ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳ ಪ್ರಾಚೀನತೆ
ಇತಿಹಾಸದ ಪ್ರಾಚಾರ್ಯನೂ, ಪೊಲೇಂಡಿನ ಮಾಜೀ ಸಾಂಸ್ಕೃತಿಕ ಮಂತ್ರಿಯೂ ಆಗಿದ್ದ ಅಲೆಕ್ಸಾಂಡರ್ ಕ್ರಾಕ್ಜುಕ್, ಆ ದೇಶದ ಸಾಪ್ತಾಹಿಕ ಪತ್ರಿಕೆಯಾದ ಪೊಲಿಟಿಕಾದಲ್ಲಿ ಒಂದು ಲೇಖನವನ್ನು ಬರೆದನು. ಹೊಸ ವರ್ಷದ ಐತಿಹಾಸಿಕ ಹಿನ್ನೆಲೆಗಳನ್ನು ಚರ್ಚಿಸಿಯಾದ ಮೇಲೆ, ಅವನು ಬರೆದದ್ದು:
“ಹೊಸ ವರ್ಷದ ಆಚರಣೆಗಳ ಕುರಿತಾಗಿ ಪ್ರಾಚೀನ ರೋಮನರು ಪರಿಚಯವಿದವ್ದರೋ? ಒಬ್ಬನು ವಿಶೇಷವಾಗಿ, ರೋಮನ್ ಸಾಮ್ರಾಜ್ಯವನ್ನು ಪರಿಗಣಿಸುವಾಗ, ಇದಕ್ಕೆ ಸಂದೇಹವಿರಲು ಸಾಧ್ಯವಿಲ್ಲ. . . . ಅಂಥಹ ಉತ್ಸವ ಸಮಾರಂಭಗಳು ಅತ್ಯಾನಂದದ ಮತ್ತು ಕಟ್ಟುನಿಟ್ಟಿಲ್ಲದ ಸಂದರ್ಭಗಳಾಗಿದ್ದವು. ಇದು ಅಧಿಕೃತ ಹೊಸ ವರ್ಷವನ್ನು ಆಚರಿಸುವದರ ಕಡೆಗೆ ಪ್ರಾಚೀನ ಕ್ರೈಸ್ತರಿಗಿದ್ದ ಮನೋಭಾವದ ಮೇಲೆ ಪ್ರಭಾವ ಬೀರಿತು. ಅವರು ಆ ಪದ್ಧತಿಯನ್ನು ಅಶ್ಲೀಲ ಮತ್ತು ಸಂಪೂರ್ಣವಾಗಿ ಅಸಂಸ್ಕೃತವೆಂದೂ, ಜ್ಞಾನೋದಯ ಪಡೆದ ಧರ್ಮದ ಆರಾಧಕರಿಗೆ ರೂಪ ಮತ್ತು ಆತ್ಮದಲ್ಲಿ ಪರಕೀಯವೆಂದು ಪರಿಗಣಿಸಿದರು. ಎಷ್ಟೆಂದರೂ, ದೇವತೆಗಳಿಗೆ ಯಜ್ಞಗಳು ಅರ್ಪಿಸಲ್ಪಡುತ್ತಿದ್ದವು. ಈ ಕಾರಣದಿಂದಾಗಿ ಚರ್ಚು, ಅದರ ಉಪಾಸಕರು ಹೊಸ ವರ್ಷದ ಆಚರಣೆಗಳಲ್ಲಿ, ವಿಶೇಷವಾಗಿ ಅದರ ಉತ್ಸವಗಳಲ್ಲಿ ಯಾವುದೇ ಪಾಲನ್ನು ತಕ್ಕೊಳ್ಳಲು ನಿಖರವಾಗಿ ನಿಷೇಧಿಸಿತು.”
ಅನಂತರ ಕ್ರಿಸ್ಮಸ್ಗಾಗಿ ತಾರೀಕನ್ನು ನಿರ್ಧರಿಸುವದರ ಕುರಿತು ಪ್ರಾಚಾರ್ಯರು ವಿವರಿಸುವದನ್ನು ಮುಂದರಿಸುತ್ತಾರೆ:
“ದಶಂಬರ 25ರ ರೋಮನ್ ಪದ್ಧತಿಯನ್ನು ಆಚರಿಸುವದು ಕೇವಲ ನಾಲ್ಕನೆಯ ಶತಮಾನದಂದಿನಿಂದ ಚಾಲ್ತಿಯಲ್ಲಿತ್ತು. ಹೀಗಿರುವದರಿಂದ ಅಜೇಯನಾದ ಸೂರ್ಯನ ಜನಪ್ರಿಯ ಹಬ್ಬವನ್ನು ಕ್ರಿಸ್ತೀಯವನ್ನಾಗಿ ಮಾಡಲು ಶಕ್ತರಾದರು.
“ಅದರ ಸಾಮ್ರಾಜ್ಯದ ಪತನವಾದರೂ, ರೋಮ್ ದೀರ್ಘವಾಗಿ ಆದರೆ ಭದ್ರವಾಗಿ, ಮೊದಲು ಪಾಶ್ಚಿಮಾತ್ಯ ನಾಗರಿಕತೆಯನ್ನು ಮತ್ತು ಕೊನೆಯಲ್ಲಿ ಇಡೀ ಲೋಕವನ್ನು ಅದರ ಸಂಪ್ರದಾಯವನ್ನು ಮತ್ತು ಎರಡು ಕ್ಯಾಲಂಡರ್ ತಾರೀಕುಗಳನ್ನು ಸ್ವೀಕರಿಸಲು ಕ್ರಮೇಣ ಬಲಾತ್ಕರಿಸಿತು. ಆದಾಗ್ಯೂ, ಹೊಸ ವರ್ಷದ ಆರಂಭವಾಗಿ ಜನವರಿ 1ನ್ನು ತಕ್ಕೊಳ್ಳುವದು ಸಂತೋಷ ಗೋಷ್ಠಿಗಳ, ಹಬ್ಬಗಳ, ವೈವಾಹಿಕ ಸಮಾರಂಭಗಳ, ಕೊಡುಗೆಗಳನ್ನು ಕೊಡುವದರ, ಮತ್ತು ಶುಭಾಶಯಗಳನ್ನು ಕೋರುವದರ ಸಂಪ್ರದಾಯದ ಒಂದು ವಿಜಯದೋಪಾದಿ ಇತ್ತು, ಮತ್ತು ಇದು ಪುರಾತನ ಕ್ರೈಸ್ತರ ತೀವ್ರವಾದ ವಿಮುಖತೆಯ ನಡುವೆಯೂ.”
ಹೊಸ ವರ್ಷದ ಆಚರಣೆಗಳು ವಿಧರ್ಮಿಯರ ಮೂಲದವುಗಳು ಎಂದು ಸ್ಥಾಪಿಸಿದ ನಂತರ, ಈ ಸಮಾರಂಭೋತ್ಸವಗಳಲ್ಲಿ ಕ್ರೈಸ್ತರು ಪಾಲಿಗರಾಗುವ ವಿಷಯದಲ್ಲಿ ಪ್ರಾಚಾರ್ಯನಾಗಿರುವ ಅಲೆಕ್ಸಾಂಡರ್ ಕ್ರಾಕ್ಜುಕ್ ಯಾವ ಮನೋಭಾವ ತಾಳಿದ್ದಾರೆ? ಕ್ರೈಸ್ತರಿಗೆ ಅವರ ಸ್ವಂತ ಹಾರೈಕೆಯು:
“ಏನಂದರೆ [ಕ್ರೈಸ್ತರು] ಪ್ರಾಚೀನ ಕಾಲದ ಅವರ ಸಹ ನಂಬಿಗಸ್ತರ ಮಾತುಗಳನ್ನು ಪುನರುಚ್ಛರಿಸುವ ಸ್ಥಾನದಲ್ಲಿ ನೈತಿಕವಾಗಿ ಅವರು ಇರತಕ್ಕದ್ದು. “ವಿಗ್ರಹಗಳು ಮತ್ತು ಮೂರ್ತಿಗಳು ತುಂಬಿರುವ ಸೊಬಗಿನ ದೇವಾಲಯಗಳು ಇಲ್ಲದಿರುವ, ಬಹುಮೂಲ್ಯ ಉಡುಪುಗಳು ಮತ್ತು ಪೂಜಾವಿಧಾನದ ಪಾತ್ರೆಗಳು ಇಲ್ಲದ ಇದೆಂಥ ಧರ್ಮವಪ್ಪಾ?” ಎಂದು ಅಪಹಾಸ್ಯ ಮಾಡುವ ವಿಧರ್ಮಿಗಳಿಗೆ, ಆರಂಭಿಕ ಕ್ರೈಸ್ತರು ಹೀಗೆಂದು ಉತ್ತರಿಸಿದರು: ‘ನಾವು ಬಡವರೇನೋ ಸತ್ಯವೇ. ಆದರೆ ದೇವರಿಗಾಗಿರುವ ಮತ್ತು ನೆರೆಯವರಿಗಾಗಿರುವ ಪ್ರೀತಿಯಿಂದ ತುಂಬಿರುವ ನಮ್ಮ ಹೃದಯಗಳೇ ನಮ್ಮ ದೇವಾಲಯಗಳಾಗಿವೆ; ನಮ್ಮ ಪೂಜಾವಿಧಾನದ ಉಡುಪುಗಳು ಅಭಿಮಾನಮಿತಿಯಿರುವಿಕೆ, ಶ್ರಮಪಟ್ಟು ದುಡಿಯುವಿಕೆ, ಅಧೀನತೆ ಮತ್ತು ನಮ್ರತೆಯೇ ಆಗಿರುತ್ತದೆ; ಮತ್ತು ನಮ್ಮ ಪಾತ್ರೆಗಳು ನಮ್ಮ ಸತ್ಕಾರ್ಯಗಳೇ ಆಗಿವೆ.”
ಬೈಬಲಿನ 2 ಕೊರಿಂಥ 6:14-18ರಲ್ಲಿ ನೇರವಾಗಿ ಹೀಗೆ ಹೇಳಿದೆ, ಕ್ರೈಸ್ತರು “ಅವಿಶ್ವಾಸಿಗಳೊಂದಿಗೆ [ಅವರನ್ನು] ಇಜ್ಜೋಡಾಗಿರಿಸಬಾರದು; ನೀತಿಯುಕ್ತತೆಯು ನಿಯಮಮುರಿಯುವಿಕೆಯೊಂದಿಗೆ ಹೇಗೆ ಪಾಲುದಾರರಾಗಬಹುದು, ಯಾ ಬೆಳಕಿಗೂ ಕತ್ತಲೆಗೂ ಸಾಮಾನ್ಯವಾಗಿ ಒಂದೇ ಇರುವ ಸಂಗತಿಯಾದರೂ ಯಾವುದು? ಬೇಲಿಯಾರನೊಂದಿಗೆ ಕ್ರಿಸ್ತನು ಹೇಗೆ ಒಮ್ಮತಕ್ಕೆ ಬರಸಾಧ್ಯವಿದೆ ಮತ್ತು ವಿಶ್ವಾಸಿ ಮತ್ತು ಅವಿಶ್ವಾಸಿಯ ನಡುವಣ ಯಾವ ಪಾಲು ಇರಬಲ್ಲದು? ಸುಳ್ಳು ದೇವರುಗಳೊಂದಿಗೆ ದೇವರ ಆಲಯವು ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ, ಮತ್ತು ಆದುದರಿಂದಲೇ ಜೀವಂತ ದೇವರ ಆಲಯ—ನಾವಾಗಿರುತ್ತೇವೆ. . . . ‘ಅವರಿಂದ ದೂರ ತೊಲಗಿರಿ, ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ,’ ಎಂದನ್ನುತ್ತಾನೆ ಕರ್ತನು. ‘ಅಶುದ್ಧವಾದ ಯಾವುದನ್ನೇ ಮುಟ್ಟಬೇಡಿರಿ.’”—ದ ನ್ಯೂ ಜೆರೂಸಲೇಮ್ ಬೈಬಲ್, ಒಂದು ಕ್ಯಾಥಲಿಕ್ ತರ್ಜುಮೆ. (g90 12/22)