ಕೀರ್ತನೆ
135 ಯಾಹುವನ್ನ ಸ್ತುತಿಸಿ!*
ಯೆಹೋವನ ಹೆಸ್ರನ್ನ ಕೊಂಡಾಡಿ,
ಯೆಹೋವನ ಸೇವಕರೇ, ಆತನನ್ನ ಹಾಡಿ ಹೊಗಳಿ.+
3 ಯಾಹುವನ್ನ ಸ್ತುತಿಸಿ, ಯೆಹೋವ ಒಳ್ಳೆಯವನು.+
ಆತನ ಹೆಸ್ರನ್ನ ಸ್ತುತಿಸೋಕೆ ಗೀತೆಗಳನ್ನ ಹಾಡಿ,* ಅದು ರಮಣೀಯ.
6 ಆಕಾಶ, ಭೂಮಿ, ಸಮುದ್ರ ಮತ್ತು ಅದ್ರ ಆಳದಲ್ಲೂ,
ಯೆಹೋವ ತನಗೆ ಇಷ್ಟವಾಗಿದ್ದನ್ನೆಲ್ಲ ಮಾಡ್ತಾನೆ.+
7 ಆತನು ಭೂಮಿಯ ಮೂಲೆಮೂಲೆಗಳಿಂದ ಮೋಡಗಳು* ಮೇಲೆ ಏರೋ ಹಾಗೆ ಮಾಡ್ತಾನೆ,
ಮಳೆಗಾಗಿ ಮಿಂಚನ್ನ* ಮಾಡ್ತಾನೆ,
ತನ್ನ ಭಂಡಾರಗಳಿಂದ ಗಾಳಿ ತರ್ತಾನೆ.+
8 ಆತನು ಈಜಿಪ್ಟಲ್ಲಿದ್ದ ಮನುಷ್ಯರ ಮೊದಲ ಮಕ್ಕಳನ್ನ
ಪ್ರಾಣಿಗಳ ಎಲ್ಲ ಮೊದಲ ಮರಿಗಳನ್ನ ಸಂಹರಿಸಿದ.+
12 ಆತನು ಅವ್ರ ದೇಶವನ್ನ ತನ್ನ ಜನ್ರಾದ ಇಸ್ರಾಯೇಲ್ಯರಿಗೆ ಸೊತ್ತಾಗಿ ಕೊಟ್ಟ,
ಅವ್ರಿಗೆ ಆಸ್ತಿಯಾಗಿ ಕೊಟ್ಟ.+
13 ಯೆಹೋವ, ನಿನ್ನ ಹೆಸ್ರು ಸದಾಕಾಲಕ್ಕೂ ಇರುತ್ತೆ,
ಯೆಹೋವ, ನಿನ್ನ ಕೀರ್ತಿ ಯುಗಯುಗಾಂತರಕ್ಕೂ ಇರುತ್ತೆ.+
15 ಜನಾಂಗಗಳ ಮೂರ್ತಿಗಳನ್ನ ಬೆಳ್ಳಿಬಂಗಾರದಿಂದ ಮಾಡಿದ್ದಾರೆ,
ಅವನ್ನ ಮನುಷ್ಯರೇ ಮಾಡಿದ್ದಾರೆ.+
16 ಅವಕ್ಕೆ ಬಾಯಿದ್ರೂ ಮಾತಾಡಕ್ಕಾಗಲ್ಲ.+
19 ಇಸ್ರಾಯೇಲ್ ಮನೆತನವೇ, ಯೆಹೋವನನ್ನ ಸ್ತುತಿಸು.
ಆರೋನನ ಮನೆತನವೇ, ಯೆಹೋವನನ್ನ ಕೊಂಡಾಡು.
20 ಲೇವಿಯ ಮನೆತನವೇ, ಯೆಹೋವನನ್ನ ಹಾಡಿ ಹೊಗಳು.+
ಯೆಹೋವನಿಗೆ ಭಯಪಡೋರೇ, ಯೆಹೋವನನ್ನ ಕೊಂಡಾಡಿ.
ಯಾಹುವನ್ನ ಸ್ತುತಿಸಿ!+