ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾನೆ?
ಆ ಗಮನ ಸೆಳೆಯುವ ಪ್ರಶ್ನೆಯು ಯೆಹೋವನ ಸಾಕ್ಷಿಗಳಿಂದ ಹಂಚಲ್ಪಟ್ಟಿರುವ ಒಂದು ಕಿರುಹೊತ್ತಗೆಯ ಶೀರ್ಷಿಕೆಯಾಗಿದೆ. ಕಳೆದ ವರ್ಷ ಅಮೆರಿಕದ ಮಿಸಿಸ್ಸಿಪ್ಪಿಯಿಂದ, ಒಬ್ಬ ಹೆಂಗಸು ಬರೆದುದು: “ಒಬ್ಬ ಯುವ ಪುರುಷನು ನನಗೆ ಆ ಪ್ರಶ್ನೆಯನ್ನು ಕೇಳಿದಾಗ, ನಾನು ನನ್ನ ಉತ್ತರದ ಕುರಿತಾಗಿ ಅನಿಶ್ಚಿತಳಾಗಿದ್ದೆ.” ಅವಳು ಗಮನಿಸಿದ್ದು: “ದೇವರು ಇಷ್ಟಪಡುವಂತೆ ಈ ಭೂಮಿಯು ನಡೆಯುತ್ತಿಲ್ಲವೆಂದು ನನಗೆ ತೋರಿತು.”
ಅನಂತರ ಅವಳು ಕೂಡಿಸಿದ್ದು: “ಆ ವಿಷಯದ ಮೇಲೆ ಬೈಬಲ್ ನಮಗೆ ಏನು ಹೇಳುತ್ತದೆಂಬುದರ ಕುರಿತಾಗಿ ನಾನು ಈ ಹಿಂದೆ ಪೂರ್ಣವಾಗಿ ತಿಳಿದುಕೊಂಡಿರಲಿಲ್ಲವೆಂದು, ಕಿರುಹೊತ್ತಗೆಯಲ್ಲಿ ಕೊಡಲ್ಪಟ್ಟಿದ್ದ ವಚನಗಳಿಂದ ನನಗೆ ಕಾಣುತ್ತದೆ. ನಮ್ಮ ಕ್ರಿಸ್ಮಸ್ ಕೀರ್ತನೆಗಳಲ್ಲಿ ಒಂದಾದ ‘ಲೋಕಕ್ಕೆ ಆನಂದ,’ ದೇವರು ಲೋಕವನ್ನು ಆಳುತ್ತಾನೆಂದು ಹೇಳುತ್ತದೆ, ಸತ್ಯವಾಗಿ ಹೇಳುವುದಾದರೆ ಇದು ಮೋಸಕರವಾಗಿದೆ.”
ಆ ಹೆಂಗಸು ಸಮಾಪ್ತಿಗೊಳಿಸಿದ್ದು: “ಸಾಮಾನ್ಯವಾಗಿ ನಾನು ಈ ರೀತಿಯ ಪತ್ರಗಳನ್ನು ಬರೆಯುವುದಿಲ್ಲ, ಆದರೆ ನಿಮ್ಮ ಕೆಲಸವು ಗಣ್ಯಮಾಡಲ್ಪಟ್ಟಿದೆಯೆಂದು, ಕಡಿಮೆಪಕ್ಷ ಈ ಸಂದರ್ಭದಲ್ಲಿ ನಿಮಗೆ ಆಶ್ವಾಸನೆ ನೀಡಲ್ಪಡಬೇಕೆಂದು ನನಗನಿಸಿತು.”
ನಮ್ಮ ಜೀವಿತಗಳನ್ನು ಪ್ರಭಾವಿಸುವ ಪ್ರಾಮುಖ್ಯ ವಿಷಯಗಳ ಮೇಲೆ ಬೈಬಲ್ ಏನು ಹೇಳುತ್ತದೆಂಬುದಕ್ಕೆ ಯೆಹೋವನ ಸಾಕ್ಷಿಗಳು ಜನರನ್ನು ನಡಿಸುತ್ತಾರೆ. ಮೇಲೆ ತಿಳಿಸಲ್ಪಟ್ಟಿರುವ ಕಿರುಹೊತ್ತಗೆಯ ಒಂದು ಪ್ರತಿಯನ್ನು ನೀವು ಇಷ್ಟಪಡುವಲ್ಲಿ ಅಥವಾ ಒಂದು ಉಚಿತ ಮನೆ ಬೈಬಲಭ್ಯಾಸವನ್ನು ಬಯಸುವಲ್ಲಿ, ದಯವಿಟ್ಟು Watch Tower, H-58 Old Khandala Road, Lonavla 410 401, Mah., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ್ದ ವಿಳಾಸಕ್ಕೆ ಬರೆಯಿರಿ.