ಪರಮಗೀತ
2 “ಯುವತಿಯರಲ್ಲಿ ನನ್ನ ಪ್ರೇಯಸಿ
ಮುಳ್ಳುಗಳ ಮಧ್ಯೆ ಅರಳಿದ ಲಿಲಿ ಹೂವಿನ ತರ.”
3 “ಯುವಕರಲ್ಲಿ ನನ್ನ ಪ್ರಿಯಕರ
ಕಾಡಿನ ಮರಗಳ ಮಧ್ಯ ಇರೋ ಸೇಬು ಮರದ ತರ.
ಅವನ ನೆರಳಲ್ಲಿ ಕೂರಲು ನನ್ನ ಮನ ತುಡಿಯುತ್ತೆ,
ಅವನ ಫಲ ನನಗೆ ರುಚಿಕರ.
4 ಅವನು ನನ್ನನ್ನ ಔತಣದ ಮನೆಗೆ ಕರ್ಕೊಂಡು ಹೋದ,
ನನ್ನ ಮೇಲೆ ಪ್ರೀತಿಯ ಧ್ವಜ ಹಾರಿಸಿದ.
5 ನಾನು ಪ್ರೇಮಜ್ವರದಿಂದ ಬಳಲ್ತಿದ್ದೀನಿ,
ಒಣದ್ರಾಕ್ಷಿಗಳನ್ನ+ ಕೊಟ್ಟು ನನ್ನಲ್ಲಿ ಚೈತನ್ಯ ತುಂಬಿ,
ಸೇಬುಗಳನ್ನ ಕೊಟ್ಟು ನನ್ನನ್ನ ಪುಷ್ಟಿಗೊಳಿಸಿ.
7 ಯೆರೂಸಲೇಮಿನ ಹೆಣ್ಣುಮಕ್ಕಳೇ,
ನನ್ನಲ್ಲಿ ಪ್ರೀತಿ ತಾನಾಗಿ ಹುಟ್ಟೋ ತನಕ ನನ್ನೊಳಗೆ ಅದನ್ನ ಬಡಿದೆಬ್ಬಿಸೋಕೆ ಪ್ರಯತ್ನಿಸಬೇಡಿ,
ಹಾಗೆ ಮಾಡಲ್ಲ ಅಂತ ಕಾಡಿನ ಜಿಂಕೆಗಳ+ ಮೇಲೆ, ಹರಿಣಿಗಳ ಮೇಲೆ ಆಣೆಯಿಟ್ಟು ಹೇಳಿ.+
8 ಹಾ... ಅದು ನನ್ನ ನಲ್ಲ ಬರೋ ಸಪ್ಪಳ!
ಅಲ್ಲಿ ನೋಡಿ, ಅವನು ಬರ್ತಿದ್ದಾನೆ,
ಪರ್ವತಗಳನ್ನ ಹತ್ತಿ ಇಳಿತಾ, ಬೆಟ್ಟಗುಡ್ಡಗಳ ಮೇಲೆ ಜಿಗಿತಾ ಬರ್ತಿದ್ದಾನೆ.
9 ನನ್ನ ಇನಿಯ ಜಿಂಕೆ ತರ, ಎಳೇ ಸಾರಂಗದ ತರ ಇದ್ದಾನೆ.+
ಅಲ್ಲಿ ನೋಡಿ, ನಮ್ಮ ಗೋಡೆ ಹಿಂದೆನೇ ನಿಂತಿದ್ದಾನೆ,
ಕಿಟಕಿಗಳಿಂದ ನೋಡ್ತಿದ್ದಾನೆ,
ಜಾಲರಿಗಳಲ್ಲಿ ಇಣುಕಿ ನೋಡ್ತಿದ್ದಾನೆ.
10 ನನ್ನ ಮನಸ್ಸಲ್ಲಿರೋ ಇನಿಯ ನನಗೆ ಹೀಗಂದ:
‘ನನ್ನ ರೂಪಸಿಯೇ ಬಾ,
ನನ್ನ ಪ್ರಾಣಸಖಿಯೇ ನನ್ನ ಜೊತೆ ಬಂದುಬಿಡು.
11 ನೋಡು, ಚಳಿಗಾಲ* ಕಳೆದಿದೆ,
ಸುರಿತಿದ್ದ ಮಳೆ ನಿಂತಿದೆ.
12 ದೇಶದಲ್ಲೆಲ್ಲ ಹೂಗಳು ಅರಳಿ ನಗ್ತಿವೆ,+
ದ್ರಾಕ್ಷಿಬಳ್ಳಿಗಳನ್ನ ಸಮರುವ ಕಾಲ ಶುರುವಾಗಿದೆ,+
ಎಲ್ಲೆಲ್ಲೂ ಕಾಡುಪಾರಿವಾಳದ ಗಾನ ಕೇಳಿಬರ್ತಿದೆ.+
13 ಅಂಜೂರ ಮರದ ಮೊದಲ ಕಾಯಿಗಳು ಮಾಗಿವೆ,+
ದ್ರಾಕ್ಷಿಬಳ್ಳಿಗಳು ಹೂಬಿಟ್ಟು ಪರಿಮಳ ಬೀರ್ತಿವೆ.
ನನ್ನ ಒಲವೇ, ಎದ್ದು ಬಾ.
ನನ್ನ ಚೆಲುವೆಯೇ, ನನ್ನ ಜೊತೆ ಬಾ.
14 ಬಂಡೆಯ ಸಂದುಗಳಲ್ಲಿರೋ, ಕಡಿದಾದ ಬಂಡೆಯ ರಂಧ್ರಗಳಲ್ಲಿ ಅವಿತಿರೋ+
ನನ್ನ ಪಾರಿವಾಳವೇ, ಹೊರಗೆ ಬಾ.
15 “ಆ ನರಿಗಳನ್ನ ಹಿಡಿರಿ,
ಇಲ್ಲದಿದ್ರೆ ಅವು ದ್ರಾಕ್ಷಿತೋಟಗಳನ್ನ ಹಾಳುಮಾಡ್ತವೆ,
ನಮ್ಮ ದ್ರಾಕ್ಷಿಬಳ್ಳಿಗಳು ಈಗಷ್ಟೇ ಹೂಬಿಟ್ಟಿವೆ.”
16 “ನನ್ನ ಇನಿಯ ನನಗೆ ಸೇರಿದವನು, ನಾನು ಅವನ ಸೊತ್ತು.+
ಅವನು ಲಿಲಿ ಹೂಗಳ ಮಧ್ಯ ಹಿಂಡನ್ನ ಮೇಯಿಸ್ತಿದ್ದಾನೆ.+
17 ನನ್ನ ಪ್ರಿಯತಮನೇ, ತಂಗಾಳಿ ಬೀಸೋ ಮೊದಲು,
ನೆರಳು ಮರೆಯಾಗೋ ಮೊದಲು ನೀ ಬಂದು ಸೇರು.