ನ ನಾಶ ಮಾಡೋಕೆ ಆಗಲ್ಲ’ ಅಂತ ಯೆಹೋವ ಹೇಳ್ತಾನೆ.”+

38 ಯೆಹೋವ ಹೇಳೋದು ಏನಂದ್ರೆ “ಯೆಹೋವನ ಗೌರವಕ್ಕಾಗಿ ಈ ಪಟ್ಟಣವನ್ನ ಹನನೇಲನ ಬುರುಜಿಂದ+ ‘ಮೂಲೆಬಾಗಿಲ+ ತನಕ’ ಕಟ್ಟೋ ದಿನ ಬರುತ್ತೆ.+ 39 ಆ ಪಟ್ಟಣ ನೇರವಾಗಿ ಗಾರೇಬ ಬೆಟ್ಟದ ತನಕ, ಅಲ್ಲಿಂದ ಗೋಯದ ಕಡೆ ದಾರ ಹಿಡಿದು ಅಳತೆ ಮಾಡ್ತಾರೆ.+ 40 ಹೆಣಗಳು, ಬೂದಿ ಬಿದ್ದಿರೋ ಎಲ್ಲ ಕಣಿವೆ, ಕಿದ್ರೋನ್‌ ಕಣಿವೆಯ+ ತನಕ ಇರೋ ಎಲ್ಲ ಮೆಟ್ಟಿಲುಪಾತಿಗಳು,* ಪೂರ್ವದ ಕಡೆಗಿರೋ ‘ಕುದುರೆ ಬಾಗಿಲು’+ ಮೂಲೆ ತನಕ ಇರೋ ಪ್ರದೇಶವೆಲ್ಲ ಯೆಹೋವನಿಗೆ ಪವಿತ್ರ ಆಗುತ್ತೆ.+ ಅದನ್ನ ಯಾವತ್ತೂ ಕಿತ್ತು ಹಾಕಲ್ಲ, ಕೆಡವಿನೂ ಹಾಕಲ್ಲ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ