ರಹಸ್ಯಗರ್ಭಿತ ಬೆಳಕುಗಳು ಎಲ್ಲಿಂದ?
ಉತ್ತರದ ಮತ್ತು ದಕ್ಷಿಣದ ಭೂಕಾಂತ ಧ್ರುವ ಪ್ರಭೆ ಯಾ ವಾಯುಮಂಡಲ ಪ್ರಭೆ, ಉತ್ತರ ಮತ್ತು ದಕ್ಷಿಣ ಭೂಕಾಂತಧ್ರುವಗಳ ಹತ್ತಿರ ಜೀವಿಸುವವರಿಗೆ ಬೆರಗನ್ನುಂಟು ಮಾಡುವ ಸಂಗತಿಯಾಗಿದೆ. ಭೂಮಿಯೊಳಗೆ ಕರಗಿದ ಲೋಹದ ಕಂಬಗಳು ಎದ್ದು ಬೀಳುತ್ತವೆಂದೂ ಭೂಮಿ ತಿರುಗುವಾಗ ಅವು ತಿರುಚಿಕೊಳ್ಳುತ್ತವೆಂದೂ ಈಗ ನಂಬಲಾಗುತ್ತದೆ. ಇದು ವಿದ್ಯುತ್ಪವ್ರಾಹವನ್ನು ಉಂಟುಮಾಡುತ್ತದೆ, ಮತ್ತು ಇದು ತಿರುಗುತ್ತಿರುವ ಭೂಮಿಯ ಅಕ್ಷಕ್ಕೆ ಹೆಚ್ಚು ಕಡಮೆ ಸಾಲಾಗಿಸುವ ಕಾಂತತೆಯ ಕ್ಷೇತ್ರಗಳನ್ನು ಉಂಟುಮಾಡುತ್ತದೆ. ಸೂರ್ಯನಿಂದ ಭೂಮಿಯನ್ನು ತಲುಪುವ ವಿಕಿರಣ ಕಣಗಳು, ಈ ಕಾಂತತೆಯ ಕ್ಷೇತ್ರಗಳ ಕಾರಣ ಒಂದು ಪ್ರತ್ಯಕ್ಷ ಪರಿಣಾಮವನ್ನು ಉಂಟುಮಾಡುತ್ತವೆ. ಆದರೆ ಈ ಪರಿಣಾಮ, ಸೂರ್ಯ ಕಲೆಗಳೊಂದಿಗೆ ಸೇರಿರುವ ದೊಡ್ಡ ಗಾತ್ರದ ಸೂರ್ಯ ಜ್ವಾಲೆಗಳಿಂದ ಕಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮುಟ್ಟುವಾಗ ಅತಿಶಯಿಸುತ್ತದೆ. ಭೂಮಿಯ ಕಾಂತತೆಯ ಕ್ಷೇತ್ರದಲ್ಲಿ ಅನೇಕ ಕಣಗಳು ಸಿಕ್ಕಿಬೀಳುತ್ತವೆ. ಕಾಂತತೆಯ ಈ ಧ್ರುವಗಳ ಸುತ್ತಲಿರುವ ವಲಯಗಳಲ್ಲಿ, ನಮ್ಮ ವಾತಾವರಣದಲ್ಲಿರುವ ಪರಮಾಣುಗಳು ಶಕಿಗ್ತೊಂಡು ಅನೇಕ ಬಣ್ಣಗಳು ತೋರುವ ಬೆಳಕನ್ನು ಉಂಟುಮಾಡುತ್ತವೆ. ಸೂರ್ಯನಿಂದ ಬರುವ ಈ ಶಕಿಯ್ತಿಂದ ಆಮ್ಲಜನಕ ಮತ್ತು ಸಾರಜನಕ ಪರಮಾಣುಗಳು ಪ್ರಬಲಗೊಳ್ಳುವಾಗ ಈ ಬಣ್ಣಗಳು ಉಂಟಾಗಿ, ಇವು ಕೆಂಪು⁄ಹಸುರು⁄ನೀಲಲೋಹಿತ ತರಂಗಮಾನಗಳಲ್ಲಿ ಕಾಣುವ ಬೆಳಕನ್ನು ಉಂಟುಮಾಡುತ್ತವೆ. ಬಹುತೇಕ ವಾಯುಮಂಡಲ ಪ್ರಭೆಗಳು ಹಸುರಾಗಿದ್ದು ಕೆಲವು ಭಾಗಗಳು ಕೆಂಪು ಮತ್ತು ನೀಲಲೋಹಿತ ಬಣ್ಣದ್ದಾಗಿವೆ. ಭೂಮಿಯ ಉತ್ತರ ಭಾಗದಲ್ಲಿ, ಈ ಬೆಳಕುಗಳನ್ನು ಅರೋರ ಬೋರಿಯಾಲಿಸ್ (ಲ್ಯಾಟಿನ್, ಉತ್ತರದ ಅರುಣೋದಯ) ಎಂದು ಕರೆಯಲಾಗುವಾಗ, ದಕ್ಷಿಣದಲ್ಲಿ ಅವುಗಳನ್ನು ಅರೋರ ಆಸ್ಟ್ರೇಲಿಸ್ (ದಕ್ಷಿಣದ ಅರುಣೋದಯ) ಎಂದು ಕರೆಯಲಾಗುತ್ತದೆ.
“ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ,” ಎನ್ನುತ್ತಾನೆ ಪುರಾತನಕಾಲದ ಕೀರ್ತನೆಗಾರನು. (ಕೀರ್ತನೆ 19:1) ನಿಮಗೆ ಆಕಾಶಗಳ ಸೃಷ್ಟಿಕರ್ತನ ಬಗೆಗೆ ಹೆಚ್ಚಿನದನ್ನು ತಿಳಿಯುವ ಅಪೇಕ್ಷೆ ಇರುವಲ್ಲಿ, ನಿಮ್ಮ ವಠಾರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ತಡೆಯಿಲ್ಲದೆ ಸಂಪರ್ಕಿಸಿರಿ, ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ.—ಪುಟ 5 ನೋಡಿ. (g92 11/8)
[ಪುಟ 32 ರಲ್ಲಿರುವ ಚಿತ್ರ ಕೃಪೆ]
NASA photo