ಪುಟ ಎರಡು
ಶುದ್ಧವಾದ ಭೂಮಿ ಅದನ್ನು ಕಾಣಲು ನೀವು ಇರುವಿರೋ?
ಕಳೆದ ಹತ್ತಾರು ವರ್ಷಗಳಲ್ಲಿ ಮನುಷ್ಯನು ಆರಿಸಿಕೊಂಡಿರುವ ಜೀವನಕ್ರಮವು ಭೂಮಿಯ ಕಾರ್ಯಕ್ಷೇತ್ರವನ್ನು ಮಹತ್ತಾಗಿ ಮಾಲಿನ್ಯಗೊಳಿಸಿ—ಮಣ್ಣು, ನದಿಗಳು, ಸಾಗರಗಳು ಮತ್ತು ಪರಿಸರವನ್ನು ವಿಷಪೂರಿತವನ್ನಾಗಿ ಮಾಡಿದೆ. ಸಮಸ್ಯೆಯು ನಿಜವಾಗಿಯೂ ಅಂತರ್ರಾಷ್ಟ್ರೀಯ. ಲೋಕಶಾಂತಿಯ ದಿನ (ಜನವರಿ 1, 1990)ಕ್ಕಾಗಿ ತನ್ನ ಸಂದೇಶದಲ್ಲಿ ಪೋಪರು ಹೇಳಿದ್ದು: “ಅನೇಕ ಸಂದರ್ಭಗಳಲ್ಲಿ ಜೀವವಿಜ್ಞಾನದ ಸಮಸ್ಯೆಗಳು ವ್ಯಕ್ತಿಪರ ರಾಜ್ಯಗಳ ಸರಹದ್ದುಗಳ ಮೇಲೆ ಬಂದಿಳಿಯುತ್ತವೆ. ಆದುದರಿಂದ ಅವುಗಳ ಪರಿಹಾರವು ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವೇ ಕಂಡುಬರಲಾರದು.”—ಎಲ್ ಓಸ್ಸರ್‌ವೇಟರ್ ರೊಮಾನೋ, ದಶಂಬರ 18-26, 1989.
ತನ್ನ ಭವಿಷ್ಯತ್ತಿಗಾಗಿ ಮಾನವನಿಗಿರುವ ನಿರಾಸಕ್ತಿಯು ಭೂಮಿಯ ಕಡೆಗೆ ದೇವರಿಗಿರುವ ಚಿಂತೆಯೊಂದಿಗೆ ಪರಸ್ಪರ ವ್ಯತ್ಯಾಸದಲ್ಲಿದೆ. ಎಷ್ಟೆಂದರೂ, ಅದು ಆತನ ಸೃಷ್ಟಿ, ಆತನ ಸೊತ್ತಾಗಿದೆ. (ಯೆಶಾಯ 45:18) ಒಂದು ಶುದ್ಧವಾದ ಭೂಮಿಯು ಶಕ್ಯವೋ? ಶಕ್ಯವಿದ್ದರೆ, ಹೇಗೆ ಮತ್ತು ಯಾವಾಗ? ನಮ್ಮ ಮುಖಪುಟ ಲೇಖನಮಾಲೆ ಈ ಪ್ರಶ್ನೆಗಳನ್ನು ಉತ್ತರಿಸುತ್ತದೆ.