“ಬರವಣಿಗೆಯು ಅತ್ಯುತ್ಕೃಷವ್ಟಾಗಿದೆ”
ಗಣ್ಯತೆ ತೋರಿಸುವ ಪತ್ರವೊಂದು ವಾಚ್ ಟವರ್ ಸೊಸೈಟಿಗೆ ಅಮೆರಿಕದ ಕ್ಯಾಲಿರ್ಫೋನಿಯದಲ್ಲಿನ ಒಬ್ಬ ಓದುಗರಿಂದ ಬಂದಿತು. ಅದರಲ್ಲಿ ಆಕೆ ಹೇಳಿದ್ದು:
“‘ಒಂಟಿತನ—ಅದರ ಕುರಿತು ನೀವು ಮಾಡಬಲ್ಲ ಸಂಗತಿ’ (ಜನವರಿ 8, 1994) ಎಂಬ ವಿಷಯದ ಎಚ್ಚರ! ಪತ್ರಿಕೆಯು, ಬರೆಯುವಂತೆ ಮತ್ತು ಇತ್ತೀಚೆಗೆ ಪತ್ರಿಕೆಗಳಲ್ಲಿ ನಾನು ಎಷ್ಟು ಆನಂದಿಸುತ್ತಾ ಇದ್ದೇನೆಂದು ಹೇಳುವಂತೆ ನನ್ನನ್ನು ಒತ್ತಾಯಿಸುತ್ತದೆ. ಬರವಣಿಗೆಯು ಅತ್ಯುತ್ಕೃಷವ್ಟಾಗಿದೆ, ಮತ್ತು ಒಂಟಿತನದ ಕುರಿತು ಲೇಖನಗಳು ಬಹಳ ಚೆನ್ನಾಗಿ ಬರೆಯಲ್ಪಟ್ಟಿದ್ದವು ಮತ್ತು ಪದ್ಯಾತ್ಮಕವಾಗಿದ್ದವು. ಸ್ವತಃ ಒಂಟಿ ವ್ಯಕ್ತಿಯ ಮೇಲೆಯೆ ಒಂಟಿತನದ ಹೊಣೆಯನ್ನು ಹಾಕುವುದರಲ್ಲಿ ಲೇಖನಗಳ ಪ್ರಾಮಾಣಿಕತೆಯನ್ನು ಕೂಡ ನಾನು ಗಣ್ಯಮಾಡಿದೆ. ನಿಜವಾಗಿಯೂ ತನ್ನ ಜನರಿಗಾಗಿರುವ ಯೆಹೋವನ ಆಳವಾದ ಪ್ರೀತಿಯನ್ನು ಮತ್ತು ಚಿಂತೆಯನ್ನು ಲೇಖನಗಳು ವ್ಯಕ್ತಪಡಿಸುತ್ತವೆ.”
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಮೂಲಕ ಹಂಚಲ್ಪಡುತ್ತವೆ. ಪ್ರಸಕ್ತ ವಿಷಯಗಳ ಬೈಬಲ್ ಆಧಾರಿತ ಚರ್ಚೆಗಳನ್ನು ಸಾದರಪಡಿಸುವ ಮೊದಲನೆಯ ಪತ್ರಿಕೆಯು, ಪ್ರತಿ ಸಂಚಿಕೆ 1.6 ಕೋಟಿಗಳಿಂತಲೂ ಅಧಿಕವಾದ ಸರಾಸರಿ ಮುದ್ರಣದೊಂದಿಗೆ 115 ಭಾಷೆಗಳಲ್ಲಿ ಪ್ರಕಟಿಸಲ್ಪಡುತ್ತದೆ. ವ್ಯಾಪಕ ವ್ಯಾಪ್ತಿಯ ವಿಷಯಗಳ ಮೇಲೆ ಶೈಕ್ಷಣಿಕ ಮಾಹಿತಿಯನ್ನು ನೀಡುವ ಎರಡನೆಯ ಪತ್ರಿಕೆಯು 73 ಭಾಷೆಗಳಲ್ಲಿ ಲಭ್ಯವಿದೆ ಮತ್ತು ಸುಮಾರು 1.3 ಕೋಟಿಗಳ ಸರಾಸರಿ ಮುದ್ರಣವನ್ನು ಹೊಂದಿದೆ.
ಈ ಪತ್ರಿಕೆಗಳ ಮಾದರಿ ಸಂಚಿಕೆಗಳನ್ನು ಪಡೆಯಲು ನೀವು ಇಷ್ಟಪಡುವುದಾದರೆ, ನಿಮ್ಮ ಕ್ಷೇತ್ರದಲ್ಲಿರುವ ರಾಜ್ಯ ಸಭಾಗೃಹದಲ್ಲಿ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿರಿ, ಅಥವಾ ಪುಟ 5ರಲ್ಲಿ ಪಟ್ಟಿಮಾಡಲಾದ ನಿಮಗೆ ಹತ್ತಿರವಿರುವ ವಿಳಾಸಕ್ಕೆ ಬರೆಯಿರಿ.