ಮನಸ್ಸಾಕ್ಷಿ, ನೀನು ಏಕೆ ನನ್ನನ್ನು ಹಿಂಸಿಸುತ್ತೀ?
“ಹೇ ಹೇಡಿ ಮನಸ್ಸಾಕ್ಷಿ, ನನ್ನನ್ನು ನೀನು ಹೇಗೆ ನೋಯಿಸುತ್ತೀ!” IIIನೆಯ ಅರಸನಾದ ರಿಚರ್ಡನು ಹೇಳಿರುವ ಆ ಪ್ರಸಿದ್ಧ ಉಕಿಗ್ತಳು, ಅದೇ ಹೆಸರಿನ ಶೇಕ್ಸ್ಪಿಯರಿನ ನಾಟಕದಲ್ಲಿ, ಮನುಷ್ಯನ ಮನಸ್ಸಾಕ್ಷಿ ಕೆರಳಿಸಶಕ್ತನಾದ ತೀಕ್ಷೈ ಪರಿತಾಪದ ಕುರಿತಾಗಿ ವಿವರಿಸುತ್ತದೆ. ನಿಜ ಜೀವನದಲ್ಲಿ ಮನಸ್ಸಾಕ್ಷಿಯು ಅನೇಕರ ಜೀವಿತಗಳನ್ನು ಅಸ್ಥಿರವಾಗಿಸಿದೆ ಮತ್ತು ಬದಲಾಯಿಸಿದೆ.
ಇತ್ತೀಚೆಗೆ ಇಟೆಲಿಯ ಒಬ್ಬ ಯುವಕನ ನಿದರ್ಶನದಲ್ಲಿ ಮನಸ್ಸಾಕ್ಷಿಯ ಸಾಮರ್ಥ್ಯವು ದೃಷ್ಟಾಂತಿಸಲ್ಪಟ್ಟಿತು. ಒಬ್ಬ ಭದ್ರತಾ ಕಾವಲುಗಾರನೋಪಾದಿ ಅವನ ಕೆಲಸವು ದೊಡ್ಡ ಮೊತ್ತಗಳ ಹಣವನ್ನು ಸಾಗಿಸುವುದನ್ನು ಒಳಗೊಂಡಿತ್ತು. ಒಂದು ದಿನ, ಅವನು ದುಷ್ಪ್ರೇರಣೆಗೆ ಒಳಪಟ್ಟು, 2,40,000 ಯು.ಎಸ್. ಡಾಲರ್ಗಳನ್ನೊಳಗೊಂಡ ಒಂದು ಚೀಲವನ್ನು ಕದಿಯುವ ತನಕ ಎಲ್ಲವು ಚೆನ್ನಾಗಿ ನಡೆಯುತ್ತಿತ್ತು. ಇಬ್ಬರು ಸಹೋದ್ಯೋಗಿಗಳೊಂದಿಗೆ ಅವನು ಕೆಲಸಮಾಡುತ್ತಿದ್ದ ಕಾರಣದಿಂದ, ಅವರಲ್ಲಿ ಯಾರು ಅದನ್ನು ತೆಗೆದುಕೊಂಡಿದ್ದರೆಂದು ನಿರ್ಧರಿಸಲಸಾಧ್ಯವಾಗಿತ್ತು ಮತ್ತು ಮೂರು ಮಂದಿಯೂ ಕೆಲಸದಿಂದ ತೆಗೆದುಹಾಕಲ್ಪಟ್ಟರು.
ಕಳ್ಳತನದ ಗದ್ದಲವು ಶಾಂತವಾದ ಅನಂತರ ಅದನ್ನು ಉಪಯೋಗಿಸುವ ಉದ್ದೇಶದಿಂದ, ಕದ್ದ ಹಣವನ್ನು ಅವನು ಬಚ್ಚಿಟ್ಟನು. ಅದಕ್ಕೆ ಬದಲಾಗಿ, ಒಂದು ಅನಿರೀಕ್ಷಿತ ಹಿಂಸೆಯು ಆರಂಭಗೊಂಡಿತು: ಕೆಲಸದಿಂದ ತೆಗೆದುಹಾಕಲ್ಪಟ್ಟ ಅವನ ನಿರ್ದೋಷಿ ಜೊತೆಕೆಲಸದವರ ಕುರಿತಾಗಿ ಯೋಚಿಸುವುದನ್ನು ಅವನಿಗೆ ನಿಲ್ಲಿಸಲಾಗಲಿಲ್ಲ. ಅವನ ಮನಸ್ಸಾಕ್ಷಿ ಒಂದು ಕ್ಷಣದ ಸಮಾಧಾನವನ್ನು ಅವನಿಗೆ ನೀಡಲಿಲ್ಲ. ಅವನಿಗೆ ನಿದ್ರಿಸಲಾಗಲಿಲ್ಲ. ಅವನಿಗೆ ತಿನ್ನಲಾಗಲಿಲ್ಲ. ಅವನು ತನ್ನನ್ನು ನಿಭಾಯಿಸಿಕೊಳ್ಳಲು ಅಶಕ್ತನಾದನು.
ಕಟ್ಟಕಡೆಗೆ, ಅಪರಾಧಿತನವು ಜಯಹೊಂದಿ, ಅವನ ಆಂತರಿಕ ಹೋರಾಟದ ಮೂಲಕ ನಿತ್ರಾಣಗೊಂಡು, ಅವನು ಪೋಲಿಸರ ಬಳಿ ಹೋದನು ಮತ್ತು ಕದ್ದ ಹಣವನ್ನು ಒಪ್ಪಿಸಿಬಿಟ್ಟನು. ಅವನು ಅವರಿಗೆ ಹೇಳಿದ್ದು: “ತೀಕ್ಷೈ ಪರಿತಾಪವು ತೀವ್ರವಾಗಿತ್ತು. ಇದರೊಂದಿಗೆ ನಾನು ಇನ್ನು ಬಹುಕಾಲ ತಾಳಿಕೊಳ್ಳಸಾಧ್ಯವಿಲ್ಲ!” ಅವನು ಕೂಡಿಸಿದ್ದು: “ಒಬ್ಬ ಕಳ್ಳನೋಪಾದಿ ನಿನ್ನನ್ನು ದೂಷಿಸುವ ಒಂದು ಮನಸ್ಸಾಕ್ಷಿಯೊಂದಿಗೆ ಸ್ವತಂತ್ರನಾಗಿರುವುದಕ್ಕಿಂತ ನಾನು ಪ್ರಾಮಾಣಿಕನಾಗಿದ್ದೆನೆಂದು ತಿಳಿದು ಸೆರೆಮನೆಯಲ್ಲಿರುವುದೇ ಲೇಸು.”
ಮನಸ್ಸಾಕ್ಷಿ ಎಲ್ಲಾ ಮಾನವರಿಗೆ ದೇವರ ಕೊಡುಗೆಯಾಗಿದೆ. ಇದು ನಮ್ಮನ್ನು ಆಪಾದಿಸಬಹುದು ಯಾ ಕ್ಷಮಿಸಬಹುದು. ಇದಕ್ಕೆ ನಾವು ಕಿವಿಗೊಡುವಾಗ, ತಪ್ಪುಗಳನ್ನು ಮಾಡುವುದರಿಂದ, ಗಂಭೀರವಾದ ಅಪರಾಧಗಳನ್ನು ಸಯುಕಿಕ್ತವಾಗಿ ವಿವರಿಸುವುದರಿಂದ ಇದು ನಮ್ಮನ್ನು ಕಾಪಾಡಬಹುದು. ಹೀಗೆ ಶೇಕ್ಸ್ಪಿಯರನ ನಾಟಕದ IIIನೆಯ ಅರಸನಾದ ರಿಚರ್ಡನು ಮಾಡಿದಂತೆ ಅದರ ಚುಚ್ಚುವಿಕೆಯನ್ನು ಅಸಡ್ಡೆ ಮಾಡುವುದರ ಅಥವಾ ಅದನ್ನು ಅಸಮಾಧಾನದಿಂದ ತೆಗಳುವ ಬದಲಾಗಿ, ನಮ್ಮ ಮನಸ್ಸಾಕ್ಷಿಯನ್ನು ಮಾನ್ಯಮಾಡಿ ಅದನ್ನು ಭದ್ರವಾಗಿರಿಸಬೇಕು.—ರೋಮಾಪುರ 2:14, 15.