ಪ್ರಾಪಂಚಿಕ ಸಮೃದ್ಧಿಯ ಬೆನ್ನಟ್ಟುವಿಕೆ
ಟೈವಾನಿನ ಎಚ್ಚರ! ಸುದ್ದಿಗಾರರಿಂದ
‘ಹಣವು ಸಂತೋಷವನ್ನು ಕೊಂಡುಕೊಳ್ಳಲಾರದು!’ ಅಧಿಕಾಂಶ ಜನರು ಆ ಹೇಳಿಕೆಯೊಂದಿಗೆ ಹೆಚ್ಚುಕಡಿಮೆ ಒಪ್ಪುತ್ತಾರಾದರೂ, ಅವರಲ್ಲಿ ಅನೇಕರು ಇನ್ನೂ ಹೆಚ್ಚು ಸಂತೋಷಭರಿತ ಜೀವಿತಕ್ಕೆ ಒಂದು ಮಾರ್ಗದೋಪಾದಿ ಪ್ರಾಪಂಚಿಕ ಐಶ್ವರ್ಯಗಳನ್ನು ನಿರ್ದಯವಾಗಿ ಬೆನ್ನಟ್ಟುತ್ತಿದ್ದಾರೆ. ಮತ್ತು ಏಕೆ ಬೆನ್ನಟ್ಟಬಾರದು? ಎಷ್ಟೆಂದರೂ, ಮಾನವ ಕುಲದ ಅಷ್ಟೊಂದು ಸಮಸ್ಯೆಗಳಿಗೆ ಪರಿಹಾರವು ಪ್ರಾಪಂಚಿಕ ಯಶಸ್ಸು ಮತ್ತು ಸಮೃದ್ಧಿಯಲ್ಲಿ ಇರುವಂತೆ ಭಾಸವಾಗುತ್ತದೆ.
ಪ್ರತಿಯೊಬ್ಬ ಪುರುಷ, ಸ್ತ್ರೀ, ಮತ್ತು ಮಗುವು ಪ್ರಾಪಂಚಿಕವಾಗಿ ಸಮೃದ್ಧವಾದ ಒಂದು ಜೀವಿತವನ್ನು ಅನುಭವಿಸಿದ್ದದ್ದಾದರೆ, ಅದು ಎಂತಹ ವಿಭಿನ್ನ ಲೋಕವಾಗಿರಬಹುದಿತ್ತು ಎಂಬುದನ್ನು ಸ್ವಲ್ಪ ಊಹಿಸಿಕೊಳ್ಳಿರಿ! ಲೋಕದ ಹೊಲಸು ಕೇರಿಗಳು ಮತ್ತು ಅಲ್ಪಸಂಖ್ಯಾತರಿರುವ ವಾಸಸ್ಥಳಗಳಲ್ಲಿ ಜೀವಿಸುವ ಲಕ್ಷಾಂತರ ಮಂದಿಯ ಉಪೇಕ್ಷೆಗಳು ಮತ್ತು ಕಷ್ಟಾನುಭವಗಳು ಇರುತ್ತಿರಲಿಲ್ಲ. ಐಶ್ವರ್ಯವಂತ ಹಾಗೂ ಬಡ ರಾಷ್ಟ್ರಗಳನ್ನು—ಎರಡನ್ನೂ—ಈಗ ಬಾಧಿಸುತ್ತಿರುವ, ಮನೆ ಮಠವಿಲದ್ಲಿರುವ ಸಮಸ್ಯೆಯು ಸಹ ಇರುತ್ತಿರಲಿಲ್ಲ.
ಮತ್ತು ಸಂತೋಷಕ್ಕೆ ಹೆಚ್ಚು ಅತ್ಯಾವಶ್ಯಕವಾದ ಒಳ್ಳೆಯ ಆರೋಗ್ಯದ ಕುರಿತೇನು? ವೈದ್ಯಕೀಯ ವಿಜ್ಞಾನವು ತೀವ್ರವಾದ ಪ್ರಗತಿಯನ್ನು ಮಾಡುತ್ತಿರುವಾಗಲೂ, ಅಧಿಕಾಧಿಕ ಜನರು ವೈದ್ಯಕೀಯ ಆರೈಕೆಗಾಗಿ ಹಣತೆರಲು ಅವರು ಅಸಮರ್ಥರಾಗಿದ್ದಾರೆಂದು ಕಂಡುಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ, ಹಸಿವೆ ಮತ್ತು ನ್ಯೂನ ಪೋಷಣೆಗಳು ಇನ್ನೂ ಲಕ್ಷಾಂತರ ಮಂದಿಯ ಪ್ರತಿನಿತ್ಯದ ಅನುಭವಗಳಾಗಿವೆ. ಲೋಕವ್ಯಾಪಕವಾಗಿ ಸಮೃದ್ಧಯು ಸಾಮಾನ್ಯವಾಗಿ ಬಳಕೆಯಲ್ಲಿರುತ್ತಿದ್ದರೆ, ಪ್ರತಿಯೊಬ್ಬರಿಗೂ ಹೆಚ್ಚು ಆರೋಗ್ಯಕರ, ಮತ್ತು ಹೀಗೆ ಹೆಚ್ಚು ಸಂತೋಷಕರವಾದ ಜೀವಿತಗಳನ್ನು ಜೀವಿಸುವ ಸಂದರ್ಭವು ಇರುತ್ತಿತ್ತು—ಇರುತ್ತಿರಲಿಲ್ಲವೆ?
ಭೂಮಿಯು ಸ್ವತಃ ಪ್ರಯೋಜನವನ್ನು ಪಡೆಯಸಾಧ್ಯವಿತ್ತು. ಹೇಗೆ? ಅಗೆದುತೆಗೆದ ಉರುವಲುಗಳನ್ನು ಸುಡುವ ಮೂಲಕ ಭಾಗಶಃ ಉಂಟುಮಾಡಲ್ಪಟ್ಟ ಮಾರಕ ಮಲಿನಕಾರಕಗಳಿಂದ, ಭೂಮಿಯ ಪರಿಸರವು ಈಗ ಹಾಳುಮಾಡಲ್ಪಡುತ್ತಿದೆ. ಆದರೂ, ಶಕ್ತಿಯ ಹೆಚ್ಚು ಶುದ್ಧವಾದ ರೂಪಗಳನ್ನು ಉಪಯೋಗಿಸಲಿಕ್ಕಾಗಿ ಅಗತ್ಯವಾದ ತಂತ್ರಜ್ಞಾನವನ್ನು ಬೆನ್ನಟ್ಟದಿರುವುದಕ್ಕೆ ಉಲ್ಲೇಖಿಸಲ್ಪಟ್ಟ ಒಂದು ಕಾರಣವು, ತಂತ್ರಜ್ಞಾನವು ಬಹಳ ದುಬಾರಿ ವೆಚ್ಚದ್ದಾಗಿದೆ ಎಂಬುದೇ. ಮಳೆ ಕಾಡುಗಳ ಧ್ವಂಸ—ಇನ್ನೊಂದು ಗಂಭೀರವಾದ ಜೀವಿ ಪರಿಸ್ಥಿತೀಯ ಬೆದರಿಕೆ—ಕ್ಕೆ ಸಹ ಆರ್ಥಿಕ ಕಾರಣಾಂಶಗಳೇ ಹೊಣೆಯೆಂದು ಹೇಳಲಾಗುತ್ತದೆ.
ಪ್ರಾಪಂಚಿಕ ಸಮೃದ್ಧಯು ಬಹುಶಃ ನಮ್ಮ ಸಮಸ್ಯೆಗಳಲ್ಲಿ ಅನೇಕವನ್ನು ಪರಿಹರಿಸಸಾಧ್ಯವಿರುವುದರಿಂದ ಮತ್ತು ಅಷ್ಟೊಂದು ಕಷ್ಟಾನುಭವವನ್ನು ಕಡಮೆ ಮಾಡಸಾಧ್ಯವಿರುವುದರಿಂದ, ಸಂತೋಷವು ಐಶ್ವರ್ಯದ ಒಂದು ಫಲಿತಾಂಶವಾಗಿದೆ ಎಂದು ಜನರು ಪರಿಗಣಿಸಿರುವುದು ಆಶ್ಚರ್ಯಕರವಾಗಿರುವುದಿಲ್ಲ. ಉದಾಹರಣೆಗೆ, ಪಾಶ್ಚಾತ್ಯರು ಹೊಸ ವರ್ಷದ ದಿನದಂದು “ಹೊಸ ವರ್ಷವನ್ನು ಆನಂದಿಸಿರಿ!” ಎಂದು ಹೇಳುವ ಮೂಲಕ ಒಬ್ಬರಿಗೊಬ್ಬರು ಸಾಂಪ್ರದಾಯಿಕವಾಗಿ ಅಭಿವಂದಿಸುತ್ತಿರುವಲ್ಲಿ, ಚೀನಿಯರು ಚಾಂದ್ರಮಾನದ ಹೊಸ ವರ್ಷದ ಸಮಯದಲ್ಲಿ, ಅವರು ‘ಐಶ್ವರ್ಯವನ್ನು ಗಳಿಸು’ವರು ಎಂದು ಹಾರೈಸುತ್ತಾ, ಒಬ್ಬರಿಗೊಬ್ಬರು ಸಾಂಪ್ರದಾಯಿಕವಾಗಿ “ಕುನ್ಶೀ ಫಾ ಟ್ಸೈ” ಎಂದು ಹೇಳುತ್ತಾರೆ! ಹೌದು, ಜನರು ಪ್ರಾಪಂಚಿಕ ಸಮೃದ್ಧಿಯ ಬೆನ್ನಟ್ಟುವಿಕೆಗೆ—ಅತಿ ಉನ್ನತವಾದದ್ದಲ್ಲದ್ದಿದರೂ—ಬಹಳ ಉನ್ನತವಾದ ಆದ್ಯತೆಯನ್ನು ಕೊಡುವಂತಹ ಲೋಕವೊಂದರಲ್ಲಿ ನಾವು ಜೀವಿಸುತ್ತಿದ್ದೆವೆಂಬುದು ನಿಶ್ಚಯ. ಯಶಸ್ಸು ಅಥವಾ ಸೋಲು ಅನೇಕವೇಳೆ ಒಬ್ಬನ ಪ್ರಾಪಂಚಿಕ ಸಂಪತ್ತಿನ ಪ್ರಮಾಣದಿಂದ ನಿರ್ಧರಿಸಲ್ಪಡುತ್ತದೆ.
ಪ್ರಾಪಂಚಿಕ ವಿಷಯಗಳ ಸಂಪಾದನೆ ಮತ್ತು ಅನುಭೋಗವು ತಾನೇ ತಪ್ಪಾಗಿರುವುದು ಅನಿವಾರ್ಯವಲ್ಲವಾದರೂ, ಅದು ಸಂತೋಷದ ಖಾತರಿಯನ್ನು ಕೊಡಬಲ್ಲದೊ? ಅದಕ್ಕೆ ಎಷ್ಟು ಪ್ರಮುಖತೆಯು ಕೊಡಲ್ಪಡಬೇಕು? ಪ್ರಾಪಂಚಿಕ ಸಮೃದ್ಧಯು ನಿಜವಾಗಿಯೂ ಹೆಚ್ಚು ಉತ್ತಮವಾದ ಲೋಕವೊಂದಕ್ಕೆ ಕೀಲಿ ಕೈಯಾಗಿದೆಯೆ?