“ಯಾವನಿಗೂ ತಕ್ಕದ್ದಾಗಿರುವ ಒಂದು ಕೊಡುಗೆ”
ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕದ ಕುರಿತು, ಸ್ವಿಟ್ಸರ್ಲೆಂಡ್ನ ಒಬ್ಬ 82 ವರ್ಷ ಪ್ರಾಯದ ಮನುಷ್ಯನು ಅದನ್ನೇ ಬರೆದನು. ಇಸವಿ 1991ರಲ್ಲಿ ಮೊದಲ ಬಾರಿಗೆ ಪ್ರಕಟಿಸಲಾದ ಪುಸ್ತಕವು, ನಾಲ್ಕು ಸುವಾರ್ತೆಗಳಲ್ಲಿ ವಿವರಿಸಲಾದಂತೆ, ಯೇಸುವಿನ ಐಹಿಕ ಜೀವಿತದ ಪ್ರತಿಯೊಂದು ಘಟನೆಯನ್ನು 133 ಅಧ್ಯಾಯಗಳೊಳಗೆ ಸಾದರಪಡಿಸುತ್ತದೆ. ವಾಚಕನು ಅಷ್ಟು ಪುಳಕಿತಗೊಂಡನೇಕೆ?
“ಪುಸ್ತಕವು ಓದಲು ಆನಂದದಾಯಕವಾಗಿದೆ,” ಎಂದು ಅವನು ಬರೆದನು. “ಬೇರೆ ಅನೇಕ ಪುಸ್ತಕಗಳಲ್ಲಿ ಇರದ ಸಂಗತಿ—ಸ್ಫುಟವಾದ ಮುದ್ರಣ ಮತ್ತು ವ್ಯಾಕರಣ ಇದರಲ್ಲಿ ಇದೆ.” “ಎಷ್ಟೊಂದು ನೈಜವಾಗಿರುವ” 200ಕ್ಕಿಂತಲೂ ಹೆಚ್ಚಿನ ವರ್ಣರಂಜಿತ ದೃಷ್ಟಾಂತಗಳಿಂದ ಕೂಡ ಆ ಮನುಷ್ಯನು ಆಶ್ಚರ್ಯಗೊಂಡನು. ಅವನು ಕೂಡಿಸಿದ್ದು: “ಭಾವಾಭಿನಯಗಳು, ಮುಖದ ಅಭಿವ್ಯಕ್ತಿಗಳು, ಮತ್ತು ಕೋಮಲ ವರ್ಣಗಳು ಬಹಳ ನೈಜವಾಗಿವೆ.”
ಜನರು ಪುಸ್ತಕವನ್ನು ಇತರರಿಗೆ ಒಂದು ಕೊಡುಗೆಯೋಪಾದಿಯಲ್ಲಿ ಕೊಡುವಂತೆ ಈ ವೃದ್ಧ ಮಹನೀಯನು ಸಲಹೆ ನೀಡುತ್ತಾನೆ. ಈ “ಅದ್ಭುತಕರ ಹಾಗೂ ಬೋಧಪ್ರದ ಪುಸ್ತಕವನ್ನು . . . ಯಾವನಿಗೂ ತಕ್ಕದ್ದಾಗಿರುವ ಒಂದು ಕೊಡುಗೆ” ಎಂದು ಅವನು ಪರಿಗಣಿಸುತ್ತಾನೆ. ನಾವು ಕೂಡ ಹಾಗೆಯೇ ಎಣಿಸುತ್ತೇವೆ.
ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕದ ಒಂದು ಪ್ರತಿಯನ್ನು ಯಾ ಉಚಿತವಾದ ಒಂದು ಮನೆ ಬೈಬಲ್ ಅಧ್ಯಯನವನ್ನು ಸ್ವೀಕರಿಸಲು ನೀವು ಬಯಸುವುದಾದರೆ, ದಯವಿಟ್ಟು Watchtower, H-58 Old Khandala Road, Lonavla, 410 401. Mah., ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.
[ಪುಟ 32 ರಲ್ಲಿರುವ ಚಿತ್ರ]
ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ