ವಾಯುವಿನ ಉಳುಮೆ ಮಾಡುವುದು
ಲಂಡನ್‌ನ ದಿ ಇಂಡಿಪೆಂಡೆಂಟ್‌ಗನುಸಾರ, ವಾಯುಚಕ್ರವನ್ನು ಸ್ಥಾಪಿಸಲು ಉಪಯೋಗಿಸಲ್ಪಟ್ಟ ಕ್ರೇನ್ ಎತ್ತುಯಂತ್ರ ಒಂದು ಬಿರುಗಾಳಿಯಲ್ಲಿ ಹಾರಿಹೋದಾಗ, ಬ್ರಿಟನ್‌ನ ಪ್ರಥಮ ವಾಣಿಜ್ಯ ವಾಯು ಹೊಲದ ನಿರ್ಮಾಣವು ತಾತ್ಕಾಲಿಕ ತಡೆಯನ್ನು ಅನುಭವಿಸಿತು. ಆದರೂ, ವಾಯುವನ್ನು ಉಪಯೋಗಿಸಿಕೊಳ್ಳುವುದು, ಶಕ್ತಿಯನ್ನು ಉತ್ಪಾದಿಸುವ ಅತ್ಯಂತ ಕ್ಷಿಪ್ರವಾದ, ಅಗವ್ಗಾದ ವಿಧಾನಗಳಲ್ಲಿ ಒಂದೆಂದು ಹೇಳಲಾಗಿದೆ. ಅತ್ಯುತ್ತಮ ವೈಶಿಷ್ಟ್ಯವು ಏನೆಂದರೆ, ಕಲ್ಲಿದ್ದಲಿನಂತಹ ಅಗೆದು ತೆಗೆದ ಉರುವಲನ್ನು ಸುಡುವುದರಿಂದ ಬರುವ ಯಾವುದೇ ರಾಸಾಯನಿಕ ಮಾಲಿನ್ಯವನ್ನು ಅದು ಬಿಡುವುದಿಲ್ಲ.
ಕ್ಯಾಲಿಫೋರ್ನಿಯದೊಂದಿಗೆ ಜೊತೆ ಸೇರಿ ಜರ್ಮನಿ, ಡೆನ್ಮಾರ್ಕ್, ಮತ್ತು ನೆದರ್ಲೆಂಡ್ಸ್‌ನಂತಹ ಹಲವಾರು ಯೂರೋಪಿಯನ್ ರಾಜ್ಯಗಳು, ವಾಯು ಹೊಲಗಳನ್ನು ನವೀಕರಿಸುವ ಶಕ್ತಿಯ ಮೂಲಗಳಾಗಿ ಇಷ್ಟಪಟ್ಟರೂ, ಪರಿಸರದೊಂದಿಗೆ ಸಂಬಂಧವಿಡುವವರೆಲ್ಲರೂ ಸಂತೋಷಪಡಲಿಲ್ಲ. ಕೆಲವರು ತಿರುಗುವ ವಾಯುಚಕ್ರದ ಗರಿಗಳ ಶಬ್ದವನ್ನು ಆಕ್ಷೇಪಿಸುತ್ತಾರೆ; ಇತರರು ಯಂತ್ರಗಳನ್ನು ವಿಶೇಷವಾಗಿ ನೈಸರ್ಗಿಕ ಸೌಂದರ್ಯದ ಕ್ಷೇತ್ರಗಳಲ್ಲಿ ಇಟ್ಟಾಗ, ಅವುಗಳ ವಿಕಾರವಾದ ನೋಟವನ್ನು ದ್ವೇಷಿಸುತ್ತಾರೆ.
ಆದರೂ, ಯೂರೋಪಿನ ಅತಿ ವಾಯು ಬೀಸುವ ದೇಶಗಳಲ್ಲಿ ಒಂದಾದ ಬ್ರಿಟನಿನಲ್ಲಿ, ತೀರದ ಮೇಲಿರುವ ವಾಯು ಶಕ್ತಿಯನ್ನು “ಅಲ್ಪಾವಧಿಯಲ್ಲಿ ಅತಿ ಭರವಸೆಯುಳ್ಳ ಏಕಮಾತ್ರ ಶಕ್ತಿಯ ಮೂಲ”ದಂತೆ ಸರಕಾರಿ ಸಲಹೆಗಾರರು ಹೊಗಳುತ್ತಾರೆಂದು, ನ್ಯೂ ಸೈಎನ್‌ಟಿಸ್ಟ್ ಪತ್ರಿಕೆಯು ವರದಿಸುತ್ತದೆ. ಇನ್ನೊಂದು ಕಡೆಯಲ್ಲಿ, ಒಳಗೊಳ್ಳುವ ಅಧಿಕ ವೆಚ್ಚಗಳ ಹೊರತೂ, ತೀರದ ಮೇಲೆ ವಾಯುಚಕ್ರಗಳನ್ನು ಸ್ಥಾಪಿಸುವುದನ್ನು ಟೀಕಿಸುವವರು, ಬಲವಾದ ಸಮುದ್ರ ಗಾಳಿಗಳ ಲಾಭವನ್ನು ತೆಗೆದುಕೊಳ್ಳುತ್ತಾ ಭಾರವಾದ ಸಲಕರಣೆಯನ್ನು ಸಾಗಿಸಲು ಕ್ರೇನ್‌ಗಳ ಬದಲಿಗೆ ವಿಶೇಷವಾದ ವಿಂಚ್ ಎತ್ತುಯಂತ್ರಗಳನ್ನು ಉಪಯೋಗಿಸುತ್ತಾ, ವಾಯುಚಕ್ರವನ್ನು ನೀರಿನಾಚೆ ಸ್ಥಾಪಿಸುವುದನ್ನು ಶಿಫಾರಸ್ಸು ಮಾಡುತ್ತಾರೆ. (g93 12/8)