ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಮೊದಲ್ನೇ ಮಕ್ಕಳೆಲ್ಲ ಯೆಹೋವನಿಗೆ ಸೇರಿದ್ದಾರೆ (1, 2)

      • ಹುಳಿ ಇಲ್ಲದ ರೊಟ್ಟಿ ಹಬ್ಬ (3-10)

      • ಮೊದಲ್ನೇ ಮಕ್ಕಳೆಲ್ಲ ದೇವರಿಗೆ ಮೀಸಲು (11-16)

      • ಕೆಂಪು ಸಮುದ್ರದ ಕಡೆಗೆ ಇಸ್ರಾಯೇಲ್ಯರು (17-20)

      • ಮೋಡ ಮತ್ತು ಬೆಂಕಿ (21, 22)

ವಿಮೋಚನಕಾಂಡ 13:2

ಪಾದಟಿಪ್ಪಣಿ

  • *

    ಅಕ್ಷ. “ಪವಿತ್ರೀಕರಿಸು.”

ಮಾರ್ಜಿನಲ್ ರೆಫರೆನ್ಸ್

  • +ಅರ 3:13; 18:15; ಧರ್ಮೋ 15:19; ಲೂಕ 2:22, 23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2021, ಪು. 1

ವಿಮೋಚನಕಾಂಡ 13:3

ಪಾದಟಿಪ್ಪಣಿ

  • *

    ಅಕ್ಷ. “ಬಲಿಷ್ಠ ಕೈಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:42; ಧರ್ಮೋ 16:3
  • +ಧರ್ಮೋ 4:34; ನೆಹೆ 9:10

ವಿಮೋಚನಕಾಂಡ 13:4

ಪಾದಟಿಪ್ಪಣಿ

  • *

    ಅಥವಾ “ನೈಸಾನ್‌.” ಪರಿಶಿಷ್ಟ ಬಿ15 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:1

ವಿಮೋಚನಕಾಂಡ 13:5

ಮಾರ್ಜಿನಲ್ ರೆಫರೆನ್ಸ್

  • +ಆದಿ 15:18; ವಿಮೋ 6:5, 8
  • +ವಿಮೋ 3:17; ಧರ್ಮೋ 8:7-9
  • +ವಿಮೋ 3:8; 34:11

ವಿಮೋಚನಕಾಂಡ 13:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:15; 34:18

ವಿಮೋಚನಕಾಂಡ 13:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:15
  • +ಧರ್ಮೋ 16:3

ವಿಮೋಚನಕಾಂಡ 13:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:26, 27

ವಿಮೋಚನಕಾಂಡ 13:9

ಪಾದಟಿಪ್ಪಣಿ

  • *

    ಅಕ್ಷ. “ಬಲಿಷ್ಠ ಕೈಯಿಂದ.”

  • *

    ಅಥವಾ “ಜ್ಞಾಪಕದ.”

  • *

    ಅಕ್ಷ. “ಯೆಹೋವನ ನಿಯಮ ನಿಮ್ಮ ಬಾಯಲ್ಲಿರುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:14; ಧರ್ಮೋ 11:18

ವಿಮೋಚನಕಾಂಡ 13:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:24, 25

ವಿಮೋಚನಕಾಂಡ 13:11

ಮಾರ್ಜಿನಲ್ ರೆಫರೆನ್ಸ್

  • +ಆದಿ 15:18

ವಿಮೋಚನಕಾಂಡ 13:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:29; 34:19, 20; ಯಾಜ 27:26; ಅರ 3:13; ಲೂಕ 2:22, 23

ವಿಮೋಚನಕಾಂಡ 13:13

ಮಾರ್ಜಿನಲ್ ರೆಫರೆನ್ಸ್

  • +ಅರ 18:15

ವಿಮೋಚನಕಾಂಡ 13:14

ಪಾದಟಿಪ್ಪಣಿ

  • *

    ಅಕ್ಷ. “ಬಲಿಷ್ಠ ಕೈಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:7, 8

ವಿಮೋಚನಕಾಂಡ 13:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 5:2
  • +ವಿಮೋ 12:29; ಕೀರ್ತ 78:51

ವಿಮೋಚನಕಾಂಡ 13:16

ಪಾದಟಿಪ್ಪಣಿ

  • *

    ಅಕ್ಷ. “ಬಲಿಷ್ಠ ಕೈಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:18

ವಿಮೋಚನಕಾಂಡ 13:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 8/2020, ಪು. 1

ವಿಮೋಚನಕಾಂಡ 13:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:2, 3; ಅರ 33:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2018, ಪು. 26

ವಿಮೋಚನಕಾಂಡ 13:19

ಮಾರ್ಜಿನಲ್ ರೆಫರೆನ್ಸ್

  • +ಆದಿ 50:24, 25; ಯೆಹೋ 24:32; ಇಬ್ರಿ 11:22

ವಿಮೋಚನಕಾಂಡ 13:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:19
  • +ಅರ 9:15; ಕೀರ್ತ 78:14

ವಿಮೋಚನಕಾಂಡ 13:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 105:39; 1ಕೊರಿಂ 10:1

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 13:2ಅರ 3:13; 18:15; ಧರ್ಮೋ 15:19; ಲೂಕ 2:22, 23
ವಿಮೋ. 13:3ವಿಮೋ 12:42; ಧರ್ಮೋ 16:3
ವಿಮೋ. 13:3ಧರ್ಮೋ 4:34; ನೆಹೆ 9:10
ವಿಮೋ. 13:4ಧರ್ಮೋ 16:1
ವಿಮೋ. 13:5ಆದಿ 15:18; ವಿಮೋ 6:5, 8
ವಿಮೋ. 13:5ವಿಮೋ 3:17; ಧರ್ಮೋ 8:7-9
ವಿಮೋ. 13:5ವಿಮೋ 3:8; 34:11
ವಿಮೋ. 13:6ವಿಮೋ 12:15; 34:18
ವಿಮೋ. 13:7ವಿಮೋ 23:15
ವಿಮೋ. 13:7ಧರ್ಮೋ 16:3
ವಿಮೋ. 13:8ವಿಮೋ 12:26, 27
ವಿಮೋ. 13:9ವಿಮೋ 12:14; ಧರ್ಮೋ 11:18
ವಿಮೋ. 13:10ವಿಮೋ 12:24, 25
ವಿಮೋ. 13:11ಆದಿ 15:18
ವಿಮೋ. 13:12ವಿಮೋ 22:29; 34:19, 20; ಯಾಜ 27:26; ಅರ 3:13; ಲೂಕ 2:22, 23
ವಿಮೋ. 13:13ಅರ 18:15
ವಿಮೋ. 13:14ಧರ್ಮೋ 7:7, 8
ವಿಮೋ. 13:15ವಿಮೋ 5:2
ವಿಮೋ. 13:15ವಿಮೋ 12:29; ಕೀರ್ತ 78:51
ವಿಮೋ. 13:16ಧರ್ಮೋ 11:18
ವಿಮೋ. 13:18ವಿಮೋ 14:2, 3; ಅರ 33:5
ವಿಮೋ. 13:19ಆದಿ 50:24, 25; ಯೆಹೋ 24:32; ಇಬ್ರಿ 11:22
ವಿಮೋ. 13:21ವಿಮೋ 14:19
ವಿಮೋ. 13:21ಅರ 9:15; ಕೀರ್ತ 78:14
ವಿಮೋ. 13:22ಕೀರ್ತ 105:39; 1ಕೊರಿಂ 10:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 13:1-22

ವಿಮೋಚನಕಾಂಡ

13 ಯೆಹೋವ ಮೋಶೆಗೆ 2 “ಇಸ್ರಾಯೇಲ್ಯರ ಎಲ್ಲ ಮೊದಲ ಗಂಡುಮಕ್ಕಳನ್ನ ನನ್ನ ಸೇವೆ ಮಾಡೋಕೆ ಕೊಡು.* ಇಸ್ರಾಯೇಲ್ಯರಿಗೆ ಹುಟ್ಟೋ ಮೊದಲನೇ ಗಂಡುಮಕ್ಕಳು, ಅವರ ಪ್ರಾಣಿಗಳಿಗೆ ಹುಟ್ಟೋ ಮೊದಲನೇ ಗಂಡುಮರಿಗಳು ನನಗೆ ಸೇರಿದ್ದು” ಅಂದನು.+

3 ಆಮೇಲೆ ಮೋಶೆ ಜನ್ರಿಗೆ ಹೀಗೆ ಹೇಳಿದ: “ಈ ದಿನವನ್ನ ನೆನಪಿಟ್ಕೊಳ್ಳಿ. ಯಾಕಂದ್ರೆ ನೀವು ಗುಲಾಮರಾಗಿದ್ದ ಈಜಿಪ್ಟ್‌ ದೇಶನ ಈ ದಿನ ಬಿಟ್ಟು ಬಂದಿದ್ದೀರ.+ ಯೆಹೋವ ತನ್ನ ಮಹಾ ಶಕ್ತಿಯಿಂದ* ನಿಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದ್ನಲ್ಲಾ.+ ಹಾಗಾಗಿ ಹುಳಿ ಸೇರಿಸಿರೋ ಯಾವುದನ್ನೂ ನೀವು ತಿನ್ನಬಾರದು. 4 ನೀವು ಅಬೀಬ್‌*+ ತಿಂಗಳ ಈ ದಿನ ಈಜಿಪ್ಟಿಂದ ಹೊರಗೆ ಬಂದಿದ್ದೀರ. 5 ಯೆಹೋವ ನಿಮ್ಮ ಪೂರ್ವಜರಿಗೆ ಮಾತು ಕೊಟ್ಟ ಹಾಗೆ+ ನಿಮ್ಮನ್ನ ಹಾಲೂ ಜೇನೂ ಹರಿಯೋ ದೇಶಕ್ಕೆ+ ಅಂದ್ರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು, ಯೆಬೂಸಿಯರು+ ವಾಸವಾಗಿರೋ ದೇಶಕ್ಕೆ ಕರ್ಕೊಂಡು ಹೋಗಿ ಅದನ್ನ ನಿಮಗೆ ಕೊಟ್ಟಾಗ ನೀವು ಪ್ರತಿ ವರ್ಷ ಈ ತಿಂಗಳಲ್ಲಿ ಇದನ್ನ ಆಚರಿಸಬೇಕು. 6 ಏಳು ದಿನ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ ಏಳನೇ ದಿನ ಯೆಹೋವನಿಗೆ ಗೌರವ ಕೊಡೋಕೆ ಹಬ್ಬ ಮಾಡಬೇಕು. 7 ಹುಳಿ ಇಲ್ಲದ ರೊಟ್ಟಿನ ಆ ಏಳು ದಿನ ತಿನ್ನಬೇಕು.+ ಹುಳಿ ಸೇರಿಸಿದ ಯಾವುದೂ ನಿಮ್ಮ ಹತ್ರ ಇರಬಾರದು.+ ಹುಳಿ ಹಿಟ್ಟು ನಿಮ್ಮ ಹತ್ರ ಆಗಲಿ ನಿಮ್ಮ ಪ್ರದೇಶದಲ್ಲಾಗಲಿ ಇರಬಾರದು. 8 ಆ ದಿನ ನೀವು ನಿಮ್ಮ ಮಕ್ಕಳಿಗೆ ‘ಈಜಿಪ್ಟಿಂದ ಯೆಹೋವ ನನ್ನನ್ನ ಹೇಗೆ ಬಿಡಿಸ್ಕೊಂಡು ಬಂದನು ಅಂತ ನೆನಪಿಸಿಕೊಳ್ಳೋಕೆ ಈ ಆಚರಣೆ ಮಾಡ್ತೀನಿ’ ಅನ್ನಬೇಕು.+ 9 ಯೆಹೋವ ತನ್ನ ಮಹಾ ಶಕ್ತಿಯಿಂದ* ನಿಮ್ಮನ್ನ ಈಜಿಪ್ಟ್‌ ದೇಶದಿಂದ ಬಿಡಿಸಿದ್ದನ್ನ ನೀವು ಮರಿಯದೇ ಇರೋಕೆ ಈ ಆಚರಣೆ ನಿಮ್ಮ ಕೈ ಮೇಲೆ, ಹಣೆ ಮೇಲಿರೋ ಪಟ್ಟಿ*+ ತರ ಇರುತ್ತೆ. ಇದ್ರಿಂದ ನಿಮಗೆ ಯೆಹೋವನ ನಿಯಮ ಪುಸ್ತಕದ ಬಗ್ಗೆ ಯಾವಾಗ್ಲೂ ಮಾತಾಡೋಕೆ ಆಗುತ್ತೆ.* 10 ಪ್ರತಿ ವರ್ಷ ನೀವು ಈ ನಿಯಮದ ಪ್ರಕಾರ ನಡೆದು ಅದೇ ಸಮಯಕ್ಕೇ ಈ ಆಚರಣೆ ಮಾಡಬೇಕು.+

11 ಯೆಹೋವ ನಿಮಗೆ, ನಿಮ್ಮ ಪೂರ್ವಜರಿಗೆ+ ಕೊಡ್ತೀನಿ ಅಂತ ಮಾತು ಕೊಟ್ಟಿರೋ ಕಾನಾನ್‌ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಹೋದ್ಮೇಲೆ 12 ನಿಮಗೆ ಹುಟ್ಟೋ ದೊಡ್ಡ ಮಗನನ್ನ ಮತ್ತು ನಿಮ್ಮ ಪ್ರಾಣಿಗಳಿಗೆ ಹುಟ್ಟೋ ಮೊದಲನೇ ಗಂಡುಮರಿಯನ್ನ ಯೆಹೋವನಿಗೆ ಮೀಸಲಾಗಿ ಇಡಬೇಕು. ಎಲ್ಲ ಮೊದಲನೇ ಗಂಡುಮಕ್ಕಳು ಮೊದಲನೇ ಮರಿಗಳು ಯೆಹೋವನಿಗೆ ಸೇರಿದ್ದು.+ 13 ನಿಮ್ಮ ಹತ್ರ ಕತ್ತೆಯ ಮೊದಲ ಮರಿ ಇರೋದಾದ್ರೆ ನೀವು ಅದ್ರ ಬದಲು ಕುರಿಯನ್ನ ಬಲಿ ಅರ್ಪಿಸಿ ಕತ್ತೆ ಮರಿನ ಬಿಡಿಸ್ಕೊಳ್ಳಬೇಕು. ನೀವು ಆ ಕತ್ತೆ ಮರಿನ ಬಿಡಿಸ್ಕೊಳ್ಳದಿದ್ರೆ ಅದ್ರ ಕತ್ತು ಮುರಿದು ಸಾಯಿಸಬೇಕು. ನಿಮ್ಮ ಪ್ರತಿಯೊಬ್ಬ ಮೊದಲ ಮಗನನ್ನೂ ನೀವು ಬಿಡಿಸ್ಕೊಳ್ಳಬೇಕು.+

14 ಮುಂದೊಂದು ದಿನ ನಿಮ್ಮ ಮಕ್ಕಳು ‘ನಾವ್ಯಾಕೆ ಹೀಗೆ ಮಾಡ್ಬೇಕು?’ ಅಂತ ಕೇಳಿದ್ರೆ ನೀವು ಅವರಿಗೆ ‘ಈಜಿಪ್ಟ್‌ ದೇಶದಲ್ಲಿ ನಾವು ಗುಲಾಮರಾಗಿದ್ದಾಗ ಯೆಹೋವ ತನ್ನ ಮಹಾ ಶಕ್ತಿಯಿಂದ* ನಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದನು.+ 15 ಫರೋಹ ನಮ್ಮನ್ನ ಕಳಿಸಲ್ಲ ಅಂತ ಹಠಹಿಡಿದಾಗ+ ಯೆಹೋವ ಈಜಿಪ್ಟ್‌ ದೇಶದ ಎಲ್ಲ ಮೊದಲನೇ ಮಕ್ಕಳನ್ನ ಮತ್ತು ಎಲ್ಲ ಪ್ರಾಣಿಗಳ ಮೊದಲನೇ ಮರಿಗಳನ್ನ ಸಾಯಿಸಿದನು.+ ಅದಕ್ಕೇ ನಾವು ಪ್ರಾಣಿಗಳ ಪ್ರತಿಯೊಂದು ಮೊದಲನೇ ಮರಿನ ಯೆಹೋವನಿಗೆ ಬಲಿ ಕೊಡ್ತೀವಿ. ನಮ್ಮ ಪ್ರತಿಯೊಬ್ಬ ಮೊದಲನೇ ಮಗನನ್ನ ಬಿಡಿಸ್ಕೊಳ್ತೀವಿ’ ಅಂತ ಹೇಳಬೇಕು. 16 ಯೆಹೋವ ತನ್ನ ಮಹಾ ಶಕ್ತಿಯಿಂದ* ನಿಮ್ಮನ್ನ ಈಜಿಪ್ಟ್‌ ದೇಶದಿಂದ ಬಿಡಿಸಿದನು ಅಂತ ನೀವು ಮರಿಯದೆ ಇರೋಕೆ ಈ ಆಚರಣೆ ನಿಮ್ಮ ಕೈ ಮೇಲೆ, ಹಣೆ ಮೇಲಿರೋ ಪಟ್ಟಿ ತರ ಇರ್ಬೇಕು.”+

17 ಫರೋಹ ಇಸ್ರಾಯೇಲ್ಯರಿಗೆ ಈಜಿಪ್ಟಿಂದ ಹೋಗೋಕೆ ಹೇಳಿದಾಗ ಫಿಲಿಷ್ಟಿಯರ ದೇಶವನ್ನ ದಾಟ್ಕೊಂಡು ಹೋಗೋ ಒಂದು ದಾರಿ ಇತ್ತು. ಅದು ಹತ್ರ ದಾರಿ. ಆದ್ರೂ ದೇವರು ಅವರನ್ನ ಆ ದಾರೀಲಿ ಕರ್ಕೊಂಡು ಬರಲಿಲ್ಲ. ಯಾಕಂದ್ರೆ “ಇಸ್ರಾಯೇಲ್ಯರು ಅಲ್ಲಿಂದ ಹೋದ್ರೆ ಆ ಜನ್ರ ವಿರುದ್ಧ ಯುದ್ಧ ಮಾಡಬೇಕಾಗುತ್ತೆ. ಆಗ ಅವರ ಮನಸ್ಸು ಬದಲಾಗಿ ಅವರು ಈಜಿಪ್ಟಿಗೆ ವಾಪಸ್‌ ಹೋಗಬಹುದು” ಅಂತ ದೇವರು ಹೇಳಿದನು. 18 ಹಾಗಾಗಿ ದೇವರು ಅವರನ್ನ ಸುತ್ತಾಕಿಸಿಕೊಂಡು ಕೆಂಪು ಸಮುದ್ರ ಹತ್ರ ಇರೋ ಕಾಡಿನ ದಾರೀಲಿ ಕರ್ಕೊಂಡು ಬಂದನು.+ ಇಸ್ರಾಯೇಲ್ಯರು ಈಜಿಪ್ಟ್‌ ದೇಶದಿಂದ ಸೈನಿಕರ ತರ ಅಚ್ಚುಕಟ್ಟಾಗಿ ಹೊರಟ್ರು. 19 ಮೋಶೆ ಯೋಸೇಫನ ಮೂಳೆಗಳನ್ನೂ ತಗೊಂಡ. ಯಾಕಂದ್ರೆ ಯೋಸೇಫ ಇಸ್ರಾಯೇಲನ ಮಕ್ಕಳಿಗೆ “ದೇವರು ನಿಮಗೆ ಖಂಡಿತ ಸಹಾಯ ಮಾಡ್ತಾನೆ. ಅದಕ್ಕೇ ನೀವು ಇಲ್ಲಿಂದ ಹೋಗುವಾಗ ನನ್ನ ಮೂಳೆಗಳನ್ನ ತಗೊಂಡು ಹೋಗಬೇಕು” ಅಂತ ಅವರ ಹತ್ರ ಮಾತು ತಗೊಂಡಿದ್ದ.+ 20 ಅವರು ಸುಕ್ಕೋತಿಂದ ಹೊರಟು ಕಾಡಿನ ಅಂಚಿನಲ್ಲಿರೋ ಏತಾಮಿಗೆ ಬಂದು ಅಲ್ಲಿ ಡೇರೆ ಹಾಕೊಂಡ್ರು.

21 ಯೆಹೋವ ಅವರ ಮುಂದೆಮುಂದೆ ಹೋಗ್ತಾ ದಾರಿ ತೋರಿಸ್ತಿದ್ದನು. ಆತನು ಹಗಲಲ್ಲಿ ಮೋಡವಾಗಿ+ ರಾತ್ರಿಯಲ್ಲಿ ಬೆಳಕು ಕೊಡೋದಕ್ಕೆ ಬೆಂಕಿಯಾಗಿದ್ದು ಕರ್ಕೊಂಡು ಹೋದನು. ಹಾಗಾಗಿ ಅವರಿಗೆ ಹಗಲಲ್ಲೂ ರಾತ್ರಿಲೂ ಪ್ರಯಾಣ ಮಾಡೋಕೆ ಆಯ್ತು.+ 22 ಹಗಲಲ್ಲಿ ಮೋಡ ಮತ್ತು ರಾತ್ರಿಯಲ್ಲಿ ಬೆಂಕಿ ಜನ್ರ ಮುಂದೆನೇ ಇರ್ತಿತ್ತು, ಅವರಿಂದ ದೂರ ಹೋಗ್ತಿರಲಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ